Skip to content
FilmySphere

From the earlier FilmySphere, kept as published on 2014-11-11. It has not been updated.

sarja Family is coming together very soon

ಸದ್ಯದಲ್ಲೇ ಸರ್ಜ ಸಂಗಮ

ಅಭಿಮನ್ಯುವೇನೋ ಬಂದಾಯಿತು? ಕನ್ನಡದಲ್ಲಿ ಇನ್ನು ಮುಂದೆಯೂ ನಿರ್ದೇಶನ ಮಾಡುವ, ನಟಿಸುವ ಯೋಜನೆಗಳು ನಿಮ್ಮಲ್ಲಿವೆಯಾ ಎಂಬುದು ಅರ್ಜುನ್ ಸರ್ಜಾರಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆ. 'ಹೌದು, ಖಂಡಿತಾ ಇನ್ನು ಮುಂದೆಯೂ ಕನ್ನಡ ಚಿತ್ರಗಳನ್ನು ನಿರ್ದೇಶಿಸುತ್ತೇನೆ. ಅದರಲ್ಲಿ ನನ್ನ ಮಗಳ ಚಿತ್ರ ಸೇರಿದಂತೆ ಸಹೋದರಿಯ ಪುತ್ರರನ್ನೂ ನಾಯಕರಾಗಿರುವ ಚಿತ್ರಗಳ ಯೋಜನೆಯಿದೆ ಎಂದರು.

ಪ್ರಸ್ತುತ 'ದುರ್ಗಾಸ್ತಮಾನ' ಕಾದಂಬರಿ ಓದುತ್ತಿದ್ದೇನೆ. ಅದು ಪೂರ್ತಿಯಾದಮೇಲೆ ಅದನ್ನೇ ಇಟ್ಟುಕೊಂಡು ಚಿತ್ರವೊಂದನ್ನು ಮಾಡಬೇಕೆಂದುಕೊಂಡಿದ್ದೇನೆ. ಅದರಲ್ಲಿ ನನ್ನ ಜೊತೆ ದ್ರುವ ಸರ್ಜ ಮತ್ತು ಚಿರಂಜೀವಿ ಸರ್ಜ ನಟಿಸಲಿದ್ದಾರೆ. ಆದರೆ ಕಾದಂಬರಿಯನ್ನು ಇನ್ನೂ ಪೂರ್ತಿಯಾಗಿ ಓದಿ ಮುಗಿಸದ ಕಾರಣ ಹೆಚ್ಚಿನ ವಿವರ ನೀಡಲಾಗದು ಎಂದರು. ಅದೇ ರೀತಿ ಮಗಳನ್ನು ನಾಯಕಿಯನ್ನಾಗಿಸಿ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಲಿದ್ದು ಅದು ಕೂಡ ನಾಯಕ ಪ್ರಧಾನ ಚಿತ್ರವಾಗಿರುತ್ತದೆ. ಸೂಕ್ತ ನಾಯಕನಿಗಾಗಿ ಹುಡುಕಾಟ ನಡೆದಿದೆ ಎಂದರು. ಒಟ್ಟಿನಲ್ಲಿ ಕರ್ನಾಟಕದಿಂದ ಹೋದ ಮೇಲೆ ಅಪರೂಪವಾಗಿದ್ದ ಅರ್ಜುನ್ ಸರ್ಜ ಇತ್ತೀಚೆಗೆ ಮತ್ತೆ ಕನ್ನಡದಲ್ಲಿ ಹೆಚ್ಚು ಸಕ್ರಿಯರಾಗುತ್ತಿರುವುದು ಖುಷಿಯ ವಿಚಾರ.