From the earlier FilmySphere, kept as published on 2014-12-05. It has not been updated.
Naani movie shooting news
ನಿರ್ಮಾಪಕ, ನಿರ್ದೇಶಕರನ್ನು ಕಾಡಿದ ನಾನಿ
ಐದು ಸಾವಿರ ದೀಪಗಳ ಜೊತೆಗೆ ಅಘೋರಿ ಎಂಟ್ರಿ ಕೊಡುವ ಸನ್ನಿವೇಶವನ್ನು ‘ನಾನಿ’ ಸಿನಿಮಾಕ್ಕೆ ಚಿತ್ರೀಕರಿಸಿ ಎರಡನೆ ಹಂತಕ್ಕೆ ಬೆಂಗಳೂರು ಮೂವಿ ಸ್ಟುಡಿಯೋದಲ್ಲಿ ಬೀಡುಬಿಟ್ಟಿದೆ. ಮಾದ್ಯಮದವರು ಸೆಟ್‍ಗೆ ಹೋದಾಗ ಸುಹಾಸಿನಿ, ಜೈಜಗದೀಶ್ ಮತ್ತು ಬೇಬಿ ಸುಹಾಸಿನಿ ಹಿನ್ನಲೆ ಗೀತೆಗೆ ನಟನೆ ಮಾಡುತ್ತಿದ್ದರು. ಬ್ರೇಕ್ ತೆಗೆದುಕೊಂಡು ತಂಡವು ಮಾತಿಗೆ ಕುಳಿತುಕೊಂಡರು.ಮಾತು ಶುರು ಮಾಡಿದ ನಿರ್ದೇಶಕ ರಾಘವೇಂದ್ರಗೊಲ್ಲಹಳ್ಳಿ ಕತೆಯಲ್ಲಿ ಅಪ್ಪನು ನಾನಿಯನ್ನು ಏಕೆ ದ್ವೇಷಿಸುತ್ತಿರುತ್ತಾನೆ. ಅಮ್ಮ ಪ್ರೀತಿ ಮಾಢುತ್ತಾಳೆ. ನಾನಿ ಬಾಲ್ಯದ ಜೀವನವನ್ನು ಚಿತ್ರೀಕರಿಸಲಾಗುತ್ತಿದೆ. ಇಂದು ಕೊನೆ ದಿನ. ಮೂರನೆ ಹಂತದಲ್ಲಿ ಮಂಗಳೂರು ಸಮೀಪ ಪಾಳು ಬಂಗಲೆಯಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದೆ. ಶಿವನ ನೃತ್ಯದ ಹಾಡಿಗೆ ಚಿಕ್ಕಮಗಳೂರು ಸಮೀಪ ಹಿಪ್ಪನಹಳ್ಳಿ ಹೋಗುವ ಇರಾದೆ ಇತ್ತು. ಪಲ್ಲಟ ಮಾಡಿಕೊಂಡು ಕನಕಪುರದಲ್ಲಿ ನಲವತ್ತು ಅಡಿ ನಟರಾಜ ವಿಗ್ರಹದೊಂದಿಗೆ ಮೂರು ನೂರು ಅಘೋರಿಗಳನ್ನು ಸೇರಿಸಿಕೊಂಡು ಶೂಟ್ ಮಾಡಲಾಗುವುದು.ನಂತರ ಕ್ಲೈಮಾಕ್ಸ್ ಗುಜರಾತ್‍ಗೆ ಪ್ರಯಾಣ ಎಂದರು.
ಹೋಂ ಬ್ಯಾನರ್‍ನಲ್ಲಿ ಚಿತ್ರ ನಿರ್ಮಾಣ ಮಾಢುತ್ತಿರುವುದರಿಂದ ಬ್ಯುಸಿಯಾಗಿರುವೆ. ಕತೆ ಚೆನ್ನಾಗಿದ್ದರಿಂದ ಒಪ್ಪಿಕೊಂಡೆ ಎಂಬ ಮಾತು ಸುಹಾಸಿನಿ ಅವರದು. ಅವರೊಂದಿಗೆ ಜೋಡಿಯಾಗಿ ನಾಲ್ಕನೆ ಚಿತ್ರದಲ್ಲಿ ನಟಿಸುತ್ತಿರುವುದು ಜೈಜಗದೀಶ್. ಬೇಬಿ ಸುಹಾಸಿನಿ ಕೆಲವೊಂದು ಸನ್ನಿವೇಶದಲ್ಲಿ ನಟಿಸುವಾಗ ಅರಿವು ಎಲ್ಲದಂತೆ ಅತ್ತುಬಿಟ್ಟರಂತೆ. ಅಲ್ಲದೆ ನಿರ್ಮಾಪಕ ರಮೇಶ್‍ಕುಮಾರ್ ಜೈನ್ ಮಗಳಿಗೆ ನಾನಿ ಅವಾಂತರಿಸಿ ರಾತ್ರ್ರಿಯೆಲ್ಲಾ ಮಾತನಾಡುತ್ತಿದ್ದಳಂತೆ, ನಿರ್ದೇಶಕರು ಆರೋಗ್ಯದಲ್ಲಿ ವ್ಯತ್ಯಯ ಬಂದು ಚೀರಾಡಿದಂತೆ ಭ್ರಾಮಕವಾಗಿದೆ ಅಂತಾರೆ.