Skip to content
FilmySphere

From the earlier FilmySphere, kept as published on 2014-11-22. It has not been updated.

Huccha Venkat Press Meet

ಹುಚ್ಚ ವೆಂಕಟ್ ಹಾಜರ್

ಅಂದು ಕೊಂಡಂತೆ ‘ಹುಚ್ಚ ವೆಂಕಟ್’ ಚಿತ್ರವು ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದಲ್ಲಿ ರೌಡಿಸಂ ಇದ್ದರೂ ಪ್ರೀತಿ, ಫ್ಯಾಮಲಿ ಸೆಂಟಿಮೆಂಟ್ ಹೇರಳವಾಗಿದೆ.ರೌಡಿಸಂಗೆ ಹೋದರೆ ಏನಾಗುತ್ತದೆ ಅಂತ ಕ್ಲೈಮಾಕ್ಸ್‍ನಲ್ಲಿ ಸಂದೇಶದ ಮೂಲಕ ಹೇಳಲಾಗುತ್ತದೆ. ಹಿರಿಯ ನಟಿ ಜಯಲಕ್ಷೀ ನಾಯಕನ ತಾಯಿ, ಅದೇ ರೀತಿ ಸುದರ್ಶನ್ ಮತ್ತು ಶೈಲ ನಾಯಕಿಯ ತಂದೆ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲೇಜು ಪ್ರೋಫೆಸರ್ ಆಗಿ ಕಾಣಿಸಿಕೊಂಡಿರುವ ರಮೇಶ್‍ಭಟ್, ಸಣ್ಣ ಪಾತ್ರದಲ್ಲಿ ಅಭಿನಯಿಸಿರುವ ಉಮೇಶ್ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರಂತೆ. ನಾಯಕ, ನಾಯಕಿ ಹಾಗೂ ತಂದೆ ಪಾತ್ರವನ್ನು ಸಿನಿಮಾ ಮುಗಿಯುವವರೆಗೂ ಕಾಡುತ್ತದೆ. ತಂದೆ ತಾಯಿ ಬಿಟ್ಟು ಪ್ರೀತಿಸಿದವ ಜೊತೆಗೆ ಹೋದರೆ ಎಂತಹ ಅನಾಹುತವಾಗುತ್ತದೆ ಎಂಬುದನ್ನು ತೋರಿಸಿದ್ದಾರಂತೆ. ಯಾರೂ ಊಹೆ ಮಾಢಿದ ರೀತಿಯಲ್ಲಿ ಕ್ಲೈಮಾಕ್ಸ್‍ನ್ನು ವಿಭಿನ್ನ ರೀತಿಯಲ್ಲಿ ಚಿತ್ರೀಕರಿಸಿದ್ದು, ಇದನ್ನು ನೋಡುವಾಗ ಕಣ್ಣೀರು ಬರುವುದು ಖಾತ್ರಿ ಅಂತಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಾಯಕ ಹುಚ್ಚುವೆಂಕಟ್ ರಮ್ಯಾ ಅಭಿಮಾನಿಯಾಗಿರುವ ಕಾರಣ ನಾಯಕಿಯ ಪಾತ್ರದ ಹೆಸರು ರಮ್ಯಾ ಇದೆ. ಕವಿತಾಗೆ ಚೂಚ್ಚಲ ಚಿತ್ರ. ಐದು ಹಾಡುಗಳಿಗೆ ರಾಜೇಶ್‍ರಾಮನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಗನ ಪಸೆಗೆ ವೆಂಕಟ್‍ರಾಮ್.ಎಲ್ ಹಣ ಸುರಿದಿದ್ದಾರೆ. ನವೆಂಬರ್ ಇಪ್ಪತ್ತೋಂಬತ್ತು ರಮ್ಯಾ ಹುಟ್ಟಿದಹಬ್ಬ. ಅವರಿಗೆ ಚಿತ್ರವನ್ನು ಅರ್ಪಿಸಲು ಇಪ್ಪತ್ತೆಂಟರಂದು ಸಿನಿಮಾ ಬಿಡುಗಡೆ ಆಗುತ್ತಿದೆ.