Skip to content
FilmySphere

From the earlier FilmySphere, kept as published on 2014-12-01. It has not been updated.

Shivam Audio Release

ನಿರ್ಮಾಪಕರ ನಾಯಕ ನಟ ಶಿವಣ್ಣ, ಉಪೇಂದ್ರ

ಬಹು ಕೋಟಿ ವೆಚ್ಚದ ನಿರೀಕ್ಷಿತ ಚಿತ್ರ ‘ಶಿವಂ’ ಹಾಡುಗಳು ಇತ್ತೀಚೆಗೆ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು. ಸೆನ್ಸಾರ್ ಅಧ್ಯಕ್ಷ ನಾಗರಾಜಸ್ವಾಮಿ ಈ ನಡುವೆ ಚಿತ್ರಗಳನ್ನು ಕಟ್ ಮಾಡುವುದು ಅಲ್ಲದೆ ಎಡಿಟ್ ಮಾಡುವ ಪ್ರಸಂಗ ಬಂದಿದೆ. ಸರ್ಕಾರ ಮಾರ್ಗಸೂಚಿಯನ್ವಯ ಚಿತ್ರವನ್ನು ಸೆನ್ಸಾರ್ ಮಾಡಲಾಗುತ್ತದೆ ಹೂರತು ನಿರ್ಮಾಪಕರಿಗೆ ಉಪಟಳ ಕೊಡೊಲ್ಲ ಎಂದರು.ಚಿತ್ರರಂಗ ಕಷ್ಟದಲ್ಲಿದೆ, ನಿರ್ಮಾಪಕರು ಉಳಿದರೆ ನೂರಾರು ಜನರಿಗೆ ಕೆಲಸ ಸಿಗುತ್ತದೆ. ಉಪ್ಪಿ,ಶಿವು ನಿರ್ಮಾಪಕರನ್ನು ಸ್ನೇಹಿತರಂತೆ ನೋಡುತ್ತಾರೆ ಇವರ ಗುಣ ಎಲ್ಲರಿಗೂ ಬರಬೇಕು ಎಂಬುದು ಅಕಾಡಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಮಾತು.ನಿರ್ಮಾಪಕರ ಹೆಸರಿನಲ್ಲೆ ಸಿಆರ್ ಇದೆ. ಅಂದರೆ ಕ್ರೋರ್. ನಮ್ಮಲ್ಲಿ ಕ್ರೋರ್ ಇಲ್ಲದೆ ಇದ್ದರೂ ಹೃದಯದಲ್ಲಿ ಕ್ರೋರ್ ಸಂಪಾದಿಸಿದ್ದಾರೆ.ನಿರ್ಮಾಪಕರು ನಂದಾದೀಪವನ್ನು ತಂದಾಗ ಅದನ್ನು ಕಡೆಯತನಕ ಬೆಳಗಿಸುವ ಜವಬ್ದಾರಿ ನಮ್ಮದು ಎಂಬ ಕಿವಿಮಾತು ಹೇಳಿದ್ದ್ದು ಲಹರಿವೇಲು.

ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬರುತ್ತಿರುವಾಗ ಸಚಿವ ಡಿಕೆ.ಶಿವಕುಮಾರ್, ಸಂಸದ ಚೆಲುವರಾಯಸ್ವಾಮಿ, ಶಾಸಕ ಜಮೀರ್‍ಅಹ್ಮದ್‍ಖಾನ್ ಆಗಮಿಸಿದರು. ಗತ ಕಾಲದಲ್ಲಿ ರಾಜಕೀಯ ವ್ಯಕ್ತಿಗಳನ್ನು ಒಳ್ಳೆಯವರಂತೆ ತೋರಿಸುತ್ತಿದ್ದರು. ಈಗ ಕಳ್ಳನಂತೆ ಬಿಂಬಿಸುತ್ತಿದ್ದಾರೆ ಅಂತ ತುಸು ಬೇಸರಗೊಂಡ ಸಚಿವರು ಚಿತ್ರಕ್ಕೆ ಶುಭ ಹಾರೈಸಿದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ನಿರ್ಮಾಪಕರ ನಾಯಕ ನಟ ಶಿವು,ಉಪ್ಪಿ ಅಂತ ಬಣ್ಣಿಸಿದರು. ಆಗಮಿಸಿದ ಗಣ್ಯರನ್ನು ನೋಡಿದ ಶಿವಣ್ಣ ಇಡೀ ಚಿತ್ರರಂಗ ಇಲ್ಲಿ ಬಂದಿದೆ.ಮನಸ್ಸು ಶುದ್ದಿ ಇದ್ದರೆ ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ಬರುತ್ತಾರೆ. ನನ್ನ ಇಮೇಜ್‍ಗೆ ಓಂಕಾರ ಹಾಕಿದ್ದೆ ಉಪೇಂದ್ರ. ಅದಕ್ಕೆ ಓಂ ಚಿತ್ರ ಇಂದಿಗೂ ಗುಯ್ ಅನ್ನುತ್ತಿದೆ ಎಂದರು. ಸತ್ಯಂ ಎನ್ನುವುದು ನಿರ್ಮಾಪಕರು. ಶಿವಂ ಚಿತ್ರದಲ್ಲಿ ಸುಂದರವಾದ ಕ್ಲೈಮಾಕ್ಸ್ ಇದೆ ಎಂಬುದು ಉಪೇಂದ್ರ ಉವಾಚ. ನಾಯಕಿ ರಾಗಿಣಿ,ಸಂಗೀತ ನಿರ್ದೇಶಕ ಮಣಿಶರ್ಮರಿಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಕೆ.ಕಲ್ಯಾಣ್, ನಾಗೇಂದ್ರಪ್ರಸಾದ್, ಸೌತ್ ಇಂಡಿಯನ್ ಫಿಲಿಂ ಅಧ್ಯಕ್ಷ ರವಿಕೊಟ್ಟಾರಕರ್, ವಜ್ರಕಾಯ ನಾಯಕಿ ತಾರುಣ್ಯ, ವಾಣೀಜ್ಯ ಮಂಡಳಿ ಪದಾದಿಕಾರಿಗಳು ಉಪಸ್ತಿತರಿದ್ದರು. ಒಂದೂವರೆ ವರ್ಷದಿಂದ ಚಿತ್ರಕ್ಕಾಗಿ ಹದಿನೈದು ಕೋಟಿ ಸುರಿದಿದ್ದಾರೆ ಸಿ.ಆರ್.ಮನೋಹರ್. ಹಬ್ಬದ ವಾತವರಣದಲ್ಲಿ ಸಿಟಿಮಾರ್ಕೆಟ್‍ನ್ನು ಕಲ್ಪಸಿಕೊಂಡಂತೆ ಸಮಾರಂಭವು ಅದೇ ರೀತಿ ಇತ್ತು.