Skip to content
FilmySphere

From the earlier FilmySphere, kept as published on 2014-11-26. It has not been updated.

Bahaddur success story

ಬಹದ್ದೂರ್ ಗೆದ್ದ ಕತೆ

ಬಹದ್ದೂರ್ ಸಿನಿಮಾ ಸ್ಥಗಿತವಾದಾಗ ಕೊಡೆಯಂತೆ ಆಸರೆಯಾಗಿದ್ದು ನಿರ್ಮಾಪಕರಾದ ಆರ್.ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್. ಅಂದುಕೊಂಡಂತೆ ತಡವಾಗಿ ಬಿಡುಗಡೆಯಾದರೂ ಪ್ರೇಕ್ಷಕರು ಚಿತ್ರವನ್ನು ಅಪ್ಪಿಕೊಂಡಿದ್ದರಿಂದ ಅವ್ಯಾಹತವಾಗಿ ಐವತ್ತು ದಿನಗಳ ಯಶಸ್ವಿ ಪ್ರದರ್ಶನಗೊಂಡು ಮುಂದುವರೆಯುತ್ತಿದೆ. ಚೂಚ್ಚಲಬಾರಿ ನಿರ್ದೇಶನ ಮಾಡಿರುವ ಚೇತನ್‍ಕುಮಾರ್‍ಗೆ ಒಂದು ವರ್ಗದ ಜನ ಇಷ್ಟಪಡುತ್ತಾರೆ ಎಂದುಕೊಂಡಿದ್ದರಂತೆ. ಆದರೆ ಎಲ್ಲಾ ವರ್ಗದವರು ಚಿತ್ರವನ್ನು ವೀಕ್ಷಿಸಿದ್ದರಿಂದ ಬಹದ್ದೂರ್ ಎಲ್ಲರ ಮನಸ್ಸಿನಲ್ಲಿ ಉಳಿದುಕೊಂಡ.ಶೇಕಡ ನೂರರಂತೆ ಇಪ್ಪತ್ತೈದು ಕೇಂದ್ರಗಳಲ್ಲಿ ನೂರು ದಿನ ಪ್ರಧರ್ಶನಗೊಳ್ಳುವುದು ಗ್ಯಾರಂಟಿ ಎಂಬ ಆತ್ಮವಿಶ್ವಾಸದಲ್ಲಿ ಇದ್ದಾರೆ. ಚಿತ್ರದ ಯಶಸ್ಸನ್ನು ತಾಂತ್ರಿಕವರ್ಗದವರಿಗೆ ಅರ್ಪಿಸಿದ ಧ್ರುವಸರ್ಜಾ ನಿಂತುಹೋದ ಸಿನಿಮಾಕ್ಕೆ ಜೀವ ಕೊಟ್ಟವರಿಗೆ ಕೃತಜ್ಘತೆಯನ್ನು ಸಲ್ಲಿಸಿದರು.

ಖಳನಟ ಉದಯ್ ಸಂತೋಷದಲ್ಲಿ ತಾನು ಭಾಗಿಯಾಗಿದ್ದೇನೆ ಅಂತಾರೆ.ನಿರ್ದೇಶಕರ ಅದ್ಬುತ ಕೆಲಸ, ನಾಯಕನ ಶ್ರಮ ಚಿತ್ರದ ಯಶಸ್ಸಿಗೆ ಕಾರಣ ಎಂಬುದು ಶ್ರೀನಿವಾಸ್ ಸಂತಸದ ನುಡಿ. ನೂರು ದಿನದ ಟ್ರೋಫಿಗೆ ಕಾಯುತ್ತಾ ಇದ್ದೀನಿ ಎಂಬ ಮಾತು ಕೇಳಿ ಬಂದಿದ್ದು ಛಾಯಗ್ರಾಹಕ ಶ್ರೀಷಾರಿಂದ. ನೃತ್ಯ ನಿರ್ದೇಶಕ ಹರ್ಷ, ಸಾಹಸ ನಿರ್ದೇಶಕ ರವಿವರ್ಮಾ ರವರ ಸಹಕಾರವನ್ನು ನಿರ್ದೇಶಕರು ನೆನಪು ಮಾಡಿಕೊಂಡರು.ರಾಧಿಕಾಪಂಡಿತ್ ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ಕಾರಣ ಸಂತೋಷಕೂಟದಲ್ಲಿ ಭಾಗಿಯಾಗಿರಲಿಲ್ಲ.