From the earlier FilmySphere, kept as published on 2014-12-04. It has not been updated.
Love in Mandya Success Meet
ಲವ್ ಇನ್ ಮಂಡ್ಯಾ ನಲಿವಿನ ಗಿರಿ
‘ಲವ್ ಇನ್ ಮಂಡ್ಯಾ’ ಚಿತ್ರದ ಮೂಲಕ ಹ್ಯಾಟ್ರಿಕ್ ನಿರ್ಮಾಪಕರಾಗಿರುವ ಉದಯ್ ಮೆಹ್ತಾ ಸಂತೋಷ ಕೂಟದಲ್ಲಿ ಮೈಕ್ ತೆಗೆದುಕೊಂಡು ಮಾದ್ಯಮದವರ ಸಹಕಾರ, ತಂತ್ರಜ್ಘರ ಶ್ರಮದಿಂದ ಚಿತ್ರವು ಯಶಸ್ಸು ಕಂಡಿದೆ. ಹೊಸಬರಿಗೆ ಅವಕಾಶ ಕೊಟ್ಟಿದ್ದು ಸಾರ್ಥಕವಾಗಿದೆ ಎಂದರು. ಇಷ್ಟಕ್ಕೆ ಸುಮ್ಮನಾಗದ ಪತ್ರಕರ್ತರು ಕಲೆಕ್ಷನ್ ಬಗ್ಗೆ ಕೆದಕಿದಾಗ ಇವತ್ತು ಇಷ್ಟು ಖುಷಿಯಾಗಿದ್ದೇನೆ ಎಂದರೆ ಅಸಲು ಬಂದಿದೆ ಎಂಬರ್ಥ. ಮೊದಲ ವಾರದಲ್ಲೆ ನಾನು ಹಾಕಿದ ದುಡ್ಡು ಬಂದಿದೆ. ಮುಂದಿನ ವಾರದಿಂದ ಹೆಚ್ಚಿನ ಚಿತ್ರಮಂದಿರದಲ್ಲಿ ಚಿತ್ರವು ಪ್ರದರ್ಶನವಾಗಿಲಿದೆ ಎಂದರು. ಬಿಡುಗಡೆ ಮುಂಚೆ ದುಗಡದಿಂದ ಕಾಣಿಸುತ್ತಿದ್ದ ಸಾಹಿತಿ,ನಿರ್ದೇಶಕ ಅರಸುಅಂತಾರೆ ಇಂದು ಸಿನಿಮಾ, ತಂಡದ ಕೆಲಸ ಮಾತನಾಡಿಸುತ್ತಿದೆ. ಒಳ್ಳೆ ಸ್ವಮೇಕ್ ಚಿತ್ರವನ್ನು ಗೆಲ್ಲಿಸಿದ್ದಾರೆ. ಮೊದಲ ಪ್ರಯತ್ನಕ್ಕೆ ತಕ್ಕಬೆಲೆ ಬಂದಿದೆ ಎಂಬುದು ಅವರ ಸಂತೋಷದ ನುಡಿ. ದೃಶ್ಯ ಸಿನಿಮಾ ನಂತರ ಸಕ್ಸಸ್ ಚಿತ್ರ ಎನಿಸಿಕೊಂಡಿರುವುದು ನಮ್ಮ ಸಿನಿಮಾ ಅದಕ್ಕೆ ಖುಷಿ. ಈ ಚಿತ್ರದ ಮುಖಾಂತರ ಹೊಸ ರೂಪದಲ್ಲಿ ಹೊರಗೆ ಬಂದಿದ್ದೇನೆ. ಸೋತ ನನಗೆ ಅವಕಾಶ ಕೊಟ್ಟಿದ್ದಕ್ಕೆ ನಿರ್ಮಾಪಕರಿಗೆ ಕೃತಜ್ಘತೆ ಅರ್ಪಿಸಿದರು ನೀನಾಸಂ ಸತೀಶ್. ತಡವಾಗಿ ಸೇರಿಕೊಂಡ ಸಿಂಧೂಲೋಕನಾಥ್ ಕತೆ,ಸಂಗೀತ ಮತ್ತು ಮಾದ್ಯಮದವರ ವಿಮರ್ಶೆಯಿಂದ ಗೆಲುವು ಕಂಡಿದೆ ಅಂತಾರೆ. ಹದಿನೆಂಟು ಚಿತ್ರಗಳಿಗೆ ಸಂಗೀತ ನೀಡಿರುವ ಅನೂಪ್‍ಸೀಳನ್‍ಗೆ ಮೊದಲಬಾರಿ ಸಕ್ಸಸ್ ಮೀಟ್‍ನಲ್ಲಿ ಭಾಗಿಯಾಗಿದ್ದು ತೃಪ್ತಿತಂದಿದೆಯಂತೆ. ಪುಟಾಣಿಗಳಾದ ಮಂಜುನಾಥ್ ಮತ್ತು ಭಾವನಾ ಸಂತಸದಲ್ಲಿ ಭಾಗಿಯಾಗಿದ್ದರು.