Skip to content
FilmySphere

From the earlier FilmySphere, kept as published on 2014-11-22. It has not been updated.

Subramani Film Press Meet

ಸಂಭಾಷಣೆ ಇಲ್ಲದೆ ಕ್ಲೈಮಾಕ್ಸ್

ಚಿತ್ರದ ಕ್ಲೈಮಾಕ್ಸ್‍ನಲ್ಲಿ ನಾಯಕ ಪ್ರೀತಿಯನ್ನು ಗೆಲ್ಲುವಾಗ, ಖಳನಾಯಕನೊಂದಿಗೆ ಸೆಣೆಸಾಡುವಾಗ, ಸಂಬಂದಗಳನ್ನು ಕೂಡಿಸುವಾಗ ಜಬರ್‍ದಸ್ತ್ ಸಂಭಾಷಣೆಗಳನ್ನು ಹೇಳುತ್ತಾ ಪ್ರೇಕ್ಷಕರಿಂದ ಶಿಳ್ಳೆ ಹೊಡಿಸಿಕೊಳ್ಳುತ್ತಾನೆ. ಪರಂತು ‘ಸುಬ್ರಮಣಿ’ ಚಿತ್ರದಲ್ಲಿ ಕೊನೆಯ ಹದಿನೈದು ನಿಮಿಷ ಡೈಲಾಗ್ ಇಲ್ಲದೆ ಕೇವಲ ಹಾವಬಾವದಿಂದ ನಾಯಕ, ನಾಲ್ಕು ಸ್ನೇಹಿತರು ನಟಿಸುವದರೊಂದಿಗೆ ಕೊನೆಗೊಳ್ಳುತ್ತದೆ. ಅದೆ ಹೇಗೆ ವಿವರಿಸಿ ಎಂದು ಪತ್ರಕರ್ತರಿಂದ ಪ್ರಶ್ನೆ ತೂರಿಬಂದಾಗ ವಿಚಲಿತರಾಗದ ನಿರ್ದೇಶಕ ಜಿಕೆ ಚಿತ್ರ ನೋಡಿ ಅಂತ ಜಾರಿಕೊಳ್ಳುತ್ತಾರೆ. ಇದು ಹೊಸ ರೀತಿಯ ಪ್ರಯತ್ನ ಎಂದು ಹೇಳಲು ಮರೆಯಲಿಲ್ಲ. ಕತೆ,ಸಂಭಾಷಣೆ, ಚಿತ್ರಕತೆ ಜೆಕೆ ಅವರ ದು. ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಮೂರು ಹಾಢುಗಳಿಗೆ ವಿದೇಶಕ್ಕೆ ಹೋಗುವ ಇರಾದೆ ಇದೆ. ಶರತ್‍ಲೋಹಿತಾಶ್ವ ಹಿಜಿಡಾ ಪಾತ್ರದಲ್ಲಿ ನಟಿಸಿದ್ದು ಮತ್ತೋಂದು ವಿಶೇಷ. ನಾಯಕ ಶ್ರೀನಗರಕಿಟ್ಟಿಗೆ ನಾಲ್ಕು ರೀತಿಯ ಶೇಡ್‍ಗಳು ಬರುತ್ತದೆ. ಅದರಲ್ಲಿ ಎರಡು ಗೆಟಪ್‍ನಲ್ಲಿ ಕಾಣಿಸಿಕೊಂಡು ಪಾತ್ರಕ್ಕಾಗಿ ವಿಶೇಷ ರೀತಿಯಾಗಿ ದೇಹವನ್ನು ದಂಡಿಸಿಲ್ಲವಂತೆ. ನಾಯಕನನ್ನು ಪರಿಚಯಿಸುವ ಕನ್ನಡತನದ ಹಾಡಿಗೆ ಆಟೋವನ್ನು ಬಳಸಿಕೊಂಡು ಚಿತ್ರೀಕರಿಸಿದ ಗೀತೆಗೆ ಕಿಟ್ಟಿ ಮದನ್‍ಹರಣಿ ನೃತ್ಯ ನಿರ್ದೇಶನದಂತೆ ಅದ್ಬುತವಾಗಿ ಡ್ಯಾನ್ಸ್ ಮಾಡಿದ್ದಾರೆ. ದಿಶಾಪಾಂಡೆ ನಾಯಕಿ, ಪೂರ್ಣಿಮಾ ಉಪನಾಯಕಿ. ಸೀತಾರಂ ಛಾಯಗ್ರಹಣ ಮತ್ತು ಸುಜಿತ್‍ಶೆಟ್ಟಿ ಸಂಗೀತ ನಿರ್ದೇಶಕರು. ಅಂದುಕೊಂಡಂತೆ ಸಂಕ್ರಾತಿಗೆ ಸುಬ್ರಮಣಿ ತೆರೆಗೆ ಬರಲಿದ್ದಾನೆ.