From the earlier FilmySphere, kept as published on 2014-11-23. It has not been updated.
Bangalore 560023 Audio Release
ಗಲ್ಲಿ ಕ್ರಿಕೆಟ್
ಕಿರಾತಕದಲ್ಲಿ ಮಂಡ್ಯಾ ಭಾಷೆಯ ಸೊಗಡನ್ನು ತೋರಿಸಿದ ನಿರ್ದೇಶಕ ಪ್ರದೀಪ್‍ರಾಜ್ ಈ ಬಾರಿ ಎಲ್ಲರೂ ಇಷ್ಟಪಡುವ ಕ್ರಿಕೆಟ್ ವಿಷಯವನ್ನು ತೆಗೆದುಕೊಂಡು ‘ಬೆಂಗಳೂರು-23’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರು-23 ಇರುವುದು ಮಾಗಡಿರಸ್ತೆ ಪಕ್ಕದಲ್ಲಿರುವ ಚೋಳರಪಾಳ್ಯ. ಎರಡು ಸ್ಥಳೀಯ ಪ್ರದೇಶದ ಹುಡುಗರು ಗಲ್ಲಿ ಕ್ರಿಕೆಟ್ ಪಂದ್ಯವನ್ನು ಆಡುವಾಗ ಜಗಳಗಂಟತನ, ಇದರ ಮಧ್ಯೆ ಪ್ರೀತಿ,ತುಂಟಾಟ ಸನ್ನಿವೇಶಗಳು ಬರುತ್ತದೆ. ಸಿಸಿಎಲ್ ತಂಡದಲ್ಲಿದ್ದ ಜೆಕೆ,ಧ್ರುವ, ರಾಜೀವ್ ಇವರ ಜೊತೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಚಂದನ್ ಮತ್ತು ಹಾಸ್ಯ ನಟ ಚಿಕ್ಕಣ್ಣ ನಟಿಸಿದ್ದಾರೆ. ಜಿಕೆ ಜೋಡಿಯಾಗಿ ಶಿವಾನಿಗೆ ಚಿತ್ರರಂಗ ಅರಂಗ್ರೇಟಂ, ಸಂಜನಾ ಧ್ರುವಶರ್ಮಾಗೆ ಜೋಡಿ. ಚೊಚ್ಚಲ ಬಾರಿಗೆ ಅರುಣ್ ಒಂಬತ್ತು ಹಾಢುಗಳಿಗೆ ರಾಗ ಸಂಯೋಜಿಸಿದ್ದಾರೆ. ಇದರ ಪೈಕಿ ಮೂರು ಬಿಟ್ ಹಾಡುಗಳು ಸೇರಿಕೊಂಡಿದೆ.
ಜ್ಘಾನಜ್ಯೋತಿ ಸಭಾಂಗಣದಲ್ಲಿ ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಆಗಮಿಸಿ ನಾನು ಪ್ರಾರಂಭದಲ್ಲಿದ್ದಾಗ ಹಿರಿಯರು ನನ್ನ ಚಿತ್ರಕ್ಕೆ ಶುಭ ಹಾರೈಸಿದ್ದರು. ಅದೇ ಕೆಲಸ ಈಗ ಮಾಡುತ್ತಿದ್ದೇನೆ. ಎಲ್ಲರಿಗೂ ಉತ್ತಮ ಅವಕಾಶಗಳು ದಕ್ಕುವಂತಾಗಲಿ ಎಂದರು. ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ ನಿರೂಫಕಿ ಅನುಶ್ರೀ ಪ್ರಶ್ನಗೆ ಉತ್ತರಿಸಿ ಎಲ್ಲರನ್ನು ನಗಿಸಿದರು. ತಡವಾಗಿ ಕಾರ್ಯಕ್ರಮಕ್ಕೆ ಹಾಜರಾದ ಯಶ್ ಚಿತ್ರಕ್ಕೆ ಒಳ್ಳೆಯದಾಗಲಿ ಎಂಬ ಮಾತು ಅವರದಾಗಿತ್ತು. ಗಾಯಕರಾದ ಟಿಪ್ಪು, ಶಮಿತಾಮಲ್ನಾಡ್ ಹಾಢುಗಳು ಎಲ್ಲರನ್ನು ಮನರಂಜಿಸಿದವು. ನಿರ್ಮಾಪಕ ಪುನೀತ್ ಮತ್ತು ಮನುಗೆ ನಿರ್ಮಾಣ ಮೊದಲ ಪ್ರಯತ್ನ. ಅಂದ ಹಾಗೆ ಚೆನ್ನೈ 23 ಚಿತ್ರದ ರಿಮೇಕ್ ಎಂಬುದನ್ನು ನಿಮ್ಮ ಗಮನಕ್ಕೆ ತರಲಾಗಿದೆ.