From the earlier FilmySphere, kept as published on 2014-12-02. It has not been updated.
Ashiwini nakshatra team to shoot in Australia
ಆಸ್ಟ್ರೇಲಿಯಾದಲ್ಲಿ ಅಶ್ವಿನಿ ನಕ್ಷತ್ರ
ಈ ಟಿವಿ ನಲ್ಲಿ ಮೂಡಿಬರುತ್ತಿರುವ ‘ಅಶ್ವಿನಿ ನಕ್ಷತ್ರ’ ಎಲ್ಲರ ಮನೆಮಾತಾಗಿದೆ. ಇದರಿಂದ ಉತ್ತೇಜಿತಗೊಂಡಿರುವ ತಂಡವು ಕಿರುತೆರೆ ಇತಿಹಾಸದಲ್ಲೆ ಪ್ರಥಮ ಬಾರಿಗೆ ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ಮಾಡಿದ್ದಾರೆ. ಟೂರಿಸಂ ಆಸ್ಟ್ರೇಲಿಯಾ ಮತ್ತು ಟೂರಿಸಂ ಅಂಡ್ ಇವೆಂಟ್ ಕ್ವೀನ್ ಲ್ಯಾಂಡ್ ಟ್ರಾನ್ಸ್‍ಪೋರ್ಟ್ ಸಂಸ್ಥೆಗಳ ಸಹಯೋಗದೊಂದಿಗೆ ವಿಶೇಷ ಸಂಚಿಕೆಗಳನ್ನು ಏಳು ದಿನಗಳ ಕಾಲ ಆಕಾಶದಲ್ಲಿ ಹಾರಾಡುವ ಬಲೂನ್, ಪ್ರಸಿದ್ದ ಗೋಲ್ಡ್ ಕೋಸ್ಟ್ ಸಮುದ್ರತೀರ, ಡಾಲ್ಪಿನ್ ಜೊತೆಗೆ ಆಟ, ಪೆಂಗ್ವಿನ್ ನೊಟ, ಡ್ರೀಮ್ ವಲ್ರ್ಡ್ ಸುತ್ತಾಟ, ಕಾಂಗರೂ, ಕ್ವಾಲ ಅಲ್ಲದೆ ಸಮಯದ ಅಭಾವದಿಂದ ಬ್ರಿಸ್ಟೆನ್ ಗಬ್ಬಾ ಸ್ಟೇಡಿಯಂ ನಲ್ಲಿ ಯಶಸ್ವಿಯಾಗಿ ಒಂದು ವಾರ ಚಿತ್ರೀಕರಿಸಲಾಗಿದೆ. ನಾಯಕ ತನ್ನ ಮುದ್ದಿನ ಹೆಂಡತಿ ಆಶ್ವಿನಿಗೆ ಅಚ್ಚರಿ ನೀಡಬೇಕಂಬ ಉದ್ದೇಶದಿಂದ ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗುವ ಚಿತ್ರಕಥೆಗೆ ಪೂರಕವಾಗುವಂತೆ ಚಿತ್ರಿಸಿದ್ದಾರೆ.
ನಾಯಕ ಜಿಕೆ ಮತ್ತು ನಾಯಕಿಯಾಗಿ ಮಯೂರಿ ನಟಿಸಿದ್ದಾರೆ. ಗೋಷ್ಟಿಯಲ್ಲಿ ಬಿಸಿನೆಸ್ ಹೆಡ್ ಪರಮೇಶ್ವರಗುಂಡ್ಕಲ್ ಮಾತನಾಡಿ ಈಟಿವಿ ಯಾವಾಗಲೂ ವೀಕ್ಷಕರು ಆಸಕ್ತಿಯಿಂದ ನೋಡಬಯಸುವುದರಿಂದ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ್ತಿದೆ. ಇದನ್ನು ವೀಕ್ಷಕರು ಪ್ರೀತಿಯಿಂದ ಸ್ವೀಕರಿಸುತ್ತಿರುವುದು ಸಂತಸದ ಸಂಗತಿ ಎಂದರು. ಹಠಮಾರಿ, ಜಿದ್ದಿನ ಸೂಪರ್ ಸ್ಟಾರ್ ಜಿಕೆ ಮತ್ತು ಮೃದು ಸ್ವಭಾವದ ಮಧ್ಯಮವರ್ಗದ ಅಶ್ವಿನಿ ಇವರಿಬ್ಬರ ವಿರುದ್ದ ಸ್ವಭಾವದ ಜೋಡಿಯ ಪ್ರೇಮ ಕತೆ ಆಶ್ವಿನಿನಕ್ಷತ್ರ. ವಿದೇಶದಲ್ಲಿ ಚಿತ್ರೀಕರಿಸಲಾದ ಐದು ಕಂತುಗಳು ಡಿಸೆಂಬರ್ ಒಂದರಿಂದ ಪ್ರಸಾರವಾಗಲಿದೆ.