Archive.
News and reviews from the earlier FilmySphere, 2013 to 2019. They are kept as they were published and are not updated. For current stories, see the journal.
- Subramani Film Press Meet
ಸಂಭಾಷಣೆ ಇಲ್ಲದೆ ಕ್ಲೈಮಾಕ್ಸ್
ಚಿತ್ರದ ಕ್ಲೈಮಾಕ್ಸ್ನಲ್ಲಿ ನಾಯಕ ಪ್ರೀತಿಯನ್ನು ಗೆಲ್ಲುವಾಗ, ಖಳನಾಯಕನೊಂದಿಗೆ ಸೆಣೆಸಾಡುವಾಗ, ಸಂಬಂದಗಳನ್ನು ಕೂಡಿಸುವಾಗ ಜಬರ್ದಸ್ತ್ ಸಂಭಾಷಣೆಗಳನ್ನು ಹೇಳುತ್ತಾ ಪ್ರೇಕ್ಷಕರಿಂದ ಶಿಳ್ಳೆ ಹೊಡಿಸಿಕೊಳ್ಳುತ್ತಾನೆ. ಪರಂತು ‘ಸುಬ್ರಮಣಿ’ ಚಿತ್ರದಲ್ಲಿ ಕೊನೆಯ ಹದಿನೈದು ನಿಮಿಷ ಡೈಲಾಗ್ ಇಲ್ಲದೆ ಕೇವಲ ಹಾವಬಾವದಿಂದ ನಾಯಕ, ನಾಲ್ಕು ಸ್ನೇಹಿತರು ನಟಿಸುವದರೊಂದಿಗೆ ಕೊನೆಗೊಳ್ಳುತ್ತದೆ. ಅದೆ ಹೇಗೆ ವಿವರಿಸಿ ಎಂದು ಪತ್ರಕರ್ತರಿಂದ ಪ್ರಶ್ನೆ ತೂರಿಬಂದಾಗ ವಿಚಲಿತರಾಗದ ನಿರ್ದೇಶಕ ಜಿಕೆ ಚಿತ್ರ ನೋಡಿ ಅಂತ ಜಾರಿಕೊಳ್ಳುತ್ತಾರೆ. ಇದು ಹೊಸ ರೀತಿಯ ಪ್ರಯತ್ನ ಎಂದು ಹೇಳಲು ಮರೆಯಲಿಲ್ಲ. ಕತೆ,ಸಂಭಾಷಣೆ, ಚಿತ್ರಕತೆ ಜೆಕೆ ಅವರ ದು. ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಮೂರು ಹಾಢುಗಳಿಗೆ ವಿದೇಶಕ್ಕೆ ಹೋಗುವ ಇರಾದೆ ಇದೆ. ಶರತ್ಲೋಹಿತಾಶ್ವ ಹಿಜಿಡಾ ಪಾತ್ರದಲ್ಲಿ ನಟಿಸಿದ್ದು ಮತ್ತೋಂದು ವಿಶೇಷ. ನಾಯಕ ಶ್ರೀನಗರಕಿಟ್ಟಿಗೆ ನಾಲ್ಕು ರೀತಿಯ ಶೇಡ್ಗಳು ಬರುತ್ತದೆ. ಅದರಲ್ಲಿ ಎರಡು ಗೆಟಪ್ನಲ್ಲಿ ಕಾಣಿಸಿಕೊಂಡು ಪಾತ್ರಕ್ಕಾಗಿ ವಿಶೇಷ ರೀತಿಯಾಗಿ ದೇಹವನ್ನು ದಂಡಿಸಿಲ್ಲವಂತೆ. ನಾಯಕನನ್ನು ಪರಿಚಯಿಸುವ ಕನ್ನಡತನದ ಹಾಡಿಗೆ ಆಟೋವನ್ನು ಬಳಸಿಕೊಂಡು ಚಿತ್ರೀಕರಿಸಿದ ಗೀತೆಗೆ ಕಿಟ್ಟಿ ಮದನ್ಹರಣಿ ನೃತ್ಯ ನಿರ್ದೇಶನದಂತೆ ಅದ್ಬುತವಾಗಿ ಡ್ಯಾನ್ಸ್ ಮಾಡಿದ್ದಾರೆ. ದಿಶಾಪಾಂಡೆ ನಾಯಕಿ, ಪೂರ್ಣಿಮಾ ಉಪನಾಯಕಿ. ಸೀತಾರಂ ಛಾಯಗ್ರಹಣ ಮತ್ತು ಸುಜಿತ್ಶೆಟ್ಟಿ ಸಂಗೀತ ನಿರ್ದೇಶಕರು. ಅಂದುಕೊಂಡಂತೆ ಸಂಕ್ರಾತಿಗೆ ಸುಬ್ರಮಣಿ ತೆರೆಗೆ ಬರಲಿದ್ದಾನೆ.
2014-11-22
- Maadhyama Mitrara Abhinansane To Kasturi Nivasa Team
ಬಂಗಾರದ ಮನುಷ್ಯ, ಕಸ್ತೂರಿನಿವಾಸ ಹಿಂದಿಗೆ ರಿಮೇಕ್?
ಮುಂಗಾರುಮಳೆ ಚಿತ್ರವು ಅದ್ಬುತವಾಗಿ ಮೂಡಿಬಂದಿದ್ದರಿಂದ ಅಂದು ಮಾದ್ಯಮದವರು ವಿಶೇಷವಾಗಿ ನಿರ್ದೇಶಕ ಯೋಗರಾಜಭಟ್ಟರಿಗೆ ಸಣ್ಣದೊಂದು ಕಾರ್ಯಕ್ರಮವನ್ನು ಏರ್ಪಡಿಸಿ ಅಭಿನಂದನೆಯನ್ನು ಸಲ್ಲಿಸಿದ್ದರು. ಇಂದು ಕಪ್ಪುಬಿಳುಪಿನ ಚಿತ್ರವನ್ನು ಕಲರ್ ರೂಪಕ್ಕೆ ಮಾರ್ಪಡಿಸಿದ ‘ಕಸ್ತೂರಿ ನಿವಾಸ’ ಚಿತ್ರವನ್ನು ಅಭಿಮಾನಿಗಳು ಅಲ್ಲದೆ ಪ್ರೇಕ್ಷಕರು ವೀಕ್ಷಿಸಿ ಅಪ್ಪಿಕೊಂಡಿದ್ದಾರೆ. ಇದಕ್ಕಾಗಿ ತಂಡಕ್ಕೆ ಅಭಿನಂದನೆ ಸಲ್ಲಿಸಲು ಹಸಿರುಮನೆಯಲ್ಲಿ ಎಲ್ಲರನ್ನು ಸೇರಿಸಲಾಗಿತ್ತು. ರಾಜ್ಕುಮಾರ್ ಪಾತ್ರಕ್ಕಾಗಿ ವಿದೇಶದಿಂದ ತರಿಸಿದ ಬಟ್ಟೆಯಿಂದ ಒಂಬತ್ತು ಸೂಟ್ ಒಲೆಸಲಾಗಿತ್ತು. ಅಶ್ವತ್ ಹೂರತುಪಡಿಸಿ ಯಾರಿಗೂ ವಿಗ್ ಹಾಕಿಲ್ಲ. ರಾಜ್ ದೇಹ ಯೂನಿವರ್ಸಲ್ ಪ್ಯಾಕ್ ಅಂತ ನೆನಪಿನಂಗಳಕ್ಕೆ ಜಾರಿದರು ನಿರ್ಧೇಶಕ ಭಗವಾನ್. ಚಿತ್ರವನ್ನು ಸಾರ್ವಜನಿಕರೊಂದಿಗೆ ನೋಡುವಾಸೆ ಎಂಬ ಮಾತು ಜಯಂತಿ ಅವರದು. ಬಂಗಾರದ ಮನುಷ್ಯ, ಕಸ್ತೂರಿನಿವಾಸ ಹಿಂದಿಯಲ್ಲಿ ಮಾಡಲು ಸಿದ್ದ. ಆದರೆ ಹಿಮಾಲಯದಂತ ರಾಜ್ ತರಹ ಕಲಾವಿದ ಸಿಗಬೇಕು. ಮಣ್ಣಿನಿಂದ ಎದ್ದುಬಂದು ಕೆ.ಜಿರಸ್ತೆಯನ್ನು ಶೃಂಗಾರ ಮಾಡಿದ್ದಾರೆ. ಭೂಮಿ ಮೇಲೆ ಸುಂದರ್ರಾಜ್, ಷಣ್ಮುಗಂ ತಂಡವು ಕಲರ್ ರೂಪಕ್ಕೆ ತಂದಿದ್ದಾರೆ . ಇಂತಹ ರಸಘಳಗೆ ದಂಡಿದಂಡಿಯಾಗಿ ಬರಲಿ. ಆಕಾಶ ಮತ್ತು ಭೂಮಿಗೆ ನಮ್ಮ ಕಡೆಯಿಂದ ಒಂದು ಹೃದಯಪೂರ್ವಕ ಚಪ್ಪಾಳೆ ಎಂದು ಹೇಳಿಕೊಂಡಿದ್ದು ಯೋಗರಾಜಭಟ್ಟರು. ನಿರ್ಮಾಪಕ ಕೆಸಿಎನ್.ಮೋಹನ್ ಉಪಸ್ತಿತರಿದ್ದು ಅಪ್ಪ ರಾಜ್ ಮೇಲಿಟ್ಟ ಅಭಿಮಾನಿವನ್ನು ನೆನಪುಮಾಡಿಕೊಂಡರು. ಸಮಾರಂಭದಲ್ಲಿ ಪಾರಿವಾಳವನ್ನು ತೆಗೆದಾಗ ಅದು ಜಯಂತಿ,ಭಗವಾನ್ ಮತ್ತು ರಾಜ್ ಪೋಸ್ಟರ್ ಮೇಲೆ ಮಾತ್ರ ಹಾರಿ ಕುಳಿತುಕೊಂಡಿದ್ದು ಕಾಕತಾಳೀಯವಾಗಿತ್ತು.
2014-11-22
- Love u alia film news
ಎಲ್ಲರೊಳಗೊಂದಾಗು ಮಂಕುತಿಮ್ಮ
ಸ್ಟೈಲಿಶ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕತೆ,ನಿರ್ಧೇಶನದ ‘ಲವ್ ಯು ಆಲಿಯಾ’ ಚಿತ್ರೀಕರಣವು ಹನ್ನೆರಡು ದಿವಸಗಳಿಂದ ಸರಾಗವಾಗಿ ಬಾಂಬೆ,ಮೈಸೂರು, ಚೆನ್ನೈನಲ್ಲಿ ನಡೆದು ಸದ್ಯ ಬೆಂಗಳೂರಿನ ಪಂಚತಾರ ಶೆರ್ಟಾನ್ ಹೋಟೆಲ್ನಲ್ಲಿ ಬೀಡುಬಿಟ್ಟಿದೆ. ಕುಂತರೆ ನಿಂತರೆ ಅವನದೆ ಧ್ಯಾನ ಹಾಡಿಗೆ ನಾಯಕಿ ಭೂಮಿಕಾಚಾವ್ಲ ರಷ್ಯನ್ ಸಹನರ್ತಕಿಯರೊಡನೆ ಹೆಜ್ಜೆ ಹಾಕುತ್ತಿದ್ದಾಗ ರವಿಚಂದ್ರನ್ ನೋಡುತ್ತಿದ್ದ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು. ಬ್ರೇಕ್ ನೀಡಿದ ತಂಡವು ಮಾತಿಗೆ ಕುಳಿತುಕೊಂಡಿತು. ಮಾತು ಶುರು ಮಾಡಿದ ಇಂದ್ರಜಿತ್ ಇಲ್ಲಿಯವರೆಗೂ ಸಂತಸದಿಂದ ಅಂದುಕೊಂಡತೆ ಚಿತ್ರೀಕರಣ ಮುಗಿಸಲಾಗಿದೆ. ರವಿ ಸರ್ ಎಲ್ಲಾ ರೀತಿಯಿಂದ ಸಹಕಾರ ನೀಡುತ್ತಿದ್ದಾರೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರು ವಿರಾಮ ಹತ್ತಿರ ವಿದ್ದಾಗ ಬರುತ್ತಾರೆ. ಆದರೂ ಕತೆಯಲ್ಲಿ ರವಿ ಸರ್ ಪಾತ್ರ ಹೋಗುತ್ತಲೆ ಇರುತ್ತದೆ. ಹಾಡುಗಳಿಗೆ ಯರೋಪ್ಗೆ ಹೋಗುವ ಇರಾದೆ. ಅಲ್ಲಿ ಸೀನಿಯರ್ ಇರೋಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ರವಿಚಂದ್ರನ್ ಇಪ್ಪತ್ತು ವರ್ಷವಾದರೂ ಮರ ಸುತ್ತೋದು ಬಿಡೋಲ್ಲ ಅಂತ ನಿರ್ದೇಶಕರನ್ನು ಹಾಸ್ಯದಿಂದ ಕಾಲೆಳೆದು ಶೂಟಿಂಗ್ನ್ನು ಖುಷಿಯಿಂದ ಮಾಡುತ್ತಿದ್ದೇನೆ. ನನ್ನ ಪಾತ್ರಕ್ಕೆ ಹೆಚ್ಚು ತೂಕ ಕೊಟ್ಟಿದ್ದಾರೆ ಅಂತ ಶಹಬ್ಬಾಸ್ಗಿರಿಯನ್ನು ನಿರ್ದೇಶಕರಿಗೆ ಕೊಟ್ಟರು ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿರುವ ಭೂಮಿಕಾಚಾವ್ಲ ತಾಯಿ ಅಲ್ಲದೆ ವೃತ್ತಿಯಲ್ಲಿ ತನ್ನದು ಎನ್ನುವ ಭೇದ ಬಂದಾಗ ಏನಾಗುತ್ತದೆ ಅದನ್ನು ನಿರ್ದೇಶಕರು ಚೆನ್ನಾಗಿ ರೂಪಿಸಿದ್ದಾರೆ ಎಂದರು. ಕಿರುತೆರೆ ನಟ ಚಂದನ್ ಚೂಚ್ಚಲಬಾರಿ ರವಿಸರ್ ಜೊತೆಗೆ ನಟಿಸುತ್ತಿರುವುದೆ ಸಂತಸದ ವಿಷಯವಂತೆ. ಹಲವಾರು ಅವಕಾಶಗಳು ಬರುತ್ತಿದ್ದರಿಂದ ಕಿರುತೆರೆಗೆ ಅಧಿಕೃತವಾಗಿ ನಿವೃತ್ತಿ ಪಡೆಯುವ ಇಂಗಿತ ವ್ಯಕ್ತಪಡಿಸಿದರು. ರಿಚ್ ನಿರ್ದೇಶಕ, ಕನಸುಗಾರ ನಟ ಇವರಿಬ್ಬರ ಕಾಂಬಿನೇಶನ್ನಲ್ಲಿ ಛಾಯಗ್ರಹಣ ನಡೆಸುವುದು ಥ್ರಿಲ್ಲಿಂಗ್ ಆಗಿದೆ ಎಂಬ ಉಕ್ತಿ ಸಂತೋಷ್ ರೈ ಪಾತಾಜೆ ಅವರದು. ಹಾಡಿಗೆ ನೃತ್ಯ ಸಂಯೋಜನೆ ಮಾಡುತ್ತಿರುವುದು ಪ್ರದೀಪ್ಅಂಟೋನಿ.
2014-11-21
- Nagaari Movie Audio Released
ನಗಾರಿ ಹಾಡುಗಳ ಲೋಕಾರ್ಪಣೆ
ಸ್ಯಾಂಡಲ್ವುಡ್ನಲ್ಲಿ ಹೊಸ ಚಿತ್ರಗಳು, ನಿರ್ದೇಶಕ,ನಿರ್ಮಾಪಕ ಕಲಾವಿದರು ಕಾಂಗ್ರೇಸ್ ಗಿಡದಂತೆ ಬರುತ್ತಿದ್ದಾರೆ. ಇದರಲ್ಲಿ ಗಟ್ಟಿಯಾಗಿ ನಿಂತುಕೊಳ್ಳುವವರು ಕೆಲವರು ಮಾತ್ರ. ಆದರೂ ಇಲ್ಲೋಂದು ಯುವಕರ ತಂಡವೊಂದು ಸದ್ದಿಲ್ಲದೆ ‘ನಗಾರಿ’ ಎಂಬ ಚಿತ್ರವನ್ನು ಮುಗಿಸಿ ಸುದ್ದಿಮಾಡಲು ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮೂರು ಚಿತ್ರಗಳಿಗೆ ಸಹನಿರ್ದೇಶನ ಮಾಡಿದ ಅನುಭವವಿರುವ ವಿಕಾಸ್ ನಿರ್ಮಾಣ ಮಾಡುವ ಆಸೆ ಬಂದು ಕತೆ ಸಿದ್ದಪಡಿಸಿಕೊಂಡು ಹಲವು ನಿರ್ಮಾಪಕರ ಮನೆ ಬಾಗಿಲು ತಟ್ಟಿದ್ದಾರೆ. ಪ್ರಯೋಜನವಾಗದೆ ತಾನೆ ಏಕೆ ನಿರ್ಮಾಣ ಮಾಢಬಾರದು ಅನಿಸಿ ಸ್ನೇಹಿತರೊಂದಿಗೆ ಸೇರಿಕೊಂಡು ನಗಾರಿ ಹಣಹಾಕಿದ್ದೇವೆ. ಡಿಐ ಹಂತದಲ್ಲಿದೆ. ಪ್ರೀತಿ, ಗೆಳತನ ಕತೆಯ ತಿರುಳು ಎಂದರು. ನಂದೀಶ್ಗೆ ನಿರ್ದೇಶನ ಪ್ರಥಮ ಪ್ರಯತ್ನವಾಗಿದ್ದರಿಂದ ಗಲಿಬಿಲಿಯಲ್ಲಿ ಹೆಚ್ಚೇನು ಮಾತನಾಡಲಿಲ್ಲ. ಹಂಸಲೇಖಾ ದೇಸಿ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ನವನೀತ್ಶಾಮ್ ಆರು ಹಾಡುಗಳಿಗೆ ಸಂಗೀತ ಸಂಯೋಜಸಿದ್ದಾರೆ. ಹೊಸಬರಿಗೆ ಮೊದಲನಿಂದಲೂ ಅವಕಾಶ ಕಲ್ಪಿಸುತ್ತಿರುವ ಚಿತ್ರರಂಗದ ಕಾಮದೇನು ಲಹರಿವೇಲು ತಮ್ಮ ಮಾತಿನಲ್ಲಿ ಶೀರ್ಷಿಕೆ ಪವರ್ಫುಲ್ ಆಗಿದೆ. ಹಳ್ಳಿಯ ಸೊಗಡು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಇವರಿಗೆ ಒಳ್ಳೆಯದಾಗಲಿ ಎಂಬುದು ಅವರ ಶುಭಹಾರೈಕೆ. ಒಂದು ಕೋಟಿ ಇಪ್ಪತ್ತು ಲಕ್ಷದಲ್ಲಿ ಮೂಡಿ ಬಂದಿರುವ ಚಿತ್ರವು ಮದ್ದೂರು,ಸಕಲೇಶಪುರ, ಮಂಗಳೂರು, ಉಡುಪಿ, ಮಲ್ಪೆ ಆಗರಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರವು ತಂಡದಿಂದ ಕೇಳಿಬಂತು. ಅಕ್ಕ ಧಾರವಾಹಿಯಲ್ಲಿ ಬ್ಯುಸಿ ಇರುವುದರಿಂದ ನಾಯಕಿ ಅನುಪಮ ಹಾಜರಿರಲಿಲ್ಲ. ರಂಗಾಯಣರಘು, ಶರತ್ಲೋತಾಶ್ವ, ಬಿರಾದರ್ ತಾರಬಳಗದಲ್ಲಿ ಇದ್ದಾರೆ.
2014-11-18
- Creative and Unique Programmes from director's association
ನಿರ್ದೇಶಕರ ಸಂಘದಿಂದ ವಿನೂತನ ಕಾರ್ಯಕ್ರಮಗಳು
ಚಂದನವನದ ಚಿತ್ರಬ್ರಹ್ಮ ಪುಟ್ಟಣಕಣಗಾಲ್ ಹುಟ್ಟುಹಾಕಿದ ‘ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ಕ್ಕೆ ಮೂರು ದಶಕದ ಇತಿಹಾಸವಿದೆ. ಇತ್ತೀಚೆಗೆ ವಾರ್ಷಿಕ ಸಭೆ ಮತ್ತು ಚುನಾವಣೆಯಲ್ಲಿ ಹೊಸ ಸಮಿತಿಯು ರಚನೆಯಾಗಿದೆ. ಇವರುಗಳು ಹೊಸ ಹೊಸ ಯೋಜನೆಯನ್ನು ಅನುಷ್ಟಾನ ತರಲು ಇಚ್ಚಿಸಿ ಇದನ್ನು ತಿಳಿಸಲು ಮಾಧ್ಯಮದವರನ್ನು ಭೇಟಿ ಮಾಡಿದ್ದರು. ಜನವರಿ ಎರಡನೆ ವಾರದಿಂದ ಸದಸ್ಯರಿಗೆ ಆರೋಗ್ಯ ತಪಾಸಣೆ ನಡೆಸುವುದು. ದ ಡೈರಕ್ಟರ್ ಎನ್ನುವ ತ್ರೈಮಾಸಿಕ ಸಂಚಿಕೆಯನ್ನು ಹೊರ ತರವುದು. ನೂತನ ನಿರ್ದೇಶಕರುಗಳಿಗೆ ‘ನಿರ್ದೇಶನ ಕಲಿಕೆ’ ತರಗತಿ ಆರಂಭಿಸುವುದು. ಸ್ವಮೇಕ್ ನಿರ್ಮಾಪಕ,ನಿರ್ದೇಶಕರನ್ನು ಗೌರವಿಸುವುದು. ಸಂಘದ ವಾರ್ಷಿಕೋತ್ಸವದಲ್ಲಿ ಸ್ವಮೇಕ್ ಉತ್ತಮ ನಿರ್ದೇಶಕರಿಗೆ ಸನ್ಮಾನ. ಸಂಘದಿಂದ ದೂರ ವಿರುವ ಸದಸ್ಯರುಗಳು ಮತ್ತು ಪ್ರಸಕ್ತ ಹೊಸ ನಿರ್ದೇಶಕರುಗಳನ್ನು ಸಂಘಕ್ಕೆ ಆಹ್ವಾನಿಸುವುದು. ಭವಿಷ್ಯನಿಧಿ ಮತ್ತು ಕಲ್ಯಾಣನಿಧಿ ಕ್ರೂಡಿಕರಿಸುವುದು. ಎಲ್ಲವನ್ನು ತಿಳಿಸಿದ ಅಧ್ಯಕ್ಷರಾದ ಪಿ.ಎಚ್.ವಿಶ್ವನಾಥ್ ಅಕಾಡಮಿ ಸಹಯೋಗದೊಂದಿಗೆ ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದವರಿಗೆ ಜಿಲ್ಲೆಗಳಲ್ಲಿ ಚಲನಚಿತ್ರ ಸಾಹಿತ್ಯ ಕಾರ್ಯಾಗಾರ ವನ್ನು ಏರ್ಪಡಿಸುತ್ತೇವೆ. ಅಲ್ಲದೆ ಸಂಘದಲ್ಲಿ ಲೈಬ್ರರಿ, ಹಾಗೂ ವಿಡಿಯೋ ಚಿತ್ರಗಳ ಸಂಗ್ರಹವನ್ನು ಮಾಡಲಾಗುವುದು. ಸಂಘವು ಡಬ್ಬಿಂಗ್ ಸಂಸ್ಕ್ರತಿಯನ್ನು ವಿರೋಧಿಸುತ್ತೇವೆ ಎಂದಾಗ ಗೋಷ್ಟಿಯಲ್ಲಿ ಹಾಜರಿದ್ದ ಎಲ್ಲ ಪದಾದಿಕಾರಿಗಳು ಅಧ್ಯಕ್ಷರ ಮಾತಿಗೆ ದಸ್ಕತ್ ಹಾಕಿದರು.
2014-11-18
- Neenasam Satish to produce and act in Rocket
ನೀನಾಸಂ ಸತೀಶ್ ನಿರ್ಮಾಣದಲ್ಲಿ ರಾಕೆಟ್
ಚಂದನವನದಲ್ಲಿ ನೀನಾಸಂ ಸತೀಶ್ ಪ್ರವರ್ದಮಾನಕ್ಕೆ ಬರುತ್ತಿರುವ ನಟ. ಲೂಸಿಯಾ ಮೂಲಕ ಎಲ್ಲರ ಗಮನ ಸೆಳೆದ ನಂತರ ಬಂದ ತೆರೆಕಂಡ ಚಿತ್ರಗಳು ಮಂಡ್ಯಾ ಭಾಷೆಯ ಸೀಮೆಗೆ ಒಳಪಟ್ಟಿದ್ದವು. ಜರ್ಜರಿತರಾದ ಸತೀಶ್ ಇದರಿಂದ ಹೂರಬರಲು ತವಕಿಸುತ್ತಿದ್ದರು. ಅದಕ್ಕೆಂದೆ ಸ್ವಂತ ಬ್ಯಾನರ್ ಹುಟ್ಟುಹಾಕಿ ಜೊತೆಗೆ ಇಬ್ಬರು ಸ್ನೇಹಿತರನ್ನು ಜೊತೆಗೂಡಿಸಿ ‘ರಾಕೆಟ್’ ಅಡಿಬರಹದಲ್ಲಿ ನಾನ್ ಸ್ಟಾಪ್ ಲವ್ ಎಂಬ ಸಿನಿಮಾಕ್ಕೆ ನಿರ್ಮಾಣದ ಜೊತೆಗೆ ನಾಯಕ ನಟ. ಫ್ಲರ್ಟ್ ಸ್ವಭಾವದವನಾದ ನಾಯಕ ಆಕಸ್ಮಿಕವಾಗಿ ಒಂದು ಹುಡುಗಿಗೆ ಪ್ರಸ್ತಾಪ ಮಾಡುತ್ತಾನೆ ಅದರಿಂದ ಏನು ಆಗುತ್ತದೆ ಎಂಬುದು ಕಥೆಯ ತಿರುಳು. ಬೆಂಗಳೂರಿನಿಂದ ಮಡಕೇರಿಗೆ ಸಾಗುವ ಕತೆಯಲ್ಲಿ ನಾಟಕ, ಭಾವನಾತ್ಮಕ, ಮನೋಸ್ಥಿತಿ ಸನ್ನಿವೇಶಗಳು ಬರುತ್ತದೆ. ಸಂಭಾಷಣೆಗಳು ಪೂರ್ಣ ಬೆಂಗಳೂರು ಧಾಟಿಯಲ್ಲಿ ಇರುತ್ತದಂತೆ. ಸಂಪ್ರದಾಯಸ್ಥ ಹುಡುಗಿಯಂತೆ ಐಶಾನಿಶೆಟ್ಟಿ ನಾಯಕಿಯಾಗಿ ಮೂರನೆ ಚಿತ್ರ. ವಿದೇಶದಲ್ಲಿ ಎಂಎಸ್ ಮಾಡಿ ಗ್ಲಾಮರ್ ಪಾತ್ರದಲ್ಲಿ ನಟಿಸುತ್ತಿರುವ ರಾಜಶ್ರೀಪೊನ್ನಪ್ಪ ಉಪನಾಯಕಿ. ಟಿ.ಎನ್.ಸೀತಾರಾಂ,ಉಪೇಂದ್ರ ಚಿತ್ರಗಳಿಗೆ ಸಹನಿರ್ದೇಶನ ಮಾಡಿದ ಅನುಭವವಿರುವ ಶಿವಶಶಿ ಸತೀಶ್ಗೆ ಅಂತಲೆ ಕತೆ ರಚಿಸಿ ಚೂಚ್ಚಲಬಾರಿಗೆ ನಿರ್ದೇಶನದ ಪಾರುಪಥ್ಯವಹಿಸಿಕೊಂಡಿದ್ದಾರೆ. ಒಂದು ಐಟಂ, ಎರಡು ಮಲೋಡಿ, ಒಂದು ಪ್ಯಾಥೋ ಹಾಢಿಗೆ ರಾಗ ಹೊಸೆಯುತ್ತಿದ್ದಾರೆ ಪೂರ್ಣಚಂದ್ರ ತೇಜಸ್ವಿ. ಶೇಕಡ ಅರವತ್ತರಷ್ಟು ಮಡಕೇರಿ, ಉಳಿದಂತೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಎರಡು ಹೊಡೆದಾಟದ ದೃಶ್ಯಗಳಿಗೆ ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ವಿಶ್ವನಾಥ್ ಮತ್ತು ಸತೀಶ್.ಬಿ ನಿರ್ಮಾಣದಲ್ಲಿ ಪಾಲುದಾರರು.
2014-11-18
- 6-5=2 HINDI Films Review
6-5=2 ಅಂದರೆ ಮೈನಸ್ ನಲ್ಲೇ ಪ್ಲಸ್ಸು!
ಕನ್ನಡದ ಚಿತ್ರವೊಂದು ಅಪರೂಪಕ್ಕೆ ಹಿಂದಿಗೂ ರಿಮೇಕ್ ಆಗಿದೆ. ಚಿತ್ರದ ಹೆಸರಿನ ಸಮೇತ ಬಾಲಿವುಡ್ ಸೇರಿರುವ 6-5=2 ಅಲ್ಲಿ ಯಾವ ರೀತಿ ಮೂಡಿ ಬಂದಿದೆ ಎಂಬ ಕುತೂಹಲ ಮೂಲ ಚಿತ್ರವನ್ನು ಕಂಡ ಕನ್ನಡಿಗರಿಗೂ ಇದೆ. ಹೇಗಿದೆ ಎಂಬುದಕ್ಕೆ ಉತ್ತರ ಚಿತ್ರದ ಹೆಸರಿನಲ್ಲೇ ಇದೆ. ಮೂಲದಿಂದ ದೊಡ್ಡ ಮೊತ್ತವೇ ಮೈನಸ್ ಆದರೂ ರಿಸಲ್ಟ್ ನೋಡಿದಾಗ ಪಾಸಿಟಿವ್ (ಅದೂ ಹೆಚ್ಚೇ!) ಆಗಿದೆ. ಚಿತ್ರದಲ್ಲಿ ಸುಹಾನ ಮತ್ತು ಪ್ರಿಯಾ ಎಂಬ ಇಬ್ಬರು ಹುಡುಗಿಯರೊಂದಿಗೆ ಸಿದ್ಧಾರ್ಥ್, ಭಾನು ಜೈರಾಜ್, ಹರ್ಷ ಲುಲ್ಲ, ರಾಜಾ ಎಂಬ ಟೀನೇಜ್ ಹುಡುಗರು ಸೇರಿಕೊಂಡು ಎತ್ತರದ ಅರಣ್ಯ ಪ್ರದೇಶವೊಂದಕ್ಕೆ ಟ್ರೆಕ್ಕಿಂಗ್ ಹೋಗುತ್ತಾರೆ. ಅಲ್ಲಿ ಸಿದ್ಧಾರ್ಥ್ ಗೆ ಮರಕ್ಕೆ ಕಟ್ಟಿದ್ದ ತಲೆಬುರುಡೆಯೊಂದು ಕಾಣಿಸುತ್ತದೆ. ಅದನ್ನು ಕಿತ್ತು ತನ್ನೊಂದಿಗೆ ಇರಿಸಿಕೊಂಡ ನಂತರ ಅಲ್ಲಿ ಬಹಳಷ್ಟು ಅನಾಹುತಗಳು ನಡೆಯತೊಡಗುತ್ತದೆ. ಆದರೆ ಆ ಬಗ್ಗೆ ಅವರು ಅಷ್ಟಾಗಿ ಗಮನ ಹರಿಸುವುದಿಲ್ಲ. ಆದರೆ ಅರಣ್ಯದ ತುದಿ ತಲುಪಿ ಹಿಂದಿರುಗುತ್ತಿದ್ದಂತೆ ಅವರಲ್ಲಿ ಒಬ್ಬೊಬ್ಬರೇ ವಿಚಿತ್ರ ಸಾವು ಕಾಣಲಾರಂಭಿಸುತ್ತಾರೆ. ಆರುದಿನದೊಳಗೆ ಒಟ್ಟು ಐದು ಮಂದಿ ಸಾಯುವುದರೊಂದಿಗೆ ಚಿತ್ರ ಕೊನೆಯಾಗುತ್ತದೆ. ಬಾಲಿವುಡ್ ಗೆ ಇದು ಹೊಸ ಮಾದರಿಯ ಚಿತ್ರ. ಅಂದರೆ ಇಡೀ ಚಿತ್ರವನ್ನು ಟ್ರೆಕ್ಕಿಂಗ್ ಹೋದ ಸಿದ್ಧಾರ್ಥನ ಕ್ಯಾಮರಾದಲ್ಲಿ ಸೆರೆಸಿಕ್ಕ ದೃಶ್ಯಗಳಂತೆ ತೋರಿಸಲಾಗಿದೆ. ಹೊರಟ ಆರು ಮಂದಿಯಲ್ಲಿ ಅನಾರೋಗ್ಯಕ್ಕೊಳಗಾಗಿ ಅರ್ಧದಿಂದಲೇ ಮರಳಿ ಬಂದ ರಾಜಾ ಈ ಘಟನೆಯ ಬಗ್ಗೆ ಹೇಳುತ್ತಾನೆ. ಮತ್ತು ಕಾಡಿನಲ್ಲಿ ಅನಾಥವಾಗಿ ಸಿಕ್ಕ ಸಿದ್ಧಾರ್ಥನ ಕ್ಯಾಮರಾ ನಡೆದ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎಂಬುದು ನಿರ್ದೇಶಕರ ಕಾನ್ಸೆಪ್ಟ್. ಹಾಗಾಗಿ ಚಿತ್ರಕ್ಕೆ ನಿರ್ದೇಶಕರಿಲ್ಲ. ಸಿದ್ಧಾರ್ಥ ಚಿತ್ರೀಕರಿಸಿದ ನೈಜ ವೀಡಿಯೋಗಳನ್ನು ಎಡಿಟ್ ಮಾಡಿ ಪ್ರದರ್ಶಿಸಲಾಗುತ್ತಿದೆ ಎಂದು ನಿರ್ದೇಶಕ ಭರತ್ ಜೈನ್ ಹೇಳುತ್ತಾರೆ. ಇದನ್ನೇ ಮೂಲ ಚಿತ್ರದ ನಿರ್ದೇಶಕ ಕನ್ನಡದ ಪ್ರೇಕ್ಷಕರ ಮುಂದೆ ಹೇಳಿದಾಗ ನಂಬಿದವರೊಂದಿಗೆ ನಂಬಬೇಕೋ, ಬೇಡವೋ ಎಂದು ಸಂದೇಹಪಟ್ಟವರೂ ಇದ್ದರು! ಆದರೆ ಈಗ ಸತ್ಯವೇನೆಂದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಈ ಮಾದರಿಯ ಚಿತ್ರಗಳು ರಿಮೇಕ್ ಅದಾಗ ಅದೇ ಹೇಳಿಕೆಯನ್ನೇ ನಿರ್ದೇಶಕರು ರಿಮೇಕ್ ಮಾಡುವುದು ಅರ್ಥಹೀನವೆನಿಸುತ್ತದೆ! ಇನ್ನು ಮೂಲ ಚಿತ್ರ ನೋಡಿದವರಿಗೆ ಅಲ್ಲಿನ ನೈಜತೆ ಇಲ್ಲಿ ಕಾಣಿಸುವುದಿಲ್ಲ. ಆದರೆ ನಾಯಕಿಯರ ಗ್ಲಾಮರ್ ಗೆ ಕೊರತೆಯಿಲ್ಲ. ಕನ್ನಡಿಗ ಛಾಯಾಗ್ರಾಹಕ ಸತ್ಯ ಹೆಗ್ಡೆ ಛಾಯಾಗ್ರಹಣದಲ್ಲಿ ಯಾಣ ಸೇರಿದಂತೆ ಕಾಡಿನ ದೃಶ್ಯಗಳು ಚೇತೋಹಾರಿಯಾಗಿ ಕಾಣಿಸುತ್ತದೆ. ಪರದೆಯ ಮೇಲೆ ಅತೀಂದ್ರೀಯ ಶಕ್ತಿಯ ಪ್ರವೇಶವಾಗುತ್ತಿದ್ದ ಹಾಗೆ ದೃಶ್ಯಗಳು ಕಪ್ಪು ಬಿಳುಪಿಗೆ ಬದಲಾಗುವುದು; ಅಸ್ಪಷ್ಟತೆಯುಂಟಾಗುವುದು ಮತ್ತು ದೆವ್ವ ಒಂದೇ ಹೆಜ್ಜೆಯನ್ನು ಬಲವಾಗಿ ಊರಿಕೊಂಡುತೆ ಬರುವಂತೆ ನೀಡಿರುವ ಹಿನ್ನೆಲೆ ಶಬ್ಧಗ್ರಹಣ ಮೊದಲಾದವು ಆಕರ್ಷಕ. ದೆವ್ವವನ್ನು ತೋರಿಸದೆಯೇ ಭೀತಿಗೊಳಿಸುವ ನಿರ್ದೇಶಕರ ಕಲ್ಪನೆಯೂ ಮೆಚ್ಚತಕ್ಕದ್ದು. ರಾಜನಾಗಿ ಗೌರವ್ ಪಾಸ್ವಾಲ ಮತ್ತು ಲುಲ್ಲನಾಗಿ ಗೌರವ್ ಕೊಠಾರಿ ಮನಸೆಳೆಯುತ್ತಾರೆ. ದೆವ್ವದ ಸಿನೆಮಾ ಎಂದ ಮೇಲೆ ಕತೆಯೊಳಗೆ ಲಾಜಿಕ್ ಹುಡುಕುವುದರಲ್ಲಿ ಅರ್ಥವಿಲ್ಲ. ಚಿತ್ರದಲ್ಲಿ ಹಿಂಸೆಗೆ ಹೇಗೆ ಆದಷ್ಟು ಕಡಿವಾಣ ಹಾಕಲಾಗಿದೆಯೋ ಅದೇ ರೀತಿ ಅಸಭ್ಯ ಸಂಭಾಷಣೆಗಳಿಗೂ ಲಗಾಮು ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಏನೇ ಇದ್ದರೂ ಥ್ರಿಲ್ಲರ್ ಚಿತ್ರವನ್ನು ಇಷ್ಟಪಡುವವರಿಗೆ ಇದು ಖಂಡಿತಾ ಮನರಂಜನೆ ಒದಗಿಸುತ್ತದೆ.
2014-11-15
- Mirchi Mandakki Kadak Chai_Film Audio Release
ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಹಾಡುಗಳ ಬಿಡುಗಡೆ
ಸಂಜೋತಾ ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ ಮಿರ್ಚಿ ಮಂಡಕ್ಕಿ ಕಡಕ್ ಚಾಯ್. ಚಿತ್ರದ ಸೀಡಿ ಬಿಡುಗಡೆಯನ್ನು ಬೆಲ್ ನಲ್ಲಿ ನೆರವೇರಿಸಲಾಯಿತು. ಖ್ಯಾತ ನಿರ್ದೇಶಕ ಮತ್ತು ಸಂಜೋತಾರ ಆದರ್ಶ ಟಿ.ಎಸ್ ನಾಗಾಭರಣ ಸೀಡಿಗಳನ್ನು ಬಿಡುಗಡೆಗೊಳಿಸಿದರು. ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸಂಜೋತಾ ಮಹೇಶ್ ರಾವ್, ಶಶಾಂಕ್ ಮೊದಲಾದವರಿಗೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹಾಗಾಗಿ ಸಮಾರಂಭಕ್ಕೆ ಅವರು ತಮ್ಮ ಗುರುಗಳನ್ನು ಕೂಡ ಆಹ್ವಾನಿಸಿದ್ದು, ಶಶಾಂಕ್ ಹಾಜರಾಗಿದ್ದರು. ತನಗೆ ಒಂದೇ ಚಿತ್ರದಲ್ಲಿ ಸಹಾಯಕಿಯಾಗಿದ್ದರೂ ಬಳಿಕ ಚಿತ್ರವೊಂದನ್ನು ನಿರ್ಮಿಸಿ, ನಿರ್ದೇಶಿಸುವ ಮಟ್ಟಿಗೆ ಬೆಳೆದಿರುವುದರಿಂದ ಈಕೆ ಗುರುವನ್ನು ಮೀರಿಸಿದ ಶಿಷ್ಯೆ ಎಂದರು. ಸಾಮಾನ್ಯವಾಗಿ ಹೊಸಬರು ಸ್ಟಾರ್ ಗಳನ್ನೇ ಗುರಿಯಾಗಿಸಿಕೊಂಡು ಕತೆ ಮಾಡುತ್ತಾರೆ. ಆದರೆ ಹೊಸಬರ ತಂಡವನ್ನೇ ಕಟ್ಟಿಕೊಂಡು ಬಂದಿರುವ ಈಕೆಗೆ ನಿಜಕ್ಕೂ ಸಾಧಕಿ ಎಂದು ಅವರು ಹೊಗಳಿದರು. ಸಂಗೀತ ನಿರ್ದೇಶಕ ಹರಿಕಾವ್ಯ ಹೆಚ್ಚೇನೂ ಮಾತನಾಡಲಿಲ್ಲ. ಅವರ ಪೂರ್ತಿ ಹೆಸರು ಹರೀಶ್ ಮತ್ತು ಪತ್ನಿ ಕಾವ್ಯಳ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡು ಹರಿಕಾವ್ಯವಾಗಿದ್ದಾರೆಂಬ ಮಾಹಿತಿ ದೊರೆಯಿತು. ಚಿತ್ರದ ಮೂಲಕ ನಾಯಕನಾಗಿ ನಟಿಸುತ್ತಿರುವ ಕಿರುತೆರೆ ಪ್ರತಿಭೆ ಪ್ರದೀಪ್ ಬಡೆಕ್ಕಿಲ 'ಚಿತ್ರಕ್ಕಾಗಿ ನಾನು ಒಂದು ಹಾಡನ್ನೂ ಹಾಡಿದ್ದೇನೆ' ಎಂದು ಸಂಭ್ರಮಿಸಿದರು. ಚಿತ್ರದ ಗೀತರಚನೆಕಾರರಲ್ಲಿ ಒಬ್ಬರಾದ ಕೆ.ಕಲ್ಯಾಣ್ 'ಸಂಜೋತಾ ನೋಡಲು ಮಾತ್ರ ಸೌಮ್ಯವಾಗಿದ್ದಾರೆ. ಆದರೆ ಕೆಲಸ ತೆಗೆಯುವ ವೇಳೆ ಟೆರರ್ ಆಗಿ ಮುನ್ನುಗ್ಗುತ್ತಾರೆ' ಎಂದರು. ಸೈಕಾಲಜಿ ಮುಗಿಸಿರುವ ನಮ್ರತಾಗೂ ಇದು ನಟನೆಯ ಪ್ರಥಮ ಅನುಭವವಂತೆ. ಚಿತ್ರದಲ್ಲಿ ಅವರು ಕಡಕ್ ಚಾಯ್ ನ ಸ್ವಭಾವವನ್ನು ಪ್ರತಿನಿಧಿಸುವುದಾಗಿ ತಿಳಿಸಿದರು. ಮಂಡಕ್ಕಿಯಾಗಿ ನಟಿಸಿರುವ ಸಚಿನ್ ಮಾತನಾಡಿ ತನ್ನದು ಸೈಲೆಂಟ್ ಪಾತ್ರ ಎಂದರು. ಮಂಡಕ್ಕಿಗೆ ಎದುರಾಗಿ ಬರುವ ಪಾತ್ರದಲ್ಲಿ ಅಪೂರ್ವ ನಟಿಸಿದ್ದಾರೆ. ಮತ್ತೋರ್ವ ನಾಯಕಿ ನಿಮಿಷಾ ತಾನು ಮಿಸ್ ಕೇರಳ ಆಗಿದ್ದೆನೆಂದು ಹೇಳಿದರು. ವಿಶಾಲ್ ಮುದ್ದು ಕೃಷ್ಣನ ಪಾತ್ರದಲ್ಲಿ ನಟಿಸಿದ್ದು ಹೆಸರಿಗೆ ತಕ್ಕಂತೆ ತಮ್ಮ ಪಾತ್ರ ಮುದ್ದಾಗಿದೆ ಎಂದರು. ಮಗನ ಮದುವೆ ತಯಾರಿ ಸೇರಿದಂತೆ ಇನ್ನಿತರ ಗಡಿಬಿಡಿಯಲ್ಲಿದ್ದ ನಾಗಾಭರಣ್ ಸರಳವಾಗಿ ಟ್ರ್ಯಾಕ್ ಸೂಟಲ್ಲಿ ಆಗಮಿಸಿ ತಂಡಕ್ಕೆ ಶುಭಕೋರಿ ಸೀಡಿ ಬಿಡುಗಡೆಗೊಳಿಸಿದರು.
2014-11-15
- Pyar ka Goal Gumbaz movie audio has been released
ಪ್ಯಾರ್ ಕಾ ಗೋಲ್ ಗುಂಬಜ್ ಚಿತ್ರದ ಸೀಡಿ ಬಿಡುಗಡೆ
ಕೊಟ್ಳಲ್ಲಪ್ಪೋ ಕೈ ಚಿತ್ರದ ನಾಯಕ ಧನುಶ್ ಪ್ಯಾರ್ ಕ ಗೋಲ್ ಗುಂಬಜ್ ಎಂಬ ಚಿತ್ರದ ಮೂಲಕ ಜಗತ್ತಿನ ಮತ್ತೊಂದು ಅದ್ಭುತವನ್ನು ತೋರಿಸಲು ಮುಂದಾಗಿದ್ದಾರೆ. ಚಿತ್ರದ ಕಾನ್ಸೆಪ್ಟ್ ಬಗ್ಗೆ ಗೊತ್ತಿಲ್ಲವಾದರೂ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಸಂಗೀತ, ಗೀತರಚನೆ, ಗಾಯನದ ಜೊತೆಗೆ ಛಾಯಾಗ್ರಹಣದೊಂದಿಗೆ ಧ್ವನಿ ಮುದ್ರಿಕೆಯನ್ನು ತಮ್ಮದೇ ಸಂಸ್ಥೆಯ ಮೂಲಕ ಮಾರುಕಟ್ಟೆಗೆ ತಂದು ದಾಖಲೆ ಸಷ್ಠಿಸಿದ್ದಾರೆಂದೇ ಹೇಳಬಹುದು. ಚಿತ್ರಕ್ಕೆ ಹಿಂದಿಯಲ್ಲೊಂದು ಹೆಸರು ಅದರ ಕೆಳಗೆ ಸಪ್ತಸ್ವರಗಳ ಪ್ರೀತಿಯ ಪ್ರತಿಧ್ವನಿ ಎಂಬ ಸಬ್ ಟೈಟಲ್ ಜೊತೆಗೆ ಮೊಹಬತ್ ಕ ಪೀಚೆ ಎಂಬ ಹಿಂದಿ ಸಬ್ ಟೈಟಲನ್ನೂ ಇಟ್ಟಿದ್ದಾರೆ. ಜೊತೆಗೆ ನಾನು ಸ್ಟಾರ್ ಅಲ್ಲ ಜನಗಳ ಸೇವಕ ಎಂಬ ಸ್ಲೋಗನ್ ಕೂಡ ಇದೆ. ಚಿತ್ರ ಸೀಡಿ ಬಿಡುಗಡೆಗೊಳಿಸಲು ಆಗಮಿಸಿದ್ದ ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡುತ್ತಾ 'ನಾನು 1983ರ ಹಿಂದೆ ವರ್ಷಕ್ಕೆ 80ರಷ್ಟು ಚಿತ್ರಗಳನ್ನು ನೋಡುತ್ತಿದ್ದೆ. ಈಗ ನೋಡೋದೇ ಅಪರೂಪ. ಇಲ್ಲಿ ಬಿಡುಗಡೆ ಮಾಡಿದ ಹಾಡು ಮತ್ತು ಟ್ರೇಲರ್ ನಲ್ಲಿ ನಾಯಕ ಮದ್ಯಪಾನಿಯಾಗಿರುವುದನ್ನು ತೋರಿಸಲಾಗಿದೆ. ಅದು ಎಷ್ಟು ಸರಿ ತಪ್ಪು ಎಂಬುದನ್ನು ಚಿತ್ರ ನೋಡದೇ ಹೇಳಿದರೆ ತಪ್ಪಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು. ನಾಯಕ ಧನುಶ್ ನ ಅಣ್ಣ ನಾಗರಾಜ್ ನನ್ನ ಆತ್ಮೀಯ ಹಾಗಾಗಿ ಸೀಡಿ ಬಿಡುಗಡೆಗೊಳಿಸಲು ಬಂದಿದ್ದೇನೆ ಎಂದರು ಸುರೇಶ್ ಕುಮಾರ್. ಬೆಂಗಳೂರಿನ ಉಪಮೇಯರ್ ರಂಗಣ್ಣ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಕ್ಷೇತ್ರದ ಹುಡುಗನ ಸಿನೆಮಾ ಕ್ಷೇತ್ರದ ಬೆಳವಣಿಗೆಗೆ ಶುಭ ಕೋರಿದರು. ' ಸುರೇಶ್ ಕುಮಾರ್ ರಂಥ ರಾಜಕಾರಣಿಗಳು ನಿಜವಾದ ಸಮಾಜ ಸೇವೆ ಮಾಡುತ್ತಾರೆ. ಆದರೆ ನಾನು ಚಿತ್ರದ ಮೂಲಕ ಸಮಾಜ ಸೇವೆ ಮಾಡುವ ಸೇವಕ' ಎಂದ ಧನುಶ್ ತಮ್ಮ ಸ್ಲೋಗನ್ ಗೆ ಅರ್ಥ ನೀಡಲು ಪ್ರಯತ್ನಿಸಿದರು. ಚಿತ್ರದ ನಾಯಕಿ ಪೂರ್ಣಿಮಾಗೆ ಇದು ಪ್ರಥಮ ಚಿತ್ರವಾಗಿದ್ದು ನಿರ್ದೇಶಕರು ಆಡಿಷನ್ ನಡೆಸಿ ತನ್ನನ್ನು ಆರಿಸಿರುವುದಾಗಿ ತಿಳಿಸಿದರು. ನಾಯಕಿಯ ಮಾವನ ಪಾತ್ರದಲ್ಲಿ ನಟಿಸಿರುವ ನಕುಲ್ ಸೇರಿದಂತೆ ಛಾಯಾಗ್ರಹಣದಲ್ಲಿ ತನಗೆ ನೆರವಾದ ಗಂಗು ಮತ್ತು ಕೆ.ಕೆಯವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು ಧನುಶ್.
2014-11-14
- Rukku movie muhurtham
'ರುಕ್ಕು' ಚಿತ್ರಕ್ಕೆ ಮುಹೂರ್ತ
ಬಸವರಾಜ್ ಬಳ್ಳಾರಿ ನಿರ್ದೇಶನದ ಮೂರನೇ ಚಿತ್ರ 'ರುಕ್ಕು' ವಿಗೆ ಆರ್.ಟಿ ನಗರದ ಸಾಯಿಬಾಬ ದೇಗುಲದಲ್ಲಿ ಮುಹೂರ್ತವಾಯಿತು. ಬಸವರಾಜ್ ಎರಡನೆಯದಾಗಿ ನಿರ್ದೇಶಿಸತೊಡಗಿದ್ದ 'ಬಿಳಿಹಾಳೆ' ಚಿತ್ರದ ತಂಡವನ್ನೇ ಇದರಲ್ಲಿಯೂ ಬಳಸಿಕೊಂಡಿದ್ದಾರೆ. ಇವರು ಪ್ರಥಮದಲ್ಲಿ ನಿರ್ದೇಶಿಸಿದ್ದ ಸೀನ ಎಂಬ ಚಿತ್ರ ವರ್ಷಗಳ ಹಿಂದೆ ತೆರೆಕಂಡಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು. ಚಿತ್ರದ ನಾಯಕ ಶ್ರೇಯಸ್ ತಂದೆಯೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷದಿಂದ ತ್ರಿನೇತ್ರ ರಂಗಭೂಮಿಯಲ್ಲಿ ಕಲಾವಿದನಾಗಿ ತೊಡಗಿಸಿಕೊಂಡ ಅನುಭವ ಅವರಿಗಿದೆ. ಚಿತ್ರದಲ್ಲಿ ಜಮೀನ್ದಾರನ ಮಗನಾಗಿ ನಟಿಸುತ್ತಿದ್ದಾರೆ. ನಾಯಕಿ ರುಕ್ಕುವಾಗಿ ಬಳ್ಳಾರಿಯ ಬೆಡಗಿಯ ಪಾತ್ರದಲ್ಲಿ ರಶ್ಮಿತಾ ನಟಿಸಿದ್ದಾರೆ. ಸಂಕಲನಕಾರ ನಾಗೇಂದ್ರ ಅರಸ್ ಸಂಕಲನದ ಜೊತೆಗೆ ನಟನಾಗಿಯೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದರು. ಥ್ರಿಲ್ಲರ್ ಮಂಜು ತಮ್ಮ ಸಾಹಸ ಪ್ರದರ್ಶನಕ್ಕಿರುವ ಎರಡು ಆ್ಯಕ್ಷನ್ ದೃಶ್ಯಗಳಲ್ಲಿ ಒಂದನ್ನು ರಾತ್ರಿಯ ರೈನ್ ಎಫೆಕ್ಟ್ ನಲ್ಲಿ ಮಾಡಲಾಗುವುದೆಂಬ ಥ್ರಿಲ್ ಹಂಚಿಕೊಂಡರು. ಛಾಯಾಗ್ರಾಹಕ ರೇಣು ಚಿತ್ರಕ್ಕೆ ರೆಡ್ ಎಪಿಕ್ ಕ್ಯಾಮರಾ ಬಳಸುತ್ತಿರುವುದಾಗಿ ತಿಳಿಸಿದರು. ಚಿತ್ರವೊಂದು ಸಾಧಾರಣ ಪ್ರೇಮಕತೆಯಾದರೂ ಕ್ಲೈಮ್ಯಾಕ್ಸ್ ನಲ್ಲಿ ವಿಭಿನ್ನತೆ ತೋರಿಸುವುದಾಗಿ ಹೇಳಿದ ನಿರ್ದೇಶಕರು ಅಲ್ಲಿಯವರೆಗೆ ಸಾಧುಕೋಕಿಲಾರ ಹಾಸ್ಯ ದೃಶ್ಯಗಳ ಮೂಲಕ ಚಿತ್ರವನ್ನು ಸಾಗಹಾಕುವುದಾಗಿ ಹೇಳಿದರು! ರಮೇಶ್ ಪಾಟೀಲ್ ಎಂಬ ಹೊಸಬರು ಸಂಭಾಷಣೆ ಬರೆದಿರುವ ಚಿತ್ರಕ್ಕೆ ರವೀಶ್ ರಾಜ್ ಸಂಗೀತವಿದೆ. ಬೆಂಗಳೂರು, ಮಡಿಕೇರಿಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ತಂಡದ್ದಾಗಿದೆ.
2014-11-14
- Nani Movie shooting started
ಚಿತ್ರೀಕರಣವಾರಂಭಿಸಿದ 'ನಾನಿ'
ತಾಯಿಯಾಗಿ ಸುಹಾಸಿನಿ ಬ್ರಾಹ್ಮಿ ಮುಹೂರ್ತದಲ್ಲಿ ಮನೆಗೆ ಬರುವುದಾಗಿ ಹೇಳಿದ ಅಘೋರಿ ಸನ್ಯಾಸಿಯ ಸ್ವಾಗತದಲ್ಲಿ ನಿರತಳಾಗಿರುತ್ತಾಳೆ ಚಿತ್ರದ ನಾಯಕಿ. ಶುಚಿರ್ಭೂತೆಯಾಗಿ ಬಂದು 5,000 ದೀಪಗಳನ್ನು ಹಚ್ಚಿ ಸ್ವಾಗತಿಸುವ ಆಕೆಯಲ್ಲಿ ಬೇರೊಂದು ಮಗುವಿನ ಆತ್ಮ ಆವಾಹಿತಗೊಂಡಿದೆಯೆಂಬುದು ಎಲ್ಲರ ಮಾತಾಗಿರುತ್ತದೆ. ಆರಂಭದಲ್ಲಿ ಅದನ್ನು ನಂಬಿರದ ಪತಿಗೂ ಇದನ್ನೆಲ್ಲ ನೋಡುತ್ತಿದ್ದ ಹಾಗೆ ನಿಧಾನಕ್ಕೆ ವಿಶ್ವಾಸ ಮೂಡತೊಡಗುತ್ತದೆ. ಅಘೋರಿ ಸನ್ಯಾಸಿಯನ್ನು ಸ್ವಾಗತಿಸುತ್ತಾ ನಾಯಕಿ ಗೀತೆಯೊಂದನ್ನು ಹಾಡುವ ಮತ್ತು ಅದನ್ನು ಆಕೆಯ ಪತಿರಾಯ ನೋಡುವ ಸನ್ನಿವೇಶದ ಚಿತ್ರೀಕರಣವನ್ನು ಬಾಲಣ್ಣನ ಅಭಿಮಾನ್ ಸ್ಟುಡಿಯೋ ಸೆಟ್ ನಲ್ಲಿ ಚಿತ್ರೀಕರಿಸಲಾಯಿತು. ಅಲ್ಲಿಗೆ ಭೇಟಿ ನೀಡಿದ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಚಿತ್ರದ ಬಗ್ಗೆ ತಂಡದವರು ಮಾತುಕತೆ ನಡೆಸಿದರು. 'ಇದು ಇಂದು ಚಿತ್ರದ ಮುಹೂರ್ತ ನಡೆದ ಬಳಿಕ ನಡೆಸುತ್ತಿರುವ ಪ್ರಥಮ ದೃಶ್ಯದ ಚಿತ್ರೀಕರಣವಾಗಿದ್ದು ಚಿತ್ರದ ನಾಯಕನಾಗಿ ಶ್ರವಂತ್ ಮತ್ತು ಆತನ ಪತ್ನಿಯಾಗಿ ಪ್ರಿಯಾಂಕ ರಾವ್ ನಟಿಸುತ್ತಿದ್ದಾರೆಂದು' ನವ ನಿರ್ದೇಶಕ ರಾಘವೇಂದ್ರ ಗೊಲ್ಲಹಳ್ಳಿ ತಿಳಿಸಿದರು. ಆದರೆ ಚಿತ್ರವು ಮುಖ್ಯ ಕಥಾಪಾತ್ರವಾದ 'ನಾನಿ'ಯ ಸುತ್ತ ಗಿರಕಿ ಹೊಡೆಯಲಿದ್ದು ನಾನಿಯಾಗಿ ಬಣ್ಣದ ಕೊಡೆ ಚಿತ್ರದ ಖ್ಯಾತಿಯ ಬಾಲನಟಿ ಬೇಬಿ ಸುಹಾಸಿನಿ ನಟಿಸುತ್ತಿರುವುದಾಗಿ ಹೇಳಿದರು. 30 ವರ್ಗಳ ಹಿಂದೆ ಗುಜರಾತ್ ನಲ್ಲಿ ಹುಟ್ಟಿದ ಟೆಸ್ಟ್ ಟ್ಯೂಬ್ ಬೇಬಿಯೊಂದು ಅದರ 13ನೇ ವಯಸ್ಸಿನಲ್ಲಿ ದಾರುಣವಾಗಿ ಕೊಲೆಯಾಗುತ್ತದೆ. ಅದರ ಬಳಿಕ ಆ ಮಗುವಿದ್ದ ಬೃಹತ್ ಬಂಗಲೆಯನ್ನು ಹಾಗೆಯೇ ಬೀಗಹಾಕಿದ್ದರು. ಅದಷ್ಟು ನೈಜ ಕತೆಯಾಗಿದ್ದರೆ, ಅಲ್ಲಿ ನಾನಿ ದೆವ್ವವಾಗಿ ಸುತ್ತಾಡುತ್ತಾಳೆಂಬುದು ಸ್ಥಳೀಯರ ನಂಬಿಕೆಯಾಗಿತ್ತು. ಇದೀಗ ಚಿತ್ರಕ್ಕಾಗಿ 17 ವರ್ಷಗಳ ಬಳಿಕ ಗುಜರಾತ್ ನ ಆ ಮನೆಯ ಬಾಗಿಲನ್ನು ತೆರೆದು ಚಿತ್ರೀಕರಣ ನಡೆಸುವ ಸಾಹಸಕ್ಕೆ ಚಿತ್ರತಂಡ ಕೈ ಹಾಕಿದೆ. ಅದೇ ರೀತಿ ಚಿತ್ರಕ್ಕೆ ಬೇಕಾಗಿ ಚಿಕ್ಕಮಗಳೂರಿನ ಹಳೆಯ ಬ್ರಿಟಿಷ್ ಪ್ಯಾಲೇಸ್ ಒಂದರಲ್ಲಿಯೂ ಚಿತ್ರೀಕರಣ ನಡೆಸಲಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ನಾನಿಯ ತಂದೆ ತಾಯಿಯ ಪಾತ್ರದಲ್ಲಿ ಸುಹಾಸಿನಿ ಮಣಿರತ್ನಂ ಮತ್ತು ತಂದೆಯಾಗಿ ಜೈಜಗದೀಶ್ ನಟಿಸುತ್ತಿರುವುದು ವಿಶೇಷ. ಅಂದಹಾಗೆ ಬಂಧನದ ಜೋಡಿ ಇಲ್ಲಿ ಮತ್ತೆ ಒಂದಾಗುತ್ತಿದೆ. ಸಕಲೇಶಪುರದಲ್ಲೊಂದು ಕಡೆ 500ಜನ ಡ್ಯಾನ್ಸರ್ಸ್ ನ ಬಳಸಿಕೊಂಡು ಬೃಹತ್ ಶಿವನ ವಿಗ್ರಹದೆದುರು ನರ್ತಿಸುವ ಸಂದರ್ಭವನ್ನೂ ಮುಂದಿನ ಹಾಡೊಂದರಲ್ಲಿ ಬಳಸಿಕೊಳ್ಳಲಾಗುವುದಂತೆ. ಇದಕ್ಕಾಗಿ ಒಂದು ವಾರಗಳ ಕಾಲ ತ್ರಿಭುವನ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ತೊಡಗಲಿದ್ದು ಸೆಲಿಬ್ರಿಟಿಯೊಬ್ಬರು ಮುಖ್ಯ ನೃತ್ಯಗಾರರಾಗಿ ಕಾಣಿಸಲಿದ್ದಾರೆಂದರು. ಅಗೋರಿಯಾಗಿ ನಟಿಸುತ್ತಿರುವ ರಮೇಶ್ ಪಂಡಿತ್ ಮಾತನಾಡಿ ತಾನು ಹಿಮಾಲಯದ ತಪ್ಪಲಿನಿಂದ ಬರುವ ಮಂತ್ರವಾದಿ ಎಂದು ನಕ್ಕರು. ನಿರ್ಮಾಪಕ ರಮೇಶ್ ಕುಮಾರ್ ಜೈನ್ ಮೂಲತಃ ಗುಜರಾತ್ ನವರಾಗಿದ್ದು ಅವರೇ ಚಿತ್ರಕ್ಕೆ ಕತೆ ನೀಡಿದ್ದಾರೆ. ಮನೀಶ್ ಚಿತ್ರದಲ್ಲಿ ಸಿವಿಲ್ ಇಂಜಿನಿಯರಾಗಿದ್ದು, ಪ್ರಿಯಾಂಕರಾವ್ ತಮ್ಮ ಪಾತ್ರದ ಹೆಸರು ಮಂತ್ರ ಎಂದು ಹೇಳಿಕೊಂಡರು. ಚಿತ್ರಕ್ಕೆ ಎಂ.ಎಸ್ ತ್ಯಾಗರಾಜ್ ಸಂಗೀತ ನೀಡುತ್ತಿದ್ದು ನೆಲಮನೆ ರಾಘವೇಂದ್ರ ಸಾಹಿತ್ಯ ಬರೆದಿದ್ದಾರೆ. ಗುಂಡ್ಲು ಪೇಟೆ ಸುರೇಶ್ ಛಾಯಾಗ್ರಹಣವಿದೆ.
2014-11-14
- Shivrajkumar releases audio CD of Khushi Khushi agi movie
ಶಿವಣ್ಣನಿಂದ 'ಖುಷಿಖುಷಿಯಾಗಿ' ಸೀಡಿ ಬಿಡುಗಡೆ
ಗಣೇಶ್ ಮತ್ತು ಅಮೂಲ್ಯ ಜೋಡಿಯಾಗಿ ನಟಿಸಿರುವ ಖುಷಿಖುಷಿಯಾಗಿ ಚಿತ್ರದ ಸೀಡಿ ಬಿಡುಗಡೆಗೆ ತಾನು ಖುಷಿಖುಷಿಯಾಗಿ ಬಂದಿರುವುದಾಗಿ ಹೇಳಿದ ಶಿವಣ್ಣ, ಗಣೇಶ ನನಗೆ ಉದಯ ಟೀವಿ ಕಾಲದಿಂದಲೇ ಇಷ್ಟವಾಗಿದ್ದರು ಎಂದರು. ಅದರಲ್ಲೂ ಗಣೇಶ ಮತ್ತು ಉಪ್ಪಿಯೊಂದಿಗೆ ಒಂದು ಬಾರಿ ನಡೆಸಿದ ರೈಲ್ವೇ ಪಯಣದ ಆತ್ಮೀಯ ಸಂದರ್ಭವನ್ನು ಎಂದೂ ಮರೆಯಲಾಗದು ಎಂದರು. ಯೋಗಿ ಜಿ ರಾಜ್ ನಿರ್ದೇಶಿಸಿರುವ ಖುಷಿಖುಷಿಯಾಗಿ ಅವರಿಗೆ ಪ್ರಥಮ ಚಿತ್ರ. ಆದರೆ ಕಾಸ್ಟ್ಯೂಮ್ ಡಿಸೈನರಾಗಿ, ಸಹಾಯಕ ನಿರ್ದೇಶಕರಾಗಿ ಅವರನ್ನು ಚಿತ್ರೋದ್ಯಮದಲ್ಲಿ ಎಲ್ಲರೂ ಬಲ್ಲವರೇ. ನಾಯಕಿ ಅಮೂಲ್ಯ ತಮ್ಮದು ಕಲ್ಲರಳಿ ಹೂವಾಗಿ ಚಿತ್ರದ ಕಾಲದಿಂದಲೇ ಇರುವ ಸ್ನೇಹ ಎಂದರೆ, ಕೊರಿಯಾಗ್ರಫರ್ ಹರ್ಷ 'ನಮ್ಮದು ಶಾಲಾ ಕಾಲೇಜಿನಿಂದಲೇ ಬೆಳೆದು ಬಂದ ನಂಟು' ಎಂದರು. ಶಿವಣ್ಣನಲ್ಲಿ ಆತನೊಬ್ಬ ಭಾರತದ ಶ್ರೇಷ್ಠ ಛಾಯಾಗ್ರಾಹಕನಾಗುವ ನಂಬಿಕೆ ಮೂಡಿಸಿರುವ ಛಾಯಾಗ್ರಾಹಕ ಶೀಶ ಕುದುವಳ್ಳಿ ಮಾತನಾಡುತ್ತಾ 'ಟೋಪಿವಾಲ, ಬಹದ್ದೂರ್ ಬಳಿಕ ಇದು ನನ್ನ ಮೂರನೇ ಚಿತ್ರ' ಎಂದರು. ಚಿತ್ರದ ಮತ್ತೋರ್ವ ನಾಯಕಿ ನಂದಿನಿ ರೈ ಆಂಧ್ರದ ಹುಡುಗಿಯಾಗಿದ್ದು, ಸಮಾರಂಭದಲ್ಲಿ ಪ್ರದರ್ಶಿಸಿದ ಹಾಡುಗಳನ್ನು ನೋಡಿದ ಮೇಲೆ 'ಅಮೂಲ್ಯ ನಟಿಸಿರುವ ಹಾಡನ್ನು ಇಷ್ಟಪಟ್ಟಿದ್ದೇನೆ' ಎಂದು ಮಹಾಮನಸ್ಕತೆ ಪ್ರದರ್ಶಿಸಿದರು. ಸಾಧುಕೋಕಿಲ ಮಾತನಾಡಿ 'ನಾನು ಗಣೇಶ್ ಚಿತ್ರಗಳಲ್ಲಿ ಆಸ್ಥಾನ ವಿದೂಷಕನಂತೆ ಪರ್ಮನೆಂಟಾಗಿ ನಟಿಸುತ್ತಿದ್ದೇನೆ' ಎಂದು ನಕ್ಕರು. 'ಆದರೆ ಇದರಲ್ಲಿ ಸಾಧುಕೋಕಿಲಾರದ್ದು ಕತೆಯಲ್ಲಿ ತಿರುವು ಕೊಡುವಂಥ ಮುಖ್ಯ ಪಾತ್ರ' ಎಂದ ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶಕ ಯೋಗಿ ನನಗೆ 12 ವರ್ಷಗಳ ಸ್ನೇಹಿತನೆಂದು ನೆನಪಿಸಿಕೊಂಡರು. ಆಂಧ್ರದಿಂದ ಬಂದ ಚಿತ್ರದ ಸಂಗೀತ ನಿರ್ದೇಶಕ ಅನೂಪ್ 'ಇದು ನನ್ನ ಮೊದಲ ಕರ್ನಾಟಕ ಭೇಟಿ' ಎಂದರು. ನಿರ್ದೇಶಕ ಯೋಗಿ ತಾವು ಶಿವಣ್ಣನಿಗೆ ಬಾಲ್ಯದಿಂದಲೇ ಫ್ಯಾನ್ ಆಗಿದ್ದು ಅವರ ಫೊಟೋ ಕತ್ತರಿಸಿ ತೆಗೆದಿಡುತ್ತಿದ್ದುದನ್ನು ಹೇಳಿ ಅವರ ಮೂಲಕ ಇಂದು ತಮ್ಮ ನಿರ್ದೇಶನದ ಚಿತ್ರದ ಸೀಡಿ ಬಿಡುಗಡೆಯಾಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು. ಗಣೇಶ್ ಚಿತ್ರದ ಆಡಿಯೋ ಮೊದಲ ಬಾರಿಗೆ ತಮ್ಮ ಕ್ಯಾಸೆಟ್ ನಲ್ಲಿ ಬಿಡುಗಡೆಯಾಗುತ್ತಿರುವ ಸಂತಸವನ್ನು ಲಹರಿ ವೇಲು ಹಂಚಿಕೊಂಡರು. ಚಿತ್ರದ ನಿರ್ಮಾಪಕ ಎ.ಹರಿಪ್ರಸಾದ್ ರಾವ್ ತಂಡಕ್ಕೆ ಶುಭ ಕೋರಿದರು.
2014-11-14
- Namagaagi & Radhika Kumarswamy Birthday
ಈ ಜನ್ಮದಿನ 'ನಮಗಾಗಿ'
ಪ್ರತಿ ಜನ್ಮದಿನದಲ್ಲಿಯೂ ಗುಟ್ಟಾಗಿ ಅನಾಥರಿಗೆ ಸಹಾಯಹಸ್ತ ನೀಡುತ್ತಿದ್ದ ರಾಧಿಕಾರನ್ನು ಈ ಬಾರಿ ನೇರ ಅನಾಥಾಶ್ರಮಕ್ಕೇ ಕರೆದುತಂದ ಕೀರ್ತಿ ನಿರ್ದೇಶಕ ರಘುರಾಮ್ ಗೆ ಸಲ್ಲುತ್ತದೆ. ಈ ಜನ್ಮದಿನವನ್ನು 'ನಮಗಾಗಿ' ಮೀಸಲಿಡಿ ಎಂದು ಅವರು ಕೇಳಿಕೊಂಡಿದ್ದೇ ಇದಕ್ಕೆ ಕಾರಣವಾಗಿತ್ತು. ಅಂದಹಾಗೆ ನಮಗಾಗಿ ಎಂಬುದು ರಾಧಿಕಾ ಮತ್ತು ವಿಜಯರಾಘವೇಂದ್ರ ಜೋಡಿಯಾಗಿ ನಟಿಸುತ್ತಿರುವ ಹೊಸ ಚಿತ್ರ. ನಿನಗಾಗಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಲೇ ದಾಖಲೆಯ ಯಶಸ್ಸಿಗೆ ನಾಯಕಿಯಾದ ಕೀರ್ತಿ ರಾಧಿಕಾರದ್ದು. ಅದರ ಬಳಿಕ ವಿಜಯ ರಾಘವೇಂದ್ರರ ಜೊತೆ ಸೇರಿ ಮೂರು ನಾಲ್ಕು ಚಿತ್ರಗಳು ತೆರೆಕಂಡವು. ಅದರಲ್ಲೆಲ್ಲಾ ಪ್ರೇಮಿಗಳಾಗಿ ಗಮನ ಸೆಳೆದಿದ್ದ ಈ ಜೋಡಿ ಇದೀಗ ಪ್ರಬುದ್ಧ ಗಂಡಹೆಂಡತಿಯಾಗಿ ನಟಿಸುತ್ತಿದ್ದಾರೆ. ಇದೊಂದು ಐಟಿಬಿಟಿ ದಂಪತಿಯ ಕತೆ. ಕತೆ ಕೇಳಿದಾಗ ಕೊನೆಯಲ್ಲಿ ನನಗೆ ಅಳು ಬಂದಿತ್ತು ಎಂದರು ರಾಧಿಕಾ. ಸಂಗೀತ ನಿರ್ದೇಶಕ ಹರಿಕೃಷ್ಣರ ಜೊತೆಗೆ ಹೋಗಿ ಕತೆ ಹೇಳಿದ್ದೆ. ಚಿತ್ರಕ್ಕೆ ಹರಿಕೃಷ್ಣರೇ ಸಂಗೀತ ನೀಡಲಿದ್ದಾರೆ. ಚಿತ್ರದಲ್ಲಿ ರಾಧಿಕಾ ಅನಾಥೆಯಾಗಿರುತ್ತಾರೆ. ಹಾಗಾಗಿ ಅನಾಥಾಶ್ರಮದಲ್ಲಿನ ಚಿತ್ರೀಕರಣವನ್ನು ಅವರ ಜನ್ಮ ದಿನದಲ್ಲೇ ಮಾಡುವ ಯೋಜನೆ ಹಾಕಿದೆವು ಎಂದರು ನಿರ್ದೇಶಕ ರಘು. ನಟಿ ಸುಮಿತ್ರಾ ಬಾಬು, ಉಗ್ರಂ ಖ್ಯಾತಿಯ ಖಳನಟ ಮಂಜು, ಛಾಯಾಗ್ರಾಹಕ ಜಗದೀಶ್ ವಾಲಿ ಚಿತ್ರದ ನಿರ್ಮಾಪಕ ಮೈಸೂರು ಕೃಷ್ಣ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರದಲ್ಲಿ ರಂಗಾಯಣ ರಘು, ಬುಲೆಟ್ ಪ್ರಕಾಶ್ ಮೊದಲಾದವರು ನಟಿಸಲಿರುವುದಾಗಿ ನಿರ್ದೇಶಕರು ತಿಳಿಸಿದರು.
2014-11-13
- Suddi Film Press Meet
ಮಹಿಳಾ ದೌರ್ಜನ್ಯದ ವಿರುದ್ಧ 'ಶುದ್ಧಿ' ಚಿತ್ರ
ಶುದ್ಧಿ ಚಿತ್ರದ ಪ್ರಥಮ ಪತ್ರಿಕಾಗೋಷ್ಠಿ ಸಿಟಡೆಲ್ ಹೋಟೆಲ್ ನಲ್ಲಿ ನಡೆಯಿತು. ಹೊಸಬರ ತಂಡವೊಂದಕ್ಕೆ ಅವಕಾಶ ನೀಡಿ ನಿರ್ಮಾಪಕರಾಗಿರುವ ಮಾದೇಶ್ ತಮಗೂ ಇದು ಪ್ರಥಮ ಅನುಭವ ಎಂದರು. ನಿರ್ದೇಶಕರು ಇಂಥದೇ ತಂಡವನ್ನಿಟ್ಟುಕೊಂಡು ತೆಗೆದಿದ್ದ ಕಿರುಚಿತ್ರವನ್ನು ಕಂಡ ಮೇಲೆ ಅವರು ಹೇಳಿದ ಕತೆಯನ್ನು ಅಷ್ಟೇ ಸೊಗಸಾಗಿ ತೆರೆಯ ಮೇಲೆ ತರುವರೆಂಬ ನಿರೀಕ್ಷೆ ತಮಗೆ ಬಂದಿತೆಂದು ಅವರು ಹೇಳಿದರು. ನಿರ್ದೇಶಕ ಆದರ್ಶ್ ಆಸ್ ಎಂಜಲ್ಸ್ ನಲ್ಲಿ ಕಿರುಚಿತ್ರ ತರಬೇತಿ ಮಾಡಿ ಬಂದವರಾಗಿದ್ದು ತಮ್ಮ ಚಿತ್ರದಲ್ಲಿಯೂ ಅಲ್ಲಿನ ಯುವ ಕಲಾವಿದರನ್ನು ಬಳಸಿಕೊಂಡಿದ್ದಾರೆ. ಮಹಿಳಾ ದೌರ್ಜನ್ಯದ ವಿರುದ್ಧ ಪ್ರತಿಭಟನೆ ದನಿಯಿರುವ ಚಿತ್ರವಿದೆಂದು ಹೇಳಿದ ಆದರ್ಶ್ ಚಿತ್ರವನ್ನು ಮೂರು ಟ್ರ್ಯಾಕ್ ನಲ್ಲಿ ಹೇಳಲಿದ್ದಾರಂತೆ. ಒಂದು ಟ್ರ್ಯಾಕ್ ನಲ್ಲಿ ನಾಯಕಿಯರಾದ ನಿವೇದಿತಾ ಮತ್ತು ಅಮೃತಾ ಪತ್ರಕರ್ತೆಯರಾಗಿ ನಟಿಸಲಿದ್ದು, ಮತ್ತೊಂದು ಟ್ರ್ಯಾಕ್ ನಲ್ಲಿ ಮತ್ತೋರ್ವ ನಾಯಕಿ ಲಾರೆನ್ ನಟಿಸಲಿದ್ದಾರಂತೆ. ಮೂರನೆಯ ಟ್ರ್ಯಾಕ್ ನಲ್ಲಿ ಮಹಾಪರ್ವ ಖ್ಯಾತಿಯ ಶಶಾಂಕ್ ಓರ್ವ ಇನ್ವೆಸ್ಟಿಗೇಶನ್ ಆಫೀಸರ್ ಆಗಿ ನಟಿಸುತ್ತಿದ್ದಾರಂತೆ. ಮುಕ್ತ ಖ್ಯಾತಿಯ ಅಜೇಯರಾಜ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ಆ್ಯಂಡ್ರೋ ಛಾಯಾಗ್ರಾಹಕರಾಗಿದ್ದಾರೆ. ಸಾಯಿ ಕಿರಣ್ ಸಂಗೀತ ನಿರ್ದೇಶನ ನೀಡಿದ್ದು ಥ್ರಿಲ್ಲರ್ ಚಿತ್ರವಾಗಿರುವುದರಿಂದ ಹಾಡುಗಳಿಲ್ಲ, ಬರೇ ಬ್ಯಾಕ್ ಗ್ರೌಂಡ್ ಸ್ಕೋರ್ ಮಾತ್ರ ನನ್ನ ಕೆಲಸ' ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರಕ್ಕೆ ಸಂಬಂಧ ಪಟ್ಟವರೆಲ್ಲ ಉಪಸ್ಥಿತರಿದ್ದರು.
2014-11-12
- Who are the real writers ?
ನಿಜವಾದ ಸಿನೆಮಾ ಸಾಹಿತಿಗಳು ಯಾರು?
ನಿಜವಾದ ಸಿನೆಮಾ ಸಾಹಿತಿಗಳು ಯಾರು ಎಂಬ ಪ್ರಶ್ನೆಯನ್ನು ಕೇಳಿದ್ದು ಬರಗೂರು ರಾಮಚಂದ್ರಪ್ಪ. ಅವರು ಮಾಸ್ಟರ್ ಮೈಂಡ್ ಚಿತ್ರದ ಧ್ವನಿಸಾಂದ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಈ ವಿಚಾರವನ್ನು ಕೈಗೆತ್ತಿಕೊಂಡರು. ಸಿನೆಮಾದಲ್ಲಿ ಸಾಹಿತ್ಯ ಎಂದು ಬರೆದಿರುವ ಜಾಗದಲ್ಲಿ ಗೀತರಚನೆ ಮಾಡಿದವರ ಹೆಸರನ್ನು ಮಾತ್ರ ಬರೆದಿರುತ್ತಾರೆ. ವಾಸ್ತವದಲ್ಲಿ ಸಾಹಿತ್ಯ ಎಂಬುದು ಹಾಡು, ಗದ್ಯ ಎಲ್ಲವೂ ಸೇರಿರುವಂಥದ್ದು. ಹಾಗಾಗಿ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಬರೆದವರೂ ಸಾಹಿತಿಗಳೇ ಆಗಿರುತ್ತಾರೆ. ಲಿರಿಕ್ಸ್ ಮಾತ್ರ ಬರೆದವರನ್ನು ಗುರುತಿಸಬೇಕಾದರೆ ಗೀತರಚನೆಕಾರರು ಎಂದು ಹೇಳುವುದೇ ಸೂಕ್ತ ಎಂದ ಬರಗೂರು ತಾವು ಈ ವಿಚಾರವನ್ನು ಬಹಳ ಹಿಂದಿನಿಂದಲೇ ಹಂಸಲೇಖಾ, ಮನೋಹರ್ ರ ಬಳಿ ಪ್ರಸ್ತಾಪಿಸಿದ್ದೇನೆ ಎಂದರು. ಅವರು ಕರೆಯಿತ್ತಿರುವ ಹಾಗೆ ಮಾಧ್ಯಮಗಳಾದರೂ ಮುಂದೆ ಗೀತರಚನೆಕಾರ ಎಂದೇ ಕರೆದು ಕನ್ನಡ ಪದಗಳ ಅರ್ಥ ವ್ಯಾಪ್ತಿಗಳನ್ನು ಸ್ಪಷ್ಟಪಡಿಸಿಕೊಡಬೇಕು ಎಂಬುದು ಅವರ ಆಗ್ರಹವಾಗಿತ್ತು.
2014-11-11
- sarja Family is coming together very soon
ಸದ್ಯದಲ್ಲೇ ಸರ್ಜ ಸಂಗಮ
ಅಭಿಮನ್ಯುವೇನೋ ಬಂದಾಯಿತು? ಕನ್ನಡದಲ್ಲಿ ಇನ್ನು ಮುಂದೆಯೂ ನಿರ್ದೇಶನ ಮಾಡುವ, ನಟಿಸುವ ಯೋಜನೆಗಳು ನಿಮ್ಮಲ್ಲಿವೆಯಾ ಎಂಬುದು ಅರ್ಜುನ್ ಸರ್ಜಾರಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆ. 'ಹೌದು, ಖಂಡಿತಾ ಇನ್ನು ಮುಂದೆಯೂ ಕನ್ನಡ ಚಿತ್ರಗಳನ್ನು ನಿರ್ದೇಶಿಸುತ್ತೇನೆ. ಅದರಲ್ಲಿ ನನ್ನ ಮಗಳ ಚಿತ್ರ ಸೇರಿದಂತೆ ಸಹೋದರಿಯ ಪುತ್ರರನ್ನೂ ನಾಯಕರಾಗಿರುವ ಚಿತ್ರಗಳ ಯೋಜನೆಯಿದೆ ಎಂದರು. ಪ್ರಸ್ತುತ 'ದುರ್ಗಾಸ್ತಮಾನ' ಕಾದಂಬರಿ ಓದುತ್ತಿದ್ದೇನೆ. ಅದು ಪೂರ್ತಿಯಾದಮೇಲೆ ಅದನ್ನೇ ಇಟ್ಟುಕೊಂಡು ಚಿತ್ರವೊಂದನ್ನು ಮಾಡಬೇಕೆಂದುಕೊಂಡಿದ್ದೇನೆ. ಅದರಲ್ಲಿ ನನ್ನ ಜೊತೆ ದ್ರುವ ಸರ್ಜ ಮತ್ತು ಚಿರಂಜೀವಿ ಸರ್ಜ ನಟಿಸಲಿದ್ದಾರೆ. ಆದರೆ ಕಾದಂಬರಿಯನ್ನು ಇನ್ನೂ ಪೂರ್ತಿಯಾಗಿ ಓದಿ ಮುಗಿಸದ ಕಾರಣ ಹೆಚ್ಚಿನ ವಿವರ ನೀಡಲಾಗದು ಎಂದರು. ಅದೇ ರೀತಿ ಮಗಳನ್ನು ನಾಯಕಿಯನ್ನಾಗಿಸಿ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಲಿದ್ದು ಅದು ಕೂಡ ನಾಯಕ ಪ್ರಧಾನ ಚಿತ್ರವಾಗಿರುತ್ತದೆ. ಸೂಕ್ತ ನಾಯಕನಿಗಾಗಿ ಹುಡುಕಾಟ ನಡೆದಿದೆ ಎಂದರು. ಒಟ್ಟಿನಲ್ಲಿ ಕರ್ನಾಟಕದಿಂದ ಹೋದ ಮೇಲೆ ಅಪರೂಪವಾಗಿದ್ದ ಅರ್ಜುನ್ ಸರ್ಜ ಇತ್ತೀಚೆಗೆ ಮತ್ತೆ ಕನ್ನಡದಲ್ಲಿ ಹೆಚ್ಚು ಸಕ್ರಿಯರಾಗುತ್ತಿರುವುದು ಖುಷಿಯ ವಿಚಾರ.
2014-11-11
- Abhimanyu Success Meet
ಜನಮನಗೆದ್ದ ಅಭಿಮನ್ಯು
ಮೂರುಭಾಷೆಗಳಲ್ಲಿ ಚಿತ್ರವೊಂದಕ್ಕೆ ಕತೆ, ಚಿತ್ರಕತೆ ಬರೆದು ನಿರ್ದೇಶಿಸಿ ವಿತರಣೆಯನ್ನೂ ಮಾಡಿದ ಬಳಿಕ ಚಿತ್ರದ ಪ್ರತಿಕ್ರಿಯೆ ಏನಿತ್ತೆಂಬುದನ್ನು ತಿಳಿಸಲು ಮಾಧ್ಯಮದ ಮುಂದೆ ಬಂದಿದ್ದರು ಅರ್ಜುನ್ ಸರ್ಜಾ. ಚಿತ್ರ ಎಷ್ಟುಕೋಟಿ ಖರ್ಚು ಮಾಡಿತು ಎಂಬುದಕ್ಕಿಂತ ಎಲ್ಲರ ಮನಸ್ಸಿನೊಳಗೂ ಸ್ಪರ್ಶ ಮಾಡಿತು ಎಂಬುದೇ ನಾನು ನಿಮಗೆ ತಿಳಿಸಲಿರುವ ಪ್ರಮುಖ ಸಂಗತಿ ಎಂದರು ಅರ್ಜುನ್. ಚಿತ್ರವನ್ನು ನೋಡಿದ ಹಲವರು ನಾವು ಬಡ ಮಕ್ಕಳನ್ನು ದತ್ತು ತೆಗೆದುಕೊಂಡು ಓದಿಸಲು ತಯಾರಿರುವುದಾಗಿ ಹೇಳಿದ್ದಾರೆ. ನಾನು ನಟಿಸಿದ ಅಥವಾ ನಿರ್ದೇಶಿಸಿದ ಚಿತ್ರವೊಂದಕ್ಕೆ ಜನತೆ ಇಷ್ಟೊಂದು ಭಾವನಾತ್ಮಕವಾಗಿ ಸ್ಪಂದಿಸುತ್ತಿರುವುದು ಇದೇ ಪ್ರಥಮ. ಮಾಧ್ಯಮಗಳು ಕೂಡ ನನಗೆ ಬೆಂಬಲಿಸಿವೆ ಎಂಬುದಕ್ಕಿಂತ ನಾನು ಮುಂದಿಟ್ಟಿರುವ ಕಾನ್ಸೆಪ್ಟ್ ಗೆ ಮೆಚ್ಚುಗೆ ಸೂಚಿಸಿದೆಯೆಂಬುದೇ ನನಗೆ ಸಿಕ್ಕ ಗೆಲುವು ಎಂದುಕೊಳ್ಳುತ್ತೇನೆ. ಆಂಧ್ರದ ರಾಜಕಾರಣಿಗಳು ನನ್ನ ಚಿತ್ರದ ವಿಚಾರವನ್ನು ಉಲ್ಲೇಖಿಸಿ ಚರ್ಚೆ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಕೆಲವೇ ದಿನಗಳ ಹಿಂದೆ ಪುಟ್ಟ ಮಗುವೊಂದು ತರಗತಿಯಿಂದ ಸತತ ನಾಲ್ಕು ದಿನಗಳ ಕಾಲ ಬಹಿಷ್ಕರಿಸಲ್ಪಟ್ಟಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿರುವುದು ಚಿತ್ರದಲ್ಲಿರುವ ವಾಸ್ತವಿಕತೆಗೆ ಕನ್ನಡಿ ಹಿಡಿಯುತ್ತಿರುವ ಸಂಗತಿಗಳಾಗಿದೆ ಎಂದರು ಅರ್ಜುನ್. ಅಬ್ದುಲ್ ಕಲಾಂರ ಆತ್ಮಕತೆ ಓದುತ್ತಿರಬೇಕಾದರೆ ಅದರಲ್ಲಿ ಆಂಧ್ರದ ಶಾಲಾ ವಿದ್ಯಾರ್ಥಿ ತಾನು ವಿದೇಶದಲ್ಲಿ ಕಲಿಯುವ ಬದಲು ಡೆವಲಪ್ ಡ್ ಇಂಡಿಯಾನಲ್ಲಿ ಕಲಿಯಬೇಕೆಂಬ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾರೆ. ಆಗ ಡೆವಲಪ್ಡ್ ಇಂಡಿಯಾವನ್ನು ನಾವು ಯಾವಾಗ ನಿರ್ಮಾಣ ಮಾಡುವುದೆಂಬ ಪ್ರಶ್ನೆಯನ್ನು ಕಲಾಂ ಕೇಳುತ್ತಾರೆ. ಅದೇ ಸ್ಪೂರ್ತಿಯಿಂದ ಇಂಥದೊಂದು ವಿಚಾರದಲ್ಲಿ ಚಿತ್ರ ನಾನು ಮಾಡಿದೆ. ಹಾಗಾಗಿ ಚಿತ್ರದ ಬಗ್ಗೆ ನಾನು ಕಲಾಂ ಸಾಹೇಬರಿಗೂ ತಿಳಿಸಲು ಪ್ರಯತ್ನಿಸಿದೆ. ಅವರ ಕಡೆಯಿಂದ ಆಲ್ ದಿ ಬೆಸ್ಟ್ ಎಂಬ ಸಂದೇಶ ಬಂದಿದೆ. ಅದೇ ರೀತಿ ನಮ್ಮ ಮುಖ್ಯಮಂತ್ರಿಗಳು ಮತ್ತು ಪ್ರಧಾನಮಂತ್ರಿ ಮೋದಿಯವರಿಗೂ ಚಿತ್ರವನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಅರ್ಜುನ್ ತಿಳಿಸಿದರು. ಚಿತ್ರದ ಕೆಲವೊಂದು ಕಡೆಗಳಲ್ಲಿ ಲಿಪ್ ಸಿಂಕಾಗದ ಹಾಗೆ ಕಾಣಿಸುತ್ತಿರುವುದೇಕೆ ಎಂದು ಅವರಲ್ಲಿ ಪ್ರಶ್ನಿಸಿದಾಗ ಕೆಲವೆಡೆಗಳಲ್ಲಿ ಪರಭಾಷಾ ಕಲಾವಿದರು ಕನ್ನಡ ಮಾತನಾಡುವಾಗ ಭಾವ ಸರಿಯಾಗಿ ಹೊಮ್ಮುತ್ತಿರಲಿಲ್ಲ. ಅದಕ್ಕಾಗಿ ಅವರಲ್ಲಿ ಅವರಿಗೆ ಕಂಫರ್ಟ್ ಅನಿಸುವ ಭಾಷೆಯನ್ನೇ ಮಾತನಾಡಲು ಹೇಳಿ ಬಳಿಕ ಕನ್ನಡದಿಂದ ಡಬ್ ಮಾಡಿಸಿರುವುದಾಗಿ ತಿಳಿಸಿದರು. ಚಿತ್ರದಲ್ಲಿ ಪ್ರಮುಖ ಪಾತ್ರವಾಗಿ ಕಾಣಿಸಿರುವ ಬಾಲನಟಿ ಯುವಿನಾ ಕೂಡ ಚಿತ್ರದ ಯಶಸ್ಸಿನ ಖುಷಿಯಲ್ಲಿ ಪಾಲ್ಗೊಂಡು ತನ್ನ ಮುದ್ದಾದ ಮಾತು ಮತ್ತು ವರ್ತನೆಗಳಿಂದ ಗಮನ ಸೆಳೆದಳು. ಕೊನೆಯ ಕ್ಷಣದಲ್ಲಿ ಹಾಜರಾದ ನಟ ಬೀರಾದಾರ್ ಕೂಡ ಸಂಭ್ರಮದ ಮಾತುಗಳನ್ನಾಡಿದರು. ಪ್ರಸ್ತುತ ಚಿತ್ರ ಎಷ್ಟು ಹಣ ಸಂಪಾದಿಸುತ್ತದೆ ಎಂಬುದಕ್ಕಿಂತ ಎಷ್ಟು ಮಂದಿಯ ಮನ ಸೆಳೆಯುತ್ತದೆ ಎಂಬುದು ನನಗೆ ಮುಖ್ಯ. ಹಾಗಾಗಿ ಚಿತ್ರವನ್ನು ತೀರಾ ಕಮರ್ಷಿಯಲ್ ಮಾಡಲು ಹೋಗಿಲ್ಲ. ಆದರೆ ಆ್ಯಕ್ಷನ್ ಇಮೇಜ್ ನನ್ನದಾಗಿರುವುದರಿಂದ ಹೊಡೆದಾಟಗಳಿಗೆ ಕೊರತೆ ಮಾಡಿಲ್ಲ ಎಂದು ಮಾತು ಮುಗಿಸಿದರು ಆ್ಯಕ್ಷನ್ ಕಿಂಗ್.
2014-11-11
- Master Mind Kannada movie Audio Released
'ಮಾಸ್ಟರ್ ಮೈಂಡ್' ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ
ಮಾಸ್ಟರ್ ಮೈಂಡ್ ಚಿತ್ರದ ಹಾಡುಗಳ ಸೀಡಿ ಬಿಡುಗಡೆಯನ್ನು ಯಾವ ಮಾಸ್ಟರ್ ಮೈಂಡ್ ಉಪಯೋಗಿಸದೆ ಹೃದಯಸ್ಪರ್ಶಿಯಾಗಿ ಮಾಡಿ ಗಮನ ಸೆಳೆದರು ನಟ, ನಿರ್ದೇಶಕ ಮತ್ತು ನಿರ್ಮಾಪಕ ಕುಮಾರ್ ಗೋವಿಂದ್. ಯಾಕೆಂದರೆ ಅವರು ಚಿತ್ರದ ಸೀಡಿ ಬಿಡುಗಡೆಗೆ ಆಯ್ದುಕೊಂಡದ್ದು ಒಂದು ಮಕ್ಕಳ ಅನಾಥಾಶ್ರಮ. ಚಾಮರಾಜ ಪೇಟೆಯ ಬಾಸ್ಕೋ ಮನೆ ಅನಾಥಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೀಡಿ ಬಿಡುಗಡೆಗೊಳಿಸಲು ಖುದ್ದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಡಾ.ಬರಗೂರು ರಾಮಚಂದ್ರಪ್ಪ ಆಗಮಿಸಿದ್ದರು. ಕುಮಾರ್ ಗೋವಿಂದ್ ನನಗೆ ತುಂಬಾ ಆತ್ಮೀಯರು. ಅವರು ಇಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡ ಸದುದ್ದೇಶಕ್ಕೆ ಖುಷಿಯಾಗಿದ್ದೇನೆ. ಆದರೆ ಪ್ರಚಾರದ ಹೆಸರಲ್ಲಿ ವಿಕಾರಕ್ಕೆ ದಾಸರಾಗುವ ಹಲವರಿಗೆ ನಾನು ಒಂದು ಸೂಚನೆ ನೀಡಬಯಸುತ್ತೇನೆ. ಕೆಟ್ಟದಾಗಿ ಹಾಡು ಬರೆದು ಜನ ಅದನ್ನೇ ಬಯಸುತ್ತಾರೆ ಎಂದು ಹೇಳುವುದು ಸುಲಭ. ಆದರೆ ಹಾಗಂತ ಯಾವ ಜನರೂ ಯಾರ ಮನೆ ಮುಂದೆಯೂ ಧರಣಿ ಕುಳಿತ ಉದಾಹರಣೆಗಳಿಲ್ಲ. ಆದುದರಿಂದ ಈ ರೀತಿ ಒಳ್ಳೆಯದನ್ನೇ ಮಾಡುವ ಮೂಲಕ ಹೆಸರು ಮಾಡಿ ಎಂದು ಹಾರೈಸಿದರು. ಶ್ ಮೂಲಕ ಕುಮಾರ್ ಗೋವಿಂದ್ ನನ್ನ ಅನ್ನದಾತರಾದವರು ಎಂದು ಉಪೇಂದ್ರ ಮಾತು ಆರಂಭಿಸಬೇಕಾದರೆ ಕಣ್ಣು ತುಂಬಿಸಿಕೊಂಡ ಕುಮಾರ್ ಗೋವಿಂದ್ ತಕ್ಷಣ ಉಪ್ಪಿಯ ಬಳಿಸಾರಿ ಅಪ್ಪಿಕೊಂಡರು. ಆಶ್ರಮದ ಮಕ್ಕಳಲ್ಲಿ 'ನೀವು ಖಂಡಿತಾ ಅನಾಥರಲ್ಲ; ನಾವೇ ನಿಜವಾದ ಅನಾಥರು' ಎಂದು ಮಾತನಾಡಿದ ಉಪ್ಪಿ ಮಕ್ಕಳ ಅಪೇಕ್ಷೆ ಮೇರೆಗೆ ರಕ್ತಕಣ್ಣೀರು ಚಿತ್ರದ ಸಂಭಾಷಣೆಯನ್ನು ಹೇಳಿ ರಂಜಿಸಿದರು. ಸೀಡಿಗಳನ್ನು ಮಾರುಕಟ್ಟೆಗೆ ತರುತ್ತಿರುವ ಲಹರಿವೇಲು ಮಾತನಾಡುತ್ತಾ 'ಕುಮಾರ್ ಗೋವಿಂದ್ ಮತ್ತು ನಾನು ಮೂರು ದಶಕಗಳಿಂದ ಜಿಮ್ ಮೇಟ್ಸ್ ಆಗಿದ್ದೇವೆ. ನಾನು ಭೇಟಿಕೊಟ್ಟ ಸಾವಿರಾರು ಕಾರ್ಯಕ್ರಮಗಳಲ್ಲಿ ಇದು ಭಾವನಾತ್ಮಕವಾಗಿ ಎಂದಿಗೂ ನೆನಪಲ್ಲಿ ಉಳಿದುಕೊಳ್ಳುತ್ತದೆ ಎಂದರು. ಚಿತ್ರದ ಹಾಡುಗಳಿಗೆ ಸಂಗೀತ ನೀಡಿರುವ ಎಮ್.ಫಾಜಿಲ್ ಎಳೆಯ ಪ್ರತಿಭೆಯಾಗಿದ್ದು ಕುಮಾರ್ ಗೋವಿಂದ್ ಅವರಿಗೆ ಪ್ರಥಮ ಅವಕಾಶವನ್ನು ನೀಡಿದ್ದಾರೆ. ಅತಿಥಿಯಾಗಿ ಆಗಮಿಸಿದ್ದ ನಿರ್ಮಾಪಕ ಬಿಕೆ ಶ್ರೀನಿವಾಸ್ 'ನಾನು ಸಿಎಂರನ್ನು ಕರೆಸಿ ಈ ಹಿಂದೆ ಸೀಡಿ ಬಿಡುಗಡೆಗೊಳಿಸಿದ್ದು ಆಡಂಬರವಷ್ಟೇ, ಆದರೆ ನಿಜವಾದ ಆತ್ಮತೃಪ್ತಿ ಸಿಗುವ ಕಾರ್ಯಕ್ರಮವಿದು' ಎಂದು ಮನಸ್ಸು ತೆರೆದು ಹೇಳಿಕೊಂಡರು. ಚಿತ್ರದ ನಿರ್ದೇಶಕ ಕುಮಾರ್ ಗೋವಿಂದ್ ಮಾತನಾಡುತ್ತಾ ನನ್ನ ಮಗ ಕೂಡ ಮಾತನಾಡಲಾರ, ಕೇಳಿಸಿಕೊಳ್ಳಲಾರ. ಆತನ ತಂದೆಯಾಗಿ ನನಗೆ ನಿಜವಾದ ಅನಾಥತ್ವ ಏನೆಂಬುದು ಗೊತ್ತು. ಅದಕ್ಕಾಗಿಯೇ ಅನಾಥ ಮಕ್ಕಳ ಮುಂದೆ ಈ ಸಮಾರಂಭವನ್ನು ಸಮರ್ಪಿಸಿದ್ದೇನೆ. ಬಂದು ಸಹಕಾರ ನೀಡಿದ ಉಪ್ಪಿ, ಬರಗೂರು ರಾಮಚಂದ್ರಪ್ಪ, ಬೆಂಕೋಶ್ರೀ ಮತ್ತು ಮುಂಬೈನಿಂದಬಂದ ನಾಯಕಿ ಭಕ್ತಿ ಸೇರಿದಂತೆ ಎಲ್ಲರಿಗೂ ವಂದನೆಗಳು ಎಂದರು. ಚಿತ್ರವನ್ನು ಇದೇ ತಿಂಗಳ ಕೊನೆಗೆ ಅಥವಾ ಡಿಸೆಂಬರ್ ಆರಂಭದಲ್ಲೇ ತೆರೆಗೆ ತರುವ ಯೋಜನೆ ಹಾಕಿರುವುದಾಗಿ ತಿಳಿಸಿದರು. ಗಣ್ಯರ ಜೊತೆ ಅನಾಥಾಶ್ರಮದ ಮಕ್ಕಳು ಸೇರಿ ಸೀಡಿ ಬಿಡುಗಡೆಗೊಳಿಸದ ಬಳಿಕ ಮಕ್ಕಳಿಗೆ ಬಟ್ಟೆಬರೆಯ ಕಿಟ್ ಗಳನ್ನು ಅತಿಥಿಗಳ ಕೈನಿಂದಲೇ ಕೊಡಿಸಲಾಯಿತು. ಚಿತ್ರದ ನಾಯಕ ಹರ್ಷವರ್ಧನ್, ನಾಯಕಿ ದಿವ್ಯಾಗೌಡ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯತಿರಾಜ್ ಕಾರ್ಯಕ್ರಮ ನಿರೂಪಿಸಿದರು.
2014-11-11
- Preethi Endha movie songs in Whats App
'ಪ್ರೀತಿಯಿಂದ' ಹಾಡುಗಳು ವಾಟ್ಸಪ್ ನಲ್ಲಿ
ಪ್ರೀತಿಯಿಂದ ಚಿತ್ರದ ಹಾಡುಗಳನ್ನು ಪರದೆಯ ಮೇಲೆ ತೋರಿಸಿ ವಾಟ್ಸ್ ಅಪ್ ನಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿ ತೋರಿಸಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿತ್ತು. ಸಮಾರಂಭದಲ್ಲಿ ಹಿರಿಯ ನಟಿ ಡಾ.ಭಾರತೀ ವಿಷ್ಣುವರ್ಧನ್ ರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರೀತಿಯಿಂದ ಚಿತ್ರದ ನಾಯಕ ರಾಕೇಶ್ ಅಡಿಗ ಮಾತನಾಡಿ 'ಇಂದು ಚಿತ್ರೋದ್ಯಮದ ಹಿರಿಯರ ಸಮ್ಮುಖದಲ್ಲಿ ಹಾಡುಗಳು ವಾಟ್ಸಪ್ ನಲ್ಲಿ ಲಭ್ಯವಾಗುತ್ತಿರುವುದು ಖುಷಿಯ ವಿಚಾರ. ಇವರೆಲ್ಲರ ಆಶೀರ್ವಾದ ಹೀಗೇ ಇರಲಿ ಎಂದರು. ಚಿತ್ರದಲ್ಲಿ ನಾಯಕನ ತಾಯಿಯಾಗಿ ನಟಿಸಿರುವ ಲಕ್ಷ್ಮೀ ಚಂದ್ರಶೇಖರ್ 'ಇದರಲ್ಲಿ ಹುಡುಗ ಹುಡುಗಿಯ ಜೊತೆಗೆ ತಾಯಿ ಮಗನ ಪ್ರೀತಿಯನ್ನೂ ಹೇಳಲಾಗಿದೆ. ಮಾದೇಶ್ವರ ಹಾಡಿನಲ್ಲಿ ನಾನು ನಟಿಸಿರುವುದು ಮರೆಯಲಾಗದ ಅನುಭವ ಎಂದರು. ಜನ ಪ್ರತಿನಿಧಿ ಲಕ್ಷ್ಮೀನಾರಾಯಣರು ಮಾತನಾಡಿ 'ನನಗೆ ತಿಳಿದಿರುವಂತೆ ಮಾದೇಶ್ವರನ ಹಾಡನ್ನೊಳಗೊಂಡ ಚಿತ್ರ ಸೋತ ಉದಾಹರಣೆಯೇ ಇಲ್ಲ' ಎಂದರು. ಬಳಿಕ ಮಾತನಾಡಿದ ಗಿರಿಜಾ ಲೋಕೇಶ್ 'ಪ್ರೀತಿಯಿಂದ ಚಿತ್ರದ ಹಾಡುಗಳ ಬಿಡುಗಡೆಯಾಗಿ ಬಹಳ ದಿನಗಳಾಗಿವೆ. ಹಾಡುಗಳು ಸುಮಧುರವಾಗಿದ್ದರೂ ಕೇಳುಗರು ಪ್ರೀತಿಯಿಂದ ಆಸ್ವಾದಿಸುವಲ್ಲಿ ಯಾಕೋ ಹಿಂದೆ ಬಿದ್ದಿದ್ದಾರೆ ಎಂದರು. ಚಿತ್ರದ ಕತೆ, ಚಿತ್ರಕತೆ ಬರೆದು ನಿರ್ದೇಶನ ನಿರ್ವಹಿಸಿರುವ ರಾಜು ಹಲಗೂರು 'ಚಿತ್ರಕ್ಕೆ ಸೆನ್ಸಾರ್ ನಿಂದ ಯು ಸರ್ಟಿಫಿಕೇಟ್ ಸಿಕ್ಕಿದೆ. ಇನ್ನು ಪ್ರೇಕ್ಷಕರ ಪ್ರೋತ್ಸಾಹದ ಅಗತ್ಯವಿದೆ' ಎಂದರು. ಚಿತ್ರದ ಹಾಡುಗಳನ್ನು ತಕ್ಷಣದಲ್ಲೇ ಕೇಳಲು ಸಾಧ್ಯವಾಗುವಂತೆ ವಾಟ್ಸಪ್ ನಂಬರ್ 9731111696 ಮತ್ತು 9632132744 ಬಿಡುಗಡೆ ಮಾತನಾಡಿದ ನಿರ್ದೇಶಕ ನಾಗ್ತಿಹಳ್ಳಿ ಚಂದ್ರಶೇಖರ್ ಮಾರ್ಮಿಕವಾದ ಮಾತುಗಳನ್ನಾಡಿ ಗಮನ ಸೆಳೆದರು. 'ಚಿತ್ರರಂಗ ಎಂಬುದೊಂದು ಕಾಡಿದ್ದ ಹಾಗೆ. ಕಾಡಲ್ಲಿ ದೊಡ್ಡದೊಡ್ಡ ಮರಗಳು ಎಷ್ಟು ಅಗತ್ಯವೋ ಚಿಕ್ಕಪುಟ್ಟ ಮರಗಿಡಗಳೂ ಅಷ್ಟೇ ಅಗತ್ಯ. ಅವೆರಡೂ ಸೇರಿದರೇನೇ ಕಾಡಾಗಲು ಸಾಧ್ಯ. ಸದ್ಯಕ್ಕೆ ನಮ್ಮ ಚಿತ್ರರಂಗದಲ್ಲಿ ಸ್ಟಾರ್ ಗಳ ಯುಗ ನಡೆಯುತ್ತಿದೆ! ಆದರೆ ಕಾಡೆಂದ ಮೇಲೆ ಹುಲಿ ಸಿಂಹಗಳಿದ್ದರೆ ಸಾಲದು; ಜಿಂಕೆ, ಮೊಲಗಳೂ ಇರಬೇಕು. ಅವುಗಳನ್ನು ಅವುಗಳ ಪಾಲಿಗೆ ಬದುಕಲು ಬಿಡಬೇಕಾಗಿದೆ' ಎಂಬುದು ನಾಗ್ತಿಹಳ್ಳಿಯವರ ಮಾತಾಗಿತ್ತು. ಇದೇ ಸಂದರ್ಭದಲ್ಲಿ ಚಿತ್ರರಂಗದಲ್ಲಿನ 50ವರ್ಷಗಳ ಸೇವೆಗಾಗಿ ಸನ್ಮಾನಿತರಾದ ಡಾ.ಭಾರತಿ ವಿಷ್ಣುವರ್ಧನ್ 'ನಾನು ಪ್ರೀತಿಯಿಂದ ಕರೆದಿದ್ದಕ್ಕಾಗಿ ಪ್ರೀತಿಯಿಂದ ಬಂದಿದ್ದೇನೆ. ನಡೆಯುತ್ತಾ ಹೋಗುವವನಿಗೆ ಹಿಂದಿರುಗಿ ನೋಡಿದರಷ್ಟೇ ಐವತ್ತು ಕಿಲೋಮೀಟರ್ ದಾಟಿರುವ ಸತ್ಯ ಮನವರಿಕೆಯಾದೀತು. ಇಲ್ಲವಾದರೆ ಹೊಸಹೊಸ ಪ್ರದೇಶಗಳನ್ನು ದಾಟುತ್ತಾ ಕುತೂಹಲದೊಂದಿಗೆ ಸಾಗುವಾಗ ಕ್ರಮಿಸಿದ ದೂರ ತಿಳಿಯುವುದೇ ಇಲ್ಲ. ನಾನು ಸದ್ಯ ಅದೇ ಉತ್ಸಾಹದಲ್ಲೇ ಇದ್ದೇನೆ ಎಂದರು.
2014-11-11
- Seizer Film Launch Press Meet
ಸೀಸರ್ ಗೆ ಮುಹೂರ್ತ
ನವ ನಿರ್ದೇಶಕ ವಿನಯಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ರಥಮ ಚಿತ್ರವೇ ಸೀಸರ್. ಚಿತ್ರಕ್ಕೆ ಇವರು ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಕಳೆದ ನಾಲ್ಕು ವರ್ಷಗಳಿಂದ ಕನ್ನಡದ ಖ್ಯಾತ ನಿರ್ದೇಶಕರೊಬ್ಬರ ಬಳಿ ಕೆಲಸ ಮಾಡಿದ ಅನುಭವ ಹೊಂದಿರುವ ವಿನಯ ಕೃಷ್ಣ ಸದ್ಯದ ಮಟ್ಟಿಗೆ ಅವರ ಹೆಸರನ್ನು ಹೇಳುವಂತಿಲ್ಲ ಎಂದರು. ಯಾಕೆಂದರೆ ಈಗಾಗಲೇ ಒಂದಿಬ್ಬರು ಅವರ ಶಿಷ್ಯರೆಂದು ಹೇಳಿಕೊಂಡು ಚಿತ್ರವನ್ನು ಪೂರ್ತಿ ಮಾಡದೆ ಅರ್ಧಕ್ಕೆ ನಿಲ್ಲಿಸಿದ್ದಾರಂತೆ. ಹಾಗೆ ಅವರೇ ನೊಂದುಕೊಂಡಿರಬೇಕಾದರೆ ತಾನು ಅಂಥವನಲ್ಲ ಎಂಬುದನ್ನು ಚಿತ್ರವನ್ನು ತೆರೆಗೆ ತಂದೇ ಸಾಬೀತು ಪಡಿಸುತ್ತೇನೆ. ಅದರ ಬಳಿಕವೇ ನನ್ನ ಗುರುವಿನ ಬಗ್ಗೆ ಹೇಳಲಿದ್ದೇನೆ ಎಂಬುದು ವಿನಯಕೃಷ್ಣರ ನಿಲುವು. ಸೀಸರ್ ಎಂಬ ಕತೆ ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಅನುಭವದಿಂದ ಹುಟ್ಟಿಕೊಂಡದ್ದೆಂದು ಹೇಳುವ ಮೂಲಕ ಇದೊಂದು ರಿಮೇಕ್ ಚಿತ್ರವಂತೂ ಅಲ್ಲವೆಂಬ ಭರವೆಸೆ ನೀಡಿದ್ದಾರೆ. ನನ್ನ ವಾಹನವನ್ನು ಸೀಸ್ ಮಾಡಿಕೊಂಡು ಹೋದ ದಿನಗಳಲ್ಲಿ ನನ್ನೊಳಗಾಗಿದ್ದ ತುಮುಲವೇ ಈ ಚಿತ್ರವನ್ನು ಮಾಡಲು ಪ್ರಥಮ ಪ್ರೇರಣೆ ನೀಡಿತು. ಖಾಸಗಿ ವಾಹನ ಸೀಸ್ ಆಗಿ ತನ್ನದೇ ವಾಹನಕ್ಕೆ ಡ್ಯೂ ಕಟ್ಟಿದಾತನ ಮನಸ್ಥಿತಿಯನ್ನು ಚಿತ್ರದಲ್ಲಿ ತೋರಿಸಲಿದ್ದಾರಂತೆ. ಆದರೆ ಚಿತ್ರದ ನಾಯಕ ಒಬ್ಬ ವಾಹನಗಳನ್ನು ಸೀಸ್ ಮಾಡುವ ಸೀಸರ್ ಆಗಿರುತ್ತಾನೆ ಎಂದ ವಿನಯಕೃಷ್ಣ ಆತ ಯಾಕೆ ಆ ಕೆಲಸವನ್ನೇ ಆಯ್ದುಕೊಂಡಿರುತ್ತಾನೆ ಎಂಬುದರ ಮಾಹಿತಿ ಚಿತ್ರದಲ್ಲಿರುತ್ತದೆ ಎಂದರು. ಚಿತ್ರದ ನಾಯಕ ಚಿರಂಜೀವಿ ಸರ್ಜ ಮಾತನಾಡುತ್ತಾ ಚಿತ್ರದಲ್ಲಿ ನಾಯಕನಿಗಿರುವ ವಿಭಿನ್ನವಾದ ವೃತ್ತಿಯೇ ಈ ಚಿತ್ರದ ಕತೆ ಕೇಳಿದ ತಕ್ಷಣ ನನ್ನನ್ನು ಒಪ್ಪಿಕೊಳ್ಳುವಂತೆ ಮಾಡಿತು ಎಂದರು. ಚಿತ್ರದ ಮೂಲಕ ಪ್ರಥಮ ಬಾರಿಗೆ ಸಂಗೀತ ನಿರ್ದೇಶಕರಾಗಿ ಪರಿಚಯಿಸಲ್ಪಡುತ್ತಿರುವ ಗಾಯಕ, ಸಾಹಿತಿ ಚಂದನ್ ಶೆಟ್ಟಿ ನನ್ನ ಸ್ವಂತ ತಮ್ಮನ ಥರ, ಆತ್ಮೀಯ ಎಂದರು. ಬಳಿಕ ಮಾತನಾಡಿದ ಚಂದನ್ 'ನಾನು ಇದುವರೆಗೆ 25ರಷ್ಟು ಚಿತ್ರಗಳಿಗೆ ಅರ್ಜುನ್ ಜನ್ಯಗೆ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದೇನೆ. ಮಣಿಕಾಂತ್ ಕದ್ರಿ, ಶ್ರೀಧರ್ ಗರಡಿಯಲ್ಲಿಯೂ ಕೆಲಸ ಮಾಡಿದ್ದೇನೆ ಎಂದರು. ಚಿತ್ರದ ನಾಯಕಿ ಪಾರುಲ್ ಯಾದವ್ ಗೆ ಇದರಲ್ಲಿ ನಾಯಕಿಗೂ ಪ್ರಾಧಾನ್ಯತೆ ಇರುವುದರಿಂದಾಗಿ ಪಾತ್ರ ಮಾಡುವುದು ಖುಷಿ ತಂದಿದೆಯಂತೆ. ಚಿತ್ರದಲ್ಲಿ ನಾಯಕ ನನ್ನ ಕಾರನ್ನು ಸೀಸ್ ಮಾಡುತ್ತಾನೆ. ಆಮೇಲೆ ನಡೆಯುವ ಲವ್, ಕಾಮಿಡಿ ಚಿತ್ರದಲ್ಲಿ ಒಳ್ಳೆಯ ಮನರಂಜನೆಯೊದಗಿಸುತ್ತದೆ ಎಂದು ಭರವಸೆ ನೀಡಿದರು. ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಲಿರುವ ಥ್ರಿಲ್ಲರ್ ಮಂಜು 'ಚಿರಂಜೀವಿ ಸರ್ಜ ಜೊತೆ ನನಗಿದು ಮೂರನೇ ಚಿತ್ರ. ಒಟ್ಟು ಅವರು ಇದುವರೆಗಿನ ಯಾವ ಚಿತ್ರಗಳಲ್ಲಿಯೂ ಮಾಡಿರದಷ್ಟು ಸಾಹಸ ದೃಶ್ಯಗಳನ್ನು ಖಂಡಿತಾ ಚಿತ್ರಕ್ಕಾಗಿ ನೀಡಲಿದ್ದೇನೆ' ಎಂದು ಹೇಳುವುದರೊಂದಿಗೆ ಚಿತ್ರ ಪಕ್ಕಾ ಮಸಾಲ ಚಿತ್ರವಾಗಿ ಪ್ರೇಕ್ಷಕರನ್ನು ಸೆಳೆಯಬಹುದೆಂದು ನಿರೂಪಿಸಿದರು. ಚಿತ್ರದಲ್ಲಿ ರಮೇಶ್ ಭಟ್, ರವಿಶಂಕರ್, ಅವಿನಾಶ್ ಮೊದಲಾದ ಹಿರಿಯ ಕಲಾವಿದರು ನಟಿಸುತ್ತಿದ್ದು ಬೆಂಗಳೂರು ಸೇರಿದಂತೆ ಶಬರಿಮಲೆಯಲ್ಲಿಯೂ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡಕ್ಕೆ ಇರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಖಿಸಲಾಯಿತು
2014-11-09
- Kottegondhu Love Story Audio release
ಕೋಟಿಗೊಂದು ಲವ್ ಸ್ಟೋರಿ ಧ್ವನಿಸಾಂದ್ರಿಕೆ ಬಿಡುಗಡೆ
'ನಿರ್ದೇಶಕರು ನನ್ನಲ್ಲಿ ಚಿತ್ರದ ಕತೆ ಹೇಳಿದ ತಕ್ಷಣ ಬಾಯಿಯಿಂದ ಹೊರಟ ಉದ್ಗಾರವೇ ಕೋಟಿಗೊಂದು ಲವ್ ಸ್ಟೋರಿ ಎಂಬ ಮೆಚ್ಚುಗೆಯ ನುಡಿ. ಅದನ್ನೇ ಚಿತ್ರಕ್ಕೆ ಶೀರ್ಷಿಕೆಯಾಗಿಸಲು ಅವರು ತಯಾರಾದರು. ನಾನು ನಿರ್ಮಾಣಕ್ಕೂ ಸಿದ್ಧನಾದೆ' ಎಂದರು ನಿರ್ಮಾಪಕ ಎಚ್ ಎಲ್ ಎನ್ ರಾಜು. ಚಿತ್ರಕ್ಕೆ ನಾನು ನಿರ್ಮಾಪಕನಷ್ಟೇ ಅಲ್ಲ, ತೆರೆಯಮೇಲೆ ಡಾಕ್ಟರ್ ಪಾತ್ರವಾಗಿಯೂ ಕಾಣಿಸಿಕೊಳ್ಳಲಿದ್ದೇನೆ ಎಂದ ರಾಜುವಿಗೆ ಒಂದೇ ದಿನದಲ್ಲಿ 8ದೃಶ್ಯಗಳನ್ನು ಚಿತ್ರೀಕರಿಸುವ ಮೂಲಕ ದಾಖಲೆಯ ನಿರ್ದೇಶಕನೆನಿಸಿದ ನಿರ್ದೇಶಕರ ಮೇಲೆ ಖುಷಿ, ಭರವಸೆಗಳಿವೆಯಂತೆ. ಅಂದಹಾಗೆ ನಿರ್ಮಾಪಕರ ಬಾಯಿಯಿಂದ ಇಂಥ ಒಳ್ಳೆಯ ಮಾತುಗಳು ಬಂದಿದ್ದು ಕೋಟಿಗೊಂದು ಲವ್ ಸ್ಟೋರಿ ಚಿತ್ರದ ಹಾಡುಗಳ ಸೀಡಿ ಬಿಡುಗಡೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ. ನಿರ್ದೇಶಕ ಜಗ್ಗು ಸಿರ್ಸಿಗೆ ಇದು ಪ್ರಥಮ ಚಿತ್ರ. ಆದರೆ ಚಿತ್ರದಲ್ಲಿ ಪ್ರೇಮಿಗಳ ಲವ್ ಜೊತೆಗೆ ಪ್ರಕೃತಿ ಪ್ರೇಮವನ್ನೂ ತೋರಿಸುವ ಡಬ್ಬಲ್ ಕೆಲಸ ಮಾಡಿರುವುದಾಗಿ ಜಗ್ಗು ಹೇಳಿಕೊಂಡರು. ಅದಕ್ಕಾಗಿ ಸಿರ್ಸಿಯ ಪ್ರಧಾನ ಜಲಪಾತಗಳನ್ನು ಸೇರಿಸಿದಂತೆ ರುದ್ರ ರಮಣೀಯ ದೃಶ್ಯಗಳನ್ನು ಸೆರೆ ಹಿಡಿದಿದ್ದಾರಂತೆ. ಒಟ್ಟು ಚಿತ್ರ ನೋಡಿದವರಿಗೆ ಇದು ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋದ ಯಾತ್ರೆಯ ಹಾಗಿರುತ್ತದೆ ಎಂಬುದು ಅವರ ಅನಿಸಿಕೆಯಾಗಿತ್ತು. ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ರಾಕೇಶ್ ಅಡಿಗ ತಮ್ಮದು ಟಾಕೆಟಿವ್ ಹುಡುಗನ ಪಾತ್ರ. ಚಿತ್ರದ ಕತೆ, ಹಾಡುಗಳು ಚೆನ್ನಾಗಿವೆ ಎಂದರು. ನಾಯಕಿ ಶುಭಾ ಪೂಂಜ ಮಾತನಾಡುತ್ತಾ ಚಿತ್ರದಲ್ಲಿ ಯೂತ್ ಆತ್ಮಹತ್ಯೆಗೆ ಶರಣಾಗುವ ಕುರಿತಾದ ವಿಚಾರಗಳಿವೆ. ಆರಂಭದಲ್ಲಿ ನನಗೆ ಈ ಕಾನ್ಸೆಪ್ಟ್ ಬಗ್ಗೆ ಅಷ್ಟೊಂದು ತಿಳುವಳಿಕೆಯಿರಲಿಲ್ಲ. ಆದರೆ ಚಿತ್ರೀಕರಣದ ವೇಳೆ ನನ್ನ ಆತ್ಮೀಯ ಗೆಳತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಸುದ್ದಿ ಬಂತು. ಅದರ ಬಳಿಕ ಇದು ತುಂಬ ವಾಸ್ತವಿಕ ನೆಲೆಗಟ್ಟಿನ ಕತೆ ಎಂಬುದು ನನಗೆ ಅರಿವಾಯಿತು ಎಂದರು. ಚಿತ್ರೀಕರಣದ ವೇಳೆ ಕಲಾವಿದರು ಮತ್ತು ತಂತ್ರಜ್ಞರು ರಿಸ್ಕ್ ತೆಗೆದುಕೊಂಡು ಚಿತ್ರೀಕರಣ ನಡೆಸಿದ ಸಂದರ್ಭಗಳು ಇದ್ದವು ಎಂಬುದನ್ನು ಕೂಡ ಅವರು ನೆನಪಿಸಿಕೊಂಡರು. ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ಸಿಂಧೂರಾವ್ ಗೆ ಶುಭಾ ಪೂಂಜಾ ಒಬ್ಬರು ಆತ್ಮೀಯ ಸ್ನೇಹಿತೆಯೆನಿಸಿದ್ದಾಗಿ ಹೇಳಿದರು. ಸಮಾರಮಭದ ಕೇಂದ್ರಬಿಂದುವಾಗಿದ್ದ ಸಂಗೀತ ನಿರ್ದೇಶಕ ಕೀರ್ತಿಜೈನ್ ಗೆ ಇದು ಎರಡನೆಯ ಚಿತ್ರ. ಅವರು ಉತ್ಸಾಹದಿಂದ ಪ್ರತಿ ಹಾಡಿನ ಒಂದೊಂದು ಲೈನ್ ನ್ನೂ ಹಾಡಿ ತೋರಿಸಿದರು! ಛಾಯಾಗ್ರಾಹಕ ಶಂಕರ್ ಮತ್ತು ಹೊಸದಾಗಿ ಪರಿಚಿತರಾಗುತ್ತಿರುವ ಎಡಿಟರ್ ಶ್ರೀಧರ್ ಚಿತ್ರದ ಕ್ವಾಲಿಟಿಯನ್ನು ಹೆಚ್ಚಿಸಲು ಸಹಕರಿಸಿದ್ದಾರೆಂಬ ಮಾತು ಚಿತ್ರತಂಡದಿಂದ ಹೊರಗೆ ಬಂತು. ಅದೇ ರೀತಿ ಚಿತ್ರದಲ್ಲಿ ತೋರಿಸಲಾಗಿರುವ ಶಾರ್ಕ್ ಮೀನಿನ ಗ್ರಾಫಿಕ್ ಕೆಲಸಗಳಿಗಾಗಿ ಹೈದರಾಬಾದ್ ಸ್ಟುಡಿಯೋನಲ್ಲಿಯೂ ಕೆಲಸ ನಿರ್ವಹಿಸಿರುವುದನ್ನು ಕೂಡ ತಿಳಿಸಲಾಯಿತು. ಚಿತ್ರಕ್ಕೆ ಬಾಹ್ಯ ಬೆಂಬಲ ನೀಡಿದ ನಿರ್ಮಾಪಕ ಅಣಜಿ ನಾಗರಾಜ್ ಸೀಡಿ ಬಿಡುಗಡೆಗೊಳಿಸಿದ್ದು ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
2014-11-08
- Raja rajendra Digital poster release
'ರಾಜರಾಜೇಂದ್ರ'ದ ಡಿಜಿಟಲ್ ಪೋಸ್ಟರ್ ಬಿಡುಗಡೆ
ಚಿತ್ರವೊಂದರ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲು ತಂಡಕ್ಕೆ ಹಲವು ಕಾರಣಗಳಿರುತ್ತವೆ. ಅದರಲ್ಲೊಂದು ವಿಭಿನ್ನ ಕಾರಣವನ್ನಿಟ್ಟುಕೊಂಡು ಮಾಧ್ಯಮದವರನ್ನು ಆಹ್ವಾನಿಸಿತ್ತು ರಾಜರಾಜೇಂದ್ರ ಚಿತ್ರತಂಡ. ಚಿತ್ರದ ಡಿಜಿಟಲ್ ಪೋಸ್ಟರ್ ಬಿಡುಗಡೆಯೇ ಆ ವಿಶೇಷವಾಗಿತ್ತು. ಜಯಲಲಿತಾ ಚಿತ್ರದ ಬಳಿಕ ಪಿ.ಕುಮಾರ್ ನಿರ್ದೇಶಿಸುತ್ತಿರುವ ಶರಣ್ ನಾಯಕತ್ವದ ಮತ್ತೊಂದು ಚಿತ್ರ ಇದಾಗಿದ್ದು ನಿರ್ದೇಶನದೊಂದಿಗೆ ಚಿತ್ರದ ಕತೆ, ಚಿತ್ರ ಕತೆಯನ್ನು ತಾವೇ ಬರೆದಿರುವುದಾಗಿ ಕುಮಾರ್ ತಿಳಿಸಿದರು. ಚಾಮುಂಡೇಶ್ವರಿ ಸ್ಟುಡಿಯೋದ ಪರದೆಯ ಮೇಲೆ ಕಾಣಿಸಿಕೊಂಡ ಪೋಸ್ಟರ್ ಲಾಂಚ್ ಆದೊಡನೆ ಮಾತನಾಡಿದ ನಿರ್ದೇಶಕ ಕುಮಾರ್ ಇದು ಚಿತ್ರದ ಪ್ರಥಮ ಪತ್ರಿಕಾಗೋಷ್ಠಿಯಾಗಿರುವುದರಿಂದ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಂಡರು. ಜಯಲಲಿತಾ ಚಿತ್ರವನ್ನು ಮಾಡುತ್ತಿರುವಾಗಲೇ ನಾನು ಈ ಚಿತ್ರದ ಕತೆಯನ್ನು ಶರಣಗ್ ಗೆ ಹೇಳಿದ್ದೆ. ಅವರೇ ನನಗೆ ನಿರ್ಮಾಪಕ ಉದಯ್ ಕೆ ಮೆಹ್ತಾರನ್ನು ಪರಿಚಯಿಸಿಕೊಟ್ಟಿದ್ದಾರೆ. ಇದೀಗ ಚಿತ್ರದ ಮುಕ್ಕಾಲು ಭಾಗ ಪೂರ್ತಿಯಾಗಿದೆ. ಸಾಧು ಕೋಕಿಲ, ರವಿಶಂಕರ್, ನೀನಾಸಂ ಅಶ್ವಥ್ಥ್ ಮೊದಲಾದವರ ತಾರಾಗಣ ಚಿತ್ರದಲ್ಲಿದೆ. ಮಾತ್ರವಲ್ಲ ಪನ್ನೀರ್ ಸೆಲ್ವಂ ಛಾಯಾಗ್ರಹಣ ಚಿತ್ರದ ಪ್ರಮುಖ ಪ್ಲಸ್ ಪಾಯಿಂಟ್ ಆಗಿರುತ್ತದೆ ಎಂದು ಹೇಳಲು ಅವರು ಮರೆಯಲಿಲ್ಲ. ಬಳಿಕ ನಾಯಕ ಶರಣ್ ಎಂದಿನಂತೆ ಹೆಚ್ಚಿನ ಮಾಹಿತಿಗಳೊಂದಿಗೆ ಮಾತನಾಡತೊಡಗಿದರು. ಇದು ಸುಮಾರು 1939ರ ಕಾಲಘಟ್ಟದಲ್ಲಿನಡೆಯುವ ಕತೆ. ಆಗಿನ ಕಾಲದ ರಾಜನಾಗಿ ನಟಿಸುವುದರ ಜೊತೆಗೆ 2014ರಲ್ಲಿನ ಬಾಟಲ್ ಮಣಿ ಎಂಬ ಆಧುನಿಕ ಶರಣ್ ಕೂಡ ಚಿತ್ರದಲ್ಲಿರುತ್ತಾನೆ. ಆದರೆ ಎರಡೂ ಕಾಲಘಟ್ಟಗಳನ್ನು ಒಟ್ಟೊಟ್ಟಿಗೆ ಸೇರಿಸಿ ತೋರಿಸುವುದು ಚಿತ್ರದ ವಿಶೇಷ. ರ್ಯಾಂಬೋ ಮತ್ತು ವಿಕ್ಟರಿ ಬಳಿಕ ಅರ್ಜುನ್ ಜನ್ಯ ಜೊತೆಗಿನ ತಮ್ಮ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರದ ಹಾಡುಗಳು ಮತ್ತೊಂದು ಸುಪರ್ ಹಿಟ್ ಆಲ್ಬಮ್ ಆಗುವ ನಿರೀಕ್ಷೆ ನೀಡಿದೆ. ನಾಗೇಂದ್ರ ಪ್ರಸಾದ್ ಜೊತೆಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಎಲ್ಲ ಐದು ಹಾಡುಗಳಿಗೂ ಮುರಳಿ ಕೊರಿಯಾಗ್ರಫಿ ಮಾಡಿರುವುದು ವಿಶೇಷ. ಅದೇ ರೀತಿ ನನ್ನ ಚಿತ್ರದ ಪರ್ಮನೆಂಟ್ ಕಲಾವಿದರೆನಿಸಿದ ರವಿಶಂಕರ್ ಮತ್ತು ತಬಲಾ ನಾಣಿ ಇರುತ್ತಾರೆ ಎಂದರು ಶರಣ್. ನಾಯಕಿ ಇಶಿಕಾ ದತ್ತ ಬಾಲಿವುಡ್ ನಟಿ ತನುಶ್ರೀ ದತ್ತಾ ಸಹೋದರಿಯಾಗಿದ್ದು ಚಿತ್ರದ ಮೂಲಕ ನನಗೆ ತಾಳ್ಮೆಯುಳ್ಳ ನಿರ್ದೇಶಕ, ಒಳ್ಳೆಯ ನಿರ್ಮಾಪಕ ಮತ್ತು ಆತ್ಮೀಯ ನಾಯಕ ನಟನ ಪರಿಚಯವಾಯಿತು ಎಂದರು. ನಿರ್ಮಾಪಕ ಅಣಜಿ ನಾಗರಾಜ್ ಸ್ನೇಹಪೂರ್ವಕವಾಗಿ ವೇದಿಕೆಯಲ್ಲಿದ್ದರು. ಆರ್.ಜೆ ನವೀನ ಕಾರ್ಯಕ್ರಮ ನಿರೂಪಿಸಿದರು.
2014-11-08
- Namo Bhootatma Audio Released
'ನಮೋ ಭೂತಾತ್ಮ' ಚಿತ್ರದ ಆಡಿಯೋ ಸೀಡಿ ಬಿಡುಗಡೆ
ನಮೋ ಭೂತಾತ್ಮ ಚಿತ್ರದ ಮೊದಲ ಪತ್ರಿಕಾಗೋಷ್ಠಿಯನ್ನು ಚಿತ್ರದ ಆಡಿಯೋ ಬಿಡುಗಡೆಗೊಳಿಸುವ ಮೂಲಕ ನೆರವೆರಿಸಲಾಯಿತು. ಚಿತ್ರವು ಭಯದೊಂದಿಗೆ ಹಾಸ್ಯರಸವನ್ನೂ ಹೊಂದಿದ್ದು ತಮಿಳಿನ 'ಯಮರಿಕ್ಕು ಭಯಮೇ' ಚಿತ್ರದಿಂದ ರಿಮೇಕ್ ಮಾಡಲಾಗಿದೆಯಂತೆ. ಮೂಲಚಿತ್ರವನ್ನು ಯಶಸ್ವಿಯಾಗಿ ನಿರ್ಮಿಸಿದ ಎರಿಕ್ ಕುಮಾರ್ ಸ್ವತಃ ಕನ್ನಡದಲ್ಲಿಯೂ ನಿರ್ಮಿಸಲು ಮುಂದಾಗಿದ್ದು ಅವರಿಗೆ ಕೋಮಲ್ ರ ಪತ್ನಿ ಅನಸೂಯ ಮತ್ತು ಶ್ರುತಿ ಬೆಳ್ಳಿಯಪ್ಪ ಸಾಥ್ ನೀಡಿದ್ದಾರೆ. ಚಿತ್ರದ ಎರಡು ಹಾಡುಗಳನ್ನು ಪ್ರದರ್ಶಿಸಿದ ಬಳಿಕ ತೆಲುಗಿನ ಖ್ಯಾತ ಹಾಸ್ಯನಟ ಅಲಿ ಮೊದಲ ಬಾರಿ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿರುವ ಟ್ರೇಲರ್ ಪ್ರದರ್ಶನವೂ ನಡೆಯಿತು. ಆಡಿಯೋ ಸೀಡಿಯನ್ನು ಕೋಮಲ್ ಅಣ್ಣ ನವರಸನಾಯಕ ಜಗ್ಗೇಶ್ ನೆರವೇರಿಸಿದರು. ಜಗ್ಗೇಶ್ ನನಗೆ ತಾಯಿಯಂತೆ ಎಂದು ಕೋಮಲ್ ಹೇಳಿದ ಸಂದರ್ಭದಲ್ಲಿ ಜಗ್ಗೇಶ್ ಭಾವುಕರಾದರು. ಸಿನೆಮಾ ಎಂದರೆ ಎಲ್ಲವನ್ನೂ ಬಿಟ್ಟು ಧುಮುಕುವ ಪ್ಯಾಷನ್ ನನ್ನ ತಮ್ಮನದ್ದು. ಚಿತ್ರಕ್ಕಾಗಿ ತುಂಬ ಖರ್ಚು ಮಾಡಿದ್ದಾನೆ. ಆತನ ಪ್ರಯತ್ನಗಳಿಗೆ ಮಾಧ್ಯಮದ ಬೆಂಬಲವಿರಬೇಕೆಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಚಿತ್ರದ ಮೂಲಕ ನವ ನಿರ್ದೇಶಕರಾಗಿ ಪರಿಚಿತಗೊಳ್ಳುತ್ತಿರುವ ನೃತ್ಯ ನಿರ್ದೇಶಕ ಮುರಳಿ ಈ ಚಿತ್ರವನ್ನು ಚೆನ್ನಾಗಿ ಪೂರ್ತಿಗೊಳಿಸುವುದು ನನ್ನ ಕನಸಾಗಿತ್ತು ಎಂದರು. ಅವರೊಂದಿಗೆ ನಮಗಿದ್ದ ಕೆಮಿಸ್ಟ್ರಿಯೇ ಅವರನ್ನು ನಿರ್ದೇಶಕರನ್ನಾಗಿಸಲು ಸಾಧ್ಯಮಾಡಿತು ಎಂದ ಕೋಮಲ್ ಈ ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರದ ಧ್ವನಿಸಾಂದ್ರಿಕೆಯನ್ನು ಮಾರುಕಟ್ಟೆಗೆ ತರಲು ಮುಂದೆ ಬಂದಿರುವ ಸೋನಿ ಆಡಿಯೋವನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಚಿತ್ರದ ನಾಲ್ವರು ನಾಯಕಿಯರಲ್ಲೊಬ್ಬರಾದ ಐಶ್ವರ್ಯಾ ಮೆನನ್ ಜೊತೆಗೆ ಸಂಗೀತ ನಿರ್ದೇಶಕ ಪರ್ಹಾನ್ ರೋಶನ್, ಚಿತ್ರ ತಂಡದ ಮಹೇಶ್, ಮಣಿಮೊದಲಾದವರು ವೇದಿಕೆಯಲ್ಲಿದ್ದರು.
2014-11-07
- Abhimanyu Kannada Movie Review
ಅಭಿಮನ್ಯು ಚಿತ್ರ ವಿಮರ್ಶೆ
ಅಭಿಮನ್ಯು ಸೋಲುವುದಿಲ್ಲ! ಹೊಡೆದಾಟದ ಚಿತ್ರದಲ್ಲಿ ಕೂಡ ಹೇಗೆ ಒಂದು ಒಳ್ಳೆಯ ಸಂದೇಶ ನೀಡಬಹುದೆಂಬುದನ್ನು ಅಭಿಮನ್ಯು ಚಿತ್ರದ ಮೂಲಕ ಅರ್ಜುನ್ ಸರ್ಜ ಸಾಬಿತು ಮಾಡಿದ್ದಾರೆ.ಚಿತ್ರದ ಆರಂಭದಲ್ಲೇ ತೋರಿಸಿರುವ ಕಥೆಯಲ್ಲಿ ಪ್ರತಿಷ್ಠಿತ ಕಾನ್ವೆಂಟ್ ನಲ್ಲಿ ತನ್ನ ಮಗಳನ್ನು ಕಲಿಸ ಬಯಸುವ ಬಡವನಿದ್ದಾನೆ. ಆತ ಅಲ್ಲಿನ ಭಾರೀ ಫೀಸನ್ನು ಪೂರ್ತಿಯಾಗಿ ಕಟ್ಟಲಾಗದೆ ಕುಟುಂಬ ಸಮೇತ ಆತ್ಮಹತ್ಯೆಗೈಯುತ್ತಾನೆ. ಈ ದುರಂತವನ್ನು ಕಣ್ಣಾರೆ ಕಂಡ ಒಬ್ಬ ಕರಾಟೆ ಮಾಸ್ಟರ್ ಖಾಸಗಿ ಶಿಕ್ಷಣ ಸಂಸ್ಥೆಗಳನ್ನೆಲ್ಲ ಸರ್ಕಾರೀಕರಣಗೊಳಿಸಲು ಹೋರಾಡುತ್ತಾನೆ. ಆತನನ್ನು ಧಮನಿಸಲು ಖಾಸಗಿ ಶಿಕ್ಷಣ ಸಂಸ್ಥೆಯ ಮಾಲಕರು ಡಾನ್ ಒಬ್ಬನ ಮೂಲಕ ಹಿಂಸಾತ್ಮಕ ಪ್ರಯತ್ನ ಮಾಡುತ್ತಾರೆ. ಇದೆಲ್ಲವನ್ನು ಕರಾಟೆ ಮಾಸ್ಟರ್ ಹೇಗೆ ಸಮರ್ಥವಾಗಿ ಎದುರಿಸಿ ಗೆಲ್ಲುತ್ತಾನೆ ಎಂಬುದೇ ಚಿತ್ರದ ಕತೆ. ಆರಂಭದಲ್ಲಿರುವ ಬಡವನ ಮನೆಯ ಕತೆ ಒಂದು ಶೈಕ್ಷಣಿಕ ಕಿರುಚಿತ್ರವೇನೋ ಎಂಬಂತೆ ಅನಿಸದಿರದು. ದುಡ್ಡಿಗಾಗಿ ಕಿಡ್ನಿ ಮಾರುವ ತಂದೆಯ ಪಾತ್ರದ ಮೂಲಕ ಸಕತ್ ಸೆಂಟಿಮೆಂಟ್ ಗೆ ಪ್ರಯತ್ನಿಸಲಾಗಿದೆ. ಆದರೆ ಬಡತನಕ್ಕೆ ರೂಪಕೊಟ್ಟಂತೆ ಕಾಣಿಸುವ ಬೀರಾದಾರ್ ಪಾತ್ರ ನಿರ್ವಹಣೆ ಕತೆಗೆ ಜೀವತುಂಬಿದೆ. ತಮ್ಮ ನಟನೆ ಕಂಡವರು ಮರೆಯಲಾಗದಂಥ ಅಭಿನಯವನ್ನು ಬೀರಾದಾರ್ ನೀಡಿದ್ದಾರೆ. ಅರ್ಜುನ್ ಸರ್ಜಾ ಇನ್ನೂ ಜಂಟ್ಲ್ ಮ್ಯಾನ್ ಇಮೇಜ್ ನಲ್ಲೇ ಇರುವುದನ್ನು ಚಿತ್ರದ ಆರಂಭದಿಂದಲೇ ಕಾಣಬಹುದು. ಮಗು ಮತ್ತು ಕುಟುಂಬದ ಸಾವು ನಾಯಕ ಅತನ ಗುರಿಯನ್ನೇ ಬದಲಿಸುವಷ್ಟರ ಮಟ್ಟಿನ ಸಂಬಂಧ ಹೊಂದಿತ್ತು ಎಂಬುದನ್ನು ಪರಿಣಾಮಕಾರಿಯಾಗಿ ತೋರಿಸಲಾಗಿಲ್ಲ. ಅದೇ ರೀತಿ ನಾಯಕಿ ಕೂಡ ನಾಯಕನನ್ನು ಆರಂಭದಿಂದಲೇ ಯಾಕೆ ಅಷ್ಟೊಂದು ಇಷ್ಟಪಟ್ಟಿರುತ್ತಾಳೆ ಎಂಬುದಕ್ಕೂ ಉತ್ತರವಿಲ್ಲ. ಅರ್ಜುನ್ ಎಂದಿನಂತೆ ನಟನೆಗಿಂತ ಹೊಡೆದಾಟದಲ್ಲಿ ಆಕರ್ಷಕವೆನಿಸುತ್ತಾರೆ. ಸ್ಟಂಟ್ ಮಾಸ್ಟರ್ ಕೂಡ ಅಭಿನಂದನಾರ್ಹರಾಗುತ್ತಾರೆ. ನಾಯಕಿ ಸುರ್ವಿನ್ ಚಾವ್ಲಾರಲ್ಲಿ ಆಕೆಯ ಚೆಲುವಿನಷ್ಟು ನಟನೆ ಕಾಣಿಸದು. ಬಹುಶಃ ಚಿತ್ರವನ್ನು ಡಬ್ ಮಾಡುವ ಉದ್ದೇಶದಿಂದಲೇ ಇರಬಹುದು ಹೆಚ್ಚಿನ ಪಾತ್ರಗಳಿಗೆ ತಮಿಳು, ತೆಲುಗು ಕಲಾವಿದರನ್ನೇ ಬಳಸಿಕೊಳ್ಳಲಾಗಿದೆ. ರಾಹುಲ್ ದೇವ್ ಪಾತ್ರಕ್ಕೆ ಅನಗತ್ಯ ಬಿಲ್ಡಪ್ ನೀಡಲಾಗಿದೆ. ತಮಿಳಲ್ಲಿ ವಡಿವೇಲು ಮಾಡುವ ಹಾಸ್ಯಕ್ಕಾಗಿ ಹಾಸ್ಯವೆಂಬಂಥ ಪಾತ್ರವನ್ನು ಜಹಾಂಗೀರ್ ಟ್ರ್ಯಾಕ್ ಮೂಲಕ ತೋರಿಸಲಾಗಿದೆ. ತಮ್ಮ ಶೈಲಿ ಬಿಟ್ಟು ಸಂಗೀತ ನೀಡಿರುವ ಅರ್ಜುನ್ ಜನ್ಯಾ ನಿರಾಶೆ ಮೂಡಿಸುತ್ತಾರೆ. ಅನಗತ್ಯ ದೃಶ್ಯ ಮತ್ತು ಹಾಡುಗಳಿಗೆಲ್ಲ ಸ್ವಲ್ಪ ಕತ್ತರಿ ಹಾಕಿದ್ದರೆ ಚಿತ್ರದ ದೀರ್ಘಾವಧಿಯನ್ನು ಕಡಿಮೆಗೊಳಿಸಬಹುದಿತ್ತು. ಚಿತ್ರ ಮೊದಲೊಂದಷ್ಟು ಬೋರು ಹೊಡೆಯುತ್ತದೆ. ಆರಂಭದಲ್ಲೇ ನಾಯಕನಿಗೆ ಗುಂಡೇಟು ಬೀಳುವುದನ್ನು ತೋರಿಸುವುದರಿಂದಾಗಿ ಮುಂದೆ ನಾಯಕನ ರೌದ್ರಾವತಾರ ನೋಡಲು ಪ್ರೇಕ್ಷಕರು ಕಾಯುತ್ತಾರೆ. ಆ ಕಾಯುವಿಕೆಗೆ ನಿರಾಶೆ ಮಾಡದಂತೆ ಚಿತ್ರಕ್ಕೆ ಅಂತ್ಯ ನೀಡುವಲ್ಲಿ ಅರ್ಜುನ್ ಯಶಸ್ವಿಯಾಗಿದ್ದಾರೆ.
2014-11-07
- life super guru
'ಲೈಫ್ ಸೂಪರ್ ಗುರು' ಅಂತಾರೆ ಯೋಗಿ ಮತ್ತು ಗುರು
ಕನ್ನಡದ ಟಿ.ವಿ ವಿಭಾಗದ ಮನೋರಂಜನೆಗೆ ಮತ್ತೊಂದು ರಿಯಾಲಿಟಿ ಸೋ ಹೆಜ್ಜೆಯಿಟ್ಟಿದೆ. ರಾಘವೇಂದ್ರ ಹುಣಸೂರ್ ತಲೆಗೆ ಹೊಳೆದ ಕ್ರಿಯೇಟಿವ್ ಐಡಿಯಾ ಲೈಫ್ ಸೂಪರ್ ಗುರು ಎಂಬ ಹೆಸರಲ್ಲಿ ವೀಕ್ಷಕರ ಮುಂದೆ ಬಂದಿದೆ. ಸದಾ ವಿಭಿನ್ನ ರೀತಿಯ ರಿಯಾಲಿಟಿ ಶೋಗಳಿಗೆ ಹೆಸರಾದ ಜೀ ವಾಹಿನಿಯ ಪ್ರಸ್ತುತ ಕೊಡಡುಗೆಯಾದ 'ಲೈಫ್ ಸೂಪರ್ ಗುರು' ಕೂಡ ಅಷ್ಟೇ ವಿಭಿನ್ನತೆಗೆ ಹೆಸರಾಗಿದೆ. ರಿಯಾಲಿಟಿ ಶೋಗಳು ಯಂಗ್ ಸ್ಟರ್ ಗಳಿಗೆ ಮಾತ್ರವೆಂಬುದನ್ನು ದೂರ ಮಾಡುವಂತೆ ಇದರಲ್ಲಿ 60 ಮತ್ತು ಅದಕ್ಕಿಂತ ಮೇಲ್ವಯಸ್ಸಿನವರನ್ನು ಕೂಡ ಪಾಲ್ಗೊಳ್ಳುವಂತೆ ಮಾಡಲಾಗಿದೆ. ಅಂಥ ಹತ್ತು ಮಂದಿ ತಂಡವನ್ನು ಪ್ರತಿನಿಧಿಸಿ 42ರ ನಿರ್ದೇಶಕ ಗುರುಪ್ರಸಾದ್ ಇದ್ದರೆ 24ರ ಹರೆಯದ ಲೂಸ್ ಮಾದ ಯೋಗಿ 18ರಿಂದ 23ರ ವರೆಗಿನ ಹುಡುಗರನ್ನು ಪ್ರತಿನಿಧಿಸಲಿದ್ದಾರೆ. ಇವರಿಬ್ಬರ ತಂಡಗಳನ್ನು ಮಾಡಿ ಅವರನ್ನು ಮೂರುವರೆ ತಿಂಗಳ ಕಾಲ ಶೋನಲ್ಲಿ ಬಳಸಲಾಗುವುದಂತೆ. ಅಂದಹಾಗೆ ಈ ಸಂದರ್ಭದಲ್ಲಿ ಅವರಿಗೆ ವಿವಿಧ ಟಾಸ್ಕ್ ಗಳನ್ನು ನೀಡಿ ಅದರಲ್ಲಿ ವಿಜಯಿಗಳನ್ನು ತೀರ್ಮಾನಿಸಲಾಗುವುದಂತೆ. ಇದರಲ್ಲಿ ಪಾಲ್ಗೊಳ್ಳುವ 60ರ ಮೇಲ್ಪಟ್ಟವರಲ್ಲಿ 60ರ ವಿಧುರ, 67ರ ಯೋಧ, 83ರ ಬೈಕ್ ರೈಡರ್ ಹೀಗೆ ವಿವಿಧ ವ್ಯಕ್ತಿತ್ವದ ಹಿರಿಯರಿದ್ದಾರೆ. ಅದೇ ರೀತಿ ಯುವಕರಲ್ಲಿ ಮನೆಯೊಂದಿಗೆ, ಪೋಷಕರೊಂದಿಗೆ ಸಂಪರ್ಕವಿರಿಸಿಕೊಳ್ಳದವರು ಕೂಡ ಇದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ಜೀ ತಂಡ ವಿವರಿಸಿತು. ಡ್ಯಾನ್ಸ್ ಶೋಗೆ ಜಡ್ಜ್ ಆದಮೇಲೆ ರಿಯಾಲಿಟಿ ಶೋಗಳ ಮೇಲೆ ಕ್ರೇಜ್ ಹುಟ್ಟಿಕೊಂಡಿದೆ ಎಂದಿರುವ ಗುರು ಈ ಬಾರಿಯಾದರೂ ತಮ್ಮ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗುತ್ತಾರ ನೋಡಬೇಕಿದೆ.
2014-11-06
- Harivu Films Premier Shw
'ಹರಿವು' ಚಿತ್ರಕ್ಕೆ ಗಣ್ಯರ ಮೆಚ್ಚುಗೆ
ಕನ್ನಡ ಸಿನಿ ಮಾಸಿಕ 'ಚಿತ್ರಸಂತೆ'ಯ ಸಂಪಾದಕ ಗಿರೀಶ್ ಗೌಡರ ಜೊತೆಗೆ ಆಸ್ಪೆಕ್ಟ್ ಮೀಡಿಯಾದ ಅವಿನಾಶ್ , ನವೀನ್ ಕುಮಾರ್ ಮತ್ತು ಮಹೇಶ್ ಕುಮಾರ್ ಸೇರಿಕೊಂಡು ನಿರ್ಮಿಸಿರುವ ಚಿತ್ರ ಹರಿವು. ಇದರ ಪ್ರೀಮಿಯರ್ ಪ್ರದರ್ಶನವು ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಪದ್ಮಶ್ರೀ ಡಾ. ಗಿರೀಶ್ ಕಾಸರವಳ್ಳಿ, ಡಾ. ಆಶಾ ಬೆನಕಪ್ಪ, ಎಂ.ಎಸ್ ರಮೇಶ್, ಜಿಎಸ್ ಭಾಸ್ಕರ್, ಗೋಪಾಲಕೃಷ್ಣ ಪೈ ಮೊದಲಾದ ಗಣ್ಯರೊಂದಿಗೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಅಲ್ಲಿ ಉಪಸ್ಥಿತರಿದ್ದರು. ನಾಟಕೀಯ ಬೆಳವಣಿಗೆಗಳನ್ನು ಬದಿಗಿಟ್ಟು ತಂದೆ ಮಗನ ಸಂಬಂಧದ ಬಗ್ಗೆ ಸೃಜನಾತ್ಮಕವಾಗಿ ಚಿತ್ರ ನೀಡಿರುವ ಚಿತ್ರತಂಡವನ್ನು ಪ್ರಶಂಸಿಸಿದ ಗಿರೀಶ್ ಕಾಸರವಳ್ಳಿ ಇದೇ ವಸ್ತುವನ್ನಿಟ್ಟುಕೊಂಡು ಆಶಾ ಬೆನಕಪ್ಪರ ಲೇಖನವೊಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತೆಂಬುದನ್ನು ನೆನಪಿಸಿಕೊಂಡರು. ಇದೇ ರೀತಿ ವೈದ್ಯಕೀಯ ವಿಭಾಗಕ್ಕೆಸಂಬಂಧಿಸಿದ ಚಿತ್ರಗಳು ಹೆಚ್ಚು ಕನ್ನಡದಲ್ಲಿ ನಿರ್ಮಾಣಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಚಿತ್ರದಲ್ಲಿ ಪುಟ್ಟ ಹುಡುಗನ ನಟನೆಯನ್ನು ಹೊಗಳಿದ ಎಂ.ಎಸ್ ರಮೇಶ್ ಇತ್ತೀಚೆಗೆ ರವಿಚಂದ್ರನ್ ನೀಡಿರುವ ಹೇಳಿಕೆಯೊಂದಕ್ಕೆ ಚಿತ್ರದ ಸಬ್ಜೆಕ್ಟ್ ತುಂಬ ಹತ್ತಿರದಲ್ಲಿದೆ ಎಂದರು. ಚಿತ್ರ ನೋಡಿ ನಿರ್ದೇಶಕ ಶಶಾಂಕ್ ಇದು ನನ್ನ ಬದುಕಿಗೆ ಹತ್ತಿರದ ಕತೆ ಎಂದು ಭಾವುಕರಾದರು. ಛಾಯಾಗ್ರಾಹಕ ಜಿಎಸ್ ಭಾಸ್ಕರ್ ಕೂಡ ಚಿತ್ರ ನೋಡಿದೊಡನೆ ಆತ್ಮೀಯತೆ ಸೃಷ್ಠಿಸುವುದಾಗಿ ಹೇಳಿದರು. ಚಿತ್ರಕಥಾ ಕೃತೃ ಮತ್ತು ನಿರ್ದೇಶಕ ಮನ್ಸೂರ್, ಛಾಯಾಗ್ರಾಹಕ ಆನಂದ್ ಸುರೇಶ್, ಸಂಗೀತ ನಿರ್ದೇಶಕ ಮತ್ತು ಗಾಯಕ ಚರಣ್ ರಾಜ್, ನಾಯಕ ಸಂಚಾರಿ ವಿಜಯ್, ಅರವಿಂದ್ ಕುಪ್ಲೀಕರ್, ಶ್ವೇತಾ, ಎಂಸಿ ಆನಂದ್, ಮಾಸ್ಟರ್ ಶೋಹೆಬ್ ಮೊದಲಾದವರು ಉಪಸ್ಥಿತರಿದ್ದರು
2014-11-04
- Looti film Pressmeet
ರಸಿಕರ ಮನ 'ಲೂಟಿ'ಗೈಯಲು ಇಷಾ ಡಾನ್ಸ್
ಲೂಟಿ ಚಿತ್ರಕ್ಕಾಗಿ ಐಟಂ ಡಾನ್ಸ್ ಮಾಡುವ ಮೂಲಕ ರಸಿಕರ ಮನಸ್ಸು ಲೂಟಿ ಮಾಡಲು ತಯಾರಾಗಿದ್ದಾರೆ ಇಷಾ ಕೊಪ್ಪೀಕರ್. ಒಂದು ದಿನದಲ್ಲಿ ನಡೆಯುವ ದರೋಡೆಯೊಂದನ್ನು ಅಧಾರಿಸಿ ತಯಾರಾಗುತ್ತಿರುವ ಚಿತ್ರವಿದು. ಚಿತ್ರದಲ್ಲಿ ಎಸಿಪಿ ಪಾತ್ರವನ್ನು ನಿರ್ವಹಿಸಿರುವ ಇಷಾ ಐಟಂ ಡಾನ್ಸ್ ಮಾಡಿದ್ದಾದರೂ ಏಕೆ ಎಂಬುದನ್ನು ತೆರೆಯ ಮೇಲೆಯೇ ರಿವೀಲ್ ಮಾಡುವ ಉದ್ದೇಶ ಚಿತ್ರತಂಡದ್ದು. ಬಾಲಣ್ಣನ ಅಭಿಮಾನ್ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಆಕರ್ಷಕ ಸೆಟ್ ನಲ್ಲಿ ಇಷಾ ಮತ್ತು ತಂಡದ ಡಾನ್ಸ್ ತೋರಿಸಲೆಂದೇ ಮಾಧ್ಯಮದವರನ್ನು ಆಹ್ವಾನಿಸಿತ್ತು ಚಿತ್ರತಂಡ. 'ಡೇಂಜರಸ್ ಡಾರ್ಲಿಂಗ್ ಅಂತಾರೆ ನನ್ನ..' ಎಂದು ಆರಂಭಗೊಳ್ಳುವ ಹಾಡಿಗೆ ಮಾದಕವಾಗಿಯೇ ಹೆಜ್ಜೆ ಹಾಕುತ್ತಿದ್ದರು ಆಕೆ. ಅದೇ ಹಾಡಿನಲ್ಲಿ ಹೆಜ್ಜೆ ಹಾಕಲೆಂದೇ ಚಿತ್ರದ ನಾಯಕ ಧ್ರುವ ಶರ್ಮರ ಜೊತೆ ಸ್ವಯಂವರ ಚಂದ್ರು ಕೂಡ ಅರಬ್ ವೇಷಧಾರಿಯಾಗಿ ತಯಾರಾಗಿ ನಿಂತಿದ್ದರು. ಇಲ್ಲಿ ದರೋಡೆ ನಡೆಸುವವರಾಗಿ ಧ್ರುವಶರ್ಮ ಮತ್ತು ಚಂದ್ರು ಜೊತೆಗೆ ಶ್ವೇತಾ ಪಂಡಿತ್ ಕೂಡ ಇರುತ್ತಾರೆ. ಆದರೆ ಈ ಹಾಡಿನಲ್ಲಿ ಆಕೆ ಕಾಣಿಸಕೊಳ್ಳುವುದಿಲ್ಲವಾದ ಕಾರಣ ಪತ್ರಿಕಾಗೋಷ್ಠಿಯಲ್ಲಿಯೂ ಅವರ ಸಾನ್ನಿಧ್ಯವಿರಲಿಲ್ಲ. ಜೊತೆಗೆ ಖ್ಯಾತ ರಂಗನಟಿ ಬಿ.ಜಯಶ್ರೀಯವರು ಕೂಡ ಚಿತ್ರದಲ್ಲೊಂದು ವಿಶೇಷ ಪಾತ್ರ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ನಿರ್ದೇಶಕ ಗಿರೀಶ್ ಕಂಪ್ಲಾಪುರ ನೀಡಿದರು. ಅಂದಹಾಗೆ ಈ ಐಟಂ ಡಾನ್ಸ್ ನ ಕಾನ್ಸೆಪ್ಟೇ ಚಿತ್ರದ ನಿರ್ಮಾಪಕ ಎನ್.ಎಂ ನಿರಂಜನ್ ರದ್ದು ಎಂಬುದನ್ನು ತಿಳಿಸಿದಾಗ ಮಾತನಾಡಿದ ನಿರಂಜನ್ ತಾವು ಸಾಕಷ್ಟು ಇವೆಂಟ್ ಗಳನ್ನು ನಡೆಸಿದ್ದು ಅವುಗಳಿಗೆ ಹಾಕುವಂಥ ಸೆಟ್ ಇದು. ಅದೇ ಮಾದರಿಯ ಸೆಟ್ ನಲ್ಲೇ ಒಂದು ಹಾಡು ಇರಬೇಕೆಂಬ ಆಕಾಂಕ್ಷೆ ನನ್ನದಾಗಿತ್ತು. ಯಾಕೆಂದರೆ ಇಷಾ ಡಾನ್ಸ್ ಗೆ ಕೂಡ ಜನಪ್ರಿಯರು. ಅದನ್ನು ಕನ್ನಡ ಚಿತ್ರದ ಮೂಲಕ ಪ್ರೇಕ್ಷಕರಿಗೆ ತೋರಿಸುವುದು ನನ್ನ ಆಗ್ರಹವಾಗಿತ್ತು ಎಂದರು. ಈ ಹಾಡಿಗೆ ನಿರ್ಮಾಪಕರೇ ಸಾಹಿತ್ಯ ನೀಡಿದ್ದಾರೆಂಬುದು ಮತ್ತೊಂದು ವಿಶೇಷ. ಬಳಿಕ ಮಾತನಾಡಿದ ಇಷಾ ' ಸೂರ್ಯವಂಶ ಚಿತ್ರದ ಕಾಲದಿಂದಲೇ ನನಗೆ ನಿರ್ದೇಶಕ ಗಿರೀಶ್ ಪರಿಚಯ. ಜೊತೆಗೆ ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಹೇಳಿದಾಗ ಕೂಡ ಚೆನ್ನಾಗಿದೆಯೆನಿಸಿತು. ಹಾಗಾಗಿ ಹಿಂದೆ ಮುಂದೆ ನೋಡದೆ ಚಿತ್ರವನ್ನು ಒಪ್ಪಿಕೊಂಡೆ ಎಂದರು. ತಮ್ಮ ಚಿತ್ರಬದುಕಿನ ಆರಂಭ ದಕ್ಷಿಣದಿಂದಲೇ ಆಯಿತಲ್ಲವೇ ಎಂಬುದನ್ನು ಅವರಿಗೆ ನೆನಪಿಸಿದಾಗ ಮೂಲತಃ ದಕ್ಷಿಣ ಭಾರತೀಯಳಾದ ತಾವು ಮಂಗಳೂರಿನ ಹುಡುಗಿ ಎಂದು ಹೇಳಿಕೊಳ್ಳಲು ಆಕೆ ಮರೆಯಲಿಲ್ಲ. ಅಂದಹಾಗೆ ಇದು ಐಟಂ ಡಾನ್ಸೋ, ವಿಶೇಷ ಹಾಡೋ ಎಂದು ಕೇಳಿದರೆ ಅವೆರಡರ ನಡುವಿನ ವ್ಯತ್ಯಾಸವೇನೆಂಬುದು ನನಗಿನ್ನೂ ಗೊತ್ತಾಗಿಲ್ಲ ಎಂದರು ಇಷಾ! ಬ್ರೂಸ್ ಲೀ ಅಭಿಮಾನಿಯಾಗಿರುವ ತಾನು ಸಕತ್ ಆ್ಯಕ್ಷನ್ ಪ್ರಿಯೆಯಾಗಿದ್ದು, ಟಾಕ್ವಾಂಡೋನಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವುದಾಗಿ ತಿಳಿಸಿದ ಅವರು ಲೂಟಿ ಚಿತ್ರದ ಸಾಹಸ ದೃಶ್ಯಗಳಲ್ಲಿ ಡ್ಯೂಪ್ ಗಳಿಲ್ಲದೆ ಭಾಗವಹಿಸಿದ್ದಾರಂತೆ. ಚಿತ್ರದ ಛಾಯಾಗ್ರಾಹಕ ಗಂಗರಾಜು ತಾವು ರಘವೀರ್ ಸ್ನೇಹಿತರಾಗಿದ್ದು ಅವರ ಮೂಲಕವೇ ಚೈತ್ರದ ಪ್ರೇಮಾಂಜಲಿಗೆ ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಪರಿಚಯಗೊಂಡಿದ್ದನ್ನು ನೆನಪಿಸಿಕೊಂಡರು. ಕನ್ನಡದ ಸೂರ್ಯವಂಶ, ಜಿತೇಂದ್ರ ಸೇರಿದಂತೆ ಒಂದಷ್ಟು ತಮಿಳು ಚಿತ್ರಗಳಿಗೂ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಕೀರ್ತಿ ಗಂಗರಾಜುರದ್ದು. ಹಾಡಿಗೆ ನೃತ್ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಇಮ್ರಾನ್ ಸರ್ದಾರಿಯ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಇಷಾರನ್ನು ಹೊಗಳಿದರು.
2014-11-03
- Just Madveli teaser release
'ಜಸ್ಟ್ ಮದ್ವೇಲಿ' ಚಿತ್ರದ ಟೀಸರ್ ಬಿಡುಗಡೆ
ಕನ್ನಡಕ್ಕೆ ಹರೀಶ್ ಎಂಬ ಸದೃಢವಾದ ನಾಯಕರೊಬ್ಬರ ಆಗಮನವಾಗಿದೆ. ಜಸ್ಟ್ ಮದ್ವೇಲಿ ಎಂಬ ಚಿತ್ರಕ್ಕೆ ನಾಯಕನಾಗಿರುವ ಅವರೇ ಚಿತ್ರದ ನಿರ್ಮಾಣವನ್ನು ಕೂಡ ಮಾಡುತ್ತಿರುವುದು ವಿಶೇಷ. ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಹರೀಶ್ ಒಳ್ಳೆಯ ಬಾಡಿ ಬಿಲ್ಡರ್ ಕೂಡ ಹೌದು. ಹಾಗಾಗಿಯೇ ಆರಂಭದಲ್ಲೇ ಅವರಿಗೆ ಸದೃಢ ನಾಯಕನೆಂಬ ವಿಶೇಷಣ ನೀಡಿದ್ದೇವೆ. ಮದುವೆ ಮನೆಗೆ ಬರುವ ಛಾಯಾಗ್ರಾಹಕನೊಬ್ಬ ತನ್ನ ಕ್ಯಾಮರಾ ಕಣ್ಣೊಳಗೆ ಸಿಕ್ಕು ಇಷ್ಟವಾದ ಹುಡುಗಿ ಮದುವೆ ಹೆಣ್ಣೇ ಎಂಬುದನ್ನು ತಿಳಿದುಕೊಳ್ಳುವಾಗ ತಡವಾಗಿರುತ್ತದೆ! ಆಕೆಯನ್ನು ಅಲ್ಲಿಂದ ಹಾರಿಸಿಕೊಂಡು ಹೋಗುವ ಆತ ಕ್ಲೈಮ್ಯಾಕ್ಸ್ ನಲ್ಲಿ ಏನು ಮಾಡುತ್ತಾನೆ ಎಂಬುದೇ ಚಿತ್ರದ ಸಸ್ಪೆನ್ಸ್ ಅಂಶ ಎನ್ನುತ್ತಾರೆ ಚಿತ್ರದ ನಿರ್ದೇಶಕ ಕೋಲಾರ ಸೀನು. ಅವರು ಮೂಲತಃ ಆದರ್ಶ ಫಿಲ್ಮ್ ಇನ್ಟ್ಯೂಟ್ ವಿದ್ಯಾರ್ಥಿಯಾಗಿದ್ದು ಎಆರ್ ಬಾಬು, ಪಿಎನ್ ಸತ್ಯಾ, ನಾಗಣ್ಣ ಮೊದಲಾದ ನಿರ್ದೇಶಕರ ಜೊತೆ ಸಿನೆಮಾಗಳಲ್ಲಿ ಮತ್ತು ಬಿ.ಸುರೇಶ್, ಕಲಾಗಂಗೋತ್ರಿ ಮಂಜು ಮೊದಲಾದವರೊಂದಿಗೆ ಧಾರಾವಾಹಿಗಳಿಗೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರು ಸಹಜವಾಗಿ ತಮ್ಮ ಈ ಪ್ರಥಮ ಚಿತ್ರದ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಚಿತ್ರದ ನಾಯಕಿ ದೀಪಾ ರಣಬಿಕ್ರಮ, ಜ್ವಾಲಾ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಿದ್ದು, ಇದು ನಾಯಕಿಯಾಗಿ ತಮಗೆ ಪ್ರಥಮ ಚಿತ್ರವೆಂದರು. ಫೈಟ್ ಮಾಸ್ಟರ್ ಡಿಫರೆಂಟ್ ಡ್ಯಾನಿಗೆ ಜಿಮ್ನಾಸ್ಟಿಕ್ ಬಾಡಿಯ ಪ್ರಭಾಕರ್ ನಂಥ ನಾಯಕ ಸಿಕ್ಕಿದ್ದು ಖುಷಿಯಾದರೂ ಚಿತ್ರದಲ್ಲಿ ಒಂದೇ ಫೈಟ್ ಇರುವುದಕ್ಕೆ ಬೇಸರವಿದೆ! ಚಿತ್ರದ ಐದು ಹಾಡುಗಳನ್ನು ಆನಂದ್ ಎಡಿಯೂರು ಕೊರಿಯಾಗ್ರಫಿ ಮಾಡಿದ್ದಾರೆ. ಉಗ್ರಂ ಬಳಿಕ ರವಿ ಬಸ್ರೂರು ತಮ್ಮ ಚಿತ್ರಕ್ಕೆ ಸಂಗೀತ ನೀಡಿದ್ದಾರೆಂದು ಚಿತ್ರತಂಡ ತಿಳಿಸಿತು. ಭಜರಂಗಿ ಲೋಕಿ, ಬ್ಯಾಂಕ್ ಜನಾರ್ಧನ್ ಮೊದಲಾದವರ ತಾರಾಗಣ ಹೊಂದಿರುವ ಚಿತ್ರವನ್ನು ಬೆಂಗಳೂರು ಮೈಸೂರುಗಳಲ್ಲಿ ಚಿತ್ರೀಕರಿಸಿ ಪೂರ್ತಿಗೊಳಿಸಲಾಗಿದ್ದು, ಸದ್ಯದಲ್ಲೇ ಆಡಿಯೋ ರಿಲೀಸ್ ಮಾಡಲಾಗುವುದೆಂದು ತಂಡ ಮಾಹಿತಿ ನೀಡಿದೆ.
2014-11-01
- Kasturi Nivasa in colour
ಕಲರ್ ಫುಲ್ ಕಸ್ತೂರಿ ನಿವಾಸ
ಕನ್ನಡದಲ್ಲಿ ಡಾ.ರಾಜಕುಮಾರ್ ಅಭಿನಯಿಸಿದ ಎವರ್ ಗ್ರೀನ್ ಚಿತ್ರ ಕಸ್ತೂರಿ ನಿವಾಸ. 43 ವರ್ಷಗಳ ಹಿಂದೆ ಚಿತ್ರೀಕರಣಗೊಂಡ ಈ ಸಿನೆಮಾವನ್ನು ಇದೀಗ ಬಣ್ಣಕ್ಕೆ ಬದಲಾಯಿಸಲಾಗಿದೆ. ಆದರೆ ಇದು ಬರೇ ಬಣ್ಣದ ಮಾತುಗಳಲ್ಲ ಎಂಬುದನ್ನು ಸಾಬೀತುಪಡಿಸಲು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾಧ್ಯಮದ ಮುಂದೆ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಚಿತ್ರ ಇಷ್ಟು ದೊಡ್ಡಮಟ್ಟದಲ್ಲಿ ಯಶಸ್ಸಾಗುವ ಕಲ್ಪನೆಯಿರಲಿಲ್ಲ. ಮಂಜಿನ ಗೋಲಿಯನ್ನು ಉರುಳಿಸಿಕೊಂಡು ಹೋದಾಗ ಅದು ಮುಂದೆ ಗುಡ್ಡದಷ್ಟು ಬೆಳೆಯುವಂತೆ ನಮ್ಮ ಪರಿಸ್ಥಿತಿ ಎನ್ನಬಹುದು. ಆದರೆ ಮೂಲಕತೆಯ ಬಗ್ಗೆ ಅಂದು ನಾವಿಟ್ಟ ಭರವಸೆ ಮಾತ್ರ ಖಂಡಿತಾ ಸುಳ್ಳಾಗಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು ಚಿತ್ರದ ನಿರ್ದೇಶಕ ಭಗವಾನ್. ವಾಸ್ತವದಲ್ಲಿ ಇದು ಜಿ.ಬಾಲಸುಬ್ರಹ್ಮಣ್ಯಂ ಎಂಬ ತಮಿಳಿನ ಕತೆಗಾರ ಬರೆದ ಕತೆಯಾಗಿತ್ತು. ಅವರು ಇದನ್ನು ಶಿವಾಜಿ ಗಣೇಶನ್ ಗಾಗಿ ಬರೆದಿದ್ದರು. ಆದರೆ ಅವರಿಗೆ ಕತೆ ಇಷ್ಟವಾಗಿರಲಿಲ್ಲ. ಆದರೆ ಕತೆ ಕೇಳಿದ ರಾಜ್ ಸಹೋದರ ವರದಪ್ಪ ಮತ್ತು ಚಿ. ಉದಯಶಂಕರ್ ಇದನ್ನು ರಾಜ್ ಗೋಸ್ಕರ ಮಾಡುವಂತೆ ನಿರ್ದೇಶಕ ದೊರೆ-ಭಗವಾನ್ ರಿಗೆ ಸೂಚಿಸಿದರಂತೆ. ಆ ಕಾಲದಲ್ಲೇ ಒಂದುಲಕ್ಷ ವೆಚ್ಚದ ಮನೆ ಸೆಟ್ ಹಾಕಿಸಿ ಚಿತ್ರೀಕರಣ ಆರಂಭಿಸಿದ ಕೆಸಿಎನ್ ಗೌಡರು ಸ್ವಲ್ಪ ದಿನದೊಳಗೆ ಚಿತ್ರವನ್ನು ಬಣ್ಣದಲ್ಲಿ ತೆಗೆಯುವ ಮನಸ್ಸು ಮಾಡಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದರಂತೆ. ಆದರೆ ಮರುಚಿತ್ರೀಕರಣ ನಡೆಸಿ ದುಂದುವೆಚ್ಚ ಮಾಡುವುದೇಕೆ ಎಂಬ ರಾಜ್ ಸಲಹೆಯ ಮೇರೆಗೆ ಚಿತ್ರ 20 ದಿನದೊಳಗೆ ಕಪ್ಪು ಬಿಳುಪಿನಲ್ಲಿ ಪೂರ್ತಿಯಾಗಿತ್ತು. ಚಿತ್ರ ನೂರು ದಿನದ ಅಭೂತಪೂರ್ವ ಯಶಸ್ಸು ಕಾಣುತ್ತಿದ್ದ ಹಾಗೆ ಅದರ ರಿಮೇಕ್ ಹಕ್ಕು ಪಡೆದುಕೊಂಡ ತಮಿಳಿಗರು ಚಿತ್ರವನ್ನು ಶಿವಾಜಿ ಗಣೇಶನ್ ನಾಯಕತ್ವದಲ್ಲಿ ಮಾಡಿದರೆಂಬುದು ಮತ್ತೊಂದು ವಿಶೇಷ. ಆದರೆ ಕೆಸಿಎನ್ ಗೌಡರಿಗೆ ಮಾತ್ರ ಚಿತ್ರವನ್ನು ಬಣ್ಣದಲ್ಲಿ ತರುವ ಆಸೆ ಹಾಗೆಯೇ ಉಳಿದಿತ್ತು. ಹಾಗಾಗಿ ಮತ್ತೆ ಚಿತ್ರವನ್ನು ಕಲರ್ ಮಾಡುವ ಪ್ರಯತ್ನ ಅವರ ಸಮ್ಮುಖದಲ್ಲೇ ನಡೆಯಿತು. ಆದರೆ ಅವರು ನಿಧನರಾದ ಮೇಲೆ ಮತ್ತೆ ಚಿತ್ರಕ್ಕೆ ಚಾಲನೆ ನೀಡಿದ ಅವರ ಪುತ್ರ ಕೆಸಿಎನ್ ಮೋಹನ್ ಇದೀಗ ತಂದೆಯ ಕನಸನ್ನು ನನಸುಮಾಡುವಲ್ಲಿ ಯಶಸ್ಸಾಗಿದ್ದಾರೆ. ಚಿತ್ರ ಇದೇ ನವೆಂಬರ್ ಏಳರಂದು ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲೇ ಪ್ರದರ್ಶನಗೊಳ್ಳಲಿದೆ. ಚಿತ್ರವನ್ನು ಬಣ್ಣಗೊಳಿಸುವ ಮೂಲಕ ತಮ್ಮ ಪ್ರತಿಭೆ ತೋರಿಸಿರುವ ಗುರು ಗೌತಮ್ ಇನ್ಫೋಟೆಕ್ ನ ಸುಂದರ್ ರಾಜ್ ತಮ್ಮ ಪಾರ್ಟ್ನರ್ಸ್ ಪ್ರದೀಪ್ ಶಾ ಮತ್ತು ಷಣ್ಮುಗಂ ಜೊತೆಗೆ 60 ಮಂದಿ ತಂತ್ರಜ್ಞರ ಸಹಾಯದೊಂದಿಗೆ ಒಂದೂವರೆ ವರ್ಷದಲ್ಲಿ ಚಿತ್ರದ ಬಣ್ಣವನ್ನೇ ಬದಲಾಯಿಸಿದ ಕತೆ ಹೇಳಿದರು. ಚಿತ್ರಕ್ಕೆ ಅಭಿಮಾನಿಗಳ ಅಭೂತಪೂರ್ವ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ.
2014-11-01
- Belli Movie Review
ಬೆಳ್ಳಿ ಚಿತ್ರ ವಿಮರ್ಶೆ
ಮಚ್ಚು ಬೆಳ್ಳಿ; ಶಿವಣ್ಣ ಬಂಗಾರ! ಚಿತ್ರದ ನಾಯಕ ಹಳ್ಳಿಯಿಂದ ನಗರಕ್ಕೆ ಬಂದು ದುಡ್ಡಿಗೋಸ್ಕರ ಮಚ್ಚು ಹಿಡಿಸಿಕೊಂಡವನು. ರೌಡಿಗಳೊಂದಿಗಿನ ಹೊಡೆದಾಟದಲ್ಲಿ ತಲೆಗೇಟಾಗಿ ಹುಚ್ಚು ಹಿಡಿಸಿಕೊಂಡವನು. ಆದರೆ ಇದರ ಹಂತ ಹಂತವಾದ ಕತೆಯನ್ನು ನಾಯಕನ ರೌಡಿ ತಂಡದ ಒಬ್ಬೊಬ್ಬರಿಂದಲೇ ತಿಳಿದುಕೊಳ್ಳುವ ಬರಹಗಾರ್ತಿಯ ಮೂಲಕ ಕತೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಹಾಗೆ ಕರ್ನಾಟಕದ ಪ್ರಥಮ ಮಹಿಳಾ ಐಎಎಸ್ ಅಧಿಕಾರಿಯೆನಿಸುವಾಕೆಗೂ ಬೆಳ್ಳಿಗೂ ಇರುವ ಸಂಬಂಧವನ್ನು ಕೂಡ ತಿಳಿದುಕೊಳ್ಳುತ್ತಾಳೆ. ಪೊಲೀಸ್ ಅಧಿಕಾರಿಯಾಗಿರುವ ಆಕೆಯ ಅಣ್ಣ ಆಕೆಯ ಪ್ರಿಯಕರನಾಗಿದ್ದ ಬಸವ ಎಂಬ ಬೆಳ್ಳಿಯನ್ನು ಎನ್ ಕೌಂಟರ್ ಮಾಡಿರುವುದಾಗಿ ಲೋಕಕ್ಕೆ ಹೇಳಿರುತ್ತಾನೆ. ಹಾಗಾಗಿ ಬೇರೆ ಮದುವೆಯ ಬಗ್ಗೆ ಆಕೆ ಯೋಚಿಸಿರುವುದಿಲ್ಲ. ಆದರೆ ಹುಚ್ಚನಾಗಿ ಮರೆವಿನ ರೋಗಕ್ಕೊಳಗಾದ ಬೆಳ್ಳಿಗೆ ಸಮಾರಂಭವೊಂದರಲ್ಲಿ ಈಕೆಯ ಭಾಷಣ ಹಳೆಯದನ್ನೆಲ್ಲ ನೆನಪಿಸುತ್ತದೆ. ಆಮೇಲೇನಾಗುತ್ತದೆ? ಬೆಳ್ಳಿ ಆಕೆಯ ಬಳಿಗೆ ಹೋಗುತ್ತಾನ? ಪ್ರೇಮಿಗಳು ಒಂದಾಗುತ್ತಾರ? ಅಥವಾ ನಿಜಕ್ಕೂ ಎನ್ ಕೌಂಟರ್ ಆಗಿಬಿಡುತ್ತಾನ ಎಂಬುದಕ್ಕೆ ಉತ್ತರವನ್ನು ತೆರೆಯ ಮೇಲೆ ನೋಡಬಹುದು. ಚಿತ್ರದ ಪೋಸ್ಟರ್ ಗಳಲ್ಲಿರುವಂತೆ ಪರದೆಯ ಮೇಲೆಯೂ ಮಚ್ಚುಗಳಿಗೆ ಕೊರತೆಯಿಲ್ಲ. ಬೆಳ್ಳಿತಟ್ಟೆಯಲ್ಲಿ ಊಟ ಮಾಡಿದ್ದಕ್ಕಾಗಿ ಶಿವರಾಜ್ ಪಾತ್ರಕ್ಕೆ ಬೆಳ್ಳಿ ಎಂಬ ಹೆಸರು ಬರುವುದೆಂದು ತಿಳಿಸಲಾಗಿದೆ. ಆದರೆ ಚಿತ್ರದಲ್ಲಿ ಬೆಳ್ಳಿಗಿಂತ ಮಚ್ಚುಗಳ ಹೊಳಪೇ ಹೆಚ್ಚು. ಹುಚ್ಚನಾಗಿ ಶಿವಣ್ಣನ ಬಂಗಾರದಂಥ ನಟನೆಯಿರದಿದ್ದಲ್ಲಿ ಇದು ಕೂಡ ಒಂದು ಸಾಧಾರಣ ರೌಡಿಸಂ ಚಿತ್ರವಾಗಿಬಿಡುತ್ತಿತ್ತು. ಯಾಕೆಂದರೆ ಇಲ್ಲಿಯೂ ಜೋಗಿ ಚಿತ್ರದ ದಟ್ಟವಾದ ಪ್ರಭಾವವನ್ನು ಕಾಣಬಹುದು. ಉದಾಹರಣೆಗೆ ತಾಯಿಯನ್ನು ಬಿಟ್ಟು ಹಳ್ಳಿಯಿಂದ ನಗರ ಸೇರುವ ನಾಯಕ ರೌಡಿಸಂಗಿಳಿಯುವುದು. ಆತನನ್ನು ಹುಡುಕಿಕೊಂಡು ಬರುವ ತಾಯಿ ಆತನ ಪತ್ತೆಗಾಗಿ ಪೋಸ್ಟರ್ ಹಚ್ಚಿ ಕಾಯುವುದು, ಮಾತ್ರವಲ್ಲ ಇಲ್ಲಿಯೂ ಬರಹಗಾರ್ತಿಯೊಬ್ಬಳ ಮೂಲಕವೇ ನಾಯಕನ ಕತೆ ಬಿಚ್ಚಿಟ್ಟುಕೊಳ್ಳುತ್ತಾ ಹೋಗುತ್ತದೆ. ಹಾಗಾಗಿಯೇ ತಾಯಿಯಾಗಿ ಪದ್ಮಾ ವಾಸಂತಿ, ಕತೆಗಾರ್ತಿ ಸುಧಾರಾಣಿಯ ಪಾತ್ರಗಳು ವಿಶೇಷವೆನಿಸುವುದಿಲ್ಲ. ಆದರೆ ನಾಯಕಿಯಾಗಿ ಕೃತಿಕರಬಂದಳದ್ದು ಹೊಸಥರ ಬಂಧ. ಆರಂಭದ ಚೆಲ್ಲು ಬಳಿಕದ ಐಎಎಸ್ ಶಿಸ್ತಿನಲ್ಲೂ ಗೆಲ್ಲುವ ಚೆಲುವು ಮತ್ತು ನಟನೆ. ನಾಯಕನ ಗೆಳೆಯರಾಗಿ ನಟಿಸಿರುವ ನಾಲ್ಕು ಮಂದಿಗೂ ಸೀಮಿತ ಅವಕಾಶ. ಕಾಲೇಜು ಹುಡುಗನಾಗಿ ರಿಸಲ್ಟ್ ನೋಡುವ ಶಿವಣ್ಣ, ಗುರುದತ್ ಕುಳಿತುಕೊಳ್ಳುವ ಮಚ್ಚಿನ ಸಿಂಹಾಸನ ಮೊದಲಾದವು ನಿರ್ದೇಶಕರ ಸೆನ್ಸ್ ರಹಿತ ಕನಸುಗಳಿಗೆ ಉದಾಹರಣೆ! ಒಟ್ಟಿನಲ್ಲಿ ಗಜನಿ ಚಿತ್ರದಂತೆ ಟೆಂಪರರಿ ಮೆಮೊರಿ ಲಾಸ್ ಕ್ರಿಮಿನಲ್ ಆದರೂ ಅದಕ್ಕಿಂತ ಭಿನ್ನ,ತೀರಾ ನೈಜ ಹುಚ್ಚನಾಗಿ ನಿರ್ಭಾವುಕ ಕಣ್ಣುಗಳಿಂದ, ಅಂಕೆಯಲ್ಲಿರದಂಥ ಜೊಲ್ಲಿನಿಂದ ಮನಸ್ಸು ತಟ್ಟಿ ನಿಲ್ಲುತ್ತಾರೆ ಶಿವರಾಜ್. ಅದರಿಂದಾಗಿಯೇ ನಿರ್ದೇಶಕರು ಚಿತ್ರಕ್ಕೆ ಕಾಡುವ ಎಂಡಿಂಗ್ ನೀಡಲೆತ್ನಿಸಿದರೂ ಶಿವಣ್ಣನ ಪಾತ್ರವೊಂದೇ ಕಾಡುವಂತೆ ಉಳಿದುಬಿಡುತ್ತದೆ.
2014-10-31