Skip to content
FilmySphere

From the earlier FilmySphere, kept as published on 2014-12-02. It has not been updated.

Software Ganda is ready for release

ಸಾಫ್ಟ್‍ವೇರ್ ಗಂಡನಿಗೆ ಬಿಡುಗಡೆ ಭಾಗ್ಯ

ಅದ್ದೂರಿಯಾಗಿ ಮಹೂರ್ತ ಹಾಗೂ ಸಿಡಿ ಬಿಡುಗಡೆ ಮಾಡಿಕೊಂಡ ‘ಸಾಫ್ಟ್‍ವೇರ್ ಗಂಡ’ ನಂತರ ಪ್ರಚಾರದಿಂದ ಹಿಂದೆ ಉಳಿಯಿತು. ಇದರಿಂದ ಜಗ್ಗೇಶ್‍ಗೆ ಬೇಸರವಾಗಿ ಚಿತ್ರದಿಂದ ಕೈ ತೊಳೆದುಕೊಂಡಿದ್ದಾಗಿ ಮಾದ್ಯಮದ ಎದುರು ಹೇಳಿಕೊಂಡಿದ್ದರು. ಈಗ ಚಿತ್ರಕ್ಕೆ ಬಿಡುಗಡೆ ಭಾಗ್ಯ ಬಂದಿದೆ. ಇದಕ್ಕಾಗಿ ಕೊನೆಯ ಬಾರಿ ಪತ್ರಿಕಾಗೋಷ್ಟಿಯನ್ನು ಏರ್ಪಡಿಸಲಾಗಿತ್ತು. ಕಾರಣಾಂತರದಿಂದ ಗೋಷ್ಟಿಗೆ ಅವರು ಬಂದಿರಲಿಲ್ಲ. ಪ್ರಚಾರಕ್ಕೆ ನಾಯಕ, ನಾಯಕಿ ಬರುವುದು ಅವರ ಕರ್ತವ್ಯ. ನಾಯಕಿ ನಿಖಿತಾತುಕ್ರಲ್ ಹಾಜರಿದ್ದು ನಿರ್ಮಾಪಕರಿಗೆ ಸಮಾಧಾನತರಿಸುವಂತ್ತು. ಜಗ್ಗೇಶ್‍ಗೆ ಬೆನ್ನುನೋವು ಜಾಸ್ತಿಯಾಗಿದ್ದರಿಂದ ಬರಲಾಗಲಿಲ್ಲವೆಂಬ ನಿರ್ಮಾಪಕರಿಗೆ ಉತ್ತರಬಂತು. ಇದನ್ನು ನಂಬದೆ ಕೆದಕಿದಾಗ ನಾಲ್ಕು ಬಾರಿ ಅವರ ಮನೆಗೆ ಹೋದಾಗ ಅವರು ಸಿಗಲಿಲ್ಲವೆಂಬ ಉತ್ತರ ನಿರ್ಮಾಪಕ ರಾಮಪ್ಪರಿಂದ ಕೇಳಿಬಂತು.

ನಿರ್ದೇಶಕ ವೆಂಕಟ್ ಮತ್ತು ನಿರ್ಮಾಪಕರು ಹೊಸಬರಾಗಿದ್ದರಿಂದ ಪ್ರಾರಂಬದಿಂದಲೂ ಚಿತ್ರಕ್ಕೆ ಸಹಕಾರ ನೀಡುತ್ತಾ ಬಂದಿರುವ ಜಗ್ಗೇಶ್ ನಮ್ಮ ಕಡೆ ದುಡ್ಡಿಲ್ಲ ಅಂತ ಹೇಳಿಕೊಂಡಿರುವುದು ರಾಮಪ್ಪನಿಗೆ ಬೇಸರವಾಗಿದೆಯಂತೆ. ಮೂರು ಕಾಲು ಕೋಟಿ ಖರ್ಚಾಗಿರುವ ಚಿತ್ರದಲ್ಲಿ ಶ್ರೀನಾಥ್,ಮಿಮಿಕ್ರಿದಯಾನಂದ್ ತಾರಾಬಳಗದಲ್ಲಿ ಇದ್ದಾರೆ.ಸಾಫ್ಟ್‍ವೇರ್ ಕಥನ ಸಾರುವ ಚಿತ್ರವು ಶುಕ್ರವಾರದಂದು ಸುಮಾರು ನೂರು ಕೇಂದ್ರಗಳಲ್ಲಿ ತೆರೆಕಾಣಲಿದೆ.