Skip to content
FilmySphere

From the earlier FilmySphere, kept as published on 2014-12-05. It has not been updated.

Bangalore International Film Festival begins

ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಚಾಲನೆ

ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಕನ್ನಡ ಚಿತ್ರರಂಗದ ಸಮಗ್ರ ಪ್ರಗತಿಗೆ ರಾಜ್ಯ ಸರ್ಕಾರ ಹೊಸ ಸಿನಿಮಾ ನೀತಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ. ಕನ್ನಡ ಚಿತ್ರಗಳನ್ನು ಸ್ಪರ್ಧೆಗೆ ಹುರಿಗೊಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿತ್ರರಂಗದ ಅಗತ್ಯ ಪೂರೈಸಲು ಸಿದ್ದವಿದೆ ಎಂಬುದಾಗಿ ಮುಖ್ಯ ಮಂತ್ರ್ರಿಗಳು ಹೇಳಿದರು. ‘ಸಿನಿಮಾ ಸಂಭ್ರಮ’ ನ್ಯೂಸ್ ಲೇಟರ್ ಬಿಡುಗಡೆ ಮಾಡಿದ ವಾರ್ತಾ ಸಚಿವ ರೋಷೆನ್‍ಬೇಗ್ ಹೊಸ ಸಿನಿಮಾ ನೀತಿ ರೂಪಿಸುವ ಕುರಿತು ಎಲ್ಲಾ ವಲಯಗಳ ಜತೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ಕೊಟ್ಟರು. ಐಸಿಯುಗೆ ಕನ್ನಡ ಚಿತ್ರರಂಗವನ್ನು ಹೋಲಿಸಿದ ಚಲನಚಿತ್ರ ಅಕಾಡಮಿ ಅಧ್ಯಕ್ಷ ರಾಜೇಂದ್ರಸಿಂಗ್‍ಬಾಬು ಸಿನಿಮಾರಂಗದ ನೀತಿ ಹಳೆಯದಾಗಿದೆ. ಇದಕ್ಕಾಗಿ ಹೊಸ ರೀತಿ ನೀತಿಯನ್ನು ರೂಪಿಸಬೇಕೆಂದು ಕೋರಿಕೆ ಇಟ್ಟರು.

ವಿ.ಕೆ.ಮೂರ್ತಿ ನನ್ನ ಗುರುಗಳು. ಎಸ್‍ಜೆಪಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದರಿಂದ ಬೆಂಗಳೂರು ನನಗೆ ಸಂಬಂದವಿದೆ. ಇಂಟರ್‍ನೆಟ್‍ನಲ್ಲಿ ಎಂತಹ ಚಿತ್ರಗಳನ್ನು ನೋಡಬಹುದು. ಆದರೆ ಅದ್ಬುತ ಸಿನಿಮಾಗಳ ಸವಿ ಕಾಣಬೇಕಾದರೆ ಇಂತಹ ಚಿತ್ರೋತ್ಸವಗಳು ಅವಶ್ಯಕವಾಗಿದೆ ಎಂದರು ಬಾಲಿವುಡ್ ನಿರ್ದೇಶಕ, ಛಾಯಗ್ರಾಹಕ ಗೋವಿಂದನಿಹಲಾನಿ. ನಟಿ ಸುಹಾಸಿನಿಮಣಿರತ್ನಂ ಕನ್ನಡ ಅಂದರೆ ನನಗೆ ತುಂಬಾ ಇಷ್ಟ. ತಮಿಳಿಗಿಂತ ಕನ್ನಡದಲ್ಲೆ ಹೆಚ್ಚು ಚಿತ್ರಗಳನ್ನು ಮಾಡಿದ್ದೇನೆ. ಕನ್ನಡ ನನ್ನ ಮಾತೃ ಭಾಷೆಯಾಗಿದೆ. ನನ್ನ ಮನೆ ಇರೋದು ಕೂಡ ಬೆಂಗಳೂರಿನಲ್ಲೆ ಅಂತ ಮಾತನಾಡಿ ಅಚ್ಚರಿ ಮೂಡಿಸಿದರು. ಯಶ್, ಮೇಘನಾರಾಜ್, ಸಂಸದ ಪಿ.ಸಿಮೋಹನ್,ಮಹಾಪೌರರಾದ ಶಾಂತಕುಮಾರಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಉಪಸ್ಥಿತರಿದ್ದರು.