From the earlier FilmySphere, kept as published on 2014-12-05. It has not been updated.
Buguri Song shooting
ಬುಗುರಿ ಕುಂಬಳಕಾಯಿ
ಗಣೇಶ್ ಅಭಿನಯದ ಇಪ್ಪತ್ತೈದನೆ ಚಿತ್ರ ‘ಬುಗರಿ’ ಸತತ ಎಂಬತ್ತು ದಿವಸಗಳ ಕಾಲ ಬೆಂಗಳೂರು, ಮಲೇಶಿಯಾ, ಮಂಗಳೂರು, ಮಲ್ಪೆ ನಿಟ್ಟೆ ಕಾಲೇಜು,ಯಲ್ಲಾಪುರ, ಕುಮುಟ ಇತರೆ ಆಗರಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಳೆ ಸ್ವಲ್ಪ ಅಡ್ಡಿ ಬಂದರೂ ಚಿತ್ರಕ್ಕೆ ತೊಂದರೆಯಾಗದೆ ಯಶಸ್ವಿಯಾಗಿ ಮುಗಿಸಿದೆ. ಒಂದು ಹಾಡಿನ ಚಿತ್ರೀಕರಣ ಬಾಕಿ ಇರುವುದರಿಂದ ಮಲೇಶಿಯಾ ಗೀತೆಗೆ ಸರಿ ಹೊಂದುವಂತೆ ರಾಕ್‍ಲೈನ್ ಸ್ಟುಡಿಯೋದಲ್ಲಿ ಮೂರು ಭಿನ್ನ ರೀತಿಯ ಸೆಟ್‍ನ್ನು ಹಾಕಿದ್ದಾರೆ. ಮುರಳಿ ನೃತ್ಯ ನಿರ್ದೇಶನದಲ್ಲಿ ನಾಲ್ಕು ರಷ್ಯನ್ ಡ್ಯಾನ್ಸ್‍ರೊಂದಿಗೆ ಗಣೇಶ್ ಮತ್ತು ನಾಯಕಿ ಎರ್ರಿಕಾಫರ್ನಾಂಡಿಸ್ ಹೆಜ್ಜೆ ಹಾಕಿದರೆ ಬುಗಿರಿಗೆ ಕುಂಬಳಕಾಯಿ ಒಡೆಯಲಾಗುತ್ತದಂತೆ.ಐದು ಗೀತೆಗಳಿಗೆ ಕವಿರಾತ್ ರಚಿಸಿದ್ದು ಇನ್ನು ಒಂದು ಸೇರಿಕೊಳ್ಳುವ ನಿರೀಕ್ಷೆ ಇದೆ. ಉಳಿದ ಹಾಡುಗಳಿಗೆ ಕಲೈ, ಮತ್ತು ಹೊಸಬ ಕಲ್ಪನಾಶಾಂತಿ ಕೋರಿಯೋಗ್ರಾಫರ್ ಕೆಲಸ ಮಾಡಿದ್ದಾರೆ.
ಜಗದೀಶ್ ವಾಲಿ, ರಮೇಶ್‍ಬಾಬು ಮತ್ತು ಕೃಷ್ಣಕುಮಾರ್ ಛಾಯಗ್ರಾಹಕರು.ಪಾತ್ರಕ್ಕಾಗಿ ಗಣೇಶ್ ಸ್ಕೇಟಿಂಗ್ ಮತ್ತು ಕುದರೆ ಸವಾರಿ ಕಲಿತುಕೊಂಡಿದ್ದು, ಫೈಟ್ ದೃಶ್ಯದಲ್ಲಿ ಸ್ಕೇಟಿಂಗ್ ಸಹಕಾರಿಯಾಗಿದೆಯಂತೆ. ಮಲೇಶಿಯಾ ಕನ್ನಡತಿಯಾಗಿ ನಟಿಸಿರುವ ಎರ್ರಿಕಾಫರ್ನಾಡೀಸ್‍ಗೆ ಎರಡನೆ ಚಿತ್ರ. ಗಣೇಶ್‍ರನ್ನು ನಾಯಕರನ್ನಾಗಿ ಪರಿಚಯಿಸಿದ ಎಂ.ಡಿ.ಶ್ರೀಧರ್ ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿ ಪಾಲುದಾರರು. ಗೋಪಾಲಕೃಷ್ಣರಿಗೆ ನಿರ್ಮಾಣ ಮೊದಲ ಪ್ರಯತ್ನ. ದಿನಕರ್‍ತೂಗದೀಪ ಹಂಚಿಕೆಯನ್ನು ಪಡೆದುಕೊಂಡಿದ್ದಾರೆ.