From the earlier FilmySphere, kept as published on 2014-12-01. It has not been updated.
Jai Bajarangbali kannada movie ready for release
ಬಿಡುಗಡೆ ಹೊಸ್ತಿಲಿನಲ್ಲಿ ಜೈ ಭಜರಂಗಬಲಿ
ಒಂದೂವರೆ ವರ್ಷದ ಹಿಂದೆ ಮಹೂರ್ತಗೊಂಡ ‘ಜೈ ಭಜರಂಗಬಲಿ’ ಚಿತ್ರವು ಆಮೆ ಗತಿಯಲ್ಲಿ ಚಿತ್ರೀಕರಣ ಮುಗಿಸಿ ತೆರೆಗೆ ತರುವ ಹಂತಕ್ಕೆ ಬಂದಿದೆ. ಇದರ ಸಂಬಂದ ತಂಡವು ಚಿತ್ರದ ಬಗ್ಗೆ ಸವಿವರವಾಗಿ ತಿಳಿಸಲು ಮೊದಲ ಬಾರಿ ಮಾಧ್ಯಮದವರನ್ನು ಭೇಟಿ ಮಾಡಿತು. ಚಿತ್ರ ಶುರುವಾದಾಗ ಅಜಯ್‍ರಾವ್ ಈಗ ಕೃಷ್ಣಅಜಯ್‍ರಾವ್ ಆಗಿದ್ದು ಸಿನಿಮಾ ಬಿಡುಗಡೆ ಆಗುತ್ತಿರುವುದೆ ಖುಷಿಯಂತೆ.ನಿನ್ನೆ, ಇಂದು, ನಾಳೆಯ ಕಾಲದ ಮಹಿಮೆ ಗೊತ್ತಿಲ್ಲದ ಅವನಿಗೆ ಬದುಕಬೇಕು ಎಂಬ ಪಸೆ ಬರುತ್ತೆ.ಅದು ಎಲ್ಲಿಯೂ ಮೋಸಮಾಡದಂತೆ. ಈ ಪಯಣದಲ್ಲಿ ಹೋಗುವಾಗ ನಾಯಕಿ ಆಕಸ್ಮಿಕವಾಗಿ ಸಿಗುತ್ತಾಳೆ.ಇಂತಹ ಸಂದ್ಗಿದ ಸ್ಥಿತಿಯಲ್ಲಿ ಇಬ್ಬರೂ ಪಾರಾಗುತ್ತಾರಾ ಎಂಬುದು ಕತೆಯ ತಿರುಳು. ಪವರ್ ಪ್ಯಾಕೇಜೆಡ್ ಲವ್ ಸ್ಟೋರಿಯಲ್ಲಿ ಗ್ಲಿಸಿರನ್ ಹಾಕದೆ ನಟಿಸಿರುವ ಏಕೈಕ ಚಿತ್ರ ಅಂತಾರೆ. ಸಂಗಮ ನಂತರ ಆಕ್ಷನ್ ಕಟ್ ಹೇಳಿರುವ ರವಿವರ್ಮಗುಬ್ಬಿಗೆ ಲೇಟ್ ಆದರೂ ಲೇಟಸ್ಟ್ ಆಗಿದೆಯಂತೆ. ಸಾಂಪ್ರತ ಚಿಕ್ಕ ಚಿಕ್ಕ ನೈಜ ಘಟನೆಗಳನ್ನು ಹೆಕ್ಕಿಕೊಂಡು ಚಿತ್ರಕತೆ ರೂಪಸಿದ್ದಾನೆ ಎಂಬುದು ಅವರ ಸ್ಪಷ್ಟನೆ.
ನಾಯಕಿ ಸಿಂಧೂಲೋಕನಾಥ್ ಒಪ್ಪಿಕೊಂಡಾಗ ಮೂರನೆ ಚಿತ್ರವಾಗಿತ್ತು.ಬಿಡುಗಡೆಯಾಗುವ ಹೊತ್ತಿಗೆ ಹದಿಮೂರಕ್ಕೆ ದಾಟಿದೆ. ಸಿನಿಮಾ ಬಿಡುಗಡೆಯಾಗುವುದಿಲ್ಲ ಅಂದುಕೊಂಡಿದ್ದರಂತೆ. ವಿಲಕ್ಷಣ ಸಂಭಾಷಣೆ ಬರೆದಿರುವ ಪತ್ರಕರ್ತ ವಿನಾಯಕರಾಮ್‍ಕಲಗಾರು ಮಾತನಾಡುತ್ತಾ ಆಕ್ಷನ್ ಚಿತ್ರವಾಗಿದ್ದು ನೋಡಿದ ಮೇಲೆ ವಿಕ್ಸ್ ಆಕ್ಷನ್ ಗುಳಿಗೆ ಬೇಕಾಗಿಲ್ಲ ಹಾಗಯೇ ತಡವಾದ ಚಿತ್ರಗಳೆಲ್ಲಾ ಹಿಟ್ ಆಗಿದೆ ಅಂತ ಹೆಸರುಗಳನ್ನು ನಮೂದಿಸುತ್ತಾರೆ. ಬಿಡುಗಡೆ ನಂತರ ಸಂಬಾಷಣೆ ಬಗ್ಗೆ ಲೇಖನ ಬರೆಯುವುದು ಗ್ಯಾರಂಟಿ ಎನ್ನುವುದು ನಿರ್ದೇಶಕರ ಗುಣಗಾನ. ಯೋಜರಾಜ್‍ಭಟ್ ರಚಿಸಿರುವ ಮೂರು ಹಾಢುಗಳಿಗೆ ಹರಿಕೃಷ್ಣ ಸಂಗೀತ ಸಂಯೋಜಸಿದ್ದಾರೆ. ಹೂಸೂರು ಮೂಲದ ವಿಜಯ್‍ಪಾಲ್‍ರಾಜ್ ನಿರ್ಮಾಪಕರು. ತೂಗದೀಪ ಹಂಚಿಕೆಯವರು ನೂರ ಇಪ್ಪತ್ತೈದು ಕೇಂದ್ರಗಳಲ್ಲಿ ಡಿಸೆಂಬರ್ ಹನ್ನೆರಡರಂದು ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕೂ ಮುನ್ನ ಚಿತ್ರದ ಮೂರು ಹಾಡು ಮತ್ತು ಟ್ರೈಲರ್ ತೋರಿಸಲಾಯಿತು.