Skip to content
FilmySphere

From the earlier FilmySphere, kept as published on 2014-11-26. It has not been updated.

Namo Bhootaatma is ready for release

ನಮೋ ಭೂತಾತ್ಮ ತೆರೆಗೆ ಸಿದ್ದ

ಎರಡು ವಾರದ ಹಿಂದೆ ‘ನಮೋ ಭೂತಾತ್ಮ’ ಹಾಡುಗಳ ಸಿಡಿ ಬಿಡುಗಡೆಯಾಗಿತ್ತು.ಈಗ ಚಿತ್ರವು ತೆರೆಗೆ ಬರಲು ಸನ್ನಿಹಿತವಾಗಿದ್ದರಿಂದ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯನ್ನು ನಿರ್ಮಾಪಕರು ಏರ್ಪಡಿಸಿದ್ದರು. ನಿರ್ಮಾಣದಲ್ಲಿ ಪಾಲುದಾರರಾದ ಕೋಮಲ್ ನಿರೂಪಣೆ ಕೆಲಸವನ್ನು ವಹಿಸಿಕೊಂಡು ತಂತ್ರಜ್ಘರ ವಿವರಣೆ ನೀಡುತ್ತಾ ಮೈಕನ್ನು ನೀಡುತ್ತಾ ಹೋದರು. ನಿರ್ಮಾಣದಲ್ಲಿ ಪಾಲುದಾರರಾದ ಎಲ್ರಿಡ್‍ಕುಮಾರ್ ಬೇರೆ ಭಾಷೆಯಲ್ಲಿ ಚಿತ್ರಗಳನ್ನು ನಿರ್ಮಿಸಿದ್ದು ಕನ್ನಡದಲ್ಲಿ ಮೊದಲ ಪ್ರಯತ್ನವಾಗಿದ್ದರಿಂದ ಅದ್ಬುತ ಚಿತ್ರದಲ್ಲಿ ಕೈ ಹಾಕಿದ್ದಕ್ಕೆ ಸಂತಸಕ್ಕೆ ಕಾರಣವಾಗಿತ್ತು. ನೃತ್ಯ ನಿರ್ದೇಶಕನಾಗಿದ್ದ ನನಗೆ ಕರೆದು ನಿರ್ದೇಶನ ಮಾಡಲು ಕೋಮಲ್ ಅವಕಾಶ ಕೊಟ್ಟಿದ್ದಾರೆ. ಹಿನ್ನಲೆ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್.ಚಿತ್ರವು ನನಗೆ ವೇದಿಕೆ ಎಂದು ನಾಯಕನ ಗುಣವನ್ನು ಹೊಗಳಿದರು ಮುರಳಿ.ಕೋಮಲ್ ನಟನೆಯನ್ನು ಮೋಹನ್‍ಲಾಲ್‍ಗೆ ಹೋಲಿಸಿದ್ದು ಸಂಗೀತ ನಿರ್ದೇಶಕ ಫರಾನ್‍ರೋಶನ್. ತಮಿಳಿನಲ್ಲ್ಲಿ ನಟಿಸಿದ ಪಾತ್ರವನ್ನು ಕನ್ನಡದಲ್ಲಿ ಮಾಡಿರುವ ನಳಿನಿಕಾಂತ್ ಚಿತ್ರವು ಖಂಡಿತ ಹಿಟ್ ಆಗುತ್ತದೆ ಎಂಬ ಭವಿಷ್ಯವಾಣಿ ಅವರದು. ಕನ್ನಡ ಚಿತ್ರರಂಗದಲ್ಲಿ ಭೂತಾತ್ಮ ಕ್ರಾಂತಿ ಆಗುತ್ತದೆ ಅಂತಾರೆ ನಾಯಕಿ ಐಶ್ವರ್ಯ. ಕ್ಲೈಮಾಕ್ಸ್‍ನಲ್ಲಿ ಕಾಣುವ ನಟಿ ಅನೇಶ್ವರ ನನ್ನ ಪಾತ್ರ ದೆವ್ವ ಎಂದರು. ನಾಲ್ಕು ಹಾಡುಗಳನ್ನು ರಚಿಸಿದ ಬಗ್ಗೆ ವಿವರ ಬಿಚ್ಚಿಟ್ಟರು ಸಾಹಿತಿ ಹೃದಯಶಿವ. ವಿನಾಯಕಜೋಷಿ ತಮ್ಮ ಪಾತ್ರದ ಬಗ್ಗೆ ಮಾತು ಹಂಚಿಕೊಂಡರು. ಎಲ್ಲರ ನಂತರ ಮಾತಿಗಿಳಿದ ಕೋಮಲ್ ಒಂದು ಸೀನಿನಲ್ಲಿ ಅಭಿನಯಿಸುವಾಗ ನನಗೆ ಗೊತ್ತಿಲ್ಲದಂತೆ ನಗು ಬಂತು. ಮೇನಕಾದಲ್ಲಿ ನಮ್ಮ ಚಿತ್ರ ಬಿಡುಗಡೆ ಮಾಢಬೇಕೆಂದು ಯೋಜನೆ ಹಾಕಿಕೊಂಡಿದ್ದೇವು. ವಾಸ್ತು ಸರಿಯಿಲ್ಲದ ಕಾರಣ ಹಿಂದಕ್ಕೆ ಸರಿಯಬೇಕಾಯಿತು. ಅಲ್ಲದೆ ತೂಗದೀಪ ಹಂಚಿಕೆಯವರು ಚಿತ್ರಮಂದಿರವನ್ನು ಬಿಟ್ಟುಕೊಡಲು ಕೋರಿಕೊಂಡರು. ಅದೇ ರೀತಿ ಅಂಬರೀಷ ಚಿತ್ರದಲ್ಲಿ ಟ್ರೈಲರ್ ಹಾಕಲು ದರ್ಶನ್ ಅವಕಾಶ ಮಾಡಿಕೊಟ್ಟಿದ್ದರಿಮದ ಪ್ರಚಾರ ಹೆಚ್ಚಾಗಿ ಬೇಡಿಕೆ ಬಂದಿದೆ. ತ್ರಿಭುವನ್ ಚಿತ್ರಮಂದಿರ ಮುಂಬಾಗದಲ್ಲಿ ಕಲಾನಿರ್ದೇಶಕ ಮೋಹನ್.ಬಿ.ಕರೆ ಚಿತ್ರದ ಗಮನ ಸೆಳೆಯಲು ಸೆಟ್ ಹಾಕುತ್ತಿದ್ದಾರೆ.ಸ್ಯಾಟಲೈಟ್ ಹಕ್ಕುಗಳನ್ನು ಯಾರಿಗೂ ಕೊಟ್ಟಿಲ್ಲ. ನನ್ನ ಕ್ಯಾರಿಯರ್‍ನಲ್ಲಿ ಅದ್ಬುತ ಸಿನಿಮಾ ಅಂತ ಘಂಟಾಘೋಷವಾಗಿ ಹೇಳಬಲ್ಲೆ. ತುಂಬ ನೊಂದಿದ್ದೀನಿ. ಮಾದ್ಯಮದವರು ಸಹಕಾರ ನೀಡಬೇಕೆಂದು ಅಲವತ್ತು ಮಾಡಿಕೊಂಡಾಗ ಅವರು ದುಗಡದಲ್ಲಿ ಇರುವುದು ಎದ್ದು ಕಾಣುತ್ತಿತ್ತು.ಸುಮಾರು ನೂರ ಇಪ್ಪತ್ತು ಕೇಂದ್ರದಲ್ಲಿ ಶುಕ್ರವಾರದಂದು ಬಿಡುಗಡೆಯಾಗಲಿದೆ.