From the earlier FilmySphere, kept as published on 2014-11-25. It has not been updated.
Banaadi Press Meet
ಬಾನಾಡಿ ಲೇಖನ ಸ್ಪರ್ಧೆ
ಮಕ್ಕಳ ಚಿತ್ರ ‘ಬಾನಾಡಿ’ ತೆರೆಗೆ ಬರಲು ಸನ್ನಿಹಿತವಾಗಿದೆ. ಮಕ್ಕಳು ತಂದೆ ತಾಯಿಗೆ ಯಾವ ರೀತಿ ಇರಬೇಕು, ತಂದೆ ತಾಯಿ ಮಕ್ಕಳನ್ನು ಯಾವ ರೀತಿ ಪೋಷಿಸಬೇಕು ಎಂಬ ಕಥಾ ಹಂದರ ಮತ್ತು ಶಿಕ್ಷಣ ವ್ಯವಸಾಯ ಬಗ್ಗೆ ಕ್ಷಕಿರಣ ಮೂಡಿಸುವ ಚಿತ್ರವಾಗಿದೆ. ಸಾಂಪ್ರತ ಮಕ್ಕಳು ಕನ್ನಡ ಭಾಷೆಯನ್ನು ಓದಲು, ಬರೆಯಲು ಪ್ರಯತ್ನ ಮಾಡುವುದಿಲ್ಲ. ಇದಕ್ಕೆಂದೆ ತಂಡವು ಚಿತ್ರದ ಪ್ರಚಾರ ಹಾಗೂ ಮಕ್ಕಳಿಗೆ ಕನ್ನಡ ಭಾಷೆ ಅರಿವು ಮೂಡಿಸುವ ಸಲುವಾಗಿ ಲೇಖನ ಸ್ಪರ್ಧೆಯನ್ನು ಏರ್ಪಾಟು ಮಾಡಿದ್ದಾರೆ. ಚಿತ್ರ ವೀಕ್ಷಿಸಿದ ಮಕ್ಕಳು ‘ರಾಜ್ಯ ರಾಷ್ಟ್ರದ ಅಭಿವೃದ್ದಿಯಲ್ಲಿ ಮಕ್ಕಳ ಪಾತ್ರವೇನು? ಏಕೆ? ಹೇಗೆ?’ ಎಂಬುದರೆ ಬಗ್ಗೆ ನಾಲ್ಕು ಪುಟಗಳಿಗೆ ಮೀರದಂತೆ ಮಕ್ಕಳ ಕೈಬರಹದಿಂದಲೇ ಲೇಖನ ಬರೆದು ಕಳುಹಿಸಬೇಕು. ಪೋಷಕರು ಲೇಖನವನ್ನು ಮಕ್ಕಳಿಂದಲೇ ಬರೆಸಬೇಕು ಎಂಬ ನಿಯಮವಿದೆ. ಆಯ್ಕೆಯಾದ ಉತ್ತಮ ಬರವಣಿಗೆಗೆ ಒಂದು ಲಕ್ಷಗಳನ್ನು ಮುಂದಿನ ವಿದ್ಯಾಭ್ಯಾಸದ ಸಲುವಾಗಿ ನೀಡಲಾಗುವುದು. ಇನ್ನಿತರ ಒಂಬತ್ತು ಉತ್ತಮ ಬರಹಗಳಿಗೆ ಸಮಾಧಾನಕರ ಮೊತ್ತದ ಬಹುಮಾನ ಸೇರಿದೆ. ಹೆಚ್ಚಿನ ವಿವರಗಳಿಗಾಗಿ www.baanaadi.in; www.nagarajkote.com ವೆಬ್‍ಸೈಟನ್ನು ನೋಡಬಹುದು. ಲೇಖನಗಳನ್ನು ಧೃತಿ ಸಮೂಹ ಸಂಸ್ಥೆಗಳು, 117/19, 22 ಮತ್ತು 23, ಕಾವೇರಿನಗರ ಮುಖ್ಯ ರಸ್ತೆ, ಕತ್ತರಿಗುಪ್ಪೆ, ಬನಶಂಕರಿ ಮೂರನೆ ಹಂತ, ಬೆಂಗಳೂರು-560085 ವಿಳಾಸಕ್ಕೆ ಕಳುಹಿಸತಕ್ಕದ್ದು. ಮುಖ್ಯ ಪಾತ್ರದಲ್ಲಿ ಪ್ರಫುಲ್ ಉಳಿದ ತಾರಬಳಗದಲ್ಲಿ ದತ್ತಾತ್ತೆಯ, ಅಭಿನಯ, ಹೇಮಾಶ್ರೀ, ರಾಜೇಶ್ ನಟಿಸಿದ್ದಾರೆ. ಕಥೆ, ಚಿತ್ರಕತೆ,ಸಂಭಾಷಣೆ ಹಾಗೂ ನಿರ್ದೇಶನದ ಪಾರುಪಥ್ಯವಹಿಸಿಕೊಂಡಿರುವ ನಾಗರಾಜಕೋಟೆರವರ ಚಿತ್ರವು ಡಿಸೆಂಬರ್ ಐದರಂದು ಬಿಡುಗಡೆಯಾಗಲಿದೆ. ಒಂದು ಕೋಟಿ ಖರ್ಚು ಮಾಡಿರುವ ನಾಗರಾಜು ರವರಿಗೆ ಸಿನಿಮಾ ಕೃಷಿ ಹೊಸ ಪ್ರಯತ್ನ.