Skip to content
FilmySphere

From the earlier FilmySphere, kept as published on 2014-11-18. It has not been updated.

Nagaari Movie Audio Released

ನಗಾರಿ ಹಾಡುಗಳ ಲೋಕಾರ್ಪಣೆ

ಸ್ಯಾಂಡಲ್‍ವುಡ್‍ನಲ್ಲಿ ಹೊಸ ಚಿತ್ರಗಳು, ನಿರ್ದೇಶಕ,ನಿರ್ಮಾಪಕ ಕಲಾವಿದರು ಕಾಂಗ್ರೇಸ್ ಗಿಡದಂತೆ ಬರುತ್ತಿದ್ದಾರೆ. ಇದರಲ್ಲಿ ಗಟ್ಟಿಯಾಗಿ ನಿಂತುಕೊಳ್ಳುವವರು ಕೆಲವರು ಮಾತ್ರ. ಆದರೂ ಇಲ್ಲೋಂದು ಯುವಕರ ತಂಡವೊಂದು ಸದ್ದಿಲ್ಲದೆ ‘ನಗಾರಿ’ ಎಂಬ ಚಿತ್ರವನ್ನು ಮುಗಿಸಿ ಸುದ್ದಿಮಾಡಲು ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮೂರು ಚಿತ್ರಗಳಿಗೆ ಸಹನಿರ್ದೇಶನ ಮಾಡಿದ ಅನುಭವವಿರುವ ವಿಕಾಸ್ ನಿರ್ಮಾಣ ಮಾಡುವ ಆಸೆ ಬಂದು ಕತೆ ಸಿದ್ದಪಡಿಸಿಕೊಂಡು ಹಲವು ನಿರ್ಮಾಪಕರ ಮನೆ ಬಾಗಿಲು ತಟ್ಟಿದ್ದಾರೆ. ಪ್ರಯೋಜನವಾಗದೆ ತಾನೆ ಏಕೆ ನಿರ್ಮಾಣ ಮಾಢಬಾರದು ಅನಿಸಿ ಸ್ನೇಹಿತರೊಂದಿಗೆ ಸೇರಿಕೊಂಡು ನಗಾರಿ ಹಣಹಾಕಿದ್ದೇವೆ. ಡಿಐ ಹಂತದಲ್ಲಿದೆ. ಪ್ರೀತಿ, ಗೆಳತನ ಕತೆಯ ತಿರುಳು ಎಂದರು.

ನಂದೀಶ್‍ಗೆ ನಿರ್ದೇಶನ ಪ್ರಥಮ ಪ್ರಯತ್ನವಾಗಿದ್ದರಿಂದ ಗಲಿಬಿಲಿಯಲ್ಲಿ ಹೆಚ್ಚೇನು ಮಾತನಾಡಲಿಲ್ಲ. ಹಂಸಲೇಖಾ ದೇಸಿ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ನವನೀತ್‍ಶಾಮ್ ಆರು ಹಾಡುಗಳಿಗೆ ಸಂಗೀತ ಸಂಯೋಜಸಿದ್ದಾರೆ. ಹೊಸಬರಿಗೆ ಮೊದಲನಿಂದಲೂ ಅವಕಾಶ ಕಲ್ಪಿಸುತ್ತಿರುವ ಚಿತ್ರರಂಗದ ಕಾಮದೇನು ಲಹರಿವೇಲು ತಮ್ಮ ಮಾತಿನಲ್ಲಿ ಶೀರ್ಷಿಕೆ ಪವರ್‍ಫುಲ್ ಆಗಿದೆ. ಹಳ್ಳಿಯ ಸೊಗಡು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಇವರಿಗೆ ಒಳ್ಳೆಯದಾಗಲಿ ಎಂಬುದು ಅವರ ಶುಭಹಾರೈಕೆ. ಒಂದು ಕೋಟಿ ಇಪ್ಪತ್ತು ಲಕ್ಷದಲ್ಲಿ ಮೂಡಿ ಬಂದಿರುವ ಚಿತ್ರವು ಮದ್ದೂರು,ಸಕಲೇಶಪುರ, ಮಂಗಳೂರು, ಉಡುಪಿ, ಮಲ್ಪೆ ಆಗರಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರವು ತಂಡದಿಂದ ಕೇಳಿಬಂತು. ಅಕ್ಕ ಧಾರವಾಹಿಯಲ್ಲಿ ಬ್ಯುಸಿ ಇರುವುದರಿಂದ ನಾಯಕಿ ಅನುಪಮ ಹಾಜರಿರಲಿಲ್ಲ. ರಂಗಾಯಣರಘು, ಶರತ್‍ಲೋತಾಶ್ವ, ಬಿರಾದರ್ ತಾರಬಳಗದಲ್ಲಿ ಇದ್ದಾರೆ.