From the earlier FilmySphere, kept as published on 2014-11-11. It has not been updated.
Who are the real writers ?
ನಿಜವಾದ ಸಿನೆಮಾ ಸಾಹಿತಿಗಳು ಯಾರು?
ನಿಜವಾದ ಸಿನೆಮಾ ಸಾಹಿತಿಗಳು ಯಾರು ಎಂಬ ಪ್ರಶ್ನೆಯನ್ನು ಕೇಳಿದ್ದು ಬರಗೂರು ರಾಮಚಂದ್ರಪ್ಪ. ಅವರು ಮಾಸ್ಟರ್ ಮೈಂಡ್ ಚಿತ್ರದ ಧ್ವನಿಸಾಂದ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಈ ವಿಚಾರವನ್ನು ಕೈಗೆತ್ತಿಕೊಂಡರು.
ಸಿನೆಮಾದಲ್ಲಿ ಸಾಹಿತ್ಯ ಎಂದು ಬರೆದಿರುವ ಜಾಗದಲ್ಲಿ ಗೀತರಚನೆ ಮಾಡಿದವರ ಹೆಸರನ್ನು ಮಾತ್ರ ಬರೆದಿರುತ್ತಾರೆ. ವಾಸ್ತವದಲ್ಲಿ ಸಾಹಿತ್ಯ ಎಂಬುದು ಹಾಡು, ಗದ್ಯ ಎಲ್ಲವೂ ಸೇರಿರುವಂಥದ್ದು. ಹಾಗಾಗಿ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಬರೆದವರೂ ಸಾಹಿತಿಗಳೇ ಆಗಿರುತ್ತಾರೆ. ಲಿರಿಕ್ಸ್ ಮಾತ್ರ ಬರೆದವರನ್ನು ಗುರುತಿಸಬೇಕಾದರೆ ಗೀತರಚನೆಕಾರರು ಎಂದು ಹೇಳುವುದೇ ಸೂಕ್ತ ಎಂದ ಬರಗೂರು ತಾವು ಈ ವಿಚಾರವನ್ನು ಬಹಳ ಹಿಂದಿನಿಂದಲೇ ಹಂಸಲೇಖಾ, ಮನೋಹರ್ ರ ಬಳಿ ಪ್ರಸ್ತಾಪಿಸಿದ್ದೇನೆ ಎಂದರು. ಅವರು ಕರೆಯಿತ್ತಿರುವ ಹಾಗೆ ಮಾಧ್ಯಮಗಳಾದರೂ ಮುಂದೆ ಗೀತರಚನೆಕಾರ ಎಂದೇ ಕರೆದು ಕನ್ನಡ ಪದಗಳ ಅರ್ಥ ವ್ಯಾಪ್ತಿಗಳನ್ನು ಸ್ಪಷ್ಟಪಡಿಸಿಕೊಡಬೇಕು ಎಂಬುದು ಅವರ ಆಗ್ರಹವಾಗಿತ್ತು.