From the earlier FilmySphere, kept as published on 2014-12-01. It has not been updated.
Dr Rajkumar Memorial launch
ಡಾ.ರಾಜ್‍ಕುಮಾರ್ ಸ್ಮಾರಕ ಲೋಕಾರ್ಪಣೆ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್‍ಕುಮಾರ್ ಸಮಾಧಿ ಶನಿವಾರ ಸಚಿವರು, ರಜನಿಕಾಂತ್,ಚಿರಂಜೀವಿ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಆರು ಕೋಟಿ ಕನ್ನಡಿಗರ ಸಂಕೇತವಾಗಿ ರಾಜ್‍ಕುಮಾರ್ ಪ್ರತಿಷ್ಟಾನ ಹಾಗೂ ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು. ಅವರೊಂದಿಗಿನ ಸಂಪರ್ಕವನ್ನು ಮೆಲುಕು ಹಾಕಿದ ಮುಖ್ಯಮಂತ್ರಿಗಳು ಮತ್ತೋಬ್ಬ ರಾಜ್‍ಕುಮಾರ್‍ರನ್ನು ಕಾಣುವುದು ಅಸಾಧ್ಯ. ಕನ್ನಡಕ್ಕೆ ಒಬ್ಬರೆ ರಾಜ್‍ಕುಮಾರ್.ಅವರ ಅಗಲಿಕೆ ಚಿತ್ರರಂಗಕ್ಕೆ ಕೊರತೆ ತುಂಬಿದೆ ಎಂಬ ಮಾತು ವಾಸ್ತವವಾಗಿದೆ. ನಾಟಕ, ಪೌರಾಣಿಕ, ಸಾಮಾಜಿಕ ಮತ್ತು ಬಾಂಡ್ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಅವರಿಗೆ ಸಾಟಿ ಯಾರು ಇಲ್ಲ ಎಂದರು. ಇದೇ ಸಂದರ್ಭದಲ್ಲಿ ರಾಜ್‍ಕುಮಾರ್ ದಾನ ಮಾಡಿದಂತೆ ತಾನು ನೇತ್ರದಾನ ಮಾಡುವುದಾಗಿ ಮಿಂಟೋ ಆಸ್ಪತ್ರೆಯ ವಾಗ್ದಾನ ಪತ್ರಕ್ಕೆ ಸಹಿ ಹಾಕಿದರು. ಮುತ್ತುರಾಜ್ ಹೆಸರಿನ ಮಳೆ ಹನಿ ನೆಲಕ್ಕೆ ಬಿದ್ದು ಮನುಷ್ಯ ರೂಪ ತಾಳಿ ನಂತರ ಅಶ್ವರೂಪ ಪಡೆದು ಕನ್ನಡ ಚಿತ್ರರಂಗಕ್ಕೆ ಸತತ ಐವತ್ತನಾಲ್ಕು ವರ್ಷಗಳ ಕಾಲ ಕನ್ನಡಿಗರನ್ನು ರಂಜಿಸಿದ್ದಾರೆ. ಭಕ್ತ ಅಂಬರೀಷನನ್ನು ಆ ಅಶ್ವ ಸವಾರಿ ಮಾಡಲಿಲ್ಲ ಎಂಬುದು ಬೇಸರದ ಸಂಗತಿ. ಅವರು ಸರಸ್ವತಿ ಆರಾಧಕರಾಗಿದ್ದರು. ಜನ ಗೌರವ ಕೊಡುವುದು ನನಗಲ್ಲ,ನನ್ನಲ್ಲಿರುವ ಸರಸ್ವತಿಗೆ ಎಂದು ಅವರು ಆಗಾಗ ಹೇಳುತ್ತಿದ್ದುದು ನೆನಪು ಇದೆ. ರಾಜ್ ಹೂರತುಪಡಿಸಿ ಯಾರ ಬಳಿಯೂ ಆಟೋಗ್ರಾಫ್ ಪಡೆದಿಲ್ಲ. ಅವರ ಸ್ಮಾರಕ ಮಂದಿರವನ್ನು ತಂದಿರುವುದಕ್ಕೆ ಸರ್ಕಾರಕ್ಕೆ ನನ್ನ ತುಂಬ ಹೃದಯದ ಅಭಿನಂದನೆಯನ್ನು ಸಲ್ಲಿಸುತ್ತೇನೆಂದು ತೂಕದ ಮಾತಿಗೆ ವಿರಾಮ ಹಾಕಿದರು ರಜನಿಕಾಂತ್.
ಫಿಲಿಂ ವಿದ್ಯಾರ್ಥಿಯಾಗಿದ್ದ ನನ್ನನ್ನು ಆತ್ಮೀಯವಾಗಿ ಮಾತನಾಡಿಸಿದನ್ನು ನೆನಪುಮಾಡಿಕೊಂಡ ಚಿರಂಜೀವಿ ಅವರ ಸರಳ ನುಡಿಗೆ ಶರಣಾಗಿದ್ದೆ ಕನ್ನಡ ನಾಡಿಗೆ ಅಲ್ಲ ಅವರು ಈಡೀ ದೇಶಕ್ಕೆ ಆಸ್ತಿ ಅಂತ ಬಣ್ಣಿಸಿದರು. ಅಪ್ಪನ ಕೊನೆಗಾಲವನ್ನು ಹಾಗೆಯೇ ಬಿಚ್ಚಿಟ್ಟರು ರಾಘವೇಂದ್ರರಾಜ್‍ಕುಮಾರ್. ಇದೇ ಸಂದರ್ಭದಲ್ಲಿ ರಾಜ್‍ಕುಮಾರ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.ರಾಜ್‍ಕುಮಾರ್ ಚಿತ್ರಸಂಪುಟ ಪುಸ್ತಕವನ್ನು ರಜನಿಕಾಂತ್ ಹಾಗೂ ರಾಜ್‍ಕುಮಾರ್ ಸಾಕ್ಷ್ಯಚಿತ್ರವನ್ನು ಚಿರಂಜೀವಿ ಬಿಡುಗಡೆಗೊಳಿಸಿದರು.ಗೃಹ ಸಚಿವ ಕೆ.ಜೆ.ಜಾರ್ಜ್, ಸಚಿವ ನಟ,ಅಂಬರೀಷ್, ವಾಣಿಜ್ಯಮಂಡಳಿ ಅಧ್ಯಕ್ಷ ಗಂಗರಾಜು, ವಾರ್ತಾ ಸಚಿವ ರೋಷನ್‍ಬೇಗ್, ಸಚಿವರಾದ ರಾಮಲಿಂಗರೆಡ್ಡಿ, ಉಮಾಶ್ರೀ,ಮಹಾಪೌರರು, ರಾಜ್ ಕುಟುಂಬ, ಜಗ್ಗೇಶ್, ತಾರಾ ಉಪಸ್ತಿತರಿದ್ದರು.