Skip to content
FilmySphere

From the earlier FilmySphere, kept as published on 2014-12-01. It has not been updated.

Prajwal Devraj's new movie

ಪ್ರಜ್ವಲ್ ದೇವರಾಜ್ ಈಗ ಚಾಲಾಕಿ

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಒಂಬತ್ತು ವರ್ಷದಲ್ಲಿ ಇಪ್ಪತ್ತಮೂರು ಚಿತ್ರದಲ್ಲಿ ನಟಿಸಿದ್ದಾರೆ ಪ್ರಜ್ವಲ್‍ದೇವರಾಜ್.ಆದರೂ ಒಂದು ಹಿಟ್ ಚಿತ್ರ ಇವರ ಖಾತೆಗೆ ಜಮೆ ಆಗಿಲ್ಲ. ಹೋಂ ಪ್ರೊಡಕ್ಷನ್‍ನಿಂದ ನಿರ್ಮಾಣಗೊಂಡ ನೀನಾದೆನಾ ಚಿತ್ರವು ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಕಮರ್ಷಿಯಲ್ ಆಗಿ ಸೇಫ್ ಅಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆಯಂತೆ. ನಟನೆ ಮಾಡಿದರೆ ಅಂತರಾಳ ಗೊತ್ತಾಗುತ್ತಿರಲಿಲ್ಲ. ನಿರ್ಮಾಣ ಮಾಡಿದಾಗ ನನ್ನ ಇಮೇಜ್ ಎಲ್ಲಯತನಕ ಇದೆಯೆಂದು ತಿಳಿದುಕೊಂಡಿದ್ದೇನೆ ಅಂತಾರೆ.ಹೊಸಬರಿಗೆ ಅವಕಾಶ ನೀಡಿದ್ದು ತಪ್ಪು ಮಾಡಿದೆ ಅಂತ ಅನಿಸಿದೆ.ಮುಂದೆ ಸ್ವಾರ್ಥಕ್ಕಾದರೂ ಒಳ್ಳೆ ಕತೆ, ಉತ್ತಮ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡು ನಟಿಸುವ ಇರಾದೆ. ಸವಾಲ್ ಚಿತ್ರವನ್ನು ಒಪ್ಪಿಕೊಂಡಿದ್ದು ದೊಡ್ಡ ತಪ್ಪು ಮಾಡಿದೆ ಎಂಬುದು ಗೊತ್ತಾಗಿದೆ.ಇನ್ನು ಮುಂದೆ ಅಂತಹ ಪ್ರಯತ್ನಕ್ಕೆ ಫುಲ್‍ಸ್ಟಾಪ್. ಮೃಗಶಿರ ಮುಗಿದಿದೆ.ಅರ್ಜುನದಲ್ಲಿ ಅಪ್ಪನ ಜೊತೆಗೆ ಎರಡನೆ ಬಾರಿ ನಟಿಸಿದ್ದೇನೆ.ಅವರು ಪೋಲಿಸ್ ನನಗೆ ಕಳ್ಳನ ಪಾತ್ರ ಅಂತ ನಕ್ತಾರೆ.

ಛಾಯಗ್ರಾಹಕ ಸೆಂದಿಲ್ ಬ್ಯುಸಿ ಇರುವ ಕಾರಣ ದಿಲ್‍ಕರಾಜ ಸದ್ಯಕ್ಕೆ ನಿಂತಿದೆ. ಜಂಬೂಸವಾರಿ ನಿರ್ದೇಶನ ಮಾಡಿದ ವೇಣು ಹೇಳಿದ ಕತೆ ಇಷ್ಟವಾಗಿದೆ. ಚಾಲಾಕಿ ಚಿತ್ರದ ಹೆಸರು. ಪಾತ್ರದಲ್ಲಿ ಪೋಲಿಸರಿಂದಲೇ ಮಾಮೂಲಿ ವಸೂಲಿ ಮಾಡುತ್ತಾನೆ. ಅಲ್ಲದೆ ಜಾಸ್ತಿ ಬಿಲ್ಡ್‍ಅಪ್, ಇಮೇಜ್‍ಗೆ ಸ್ಕೋಪ್ ಇದೆ. ಹೈದರಾಬಾದಿನ ಪ್ರವೀಣ್ ನಿರ್ಮಾಪಕರು. ಹೊಸ ವರ್ಷವನ್ನು ಅಪ್ಪನ ಸ್ನೇಹಿತರೊಂದಿಗೆ ಆಚಿರಿಸುತ್ತೇನೆ. ಅಮಿತಾಬ್‍ಬಚ್ಚನ್, ತಮಿಳು ನಟ ವಿಜಯ್ ಸಾಕಷ್ಟು ವರ್ಷ ಸೈಕಲ್ ಹೊಡೆದ ಮೇಲೆ ಯಶಸ್ವಿ ನಟ ಎನಿಸಿಕೊಂಡಿದ್ದಾರೆ. ಅದರಂತೆ ಮುಂದೆ ನನಗೂ ಒಳ್ಳೆ ಕಾಲ ಬರಬಹುದು. ಅದಕ್ಕಾಗಿ ಹೊಂಗನಸುನಿಂದ ಕಾಯುತ್ತಿದ್ದೇನೆ. ಜವಬ್ದಾರಿಯುತ ಸ್ಥಾನ ಬಂದಾಗ ಮದುವೆ ಬಗ್ಗೆ ಯೋಚನೆ ಎಂಬುದು ಪ್ರಜ್ವಲ್ ದೇವರಾಜು ಅನುಭೂತಿ ಮಾತು.