From the earlier FilmySphere, kept as published on 2014-11-18. It has not been updated.
Neenasam Satish to produce and act in Rocket
ನೀನಾಸಂ ಸತೀಶ್ ನಿರ್ಮಾಣದಲ್ಲಿ ರಾಕೆಟ್
ಚಂದನವನದಲ್ಲಿ ನೀನಾಸಂ ಸತೀಶ್ ಪ್ರವರ್ದಮಾನಕ್ಕೆ ಬರುತ್ತಿರುವ ನಟ. ಲೂಸಿಯಾ ಮೂಲಕ ಎಲ್ಲರ ಗಮನ ಸೆಳೆದ ನಂತರ ಬಂದ ತೆರೆಕಂಡ ಚಿತ್ರಗಳು ಮಂಡ್ಯಾ ಭಾಷೆಯ ಸೀಮೆಗೆ ಒಳಪಟ್ಟಿದ್ದವು. ಜರ್ಜರಿತರಾದ ಸತೀಶ್ ಇದರಿಂದ ಹೂರಬರಲು ತವಕಿಸುತ್ತಿದ್ದರು. ಅದಕ್ಕೆಂದೆ ಸ್ವಂತ ಬ್ಯಾನರ್ ಹುಟ್ಟುಹಾಕಿ ಜೊತೆಗೆ ಇಬ್ಬರು ಸ್ನೇಹಿತರನ್ನು ಜೊತೆಗೂಡಿಸಿ ‘ರಾಕೆಟ್’ ಅಡಿಬರಹದಲ್ಲಿ ನಾನ್ ಸ್ಟಾಪ್ ಲವ್ ಎಂಬ ಸಿನಿಮಾಕ್ಕೆ ನಿರ್ಮಾಣದ ಜೊತೆಗೆ ನಾಯಕ ನಟ. ಫ್ಲರ್ಟ್ ಸ್ವಭಾವದವನಾದ ನಾಯಕ ಆಕಸ್ಮಿಕವಾಗಿ ಒಂದು ಹುಡುಗಿಗೆ ಪ್ರಸ್ತಾಪ ಮಾಡುತ್ತಾನೆ ಅದರಿಂದ ಏನು ಆಗುತ್ತದೆ ಎಂಬುದು ಕಥೆಯ ತಿರುಳು. ಬೆಂಗಳೂರಿನಿಂದ ಮಡಕೇರಿಗೆ ಸಾಗುವ ಕತೆಯಲ್ಲಿ ನಾಟಕ, ಭಾವನಾತ್ಮಕ, ಮನೋಸ್ಥಿತಿ ಸನ್ನಿವೇಶಗಳು ಬರುತ್ತದೆ. ಸಂಭಾಷಣೆಗಳು ಪೂರ್ಣ ಬೆಂಗಳೂರು ಧಾಟಿಯಲ್ಲಿ ಇರುತ್ತದಂತೆ. ಸಂಪ್ರದಾಯಸ್ಥ ಹುಡುಗಿಯಂತೆ ಐಶಾನಿಶೆಟ್ಟಿ ನಾಯಕಿಯಾಗಿ ಮೂರನೆ ಚಿತ್ರ.
ವಿದೇಶದಲ್ಲಿ ಎಂಎಸ್ ಮಾಡಿ ಗ್ಲಾಮರ್ ಪಾತ್ರದಲ್ಲಿ ನಟಿಸುತ್ತಿರುವ ರಾಜಶ್ರೀಪೊನ್ನಪ್ಪ ಉಪನಾಯಕಿ. ಟಿ.ಎನ್.ಸೀತಾರಾಂ,ಉಪೇಂದ್ರ ಚಿತ್ರಗಳಿಗೆ ಸಹನಿರ್ದೇಶನ ಮಾಡಿದ ಅನುಭವವಿರುವ ಶಿವಶಶಿ ಸತೀಶ್‍ಗೆ ಅಂತಲೆ ಕತೆ ರಚಿಸಿ ಚೂಚ್ಚಲಬಾರಿಗೆ ನಿರ್ದೇಶನದ ಪಾರುಪಥ್ಯವಹಿಸಿಕೊಂಡಿದ್ದಾರೆ. ಒಂದು ಐಟಂ, ಎರಡು ಮಲೋಡಿ, ಒಂದು ಪ್ಯಾಥೋ ಹಾಢಿಗೆ ರಾಗ ಹೊಸೆಯುತ್ತಿದ್ದಾರೆ ಪೂರ್ಣಚಂದ್ರ ತೇಜಸ್ವಿ. ಶೇಕಡ ಅರವತ್ತರಷ್ಟು ಮಡಕೇರಿ, ಉಳಿದಂತೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಎರಡು ಹೊಡೆದಾಟದ ದೃಶ್ಯಗಳಿಗೆ ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ವಿಶ್ವನಾಥ್ ಮತ್ತು ಸತೀಶ್.ಬಿ ನಿರ್ಮಾಣದಲ್ಲಿ ಪಾಲುದಾರರು.