Skip to content
FilmySphere

From the earlier FilmySphere, kept as published on 2014-11-25. It has not been updated.

Ravishankar Birthday

ಡಬ್ಬಿಂಗ್ ಕುಟುಂಬ

ಅಪ್ಪ ಪಿ.ಜೆ.ಶರ್ಮ, ತಾಯಿ ಕೃಷ್ಣಜ್ಯೋತಿ ತೆಲುಗಿನಲ್ಲಿ ಹೆಸರಾಂತ ಕಂಠದಾನ ರಾಜ್‍ಕುಮಾರ್ ಚಿತ್ರಗಳು ಇವರದೆ ಕಂಠದಲ್ಲಿ ತೆಲುಗು ಭಾಷೆಯಲ್ಲಿ ತೆರೆಕಾಣುತ್ತಿದ್ದವು. ಮಕ್ಕಳಾದ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪಶರ್ಮ ಡಬ್ಬಿಂಗ್ ಕೆಲಸದಲ್ಲಿ ಸೃಜನಶೀಲತೆಯನ್ನು ಉಳಿಸಿಕೊಂಡಿದ್ದಾರೆ. ಸದ್ಯ ಸಾಯಿಕುಮಾರ್ ಕನ್ನಡ ತೆಲುಗು ಚಿತ್ರಗಳ ನಟನೆಯಲ್ಲಿ ಬ್ಯುಸಿ. ತೆಲುಗಿನಲ್ಲಿ ನಟಿಸಿದ ಬಾಲಿವುಡ್ ವಿಲನ್‍ಗಳಿಗೆ ಅಬ್ಬರದ ಧ್ವನಿ ನೀಡುತ್ತಿರುವ ಹೆಮ್ಮೆ ಸಾಯಿಕುಮಾರ್ ಅವರದು. ಅಯ್ಯಪ್ಪಶರ್ಮ ನಿರ್ದೇಶಕ. ಮೂವತ್ತೋಂಬತ್ತು ವರ್ಷಗಳ ಹಿಂದೆ ಬಾಲನಟನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ರವಿಶಂಕರ್, ಎಂಬತ್ತಾರರಲ್ಲಿ ಮೂರು ತೆಲುಗು ಚಿತ್ರಗಳಿಗೆ ನಾಯಕನಾದರೂ ಅದೃಷ್ಟ ಕೈಕೊಟ್ಟಿದ್ದರಿಂದ ಮರಳಿ ಡಬ್ಬಿಂಗ್ ಕೆಲಸಕ್ಕೆ ಅನಿವಾರ್ಯವಾಗಿ ಹೋಗಬೇಕಾಯಿತು. ಆದರೂ ರವಿಶಂಕರ್ ಅಂತರಾಳದಲ್ಲಿ ನಟನೆ ಎಂಬ ದಾಹ ಕೊರಗುತ್ತಲೆ ಇತ್ತು. 2011ರಲ್ಲಿ ಸುದೀಪ್ ನಿರ್ದೇಶನ,ನಟನೆಯ ‘ಕಂಪೆಗೌಡ’ ಚಿತ್ರದಲ್ಲಿ ಆರ್ಮುಗಂ ಹೆಸರಿನ ಮುಖ್ಯ ಖಳನಾಯಕನಾಗಿ ನಟಿಸಿದ ನಂತರ ಮತ್ತೆ ಹಿಂದುರುಗಿ ನೋಡುವ ಪ್ರೇಮಯವೆ ಬರಲಿಲ್ಲ. ಕಾರಣ ಆ ಪಾತ್ರವು ಇವರಿಗೆ ಕನ್ನಡ ಚಿತ್ರರಂಗದಲ್ಲಿ ತಳಹೂರಲು ಅಡಿಪಾಯ ಹಾಕಿಕೊಟ್ಟಿತ್ತು . ನಂತರ ವರದನಾಯಕ, ಹುಚ್ಚುಹುಡಗ್ರು, ವಿಕ್ಟರಿ,ಅಧ್ಯಕ್ಷದಲ್ಲಿ ನಟಿಸಿ ತಮ್ಮದೆ ಛಾಪು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚಂದನವನವು ಬೆಳ್ಳಿ ತಟ್ಟೆಯಲ್ಲಿ ಅನ್ನ ನೀಡಿ ಗೌರವವನ್ನು ಕೊಟ್ಟಿದೆ. ಅದಕ್ಕಾಗಿ ಕನ್ನಡ ನನ್ನ ಉಸಿರು ಅಂತಾರೆ. ಡಬ್ಬಿಂಗ್ ಕಲಾವಿದ. ಆದರೂ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಡ ಎನ್ನುವುದು ಇವರ ತಹಬಂದಿವಾಗಿದೆ. ನಟನೆ ಜೊತೆಯಲ್ಲಿ ಬಿಡುವಿದ್ದಾಗ ರವಿಶಂಕರ್ ಸಂವೇದನೆಯಿಂದ ಎಂಟು ಕತೆಗಳು ಸಿದ್ದವಾಗಿದೆ. ಮುಂದಿನ ಎರಡು ವರ್ಷದಲ್ಲಿ ನಿರ್ದೇಶನ ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತಾ ಅದರಲ್ಲಿ ಒಂದು ಕತೆ ಮಗ ಅದ್ವೈತಶಂಕರ್‍ನನ್ನು ನಾಯಕನನ್ನಾಗಿ ಪರಿಚಿಸುವ ಇರಾದೆ ಇದೆಯಂತೆ. ಇತ್ತೀಚೆಗೆ ನಲವತ್ತ್ತೆಂಟನೆ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಮಾಧ್ಯಮದ ಎದುರು ಸರಳವಾಗಿ ಆಚರಿಸಿಕೊಂಡರು.