From the earlier FilmySphere, kept as published on 2014-12-05. It has not been updated.
Payte Hudgir Halli Life:huge Ragi ball enters limca book of records
ಗಿನ್ನಿಸ್ ದಾಖಲೆಗೆ ರಾಗಿ ಮುದ್ದೆ
ಸುವರ್ಣಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್'.ರಿಯಾಲಿಟಿ ಶೋ ಸದ್ಯ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಸಮೀಪವಿರುವ ರಾಯಾಸಮುದ್ರದಲ್ಲಿ ಬೀಡುಬಿಟ್ಟಿದೆ. ಹತ್ತು ಜನರು ಶೋದಲ್ಲಿ ಭಾಗಿಯಾಗಿದ್ದು,ಆರು ಸ್ಪರ್ಧಾಳುಗಳು ಹೊರ ಬಂದಿದ್ದಾರೆ. ಅಂತಿಮವಾಗಿ ಉಳಿದುಕೊಂಡಿರುವುದು ರಾಗಿಶ್ರೀ,ರವಿತಾ, ವೀಣಾ, ಅಕ್ಷತಾ. ಕೊನೆ ಸುತ್ತಿನಲ್ಲಿ ಇವರೆಲ್ಲರಿಗೂ ರಾಗಿಮುದ್ದೆ ಮಾಢುವ ಟಾಸ್ಕ್‍ನ್ನು ನೀಡಲಾಗಿತ್ತು. ಇದರಲ್ಲೂ ಒಂದು ವಿಶೇಷವಿದೆ. ಹತ್ತು ಕ್ವಿಂಟಾಲ್ ರಾಗಿ ಮತ್ತು ಐದು ಕ್ವಿಂಟಾಲ್ ನೀರು ಬೆರೆಸಿ ರಾಗಿಮುದ್ದೆ ಮಾಢಬೇಕಾಗುತ್ತದೆ. ಇವರೊಂದಿಗೆ ಹತ್ತು ಅಡುಗೆ ಭಟ್ಟರು ಸಹಾಯಕರಾಗಿ ಇರುತ್ತಾರೆ. ಕೊನೆಗೆ ಎಂಟು ಅಡಿ ಉದ್ದ, ಹತ್ತು ಅಡಿ ಹಗಲವಿರುವ ರಾಗಿ ಮುದ್ದೆಯನ್ನು ಮಾಡುವದರೊಂದಿಗೆ ಲಿಮ್ಕಾ ಗಿನ್ನಿಸ್ ಪುಸ್ತಕ್ಕೆ ಚಾನಲ್‍ರವರು ಅರ್ಜಿಯನ್ನು ಗುಜರಾಯಿಸಿದ್ದಾರೆ.
ಜನರಿಗೆ ರಾಗಿ ಮುದ್ದೆ ಬಗ್ಗೆ ಅರಿವು ಮೂಡಿಸಲು ಮುದೆಯನ್ನು ವೀಕ್ಷಿಸಲು ಬಂದವರಿಗೆ ಸಾಂಬರ್ ನೊಂದಿಗೆ ವಿತರಣೆ ಮಾಡಲಾಯಿತು. ಹಿಂದಿನ ರಿಯಾಲಿಟಿ ಶೋದಲ್ಲಿ ಇರದ ಟಾಸ್ಕ್‍ಗಳು ಭಿನ್ನ ರೀತಿಯಲ್ಲಿ ಸ್ಪರ್ಧಾಳುಗಳಿಂದ ಮಾಡಿಸಿದ್ದಾರೆ. ಅಲ್ಲದೆ ಹೂರಾಂಗಣದಲ್ಲಿ ಚಿತ್ರೀಕರಣ ನಡೆಸಿರುವುದು ವಿಶೇಷವಾಗಿತ್ತು. ನಟ ಸಂತೋಷ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ರಿಯಾಲಿಟಿ ಶೋದ ರೂವಾರಿ ಸುದೀಂದ್ರ ಅವರದು.