From the earlier FilmySphere, kept as published on 2014-12-01. It has not been updated.
Stepny movie pressmeet
ಗಂಡ ಹೆಂಡತಿ ಮತ್ತು ಅವಳು
ಬಾಲಿವುಡ್‍ನಲ್ಲಿ ಅಂದಾನ್ ಸಾಜಿದ್ ಖಾನ್ ಹೆಸರು ಎಲ್ಲರಿಗೂ ಪರಿಚಿತ. ಇವರು ನಟಿಸಿದ ಎಫ್‍ಎಂ ಫನ್ ಔರ್ ಮಸ್ತಿ ಚಿತ್ರವು 2007ರಲ್ಲಿ ಬಿಡುಗಡೆಗೊಂಡು ಹಿಟ್ ಎನಿಸಿಕೊಂಡಿತ್ತು. ಈಗ ‘ಸ್ಟೆಪ್‍ನಿ’ ಎನ್ನುವ ಚಿತ್ರವನ್ನು ನಿರ್ಮಾಣದ ಜೊತೆಗೆ ನಾಯಕನಾಗಿ ನಟಿಸಿದ್ದಾರೆ. ಚಿತ್ರದ ಕುರಿತು ಹೇಳುವುದಾದರೆ ನಾಯಕ ಟ್ರಾವಲ್ ಏಜನ್ಸಿಯೊಂದನ್ನು ನಡೆಸುತ್ತಿದ್ದು ಮನೆಯಲ್ಲಿ ಹೆಂಡಳಿ ಕಿರುಕುಳ ತಾಳಲಾರದೆ ಕಷ್ಟವನ್ನು ಆಪ್ತಸಹಾಯಕಿ ಹತ್ತಿರ ತೋಡಿಕೊಳ್ಳುತ್ತಾನೆ.ಅವಳು ಬಾಸ್‍ಗೆ ಸಹಾಯವಾಗಲೆಂದು ವಿಧುವೆಯನ್ನು ಪರಿಚಯ ಮಾಡಿಕೊಡುತ್ತಾಳೆ. ಇಬ್ಬರ ಸ್ನೇಹ ಪ್ರೀತಿಗೆ ತಿರುಗುತ್ತದೆ.ಹೆಂಡತಿಗೆ ಗಂಡನ ಮೇಲೆ ಅನುಮಾನ ಬಂದು ಮುಂದೆ ಸಂಪೂರ್ಣ ತಿಳಿಹಾಸ್ಯದಲ್ಲಿ ಕತೆಯು ಸಾಗುತ್ತದೆ.
ಪ್ರೀತಿ ನಿಗಂ ನಾಯಕಿ, ಬಾಮೈದನ ಪಾತ್ರದಲ್ಲಿ ಅಜೀಜ್‍ನಸೀರ್ ಮತ್ತು ಸ್ಟೆಪ್‍ನಿಯಾಗಿ ಫರಾಖಾನ್ ಕಾಣಿಸಿಕೊಂಡಿದ್ದಾರೆ.ಸಂಭಾಷಣೆಗಳು ಹೈದರಾಬಾದ್ ಭಾಷೆಯಲ್ಲಿ ಮೂಡಿಬಂದಿದ್ದು,ಛಾಯಗ್ರಹಣ ಮುರಳಿಕೃಷ್ಣ, ಸಂಕಲನ ಎ.ವಿ.ಪ್ರಸಾದ್ ಇರುತ್ತದೆ. ಹಾಸ್ಯದ ಚಿತ್ರಕ್ಕೆ ಚಿತ್ರಕತೆ ಮತ್ತು ನಿರ್ದೇಶನ ಗಾದಿ ವಹಿಸಿಕೊಂಡವರು ಅಜೀಜ್‍ನಸೀರ್. ಚಿತ್ರವು ಸದ್ಯದಲ್ಲೆ ತೆರೆಕಾಣಲಿದೆ.