Skip to content
FilmySphere

From the earlier FilmySphere, kept as published on 2014-11-25. It has not been updated.

Marayalare Shooting

ಜನರಿಂದ ನಿರ್ಮಾಣವಾಗುತ್ತಿರುವ ಮತ್ತೊಂದು ಚಿತ್ರ

ಸೃಜನಶೀಲ ನಿರ್ದೇಶಕ ಪವನ್‍ಕುಮಾರ್ ಕಥೆ, ನಿರ್ದೇಶನದಲ್ಲಿ ತೆರೆಕಂಡು ಸಾಧಾರಣ ಹಿಟ್ ಎನಿಸಿಕೊಂಡ ‘ಲೂಸಿಯಾ’ ಚಿತ್ರವನ್ನು ನಿರ್ಮಾಣ ಮಾಡಿದ್ದು ಸಿನಿಮಾಸಕ್ತರು. ಇದರಿಂದ ಉತ್ತೇಜಿತರಾದ ಶರತ್‍ಖಾದ್ರಿ ಲೂಸಿಯಾ ಮಾದರಿಯಂತೆ ‘ಮರೆಯಲಾರೆ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಹಂತದಲ್ಲಿ ಮಧ್ಯಪ್ರದೇಶದ ಪಚ್‍ಮಡಿಯಲ್ಲಿ ನೂರಮೂವತ್ತು ವರ್ಷದ ಹಳೆಯದಾದ ಚರ್ಚ್‍ನಲ್ಲಿ ಆರು ದಿವಸದ ಚಿತ್ರೀಕರಣ ಮುಗಿಸಿ ಸದ್ಯ ಬೆಂಗಳೂರಿನಲ್ಲಿ ಎರಡನೆ ಹಂತದ ಚಿತ್ರೀಕರಣವನ್ನು ಮಾಗಡಿರಸ್ತೆಯ ಕಚೇರಿಯಲ್ಲಿ ನಡೆಸುತ್ತಿದ್ದಾರೆ. ಸಾಂಪತ್ರ ಯುವಕರು ಆಸೆ ಆಕಾಂಕ್ಷೆಗಳಿಗೆ ಮಾರುಹೋಗಿ ಚಿಕ್ಕ ದಾರಿಯನ್ನು ಹಿಡಿದುಕೊಂಡಾಗ ಏನೇನು ಅವಾಂತರಗಳು ಆಗುತ್ತದೆ ಎಂಬುದನ್ನು ತೋರಿಸುವುದರ ಜೊತೆಗೆ ಒಂದು ನವಿರಾದ ಪ್ರೀತಿ ಕತೆಯನ್ನು ಸೇರಿಸಿದ್ದಾರೆ. ಚಿತ್ರಕತೆಯನ್ನು ಇಂದಿನ ಯುವ ಜನಾಂಗಕ್ಕೆ ಸರಿಹೊಂದುವಂತೆ ಸಿದ್ದಪಡಿಸಿರುವುದು ವಿಶೇಷವಾಗಿದೆ. ಧಾರವಾಹಿಯಲ್ಲಿ ನಟಿಸಿದ ಅನುಭವವಿರುವ ತಾಂಡವ್ ನಾಯಕ. ಕೊಡಗು ಮೂಲಕ ಪವಿತ್ರಬೆಳ್ಳಿಯಪ್ಪ ನಾಯಕಿ. ಇಬ್ಬರಿಗೂ ಆರು ಶೇಡ್‍ಗಳು ಇರಲಿದ್ದು, ಪಾತ್ರದಲ್ಲಿ ಸಾಕಷ್ಟು ತಿರುವುಗಳು ಇದೆಯಂತೆ. ಕಂಪನಿ ಮಾಲೀಕ ಅಲ್ಲದೆ ರಾಜ್‍ಕುಮಾರ್, ವಿಷ್ಣುವರ್ಧನ್, ಶಂಕರ್‍ನಾಗ್ ಅಭಿಮಾನಿಯಾಗಿ ಕಾಣಿಸಿಕೊಂಡಿರುವ ಮಿತ್ರ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಸ್ಯನಟನಾಗಿ ಗುಣಶೇಖರ್. ನಾಲ್ಕು ಹಾಡುಗಳಿಗೆ

ಅರ್ಜುನ್‍ಜನ್ಯಾ ಸಂಗೀತ ಸಂಯೋಜನೆ ಇದೆ.