From the earlier FilmySphere, kept as published on 2014-11-18. It has not been updated.
Creative and Unique Programmes from director's association
ನಿರ್ದೇಶಕರ ಸಂಘದಿಂದ ವಿನೂತನ ಕಾರ್ಯಕ್ರಮಗಳು
ಚಂದನವನದ ಚಿತ್ರಬ್ರಹ್ಮ ಪುಟ್ಟಣಕಣಗಾಲ್ ಹುಟ್ಟುಹಾಕಿದ ‘ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ಕ್ಕೆ ಮೂರು ದಶಕದ ಇತಿಹಾಸವಿದೆ. ಇತ್ತೀಚೆಗೆ ವಾರ್ಷಿಕ ಸಭೆ ಮತ್ತು ಚುನಾವಣೆಯಲ್ಲಿ ಹೊಸ ಸಮಿತಿಯು ರಚನೆಯಾಗಿದೆ. ಇವರುಗಳು ಹೊಸ ಹೊಸ ಯೋಜನೆಯನ್ನು ಅನುಷ್ಟಾನ ತರಲು ಇಚ್ಚಿಸಿ ಇದನ್ನು ತಿಳಿಸಲು ಮಾಧ್ಯಮದವರನ್ನು ಭೇಟಿ ಮಾಡಿದ್ದರು. ಜನವರಿ ಎರಡನೆ ವಾರದಿಂದ ಸದಸ್ಯರಿಗೆ ಆರೋಗ್ಯ ತಪಾಸಣೆ ನಡೆಸುವುದು. ದ ಡೈರಕ್ಟರ್ ಎನ್ನುವ ತ್ರೈಮಾಸಿಕ ಸಂಚಿಕೆಯನ್ನು ಹೊರ ತರವುದು. ನೂತನ ನಿರ್ದೇಶಕರುಗಳಿಗೆ ‘ನಿರ್ದೇಶನ ಕಲಿಕೆ’ ತರಗತಿ ಆರಂಭಿಸುವುದು. ಸ್ವಮೇಕ್ ನಿರ್ಮಾಪಕ,ನಿರ್ದೇಶಕರನ್ನು ಗೌರವಿಸುವುದು. ಸಂಘದ ವಾರ್ಷಿಕೋತ್ಸವದಲ್ಲಿ ಸ್ವಮೇಕ್ ಉತ್ತಮ ನಿರ್ದೇಶಕರಿಗೆ ಸನ್ಮಾನ.
ಸಂಘದಿಂದ ದೂರ ವಿರುವ ಸದಸ್ಯರುಗಳು ಮತ್ತು ಪ್ರಸಕ್ತ ಹೊಸ ನಿರ್ದೇಶಕರುಗಳನ್ನು ಸಂಘಕ್ಕೆ ಆಹ್ವಾನಿಸುವುದು. ಭವಿಷ್ಯನಿಧಿ ಮತ್ತು ಕಲ್ಯಾಣನಿಧಿ ಕ್ರೂಡಿಕರಿಸುವುದು. ಎಲ್ಲವನ್ನು ತಿಳಿಸಿದ ಅಧ್ಯಕ್ಷರಾದ ಪಿ.ಎಚ್.ವಿಶ್ವನಾಥ್ ಅಕಾಡಮಿ ಸಹಯೋಗದೊಂದಿಗೆ ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದವರಿಗೆ ಜಿಲ್ಲೆಗಳಲ್ಲಿ ಚಲನಚಿತ್ರ ಸಾಹಿತ್ಯ ಕಾರ್ಯಾಗಾರ ವನ್ನು ಏರ್ಪಡಿಸುತ್ತೇವೆ. ಅಲ್ಲದೆ ಸಂಘದಲ್ಲಿ ಲೈಬ್ರರಿ, ಹಾಗೂ ವಿಡಿಯೋ ಚಿತ್ರಗಳ ಸಂಗ್ರಹವನ್ನು ಮಾಡಲಾಗುವುದು. ಸಂಘವು ಡಬ್ಬಿಂಗ್ ಸಂಸ್ಕ್ರತಿಯನ್ನು ವಿರೋಧಿಸುತ್ತೇವೆ ಎಂದಾಗ ಗೋಷ್ಟಿಯಲ್ಲಿ ಹಾಜರಿದ್ದ ಎಲ್ಲ ಪದಾದಿಕಾರಿಗಳು ಅಧ್ಯಕ್ಷರ ಮಾತಿಗೆ ದಸ್‍ಕತ್ ಹಾಕಿದರು.