Skip to content
FilmySphere

From the earlier FilmySphere, kept as published on 2014-11-25. It has not been updated.

Ka Film Press Meet

ಕೊಕನಕ ಮಕನಕ

‘ಕ’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ,ನಿರ್ಮಾಪಕ ಸಾಯಿ ಮತ್ತು ಅವರ ತಂಡವನ್ನು ಛಾಯಗ್ರಾಹಕರು ಚಿತ್ರದ ಶೀರ್ಷಿಕೆಯನ್ನು ಹಲವು ಬಾರಿ ಹೇಳಿಸಿ ಸುಸ್ತು ಮಾಡಿಸಿದ್ದರು. ಚಿತ್ರದ ತುಣುಕುಗಳನ್ನು ತೋರಿಸಲು ಹೋದಾಗ ಅದು ಕೈಕೊಟ್ಟಿತ್ತು. ಕೊನೆಗೆ ಮೈಕ್ ತೆಗೆದುಕೊಂಡ ಸಾಯಿಗೆ ಅಲ್ಲೂ ಅಡಚಣೆ ಬಂತು. ಇಂತಹುದೆ ಹಲವು ಬವಣೆಗಳನ್ನು ಎದುರಿಸಿ ಚಿತ್ರವನ್ನು ಮುಗಿಸಿದ್ದೇನೆ ಅಂತ ಖೇದದಿಂದ ಹೇಳಿಕೊಂಡ ನಿರ್ದೇಶಕರು ಚಿತ್ರದ ಕುರಿತು ಹೇಳುತ್ತಾ ಹೋದರು. ಪ್ರೇಮಿಗಳ ದಿನದಂದು ಬೆಳಿಗ್ಗೆಯಿಂದ ರಾತ್ರಿವರೆಗೆ ನಡೆಯುವ ಕತೆಯಲ್ಲಿ ಯುವಕರು ತಮ್ಮ ಪ್ರೇಮವನ್ನು ಹೇಳಲು ಯಾವ ರೀತಿ ಪರಿತಪಿಸುತ್ತಾರೆ. ಇದರಲ್ಲಿ ಯುವಕರು, ಮಧ್ಯವಯಸ್ಕರು, ಹಿರಿಯರು ಸಹ ಪಾಲ್ಗೋಂಡಿದ್ದಾರೆ. ಇದನ್ನು ಭಿನ್ನವಾಗಿ ಎಲ್ಲರಿಗೂ ಅರ್ಥವಾಗುವಂತೆ ತೋರಿಸಿದ್ದೇನೆ ಎಂಬುದು ಅವರ ಒಕ್ಕಣೆ.

ಪ್ರದರ್ಶನಗಳನ್ನು ನಡೆಸಲಾಗಿದೆ. ಡಿಸೆಂಬರ್‍ನಲ್ಲಿ ಚಿತ್ರೀಕರಣ ಶುರುಮಾಡಿ ಹಾಢುಗಳನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಮೂವತ್ತೆರಡು ಹೊಸ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕ ಅಕ್ಷರವನ್ನು ಏತಕ್ಕಾಗಿ ಇಡಲಾಗಿದೆ ಎಂಬುದು ಕ್ಲೈಮಾಕ್ಸ್‍ನಲ್ಲಿ ಗೊತ್ತಾಗಲಿದೆ. ಶ್ರೀ ಸಂಕಲನ, ಗಣೇಶ್ ಸಂಗೀತ ನಿರ್ದೇಶಕ ಮತ್ತು ಡಿಸೈನರ್ ಆಗಿದ್ದ ಸಾಯಿಗೆ ನಿರ್ದೇಶನ ಮೊದಲ ಪ್ರಯತ್ನ. ಮಗನ ಪಸೆಗೆ ನಿರ್ದೇಶಕ ಸಾಯಿಪ್ರಕಾಶ್ ಹಣ ಹೊಂದಿಸಿಕೊಟ್ಟಿದ್ದಾರೆ. ಡಿಸೆಂಬರ್ ಐದರಂದು ಚಿತ್ರವು ಬಿಡುಗಡೆಯಾಗಲಿದೆ.