Skip to content
FilmySphere

From the earlier FilmySphere, kept as published on 2014-11-21. It has not been updated.

Love u alia film news

ಎಲ್ಲರೊಳಗೊಂದಾಗು ಮಂಕುತಿಮ್ಮ

ಸ್ಟೈಲಿಶ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕತೆ,ನಿರ್ಧೇಶನದ ‘ಲವ್ ಯು ಆಲಿಯಾ’ ಚಿತ್ರೀಕರಣವು ಹನ್ನೆರಡು ದಿವಸಗಳಿಂದ ಸರಾಗವಾಗಿ ಬಾಂಬೆ,ಮೈಸೂರು, ಚೆನ್ನೈನಲ್ಲಿ ನಡೆದು ಸದ್ಯ ಬೆಂಗಳೂರಿನ ಪಂಚತಾರ ಶೆರ್ಟಾನ್ ಹೋಟೆಲ್‍ನಲ್ಲಿ ಬೀಡುಬಿಟ್ಟಿದೆ. ಕುಂತರೆ ನಿಂತರೆ ಅವನದೆ ಧ್ಯಾನ ಹಾಡಿಗೆ ನಾಯಕಿ ಭೂಮಿಕಾಚಾವ್ಲ ರಷ್ಯನ್ ಸಹನರ್ತಕಿಯರೊಡನೆ ಹೆಜ್ಜೆ ಹಾಕುತ್ತಿದ್ದಾಗ ರವಿಚಂದ್ರನ್ ನೋಡುತ್ತಿದ್ದ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು. ಬ್ರೇಕ್ ನೀಡಿದ ತಂಡವು ಮಾತಿಗೆ ಕುಳಿತುಕೊಂಡಿತು. ಮಾತು ಶುರು ಮಾಡಿದ ಇಂದ್ರಜಿತ್ ಇಲ್ಲಿಯವರೆಗೂ ಸಂತಸದಿಂದ ಅಂದುಕೊಂಡತೆ ಚಿತ್ರೀಕರಣ ಮುಗಿಸಲಾಗಿದೆ. ರವಿ ಸರ್ ಎಲ್ಲಾ ರೀತಿಯಿಂದ ಸಹಕಾರ ನೀಡುತ್ತಿದ್ದಾರೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರು ವಿರಾಮ ಹತ್ತಿರ ವಿದ್ದಾಗ ಬರುತ್ತಾರೆ. ಆದರೂ ಕತೆಯಲ್ಲಿ ರವಿ ಸರ್ ಪಾತ್ರ ಹೋಗುತ್ತಲೆ ಇರುತ್ತದೆ. ಹಾಡುಗಳಿಗೆ ಯರೋಪ್‍ಗೆ ಹೋಗುವ ಇರಾದೆ. ಅಲ್ಲಿ ಸೀನಿಯರ್ ಇರೋಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ರವಿಚಂದ್ರನ್ ಇಪ್ಪತ್ತು ವರ್ಷವಾದರೂ ಮರ ಸುತ್ತೋದು ಬಿಡೋಲ್ಲ ಅಂತ ನಿರ್ದೇಶಕರನ್ನು ಹಾಸ್ಯದಿಂದ ಕಾಲೆಳೆದು ಶೂಟಿಂಗ್‍ನ್ನು ಖುಷಿಯಿಂದ ಮಾಡುತ್ತಿದ್ದೇನೆ. ನನ್ನ ಪಾತ್ರಕ್ಕೆ ಹೆಚ್ಚು ತೂಕ ಕೊಟ್ಟಿದ್ದಾರೆ ಅಂತ ಶಹಬ್ಬಾಸ್‍ಗಿರಿಯನ್ನು ನಿರ್ದೇಶಕರಿಗೆ ಕೊಟ್ಟರು ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿರುವ ಭೂಮಿಕಾಚಾವ್ಲ ತಾಯಿ ಅಲ್ಲದೆ ವೃತ್ತಿಯಲ್ಲಿ ತನ್ನದು ಎನ್ನುವ ಭೇದ ಬಂದಾಗ ಏನಾಗುತ್ತದೆ ಅದನ್ನು ನಿರ್ದೇಶಕರು ಚೆನ್ನಾಗಿ ರೂಪಿಸಿದ್ದಾರೆ ಎಂದರು. ಕಿರುತೆರೆ ನಟ ಚಂದನ್ ಚೂಚ್ಚಲಬಾರಿ ರವಿಸರ್ ಜೊತೆಗೆ ನಟಿಸುತ್ತಿರುವುದೆ ಸಂತಸದ ವಿಷಯವಂತೆ. ಹಲವಾರು ಅವಕಾಶಗಳು ಬರುತ್ತಿದ್ದರಿಂದ ಕಿರುತೆರೆಗೆ ಅಧಿಕೃತವಾಗಿ ನಿವೃತ್ತಿ ಪಡೆಯುವ ಇಂಗಿತ ವ್ಯಕ್ತಪಡಿಸಿದರು. ರಿಚ್ ನಿರ್ದೇಶಕ, ಕನಸುಗಾರ ನಟ ಇವರಿಬ್ಬರ ಕಾಂಬಿನೇಶನ್‍ನಲ್ಲಿ ಛಾಯಗ್ರಹಣ ನಡೆಸುವುದು ಥ್ರಿಲ್ಲಿಂಗ್ ಆಗಿದೆ ಎಂಬ ಉಕ್ತಿ ಸಂತೋಷ್ ರೈ ಪಾತಾಜೆ ಅವರದು. ಹಾಡಿಗೆ ನೃತ್ಯ ಸಂಯೋಜನೆ ಮಾಡುತ್ತಿರುವುದು ಪ್ರದೀಪ್‍ಅಂಟೋನಿ.