From the earlier FilmySphere, kept as published on 2014-12-04. It has not been updated.
Rudra Tandava Press Meet
ವಿಲನ್ ಟ್ರೈಲರ್ ಬಿಡುಗಡೆ
ನಾಯಕ,ನಾಯಕಿ ನಟಿಸಿದ ಚಿತ್ರದ ಟ್ರೈಲರ್ ಬಿಡುಗಡೆ ಮಾಢುವುದು ಸಹಜ. ರೇಣುಕಾಂಬ ಪ್ರಿವ್ಯೂ ಚಿತ್ರಮಂದಿರದಲ್ಲಿ ‘ರುದ್ರತಾಂಡವ’ ಚಿತ್ರದ ಟ್ರೈಲರ್ ಅನಾವರಣಗೊಂಡಿತು. ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿಶಂಕರ್ ಅಭಿನಯದ ತುಣುಕುಗಳನ್ನು ತೋರಿಸಲಾಯಿತು. ಪೋಸ್ಟರ್‍ನಲ್ಲಿ ವಿಲನ್ ಟ್ರೈಲರ್ ಬಿಡುಗಡೆ ಇರುವುದಕ್ಕೆ ನಿರ್ದೇಶಕ ಗುರುದೇಶಪಾಂಡೆ ವಿವರಣೆ ಕೊಡುತ್ತಾರೆ. ಮುಖ್ಯ ಪಾತ್ರಕ್ಕಿಂತ ವಿಲನ್‍ಗೆ ಫೋರ್ಸ್, ಮಾಸ್ ಹೀರೋ ತರಹ ಇದೆ. ಪ್ರಯತ್ನ ಎಂಬುವಂತೆ ವಿಲನ್ ಅಭಿನಯದ ಟ್ರೈಲರ್ ಬಿಡುಗಡೆ ಮಾಢಿದ್ದೇವೆ. ಇದು ಒಂಥರ ಚಿತ್ರದ ಆಹ್ವಾನ ಪತ್ರಿಕೆ ಇರುವ ಹಾಗೆ. ಅರವತ್ತೈದು ದಿವಸಗಳಲ್ಲಿ ಕೋಲಾರ,ಕೆಜಿಎಫ್, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ ಎಂಬುದು ಅವರ ಸ್ಪಷ್ಟನೆ. ಜಡೇಶ್,ಗುರುವೇಂದ್ರ ಜಂಟಿಯಾಗಿ ವಿಲಕ್ಷಣ ರೀತಿಯಲ್ಲಿ ಸಂಭಾಷಣೆ ಬರೆದಿದ್ದಾರೆ.
ತಮಿಳು ಪಾಂಡಿಯನಾಡು ಚಿತ್ರದಲ್ಲಿ ನಟಿಸಿದ್ದ ನಾಯಕ ವಿಶಾಲ್ ತಂದೆ ಜಿ.ಕೆ.ರೆಡ್ಡಿ ಕನ್ನಡದವರೆ ಆಗಿದ್ದರು. ಅವರಿಗೂ ನಟಿಸುವ ಪಸೆ ಇತ್ತಂತೆ. ಸರ್ಕಾರಿ ಕೆಲಸ ಸಿಕ್ಕಕಾರಣ ಚಿತ್ರರಂಗಕ್ಕೆ ಬೆನ್ನು ತೋರಿಸಿ ಆಸೆಯನ್ನು ಮಗನ ಮೂಲಕ ಈಢೇರಿಸಿಕೊಂಡಿದ್ದಾರೆ. ಮೂಲ ಚಿತ್ರಕ್ಕಿಂತ ರುದ್ರತಾಂಡವ ಚೆನ್ನಾಗಿ ಮೂಡಿಬಂದಿದೆ. ಕನ್ನಡದಲ್ಲಿ ಚಿತ್ರ ನಿರ್ಮಿಸುವ ವಾಂಚೆ ಇದೆ ಎಂದು ತಂಡಕ್ಕೆ ಶುಭ ಹಾರೈಸಿದರು. ಹುಟ್ಟುಹಬ್ಬದ ಖುಷಿಯಲ್ಲಿದ್ದ ರವಿಶಂಕರ್ ತನ್ನ ಪಾತ್ರದ ತುಣುಕುಗಳನ್ನು ಅನಾವರಣ ಮಾಡಿದ್ದಕ್ಕೆ ಖುಷಿಗೆ ಕಾರಣವಾಗಿತ್ತು. ಚಿರಂಜೀವಿಸರ್ಜಾ, ರಾಧಿಕಾಕುಮಾರಸ್ವಾಮಿ, ಮದರಂಗಿ ಕೃಷ್ಣ,ಚಿಕ್ಕಣ ನಟಿಸಿರುವ ಚಿತ್ರವು ಡಿಸೆಂಬರ್ ಮೊದಲವಾರಕ್ಕೆ ಮುಕ್ತಿ ಅರ್ಥಾತ್ ಬಿಡುಗಡೆ.