Skip to content
FilmySphere

From the earlier FilmySphere, kept as published on 2014-12-01. It has not been updated.

Yamaleela 2 review

ಹಾಸ್ಯ ಚಿತ್ರ ಯಮಲೀಲ-2

1994ರಲ್ಲಿ ತೆಲುಗು ನಟ ಅಲಿ ಚೂಚ್ಚಲಬಾರಿ ನಾಯಕನಾಗಿ ನಟಿಸಿದ ‘ಯಮಲೀಲ’ ಚಿತ್ರವು ಬಿಡುಗಡೆಯಾಗಿ ಎಲ್ಲರನ್ನು ನಗುವಿನಲ್ಲಿ ಮುಳುಗಿಸಿತ್ತು. ಈಗ ಅಂತಹುದೆ ಹಾಸ್ಯ ಭರಿತ ‘ಯಮಲೀಲ-2’ ಚಿತ್ರವು ಇಪ್ಪತ್ತನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.ಕೇರಳ, ಸ್ವಿಟ್ಜರ್‍ಲ್ಯಾಂಡ್, ಇಟಲಿ ಮುಂತಾದ ಕಡೆ ಚಿತ್ರೀಕರಣಗೊಂಡಿದೆ.ನಲವತ್ತು ನಿಮಿಷಗಳ ಕಾಲ ಯಮ ಮತ್ತು ಚಿತ್ರಗುಪ್ತರ ಗ್ರಾಫಿಕ್ಸ್ ಚಿತ್ರದ ಹೈಲೈಟ್. ಮೊದಲ ಸಂಚಿಕೆಯ ಕತೆಗಿಂತಲೂ ಭಿನ್ನವಾಗಿದ್ದು ಕತೆಯಲ್ಲಿ ಭರಪೂರ ಹಾಸ್ಯ ಸನ್ನಿವೇಶಗಳು ಅದರಲ್ಲೂ ಯಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡಾ.ಮೋಹನ್‍ಬಾಬು ಮತ್ತು ಚಿತ್ರಗುಪ್ತನಾಗಿ ಬ್ರಹ್ಮಾನಂದಂ ನಟನೆ ಕಚಗುಳಿ ಇಡುತ್ತವೆ. ಮನುಷ್ಯನ ಆಯಸ್ಸು ಮುಗಿದ ಕಾರಣ ಕರೆದುಕೊಂಡು ಹೋಗಲು ಯಮ,ಚಿತ್ರಗುಪ್ತ ಭೂಲೋಕಕ್ಕೆ ಬರುತ್ತಾರೆ. ಅಲ್ಲಿ ಅವನ ಪರಿಸ್ಥಿತಿಯನ್ನು ಕಂಡು ಪ್ರೀತಿಸಿದ ಹುಡುಗಿಯನ್ನು ಸೇರಿಸುವುದು ಕತೆಯ ತಿರುಳು.

ಭಾಗ ಒಂದರ ಚಿತ್ರವನ್ನು ನಿರ್ದೇಶಿಸಿದ ಎಸ್.ವಿ.ಕೃಷ್ಣರೆಡ್ಡಿ ಕಥೆ,ಚಿತ್ರಕಥೆ,ಸಂಗೀತ ಹಾಗೂ ಆಕ್ಷನ್ ಕಟ್ ಹೇಳಿದ್ದಾರೆ. ಡಿಎಸ್ ಮಾಕ್ಸ್ ಮಾಲೀಕರಾಗಿರುವ ಡಾ.ಕೆ.ವಿ.ಸತೀಶ್ ಚೂಚ್ಚಲಬಾರಿ ನಾಯಕನಾಗಿ ಪಾದರ್ಪಣೆಮಾಡಿದ್ದಾರೆ. ಸೌತ್‍ಆಫ್ರಿಕಾ ಮೂಲದ ದಿಯಾನಿಖಲಸ್ ನಾಯಕಿ. ಇವರೊಂದಿಗೆ ಆಶಿಷ್‍ವಿದ್ಯಾರ್ಥಿ,ಸದಾ,ನಿಶಾಕೊತಾರಿ,ಕೋಟಾಶ್ರೀನಿವಾಸರಾವ್, ಸಯಾಜಿಶಿಂದೆ ನಟನೆ ಇದೆ.ತುಂಬಿದ ಪ್ರದರ್ಶನವಾಗುತ್ತಿರುವ ತೆಲುಗು ಚಿತ್ರವು ವಿಶ್ವದಾದ್ಯಂತ ಆರು ನೂರು ಕೇಂದ್ರದಲ್ಲಿ ತೆರೆಕಂಡಿದೆ.