From the earlier FilmySphere, kept as published on 2014-12-05. It has not been updated.
Jackson Audio released
ಜಾಕ್ಸನ್ ಗೀತಮಾಧುರಿ
ಅಂದು ‘ಜಾಕ್ಸನ್’ ಚಿತ್ರದ ಸಿಡಿ ಅನಾವರಣ ಕಾರ್ಯಕ್ರಮ. ವೇದಿಕೆ ಮೇಲೆ ಕಂಡುಬಂದಿದ್ದು ಐದು ಕುರ್ಚಿಗಳು. ನಿರೂಪಕರ ಕೋರಿಕೆಯಂತೆ ಎರಡು ಡಜನ್ ಗಣ್ಯರು ಬಂದರು. ಇದನ್ನು ಅರಿಯದ ನಿರೂಪಕ ಎಲ್ಲರೂ ಆಸೀನರಾಗಬೇಕು ಎಂದು ಅಭಾಸ ಉಂಟು ಮಾಡಿದರು. ತಕ್ಷಣ ಕಾರ್ಯಪ್ರವೃತರಾದ ದುನಿಯಾ ವಿಜಯ್ ಹಾಗೆಯೇ ಎಲ್ಲರೂ ಮಾತನಾಡೋಣ ಅಂತ ಮೈಕನ್ನು ಯೋಗರಾಗಭಟ್ಟರ ಕೈಗೆ ಕೊಟ್ಟರು.ಭಟ್ಟರು ಇದನ್ನು ನೋಡಿದರೆ ಸಿಂಕೋಪಿ ತರಹ ಇದೆ. ಒಂದು ಹಾಡಿಗೆ ಸಾಹಿತ್ಯ ಬರೆದುದನ್ನು ವಿಜಯ್ ಈಗ ಅರ್ಥ ಮಾಡಿಕೊಂಡು ಪ್ರೀತಿಯಿಂದ ಜಗಳ ಮಾಡಿದ್ದಾರೆ.ಬೇಕಿದ್ದರೆ ಸರಿಮಾಡಿಕೊಡುವೆ ಎನ್ನುತ್ತಾ ವಿಜಯ್ ಗೆಳೆತನವನ್ನು ನೆನಪುಮಾಡಿಕೊಂಡು ಶುಭಹಾರೈಸಿದರು. ಭಟ್ಟರು ನನ್ನನ್ನು ನೋಡಿದಾಗ ಹುಷಾರಾಗಿ ಕೆಲಸ ಮಾಡು ಅಂತ ಹಾರೈಸಿದಂತೆ ಆಗಿತ್ತು ಎಂಬುದು ಸಂಕಲನಕಾರ,ನಿರ್ದೇಶಕ ಸನತ್‍ಕುಮಾರ್ ಉಕ್ತಿ.
ಭಟ್ಟರು ನನಗೆ ಗುರುಗಳು. ಅವರಿಂದಲೇ ನನಗೆ ಬದುಕಿನಲ್ಲಿ ತಿರುವು ಸಿಕ್ಕಿದ್ದು. ಅವರನ್ನು ಪ್ರೀತಿ ಮಾಢ್ತೀನಿ,ಬೈಯ್ತಿನಿ. ಜೀವನದಲ್ಲಿ ಜರ್ಜರಿತನಾಗಿದ್ದಾಗ ಗೆಳೆಯ ಹೆಗಲು ಕೊಟ್ಟು ಜಾಕ್ಸನ್ ನಿರ್ಮಾಣ ಮಾಡಿದ್ದಾರೆ. ಮುಂದಿನ ಚಿತ್ರ ಆರ್‍ಎಕ್ಸ್ ಸೂರಿ.ಇಪ್ಪತ್ತೈದನೆ ಚಿತ್ರ ಗವಿ ಯನ್ನು ರವಿಶ್ರೀವತ್ಸ ನಿರ್ದೇಶನ ಮಾಡಲಿದ್ದಾರೆ ಎಂದರು ವಿಜಯ್. ನಾಯಕಿ ವೃಂದಾ ತನ್ನ ಪಾತ್ರದ ಬಗ್ಗೆ ಹೇಳಿಕೊಳ್ಳದೆ ಹೆಚ್ಚು ಮಾತನಾಡಿದರು. ಸಾಂಪತ್ರ ಸ್ಟಾರ್ ಚಿತ್ರಗಳ ನಿರ್ಮಾಪಕರು, ನಿರ್ದೇಶಕರುಗಳು ಶುಭಹಾರೈಸಲು ಬಂದಿದ್ದರು. ಎರಡು ಗೀತೆಗೆ ಅರ್ಜುನ್‍ಜನ್ಯ, ಒಂದೊಂದು ಹಾಡಿಗೆ ವೀರ್‍ಸಮರ್ಥ್, ನವೀನ್‍ಸಜ್ಜು ಸಂಗೀತ ಒದಗಿಸಿದ್ದಾರೆ. ಸುಂದರ್.ಪಿ.ಗೌಡ್ರು ನಿರ್ಮಾಪಕರಾಗಿ ಮೋದಲ ಹೆಜ್ಜೆ. ಇದಕ್ಕೂ ಮುನ್ನ ಎರಡು ಟಪ್ಪಾಂಗುಚ್ಚಿ ಹಾಡುಗಳನ್ನು ತೋರಿಸಲಾಯಿತು.