Skip to content
FilmySphere

From the earlier FilmySphere, kept as published on 2014-12-01. It has not been updated.

Mrugashira Audio Released

ಮೃಗಶಿರ ಹಾಡುಗಳ ಹಬ್ಬ

ಭೂಪಟದಲ್ಲಿ ಕಾಣಿಸದ ಸ್ಥಳ ಕುಂದಾಪುರ ಸಮೀಪ ತೊಂಬಟ್ಟು ನಕ್ಸಲ್‍ಪೀಡಿತ ಆಗರದಲ್ಲಿ ಚಿತ್ರೀಕರಣಗೊಂಡ ‘ಮೃಗಶಿರ’ ಚಿತ್ರದಲ್ಲಿ ಹೆಸರು ಹೇಳುವಂತೆ ಅಲ್ಲಿ ಹೂರಗಿನ ಪ್ರಪಂಚ ತಿಳಿಯದೆ ಕಾಡು ಮೃಗಗಳಂತೆ ವಾಸಮಾಡುವ ಜನರು ಅಲ್ಲಿಗೆ ಯಾರೆ ಹೋದರೂ ಸಾಯಿಸುತ್ತಾರೆ. ಆಟೋ ಚಾಲಕನಾದ ನಾಯಕ ಪ್ರಜ್ವಲ್‍ದೇವರಾಜ್ ಆಕಸ್ಮಿಕವಾಗಿ ಕಾಡಿನಲ್ಲಿ ಸಿಕ್ಕಿಕೊಂಡಾಗ ಪೂರ್ವಜನ್ಮದ ನೆನಪು ಬರುತ್ತದೆ. ಅದು ಏನು ಅವನು ಉಳಿತಾನಾ ಎಂಬುದನ್ನು ತೆರೆ ಮೇಲೆ ನೋಡಬೇಕಂತೆ. ಬಿ.ಸುರೇಶ್ ಅಪ್ಪನ ಪಾತ್ರ ನಿರ್ವಹಿಸಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರ ಶಿಷ್ಯ ಶ್ರೀವತ್ಸ ಕತೆ,ಚಿತ್ರಕತೆ ಮತ್ತು ಚೂಚ್ಚಲಬಾರಿಗೆ ನಿರ್ದೇಶನದ ಗಾದಿ ವಹಿಸಿಕೊಂಡಿದ್ದಾರೆ.ಉಗ್ರಂ ಖ್ಯಾತಿ ರವಿಬಸ್ರೂರು ಎರಡು ಹಾಡಿಗೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ಉಳಿದಂತೆ ಮೂರು ಹಾಡುಗಳಿಗೆ ಯೋಗರಾಜಭಟ್, ತ್ಯಾಗರಾಜು, ಅಶೋಕ್ ನೀಲಾವರ್ ಪೆನ್ನು ಕೆಲಸ ಮಾಢಿದೆ.

ಹಳ್ಳಿ ಹುಡುಗಿ ಮುಗ್ದಳಂತೆ ಕಾಣಿಸಿಕೊಂಡಿರುವ ನಾಯಕಿ ಮಾನಸ ಮತ್ತು ಛಾಯಗ್ರಾಹಕ ಶ್ರೀನಿವಾಸರಾಮಯ್ಯರಿಗೆ ಮೊದಲ ಚಿತ್ರ. ಒಂದು ಗೀತೆಗೆ ಅರ್ಜುನ್‍ಜನ್ಯಾ ಶಿಷ್ಯನ ಸಂಗೀತಕ್ಕೆ ಕಂಠದಾನ ಮಾಡಿದ್ದಾರೆ. ಚಿತ್ರರಂಗದ ಸಂವೇದನಾಶೀಲ ಇಲ್ಲದೆ ಛಾಯಗ್ರಾಹಕ,ಸಂಗೀತ ನಿರ್ದೇಶಕರ ಸಹಕಾರದಿಂದ ಹಣ ಖರ್ಚು ಮಾಡಿದ್ದಾರೆ ಚನ್ನಪ್ಪ. ಇತ್ತೀಚೆಗೆ ಚಿತ್ರದ ಸಿಡಿಯನ್ನು ನಟ ದೇವರಾಜ್. ಲಹರಿವೇಲು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಸಾಧುಕೋಕಿಲ, ಅವಿನಾಶ್, ವೀಣಾಸುಂದರ್ ನಟನೆ ಇದೆ.