Skip to content
FilmySphere

From the earlier FilmySphere, kept as published on 2014-11-23. It has not been updated.

Love in Mandya is all set to hit the silver screen

ಬಿಡುಗಡೆಯಾಕ್ತಿದೆ ಲವ್ ಇನ್ ಮಂಡ್ಯಾ

‘ಲವ್ ಇನ್ ಮಂಡ್ಯಾ’ ಚಿತ್ರದಲ್ಲಿ ಒಪ್ಪಿಕೊಂಡ್‍ಬಿಟ್ಲು ಕಣ್ಲ ಪ್ರೀತಿ ಮಾಢೋಕೆ ಹಾಡು ಯುಟ್ಯೂಬ್‍ನಲ್ಲಿ ಒಂದು ಕಾಲು ಲಕ್ಷ ಜನ ವೀಕ್ಷಿಸಿದ್ದರಿಂದ ತಂಡವು ಖುಷಿಯಾಗಿದೆ. ಜಟ್ಟ, ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ತರಹನ ಭಿನ್ನ ರೀತಿಯ ಚಿತ್ರಗಳು ಯಶಸ್ವಿಯಾಗಿದ್ದರಿಂದ ನಿರ್ಮಾಪಕ ಉದಯ್‍ಮಹೆತಾ ಚಿತ್ರದ ಕತೆ ಹೊಸತಾಗಿದ್ದರಿಂದ ಸಾಹಿತಿ ಅರಸುಅಂತಾರೆಗೆ ನಿರ್ದೇಶನ ಮಾಡಲು ಅವಕಾಶ ನೀಡಿದ್ದಾರೆ. ಅದರಂತೆ ನಿರ್ದೇಶಕರು ಮೊದಲ ಪ್ರಯತ್ನದಲ್ಲೆ ಉತ್ತಮವಾಗಿ ತೆರೆಯ ಮೇಲೆ ತಂದಿದ್ದಾರಂತೆ. ಹಾಢುಗಳು ಹಿಟ್ ಆಗಿದ್ದರೂ ಅದರ ಯಶಸ್ಸು ಅರಸುಅಂತಾರೆಗೆ ಸಲ್ಲುತ್ತದೆ ಎನ್ನುವುದು ಸಂಗೀತ ನಿರ್ದೇಶಕ ಅನೂಪ್‍ಸೀಳನ್ ನುಡಿ. ಇದಕ್ಕೆ ತಕ್ಕಂತೆ ನೃತ್ಯ ನಿರ್ದೇಶಕ ಮುರಳಿ ನಾಯಕ ನಾಯಕಿಯರಿಂದ ಅದ್ಬುತವಾಗಿ ಡ್ಯಾನ್ಸ್ ಮಾಡಿಸಿದ್ದಾರೆ ಚಿತ್ರದಲ್ಲಿ ರೋಮಾನ್ಸ್, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್, ಫೈಟ್, ಭಾವನಾತ್ಮಕ ಸನ್ನಿವೇಶಗಳು ಹೇರಳವಾಗಿ ತುಂಬಿರುವುದರಿಂದ ಹಿಟ್ ಆಗುತ್ತದೆ ಎಂಬ ತಂಡದ ಆಶಾಭಾವನೆ.

ಏಳು ಬೀಳುಗಳನ್ನು ಕಂಡಿರುವ ನೀನಾಸಂಸತೀಶ್‍ಗೆ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇಟ್ಟುಕೊಂಡು ಭಕಪಕ್ಷಿಯಂತೆ ಪ್ರೇಕ್ಷಕರ ಪ್ರತಿಕ್ರಿಯೆ ಕಾದುಕುಳಿತಿದ್ದಾರೆ. ಡ್ರಾಮದಲ್ಲಿ ಮೂಕಿಯಾಗಿದ್ದ ಸಿಂಧೂಲೋಕನಾಥ್‍ಗೆ ಇದರಲ್ಲಿ ಹೆಚ್ಚು ಮಾತನಾಡುವ ಅವಕಾಶ ದಕ್ಕಿದೆ. ಇಬ್ಬರ ಜೊತೆಯಲ್ಲಿ ಮಾಸ್ಟರ್ ಮಂಜುನಾಥ್ ಅಭಿನಯ ಚಿತ್ರಕ್ಕೆ ಹೈಲೈಟ್, ಅಲ್ಲದೆ ನಾಲ್ಕು ವಿಲನ್‍ಗಳು ಮಾತನಾಡದೆ ವಿಲಕ್ಷಣ ರೀತಿಯಲ್ಲಿ ಅಭಿನಯವನ್ನು ತೋರಿಸಿರುವುದು ವಿಶೇಷವಾಗಿದೆ. ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣಪತ್ರ ಪಡೆದುಕೊಂಡಿರುವ ಚಿತ್ರವು ಶುಕ್ರವಾರದಂದು ತೆರೆಗೆ ಬರಲಿದೆ.