From the earlier FilmySphere, kept as published on 2014-12-02. It has not been updated.
Nan Love track Audio
ನನ್ ಲವ್ ಟ್ರ್ಯಾಕ್ ಹಾಡುಗಳ ಧಮಾಕ
ಅಮೃತ ವರ್ಷಿಣಿ ಧಾರವಾಹಿ ನಾಯಕ ವಿಜಯ್ ಹಿರಿತೆರೆಗೆ ರುಕ್ಕು ಹೆಸರಿನಲ್ಲಿ ಪಾದಾರ್ಪಣೆ ಮಾಡಿರುವ ಚಿತ್ರ ‘ನನ್ ಲವ್ ಟ್ರ್ಯಾಕ್’ ಚಿತ್ರೀಕರಣ ಪೂರೈಸಿದೆ. ಪ್ರಚಾರದ ಸಲುವಾಗಿ ಹಾಡುಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಪ್ರೀತಿ,ಸ್ನೇಹ ಕುರಿತ ಕತೆಯಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ್ದೇನೆ. ಕಿರುತೆರೆಯಲ್ಲಿ ವೀಕ್ಷಕರು ಇಷ್ಟಪಟ್ಟಂತೆ ಮೊದಲ ಚಿತ್ರವಾಗಿದ್ದರಿಂದ ದುಗುಡದಿಂದ ಇದ್ದೇನೆ ಎಂದರು ರಕ್ಷಿತ್ ಅಲಿಯಾಸ್ ರುಕ್ಕು. ಮಾಸ್ಟರ್ ಕಮ್ಯುನಿಕೇಶನ್ ಮುಗಿಸಿರುವ ಮಂಗಳೂರು ಮೂಲದ ನಿಧಿಕುಶಾಲಪ್ಪ ನಾಯಕಿ. ತಮಿಳಿನಲ್ಲಿ ಕಾದಲ್‍ದೇಶಂ,ಇದಯಂ ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕದಿರ್ ಚೂಚ್ಚಲಬಾರಿಗೆ ಕನ್ನಡ ಚಿತ್ರಕ್ಕೆ ಕತೆ,ಚಿತ್ರಕತೆ ಜೊತೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರು ನನಗೆ ಪ್ರಿಯವಾದ ಜಾಗ ಇಲ್ಲಿಯೇ ನನ್ನ ಚಿತ್ರದ ಕೆಲಸಗಳನ್ನು ಮಾಡುವುದು ಎಂಬುದು ಕದಿರ್ ಮಾತು.
ಜಯಂತ್‍ಕಾಯ್ಕಿಣಿ, ಕವಿರಾಜ್, ಡಾ.ಮಮತ.ಜಿ.ಸಾಗರ್ ರಚಿಸಿರುವ ಐದು ಹಾಡುಗಳಿಗೆ ಶ್ಯಾಮ್, ಪ್ರಸನ್ನ, ಪ್ರವೀಣ್ ತ್ರಿವಳಿ ಜೋಡಿ ಸಂಗೀತ ಸಂಯೋಜಸಿದ್ದಾರೆ. ಇದೇ ಸಂದರ್ಭದಲ್ಲಿ ವಿಶ್ವದ ಹದಿನಾಲ್ಕನೆ ಬಲಿಷ್ಟ ವ್ಯಕ್ತಿ ಎಂದು ಕರೆಸಿಕೊಂಡಿರುವ ಮನೋಜ್‍ಚೋಪ್ರ ಎತ್ತರ ಆರೂವರೆ ಅಡಿ, ತೂಕ 150 ಕೆಜಿ. ಮಗನ ತೂಕ 165. ಇವರಿಬ್ಬರು ನಡೆಸಿದ ಸಾಹಸ ಪ್ರದರ್ಶನ ಮೈ ಜುಂ ಎನಿಸಿತು. ಕೋಚ್ ಪೋಷಕ ಪಾತ್ರದಲ್ಲಿ ಚೋಪ್ರ ನಟಿಸಿದ್ದಾರೆ. ಚಿತ್ರದ ಒಂದು ಹಾಡನ್ನು ಸುಂದರ ತಾಣಗಲ್ಲಿ ಚಿತ್ರೀಕರಿಸಿದ್ದು ಕಣ್ಣಿಗೆ ತಂಪು ನೀಡಿತು. ನಟ ವಿನಯ್‍ರಾಜ್‍ಕುಮಾರ್, ಲಹರಿವೇಲು,ನಿರ್ದೇಶಕ ಶಶಾಂಕ್, ಮದರಂಗಿ ಕೃಷ್ಣ ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು. ಮಗನ ಭವಿಷ್ಯಕೋಸ್ಕರ ನಿವೃತ್ತ ಪೋಲಿಸ್ ಅಧಿಕಾರಿ ಕೃಷ್ಣಮೂರ್ತಿ ಮತ್ತು ನವೀನ್ ಶರ್ಮಾ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.