Archive.
News and reviews from the earlier FilmySphere, 2013 to 2019. They are kept as they were published and are not updated. For current stories, see the journal.
- Payte Hudgir Halli Life:huge Ragi ball enters limca book of records
ಗಿನ್ನಿಸ್ ದಾಖಲೆಗೆ ರಾಗಿ ಮುದ್ದೆ
ಸುವರ್ಣಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್'.ರಿಯಾಲಿಟಿ ಶೋ ಸದ್ಯ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಸಮೀಪವಿರುವ ರಾಯಾಸಮುದ್ರದಲ್ಲಿ ಬೀಡುಬಿಟ್ಟಿದೆ. ಹತ್ತು ಜನರು ಶೋದಲ್ಲಿ ಭಾಗಿಯಾಗಿದ್ದು,ಆರು ಸ್ಪರ್ಧಾಳುಗಳು ಹೊರ ಬಂದಿದ್ದಾರೆ. ಅಂತಿಮವಾಗಿ ಉಳಿದುಕೊಂಡಿರುವುದು ರಾಗಿಶ್ರೀ,ರವಿತಾ, ವೀಣಾ, ಅಕ್ಷತಾ. ಕೊನೆ ಸುತ್ತಿನಲ್ಲಿ ಇವರೆಲ್ಲರಿಗೂ ರಾಗಿಮುದ್ದೆ ಮಾಢುವ ಟಾಸ್ಕ್ನ್ನು ನೀಡಲಾಗಿತ್ತು. ಇದರಲ್ಲೂ ಒಂದು ವಿಶೇಷವಿದೆ. ಹತ್ತು ಕ್ವಿಂಟಾಲ್ ರಾಗಿ ಮತ್ತು ಐದು ಕ್ವಿಂಟಾಲ್ ನೀರು ಬೆರೆಸಿ ರಾಗಿಮುದ್ದೆ ಮಾಢಬೇಕಾಗುತ್ತದೆ. ಇವರೊಂದಿಗೆ ಹತ್ತು ಅಡುಗೆ ಭಟ್ಟರು ಸಹಾಯಕರಾಗಿ ಇರುತ್ತಾರೆ. ಕೊನೆಗೆ ಎಂಟು ಅಡಿ ಉದ್ದ, ಹತ್ತು ಅಡಿ ಹಗಲವಿರುವ ರಾಗಿ ಮುದ್ದೆಯನ್ನು ಮಾಡುವದರೊಂದಿಗೆ ಲಿಮ್ಕಾ ಗಿನ್ನಿಸ್ ಪುಸ್ತಕ್ಕೆ ಚಾನಲ್ರವರು ಅರ್ಜಿಯನ್ನು ಗುಜರಾಯಿಸಿದ್ದಾರೆ. ಜನರಿಗೆ ರಾಗಿ ಮುದ್ದೆ ಬಗ್ಗೆ ಅರಿವು ಮೂಡಿಸಲು ಮುದೆಯನ್ನು ವೀಕ್ಷಿಸಲು ಬಂದವರಿಗೆ ಸಾಂಬರ್ ನೊಂದಿಗೆ ವಿತರಣೆ ಮಾಡಲಾಯಿತು. ಹಿಂದಿನ ರಿಯಾಲಿಟಿ ಶೋದಲ್ಲಿ ಇರದ ಟಾಸ್ಕ್ಗಳು ಭಿನ್ನ ರೀತಿಯಲ್ಲಿ ಸ್ಪರ್ಧಾಳುಗಳಿಂದ ಮಾಡಿಸಿದ್ದಾರೆ. ಅಲ್ಲದೆ ಹೂರಾಂಗಣದಲ್ಲಿ ಚಿತ್ರೀಕರಣ ನಡೆಸಿರುವುದು ವಿಶೇಷವಾಗಿತ್ತು. ನಟ ಸಂತೋಷ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ರಿಯಾಲಿಟಿ ಶೋದ ರೂವಾರಿ ಸುದೀಂದ್ರ ಅವರದು.
2014-12-05
- Naani movie shooting news
ನಿರ್ಮಾಪಕ, ನಿರ್ದೇಶಕರನ್ನು ಕಾಡಿದ ನಾನಿ
ಐದು ಸಾವಿರ ದೀಪಗಳ ಜೊತೆಗೆ ಅಘೋರಿ ಎಂಟ್ರಿ ಕೊಡುವ ಸನ್ನಿವೇಶವನ್ನು ‘ನಾನಿ’ ಸಿನಿಮಾಕ್ಕೆ ಚಿತ್ರೀಕರಿಸಿ ಎರಡನೆ ಹಂತಕ್ಕೆ ಬೆಂಗಳೂರು ಮೂವಿ ಸ್ಟುಡಿಯೋದಲ್ಲಿ ಬೀಡುಬಿಟ್ಟಿದೆ. ಮಾದ್ಯಮದವರು ಸೆಟ್ಗೆ ಹೋದಾಗ ಸುಹಾಸಿನಿ, ಜೈಜಗದೀಶ್ ಮತ್ತು ಬೇಬಿ ಸುಹಾಸಿನಿ ಹಿನ್ನಲೆ ಗೀತೆಗೆ ನಟನೆ ಮಾಡುತ್ತಿದ್ದರು. ಬ್ರೇಕ್ ತೆಗೆದುಕೊಂಡು ತಂಡವು ಮಾತಿಗೆ ಕುಳಿತುಕೊಂಡರು.ಮಾತು ಶುರು ಮಾಡಿದ ನಿರ್ದೇಶಕ ರಾಘವೇಂದ್ರಗೊಲ್ಲಹಳ್ಳಿ ಕತೆಯಲ್ಲಿ ಅಪ್ಪನು ನಾನಿಯನ್ನು ಏಕೆ ದ್ವೇಷಿಸುತ್ತಿರುತ್ತಾನೆ. ಅಮ್ಮ ಪ್ರೀತಿ ಮಾಢುತ್ತಾಳೆ. ನಾನಿ ಬಾಲ್ಯದ ಜೀವನವನ್ನು ಚಿತ್ರೀಕರಿಸಲಾಗುತ್ತಿದೆ. ಇಂದು ಕೊನೆ ದಿನ. ಮೂರನೆ ಹಂತದಲ್ಲಿ ಮಂಗಳೂರು ಸಮೀಪ ಪಾಳು ಬಂಗಲೆಯಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದೆ. ಶಿವನ ನೃತ್ಯದ ಹಾಡಿಗೆ ಚಿಕ್ಕಮಗಳೂರು ಸಮೀಪ ಹಿಪ್ಪನಹಳ್ಳಿ ಹೋಗುವ ಇರಾದೆ ಇತ್ತು. ಪಲ್ಲಟ ಮಾಡಿಕೊಂಡು ಕನಕಪುರದಲ್ಲಿ ನಲವತ್ತು ಅಡಿ ನಟರಾಜ ವಿಗ್ರಹದೊಂದಿಗೆ ಮೂರು ನೂರು ಅಘೋರಿಗಳನ್ನು ಸೇರಿಸಿಕೊಂಡು ಶೂಟ್ ಮಾಡಲಾಗುವುದು.ನಂತರ ಕ್ಲೈಮಾಕ್ಸ್ ಗುಜರಾತ್ಗೆ ಪ್ರಯಾಣ ಎಂದರು. ಹೋಂ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣ ಮಾಢುತ್ತಿರುವುದರಿಂದ ಬ್ಯುಸಿಯಾಗಿರುವೆ. ಕತೆ ಚೆನ್ನಾಗಿದ್ದರಿಂದ ಒಪ್ಪಿಕೊಂಡೆ ಎಂಬ ಮಾತು ಸುಹಾಸಿನಿ ಅವರದು. ಅವರೊಂದಿಗೆ ಜೋಡಿಯಾಗಿ ನಾಲ್ಕನೆ ಚಿತ್ರದಲ್ಲಿ ನಟಿಸುತ್ತಿರುವುದು ಜೈಜಗದೀಶ್. ಬೇಬಿ ಸುಹಾಸಿನಿ ಕೆಲವೊಂದು ಸನ್ನಿವೇಶದಲ್ಲಿ ನಟಿಸುವಾಗ ಅರಿವು ಎಲ್ಲದಂತೆ ಅತ್ತುಬಿಟ್ಟರಂತೆ. ಅಲ್ಲದೆ ನಿರ್ಮಾಪಕ ರಮೇಶ್ಕುಮಾರ್ ಜೈನ್ ಮಗಳಿಗೆ ನಾನಿ ಅವಾಂತರಿಸಿ ರಾತ್ರ್ರಿಯೆಲ್ಲಾ ಮಾತನಾಡುತ್ತಿದ್ದಳಂತೆ, ನಿರ್ದೇಶಕರು ಆರೋಗ್ಯದಲ್ಲಿ ವ್ಯತ್ಯಯ ಬಂದು ಚೀರಾಡಿದಂತೆ ಭ್ರಾಮಕವಾಗಿದೆ ಅಂತಾರೆ.
2014-12-05
- Jackson Audio released
ಜಾಕ್ಸನ್ ಗೀತಮಾಧುರಿ
ಅಂದು ‘ಜಾಕ್ಸನ್’ ಚಿತ್ರದ ಸಿಡಿ ಅನಾವರಣ ಕಾರ್ಯಕ್ರಮ. ವೇದಿಕೆ ಮೇಲೆ ಕಂಡುಬಂದಿದ್ದು ಐದು ಕುರ್ಚಿಗಳು. ನಿರೂಪಕರ ಕೋರಿಕೆಯಂತೆ ಎರಡು ಡಜನ್ ಗಣ್ಯರು ಬಂದರು. ಇದನ್ನು ಅರಿಯದ ನಿರೂಪಕ ಎಲ್ಲರೂ ಆಸೀನರಾಗಬೇಕು ಎಂದು ಅಭಾಸ ಉಂಟು ಮಾಡಿದರು. ತಕ್ಷಣ ಕಾರ್ಯಪ್ರವೃತರಾದ ದುನಿಯಾ ವಿಜಯ್ ಹಾಗೆಯೇ ಎಲ್ಲರೂ ಮಾತನಾಡೋಣ ಅಂತ ಮೈಕನ್ನು ಯೋಗರಾಗಭಟ್ಟರ ಕೈಗೆ ಕೊಟ್ಟರು.ಭಟ್ಟರು ಇದನ್ನು ನೋಡಿದರೆ ಸಿಂಕೋಪಿ ತರಹ ಇದೆ. ಒಂದು ಹಾಡಿಗೆ ಸಾಹಿತ್ಯ ಬರೆದುದನ್ನು ವಿಜಯ್ ಈಗ ಅರ್ಥ ಮಾಡಿಕೊಂಡು ಪ್ರೀತಿಯಿಂದ ಜಗಳ ಮಾಡಿದ್ದಾರೆ.ಬೇಕಿದ್ದರೆ ಸರಿಮಾಡಿಕೊಡುವೆ ಎನ್ನುತ್ತಾ ವಿಜಯ್ ಗೆಳೆತನವನ್ನು ನೆನಪುಮಾಡಿಕೊಂಡು ಶುಭಹಾರೈಸಿದರು. ಭಟ್ಟರು ನನ್ನನ್ನು ನೋಡಿದಾಗ ಹುಷಾರಾಗಿ ಕೆಲಸ ಮಾಡು ಅಂತ ಹಾರೈಸಿದಂತೆ ಆಗಿತ್ತು ಎಂಬುದು ಸಂಕಲನಕಾರ,ನಿರ್ದೇಶಕ ಸನತ್ಕುಮಾರ್ ಉಕ್ತಿ. ಭಟ್ಟರು ನನಗೆ ಗುರುಗಳು. ಅವರಿಂದಲೇ ನನಗೆ ಬದುಕಿನಲ್ಲಿ ತಿರುವು ಸಿಕ್ಕಿದ್ದು. ಅವರನ್ನು ಪ್ರೀತಿ ಮಾಢ್ತೀನಿ,ಬೈಯ್ತಿನಿ. ಜೀವನದಲ್ಲಿ ಜರ್ಜರಿತನಾಗಿದ್ದಾಗ ಗೆಳೆಯ ಹೆಗಲು ಕೊಟ್ಟು ಜಾಕ್ಸನ್ ನಿರ್ಮಾಣ ಮಾಡಿದ್ದಾರೆ. ಮುಂದಿನ ಚಿತ್ರ ಆರ್ಎಕ್ಸ್ ಸೂರಿ.ಇಪ್ಪತ್ತೈದನೆ ಚಿತ್ರ ಗವಿ ಯನ್ನು ರವಿಶ್ರೀವತ್ಸ ನಿರ್ದೇಶನ ಮಾಡಲಿದ್ದಾರೆ ಎಂದರು ವಿಜಯ್. ನಾಯಕಿ ವೃಂದಾ ತನ್ನ ಪಾತ್ರದ ಬಗ್ಗೆ ಹೇಳಿಕೊಳ್ಳದೆ ಹೆಚ್ಚು ಮಾತನಾಡಿದರು. ಸಾಂಪತ್ರ ಸ್ಟಾರ್ ಚಿತ್ರಗಳ ನಿರ್ಮಾಪಕರು, ನಿರ್ದೇಶಕರುಗಳು ಶುಭಹಾರೈಸಲು ಬಂದಿದ್ದರು. ಎರಡು ಗೀತೆಗೆ ಅರ್ಜುನ್ಜನ್ಯ, ಒಂದೊಂದು ಹಾಡಿಗೆ ವೀರ್ಸಮರ್ಥ್, ನವೀನ್ಸಜ್ಜು ಸಂಗೀತ ಒದಗಿಸಿದ್ದಾರೆ. ಸುಂದರ್.ಪಿ.ಗೌಡ್ರು ನಿರ್ಮಾಪಕರಾಗಿ ಮೋದಲ ಹೆಜ್ಜೆ. ಇದಕ್ಕೂ ಮುನ್ನ ಎರಡು ಟಪ್ಪಾಂಗುಚ್ಚಿ ಹಾಡುಗಳನ್ನು ತೋರಿಸಲಾಯಿತು.
2014-12-05
- Bangalore International Film Festival begins
ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಚಾಲನೆ
ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಕನ್ನಡ ಚಿತ್ರರಂಗದ ಸಮಗ್ರ ಪ್ರಗತಿಗೆ ರಾಜ್ಯ ಸರ್ಕಾರ ಹೊಸ ಸಿನಿಮಾ ನೀತಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ. ಕನ್ನಡ ಚಿತ್ರಗಳನ್ನು ಸ್ಪರ್ಧೆಗೆ ಹುರಿಗೊಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿತ್ರರಂಗದ ಅಗತ್ಯ ಪೂರೈಸಲು ಸಿದ್ದವಿದೆ ಎಂಬುದಾಗಿ ಮುಖ್ಯ ಮಂತ್ರ್ರಿಗಳು ಹೇಳಿದರು. ‘ಸಿನಿಮಾ ಸಂಭ್ರಮ’ ನ್ಯೂಸ್ ಲೇಟರ್ ಬಿಡುಗಡೆ ಮಾಡಿದ ವಾರ್ತಾ ಸಚಿವ ರೋಷೆನ್ಬೇಗ್ ಹೊಸ ಸಿನಿಮಾ ನೀತಿ ರೂಪಿಸುವ ಕುರಿತು ಎಲ್ಲಾ ವಲಯಗಳ ಜತೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ಕೊಟ್ಟರು. ಐಸಿಯುಗೆ ಕನ್ನಡ ಚಿತ್ರರಂಗವನ್ನು ಹೋಲಿಸಿದ ಚಲನಚಿತ್ರ ಅಕಾಡಮಿ ಅಧ್ಯಕ್ಷ ರಾಜೇಂದ್ರಸಿಂಗ್ಬಾಬು ಸಿನಿಮಾರಂಗದ ನೀತಿ ಹಳೆಯದಾಗಿದೆ. ಇದಕ್ಕಾಗಿ ಹೊಸ ರೀತಿ ನೀತಿಯನ್ನು ರೂಪಿಸಬೇಕೆಂದು ಕೋರಿಕೆ ಇಟ್ಟರು. ವಿ.ಕೆ.ಮೂರ್ತಿ ನನ್ನ ಗುರುಗಳು. ಎಸ್ಜೆಪಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದರಿಂದ ಬೆಂಗಳೂರು ನನಗೆ ಸಂಬಂದವಿದೆ. ಇಂಟರ್ನೆಟ್ನಲ್ಲಿ ಎಂತಹ ಚಿತ್ರಗಳನ್ನು ನೋಡಬಹುದು. ಆದರೆ ಅದ್ಬುತ ಸಿನಿಮಾಗಳ ಸವಿ ಕಾಣಬೇಕಾದರೆ ಇಂತಹ ಚಿತ್ರೋತ್ಸವಗಳು ಅವಶ್ಯಕವಾಗಿದೆ ಎಂದರು ಬಾಲಿವುಡ್ ನಿರ್ದೇಶಕ, ಛಾಯಗ್ರಾಹಕ ಗೋವಿಂದನಿಹಲಾನಿ. ನಟಿ ಸುಹಾಸಿನಿಮಣಿರತ್ನಂ ಕನ್ನಡ ಅಂದರೆ ನನಗೆ ತುಂಬಾ ಇಷ್ಟ. ತಮಿಳಿಗಿಂತ ಕನ್ನಡದಲ್ಲೆ ಹೆಚ್ಚು ಚಿತ್ರಗಳನ್ನು ಮಾಡಿದ್ದೇನೆ. ಕನ್ನಡ ನನ್ನ ಮಾತೃ ಭಾಷೆಯಾಗಿದೆ. ನನ್ನ ಮನೆ ಇರೋದು ಕೂಡ ಬೆಂಗಳೂರಿನಲ್ಲೆ ಅಂತ ಮಾತನಾಡಿ ಅಚ್ಚರಿ ಮೂಡಿಸಿದರು. ಯಶ್, ಮೇಘನಾರಾಜ್, ಸಂಸದ ಪಿ.ಸಿಮೋಹನ್,ಮಹಾಪೌರರಾದ ಶಾಂತಕುಮಾರಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಉಪಸ್ಥಿತರಿದ್ದರು.
2014-12-05
- Buguri Song shooting
ಬುಗುರಿ ಕುಂಬಳಕಾಯಿ
ಗಣೇಶ್ ಅಭಿನಯದ ಇಪ್ಪತ್ತೈದನೆ ಚಿತ್ರ ‘ಬುಗರಿ’ ಸತತ ಎಂಬತ್ತು ದಿವಸಗಳ ಕಾಲ ಬೆಂಗಳೂರು, ಮಲೇಶಿಯಾ, ಮಂಗಳೂರು, ಮಲ್ಪೆ ನಿಟ್ಟೆ ಕಾಲೇಜು,ಯಲ್ಲಾಪುರ, ಕುಮುಟ ಇತರೆ ಆಗರಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಳೆ ಸ್ವಲ್ಪ ಅಡ್ಡಿ ಬಂದರೂ ಚಿತ್ರಕ್ಕೆ ತೊಂದರೆಯಾಗದೆ ಯಶಸ್ವಿಯಾಗಿ ಮುಗಿಸಿದೆ. ಒಂದು ಹಾಡಿನ ಚಿತ್ರೀಕರಣ ಬಾಕಿ ಇರುವುದರಿಂದ ಮಲೇಶಿಯಾ ಗೀತೆಗೆ ಸರಿ ಹೊಂದುವಂತೆ ರಾಕ್ಲೈನ್ ಸ್ಟುಡಿಯೋದಲ್ಲಿ ಮೂರು ಭಿನ್ನ ರೀತಿಯ ಸೆಟ್ನ್ನು ಹಾಕಿದ್ದಾರೆ. ಮುರಳಿ ನೃತ್ಯ ನಿರ್ದೇಶನದಲ್ಲಿ ನಾಲ್ಕು ರಷ್ಯನ್ ಡ್ಯಾನ್ಸ್ರೊಂದಿಗೆ ಗಣೇಶ್ ಮತ್ತು ನಾಯಕಿ ಎರ್ರಿಕಾಫರ್ನಾಂಡಿಸ್ ಹೆಜ್ಜೆ ಹಾಕಿದರೆ ಬುಗಿರಿಗೆ ಕುಂಬಳಕಾಯಿ ಒಡೆಯಲಾಗುತ್ತದಂತೆ.ಐದು ಗೀತೆಗಳಿಗೆ ಕವಿರಾತ್ ರಚಿಸಿದ್ದು ಇನ್ನು ಒಂದು ಸೇರಿಕೊಳ್ಳುವ ನಿರೀಕ್ಷೆ ಇದೆ. ಉಳಿದ ಹಾಡುಗಳಿಗೆ ಕಲೈ, ಮತ್ತು ಹೊಸಬ ಕಲ್ಪನಾಶಾಂತಿ ಕೋರಿಯೋಗ್ರಾಫರ್ ಕೆಲಸ ಮಾಡಿದ್ದಾರೆ. ಜಗದೀಶ್ ವಾಲಿ, ರಮೇಶ್ಬಾಬು ಮತ್ತು ಕೃಷ್ಣಕುಮಾರ್ ಛಾಯಗ್ರಾಹಕರು.ಪಾತ್ರಕ್ಕಾಗಿ ಗಣೇಶ್ ಸ್ಕೇಟಿಂಗ್ ಮತ್ತು ಕುದರೆ ಸವಾರಿ ಕಲಿತುಕೊಂಡಿದ್ದು, ಫೈಟ್ ದೃಶ್ಯದಲ್ಲಿ ಸ್ಕೇಟಿಂಗ್ ಸಹಕಾರಿಯಾಗಿದೆಯಂತೆ. ಮಲೇಶಿಯಾ ಕನ್ನಡತಿಯಾಗಿ ನಟಿಸಿರುವ ಎರ್ರಿಕಾಫರ್ನಾಡೀಸ್ಗೆ ಎರಡನೆ ಚಿತ್ರ. ಗಣೇಶ್ರನ್ನು ನಾಯಕರನ್ನಾಗಿ ಪರಿಚಯಿಸಿದ ಎಂ.ಡಿ.ಶ್ರೀಧರ್ ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿ ಪಾಲುದಾರರು. ಗೋಪಾಲಕೃಷ್ಣರಿಗೆ ನಿರ್ಮಾಣ ಮೊದಲ ಪ್ರಯತ್ನ. ದಿನಕರ್ತೂಗದೀಪ ಹಂಚಿಕೆಯನ್ನು ಪಡೆದುಕೊಂಡಿದ್ದಾರೆ.
2014-12-05
- Banaadi Kannada Movie Review
ಕನ್ನಡವೆ ಸತ್ಯ ಕನ್ನಡವೆ ನಿತ್ಯ
ಸರ್ಕಾರಿ ಶಾಲೆಯಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ಬುದ್ದವಂತರಲ್ಲ ಎಂದು ಪೋಷಕರು ತಿಳಿದುಕೊಳ್ಳುವುದು ತಪ್ಪು. ಅವರಿಗೂ ಶಿಕ್ಷಕರು ಉತ್ತಮ ಜ್ಘಾನ, ನಡವಳಿಕೆಯನ್ನು ಕಲಿಸಿಕೊಡುತ್ತಾರೆ ಎಂಬುದನ್ನು ‘ಬಾನಾಡಿ’ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದ ಕುರಿತು ಹೇಳುವುದಾದರೆ ವಿಧುರನಾದ ಅಪ್ಪ ಕೆಲಸಕ್ಕಾಗಿ ಅಮೇರಿಕಾಗೆ ಮಗ ಕಿಶೋರನನ್ನು ತಾತನ ಬಳಿ ಬಿಟ್ಟು ಹೋಗುತ್ತಾನೆ. ತಾತ ಮೊಮ್ಮಗನನ್ನು ಪ್ರೀತಿಯಿಂದ ಸರ್ಕಾರಿ ಶಾಲೆಗೆ ಸೇರಿಸಿ ಅವನ ಪ್ರತಿಯೊಂದು ಆಸೆಯನ್ನು ನೆರೆವೇರಿಸುತ್ತಿರುತ್ತಾನೆ. ಎಂಟು ವರ್ಷದ ಬಳಿಕ ಮಗನನ್ನು ನೋಡಲು ಬಂದ ಅಪ್ಪ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗೆ ನಮೂದು ಮಾಡಿಸುತ್ತಾನೆ. ಹೊಸ ಶಾಲೆಯ ರೀತಿ ನಿಯಮಗಳು ಕಂಡು ಮಾನಸಿಕ ಹಿಂಸೆ ಅನುಭವಿಸಿ ಇದರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಾನೆ. ಚಿಂತರಾದ ತಾತ ಇವನ ನೆನಪಿನಲ್ಲೆ ಕೊನೆ ಉಸಿರೇಳೆಯುತ್ತಾರೆ. ಕಿಶೋರ ಅಲ್ಲಿ ಇಲ್ಲಿ ಓಡಾಡಿ ಕೊನೆಗೆ ಹಗಲುವೇಷದ ತಂಡಕ್ಕೆ ಸೇರಿಕೊಂಡು ತನಗೆ ಯಾರು ಇಲ್ಲವೆಂದು ಸುಳ್ಳು ಹೇಳಿಕೊಂಡು ಅವರ ಪ್ರೀತಿಯನ್ನು ಸಂಪಾದಿಸಿ ಕೃಷ್ಣ ಹೆಸರಿನೊಂದಿಗೆ ಅವರಿಗೆ ಸರ್ಕಾರದಿಂದ ಸಹಾಯವಾಗುವಂತೆ ಮಾಡುತ್ತಾನೆ. ಮುಂದೆ ಅಮೇರಿಕಾದಿಂದ ಬಂದ ಅಪ್ಪನಿಗೆ ಕಿಶೋರ ಸಿಗುತ್ತಾನಾ, ಅವನು ಏನು ಸಾಧನೆ ಮಾಡುತ್ತಾನೆ ಎಂಬುದು ಚಿತ್ರ ನೋಡಿದರೆ ಒಳಿತು. ಕಿರುತೆರೆ ಧಾರವಾಹಿಯಲ್ಲಿ ನಟಿಸಿದ್ದ ಪ್ರಫುಲ್ಲ ಕಿಶೋರನಾಗಿ ಅದ್ಬುತ ಅಭಿನಯದಿಂದ ಎಲ್ಲರ ಮನೆಸೆಳೆಯುತ್ತಾನೆ. ದತ್ತಾತ್ರೇಯ ತಾತನಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಪ್ಪನ ಪಾತ್ರದಲ್ಲಿ ರಾಜೇಶ್ ಸಹಜ ಅಭಿನಯ. ಅಭಿನಯ, ಹೇಮಾಶ್ರೀ ಶಿಕ್ಷಕರ ಪಾತ್ರದಲ್ಲಿ ಕಾಣಿಸಿಕೊಂಡರೆ, ರಮೇಶ್ಪಂಡಿತ್, ಬ್ಯಾಂಕ್ಜನಾರ್ಧನ್ ಪೋಲಿಸ್ ಪಾತ್ರದಲ್ಲಿ ನಟಿಸಿದ್ದಾರೆ. ಯುವ ಸಂಗೀತ ನಿರ್ದೇಶಕ ಕಾರ್ತಿಕ್ಶರ್ಮಾ ಸಂಯೋಜಿಸಿರುವುದರಲ್ಲಿ ಎರಡು ಹಾಡುಗಳು ಕೇಳಬಲ್. ಹಳ್ಳಿಯ ಸೊಬಗು ಹಾಗೂ ಬೆಂಗಳೂರು ಪರಿಸರವನ್ನು ಸುಂದರವಾಗಿ ತೋರಿಸುವುದರಲ್ಲಿ ಛಾಯಗ್ರಾಹಕ ಸಭಾಕುಮಾರ್ ಶ್ರಮ ಎದ್ದು ಕಾಣಿಸುತ್ತದೆ. ಬಹಳ ಜಾಣ್ಮೆಯಿಂದ ಒಂದೊಳ್ಳೆ ಸಂದೇಶ ಮತ್ತು ಉದ್ದೇಶವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ಹೇಳುವುದಕ್ಕೆ ಪ್ರಯತ್ನಸಿರುವ ಕತೆ,ಚಿತ್ರಕತೆ,ಸಂಭಾಷಣೆ, ನಿರ್ದೇಶಕ ನಾಗರಾಜಕೋಟೆ ರಂಗಭೂಮಿಯಿಂದ ಚಲನಚಿತ್ರಕ್ಕೆ ಪಾದಾರ್ಪಣೆಮಾಡಿ ಉತ್ತಮ ಚಿತ್ರವನ್ನು ಉಣಬಡಿಸಿದ್ದಕ್ಕೆ ಉತ್ತಮ ಅಂಕಗಳನ್ನು ಕೊಡಬಹುದು. ನಿರ್ಮಾಪಕ ನಾಗರಾಜು ಪುತ್ರಿ ಬೇಬಿ ಧೃತಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ.
2014-12-04
- Love in Mandya Success Meet
ಲವ್ ಇನ್ ಮಂಡ್ಯಾ ನಲಿವಿನ ಗಿರಿ
‘ಲವ್ ಇನ್ ಮಂಡ್ಯಾ’ ಚಿತ್ರದ ಮೂಲಕ ಹ್ಯಾಟ್ರಿಕ್ ನಿರ್ಮಾಪಕರಾಗಿರುವ ಉದಯ್ ಮೆಹ್ತಾ ಸಂತೋಷ ಕೂಟದಲ್ಲಿ ಮೈಕ್ ತೆಗೆದುಕೊಂಡು ಮಾದ್ಯಮದವರ ಸಹಕಾರ, ತಂತ್ರಜ್ಘರ ಶ್ರಮದಿಂದ ಚಿತ್ರವು ಯಶಸ್ಸು ಕಂಡಿದೆ. ಹೊಸಬರಿಗೆ ಅವಕಾಶ ಕೊಟ್ಟಿದ್ದು ಸಾರ್ಥಕವಾಗಿದೆ ಎಂದರು. ಇಷ್ಟಕ್ಕೆ ಸುಮ್ಮನಾಗದ ಪತ್ರಕರ್ತರು ಕಲೆಕ್ಷನ್ ಬಗ್ಗೆ ಕೆದಕಿದಾಗ ಇವತ್ತು ಇಷ್ಟು ಖುಷಿಯಾಗಿದ್ದೇನೆ ಎಂದರೆ ಅಸಲು ಬಂದಿದೆ ಎಂಬರ್ಥ. ಮೊದಲ ವಾರದಲ್ಲೆ ನಾನು ಹಾಕಿದ ದುಡ್ಡು ಬಂದಿದೆ. ಮುಂದಿನ ವಾರದಿಂದ ಹೆಚ್ಚಿನ ಚಿತ್ರಮಂದಿರದಲ್ಲಿ ಚಿತ್ರವು ಪ್ರದರ್ಶನವಾಗಿಲಿದೆ ಎಂದರು. ಬಿಡುಗಡೆ ಮುಂಚೆ ದುಗಡದಿಂದ ಕಾಣಿಸುತ್ತಿದ್ದ ಸಾಹಿತಿ,ನಿರ್ದೇಶಕ ಅರಸುಅಂತಾರೆ ಇಂದು ಸಿನಿಮಾ, ತಂಡದ ಕೆಲಸ ಮಾತನಾಡಿಸುತ್ತಿದೆ. ಒಳ್ಳೆ ಸ್ವಮೇಕ್ ಚಿತ್ರವನ್ನು ಗೆಲ್ಲಿಸಿದ್ದಾರೆ. ಮೊದಲ ಪ್ರಯತ್ನಕ್ಕೆ ತಕ್ಕಬೆಲೆ ಬಂದಿದೆ ಎಂಬುದು ಅವರ ಸಂತೋಷದ ನುಡಿ. ದೃಶ್ಯ ಸಿನಿಮಾ ನಂತರ ಸಕ್ಸಸ್ ಚಿತ್ರ ಎನಿಸಿಕೊಂಡಿರುವುದು ನಮ್ಮ ಸಿನಿಮಾ ಅದಕ್ಕೆ ಖುಷಿ. ಈ ಚಿತ್ರದ ಮುಖಾಂತರ ಹೊಸ ರೂಪದಲ್ಲಿ ಹೊರಗೆ ಬಂದಿದ್ದೇನೆ. ಸೋತ ನನಗೆ ಅವಕಾಶ ಕೊಟ್ಟಿದ್ದಕ್ಕೆ ನಿರ್ಮಾಪಕರಿಗೆ ಕೃತಜ್ಘತೆ ಅರ್ಪಿಸಿದರು ನೀನಾಸಂ ಸತೀಶ್. ತಡವಾಗಿ ಸೇರಿಕೊಂಡ ಸಿಂಧೂಲೋಕನಾಥ್ ಕತೆ,ಸಂಗೀತ ಮತ್ತು ಮಾದ್ಯಮದವರ ವಿಮರ್ಶೆಯಿಂದ ಗೆಲುವು ಕಂಡಿದೆ ಅಂತಾರೆ. ಹದಿನೆಂಟು ಚಿತ್ರಗಳಿಗೆ ಸಂಗೀತ ನೀಡಿರುವ ಅನೂಪ್ಸೀಳನ್ಗೆ ಮೊದಲಬಾರಿ ಸಕ್ಸಸ್ ಮೀಟ್ನಲ್ಲಿ ಭಾಗಿಯಾಗಿದ್ದು ತೃಪ್ತಿತಂದಿದೆಯಂತೆ. ಪುಟಾಣಿಗಳಾದ ಮಂಜುನಾಥ್ ಮತ್ತು ಭಾವನಾ ಸಂತಸದಲ್ಲಿ ಭಾಗಿಯಾಗಿದ್ದರು.
2014-12-04
- Rudra Tandava Press Meet
ವಿಲನ್ ಟ್ರೈಲರ್ ಬಿಡುಗಡೆ
ನಾಯಕ,ನಾಯಕಿ ನಟಿಸಿದ ಚಿತ್ರದ ಟ್ರೈಲರ್ ಬಿಡುಗಡೆ ಮಾಢುವುದು ಸಹಜ. ರೇಣುಕಾಂಬ ಪ್ರಿವ್ಯೂ ಚಿತ್ರಮಂದಿರದಲ್ಲಿ ‘ರುದ್ರತಾಂಡವ’ ಚಿತ್ರದ ಟ್ರೈಲರ್ ಅನಾವರಣಗೊಂಡಿತು. ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿಶಂಕರ್ ಅಭಿನಯದ ತುಣುಕುಗಳನ್ನು ತೋರಿಸಲಾಯಿತು. ಪೋಸ್ಟರ್ನಲ್ಲಿ ವಿಲನ್ ಟ್ರೈಲರ್ ಬಿಡುಗಡೆ ಇರುವುದಕ್ಕೆ ನಿರ್ದೇಶಕ ಗುರುದೇಶಪಾಂಡೆ ವಿವರಣೆ ಕೊಡುತ್ತಾರೆ. ಮುಖ್ಯ ಪಾತ್ರಕ್ಕಿಂತ ವಿಲನ್ಗೆ ಫೋರ್ಸ್, ಮಾಸ್ ಹೀರೋ ತರಹ ಇದೆ. ಪ್ರಯತ್ನ ಎಂಬುವಂತೆ ವಿಲನ್ ಅಭಿನಯದ ಟ್ರೈಲರ್ ಬಿಡುಗಡೆ ಮಾಢಿದ್ದೇವೆ. ಇದು ಒಂಥರ ಚಿತ್ರದ ಆಹ್ವಾನ ಪತ್ರಿಕೆ ಇರುವ ಹಾಗೆ. ಅರವತ್ತೈದು ದಿವಸಗಳಲ್ಲಿ ಕೋಲಾರ,ಕೆಜಿಎಫ್, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ ಎಂಬುದು ಅವರ ಸ್ಪಷ್ಟನೆ. ಜಡೇಶ್,ಗುರುವೇಂದ್ರ ಜಂಟಿಯಾಗಿ ವಿಲಕ್ಷಣ ರೀತಿಯಲ್ಲಿ ಸಂಭಾಷಣೆ ಬರೆದಿದ್ದಾರೆ. ತಮಿಳು ಪಾಂಡಿಯನಾಡು ಚಿತ್ರದಲ್ಲಿ ನಟಿಸಿದ್ದ ನಾಯಕ ವಿಶಾಲ್ ತಂದೆ ಜಿ.ಕೆ.ರೆಡ್ಡಿ ಕನ್ನಡದವರೆ ಆಗಿದ್ದರು. ಅವರಿಗೂ ನಟಿಸುವ ಪಸೆ ಇತ್ತಂತೆ. ಸರ್ಕಾರಿ ಕೆಲಸ ಸಿಕ್ಕಕಾರಣ ಚಿತ್ರರಂಗಕ್ಕೆ ಬೆನ್ನು ತೋರಿಸಿ ಆಸೆಯನ್ನು ಮಗನ ಮೂಲಕ ಈಢೇರಿಸಿಕೊಂಡಿದ್ದಾರೆ. ಮೂಲ ಚಿತ್ರಕ್ಕಿಂತ ರುದ್ರತಾಂಡವ ಚೆನ್ನಾಗಿ ಮೂಡಿಬಂದಿದೆ. ಕನ್ನಡದಲ್ಲಿ ಚಿತ್ರ ನಿರ್ಮಿಸುವ ವಾಂಚೆ ಇದೆ ಎಂದು ತಂಡಕ್ಕೆ ಶುಭ ಹಾರೈಸಿದರು. ಹುಟ್ಟುಹಬ್ಬದ ಖುಷಿಯಲ್ಲಿದ್ದ ರವಿಶಂಕರ್ ತನ್ನ ಪಾತ್ರದ ತುಣುಕುಗಳನ್ನು ಅನಾವರಣ ಮಾಡಿದ್ದಕ್ಕೆ ಖುಷಿಗೆ ಕಾರಣವಾಗಿತ್ತು. ಚಿರಂಜೀವಿಸರ್ಜಾ, ರಾಧಿಕಾಕುಮಾರಸ್ವಾಮಿ, ಮದರಂಗಿ ಕೃಷ್ಣ,ಚಿಕ್ಕಣ ನಟಿಸಿರುವ ಚಿತ್ರವು ಡಿಸೆಂಬರ್ ಮೊದಲವಾರಕ್ಕೆ ಮುಕ್ತಿ ಅರ್ಥಾತ್ ಬಿಡುಗಡೆ.
2014-12-04
- Ashiwini nakshatra team to shoot in Australia
ಆಸ್ಟ್ರೇಲಿಯಾದಲ್ಲಿ ಅಶ್ವಿನಿ ನಕ್ಷತ್ರ
ಈ ಟಿವಿ ನಲ್ಲಿ ಮೂಡಿಬರುತ್ತಿರುವ ‘ಅಶ್ವಿನಿ ನಕ್ಷತ್ರ’ ಎಲ್ಲರ ಮನೆಮಾತಾಗಿದೆ. ಇದರಿಂದ ಉತ್ತೇಜಿತಗೊಂಡಿರುವ ತಂಡವು ಕಿರುತೆರೆ ಇತಿಹಾಸದಲ್ಲೆ ಪ್ರಥಮ ಬಾರಿಗೆ ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ಮಾಡಿದ್ದಾರೆ. ಟೂರಿಸಂ ಆಸ್ಟ್ರೇಲಿಯಾ ಮತ್ತು ಟೂರಿಸಂ ಅಂಡ್ ಇವೆಂಟ್ ಕ್ವೀನ್ ಲ್ಯಾಂಡ್ ಟ್ರಾನ್ಸ್ಪೋರ್ಟ್ ಸಂಸ್ಥೆಗಳ ಸಹಯೋಗದೊಂದಿಗೆ ವಿಶೇಷ ಸಂಚಿಕೆಗಳನ್ನು ಏಳು ದಿನಗಳ ಕಾಲ ಆಕಾಶದಲ್ಲಿ ಹಾರಾಡುವ ಬಲೂನ್, ಪ್ರಸಿದ್ದ ಗೋಲ್ಡ್ ಕೋಸ್ಟ್ ಸಮುದ್ರತೀರ, ಡಾಲ್ಪಿನ್ ಜೊತೆಗೆ ಆಟ, ಪೆಂಗ್ವಿನ್ ನೊಟ, ಡ್ರೀಮ್ ವಲ್ರ್ಡ್ ಸುತ್ತಾಟ, ಕಾಂಗರೂ, ಕ್ವಾಲ ಅಲ್ಲದೆ ಸಮಯದ ಅಭಾವದಿಂದ ಬ್ರಿಸ್ಟೆನ್ ಗಬ್ಬಾ ಸ್ಟೇಡಿಯಂ ನಲ್ಲಿ ಯಶಸ್ವಿಯಾಗಿ ಒಂದು ವಾರ ಚಿತ್ರೀಕರಿಸಲಾಗಿದೆ. ನಾಯಕ ತನ್ನ ಮುದ್ದಿನ ಹೆಂಡತಿ ಆಶ್ವಿನಿಗೆ ಅಚ್ಚರಿ ನೀಡಬೇಕಂಬ ಉದ್ದೇಶದಿಂದ ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗುವ ಚಿತ್ರಕಥೆಗೆ ಪೂರಕವಾಗುವಂತೆ ಚಿತ್ರಿಸಿದ್ದಾರೆ. ನಾಯಕ ಜಿಕೆ ಮತ್ತು ನಾಯಕಿಯಾಗಿ ಮಯೂರಿ ನಟಿಸಿದ್ದಾರೆ. ಗೋಷ್ಟಿಯಲ್ಲಿ ಬಿಸಿನೆಸ್ ಹೆಡ್ ಪರಮೇಶ್ವರಗುಂಡ್ಕಲ್ ಮಾತನಾಡಿ ಈಟಿವಿ ಯಾವಾಗಲೂ ವೀಕ್ಷಕರು ಆಸಕ್ತಿಯಿಂದ ನೋಡಬಯಸುವುದರಿಂದ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ್ತಿದೆ. ಇದನ್ನು ವೀಕ್ಷಕರು ಪ್ರೀತಿಯಿಂದ ಸ್ವೀಕರಿಸುತ್ತಿರುವುದು ಸಂತಸದ ಸಂಗತಿ ಎಂದರು. ಹಠಮಾರಿ, ಜಿದ್ದಿನ ಸೂಪರ್ ಸ್ಟಾರ್ ಜಿಕೆ ಮತ್ತು ಮೃದು ಸ್ವಭಾವದ ಮಧ್ಯಮವರ್ಗದ ಅಶ್ವಿನಿ ಇವರಿಬ್ಬರ ವಿರುದ್ದ ಸ್ವಭಾವದ ಜೋಡಿಯ ಪ್ರೇಮ ಕತೆ ಆಶ್ವಿನಿನಕ್ಷತ್ರ. ವಿದೇಶದಲ್ಲಿ ಚಿತ್ರೀಕರಿಸಲಾದ ಐದು ಕಂತುಗಳು ಡಿಸೆಂಬರ್ ಒಂದರಿಂದ ಪ್ರಸಾರವಾಗಲಿದೆ.
2014-12-02
- Nan Love track Audio
ನನ್ ಲವ್ ಟ್ರ್ಯಾಕ್ ಹಾಡುಗಳ ಧಮಾಕ
ಅಮೃತ ವರ್ಷಿಣಿ ಧಾರವಾಹಿ ನಾಯಕ ವಿಜಯ್ ಹಿರಿತೆರೆಗೆ ರುಕ್ಕು ಹೆಸರಿನಲ್ಲಿ ಪಾದಾರ್ಪಣೆ ಮಾಡಿರುವ ಚಿತ್ರ ‘ನನ್ ಲವ್ ಟ್ರ್ಯಾಕ್’ ಚಿತ್ರೀಕರಣ ಪೂರೈಸಿದೆ. ಪ್ರಚಾರದ ಸಲುವಾಗಿ ಹಾಡುಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಪ್ರೀತಿ,ಸ್ನೇಹ ಕುರಿತ ಕತೆಯಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ್ದೇನೆ. ಕಿರುತೆರೆಯಲ್ಲಿ ವೀಕ್ಷಕರು ಇಷ್ಟಪಟ್ಟಂತೆ ಮೊದಲ ಚಿತ್ರವಾಗಿದ್ದರಿಂದ ದುಗುಡದಿಂದ ಇದ್ದೇನೆ ಎಂದರು ರಕ್ಷಿತ್ ಅಲಿಯಾಸ್ ರುಕ್ಕು. ಮಾಸ್ಟರ್ ಕಮ್ಯುನಿಕೇಶನ್ ಮುಗಿಸಿರುವ ಮಂಗಳೂರು ಮೂಲದ ನಿಧಿಕುಶಾಲಪ್ಪ ನಾಯಕಿ. ತಮಿಳಿನಲ್ಲಿ ಕಾದಲ್ದೇಶಂ,ಇದಯಂ ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕದಿರ್ ಚೂಚ್ಚಲಬಾರಿಗೆ ಕನ್ನಡ ಚಿತ್ರಕ್ಕೆ ಕತೆ,ಚಿತ್ರಕತೆ ಜೊತೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರು ನನಗೆ ಪ್ರಿಯವಾದ ಜಾಗ ಇಲ್ಲಿಯೇ ನನ್ನ ಚಿತ್ರದ ಕೆಲಸಗಳನ್ನು ಮಾಡುವುದು ಎಂಬುದು ಕದಿರ್ ಮಾತು. ಜಯಂತ್ಕಾಯ್ಕಿಣಿ, ಕವಿರಾಜ್, ಡಾ.ಮಮತ.ಜಿ.ಸಾಗರ್ ರಚಿಸಿರುವ ಐದು ಹಾಡುಗಳಿಗೆ ಶ್ಯಾಮ್, ಪ್ರಸನ್ನ, ಪ್ರವೀಣ್ ತ್ರಿವಳಿ ಜೋಡಿ ಸಂಗೀತ ಸಂಯೋಜಸಿದ್ದಾರೆ. ಇದೇ ಸಂದರ್ಭದಲ್ಲಿ ವಿಶ್ವದ ಹದಿನಾಲ್ಕನೆ ಬಲಿಷ್ಟ ವ್ಯಕ್ತಿ ಎಂದು ಕರೆಸಿಕೊಂಡಿರುವ ಮನೋಜ್ಚೋಪ್ರ ಎತ್ತರ ಆರೂವರೆ ಅಡಿ, ತೂಕ 150 ಕೆಜಿ. ಮಗನ ತೂಕ 165. ಇವರಿಬ್ಬರು ನಡೆಸಿದ ಸಾಹಸ ಪ್ರದರ್ಶನ ಮೈ ಜುಂ ಎನಿಸಿತು. ಕೋಚ್ ಪೋಷಕ ಪಾತ್ರದಲ್ಲಿ ಚೋಪ್ರ ನಟಿಸಿದ್ದಾರೆ. ಚಿತ್ರದ ಒಂದು ಹಾಡನ್ನು ಸುಂದರ ತಾಣಗಲ್ಲಿ ಚಿತ್ರೀಕರಿಸಿದ್ದು ಕಣ್ಣಿಗೆ ತಂಪು ನೀಡಿತು. ನಟ ವಿನಯ್ರಾಜ್ಕುಮಾರ್, ಲಹರಿವೇಲು,ನಿರ್ದೇಶಕ ಶಶಾಂಕ್, ಮದರಂಗಿ ಕೃಷ್ಣ ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು. ಮಗನ ಭವಿಷ್ಯಕೋಸ್ಕರ ನಿವೃತ್ತ ಪೋಲಿಸ್ ಅಧಿಕಾರಿ ಕೃಷ್ಣಮೂರ್ತಿ ಮತ್ತು ನವೀನ್ ಶರ್ಮಾ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
2014-12-02
- Software Ganda is ready for release
ಸಾಫ್ಟ್ವೇರ್ ಗಂಡನಿಗೆ ಬಿಡುಗಡೆ ಭಾಗ್ಯ
ಅದ್ದೂರಿಯಾಗಿ ಮಹೂರ್ತ ಹಾಗೂ ಸಿಡಿ ಬಿಡುಗಡೆ ಮಾಡಿಕೊಂಡ ‘ಸಾಫ್ಟ್ವೇರ್ ಗಂಡ’ ನಂತರ ಪ್ರಚಾರದಿಂದ ಹಿಂದೆ ಉಳಿಯಿತು. ಇದರಿಂದ ಜಗ್ಗೇಶ್ಗೆ ಬೇಸರವಾಗಿ ಚಿತ್ರದಿಂದ ಕೈ ತೊಳೆದುಕೊಂಡಿದ್ದಾಗಿ ಮಾದ್ಯಮದ ಎದುರು ಹೇಳಿಕೊಂಡಿದ್ದರು. ಈಗ ಚಿತ್ರಕ್ಕೆ ಬಿಡುಗಡೆ ಭಾಗ್ಯ ಬಂದಿದೆ. ಇದಕ್ಕಾಗಿ ಕೊನೆಯ ಬಾರಿ ಪತ್ರಿಕಾಗೋಷ್ಟಿಯನ್ನು ಏರ್ಪಡಿಸಲಾಗಿತ್ತು. ಕಾರಣಾಂತರದಿಂದ ಗೋಷ್ಟಿಗೆ ಅವರು ಬಂದಿರಲಿಲ್ಲ. ಪ್ರಚಾರಕ್ಕೆ ನಾಯಕ, ನಾಯಕಿ ಬರುವುದು ಅವರ ಕರ್ತವ್ಯ. ನಾಯಕಿ ನಿಖಿತಾತುಕ್ರಲ್ ಹಾಜರಿದ್ದು ನಿರ್ಮಾಪಕರಿಗೆ ಸಮಾಧಾನತರಿಸುವಂತ್ತು. ಜಗ್ಗೇಶ್ಗೆ ಬೆನ್ನುನೋವು ಜಾಸ್ತಿಯಾಗಿದ್ದರಿಂದ ಬರಲಾಗಲಿಲ್ಲವೆಂಬ ನಿರ್ಮಾಪಕರಿಗೆ ಉತ್ತರಬಂತು. ಇದನ್ನು ನಂಬದೆ ಕೆದಕಿದಾಗ ನಾಲ್ಕು ಬಾರಿ ಅವರ ಮನೆಗೆ ಹೋದಾಗ ಅವರು ಸಿಗಲಿಲ್ಲವೆಂಬ ಉತ್ತರ ನಿರ್ಮಾಪಕ ರಾಮಪ್ಪರಿಂದ ಕೇಳಿಬಂತು. ನಿರ್ದೇಶಕ ವೆಂಕಟ್ ಮತ್ತು ನಿರ್ಮಾಪಕರು ಹೊಸಬರಾಗಿದ್ದರಿಂದ ಪ್ರಾರಂಬದಿಂದಲೂ ಚಿತ್ರಕ್ಕೆ ಸಹಕಾರ ನೀಡುತ್ತಾ ಬಂದಿರುವ ಜಗ್ಗೇಶ್ ನಮ್ಮ ಕಡೆ ದುಡ್ಡಿಲ್ಲ ಅಂತ ಹೇಳಿಕೊಂಡಿರುವುದು ರಾಮಪ್ಪನಿಗೆ ಬೇಸರವಾಗಿದೆಯಂತೆ. ಮೂರು ಕಾಲು ಕೋಟಿ ಖರ್ಚಾಗಿರುವ ಚಿತ್ರದಲ್ಲಿ ಶ್ರೀನಾಥ್,ಮಿಮಿಕ್ರಿದಯಾನಂದ್ ತಾರಾಬಳಗದಲ್ಲಿ ಇದ್ದಾರೆ.ಸಾಫ್ಟ್ವೇರ್ ಕಥನ ಸಾರುವ ಚಿತ್ರವು ಶುಕ್ರವಾರದಂದು ಸುಮಾರು ನೂರು ಕೇಂದ್ರಗಳಲ್ಲಿ ತೆರೆಕಾಣಲಿದೆ.
2014-12-02
- Stepny movie pressmeet
ಗಂಡ ಹೆಂಡತಿ ಮತ್ತು ಅವಳು
ಬಾಲಿವುಡ್ನಲ್ಲಿ ಅಂದಾನ್ ಸಾಜಿದ್ ಖಾನ್ ಹೆಸರು ಎಲ್ಲರಿಗೂ ಪರಿಚಿತ. ಇವರು ನಟಿಸಿದ ಎಫ್ಎಂ ಫನ್ ಔರ್ ಮಸ್ತಿ ಚಿತ್ರವು 2007ರಲ್ಲಿ ಬಿಡುಗಡೆಗೊಂಡು ಹಿಟ್ ಎನಿಸಿಕೊಂಡಿತ್ತು. ಈಗ ‘ಸ್ಟೆಪ್ನಿ’ ಎನ್ನುವ ಚಿತ್ರವನ್ನು ನಿರ್ಮಾಣದ ಜೊತೆಗೆ ನಾಯಕನಾಗಿ ನಟಿಸಿದ್ದಾರೆ. ಚಿತ್ರದ ಕುರಿತು ಹೇಳುವುದಾದರೆ ನಾಯಕ ಟ್ರಾವಲ್ ಏಜನ್ಸಿಯೊಂದನ್ನು ನಡೆಸುತ್ತಿದ್ದು ಮನೆಯಲ್ಲಿ ಹೆಂಡಳಿ ಕಿರುಕುಳ ತಾಳಲಾರದೆ ಕಷ್ಟವನ್ನು ಆಪ್ತಸಹಾಯಕಿ ಹತ್ತಿರ ತೋಡಿಕೊಳ್ಳುತ್ತಾನೆ.ಅವಳು ಬಾಸ್ಗೆ ಸಹಾಯವಾಗಲೆಂದು ವಿಧುವೆಯನ್ನು ಪರಿಚಯ ಮಾಡಿಕೊಡುತ್ತಾಳೆ. ಇಬ್ಬರ ಸ್ನೇಹ ಪ್ರೀತಿಗೆ ತಿರುಗುತ್ತದೆ.ಹೆಂಡತಿಗೆ ಗಂಡನ ಮೇಲೆ ಅನುಮಾನ ಬಂದು ಮುಂದೆ ಸಂಪೂರ್ಣ ತಿಳಿಹಾಸ್ಯದಲ್ಲಿ ಕತೆಯು ಸಾಗುತ್ತದೆ. ಪ್ರೀತಿ ನಿಗಂ ನಾಯಕಿ, ಬಾಮೈದನ ಪಾತ್ರದಲ್ಲಿ ಅಜೀಜ್ನಸೀರ್ ಮತ್ತು ಸ್ಟೆಪ್ನಿಯಾಗಿ ಫರಾಖಾನ್ ಕಾಣಿಸಿಕೊಂಡಿದ್ದಾರೆ.ಸಂಭಾಷಣೆಗಳು ಹೈದರಾಬಾದ್ ಭಾಷೆಯಲ್ಲಿ ಮೂಡಿಬಂದಿದ್ದು,ಛಾಯಗ್ರಹಣ ಮುರಳಿಕೃಷ್ಣ, ಸಂಕಲನ ಎ.ವಿ.ಪ್ರಸಾದ್ ಇರುತ್ತದೆ. ಹಾಸ್ಯದ ಚಿತ್ರಕ್ಕೆ ಚಿತ್ರಕತೆ ಮತ್ತು ನಿರ್ದೇಶನ ಗಾದಿ ವಹಿಸಿಕೊಂಡವರು ಅಜೀಜ್ನಸೀರ್. ಚಿತ್ರವು ಸದ್ಯದಲ್ಲೆ ತೆರೆಕಾಣಲಿದೆ.
2014-12-01
- Yamaleela 2 review
ಹಾಸ್ಯ ಚಿತ್ರ ಯಮಲೀಲ-2
1994ರಲ್ಲಿ ತೆಲುಗು ನಟ ಅಲಿ ಚೂಚ್ಚಲಬಾರಿ ನಾಯಕನಾಗಿ ನಟಿಸಿದ ‘ಯಮಲೀಲ’ ಚಿತ್ರವು ಬಿಡುಗಡೆಯಾಗಿ ಎಲ್ಲರನ್ನು ನಗುವಿನಲ್ಲಿ ಮುಳುಗಿಸಿತ್ತು. ಈಗ ಅಂತಹುದೆ ಹಾಸ್ಯ ಭರಿತ ‘ಯಮಲೀಲ-2’ ಚಿತ್ರವು ಇಪ್ಪತ್ತನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.ಕೇರಳ, ಸ್ವಿಟ್ಜರ್ಲ್ಯಾಂಡ್, ಇಟಲಿ ಮುಂತಾದ ಕಡೆ ಚಿತ್ರೀಕರಣಗೊಂಡಿದೆ.ನಲವತ್ತು ನಿಮಿಷಗಳ ಕಾಲ ಯಮ ಮತ್ತು ಚಿತ್ರಗುಪ್ತರ ಗ್ರಾಫಿಕ್ಸ್ ಚಿತ್ರದ ಹೈಲೈಟ್. ಮೊದಲ ಸಂಚಿಕೆಯ ಕತೆಗಿಂತಲೂ ಭಿನ್ನವಾಗಿದ್ದು ಕತೆಯಲ್ಲಿ ಭರಪೂರ ಹಾಸ್ಯ ಸನ್ನಿವೇಶಗಳು ಅದರಲ್ಲೂ ಯಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡಾ.ಮೋಹನ್ಬಾಬು ಮತ್ತು ಚಿತ್ರಗುಪ್ತನಾಗಿ ಬ್ರಹ್ಮಾನಂದಂ ನಟನೆ ಕಚಗುಳಿ ಇಡುತ್ತವೆ. ಮನುಷ್ಯನ ಆಯಸ್ಸು ಮುಗಿದ ಕಾರಣ ಕರೆದುಕೊಂಡು ಹೋಗಲು ಯಮ,ಚಿತ್ರಗುಪ್ತ ಭೂಲೋಕಕ್ಕೆ ಬರುತ್ತಾರೆ. ಅಲ್ಲಿ ಅವನ ಪರಿಸ್ಥಿತಿಯನ್ನು ಕಂಡು ಪ್ರೀತಿಸಿದ ಹುಡುಗಿಯನ್ನು ಸೇರಿಸುವುದು ಕತೆಯ ತಿರುಳು. ಭಾಗ ಒಂದರ ಚಿತ್ರವನ್ನು ನಿರ್ದೇಶಿಸಿದ ಎಸ್.ವಿ.ಕೃಷ್ಣರೆಡ್ಡಿ ಕಥೆ,ಚಿತ್ರಕಥೆ,ಸಂಗೀತ ಹಾಗೂ ಆಕ್ಷನ್ ಕಟ್ ಹೇಳಿದ್ದಾರೆ. ಡಿಎಸ್ ಮಾಕ್ಸ್ ಮಾಲೀಕರಾಗಿರುವ ಡಾ.ಕೆ.ವಿ.ಸತೀಶ್ ಚೂಚ್ಚಲಬಾರಿ ನಾಯಕನಾಗಿ ಪಾದರ್ಪಣೆಮಾಡಿದ್ದಾರೆ. ಸೌತ್ಆಫ್ರಿಕಾ ಮೂಲದ ದಿಯಾನಿಖಲಸ್ ನಾಯಕಿ. ಇವರೊಂದಿಗೆ ಆಶಿಷ್ವಿದ್ಯಾರ್ಥಿ,ಸದಾ,ನಿಶಾಕೊತಾರಿ,ಕೋಟಾಶ್ರೀನಿವಾಸರಾವ್, ಸಯಾಜಿಶಿಂದೆ ನಟನೆ ಇದೆ.ತುಂಬಿದ ಪ್ರದರ್ಶನವಾಗುತ್ತಿರುವ ತೆಲುಗು ಚಿತ್ರವು ವಿಶ್ವದಾದ್ಯಂತ ಆರು ನೂರು ಕೇಂದ್ರದಲ್ಲಿ ತೆರೆಕಂಡಿದೆ.
2014-12-01
- Prajwal Devraj's new movie
ಪ್ರಜ್ವಲ್ ದೇವರಾಜ್ ಈಗ ಚಾಲಾಕಿ
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಒಂಬತ್ತು ವರ್ಷದಲ್ಲಿ ಇಪ್ಪತ್ತಮೂರು ಚಿತ್ರದಲ್ಲಿ ನಟಿಸಿದ್ದಾರೆ ಪ್ರಜ್ವಲ್ದೇವರಾಜ್.ಆದರೂ ಒಂದು ಹಿಟ್ ಚಿತ್ರ ಇವರ ಖಾತೆಗೆ ಜಮೆ ಆಗಿಲ್ಲ. ಹೋಂ ಪ್ರೊಡಕ್ಷನ್ನಿಂದ ನಿರ್ಮಾಣಗೊಂಡ ನೀನಾದೆನಾ ಚಿತ್ರವು ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಕಮರ್ಷಿಯಲ್ ಆಗಿ ಸೇಫ್ ಅಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆಯಂತೆ. ನಟನೆ ಮಾಡಿದರೆ ಅಂತರಾಳ ಗೊತ್ತಾಗುತ್ತಿರಲಿಲ್ಲ. ನಿರ್ಮಾಣ ಮಾಡಿದಾಗ ನನ್ನ ಇಮೇಜ್ ಎಲ್ಲಯತನಕ ಇದೆಯೆಂದು ತಿಳಿದುಕೊಂಡಿದ್ದೇನೆ ಅಂತಾರೆ.ಹೊಸಬರಿಗೆ ಅವಕಾಶ ನೀಡಿದ್ದು ತಪ್ಪು ಮಾಡಿದೆ ಅಂತ ಅನಿಸಿದೆ.ಮುಂದೆ ಸ್ವಾರ್ಥಕ್ಕಾದರೂ ಒಳ್ಳೆ ಕತೆ, ಉತ್ತಮ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡು ನಟಿಸುವ ಇರಾದೆ. ಸವಾಲ್ ಚಿತ್ರವನ್ನು ಒಪ್ಪಿಕೊಂಡಿದ್ದು ದೊಡ್ಡ ತಪ್ಪು ಮಾಡಿದೆ ಎಂಬುದು ಗೊತ್ತಾಗಿದೆ.ಇನ್ನು ಮುಂದೆ ಅಂತಹ ಪ್ರಯತ್ನಕ್ಕೆ ಫುಲ್ಸ್ಟಾಪ್. ಮೃಗಶಿರ ಮುಗಿದಿದೆ.ಅರ್ಜುನದಲ್ಲಿ ಅಪ್ಪನ ಜೊತೆಗೆ ಎರಡನೆ ಬಾರಿ ನಟಿಸಿದ್ದೇನೆ.ಅವರು ಪೋಲಿಸ್ ನನಗೆ ಕಳ್ಳನ ಪಾತ್ರ ಅಂತ ನಕ್ತಾರೆ. ಛಾಯಗ್ರಾಹಕ ಸೆಂದಿಲ್ ಬ್ಯುಸಿ ಇರುವ ಕಾರಣ ದಿಲ್ಕರಾಜ ಸದ್ಯಕ್ಕೆ ನಿಂತಿದೆ. ಜಂಬೂಸವಾರಿ ನಿರ್ದೇಶನ ಮಾಡಿದ ವೇಣು ಹೇಳಿದ ಕತೆ ಇಷ್ಟವಾಗಿದೆ. ಚಾಲಾಕಿ ಚಿತ್ರದ ಹೆಸರು. ಪಾತ್ರದಲ್ಲಿ ಪೋಲಿಸರಿಂದಲೇ ಮಾಮೂಲಿ ವಸೂಲಿ ಮಾಡುತ್ತಾನೆ. ಅಲ್ಲದೆ ಜಾಸ್ತಿ ಬಿಲ್ಡ್ಅಪ್, ಇಮೇಜ್ಗೆ ಸ್ಕೋಪ್ ಇದೆ. ಹೈದರಾಬಾದಿನ ಪ್ರವೀಣ್ ನಿರ್ಮಾಪಕರು. ಹೊಸ ವರ್ಷವನ್ನು ಅಪ್ಪನ ಸ್ನೇಹಿತರೊಂದಿಗೆ ಆಚಿರಿಸುತ್ತೇನೆ. ಅಮಿತಾಬ್ಬಚ್ಚನ್, ತಮಿಳು ನಟ ವಿಜಯ್ ಸಾಕಷ್ಟು ವರ್ಷ ಸೈಕಲ್ ಹೊಡೆದ ಮೇಲೆ ಯಶಸ್ವಿ ನಟ ಎನಿಸಿಕೊಂಡಿದ್ದಾರೆ. ಅದರಂತೆ ಮುಂದೆ ನನಗೂ ಒಳ್ಳೆ ಕಾಲ ಬರಬಹುದು. ಅದಕ್ಕಾಗಿ ಹೊಂಗನಸುನಿಂದ ಕಾಯುತ್ತಿದ್ದೇನೆ. ಜವಬ್ದಾರಿಯುತ ಸ್ಥಾನ ಬಂದಾಗ ಮದುವೆ ಬಗ್ಗೆ ಯೋಚನೆ ಎಂಬುದು ಪ್ರಜ್ವಲ್ ದೇವರಾಜು ಅನುಭೂತಿ ಮಾತು.
2014-12-01
- Raj Sanje
ಅರಮನೆ ಮೈದಾನದಲ್ಲಿ ಕಲರ್ಫುಲ್ ರಾಜ್ ಸಂಜೆ
ಮುಖ್ಯಮಂತ್ರಿ,ಸಚಿವರು, ರಜನಿಕಾಂತ್, ಚಿರಂಜೀವಿ ಸೇರಿದಂತೆ ಡಾ.ರಾಜ್ಕುಮಾರ್ ಸ್ಮಾರಕ ಲೋಕಾರ್ಪಣೆಯ ನಂತರ ಸಾಯಂಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಚಂದನವನದ ಕಲಾವಿದರಿಂದ ರಾಜ್ ಚಿತ್ರಗಳ ಗೀತೆಗಳಿಗೆ ಎಲ್ಲರೂ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದರು.ಕಾರ್ಯಕ್ರಮ ಒಂದು ಘಂಟೆ ತಡವಾದರೂ ಅಭಿಮಾನಿಗಳು ಸಾವದಾನದಿಂದ ತಾಳ್ಮೆ ಕಳೆದುಕೊಳ್ಳದೆ ಶಿಳ್ಳೆ,ಕರತಾಡನದೊಂದಿಗೆ ಮತ್ತಷ್ಟು ಮೆರುಗು ತಂದರು.ಹಿರಿಯ ನಟಿ ಬಿ.ಸರೋಜದೇವಿ ‘ಭಕ್ತಕುಂಬಾರ ಚಿತ್ರವನ್ನು ರಾಜ್ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ.ಅವರ ಸಿನಿಮಾ ವಿಶ್ವವಿದ್ಯಾಲಯ ಇದ್ದಂತೆ.ಅವರಂತಹ ಸರಳ ಜೀವಿಯನ್ನು ಎಂದು ನೋಡಿಲ್ಲ’ ಎಂದು ಹಳೆಯ ದಿನದ ಮೆಲುಕನ್ನು ನೆನಪು ಮಾಡಿಕೊಂಡರು.ರಾಜ್ ಜೊತೆಗಿನ ಸಂಪರ್ಕ ಅವಿಸ್ಮರಣೀಯ. ಅವರ ಶ್ರದ್ದೆ,ಶಿಸ್ತು ಎಲ್ಲರೂ ಕಲಿಯಬೇಕು ಎನ್ನುತ್ತಾ ಕಸ್ತೂರಿನಿವಾಸದ ದಿನಗಳನ್ನು ನೆನಪಿಸಿಕೊಂಡರು ಭಗವಾನ್. ಗಣೇಶನ ಪ್ರಾರ್ಥನಾ ಗೀತೆಗೆ ಶ್ರೀಧರ್ ತಂಡವು ನೃತ್ಯ ಮಾಡುವ ಮೂಲಕ ಕಾರ್ಯಕ್ರಮ ಶುರುವಾಯಿತು. ಅಕುಲ್ಬಾಲಾಜಿ, ಪ್ರಿಯಾಂಕಚಂದ್ರ ನಾಡಗೀತೆಗೆ ಹೆಜ್ಜೆ ಹಾಕಿ ನಮನ ಸಲ್ಲಿಸಿದರು. ವಿಜಯರಾಘವೇಂದ್ರ, ಮೇಘನಾರಾಜ್ ಏರಿ ಮೇಲೆ ಏರಿ ಹಾಡಿಗೆ,ಗಂಗಿ ನಿನ್ ಮೇಲೆ ಮನಸೈತೆ ಗೀತೆಗೆ ಚಿರಂಜೀವಿ ಸರ್ಜಾ,ಸಂಜನಾ, ಆ ರತಿಯೇ ಧರಗಿಳಿದಂತೆ ಹಾಡಿಗೆ ನವೀನ್,ಸೋನು,ನಾನಿನ್ನ ಮರೆಯಲಾರೆ ಗೀತೆಗೆ ಗಣೇಶ್,ಅಮೂಲ್ಯ, ರವಿಚಂದ್ರನ್ ನಾನಿರುವುದೆ ನಿನಗಾಗಿ ಹಾಡು,ರಣರಂಗ ಚಿತ್ರಕ್ಕೆ ಶಿವರಾಜ್ಕುಮಾರ್ ಹೆಜ್ಜೆ ಹಾಕಿ ರಂಜಿಸಿದರು. ಕನ್ನಡದ ಮಾತು ಚಂದ ಗೀತೆಗೆ ಉಪೇಂದ್ರ ಹೆಜ್ಜೆಹಾಕಿ ಅಣ್ಣನೊಂದಿಗೆ ನಡೆದ ಸಹಿ ಘಟನೆಯನ್ನು ಮೆಲುಕು ಹಾಕಿದರು.ಪುನೀತ್ ರಾಜ್ಕುಮಾರ್ ರಾಜ್ ಗೀತೆಗೆ ಡ್ಯಾನ್ಸ್ ಮಾಡಿದರು.ಲೇ ಲೇ ಅಪ್ಪನ ಮಗಳೆ ಹಾಡಿಗೆ ಯಶ್, ರಚಿತಾರಾಮ್ ಡ್ಯಾನ್ಸ್ ಮಾಡಿದರೆ,ಅರ್ಜುನ್ಸರ್ಜಾ, ಹರಿಪ್ರಿಯಾ ಜೊತೆಯಾಗಿ ಹೆಜ್ಜೆ ಹಾಕಿದ್ದು, ಸಚಿವ,ನಟ ಅಂಬರೀಷ್ ನೀ ಬಂದು ನಿಂತಾಗ ಹಾಢಿಗೆ ಸುಮಲತಾರೊಂದಿಗೆ ಹೆಜ್ಜೆ ಹಾಕಿ ಎಲ್ಲರಿಗೂ ಸಂತಸ ತಂದರು. ಅಭಿಜಿತ್, ಶಿವಕುಮಾರ್,ಪದ್ಮಾವಾಸಂತಿ ಬಬ್ರುವಾಹನ ಪ್ರಹಸನ ಮಾಡಿದರು. ಕಾರ್ಯಕ್ರಮದಲ್ಲಿ ಎಲ್ಲರೂ ರಾಜ್ ಗೀತೆಗಳಿಗೆ ಹೆಜ್ಜೆ ಹಾಕಿದರೆ ದರ್ಶನ್, ಸುದೀಪ್ ಕ್ಯಾಟ್ ವಾಕ್ ಮಾಡಿ ಅಭಿಮಾನಿಗಳತ್ತ ಕೈಬೀಸಿ ತೆರಳಿದರು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿ ಅವರ ವಿರುದ್ದ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಸುಮಾರು ಐದು ಘಂಟೆಗಳ ಜಬರ್ದಸ್ತ್ ಸಾಂಸ್ಕ್ರತಿಕ ಕಾರ್ಯಕ್ರಮವು ನಿರ್ದೇಶಕ ಎಸ್.ನಾರಾಯಣ್ ಪಾರುಪಥ್ಯದಲ್ಲಿ ಜರುಗಿತು.
2014-12-01
- Dr Rajkumar Memorial launch
ಡಾ.ರಾಜ್ಕುಮಾರ್ ಸ್ಮಾರಕ ಲೋಕಾರ್ಪಣೆ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಕುಮಾರ್ ಸಮಾಧಿ ಶನಿವಾರ ಸಚಿವರು, ರಜನಿಕಾಂತ್,ಚಿರಂಜೀವಿ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಆರು ಕೋಟಿ ಕನ್ನಡಿಗರ ಸಂಕೇತವಾಗಿ ರಾಜ್ಕುಮಾರ್ ಪ್ರತಿಷ್ಟಾನ ಹಾಗೂ ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು. ಅವರೊಂದಿಗಿನ ಸಂಪರ್ಕವನ್ನು ಮೆಲುಕು ಹಾಕಿದ ಮುಖ್ಯಮಂತ್ರಿಗಳು ಮತ್ತೋಬ್ಬ ರಾಜ್ಕುಮಾರ್ರನ್ನು ಕಾಣುವುದು ಅಸಾಧ್ಯ. ಕನ್ನಡಕ್ಕೆ ಒಬ್ಬರೆ ರಾಜ್ಕುಮಾರ್.ಅವರ ಅಗಲಿಕೆ ಚಿತ್ರರಂಗಕ್ಕೆ ಕೊರತೆ ತುಂಬಿದೆ ಎಂಬ ಮಾತು ವಾಸ್ತವವಾಗಿದೆ. ನಾಟಕ, ಪೌರಾಣಿಕ, ಸಾಮಾಜಿಕ ಮತ್ತು ಬಾಂಡ್ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಅವರಿಗೆ ಸಾಟಿ ಯಾರು ಇಲ್ಲ ಎಂದರು. ಇದೇ ಸಂದರ್ಭದಲ್ಲಿ ರಾಜ್ಕುಮಾರ್ ದಾನ ಮಾಡಿದಂತೆ ತಾನು ನೇತ್ರದಾನ ಮಾಡುವುದಾಗಿ ಮಿಂಟೋ ಆಸ್ಪತ್ರೆಯ ವಾಗ್ದಾನ ಪತ್ರಕ್ಕೆ ಸಹಿ ಹಾಕಿದರು. ಮುತ್ತುರಾಜ್ ಹೆಸರಿನ ಮಳೆ ಹನಿ ನೆಲಕ್ಕೆ ಬಿದ್ದು ಮನುಷ್ಯ ರೂಪ ತಾಳಿ ನಂತರ ಅಶ್ವರೂಪ ಪಡೆದು ಕನ್ನಡ ಚಿತ್ರರಂಗಕ್ಕೆ ಸತತ ಐವತ್ತನಾಲ್ಕು ವರ್ಷಗಳ ಕಾಲ ಕನ್ನಡಿಗರನ್ನು ರಂಜಿಸಿದ್ದಾರೆ. ಭಕ್ತ ಅಂಬರೀಷನನ್ನು ಆ ಅಶ್ವ ಸವಾರಿ ಮಾಡಲಿಲ್ಲ ಎಂಬುದು ಬೇಸರದ ಸಂಗತಿ. ಅವರು ಸರಸ್ವತಿ ಆರಾಧಕರಾಗಿದ್ದರು. ಜನ ಗೌರವ ಕೊಡುವುದು ನನಗಲ್ಲ,ನನ್ನಲ್ಲಿರುವ ಸರಸ್ವತಿಗೆ ಎಂದು ಅವರು ಆಗಾಗ ಹೇಳುತ್ತಿದ್ದುದು ನೆನಪು ಇದೆ. ರಾಜ್ ಹೂರತುಪಡಿಸಿ ಯಾರ ಬಳಿಯೂ ಆಟೋಗ್ರಾಫ್ ಪಡೆದಿಲ್ಲ. ಅವರ ಸ್ಮಾರಕ ಮಂದಿರವನ್ನು ತಂದಿರುವುದಕ್ಕೆ ಸರ್ಕಾರಕ್ಕೆ ನನ್ನ ತುಂಬ ಹೃದಯದ ಅಭಿನಂದನೆಯನ್ನು ಸಲ್ಲಿಸುತ್ತೇನೆಂದು ತೂಕದ ಮಾತಿಗೆ ವಿರಾಮ ಹಾಕಿದರು ರಜನಿಕಾಂತ್. ಫಿಲಿಂ ವಿದ್ಯಾರ್ಥಿಯಾಗಿದ್ದ ನನ್ನನ್ನು ಆತ್ಮೀಯವಾಗಿ ಮಾತನಾಡಿಸಿದನ್ನು ನೆನಪುಮಾಡಿಕೊಂಡ ಚಿರಂಜೀವಿ ಅವರ ಸರಳ ನುಡಿಗೆ ಶರಣಾಗಿದ್ದೆ ಕನ್ನಡ ನಾಡಿಗೆ ಅಲ್ಲ ಅವರು ಈಡೀ ದೇಶಕ್ಕೆ ಆಸ್ತಿ ಅಂತ ಬಣ್ಣಿಸಿದರು. ಅಪ್ಪನ ಕೊನೆಗಾಲವನ್ನು ಹಾಗೆಯೇ ಬಿಚ್ಚಿಟ್ಟರು ರಾಘವೇಂದ್ರರಾಜ್ಕುಮಾರ್. ಇದೇ ಸಂದರ್ಭದಲ್ಲಿ ರಾಜ್ಕುಮಾರ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.ರಾಜ್ಕುಮಾರ್ ಚಿತ್ರಸಂಪುಟ ಪುಸ್ತಕವನ್ನು ರಜನಿಕಾಂತ್ ಹಾಗೂ ರಾಜ್ಕುಮಾರ್ ಸಾಕ್ಷ್ಯಚಿತ್ರವನ್ನು ಚಿರಂಜೀವಿ ಬಿಡುಗಡೆಗೊಳಿಸಿದರು.ಗೃಹ ಸಚಿವ ಕೆ.ಜೆ.ಜಾರ್ಜ್, ಸಚಿವ ನಟ,ಅಂಬರೀಷ್, ವಾಣಿಜ್ಯಮಂಡಳಿ ಅಧ್ಯಕ್ಷ ಗಂಗರಾಜು, ವಾರ್ತಾ ಸಚಿವ ರೋಷನ್ಬೇಗ್, ಸಚಿವರಾದ ರಾಮಲಿಂಗರೆಡ್ಡಿ, ಉಮಾಶ್ರೀ,ಮಹಾಪೌರರು, ರಾಜ್ ಕುಟುಂಬ, ಜಗ್ಗೇಶ್, ತಾರಾ ಉಪಸ್ತಿತರಿದ್ದರು.
2014-12-01
- Shivam Audio Release
ನಿರ್ಮಾಪಕರ ನಾಯಕ ನಟ ಶಿವಣ್ಣ, ಉಪೇಂದ್ರ
ಬಹು ಕೋಟಿ ವೆಚ್ಚದ ನಿರೀಕ್ಷಿತ ಚಿತ್ರ ‘ಶಿವಂ’ ಹಾಡುಗಳು ಇತ್ತೀಚೆಗೆ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು. ಸೆನ್ಸಾರ್ ಅಧ್ಯಕ್ಷ ನಾಗರಾಜಸ್ವಾಮಿ ಈ ನಡುವೆ ಚಿತ್ರಗಳನ್ನು ಕಟ್ ಮಾಡುವುದು ಅಲ್ಲದೆ ಎಡಿಟ್ ಮಾಡುವ ಪ್ರಸಂಗ ಬಂದಿದೆ. ಸರ್ಕಾರ ಮಾರ್ಗಸೂಚಿಯನ್ವಯ ಚಿತ್ರವನ್ನು ಸೆನ್ಸಾರ್ ಮಾಡಲಾಗುತ್ತದೆ ಹೂರತು ನಿರ್ಮಾಪಕರಿಗೆ ಉಪಟಳ ಕೊಡೊಲ್ಲ ಎಂದರು.ಚಿತ್ರರಂಗ ಕಷ್ಟದಲ್ಲಿದೆ, ನಿರ್ಮಾಪಕರು ಉಳಿದರೆ ನೂರಾರು ಜನರಿಗೆ ಕೆಲಸ ಸಿಗುತ್ತದೆ. ಉಪ್ಪಿ,ಶಿವು ನಿರ್ಮಾಪಕರನ್ನು ಸ್ನೇಹಿತರಂತೆ ನೋಡುತ್ತಾರೆ ಇವರ ಗುಣ ಎಲ್ಲರಿಗೂ ಬರಬೇಕು ಎಂಬುದು ಅಕಾಡಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಮಾತು.ನಿರ್ಮಾಪಕರ ಹೆಸರಿನಲ್ಲೆ ಸಿಆರ್ ಇದೆ. ಅಂದರೆ ಕ್ರೋರ್. ನಮ್ಮಲ್ಲಿ ಕ್ರೋರ್ ಇಲ್ಲದೆ ಇದ್ದರೂ ಹೃದಯದಲ್ಲಿ ಕ್ರೋರ್ ಸಂಪಾದಿಸಿದ್ದಾರೆ.ನಿರ್ಮಾಪಕರು ನಂದಾದೀಪವನ್ನು ತಂದಾಗ ಅದನ್ನು ಕಡೆಯತನಕ ಬೆಳಗಿಸುವ ಜವಬ್ದಾರಿ ನಮ್ಮದು ಎಂಬ ಕಿವಿಮಾತು ಹೇಳಿದ್ದ್ದು ಲಹರಿವೇಲು. ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬರುತ್ತಿರುವಾಗ ಸಚಿವ ಡಿಕೆ.ಶಿವಕುಮಾರ್, ಸಂಸದ ಚೆಲುವರಾಯಸ್ವಾಮಿ, ಶಾಸಕ ಜಮೀರ್ಅಹ್ಮದ್ಖಾನ್ ಆಗಮಿಸಿದರು. ಗತ ಕಾಲದಲ್ಲಿ ರಾಜಕೀಯ ವ್ಯಕ್ತಿಗಳನ್ನು ಒಳ್ಳೆಯವರಂತೆ ತೋರಿಸುತ್ತಿದ್ದರು. ಈಗ ಕಳ್ಳನಂತೆ ಬಿಂಬಿಸುತ್ತಿದ್ದಾರೆ ಅಂತ ತುಸು ಬೇಸರಗೊಂಡ ಸಚಿವರು ಚಿತ್ರಕ್ಕೆ ಶುಭ ಹಾರೈಸಿದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ನಿರ್ಮಾಪಕರ ನಾಯಕ ನಟ ಶಿವು,ಉಪ್ಪಿ ಅಂತ ಬಣ್ಣಿಸಿದರು. ಆಗಮಿಸಿದ ಗಣ್ಯರನ್ನು ನೋಡಿದ ಶಿವಣ್ಣ ಇಡೀ ಚಿತ್ರರಂಗ ಇಲ್ಲಿ ಬಂದಿದೆ.ಮನಸ್ಸು ಶುದ್ದಿ ಇದ್ದರೆ ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ಬರುತ್ತಾರೆ. ನನ್ನ ಇಮೇಜ್ಗೆ ಓಂಕಾರ ಹಾಕಿದ್ದೆ ಉಪೇಂದ್ರ. ಅದಕ್ಕೆ ಓಂ ಚಿತ್ರ ಇಂದಿಗೂ ಗುಯ್ ಅನ್ನುತ್ತಿದೆ ಎಂದರು. ಸತ್ಯಂ ಎನ್ನುವುದು ನಿರ್ಮಾಪಕರು. ಶಿವಂ ಚಿತ್ರದಲ್ಲಿ ಸುಂದರವಾದ ಕ್ಲೈಮಾಕ್ಸ್ ಇದೆ ಎಂಬುದು ಉಪೇಂದ್ರ ಉವಾಚ. ನಾಯಕಿ ರಾಗಿಣಿ,ಸಂಗೀತ ನಿರ್ದೇಶಕ ಮಣಿಶರ್ಮರಿಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಕೆ.ಕಲ್ಯಾಣ್, ನಾಗೇಂದ್ರಪ್ರಸಾದ್, ಸೌತ್ ಇಂಡಿಯನ್ ಫಿಲಿಂ ಅಧ್ಯಕ್ಷ ರವಿಕೊಟ್ಟಾರಕರ್, ವಜ್ರಕಾಯ ನಾಯಕಿ ತಾರುಣ್ಯ, ವಾಣೀಜ್ಯ ಮಂಡಳಿ ಪದಾದಿಕಾರಿಗಳು ಉಪಸ್ತಿತರಿದ್ದರು. ಒಂದೂವರೆ ವರ್ಷದಿಂದ ಚಿತ್ರಕ್ಕಾಗಿ ಹದಿನೈದು ಕೋಟಿ ಸುರಿದಿದ್ದಾರೆ ಸಿ.ಆರ್.ಮನೋಹರ್. ಹಬ್ಬದ ವಾತವರಣದಲ್ಲಿ ಸಿಟಿಮಾರ್ಕೆಟ್ನ್ನು ಕಲ್ಪಸಿಕೊಂಡಂತೆ ಸಮಾರಂಭವು ಅದೇ ರೀತಿ ಇತ್ತು.
2014-12-01
- Mrugashira Audio Released
ಮೃಗಶಿರ ಹಾಡುಗಳ ಹಬ್ಬ
ಭೂಪಟದಲ್ಲಿ ಕಾಣಿಸದ ಸ್ಥಳ ಕುಂದಾಪುರ ಸಮೀಪ ತೊಂಬಟ್ಟು ನಕ್ಸಲ್ಪೀಡಿತ ಆಗರದಲ್ಲಿ ಚಿತ್ರೀಕರಣಗೊಂಡ ‘ಮೃಗಶಿರ’ ಚಿತ್ರದಲ್ಲಿ ಹೆಸರು ಹೇಳುವಂತೆ ಅಲ್ಲಿ ಹೂರಗಿನ ಪ್ರಪಂಚ ತಿಳಿಯದೆ ಕಾಡು ಮೃಗಗಳಂತೆ ವಾಸಮಾಡುವ ಜನರು ಅಲ್ಲಿಗೆ ಯಾರೆ ಹೋದರೂ ಸಾಯಿಸುತ್ತಾರೆ. ಆಟೋ ಚಾಲಕನಾದ ನಾಯಕ ಪ್ರಜ್ವಲ್ದೇವರಾಜ್ ಆಕಸ್ಮಿಕವಾಗಿ ಕಾಡಿನಲ್ಲಿ ಸಿಕ್ಕಿಕೊಂಡಾಗ ಪೂರ್ವಜನ್ಮದ ನೆನಪು ಬರುತ್ತದೆ. ಅದು ಏನು ಅವನು ಉಳಿತಾನಾ ಎಂಬುದನ್ನು ತೆರೆ ಮೇಲೆ ನೋಡಬೇಕಂತೆ. ಬಿ.ಸುರೇಶ್ ಅಪ್ಪನ ಪಾತ್ರ ನಿರ್ವಹಿಸಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರ ಶಿಷ್ಯ ಶ್ರೀವತ್ಸ ಕತೆ,ಚಿತ್ರಕತೆ ಮತ್ತು ಚೂಚ್ಚಲಬಾರಿಗೆ ನಿರ್ದೇಶನದ ಗಾದಿ ವಹಿಸಿಕೊಂಡಿದ್ದಾರೆ.ಉಗ್ರಂ ಖ್ಯಾತಿ ರವಿಬಸ್ರೂರು ಎರಡು ಹಾಡಿಗೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ಉಳಿದಂತೆ ಮೂರು ಹಾಡುಗಳಿಗೆ ಯೋಗರಾಜಭಟ್, ತ್ಯಾಗರಾಜು, ಅಶೋಕ್ ನೀಲಾವರ್ ಪೆನ್ನು ಕೆಲಸ ಮಾಢಿದೆ. ಹಳ್ಳಿ ಹುಡುಗಿ ಮುಗ್ದಳಂತೆ ಕಾಣಿಸಿಕೊಂಡಿರುವ ನಾಯಕಿ ಮಾನಸ ಮತ್ತು ಛಾಯಗ್ರಾಹಕ ಶ್ರೀನಿವಾಸರಾಮಯ್ಯರಿಗೆ ಮೊದಲ ಚಿತ್ರ. ಒಂದು ಗೀತೆಗೆ ಅರ್ಜುನ್ಜನ್ಯಾ ಶಿಷ್ಯನ ಸಂಗೀತಕ್ಕೆ ಕಂಠದಾನ ಮಾಡಿದ್ದಾರೆ. ಚಿತ್ರರಂಗದ ಸಂವೇದನಾಶೀಲ ಇಲ್ಲದೆ ಛಾಯಗ್ರಾಹಕ,ಸಂಗೀತ ನಿರ್ದೇಶಕರ ಸಹಕಾರದಿಂದ ಹಣ ಖರ್ಚು ಮಾಡಿದ್ದಾರೆ ಚನ್ನಪ್ಪ. ಇತ್ತೀಚೆಗೆ ಚಿತ್ರದ ಸಿಡಿಯನ್ನು ನಟ ದೇವರಾಜ್. ಲಹರಿವೇಲು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಸಾಧುಕೋಕಿಲ, ಅವಿನಾಶ್, ವೀಣಾಸುಂದರ್ ನಟನೆ ಇದೆ.
2014-12-01
- Jai Bajarangbali kannada movie ready for release
ಬಿಡುಗಡೆ ಹೊಸ್ತಿಲಿನಲ್ಲಿ ಜೈ ಭಜರಂಗಬಲಿ
ಒಂದೂವರೆ ವರ್ಷದ ಹಿಂದೆ ಮಹೂರ್ತಗೊಂಡ ‘ಜೈ ಭಜರಂಗಬಲಿ’ ಚಿತ್ರವು ಆಮೆ ಗತಿಯಲ್ಲಿ ಚಿತ್ರೀಕರಣ ಮುಗಿಸಿ ತೆರೆಗೆ ತರುವ ಹಂತಕ್ಕೆ ಬಂದಿದೆ. ಇದರ ಸಂಬಂದ ತಂಡವು ಚಿತ್ರದ ಬಗ್ಗೆ ಸವಿವರವಾಗಿ ತಿಳಿಸಲು ಮೊದಲ ಬಾರಿ ಮಾಧ್ಯಮದವರನ್ನು ಭೇಟಿ ಮಾಡಿತು. ಚಿತ್ರ ಶುರುವಾದಾಗ ಅಜಯ್ರಾವ್ ಈಗ ಕೃಷ್ಣಅಜಯ್ರಾವ್ ಆಗಿದ್ದು ಸಿನಿಮಾ ಬಿಡುಗಡೆ ಆಗುತ್ತಿರುವುದೆ ಖುಷಿಯಂತೆ.ನಿನ್ನೆ, ಇಂದು, ನಾಳೆಯ ಕಾಲದ ಮಹಿಮೆ ಗೊತ್ತಿಲ್ಲದ ಅವನಿಗೆ ಬದುಕಬೇಕು ಎಂಬ ಪಸೆ ಬರುತ್ತೆ.ಅದು ಎಲ್ಲಿಯೂ ಮೋಸಮಾಡದಂತೆ. ಈ ಪಯಣದಲ್ಲಿ ಹೋಗುವಾಗ ನಾಯಕಿ ಆಕಸ್ಮಿಕವಾಗಿ ಸಿಗುತ್ತಾಳೆ.ಇಂತಹ ಸಂದ್ಗಿದ ಸ್ಥಿತಿಯಲ್ಲಿ ಇಬ್ಬರೂ ಪಾರಾಗುತ್ತಾರಾ ಎಂಬುದು ಕತೆಯ ತಿರುಳು. ಪವರ್ ಪ್ಯಾಕೇಜೆಡ್ ಲವ್ ಸ್ಟೋರಿಯಲ್ಲಿ ಗ್ಲಿಸಿರನ್ ಹಾಕದೆ ನಟಿಸಿರುವ ಏಕೈಕ ಚಿತ್ರ ಅಂತಾರೆ. ಸಂಗಮ ನಂತರ ಆಕ್ಷನ್ ಕಟ್ ಹೇಳಿರುವ ರವಿವರ್ಮಗುಬ್ಬಿಗೆ ಲೇಟ್ ಆದರೂ ಲೇಟಸ್ಟ್ ಆಗಿದೆಯಂತೆ. ಸಾಂಪ್ರತ ಚಿಕ್ಕ ಚಿಕ್ಕ ನೈಜ ಘಟನೆಗಳನ್ನು ಹೆಕ್ಕಿಕೊಂಡು ಚಿತ್ರಕತೆ ರೂಪಸಿದ್ದಾನೆ ಎಂಬುದು ಅವರ ಸ್ಪಷ್ಟನೆ. ನಾಯಕಿ ಸಿಂಧೂಲೋಕನಾಥ್ ಒಪ್ಪಿಕೊಂಡಾಗ ಮೂರನೆ ಚಿತ್ರವಾಗಿತ್ತು.ಬಿಡುಗಡೆಯಾಗುವ ಹೊತ್ತಿಗೆ ಹದಿಮೂರಕ್ಕೆ ದಾಟಿದೆ. ಸಿನಿಮಾ ಬಿಡುಗಡೆಯಾಗುವುದಿಲ್ಲ ಅಂದುಕೊಂಡಿದ್ದರಂತೆ. ವಿಲಕ್ಷಣ ಸಂಭಾಷಣೆ ಬರೆದಿರುವ ಪತ್ರಕರ್ತ ವಿನಾಯಕರಾಮ್ಕಲಗಾರು ಮಾತನಾಡುತ್ತಾ ಆಕ್ಷನ್ ಚಿತ್ರವಾಗಿದ್ದು ನೋಡಿದ ಮೇಲೆ ವಿಕ್ಸ್ ಆಕ್ಷನ್ ಗುಳಿಗೆ ಬೇಕಾಗಿಲ್ಲ ಹಾಗಯೇ ತಡವಾದ ಚಿತ್ರಗಳೆಲ್ಲಾ ಹಿಟ್ ಆಗಿದೆ ಅಂತ ಹೆಸರುಗಳನ್ನು ನಮೂದಿಸುತ್ತಾರೆ. ಬಿಡುಗಡೆ ನಂತರ ಸಂಬಾಷಣೆ ಬಗ್ಗೆ ಲೇಖನ ಬರೆಯುವುದು ಗ್ಯಾರಂಟಿ ಎನ್ನುವುದು ನಿರ್ದೇಶಕರ ಗುಣಗಾನ. ಯೋಜರಾಜ್ಭಟ್ ರಚಿಸಿರುವ ಮೂರು ಹಾಢುಗಳಿಗೆ ಹರಿಕೃಷ್ಣ ಸಂಗೀತ ಸಂಯೋಜಸಿದ್ದಾರೆ. ಹೂಸೂರು ಮೂಲದ ವಿಜಯ್ಪಾಲ್ರಾಜ್ ನಿರ್ಮಾಪಕರು. ತೂಗದೀಪ ಹಂಚಿಕೆಯವರು ನೂರ ಇಪ್ಪತ್ತೈದು ಕೇಂದ್ರಗಳಲ್ಲಿ ಡಿಸೆಂಬರ್ ಹನ್ನೆರಡರಂದು ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕೂ ಮುನ್ನ ಚಿತ್ರದ ಮೂರು ಹಾಡು ಮತ್ತು ಟ್ರೈಲರ್ ತೋರಿಸಲಾಯಿತು.
2014-12-01
- Namo Bhootaatma is ready for release
ನಮೋ ಭೂತಾತ್ಮ ತೆರೆಗೆ ಸಿದ್ದ
ಎರಡು ವಾರದ ಹಿಂದೆ ‘ನಮೋ ಭೂತಾತ್ಮ’ ಹಾಡುಗಳ ಸಿಡಿ ಬಿಡುಗಡೆಯಾಗಿತ್ತು.ಈಗ ಚಿತ್ರವು ತೆರೆಗೆ ಬರಲು ಸನ್ನಿಹಿತವಾಗಿದ್ದರಿಂದ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯನ್ನು ನಿರ್ಮಾಪಕರು ಏರ್ಪಡಿಸಿದ್ದರು. ನಿರ್ಮಾಣದಲ್ಲಿ ಪಾಲುದಾರರಾದ ಕೋಮಲ್ ನಿರೂಪಣೆ ಕೆಲಸವನ್ನು ವಹಿಸಿಕೊಂಡು ತಂತ್ರಜ್ಘರ ವಿವರಣೆ ನೀಡುತ್ತಾ ಮೈಕನ್ನು ನೀಡುತ್ತಾ ಹೋದರು. ನಿರ್ಮಾಣದಲ್ಲಿ ಪಾಲುದಾರರಾದ ಎಲ್ರಿಡ್ಕುಮಾರ್ ಬೇರೆ ಭಾಷೆಯಲ್ಲಿ ಚಿತ್ರಗಳನ್ನು ನಿರ್ಮಿಸಿದ್ದು ಕನ್ನಡದಲ್ಲಿ ಮೊದಲ ಪ್ರಯತ್ನವಾಗಿದ್ದರಿಂದ ಅದ್ಬುತ ಚಿತ್ರದಲ್ಲಿ ಕೈ ಹಾಕಿದ್ದಕ್ಕೆ ಸಂತಸಕ್ಕೆ ಕಾರಣವಾಗಿತ್ತು. ನೃತ್ಯ ನಿರ್ದೇಶಕನಾಗಿದ್ದ ನನಗೆ ಕರೆದು ನಿರ್ದೇಶನ ಮಾಡಲು ಕೋಮಲ್ ಅವಕಾಶ ಕೊಟ್ಟಿದ್ದಾರೆ. ಹಿನ್ನಲೆ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್.ಚಿತ್ರವು ನನಗೆ ವೇದಿಕೆ ಎಂದು ನಾಯಕನ ಗುಣವನ್ನು ಹೊಗಳಿದರು ಮುರಳಿ.ಕೋಮಲ್ ನಟನೆಯನ್ನು ಮೋಹನ್ಲಾಲ್ಗೆ ಹೋಲಿಸಿದ್ದು ಸಂಗೀತ ನಿರ್ದೇಶಕ ಫರಾನ್ರೋಶನ್. ತಮಿಳಿನಲ್ಲ್ಲಿ ನಟಿಸಿದ ಪಾತ್ರವನ್ನು ಕನ್ನಡದಲ್ಲಿ ಮಾಡಿರುವ ನಳಿನಿಕಾಂತ್ ಚಿತ್ರವು ಖಂಡಿತ ಹಿಟ್ ಆಗುತ್ತದೆ ಎಂಬ ಭವಿಷ್ಯವಾಣಿ ಅವರದು. ಕನ್ನಡ ಚಿತ್ರರಂಗದಲ್ಲಿ ಭೂತಾತ್ಮ ಕ್ರಾಂತಿ ಆಗುತ್ತದೆ ಅಂತಾರೆ ನಾಯಕಿ ಐಶ್ವರ್ಯ. ಕ್ಲೈಮಾಕ್ಸ್ನಲ್ಲಿ ಕಾಣುವ ನಟಿ ಅನೇಶ್ವರ ನನ್ನ ಪಾತ್ರ ದೆವ್ವ ಎಂದರು. ನಾಲ್ಕು ಹಾಡುಗಳನ್ನು ರಚಿಸಿದ ಬಗ್ಗೆ ವಿವರ ಬಿಚ್ಚಿಟ್ಟರು ಸಾಹಿತಿ ಹೃದಯಶಿವ. ವಿನಾಯಕಜೋಷಿ ತಮ್ಮ ಪಾತ್ರದ ಬಗ್ಗೆ ಮಾತು ಹಂಚಿಕೊಂಡರು. ಎಲ್ಲರ ನಂತರ ಮಾತಿಗಿಳಿದ ಕೋಮಲ್ ಒಂದು ಸೀನಿನಲ್ಲಿ ಅಭಿನಯಿಸುವಾಗ ನನಗೆ ಗೊತ್ತಿಲ್ಲದಂತೆ ನಗು ಬಂತು. ಮೇನಕಾದಲ್ಲಿ ನಮ್ಮ ಚಿತ್ರ ಬಿಡುಗಡೆ ಮಾಢಬೇಕೆಂದು ಯೋಜನೆ ಹಾಕಿಕೊಂಡಿದ್ದೇವು. ವಾಸ್ತು ಸರಿಯಿಲ್ಲದ ಕಾರಣ ಹಿಂದಕ್ಕೆ ಸರಿಯಬೇಕಾಯಿತು. ಅಲ್ಲದೆ ತೂಗದೀಪ ಹಂಚಿಕೆಯವರು ಚಿತ್ರಮಂದಿರವನ್ನು ಬಿಟ್ಟುಕೊಡಲು ಕೋರಿಕೊಂಡರು. ಅದೇ ರೀತಿ ಅಂಬರೀಷ ಚಿತ್ರದಲ್ಲಿ ಟ್ರೈಲರ್ ಹಾಕಲು ದರ್ಶನ್ ಅವಕಾಶ ಮಾಡಿಕೊಟ್ಟಿದ್ದರಿಮದ ಪ್ರಚಾರ ಹೆಚ್ಚಾಗಿ ಬೇಡಿಕೆ ಬಂದಿದೆ. ತ್ರಿಭುವನ್ ಚಿತ್ರಮಂದಿರ ಮುಂಬಾಗದಲ್ಲಿ ಕಲಾನಿರ್ದೇಶಕ ಮೋಹನ್.ಬಿ.ಕರೆ ಚಿತ್ರದ ಗಮನ ಸೆಳೆಯಲು ಸೆಟ್ ಹಾಕುತ್ತಿದ್ದಾರೆ.ಸ್ಯಾಟಲೈಟ್ ಹಕ್ಕುಗಳನ್ನು ಯಾರಿಗೂ ಕೊಟ್ಟಿಲ್ಲ. ನನ್ನ ಕ್ಯಾರಿಯರ್ನಲ್ಲಿ ಅದ್ಬುತ ಸಿನಿಮಾ ಅಂತ ಘಂಟಾಘೋಷವಾಗಿ ಹೇಳಬಲ್ಲೆ. ತುಂಬ ನೊಂದಿದ್ದೀನಿ. ಮಾದ್ಯಮದವರು ಸಹಕಾರ ನೀಡಬೇಕೆಂದು ಅಲವತ್ತು ಮಾಡಿಕೊಂಡಾಗ ಅವರು ದುಗಡದಲ್ಲಿ ಇರುವುದು ಎದ್ದು ಕಾಣುತ್ತಿತ್ತು.ಸುಮಾರು ನೂರ ಇಪ್ಪತ್ತು ಕೇಂದ್ರದಲ್ಲಿ ಶುಕ್ರವಾರದಂದು ಬಿಡುಗಡೆಯಾಗಲಿದೆ.
2014-11-26
- Bahaddur success story
ಬಹದ್ದೂರ್ ಗೆದ್ದ ಕತೆ
ಬಹದ್ದೂರ್ ಸಿನಿಮಾ ಸ್ಥಗಿತವಾದಾಗ ಕೊಡೆಯಂತೆ ಆಸರೆಯಾಗಿದ್ದು ನಿರ್ಮಾಪಕರಾದ ಆರ್.ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್. ಅಂದುಕೊಂಡಂತೆ ತಡವಾಗಿ ಬಿಡುಗಡೆಯಾದರೂ ಪ್ರೇಕ್ಷಕರು ಚಿತ್ರವನ್ನು ಅಪ್ಪಿಕೊಂಡಿದ್ದರಿಂದ ಅವ್ಯಾಹತವಾಗಿ ಐವತ್ತು ದಿನಗಳ ಯಶಸ್ವಿ ಪ್ರದರ್ಶನಗೊಂಡು ಮುಂದುವರೆಯುತ್ತಿದೆ. ಚೂಚ್ಚಲಬಾರಿ ನಿರ್ದೇಶನ ಮಾಡಿರುವ ಚೇತನ್ಕುಮಾರ್ಗೆ ಒಂದು ವರ್ಗದ ಜನ ಇಷ್ಟಪಡುತ್ತಾರೆ ಎಂದುಕೊಂಡಿದ್ದರಂತೆ. ಆದರೆ ಎಲ್ಲಾ ವರ್ಗದವರು ಚಿತ್ರವನ್ನು ವೀಕ್ಷಿಸಿದ್ದರಿಂದ ಬಹದ್ದೂರ್ ಎಲ್ಲರ ಮನಸ್ಸಿನಲ್ಲಿ ಉಳಿದುಕೊಂಡ.ಶೇಕಡ ನೂರರಂತೆ ಇಪ್ಪತ್ತೈದು ಕೇಂದ್ರಗಳಲ್ಲಿ ನೂರು ದಿನ ಪ್ರಧರ್ಶನಗೊಳ್ಳುವುದು ಗ್ಯಾರಂಟಿ ಎಂಬ ಆತ್ಮವಿಶ್ವಾಸದಲ್ಲಿ ಇದ್ದಾರೆ. ಚಿತ್ರದ ಯಶಸ್ಸನ್ನು ತಾಂತ್ರಿಕವರ್ಗದವರಿಗೆ ಅರ್ಪಿಸಿದ ಧ್ರುವಸರ್ಜಾ ನಿಂತುಹೋದ ಸಿನಿಮಾಕ್ಕೆ ಜೀವ ಕೊಟ್ಟವರಿಗೆ ಕೃತಜ್ಘತೆಯನ್ನು ಸಲ್ಲಿಸಿದರು. ಖಳನಟ ಉದಯ್ ಸಂತೋಷದಲ್ಲಿ ತಾನು ಭಾಗಿಯಾಗಿದ್ದೇನೆ ಅಂತಾರೆ.ನಿರ್ದೇಶಕರ ಅದ್ಬುತ ಕೆಲಸ, ನಾಯಕನ ಶ್ರಮ ಚಿತ್ರದ ಯಶಸ್ಸಿಗೆ ಕಾರಣ ಎಂಬುದು ಶ್ರೀನಿವಾಸ್ ಸಂತಸದ ನುಡಿ. ನೂರು ದಿನದ ಟ್ರೋಫಿಗೆ ಕಾಯುತ್ತಾ ಇದ್ದೀನಿ ಎಂಬ ಮಾತು ಕೇಳಿ ಬಂದಿದ್ದು ಛಾಯಗ್ರಾಹಕ ಶ್ರೀಷಾರಿಂದ. ನೃತ್ಯ ನಿರ್ದೇಶಕ ಹರ್ಷ, ಸಾಹಸ ನಿರ್ದೇಶಕ ರವಿವರ್ಮಾ ರವರ ಸಹಕಾರವನ್ನು ನಿರ್ದೇಶಕರು ನೆನಪು ಮಾಡಿಕೊಂಡರು.ರಾಧಿಕಾಪಂಡಿತ್ ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ಕಾರಣ ಸಂತೋಷಕೂಟದಲ್ಲಿ ಭಾಗಿಯಾಗಿರಲಿಲ್ಲ.
2014-11-26
- Sri Murali's makeup man Mani turns to be a Actor
ಶ್ರೀ ಮುರಳಿ ಅವರಿಗೆ ಮೇಕಪ್ ಮಾಡುತ್ತಿದ್ದಾ ಮೇಕಪ್ ಮ್ಯಾನ್ ಈಗ ಮೇಕಪ್ ಮಾಡಿಸಿಕೊಳ್ಳಲು ರೆಡಿಯಾಗಿದ್ದಾರೆ.
ಈ ರೀತಿ ತೆರೆ ಹಿಂದಿರೋರು ತೆರೆ ಮುಂದೆ ಬಂದು ನಟಿಸುತ್ತಿರೋ ವಿಚಾರ ಹೊಸದ್ದೇನು ಅಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ತೆರೆ ಮುಂದೆ ಬರೋ ಮೊದಲು ಲೈಟ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನಾಗೇಂದ್ರ ಅರಸ್ ಸಹ ಸಂಕಲನ ಕಾರಾಗಿ ಕಾರ್ಯ ನಿರ್ವಹಿಸುತ್ತಿದು ನಂತರ ನವಗ್ರಹ ಮುಖೇನ ನಟನೆಯಲ್ಲೂ ಸೈ ಅನ್ನಿಸಿಕೊಂಡರು. ಹೀಗೆ ಹೇಳುತ್ತಾ ಹೋದ್ರೆ ಸಾಧು ಕೋಕಿಲ, ಶಿವಮಣಿ ಇನ್ನು ಬಹಳಷ್ಟು ಕಲಾವಿದರು ಪಟ್ಟಿಯೇ ಇದೆ. ವೆಲ್, ಏನೇ ಇರಲಿ ಇಷ್ಟು ದಿನ ನಮ್ಮ ನಾಯಕ ನಾಯಕಿಯರನ್ನು ಚೆನ್ನಾಗಿ ತೋರಿಸಲು ಬಣ್ಣ ಹಚ್ಚುತಿದ್ದ ಮಣಿ ಈಗ ಬಣ್ಣ ಹಚ್ಚಿಸಿ ಕೊಳಲು ತಯಾರಾಗಿರುವುದು ನಿಜಕ್ಕೂ ಒಳ್ಳೆ ವಿಷಯ. ಮಣಿ ಅವರಿಗೆ ನಮ್ಮ Filmysphere ತಂಡದ ವತಿಯಿಂದ ಆಲ್ ದಿ ಬೆಸ್ಟ್ .
2014-11-25
- Marayalare Shooting
ಜನರಿಂದ ನಿರ್ಮಾಣವಾಗುತ್ತಿರುವ ಮತ್ತೊಂದು ಚಿತ್ರ
ಸೃಜನಶೀಲ ನಿರ್ದೇಶಕ ಪವನ್ಕುಮಾರ್ ಕಥೆ, ನಿರ್ದೇಶನದಲ್ಲಿ ತೆರೆಕಂಡು ಸಾಧಾರಣ ಹಿಟ್ ಎನಿಸಿಕೊಂಡ ‘ಲೂಸಿಯಾ’ ಚಿತ್ರವನ್ನು ನಿರ್ಮಾಣ ಮಾಡಿದ್ದು ಸಿನಿಮಾಸಕ್ತರು. ಇದರಿಂದ ಉತ್ತೇಜಿತರಾದ ಶರತ್ಖಾದ್ರಿ ಲೂಸಿಯಾ ಮಾದರಿಯಂತೆ ‘ಮರೆಯಲಾರೆ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಹಂತದಲ್ಲಿ ಮಧ್ಯಪ್ರದೇಶದ ಪಚ್ಮಡಿಯಲ್ಲಿ ನೂರಮೂವತ್ತು ವರ್ಷದ ಹಳೆಯದಾದ ಚರ್ಚ್ನಲ್ಲಿ ಆರು ದಿವಸದ ಚಿತ್ರೀಕರಣ ಮುಗಿಸಿ ಸದ್ಯ ಬೆಂಗಳೂರಿನಲ್ಲಿ ಎರಡನೆ ಹಂತದ ಚಿತ್ರೀಕರಣವನ್ನು ಮಾಗಡಿರಸ್ತೆಯ ಕಚೇರಿಯಲ್ಲಿ ನಡೆಸುತ್ತಿದ್ದಾರೆ. ಸಾಂಪತ್ರ ಯುವಕರು ಆಸೆ ಆಕಾಂಕ್ಷೆಗಳಿಗೆ ಮಾರುಹೋಗಿ ಚಿಕ್ಕ ದಾರಿಯನ್ನು ಹಿಡಿದುಕೊಂಡಾಗ ಏನೇನು ಅವಾಂತರಗಳು ಆಗುತ್ತದೆ ಎಂಬುದನ್ನು ತೋರಿಸುವುದರ ಜೊತೆಗೆ ಒಂದು ನವಿರಾದ ಪ್ರೀತಿ ಕತೆಯನ್ನು ಸೇರಿಸಿದ್ದಾರೆ. ಚಿತ್ರಕತೆಯನ್ನು ಇಂದಿನ ಯುವ ಜನಾಂಗಕ್ಕೆ ಸರಿಹೊಂದುವಂತೆ ಸಿದ್ದಪಡಿಸಿರುವುದು ವಿಶೇಷವಾಗಿದೆ. ಧಾರವಾಹಿಯಲ್ಲಿ ನಟಿಸಿದ ಅನುಭವವಿರುವ ತಾಂಡವ್ ನಾಯಕ. ಕೊಡಗು ಮೂಲಕ ಪವಿತ್ರಬೆಳ್ಳಿಯಪ್ಪ ನಾಯಕಿ. ಇಬ್ಬರಿಗೂ ಆರು ಶೇಡ್ಗಳು ಇರಲಿದ್ದು, ಪಾತ್ರದಲ್ಲಿ ಸಾಕಷ್ಟು ತಿರುವುಗಳು ಇದೆಯಂತೆ. ಕಂಪನಿ ಮಾಲೀಕ ಅಲ್ಲದೆ ರಾಜ್ಕುಮಾರ್, ವಿಷ್ಣುವರ್ಧನ್, ಶಂಕರ್ನಾಗ್ ಅಭಿಮಾನಿಯಾಗಿ ಕಾಣಿಸಿಕೊಂಡಿರುವ ಮಿತ್ರ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಸ್ಯನಟನಾಗಿ ಗುಣಶೇಖರ್. ನಾಲ್ಕು ಹಾಡುಗಳಿಗೆ ಅರ್ಜುನ್ಜನ್ಯಾ ಸಂಗೀತ ಸಂಯೋಜನೆ ಇದೆ.
2014-11-25
- Banaadi Press Meet
ಬಾನಾಡಿ ಲೇಖನ ಸ್ಪರ್ಧೆ
ಮಕ್ಕಳ ಚಿತ್ರ ‘ಬಾನಾಡಿ’ ತೆರೆಗೆ ಬರಲು ಸನ್ನಿಹಿತವಾಗಿದೆ. ಮಕ್ಕಳು ತಂದೆ ತಾಯಿಗೆ ಯಾವ ರೀತಿ ಇರಬೇಕು, ತಂದೆ ತಾಯಿ ಮಕ್ಕಳನ್ನು ಯಾವ ರೀತಿ ಪೋಷಿಸಬೇಕು ಎಂಬ ಕಥಾ ಹಂದರ ಮತ್ತು ಶಿಕ್ಷಣ ವ್ಯವಸಾಯ ಬಗ್ಗೆ ಕ್ಷಕಿರಣ ಮೂಡಿಸುವ ಚಿತ್ರವಾಗಿದೆ. ಸಾಂಪ್ರತ ಮಕ್ಕಳು ಕನ್ನಡ ಭಾಷೆಯನ್ನು ಓದಲು, ಬರೆಯಲು ಪ್ರಯತ್ನ ಮಾಡುವುದಿಲ್ಲ. ಇದಕ್ಕೆಂದೆ ತಂಡವು ಚಿತ್ರದ ಪ್ರಚಾರ ಹಾಗೂ ಮಕ್ಕಳಿಗೆ ಕನ್ನಡ ಭಾಷೆ ಅರಿವು ಮೂಡಿಸುವ ಸಲುವಾಗಿ ಲೇಖನ ಸ್ಪರ್ಧೆಯನ್ನು ಏರ್ಪಾಟು ಮಾಡಿದ್ದಾರೆ. ಚಿತ್ರ ವೀಕ್ಷಿಸಿದ ಮಕ್ಕಳು ‘ರಾಜ್ಯ ರಾಷ್ಟ್ರದ ಅಭಿವೃದ್ದಿಯಲ್ಲಿ ಮಕ್ಕಳ ಪಾತ್ರವೇನು? ಏಕೆ? ಹೇಗೆ?’ ಎಂಬುದರೆ ಬಗ್ಗೆ ನಾಲ್ಕು ಪುಟಗಳಿಗೆ ಮೀರದಂತೆ ಮಕ್ಕಳ ಕೈಬರಹದಿಂದಲೇ ಲೇಖನ ಬರೆದು ಕಳುಹಿಸಬೇಕು. ಪೋಷಕರು ಲೇಖನವನ್ನು ಮಕ್ಕಳಿಂದಲೇ ಬರೆಸಬೇಕು ಎಂಬ ನಿಯಮವಿದೆ. ಆಯ್ಕೆಯಾದ ಉತ್ತಮ ಬರವಣಿಗೆಗೆ ಒಂದು ಲಕ್ಷಗಳನ್ನು ಮುಂದಿನ ವಿದ್ಯಾಭ್ಯಾಸದ ಸಲುವಾಗಿ ನೀಡಲಾಗುವುದು. ಇನ್ನಿತರ ಒಂಬತ್ತು ಉತ್ತಮ ಬರಹಗಳಿಗೆ ಸಮಾಧಾನಕರ ಮೊತ್ತದ ಬಹುಮಾನ ಸೇರಿದೆ. ಹೆಚ್ಚಿನ ವಿವರಗಳಿಗಾಗಿ www.baanaadi.in; www.nagarajkote.com ವೆಬ್ಸೈಟನ್ನು ನೋಡಬಹುದು. ಲೇಖನಗಳನ್ನು ಧೃತಿ ಸಮೂಹ ಸಂಸ್ಥೆಗಳು, 117/19, 22 ಮತ್ತು 23, ಕಾವೇರಿನಗರ ಮುಖ್ಯ ರಸ್ತೆ, ಕತ್ತರಿಗುಪ್ಪೆ, ಬನಶಂಕರಿ ಮೂರನೆ ಹಂತ, ಬೆಂಗಳೂರು-560085 ವಿಳಾಸಕ್ಕೆ ಕಳುಹಿಸತಕ್ಕದ್ದು. ಮುಖ್ಯ ಪಾತ್ರದಲ್ಲಿ ಪ್ರಫುಲ್ ಉಳಿದ ತಾರಬಳಗದಲ್ಲಿ ದತ್ತಾತ್ತೆಯ, ಅಭಿನಯ, ಹೇಮಾಶ್ರೀ, ರಾಜೇಶ್ ನಟಿಸಿದ್ದಾರೆ. ಕಥೆ, ಚಿತ್ರಕತೆ,ಸಂಭಾಷಣೆ ಹಾಗೂ ನಿರ್ದೇಶನದ ಪಾರುಪಥ್ಯವಹಿಸಿಕೊಂಡಿರುವ ನಾಗರಾಜಕೋಟೆರವರ ಚಿತ್ರವು ಡಿಸೆಂಬರ್ ಐದರಂದು ಬಿಡುಗಡೆಯಾಗಲಿದೆ. ಒಂದು ಕೋಟಿ ಖರ್ಚು ಮಾಡಿರುವ ನಾಗರಾಜು ರವರಿಗೆ ಸಿನಿಮಾ ಕೃಷಿ ಹೊಸ ಪ್ರಯತ್ನ.
2014-11-25
- Ka Film Press Meet
ಕೊಕನಕ ಮಕನಕ
‘ಕ’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ,ನಿರ್ಮಾಪಕ ಸಾಯಿ ಮತ್ತು ಅವರ ತಂಡವನ್ನು ಛಾಯಗ್ರಾಹಕರು ಚಿತ್ರದ ಶೀರ್ಷಿಕೆಯನ್ನು ಹಲವು ಬಾರಿ ಹೇಳಿಸಿ ಸುಸ್ತು ಮಾಡಿಸಿದ್ದರು. ಚಿತ್ರದ ತುಣುಕುಗಳನ್ನು ತೋರಿಸಲು ಹೋದಾಗ ಅದು ಕೈಕೊಟ್ಟಿತ್ತು. ಕೊನೆಗೆ ಮೈಕ್ ತೆಗೆದುಕೊಂಡ ಸಾಯಿಗೆ ಅಲ್ಲೂ ಅಡಚಣೆ ಬಂತು. ಇಂತಹುದೆ ಹಲವು ಬವಣೆಗಳನ್ನು ಎದುರಿಸಿ ಚಿತ್ರವನ್ನು ಮುಗಿಸಿದ್ದೇನೆ ಅಂತ ಖೇದದಿಂದ ಹೇಳಿಕೊಂಡ ನಿರ್ದೇಶಕರು ಚಿತ್ರದ ಕುರಿತು ಹೇಳುತ್ತಾ ಹೋದರು. ಪ್ರೇಮಿಗಳ ದಿನದಂದು ಬೆಳಿಗ್ಗೆಯಿಂದ ರಾತ್ರಿವರೆಗೆ ನಡೆಯುವ ಕತೆಯಲ್ಲಿ ಯುವಕರು ತಮ್ಮ ಪ್ರೇಮವನ್ನು ಹೇಳಲು ಯಾವ ರೀತಿ ಪರಿತಪಿಸುತ್ತಾರೆ. ಇದರಲ್ಲಿ ಯುವಕರು, ಮಧ್ಯವಯಸ್ಕರು, ಹಿರಿಯರು ಸಹ ಪಾಲ್ಗೋಂಡಿದ್ದಾರೆ. ಇದನ್ನು ಭಿನ್ನವಾಗಿ ಎಲ್ಲರಿಗೂ ಅರ್ಥವಾಗುವಂತೆ ತೋರಿಸಿದ್ದೇನೆ ಎಂಬುದು ಅವರ ಒಕ್ಕಣೆ. ಪ್ರದರ್ಶನಗಳನ್ನು ನಡೆಸಲಾಗಿದೆ. ಡಿಸೆಂಬರ್ನಲ್ಲಿ ಚಿತ್ರೀಕರಣ ಶುರುಮಾಡಿ ಹಾಢುಗಳನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಮೂವತ್ತೆರಡು ಹೊಸ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕ ಅಕ್ಷರವನ್ನು ಏತಕ್ಕಾಗಿ ಇಡಲಾಗಿದೆ ಎಂಬುದು ಕ್ಲೈಮಾಕ್ಸ್ನಲ್ಲಿ ಗೊತ್ತಾಗಲಿದೆ. ಶ್ರೀ ಸಂಕಲನ, ಗಣೇಶ್ ಸಂಗೀತ ನಿರ್ದೇಶಕ ಮತ್ತು ಡಿಸೈನರ್ ಆಗಿದ್ದ ಸಾಯಿಗೆ ನಿರ್ದೇಶನ ಮೊದಲ ಪ್ರಯತ್ನ. ಮಗನ ಪಸೆಗೆ ನಿರ್ದೇಶಕ ಸಾಯಿಪ್ರಕಾಶ್ ಹಣ ಹೊಂದಿಸಿಕೊಟ್ಟಿದ್ದಾರೆ. ಡಿಸೆಂಬರ್ ಐದರಂದು ಚಿತ್ರವು ಬಿಡುಗಡೆಯಾಗಲಿದೆ.
2014-11-25
- Ravishankar Birthday
ಡಬ್ಬಿಂಗ್ ಕುಟುಂಬ
ಅಪ್ಪ ಪಿ.ಜೆ.ಶರ್ಮ, ತಾಯಿ ಕೃಷ್ಣಜ್ಯೋತಿ ತೆಲುಗಿನಲ್ಲಿ ಹೆಸರಾಂತ ಕಂಠದಾನ ರಾಜ್ಕುಮಾರ್ ಚಿತ್ರಗಳು ಇವರದೆ ಕಂಠದಲ್ಲಿ ತೆಲುಗು ಭಾಷೆಯಲ್ಲಿ ತೆರೆಕಾಣುತ್ತಿದ್ದವು. ಮಕ್ಕಳಾದ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪಶರ್ಮ ಡಬ್ಬಿಂಗ್ ಕೆಲಸದಲ್ಲಿ ಸೃಜನಶೀಲತೆಯನ್ನು ಉಳಿಸಿಕೊಂಡಿದ್ದಾರೆ. ಸದ್ಯ ಸಾಯಿಕುಮಾರ್ ಕನ್ನಡ ತೆಲುಗು ಚಿತ್ರಗಳ ನಟನೆಯಲ್ಲಿ ಬ್ಯುಸಿ. ತೆಲುಗಿನಲ್ಲಿ ನಟಿಸಿದ ಬಾಲಿವುಡ್ ವಿಲನ್ಗಳಿಗೆ ಅಬ್ಬರದ ಧ್ವನಿ ನೀಡುತ್ತಿರುವ ಹೆಮ್ಮೆ ಸಾಯಿಕುಮಾರ್ ಅವರದು. ಅಯ್ಯಪ್ಪಶರ್ಮ ನಿರ್ದೇಶಕ. ಮೂವತ್ತೋಂಬತ್ತು ವರ್ಷಗಳ ಹಿಂದೆ ಬಾಲನಟನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ರವಿಶಂಕರ್, ಎಂಬತ್ತಾರರಲ್ಲಿ ಮೂರು ತೆಲುಗು ಚಿತ್ರಗಳಿಗೆ ನಾಯಕನಾದರೂ ಅದೃಷ್ಟ ಕೈಕೊಟ್ಟಿದ್ದರಿಂದ ಮರಳಿ ಡಬ್ಬಿಂಗ್ ಕೆಲಸಕ್ಕೆ ಅನಿವಾರ್ಯವಾಗಿ ಹೋಗಬೇಕಾಯಿತು. ಆದರೂ ರವಿಶಂಕರ್ ಅಂತರಾಳದಲ್ಲಿ ನಟನೆ ಎಂಬ ದಾಹ ಕೊರಗುತ್ತಲೆ ಇತ್ತು. 2011ರಲ್ಲಿ ಸುದೀಪ್ ನಿರ್ದೇಶನ,ನಟನೆಯ ‘ಕಂಪೆಗೌಡ’ ಚಿತ್ರದಲ್ಲಿ ಆರ್ಮುಗಂ ಹೆಸರಿನ ಮುಖ್ಯ ಖಳನಾಯಕನಾಗಿ ನಟಿಸಿದ ನಂತರ ಮತ್ತೆ ಹಿಂದುರುಗಿ ನೋಡುವ ಪ್ರೇಮಯವೆ ಬರಲಿಲ್ಲ. ಕಾರಣ ಆ ಪಾತ್ರವು ಇವರಿಗೆ ಕನ್ನಡ ಚಿತ್ರರಂಗದಲ್ಲಿ ತಳಹೂರಲು ಅಡಿಪಾಯ ಹಾಕಿಕೊಟ್ಟಿತ್ತು . ನಂತರ ವರದನಾಯಕ, ಹುಚ್ಚುಹುಡಗ್ರು, ವಿಕ್ಟರಿ,ಅಧ್ಯಕ್ಷದಲ್ಲಿ ನಟಿಸಿ ತಮ್ಮದೆ ಛಾಪು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚಂದನವನವು ಬೆಳ್ಳಿ ತಟ್ಟೆಯಲ್ಲಿ ಅನ್ನ ನೀಡಿ ಗೌರವವನ್ನು ಕೊಟ್ಟಿದೆ. ಅದಕ್ಕಾಗಿ ಕನ್ನಡ ನನ್ನ ಉಸಿರು ಅಂತಾರೆ. ಡಬ್ಬಿಂಗ್ ಕಲಾವಿದ. ಆದರೂ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಡ ಎನ್ನುವುದು ಇವರ ತಹಬಂದಿವಾಗಿದೆ. ನಟನೆ ಜೊತೆಯಲ್ಲಿ ಬಿಡುವಿದ್ದಾಗ ರವಿಶಂಕರ್ ಸಂವೇದನೆಯಿಂದ ಎಂಟು ಕತೆಗಳು ಸಿದ್ದವಾಗಿದೆ. ಮುಂದಿನ ಎರಡು ವರ್ಷದಲ್ಲಿ ನಿರ್ದೇಶನ ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತಾ ಅದರಲ್ಲಿ ಒಂದು ಕತೆ ಮಗ ಅದ್ವೈತಶಂಕರ್ನನ್ನು ನಾಯಕನನ್ನಾಗಿ ಪರಿಚಿಸುವ ಇರಾದೆ ಇದೆಯಂತೆ. ಇತ್ತೀಚೆಗೆ ನಲವತ್ತ್ತೆಂಟನೆ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಮಾಧ್ಯಮದ ಎದುರು ಸರಳವಾಗಿ ಆಚರಿಸಿಕೊಂಡರು.
2014-11-25
- Bangalore 560023 Audio Release
ಗಲ್ಲಿ ಕ್ರಿಕೆಟ್
ಕಿರಾತಕದಲ್ಲಿ ಮಂಡ್ಯಾ ಭಾಷೆಯ ಸೊಗಡನ್ನು ತೋರಿಸಿದ ನಿರ್ದೇಶಕ ಪ್ರದೀಪ್ರಾಜ್ ಈ ಬಾರಿ ಎಲ್ಲರೂ ಇಷ್ಟಪಡುವ ಕ್ರಿಕೆಟ್ ವಿಷಯವನ್ನು ತೆಗೆದುಕೊಂಡು ‘ಬೆಂಗಳೂರು-23’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರು-23 ಇರುವುದು ಮಾಗಡಿರಸ್ತೆ ಪಕ್ಕದಲ್ಲಿರುವ ಚೋಳರಪಾಳ್ಯ. ಎರಡು ಸ್ಥಳೀಯ ಪ್ರದೇಶದ ಹುಡುಗರು ಗಲ್ಲಿ ಕ್ರಿಕೆಟ್ ಪಂದ್ಯವನ್ನು ಆಡುವಾಗ ಜಗಳಗಂಟತನ, ಇದರ ಮಧ್ಯೆ ಪ್ರೀತಿ,ತುಂಟಾಟ ಸನ್ನಿವೇಶಗಳು ಬರುತ್ತದೆ. ಸಿಸಿಎಲ್ ತಂಡದಲ್ಲಿದ್ದ ಜೆಕೆ,ಧ್ರುವ, ರಾಜೀವ್ ಇವರ ಜೊತೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಚಂದನ್ ಮತ್ತು ಹಾಸ್ಯ ನಟ ಚಿಕ್ಕಣ್ಣ ನಟಿಸಿದ್ದಾರೆ. ಜಿಕೆ ಜೋಡಿಯಾಗಿ ಶಿವಾನಿಗೆ ಚಿತ್ರರಂಗ ಅರಂಗ್ರೇಟಂ, ಸಂಜನಾ ಧ್ರುವಶರ್ಮಾಗೆ ಜೋಡಿ. ಚೊಚ್ಚಲ ಬಾರಿಗೆ ಅರುಣ್ ಒಂಬತ್ತು ಹಾಢುಗಳಿಗೆ ರಾಗ ಸಂಯೋಜಿಸಿದ್ದಾರೆ. ಇದರ ಪೈಕಿ ಮೂರು ಬಿಟ್ ಹಾಡುಗಳು ಸೇರಿಕೊಂಡಿದೆ. ಜ್ಘಾನಜ್ಯೋತಿ ಸಭಾಂಗಣದಲ್ಲಿ ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಆಗಮಿಸಿ ನಾನು ಪ್ರಾರಂಭದಲ್ಲಿದ್ದಾಗ ಹಿರಿಯರು ನನ್ನ ಚಿತ್ರಕ್ಕೆ ಶುಭ ಹಾರೈಸಿದ್ದರು. ಅದೇ ಕೆಲಸ ಈಗ ಮಾಡುತ್ತಿದ್ದೇನೆ. ಎಲ್ಲರಿಗೂ ಉತ್ತಮ ಅವಕಾಶಗಳು ದಕ್ಕುವಂತಾಗಲಿ ಎಂದರು. ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ ನಿರೂಫಕಿ ಅನುಶ್ರೀ ಪ್ರಶ್ನಗೆ ಉತ್ತರಿಸಿ ಎಲ್ಲರನ್ನು ನಗಿಸಿದರು. ತಡವಾಗಿ ಕಾರ್ಯಕ್ರಮಕ್ಕೆ ಹಾಜರಾದ ಯಶ್ ಚಿತ್ರಕ್ಕೆ ಒಳ್ಳೆಯದಾಗಲಿ ಎಂಬ ಮಾತು ಅವರದಾಗಿತ್ತು. ಗಾಯಕರಾದ ಟಿಪ್ಪು, ಶಮಿತಾಮಲ್ನಾಡ್ ಹಾಢುಗಳು ಎಲ್ಲರನ್ನು ಮನರಂಜಿಸಿದವು. ನಿರ್ಮಾಪಕ ಪುನೀತ್ ಮತ್ತು ಮನುಗೆ ನಿರ್ಮಾಣ ಮೊದಲ ಪ್ರಯತ್ನ. ಅಂದ ಹಾಗೆ ಚೆನ್ನೈ 23 ಚಿತ್ರದ ರಿಮೇಕ್ ಎಂಬುದನ್ನು ನಿಮ್ಮ ಗಮನಕ್ಕೆ ತರಲಾಗಿದೆ.
2014-11-23
- Love in Mandya is all set to hit the silver screen
ಬಿಡುಗಡೆಯಾಕ್ತಿದೆ ಲವ್ ಇನ್ ಮಂಡ್ಯಾ
‘ಲವ್ ಇನ್ ಮಂಡ್ಯಾ’ ಚಿತ್ರದಲ್ಲಿ ಒಪ್ಪಿಕೊಂಡ್ಬಿಟ್ಲು ಕಣ್ಲ ಪ್ರೀತಿ ಮಾಢೋಕೆ ಹಾಡು ಯುಟ್ಯೂಬ್ನಲ್ಲಿ ಒಂದು ಕಾಲು ಲಕ್ಷ ಜನ ವೀಕ್ಷಿಸಿದ್ದರಿಂದ ತಂಡವು ಖುಷಿಯಾಗಿದೆ. ಜಟ್ಟ, ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ತರಹನ ಭಿನ್ನ ರೀತಿಯ ಚಿತ್ರಗಳು ಯಶಸ್ವಿಯಾಗಿದ್ದರಿಂದ ನಿರ್ಮಾಪಕ ಉದಯ್ಮಹೆತಾ ಚಿತ್ರದ ಕತೆ ಹೊಸತಾಗಿದ್ದರಿಂದ ಸಾಹಿತಿ ಅರಸುಅಂತಾರೆಗೆ ನಿರ್ದೇಶನ ಮಾಡಲು ಅವಕಾಶ ನೀಡಿದ್ದಾರೆ. ಅದರಂತೆ ನಿರ್ದೇಶಕರು ಮೊದಲ ಪ್ರಯತ್ನದಲ್ಲೆ ಉತ್ತಮವಾಗಿ ತೆರೆಯ ಮೇಲೆ ತಂದಿದ್ದಾರಂತೆ. ಹಾಢುಗಳು ಹಿಟ್ ಆಗಿದ್ದರೂ ಅದರ ಯಶಸ್ಸು ಅರಸುಅಂತಾರೆಗೆ ಸಲ್ಲುತ್ತದೆ ಎನ್ನುವುದು ಸಂಗೀತ ನಿರ್ದೇಶಕ ಅನೂಪ್ಸೀಳನ್ ನುಡಿ. ಇದಕ್ಕೆ ತಕ್ಕಂತೆ ನೃತ್ಯ ನಿರ್ದೇಶಕ ಮುರಳಿ ನಾಯಕ ನಾಯಕಿಯರಿಂದ ಅದ್ಬುತವಾಗಿ ಡ್ಯಾನ್ಸ್ ಮಾಡಿಸಿದ್ದಾರೆ ಚಿತ್ರದಲ್ಲಿ ರೋಮಾನ್ಸ್, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್, ಫೈಟ್, ಭಾವನಾತ್ಮಕ ಸನ್ನಿವೇಶಗಳು ಹೇರಳವಾಗಿ ತುಂಬಿರುವುದರಿಂದ ಹಿಟ್ ಆಗುತ್ತದೆ ಎಂಬ ತಂಡದ ಆಶಾಭಾವನೆ. ಏಳು ಬೀಳುಗಳನ್ನು ಕಂಡಿರುವ ನೀನಾಸಂಸತೀಶ್ಗೆ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇಟ್ಟುಕೊಂಡು ಭಕಪಕ್ಷಿಯಂತೆ ಪ್ರೇಕ್ಷಕರ ಪ್ರತಿಕ್ರಿಯೆ ಕಾದುಕುಳಿತಿದ್ದಾರೆ. ಡ್ರಾಮದಲ್ಲಿ ಮೂಕಿಯಾಗಿದ್ದ ಸಿಂಧೂಲೋಕನಾಥ್ಗೆ ಇದರಲ್ಲಿ ಹೆಚ್ಚು ಮಾತನಾಡುವ ಅವಕಾಶ ದಕ್ಕಿದೆ. ಇಬ್ಬರ ಜೊತೆಯಲ್ಲಿ ಮಾಸ್ಟರ್ ಮಂಜುನಾಥ್ ಅಭಿನಯ ಚಿತ್ರಕ್ಕೆ ಹೈಲೈಟ್, ಅಲ್ಲದೆ ನಾಲ್ಕು ವಿಲನ್ಗಳು ಮಾತನಾಡದೆ ವಿಲಕ್ಷಣ ರೀತಿಯಲ್ಲಿ ಅಭಿನಯವನ್ನು ತೋರಿಸಿರುವುದು ವಿಶೇಷವಾಗಿದೆ. ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣಪತ್ರ ಪಡೆದುಕೊಂಡಿರುವ ಚಿತ್ರವು ಶುಕ್ರವಾರದಂದು ತೆರೆಗೆ ಬರಲಿದೆ.
2014-11-23
- Patharagitti_Film Press Meet
ಪಾತರಗಿತ್ತಿ ತಂಡದಿಂದ ವಿಲಕ್ಷಣ ಪ್ರಚಾರ
‘ಪಾತರಗಿತ್ತಿ’ ಚಿತ್ರದ ಹಾಢುಗಳು ಇತ್ತೀಚೆಗೆ ಬಿಡುಗಡೆಗೊಂಡು ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ಸಂತಸಗೊಂಡ ತಂಡವು ‘ಹುಚ್ಚರಿಗು ಹುಚ್ಚು ಹಿಡಿಸೋ ಅಂದವೆ ನಿನ್ನದು’ ಎನ್ನುವ ಹಾಢಿಗೆ ಡ್ಯಾನ್ಸ್ ಮಾಡಲು ಆಸಕ್ತಿ ಇರುವವರಿಗೆ ಸದವಕಾಶ ಕಲ್ಪಿಸಲು ಸ್ಪರ್ಧೆಯನ್ನು ಏರ್ಪಡಿಸಿದೆ. ಸಾಮಾನ್ಯ ವಸ್ತ್ರ ಧರಿಸಿ ನಾಲ್ಕು ನೃತ್ಯ ಪಟುಗಳ ಜೊತೆ ಹಾಢಿಗೆ ನೃತ್ಯ ಮಾಢಿ ಚಿತ್ರೀಕರಿಸಿದ್ದನ್ನು ಸಿಡಿಯಲ್ಲಿ ಕೊಡಬೇಕು. ಸ್ಪರ್ಧೆಯಲ್ಲಿ ಗೆದ್ದವರಿಗೆ ಇಂತಿಷ್ಟು ನಗದು ಬಹುಮಾನವನ್ನು ನೀಡುವ ಯೋಜನೆ ಹಾಕಿಕೊಂಡಿದೆ. ಇಲ್ಲಿಯವರೆವಿಗೂ ಸಾವಿರದ ಇನ್ನೂರು ಸಿಡಿಗಳು ಬಂದಿದೆ. ತಂಡವು ಹತ್ತು ಸಾವಿರ ಸಿಡಿ ಬರಬಹುದೆಂಬ ಅಪೇಕ್ಷೆಯಲ್ಲಿದ್ದಾರೆ. ಪ್ರತಿಭೆಗಳನ್ನು ಗುರುತಿಸಲು ಮೂರು ತಂಡಗಳಾಗಿ ವಿಂಗಡಣೆ ಮಾಡಿಕೊಂಡಿದ್ದಾರೆ. ತಂಡವು ಪ್ರತಿಯೊಂದು ಸಿಡಿಯನ್ನು ಪರಿಶೀಲಿಸಿ ಅದರಲ್ಲಿ ನೂರು ಪ್ರತಿಭೆಗಳನ್ನು ಆಯ್ಕೆಮಾಡಿ ಅಂತಿಮವಾಗಿ ಚಿತ್ರದ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ ಮದನ್ಹರಿಣಿಗೆ ಕೊಡಲಾಗುತ್ತದೆ. ಅವರು ಮೂರು ಜನರನ್ನು ಆಯ್ಕೆ ಮಾಡುವ ಕೆಲಸ ಅವರದಾಗಿದೆ. ಅಲ್ಲದೆ ಗೆದ್ದವರಿಗೆ ಮುಂದಿನ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ದೊರಕಲಿದೆ. ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಸಲಿದ್ದು ಜನವರಿ ಮೊದಲನೆ ವಾರದಲ್ಲಿ ಬಿಡುಗಡೆ ಯಾಗಲಿದೆ. ಅಂದೆ ಬಹುಮಾನವನ್ನು ನೀಡಲಾಗುವುದು. ನಿರ್ದೇಶಕ,ನಿರ್ಮಾಪಕ ಈಶ್ವರ್ ಸಾರಥ್ಯದಲ್ಲಿ ನಾಯಕ ಶ್ರೀಕಿ, ನಾಯಕಿ ಪ್ರಜ್ವಲ್ಪೂವಯ್ಯ, ಶಕೀಲ. ತಬಲನಾಣಿ ನಟಿಸಿದ್ದಾರೆ.
2014-11-22
- Huccha Venkat Press Meet
ಹುಚ್ಚ ವೆಂಕಟ್ ಹಾಜರ್
ಅಂದು ಕೊಂಡಂತೆ ‘ಹುಚ್ಚ ವೆಂಕಟ್’ ಚಿತ್ರವು ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದಲ್ಲಿ ರೌಡಿಸಂ ಇದ್ದರೂ ಪ್ರೀತಿ, ಫ್ಯಾಮಲಿ ಸೆಂಟಿಮೆಂಟ್ ಹೇರಳವಾಗಿದೆ.ರೌಡಿಸಂಗೆ ಹೋದರೆ ಏನಾಗುತ್ತದೆ ಅಂತ ಕ್ಲೈಮಾಕ್ಸ್ನಲ್ಲಿ ಸಂದೇಶದ ಮೂಲಕ ಹೇಳಲಾಗುತ್ತದೆ. ಹಿರಿಯ ನಟಿ ಜಯಲಕ್ಷೀ ನಾಯಕನ ತಾಯಿ, ಅದೇ ರೀತಿ ಸುದರ್ಶನ್ ಮತ್ತು ಶೈಲ ನಾಯಕಿಯ ತಂದೆ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲೇಜು ಪ್ರೋಫೆಸರ್ ಆಗಿ ಕಾಣಿಸಿಕೊಂಡಿರುವ ರಮೇಶ್ಭಟ್, ಸಣ್ಣ ಪಾತ್ರದಲ್ಲಿ ಅಭಿನಯಿಸಿರುವ ಉಮೇಶ್ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರಂತೆ. ನಾಯಕ, ನಾಯಕಿ ಹಾಗೂ ತಂದೆ ಪಾತ್ರವನ್ನು ಸಿನಿಮಾ ಮುಗಿಯುವವರೆಗೂ ಕಾಡುತ್ತದೆ. ತಂದೆ ತಾಯಿ ಬಿಟ್ಟು ಪ್ರೀತಿಸಿದವ ಜೊತೆಗೆ ಹೋದರೆ ಎಂತಹ ಅನಾಹುತವಾಗುತ್ತದೆ ಎಂಬುದನ್ನು ತೋರಿಸಿದ್ದಾರಂತೆ. ಯಾರೂ ಊಹೆ ಮಾಢಿದ ರೀತಿಯಲ್ಲಿ ಕ್ಲೈಮಾಕ್ಸ್ನ್ನು ವಿಭಿನ್ನ ರೀತಿಯಲ್ಲಿ ಚಿತ್ರೀಕರಿಸಿದ್ದು, ಇದನ್ನು ನೋಡುವಾಗ ಕಣ್ಣೀರು ಬರುವುದು ಖಾತ್ರಿ ಅಂತಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಾಯಕ ಹುಚ್ಚುವೆಂಕಟ್ ರಮ್ಯಾ ಅಭಿಮಾನಿಯಾಗಿರುವ ಕಾರಣ ನಾಯಕಿಯ ಪಾತ್ರದ ಹೆಸರು ರಮ್ಯಾ ಇದೆ. ಕವಿತಾಗೆ ಚೂಚ್ಚಲ ಚಿತ್ರ. ಐದು ಹಾಡುಗಳಿಗೆ ರಾಜೇಶ್ರಾಮನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಗನ ಪಸೆಗೆ ವೆಂಕಟ್ರಾಮ್.ಎಲ್ ಹಣ ಸುರಿದಿದ್ದಾರೆ. ನವೆಂಬರ್ ಇಪ್ಪತ್ತೋಂಬತ್ತು ರಮ್ಯಾ ಹುಟ್ಟಿದಹಬ್ಬ. ಅವರಿಗೆ ಚಿತ್ರವನ್ನು ಅರ್ಪಿಸಲು ಇಪ್ಪತ್ತೆಂಟರಂದು ಸಿನಿಮಾ ಬಿಡುಗಡೆ ಆಗುತ್ತಿದೆ.
2014-11-22