Archive.
News and reviews from the earlier FilmySphere, 2013 to 2019. They are kept as they were published and are not updated. For current stories, see the journal.
- Review of Bhale Bhale Magadivoi · 4/5
Its too gud...Mixture of Comedy,love and sentiment...After many days watched a complete long run comedy movie...
2015-09-05
- Review of Rx Suri · 2/5
ಆರ್ ಎಕ್ಸ್ ಸೂರಿ ಚಿತ್ರ ವಿಮರ್ಶೆ ಎಕ್ಸ್ ಟ್ರಾ ಎಕ್ಸ್ ಗಳ ಹಾವಳಿ. ದುನಿಯಾ ವಿಜಯ್ ಸಿನೆಮಾ ಒಂದು ಸಣ್ಣ ಗ್ಯಾಪ್ ನ ನಂತರ ತೆರೆ ಕಾಣುತ್ತಿರುವುದರಿಂದಾಗಿ ಆರೆಕ್ಸ್ ಸೂರಿ ಬಗ್ಗೆ ವಿಶೇಷ ನಿರೀಕ್ಷೆಯಿತ್ತು. ಆಂಧ್ರದ ಭೂಗತ ಪಾತಕಿ ಪೆರಟಾಲ ಸೂರಿ ಕತೆಯೆಂದು ಬಿಂಬಿತವಾಗಿದ್ದ ಚಿತ್ರ ಸೂತಕ ಜಾತಕದೊಂದೊಗೆ ನಿರಾಶೆ ಮೂಡಿಸಿದೆ.ನಿರ್ದೇಶಕ ಶ್ರೀಜಯ್ ಚಿತ್ರವನ್ನು ತೆಲುಗು ಮಂದಿಗೆಂದೇ ಮಾಡಿದ್ದಾರೇನೋ ಎಂಬ ಸಂದೇಹ ಬರದೇ ಇರದು. ಚಿತ್ರದಲ್ಲಿ ನಾಯಕನ ಕೆಲಸವೇ ರೌಡಿಸಂ. ಆದರೆ ಅದು ಶುರುವಾಗುವುದಕ್ಕೂ ಒಂದು ಕಾರಣವಿದೆ. ತಂಗಿಯ ಮೊಬೈಲ್ ಫೋನ್ ಗೆ ಅಶ್ಲೀಲ ಚಿತ್ರಗಳನ್ನು ಕಳಿಸಿದಾತನನ್ನು ಮತ್ತು ಆತನ ಅಂಗಡಿಯನ್ನು ಹೊಡೆದುರುಳಿಸುತ್ತಾನೆ ಸೂರಿ. ಆಗ ಆತನ ವಿರುದ್ಧ ದಂಡೆತ್ತಿ ಬರುವ ರೌಡಿ ಪಡೆಯ ನಾಯಕನನ್ನು ಒಂದೇ ಏಟಿಗೆ ಕೊಚ್ಚಿ ಹಾಕುತ್ತಾನೆ. ಹಾಗೆ ಜೈಲು ಸೇರಿದವನು ಮರಳಿ ಬಂದ ಮೇಲೆ ಮೊದಲು ಅನಿವಾರ್ಯವಾಗಿ, ಸ್ವರಕ್ಷಣೆಗಾಗಿ ಬಳಿಕ ಸೇವೆಯ ಹೆಸರಲ್ಲಿ ಮಚ್ಚಿನಲ್ಲೇ ಮಾತನಾಡತೊಡಗುತ್ತಾನೆ. ಹಾಗೆ ಮಚ್ಚು ಹಿಡಿದವನ ಕತೆ ಏನಾಗಬೇಕು ಎಂಬುದನ್ನು ಚಿತ್ರ ಹೇಳುತ್ತದೆ. ರಾಜಧಾನಿ ಚಿತ್ರದ ಬಳಿಕ ಕುಟುಂಬದ ಕಾಳಜಿ ಮತ್ತು ಹುಡುಗರ ರೌಡಿಸಂ ಮತ್ತು ನವಿರಾದ ಪ್ರೇಮ ಇವೆಲ್ಲವನ್ನೂ ಮತ್ತೊಮ್ಮೆ ಪರದೆಯ ಮೇಲೆ ತೋರಿಸಿರುವ ಚಿತ್ರವಿದು. ಆದರೆ ಕನಿಷ್ಠ ಆ ಮಟ್ಟಿನ ಶ್ರೇಷ್ಠತೆಯೂ ಚಿತ್ರದಲ್ಲಿಲ್ಲ ಎಂಬುದು ವಾಸ್ತವ. ನಾಯಕ ವಿಜಯ್ ಗೆ ನಟನೆಗಿಂತ ಹೊಡೆದಾಟದ ದೃಶ್ಯಗಳೇ ಅಧಿಕ. ಅದರಲ್ಲೂ ನಟನೆ ಬಿಟ್ಟು ನೈಜತೆಗೆ ಯತ್ನಿಸಿರುವುದು ಮತ್ತು ರಕ್ತ ಬರಿಸಿ, ರಕ್ತ ತರಿಸುವ ದೃಶ್ಯಗಳ ನಡುವೆ ಪ್ರೇಕ್ಷಕ ತತ್ತರಿಸುವಂತಾಗಿದೆ. ಚಿತ್ರದಲ್ಲಿ ಮತ್ತೊಂದು ದೊಡ್ಡ ಕೆಡುಕಾಗಿ ಕಾಡಿರುವುದು ದ್ವಂದ್ವಾರ್ಥದ ಸಂಭಾಷಣೆಗಳು. ಬುಲೆಟ್ ಪ್ರಕಾಶ್; ಆತನ ಪತ್ನಿಯ ಪಾತ್ರ ನಿರ್ವಹಿಸಿದಾಕೆ ಜೊತೆಗೆ ಸಾಧು ಕೋಕಿಲ ಮತ್ತು ಅವರೊಂದಿಗೆ ಸೇರಿಕೊಂಡಾಗ ಖಳನಟ ರವಿಶಂಕರ್ ಬಾಯಲ್ಲೂ ಅಶ್ಲೀಲ ಸಂಭಾಷಣೆಗಳು ತಾಂಡವವಾಡಿವೆ. ಕತೆಗೆ ಸಂಬಂಧವಿಲ್ಲದ ಈ ದೃಶ್ಯಗಳು ಹಲವೆಡೆ ನುಸುಳಿ ಬಂದುಅಸಹ್ಯ ಹುಟ್ಟಿಸುತ್ತದೆ. ನಾಯಕಿಯಾಗಿ ನವನಟಿ ಆಕಾಂಕ್ಷ ಭರವಸೆಯ ನಟನೆ ನೀಡಿದ್ದಾರೆ. ಆಕೆಯ ತಾಯಿಯಾಗಿ ತುಳಸಿ ಶಿವಮಣಿ ಮಾತೆತ್ತಿದರೆ ಅಳುತ್ತಾರೆ. ನಾಯಕನ ತಂದೆಯಾಗಿ ಅವಿನಾಶ್, ತಾಯಿಯಾಗಿ ವಿನಯಾ ಪ್ರಸಾದ್ ನಟಿಸಿದ್ದಾರೆ. ಮಧ್ಯಂತರದ ಬಳಿಕ ಅನಿರೀಕ್ಷಿತವಾಗಿ ಆರಂಭಗೊಳ್ಳುವ ಫ್ಲ್ಯಾಶ್ ಬ್ಯಾಕ್ ಮತ್ತು ಅಡ್ಡಾದಿಡ್ಡಿ ಚಿತ್ರಕತೆ ಚಿತ್ರವನ್ನು ಗೋಜಲುಗೊಳಿಸಿದೆ. ಚಿತ್ರದಲ್ಲಿ ಕನ್ನಡದ ಹಲವು ಹಿಟ್ ಹಾಡುಗಳ ಪಲ್ಲವಿಯನ್ನು ಬಳಸಿರುವುದರ ಜೊತೆಗೆ 'ಅನಾಥ ಮಗುವಾದೆ' ಹಾಡನ್ನು ಪೂರ್ತಿಯಾಗಿ ಕೇಳಿಸಿದ್ದಾರೆ! ರವಿಶಂಕರ್ ಸೇರಿದಂತೆ ಒಂದಷ್ಟು ಪೋಷಕ ನಟರ ನೈಜ ನಟನೆ, ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತವನ್ನು ಹೊರತು ಪಡಿಸಿದರೆ ಚಿತ್ರದಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲ. ಇದೆಯೆಂಬ ನಿರೀಕ್ಷೆಯಿಟ್ಟುಕೊಂಡವರು ಖಂಡಿತಾ ನೋಡಿ 'ಅನುಭವಿಸಬೇಕಾದ' ಚಿತ್ರವಿದು.
2015-09-05 · FilmySphere critic
- Review of Aasaan Nahi Hai · 4/5
I have worked with Latika in the past and found her to be an extremely professional, diligent and intelligent actress. She is very focused, easily gets into the character and beautifully portrays various emotions required for the scene. Highly recommend her for good projects, for all film formats.
2015-08-31
- Review of Aatagara · 3/5
ಆಟಗಾರ ಸಸ್ಪೆನ್ಸೇ ಚಿತ್ರ ಸಾರ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಕಾಲವಿದು. ಬಿಗ್ ಬಾಸ್ ಮಾದರಿಯ ರಿಯಾಲಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾದ ಅಷ್ಟೂ ಕಂಟೆಸ್ಟಂಟ್ ಗಳನ್ನು ಹೈಜಾಕ್ ಮಾಡಿದರೆ ಹೇಗಿರುತ್ತದೆ ಎಂಬುದನ್ನು ಹೇಳುವ ಚಿತ್ರವೇ ಆಟಗಾರ. ಚಿತ್ರದಲ್ಲಿ ಹತ್ತು ಮಂದಿ ಕಂಟೆಸ್ಟಂಟ್ಸ್ ಕೂಡ ಹತ್ತು ವಿಧದ ಬ್ಯಾಕ್ ಗ್ರೌಂಡ್ ಹೊಂದಿದವರು. ವಿಜೇತರಿಗಿರುವ ಪ್ರಶಸ್ತಿಯ ಮೊತ್ತ ಒಂದು ಕೋಟಿಯನ್ನು ಗೆಲ್ಲಲೆಂದು ದೂರದ ದ್ವೀಪವೊಂದರ ಮನೆಯಲ್ಲಿ ಉಳಿದುಕೊಳ್ಳಲು ಬಯಸಿದವರು. ಆದರೆ ಅವರಲ್ಲಿ ಒಬ್ಬೊಬ್ಬರದೇ ಕೊಲೆಯಾಗತೊಡಗುತ್ತದೆ. ಅದಕ್ಕೆ ಕಾರಣ ಹುಡುಕಿದಾಗ ತಾವು ಶೋ ಹೆಸರಿನಲ್ಲಿ ಕಿಡ್ನ್ಯಾಪ್ ಆಗಿದ್ದೇವೆ ಎನ್ನುವುದನ್ನು ಅವರ ಅರಿವಿಗೆ ಬರುತ್ತದೆ. ಅದಕ್ಕೆ ಕಾರಣ ಅವರಲ್ಲಿ ಒಂಬತ್ತು ಮಂದಿ ಕಂಟೆಸ್ಟ್ ಗಳು ಕೂಡ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುತ್ತಾರೆ. ಅವರೆಲ್ಲರನ್ನು ಸದ್ದಿಲ್ಲದೆ ಕೊಲೆಗೈಯ್ಯುವ ಆ ಹತ್ತನೆಯ ಕಂಟಸ್ಟೆಂಟ್ ಯಾರು? ಆತನ ಬೆನ್ನ ಹಿಂದೆ ಬೆಂಬಲವಾಗಿರುವವರು ಯಾರು? ಪ್ರತಿಯೊಬ್ಬರ ಕ್ರಿಮಿನಲ್ ಹಿನ್ನೆಲೆಗಳೇನು? ಎಂಬುದನ್ನು ಚಿತ್ರದಲ್ಲಿ ಇಂಟರ್ವೆಲ್ ಬಳಿಕ ತೋರಿಸಲಾಗಿದೆ. ಹಾಗಾಗಿ ಕತೆ ಕೊನೆಯವರೆಗೆ ಆಸಕ್ತಿಯನ್ನು ಉಳಿಸಿಕೊಳ್ಳುತ್ತದೆ. ಕನ್ನಡದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಗಳು ತೀರಾ ಕಡಿಮೆ. ರಂಗಿತರಂಗವೆಂಬ ಒಂದು ಮಿಸ್ಟರಿ ಥ್ರಿಲ್ಲರ್ ಚಿತ್ರದ ಬಳಿಕ ಬಂದ ಚಿತ್ರವಿದು. ಆದರೆ ಆಟಗಾರ ಚಿತ್ರದ ಕತೆ ತಿಳಿದ ಮೇಲೆ ತೆರೆಯ ಮೇಲೆ ನೋಡಬೇಕೆನಿಸುವ ಅಂಶಗಳೇನೂ ಉಳಿದಿರುವುದಿಲ್ಲ. ಚಿತ್ರವನ್ನು ಹಾಸ್ಯದಿಂದ ದೂರವಾಗಿರಿಸಲೆಂದೇ ಸಾಧುಕೋಕಿಲ, ಆರೋಹಿತ ಪಾತ್ರಗಳಿಗೆ ಆರಂಭದಲ್ಲೇ ಅಂತ್ಯ ನೀಡಲಾಗಿದೆ. ಚಿತ್ರದಲ್ಲಿ ಕೇಂದ್ರಪಾತ್ರಗಳಲ್ಲೊಬ್ಬರಾಗಿರುವ ಚಿರಂಜೀವಿ ಸರ್ಜಾ ಹಿಂದಿನ ಚಿತ್ರಗಳಿಗಿಂತ ಭಿನ್ನವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಅನಂತನಾಗ್ ಶಬ್ಧ ಸಾವಿನ ಗಂಟೆಯಂತೆ ಮೊಳಗುತ್ತದೆ. ರವಿಶಂಕರ್ ಗೆ ಒಂದಷ್ಟು ದ್ವಂದ್ವಾರ್ಥದ ಸಂಭಾಷಣೆಯನ್ನೂ ನೀಡಲಾಗಿದೆ. ಅಪರಾಧಗಳಿಗೆ ಗೊತ್ತಿದ್ದು ಕುಮ್ಮಕ್ಕು ಕೊಡುವವರನ್ನೂ ಕೊಲ್ಲುವ ಮೂಲಕ ಸಾಮಾನ್ಯರು ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಹುದು; ಮತ್ತು ತಾವು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಬಹುದು ಎಂದು ತೋರಿಸಿರುವುದು ಅರ್ಥಹೀನ. ನಿರ್ಮಾಪಕ ದ್ವಾರಕೀಶ್ ಸೇರಿದಂತೆ ವೀಣಾ ಸುಂದರ್ ದಂಪತಿ ಚಿಕ್ಕ ಪಾತ್ರದಲ್ಲೇ ಚೊಕ್ಕ ನಟನೆ ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರ ಎರಡೇ ಗಂಟೆಯೊಳಗೆ ಮುಗಿದು ಬಿಡುತ್ತದೆ ಎಂಬುದು ಖುಷಿಯ ವಿಚಾರ. ಗ್ಲಾಮರ್ ಪ್ರಿಯರು ಮೇಘನಾ ರಾಜ್, ಪಾವನಾ, ಪಾರುಲ್ ಮೊದಲಾದ ನಟಿಯರನ್ನು ನೋಡಲಿಕ್ಕಾದರೂ ಒಮ್ಮೆ ಥಿಯೇಟರ್ ಗೆ ಹೋಗಬಹುದು.
2015-08-30 · FilmySphere critic
- Review of The Prestige · 5/5
Every great magic trick consists of three parts or acts. The first part is called 'The Pledge'. The magician shows you something ordinary: a deck of cards, a bird or a man. He shows you this object. Perhaps he asks you to inspect it to see if it is indeed real, unaltered, normal. But of course... it probably isn't. The second act is called 'The Turn'. The magician takes the ordinary something and makes it do something extraordinary. Now you're looking for the secret... but you won't find it, because of course you're not really looking. You don't really want to know. You want to be fooled. But you wouldn't clap yet. Because making something disappear isn't enough; you have to bring it back. That's why every magic trick has a third act, the hardest part, the part we call 'The Prestige'.
2015-08-20
- Review of RangiTaranga · 4/5
ಎಲ್ಲಾ ರಸಗಳನ್ನು ಉಣಬಡಿಸುವ #ರಂಗಿತರಂಗ... ಸ್ವಲ್ಪ ಹಾಸ್ಯ ರಸದತ್ತ ಗಮನ ಹರಿಸಿದ್ರೆ ಸಿನಿಮಾ ಇನ್ನು ಚಂದ ಇರ್ತಿತ್ತು. . ಕರೆಯೋಲೆ ಎಂದೇ ಶುರುವಾಗೋ ಸಿನಿಮಾ ನಿಜಕ್ಕೂ ನಮ್ಮನು ಒಂದು ಸುಂದರ ನಿಗೂಢ ಜಗತ್ತಿಗೆ ಕರೆದುಕೊಂಡು ಹೋಗಿ ಒಬ್ಬ ಪ್ರೇಕ್ಷಕನಿಗೆ ರಸದೌತಣ ನೀಡುವಂತ ಸಿನಿಮಾ ರಂಗಿತರಂಗ. ಕಮರೊಟ್ಟು ಅನ್ನೋ ಗ್ರಾಮದಲ್ಲಿ ನಡೆಯುವಂತ ಅನಿರೀಕ್ಷಿತ ಘಟನೆಗಳ ಸುತ್ತ ಸಾಗೊ ಕಥೆ ರಂಗಿತರಂಗ. ರಾತ್ರಿ ರಸ್ತೆಯಲ್ಲಿ ಧುತ್ತನೆ ಕಂಡು ಮಾಯವಾಗುವ ಭೂತದ ವೇಷ; ಅದೇನೋ ನಿಗೂಢತೆ ತುಂಬಿದಂತಿರುವ ಅವರ ಮನೆ, ಹೀಗೆ ಚಿತ್ರವು ಸಸ್ಪೆನ್ಸ್ ಗಳನ್ನು ಸೃಷ್ಠಿಸುತ್ತಾ ಹೋಗುತ್ತದೆ. ಗರ್ಭಿಣಿ ಮಹಿಳೆಯರ ನಿಗೂಡ ಸಾವು, ಇದು ಮಾಡುತ್ತಿರೋದು ಗುಡ್ಡದ ಭೂತ ಅನ್ನೋ ಆ ಊರು ಜನರ ನಂಬಿಕೆ. ನಂತರ ನಾಯಕಿಯ ಅಪಹರಣ, ಅವಳನ್ನು ಹುಡುಕುತ್ತಾ ಹೊರಡೊ ನಾಯಕ. ಅಲ್ಲಿ ಮತ್ತಷ್ಟು ಪಾತ್ರಗಳಿಗೆ ಸ್ಪಷ್ಟತೆ ಕಲ್ಪಿಸೋ ನಿರ್ದೇಶಕನ ಜಾಣ್ಮೆ. ಈ ಕಥೆ ನಾ ಬರ್ದು ನೀವು ಓದೋದಕಿಂತ ಸಿನಿಮಾ ನೋಡಿದ್ರೆ ಮಜಾ. . ಇನ್ನು ಪಾತ್ರಗಳ ವಿಚಾರಕ್ಕೆ ಬಂದ್ರೆ, #Nirup ಪ್ರಥಮ ಚಿತ್ರದಲ್ಲಿ ಒಳ್ಳೆ ಅಭಿನಯ ನೀಡಿದ್ದಾರೆ, ಇನ್ನು ಚೆನ್ನಾಗಿ ಮಾಡ ಬಹುದಿತ್ತು ಆದರು ಫಸ್ಟ್ ಮೂವಿ so, ಲೆಟ್ಸ್ appreciate. ಇನ್ನು ಇಬ್ಬರು ನಾಯಕಿಯರು ನೋಡಲು ಮುದ್ದು. ಡೈಲಾಗ್ ಕಿಂಗ್ ಸಾಯಿ ಕುಮಾರ್ ಚಿತ್ರದ ಕೇಂದ್ರ ಬಿಂದು. ಶಂಕರ್ ಅಶ್ವಥ್ ಒಳ್ಳೆ ಅಭಿನಯ ಆದ್ರೆ ಅವರ ಪಾತ್ರ incomplete. ಉಳಿದಂತೆ ಎಲ್ಲರು ಅವರವರ ಪಾತ್ರದಲ್ಲಿ superb. . Anup Bhandari ಪ್ರಥಮ ಚಿತ್ರದಲ್ಲೇ ಭರವಸೆ ಮೂಡಿಸುತ್ತಾರೆ. Technically movie superb.
2015-08-17
- Review of Uppi 2 · 3/5
No Excuse Me Please ! ಉಪ್ಪಿ - 2 ನೋಡಿದ್ ಮೇಲೆ ಸಿನಿಮಾ ಕುರಿತು ಯೋಚನೆ ಮಾಡಿದ್ರೆ ಅರ್ಗಿಸ್ಕೊಳೋದು ಕಷ್ಟ, ಯೋಚನೆ ಮಾಡ್ದೇ ಹೋದ್ರೆ ಸಿನಿಮಾ ಆಗ್ಬೋದು (ಸ್ವಲ್ಪ) ಇಷ್ಟ (3 / 5) ಶುಭಂ ಎನ್ನುತಾ promotional ಸಾಂಗ್ ನಿಂದ ಶುರು ಆಗೋ ಸಿನಿಮಾ, ನಿಜಕ್ಕೂ ಅಭಿಮಾನಿಗಳನ್ನ ಹುಚ್ಚೆಬ್ಬಿಸುತ್ತೆ. ಯಾರೋ ನೀನು, ನೀನ್ ಯಾರೋ ಅಂತ ಶುರು ಆಗೋ ಒಂದ್ ಹುಡುಕಾಟ, ನಾಯಕನ ಹುಡುಕೋ ಕೆಲ ಗುಂಪುಗಳು, ನಾಯಕಿ ಹಾಗೆ ಪೊಲೀಸರು. ಹೀಗ್ ಹುಡುಕುವಾಗ ಸಿಗೋ ನೀನು ಮತ್ತೆ ನಾನು. ನಂತರ ನಾನೋ - ನೀನೋ ಅನ್ನೋ ಕಚ್ಚಾಟ. ಇದರ ಮಧ್ಯ ಬರೋ ಅವನು. ಹೀಗೆ ಹೇಳ್ತಾ ಹೋದ್ರೆ ಪ್ರೇಕ್ಷಕನಿಗೆ ಮಧ್ಯಂತರದ ವೇಳೆಗೆ ಏನಾಗ್ತಿದೆ ಅನ್ನೋ ತೊಳಲಾಟ ಎದ್ದು ಕಾಣುತ್ತೆ. ಉಪೇಂದ್ರದಲ್ಲಿ 'ನಾನು' ಎಂಬುದರ ಜೊತೆಗೆ money ,honey, ಜಂಗಲ್ ಜವಾನಿ(prostitute) ಬಗ್ಗೆ ಹೇಳಿದ್ದ ಉಪೇಂದ್ರ ಇಲ್ಲಿ 'ನೀನು' ಎಂಬುದರ ಜೊತೆಗೆ ಹೀಗೆ ಬಾಳಿದರೆ happiness, wealth, health ನಿನ್ನದಾಗುತ್ತೆ ಅನ್ನೋದರ ಬಗ್ಗೆಯೂ ಹೇಳಿದ್ದಾರೆ. ಹೀಗೆ ಗುಂಪುಗಳು ನೀನು ಅನ್ನೋನ ಹುಡುಕ್ತಿರ್ತಾರೆ ಅಲ್ಲಿಗೆ ಕೆಲವು sorry ಹಲವು twist ಗಳು ಅಂತ್ಯಕ್ಕೆ ಏನೋ ಹೇಳಿ conclusion ಕೊಡ್ತಾರೆ ಅಂದ್ರೆ ಬ್ಲಾಂಕ್ screen for a minute ಅಲ್ಲಿಂದ ಟೈಟಲ್ ಕಾರ್ಡ್ ಶುರು ಚಿತ್ರದ ಪಾತ್ರ ಪರಿಚಯ ಆರಂಭ. Show End ಆಯಿತು, ಪ್ರೇಕ್ಷಕರೆಲ್ಲಾ ತಲೆಗೆ ಹುಳ ಬಿಟ್ಟಲ್ಲಾ ಗುರು ಅಂತ ಚಿರೋಕ್ಕೆ ಆರಂಭಿಸಿದರು. ಪಾತ್ರ ಪರಿಚಯಕ್ಕೆ ಬಂದ್ರೆ, Rocking Real Star Upendra rocks ನಿರ್ದೇಶನದಲ್ಲೂ ಹೌದು ಹಾಗೆ ನಟನೆಯಲ್ಲೂ ಹೌದು. ಇನ್ನು ನಾಯಕಿ #ಕ್ರಿಸ್ಟಿನಾ #ಅಕ್ಹೀವ ಪ್ರೇಕ್ಷಕ ನೆಚ್ಚುವಂತೆ ಚಿಕ್ಕ ಬಟ್ಟೆಯುಟ್ಟು ಪಾತ್ರಕ್ಕೆ ತಕ್ಕಂತೆ ಚೊಕ್ಕವಾಗಿ ನಟಿಸಿದ್ದಾರೆ. ಹಾಗೆ ಎರಡನೇ ನಾಯಕಿಯಾಗಿ Parul Yadav ಅವರ ಸಮಯ ವ್ಯರ್ಥ ಮಾಡದೆ ಅವರ ಅಭಿನಯ ಚಾತುರ್ಯವನ್ನು ಬಿಡಿಸಿ ಬಿಡಿಸಿ ತೋರಿಸಿದ್ದಾರೆ. ಶ್!!! ಚಿತ್ರದ shade ಮುಂದುವರಿಸಿದ್ದಾರೆ ಬ್ಯಾಂಕ್ ಜನಾರ್ಧನ್ ಹಾಗು ಬೀರಾದಾರ್. ತುಮಕೂರು ಮಂಜು ಅವರು ಉಪೇಂದ್ರ ಚಿತ್ರದ shade ಅಂದ್ರೆ ಅಲ್ಲಿ 'ನಾನು' ಇಲ್ಲಿ 'ನೀನು' ನ ಹುಡುಕೋ ಜವಾಬ್ದಾರಿ ನಿರ್ವಹಿಸಿದ್ದಾರೆ. ಟೆನಿಸ್ ಕೃಷ್ಣ ಉಪೇಂದ್ರನ ಜೊತೆ ಉಪೇಂದ್ರನ ಐಡಿಯಾ ನ ಕಾರ್ಯ ರೂಪಕ್ಕೆ ತರಲು supporting role ಮಾಡಿದ್ದಾರೆ. ಶೋಭರಾಜ್ ಡಾನ್ ಆಗಿ ಮಿಂಚಿದ್ದಾರೆ ಆದ್ರೆ ಪಾತ್ರ incomplete, Shayaji Shinde ಪೋಲಿಸ್ ಆಗಿ ಪರ್ಫೆಕ್ಟ್ but utilized very less. ಬೇರೆಲ್ಲ ಪಾತ್ರಗಳು ಅವರವರ ಪಾತ್ರಕ್ಕೆ ತಕಂತ್ತೆ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಉಪೇಂದ್ರ ನಿರ್ದೇಶಿಸಿರುವ ಬಹುನಿರೀಕ್ಷಿತ Uppi 2 as usual ಗಿಮಿಕ್ ಗಳೊಂದಿನ ಅದರ ನಿರೂಪಣೆ ಮತ್ತು ಸಂಭಾಷಣೆಗಳು ಸದಾ ಗಮನ ಸೆಳೆಯುತ್ತವೆ. ಕೆಲವೊಂದು ಕಡೆ ಕತೆ ನೋಡ್ತಿದ್ದ್ರೆ artificial ಆಗ್ತಿದೆ ಅನಿಸ್ತು ಸ್ಕ್ರೀನ್ ಪ್ಲೇ . ಕೊನೆ ವರೆಗೂ ಚಿತ್ರ ಸಾರುವಂತೆ ಯೋಚನೆ ಮಾಡ್ಬೇಡಿ past ಬಗ್ಗೆ ಯಾಗಲಿ future ಬಗ್ಗೆ ಯಾಗಲಿ, live your present. ಮತ್ತೊಮೆ ಹೇಳ್ತೀನಿ No Excuse Me Please ! ಉಪ್ಪಿ - 2 ನೋಡಿದ್ ಮೇಲೆ ಸಿನಿಮಾ ಕುರಿತು ಯೋಚನೆ ಮಾಡಿದ್ರೆ ಅರ್ಗಿಸ್ಕೊಳೋದು ಕಷ್ಟ, ಯೋಚನೆ ಮಾಡ್ದೇ ಹೋದ್ರೆ ಸಿನಿಮಾ ಆಗ್ಬೋದು (ಸ್ವಲ್ಪ) ಇಷ್ಟ
2015-08-17
- Review of Maja Talkies
very very good show D'not miss it.....how to get entry pass....
2015-08-16
- Review of Uppi 2 · 4/5
ಉಪ್ಪಿ 2 ಹಸಿದ ಅಭಿಮಾನಿಗಳಿಗೆ ಫುಲ್ ಮೀಲ್ಸ್ - ಉಪೇಂದ್ರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಇಂದು ಪ್ರದರ್ಶನ ಶುರು ಮಾಡಿದೆ. ರಿಯಲ್ ಸ್ಟಾರ್ ಉಪೇಂದ್ರರ ಅಭಿಮಾನಿಗಳು ಚಿತ್ರವನ್ನು ಚೆನ್ನಾಗಿ ಎಂಜಾಯ್ ಮಾಡಿದ್ದಾರೆ. ಎಂದಿನಂತೆ ಜಬರ್ದಸ್ತ್ ಗಿಮಿಕ್ ಗಳಿದ್ದರೂ ಉಪ್ಪಿ 2 ಎಂಬ ಹೆಸರಿರೋದರಿಂದ ಸಹಜವಾಗಿಯೇ ಉಪೇಂದ್ರ ಚಿತ್ರವನ್ನು ನೋಡಿದವರು ಖಂಡಿತಾ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾದ ಚಿತ್ರವಿದು. ಉಪೇಂದ್ರದಲ್ಲಿ 'ನಾನು' ಎಂಬುದರ ಜೊತೆಗೆ ಕೀರ್ತಿ, ಕಾಮ, ಪ್ರೇಮದ ಬಗ್ಗೆ ಹೇಳಿದ್ದ ಉಪೇಂದ್ರ ಇಲ್ಲಿ 'ನೀನು' ಎಂಬುದರ ಜೊತೆಗೆ ಖುಷಿ, ಲಕ್ಷ್ಮಿ ಮತ್ತು ಶೀಲದ ಬಗ್ಗೆಯೂ ಹೇಳಿದ್ದಾರೆ. 'ನೀನು' ಎಂಬ ನಾಯಕನ ಪಾತ್ರದ ಮೂಲಕ ನಾವು ಇನ್ನೊಬ್ಬರನ್ನು ಹೇಗೆ ನೋಡುತ್ತೇವೆಯೋ ನಮಗೆ ಆತ ಹಾಗೆಯೇ ಕಾಣುತ್ತಾನೆ ಎಂಬುದನ್ನು ಹೇಳಿದ್ದಾರೆ. ಅಂದರೆ ಶ್ರೀಮಂತಿಕೆ ಹೊಂದಿರುವ ಲಕ್ಷ್ಮೀ ಕಟಾಕ್ಷ ಹೊಂದಿರುವ ನಾಯಕಿ ಖುಷಿಗೆ ಆತ ಒಳ್ಳೆಯ ಮನಸ್ಸಿನ ಸಾಧು ವ್ಯಕ್ತಿತ್ವದ ನಾಯಕ. "ನೀನು ಹಿಂದೆ ನಾನಾಗಿದ್ದೋನು" ಎಂಬುದನ್ನು ಸಬ್ ಬ್ರೈನ್ ನಲ್ಲಿರಿಸಿಕೊಂಡ ಖಳನಾಯಕನಿಗೆ ಆತ ಇನ್ನೂ ಕೂಡ ಬೆಳೆದು ನಿಂತ 'ನಾನು'. ಆತನೊಳಗೆ ಅರಿಷಡ್ವರ್ಗಗಳು ಸೇರಿಕೊಂಡು ಖಳನಿಗೆ ಆರು ದೇಹಗಳಲ್ಲಿ ಕಾಡುತ್ತಾನೆ. ಅದೇ ಪ್ರಶಾಂತವಾಗಿರುವ "ಸದ್ಯದ ನೀನು ಮುಂದೇನೋ ಮಾಡಲಿದ್ದಾನೆ" ಎಂಬುದನ್ನು ಮೆದುಳಲ್ಲಿರಿಸಿಕೊಂಡು ನೋಡುವಾತನಿಗೆ ಆತ ಬೇರೇನೋ ಹುನ್ನಾರದಲ್ಲಿದ್ದಾನೆಂಬ ಕಲ್ಪನೆ. ಆದರೆ ಸದ್ಯಕ್ಕೆ ಏನು ಕಣ್ಣಮುಂದೆ ಕಾಣಿಸುತ್ತಿದೆಯೋ ಅದೇ ನಿಜ ಎಂಬುದನ್ನು ನಾಯಕಿಗೆ ಹೇಳುತ್ತಾನೆ ನೀನು. ಅದನ್ನು ನಂಬಿಕೊಂಡ ನಾಯಕಿಯೂ ಖುಷಿಯಾಗಿರುತ್ತಾಳಾ ಎಂಬುದು ಚಿತ್ರದ ಮುಖ್ಯಾಂಶ. ಆದರೆ ಇಲ್ಲಿ ಹೇಳಿರುವುದು ಚಿತ್ರದ ಮೂಲ ಸಾರವೇ ಹೊರತು ಕತೆಯಲ್ಲ. ಕತೆಯಲ್ಲಿ ದುಬೈ ಡಾನಾಗಿ ಶೋಭರಾಜ್, ಉನ್ನತ ಪೊಲೀಸ್ ಅಧಿಕಾರಿಯಾಗಿ ಸಯ್ಯಾಜಿ ಭಗತ್ ಮೊದಲಾದವರಿದ್ದಾರೆ.ಜೊತೆಗೆ 'ಉಪೇಂದ್ರ'ದಲ್ಲಿದ್ದ ಮೋಹನ್, ಬ್ಯಾಂಕ್ ಜನಾರ್ಧನ್, ಬೀರಾದಾರ್ ಪಾತ್ರಗಳು ಇಲ್ಲಿಯೂ ಮುಂದುವರಿದಿವೆ. 'ಉಪೇಂದ್ರ' ಚಿತ್ರದ ದೃಶ್ಯವನ್ನು ಇಲ್ಲಿ ಎಡಿಟ್ ಮಾಡಿ ಬಳಸಿರುವುದನ್ನು, ಕಾಶ್ಮೀರದ ದೃಶ್ಯ ವೈಭವಗಳನ್ನು ಚಿತ್ರ ಮಂದಿರದಲ್ಲಿ ನೋಡಿ ಆನಂದಿಸಬಹುದು. ಉಪೇಂದ್ರ ನಿರ್ದೇಶಿಸುವ ಸಿನೆಮಾಗಳಲ್ಲಿನ ಕತೆಯನ್ನು ವಿಮರ್ಶಿಸುವುದಕ್ಕಿಂತ ಗಿಮಿಕ್ ಗಳೊಂದಿನ ಅದರ ನಿರೂಪಣೆ ಮತ್ತು ಸಂಭಾಷಣೆಗಳು ಸದಾ ಗಮನ ಸೆಳೆಯುತ್ತವೆ. ಅದಕ್ಕೆ ಇಲ್ಲಿಯೂ ಕೊರತೆಯಿಲ್ಲ. ಹಾಗಾಗಿ ಚಿತ್ರವನ್ನು ಏನೂ ಯೋಚ್ನೇನೇ ಮಾಡದೆ ನೋಡಿ ಎಂಜಾಯ್ ಮಾಡಬಹುದು. ಯೋಚ್ನೆ ಮಾಡ್ತಾ ನೋಡಿದ್ರೆ ಚಿತ್ರದ ಮೂಲಕ ಅವರು ಹೇಳ ಹೊರಟ ಸಂದೇಶವನ್ನು ಅರ್ಥ ಮಾಡಿಕೊಳ್ಳಬಹುದು.
2015-08-14
- Review of Baahubali · 4/5
superb technician and star cast....it was visual treat to watch this moive:)
2015-08-13
- Review of Gokuladalli Seethe · 1/5
Gokuladalli Seethe serial is being dragged un necessarily. Unwanted communications and silly conversations are played at critical junctions. The story is not moving further at all. If this continues the popularity and the reviews would turn negative.Public would report critically on these episodes.
2015-08-12
- Review of Male
ಮಳೆ ಪ್ರೇಮವೊಂದೇ ಸೆಲೆ ನಿರ್ದೇಶಕ ಆರ್ ಚಂದ್ರು ನಿರ್ದೇಶನದ ಚಿತ್ರಗಳೆಂದರೆ ಅಲ್ಲೊಂದು ನವಿರಾದ ಪ್ರೇಮಕತೆ ಇರಬೇಕೆಂಬ ನಿರೀಕ್ಷೆಯಿರುತ್ತದೆ. ನಿರ್ದೇಶಕ ಶಿವು ತೇಜಸ್ ಆಗಿದ್ದರೂ ಕೂಡ ಪ್ರೇಕ್ಷಕರ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದೇ ಮಳೆಗೆ ಗೆಲುವಿನ ಕಳೆ ತಂದಿದೆ. ಪ್ರಥಮ ನೋಟದಲ್ಲೇ ನಾಯಕಿಯನ್ನು ಇಷ್ಟಪಡುವ ನಾಯಕ, ನಾಯಕಿಗೆ ಮಳೆಯಲ್ಲಿ ಐಸ್ಕ್ರೀಂ ತಿನ್ನುವುದೇ ಇಷ್ಟದ ಕಾಯಕ, ಚಿಲ್ಲರೆ ಕಾಸನ್ನು ಇಬ್ಬರೂ ಹಂಚಿಕೊಳ್ಳುವಂತೆ ಮಾಡುವ ಬಸ್ ನಿರ್ವಾಹಕ.. ಇಂಥ ಅದೆಷ್ಟೋ ದೃಶ್ಯಗಳನ್ನು ತೆಲುಗು, ತಮಿಳು ಸಿನೆಮಾಗಳಲ್ಲಿ ಈಗಾಗಲೇ ಬಹಳಷ್ಟು ಬಾರಿ ಕಂಡಿದ್ದೇವೆ. ಇಲ್ಲಿ ಅದೇ ದೃಶ್ಯಗಳೇ ರಿಪೀಟಾಗುವುದಾದರೂ ಸಂಭಾಷಣೆಗಳು ಹೊಸತನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ನಾಯಕನೊಂದಿಗೆ ಪದೇ ಪದೇ ಸಿಡುಕಾಡುವ ಅಮೂಲ್ಯಗೆ ಚೆಲುವಿನ ಚಿತ್ತಾರದ ಇಮೇಜ್ ಮುಂದುವರಿದೆ. ಸಂಭಾಷಣೆಯಲ್ಲಿ ಪದೇ ಪದೇ ದ್ವಂದ್ವಾರ್ಥಗಳು ನುಸುಳಿರುವುದನ್ನು ಬಿಟ್ಟರೆ ನಾಯಕ ಪ್ರೇಮ್ ಕೂಡ ಗುಣವಂತನಾಗಿ ಉಳಿದುಕೊಳ್ಳುತ್ತಾರೆ! ಹಾಗಾಗಿ ಇಬ್ಬರು ಒಳ್ಳೆಯ ಪ್ರೇಮಿಗಳು ಚಿತ್ರದ ಮುಕ್ಕಾಲು ಭಾಗ ಗುದ್ದಾಡುತ್ತಲೇ ಸಾಗಿದರೂ ಅದರಲ್ಲಿ ಮನರಂಜನೆ ಕಾಣಲು ಪ್ರೇಕ್ಷಕನಿಗೆ ಸಾಧ್ಯವಾಗುತ್ತದೆ. ಅದಕ್ಕೆ ಸುಜ್ಞಾನ್ ಛಾಯಾಗ್ರಹಣ ಮತ್ತು ಜಸ್ಸಿಗಿಫ್ಟ್ ಸಂಗೀತ ಪೂರಕವಾಗಿದೆ. ಇತ್ತೀಚೆಗೆ ಬಹಳಷ್ಟು ಚಿತ್ರಗಳ ಕ್ಲೈಮ್ಯಾಕ್ಸ್ ನಲ್ಲಿ ಬಂದು ನಗಿಸುವ ಸಾಧುಕೋಕಿಲ ಇಲ್ಲಿ ಬೇಗನೆ ಬಂದು ಬೇಗನೇ ಮಾಯವಾಗುತ್ತಾರೆ. ಪ್ರೀತಿಸಿದವನಲ್ಲಿ ತನ್ನ ಪ್ರೀತಿಯನ್ನು ಹೇಳುವ ದಿನವೇ ಆತ ಶ್ರೀಮಂತನೆಂದು ಅರಿವಾಗುವುದು ಮತ್ತು ಹಾಗಾಗಿ ಇನ್ನು ತನ್ನ ಪ್ರೀತಿ ಹೇಳಿದಲ್ಲಿ ಅದರಿಂದ ತನ್ನ ಪ್ರೀತಿಗೆ ಅವಮಾನವಾದೀತೆಂದು ಹಿಂಜರಿಯುವ ನಾಯಕಿಯನ್ನು ನಾವು ಅರಸು ಚಿತ್ರದಲ್ಲಿಯೇ ನೋಡಿದ್ದೇವೆ. ಅಲ್ಲಿ ಇಬ್ಬರು ನಾಯಕಿಯರಿದ್ದರು. ಹಾಗಾಗಿ ಇಲ್ಲಿನ ಕ್ಲೈಮ್ಯಾಕ್ಸ್ ಏನೆಂಬುದನ್ನು ಥಿಯೇಟರಲ್ಲೇ ನೋಡಬೇಕು! ಜೊತೆಗೆ ಚಿತ್ರದ ಆರಂಭದಲ್ಲೇ ಬುಡಬುಡಿಕೆಯವನ ಮೂಲಕ ನಾಯಕನ ಪ್ರೇಮದ ಬಗ್ಗೆ ಕುತೂಹಲದ ಭವಿಷ್ಯವಾಣಿ ಹೊರಡಿಸಿ ಕೊನೆಯತನಕ ಆಸಕ್ತಿ ಉಳಿಯುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಬಹುಶಃ ಗಣೇಶ್ ಮತ್ತು ಅಮೂಲ್ಯಗಾಗಿ ಹಣೆಯಲಾದಂತಿರುವ ಈ ಕತೆಯನ್ನು ಯಾವುದೇ ಪ್ರೇಮಿಗಳು ನೋಡಿದರೂ ಖುಷಿಪಡುವಂತಿದೆ ಎಂಬುದಂತೂ ನಿಜ.
2015-08-08 · FilmySphere critic
- Review of Gokuladalli Seethe
Sunny you are really looking good in Rahuls role. Please continue.
2015-07-29
- Review of Gokuladalli Seethe
I have started loving this serial because of Sunny and Anushas acting. Eagerly waiting every day to watch the next episode. Fabulous acting by Sunny (Rahul) and Anusha (Pavani).
2015-07-29
- Review of Baahubali · 3/5
I felt second half was much better than first half.
2015-07-27
- Review of Bullet Basya
ಬುಲೆಟ್ ಬಸ್ಯಾ ಚಿತ್ರ ವಿಮರ್ಶೆ ಇದು ಪ್ರೇಮದ ಜೊತೆಗೆ ಕಾಮದ ವಿಷ್ಯಾ..!ಹಾಸ್ಯ ಮತ್ತು ಹಾಡುಗಳನ್ನು ಬಯಸಿ ಶರಣ್ ಚಿತ್ರ ನೋಡಲು ಬಯಸುವವರಿಗೆ ಭರಪೂರ ಮನರಂಜನೆಯ ಒಂದು ಚಿತ್ರವಾಗಿ ಬುಲೆಟ್ ಬಸ್ಯಾ ತೃಪ್ತಿ ಕೊಡುತ್ತದೆ. ಹಾಗಾಗಿ ತಾವೇ ಕತೆ ಬರೆದರೂ ಜಯತೀರ್ಥರ ನಿರೂಪಣಾ ಶೈಲಿಯಿಂದ ಶರಣ್ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ ಎನ್ನಬಹುದು. ಚಿತ್ರದಲ್ಲಿ ವಂಶಪಾರಂಪರ್ಯವಾಗಿ ಬಹುಪತ್ನಿಯರನ್ನು ಹೊಂದಿರುವ ನಾಡರಸು ಮನೆತನದ ಹುಡುಗ ಶರಣ್. ಆತನಿಗೆ ಮದುವೆಯಾಗಿರುವುದಿಲ್ಲವಾದರೂ ಹೆಣ್ಣಿನ ಚಾಳಿಗೇನೂ ಕಡಿಮೆಯಿರುವುದಿಲ್ಲ. ಹಾಗಾಗಿ ಒಳ್ಳೆಯ ಹೆಣ್ಣುಮಕ್ಕಳಿಗೆ ಆತನಲ್ಲಿ ಒಳ್ಳೆಯ ಅಭಿಪ್ರಾಯವಿರುವುದಿಲ್ಲ. ಆದರೆ ಈ ನಡುವೆ ಕಾವೇರಿ ಎಂಬ ಸದ್ಗುಣೆಯನ್ನು ಕಂಡು ಆಕೆಯನ್ನೇ ವರಿಸುವ ತೀರ್ಮಾನಕ್ಕೆ ಬರುತ್ತಾನೆ. ಆದರೆ ಆಕೆಗೆ ಅದಾಗಲೇ ಅತ್ತೆ ಮಗ ಮುತ್ತುರಾಜನೊಂದಿಗೆ ಮದುವೆ ನಿಶ್ಚಿತಾರ್ಥವಾಗಿರುತ್ತದೆ. ಇದು ಗೊತ್ತಾದ ಬಳಿಕ ಅವರಿಬ್ಬರನ್ನು ಬೇರ್ಪಡಿಸುವ ಪ್ರಯತ್ನದಲ್ಲಿ ತೊಡಗುತ್ತಾರೆ ಶರಣ್. ಇದರಲ್ಲಿ ಬುಲೆಟ್ ಬಸ್ಯಾ ಶರಣ್ ಯಶಸ್ವಿಯಾಗುತ್ತಾರ; ಇಲ್ವಾ ಎಂಬುದನ್ನು ತೆರೆಯ ಮೇಲೆ ನೋಡಬಹುದು.ಪ್ರೇಕ್ಷಕರಿಗೆ ಪ್ರಥಮ ಅಚ್ಚರಿಯಾಗಿ ಚಿತ್ರದಲ್ಲಿ ಶರಣ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಅಂದರೆ ಬುಲೆಟ್ ಬಸ್ಯನ ಜೊತೆಗೆ ಮುತ್ತುರಾಜನ ಪಾತ್ರದ ನಿರ್ವಹಣೆಯನ್ನೂ ಅವರೇ ಮಾಡಿದ್ದಾರೆ. ಕಾವೇರಿಯ ಪಾತ್ರಕ್ಕೆ ಹರಿಪ್ರಿಯ ನ್ಯಾಯವೊದಗಿಸಿದ್ದಾರೆ. ಎಂದಿನಂತೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಪ್ರತ್ಯಕ್ಷಗೊಳ್ಳುವ ಸಾಧುಕೋಕಿಲ ನಗು ತರಿಸುವಲ್ಲಿ ಯಶಸ್ವಿಯಾಗುತ್ತಾರೆ. ಇರುವ ಸಣ್ಣ ಕತೆಯನ್ನು ಹಾಸ್ಯಕ್ಕಾಗಿ ಅದೆಲ್ಲಿ ಇನ್ನಷ್ಟು ಎಳೆದು ಬಿಡುತ್ತಾರೋ ಎಂಬ ಭಯ ಕಾಡುತ್ತಿರುವಂತೆ ಚಿತ್ರ ಚಿಕ್ಕಚೊಕ್ಕದಾಗಿ ಮುಗಿದು ಬಿಡುತ್ತದೆ. ಶರಣ್ ಸ್ನೇಹಿತರಾಗಿ ನಟಿಸಿದವರಲ್ಲಿ ಯತಿರಾಜ್ ಬಿಟ್ಟರೆ ಬೇರೆಯವರಿಗೆ ನಟನೆಗೆ ಅವಕಾಶಗಳಿಲ್ಲ. ಪೊಲೀಸ್ ಅಧಿಕಾರಿಯಾಗಿ ನೀನಾಸಂ ಅಶ್ವಥ್ಥ್ ನೆನಪಲ್ಲಿ ಉಳಿಯುತ್ತಾರೆ. ಹಳೆಯ ಚಿತ್ರಗೀತೆಗಳ ಒಂದೆರಡು ಸಾಲುಗಳನ್ನು ಚಿತ್ರದ ಕೆಲವೆಡಗಳಲ್ಲಿ ಬಳಸಿಕೊಂಡಿರುವುದು ಸಾಂದರ್ಭಿಕವಾಗಿದೆ.ಒಟ್ಟಿನಲ್ಲಿ ಶರಣ್ ಅಭಿಮಾನಿಗಳಿಗೆ ಚಿತ್ರ ನಿರಾಶೆ ಮೂಡಿಸುವುದಿಲ್ಲ ಎಂಬುದಂತೂ ಸತ್ಯ.
2015-07-25 · FilmySphere critic
- Review of Baahubali · 3.5/5
" Baahubali - The Beginning " ಚಿತ್ರದ ವಿಮರ್ಶೆ( 3.25 / 5 ) . SS Rajamouli ಇವರ ನಿರ್ದೇಶನ ಎಂದರೆ ಎಲ್ಲಿಲದ ಕಾತರ ಪ್ರೇಕ್ಷಕನಲ್ಲಿ , ಅದರಲ್ಲೂ 3 ವರ್ಷದ project ಅಂದ್ರೆ ಹೇಳ್ಬೇಕ??? . ಆದ್ರೆ ನಿಜಕ್ಕೂ ನಿರ್ದೇಶಕರು ಅವರ ಮೇಲಿನ ಪ್ರೇಕ್ಷಕನ ವಿಶ್ವಾಸವನ್ನು ಉಳಿಸಿಕೊಂಡರ???? . ಸೇಡಿಗಾಗಿ ಪರಿತಪಿಸ್ತಿರೋ ಒಂದು ಗುಂಪು, ಆ ಗುಂಪಿನಲ್ಲಿ ಅವಂತಿಕ( #Tamannaah ) ಒಬ್ಬಳು. ಅವರ ಧೆಯ ದೇವಸೇನ( AnushkaShetty ) ರನ್ನು ಸೆರೆ ಇಂದ ಮುಕ್ತಿಗೊಳಿಸೋದು. ಇನ್ನು ಶಿವುಡು ಪಾತ್ರ ನಿರ್ವಹಿಸಿರೋ Prabhas ಅವರಿಗೆ ಅವಂತಿಕ ಳ ಮೇಲೆ ಒಲವು ಮೂಡುತ್ತೆ. ಸೇಡಿನ ಜ್ವಾಲೆಯಲ್ಲೇ ಸದಾ ಪ್ರತಿಧ್ವನಿಸುತ್ತಿರೋ ನಾಯಕಿಗೆ ಪ್ರಭಾಸ್ ಪ್ರೀತಿಯ ಚಿಲುಮೆ ಮೂಡಿಸುತ್ತಾರೆ. ಹಾಗೆ ಆಕೆಯ ಭಾಜ್ಯತೆ ಅವನ ಭಾಜ್ಯತೆ ಎಂದು ಆತಾ ದೇವಸೇನಳನ್ನು ಸೆರೆಯಿಂದ ಮುಕ್ತಿಗೊಳಿಸಲು ಮುಂದಾಗುತ್ತಾನೆ. . ಇಲ್ಲಿಗೆ ವಿರಾಮ :) . ದ್ವಿತಿಯ ಅರ್ಧದಲ್ಲಿ ಶಿವುಡು ದೇವಸೇನ ರನ್ನು ಬಿಡಿಸಿ ನಂತರ ಕರೆದುಕೊಂಡು ಹೋಗುವಾಗ ಅವನನು ಭಲ್ಲಾಳ ದೇವನ ( Rana Daggubati ) ಸೇನೆ ತಡೆದಾಗ ಒಂದು ಸಣ್ಣ ಕದನ ನಂತರ ಅಲ್ಲಿಗೆ ಬರೋ ಅವಂತಿಕ ಹಾಗು ಅವರ ಗುಂಪಿಗೆ ಶಿವುಡು ಅವರನ್ನು ನೋಡಿ ಅಚ್ಚರಿ ಕಾದಿರುತ್ತದೆ. ಅದೇ ಪ್ರಭಾಸ್ ಅವರ ನಿಜ ಹೆಸರು ಬಾಹುಬಲಿ ಎಂದು. ನಂತರ ಪ್ರಭಾಸ್ ಅವರಿಗೆ ಅವರ ಹುಟ್ಟಿನ ರಹಸ್ಯ ತಿಳಿಸೋದು. ಆ ರಹಸ್ಯ ನೀವು ಚಿತ್ರಮಂದಿರದಲ್ಲೇ ನೋಡಿದ್ರೆ ಚಂದ ಏಕೆಂದರೆ ನನ್ನ ಪ್ರಕಾರ ಈ ಫ್ಲಾಶ್ ಬ್ಯಾಕೆ ಸಿನಿಮಾ. . ಇನ್ನು ಪಾತ್ರಗಳ ವಿಚಾರಕ್ಕೆ ಬಂದ್ರೆ #Prabhas ಫಸ್ಟ್ ಹಾಫ್ ನಲ್ಲಿ ಓಕೆ ಓಕೆ, ಸೆಕೆಂಡ್ ಹಾಫ್ ನಲ್ಲಿ ಅವರ ಪಾತ್ರ ಅವರನ್ನು ಎತ್ತಿ ಹಿಡಿಯುತ್ತೆ. ಇನ್ನು #Tamanna ನಿಜಕ್ಕೂ ಪಾತ್ರಕ್ಕೆ ಸೂಟ್ ಆಗಿಲ್ಲ. ಅವರನ್ನು ಬರಿ ಒಂದು property ಆಗಿ ಬಳಸಿ ಕೊಂಡಿದ್ದಾರೆ ಅನಿಸ್ತು. #RanaDaggubati ನಿಜಕ್ಕೂ ಅವರ ನಟನೆಯ ಕೌಶಲ್ಯ ಮೆರಿದ್ರು, ಅದು ನೆಗೆಟಿವ್ ಶೇಡ್ ನಲ್ಲಿ. ಇನ್ನು ನಮ್ಮ ಕನ್ನಡಿಗ #KicchaSudeep ಅವರ ಪಾತ್ರ ಅನವಶ್ಯಕ ಹಾಗು ಅವರು ಆ ಪಾತ್ರ ಸರಿಯಾಗಿ ನಿರ್ವಯಿಸಿಲ್ಲ ಅನಿಸ್ತು. #AnushkaShetty ಅವರಿಗ್ಗೆ ಅಂತ ಹೇಳಿಕೊಳ್ಳ ಪಾತ್ರ ಇಲ್ಲವಾದರು ಸಿಕ್ಕಿರೋ ಪಾತ್ರ ನಿಜಕ್ಕೂ ಜೀವಿಸದ್ದಾರೆ. ಅವರೇ #Tamanna ಪಾತ್ರ dual role ನಲ್ಲಿ ಮಾಡ್ಬೋದಿತ್ತು ಅನಿಸ್ತು. ಕಟ್ಟಪ್ಪ ನ ಪಾತ್ರ ಮಾಡಿರೋ #SathyaRaj ಅವರ ನೆನಪಿನಲ್ಲಿ ಉಳಿಯುತ್ತಾರೆ. ಹಾಗೆ #Naser ಸಹ ಅವರ ಪಾತ್ರ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇನ್ನು ಉಳಿದಂತೆ ಎಲ್ಲರು ಅವರವರ ಪಾತ್ರ, ಪಾತ್ರ ಕೇಳುವಷ್ಟು ಮಾಡಿದ್ದಾರೆ. ಇಷ್ಟು ಪಾತ್ರಗಳಲ್ಲಿ ಭಿನ್ನ ಅನ್ನಿಸಿದ್ದ ಪಾತ್ರ ಶಿವಗಮಿಯದ್ದು , ನಿಜಕ್ಕೂ Ramya Krishnan ಈ ಪಾತ್ರದಲ್ಲಿ ಬಹಳ ಚೆನ್ನಾಗಿ ನಟಿಸಿ ಚಿತ್ರದ first part ಸಾರಥ್ಯವಹಿಸಿ ಕೊಂಡಿದ್ದಾರೆ. . ಎಸ್ ಎಸ್ ರಾಜಮೌಳಿ ಅವರ ನಿರ್ದೇಶನದಲ್ಲಿ ಎಡವಿದ್ರೆನೋ ಅನ್ನಿಸ್ತು. ಕಾರಣ ಸಿನಿಮಾದ ಮೊದಾಲಾರ್ಧ. ಚಿತ್ರವನ್ನು ಎರಡು ಭಾಗ ಮಾಡುವುದರ ಬದಲು ಒಂದೇ ಭಾಗದಲ್ಲಿ ಮುಗಿಸ್ಬೋದಿತ್ತು. ಅವರು ಅವರ ತಲೆಯನ್ನೆಲ್ಲ ಬರಿ ಯುದ್ಧ ಸನ್ನಿವೇಶಕ್ಕೆ ಸೀಮಿತಗೊಳಿಸಿದ್ದಾರೆ ಅನ್ನಿಸ್ತು ಸಿನಿಮಾ ನೋಡಿದ ನಂತರ. ನಿಜ ಹೇಳೋದಾದ್ರೆ ಬೇಸರ ಆಯ್ತು. . ನನಗೇನು ಫಸ್ಟ್ ಹಾಫ್ Visual Treat ಅನ್ನಿಸಿಲ್ಲ, But ಸೆಕೆಂಡ್ ಹಾಫ್ execution superb, Mind blowing, Extra Ordinary.
2015-07-11
- Review of Baahubali
ಬಾಹುಬಲಿ : ನಿರೀಕ್ಷೆಯ ಮಟ್ಟ ತಲುಪದ ಒಂದು ಒಳ್ಳೆಯ ಪ್ರಯತ್ನ., ಮುಂದೆ ಬರಲಿರುವ ಬಾಹುಬಲಿ ಭಾಗ ಎರಡರ ಪೀಠಿಕೆ ಈ beginning ಬಾಹುಬಲಿ ಎಂದರೆ ತಪ್ಪಾಗಲಾರದು.. ಮೇಕಿಂಗಲ್ಲಿ ನೂರಾರು ಕೋಟಿ ಬಡ್ಜೆಟ್ ಸುರಿದು ಸಾವಿರಾರು ಕೋಟಿಗಳ "The Hobbit, Lord of the Rings, Hercules, 300 ಇತ್ಯಾದಿ.," ಸಿನೆಮಾಗಳ ಹತ್ತಿರತ್ತಿರ ರೀಚ್ ಆಗಿದ್ದಾರೆ ರಾಜಮೌಳಿ.. ವಾವ್ ಅಂತನ್ನಿಸೋ ಒಂದು ಕಾಲ್ಪನಿಕ ಸಾಮ್ರಾಜ್ಯಕ್ಕೆ, ಒಂದು ಅದ್ಭುತ ನಗರಿಗೆ ಕರ್ಕೊಂಡ್ ಹೋಗ್ತಾರೆ.. ಅರ್ಧಗಂಟೆಗೂ ಹೆಚ್ಚು ಕಾಲ ಯುದ್ಧಾನುಭವವನ್ನ ಕಣ್ಣಿಗೆ ಕಟ್ಟಿಕೊಡ್ತಾರೆ.. ಮಹಾಭಾರತದ ದಾಯಾದಿ ಮತ್ಸರವನ್ನ ನೆನಪಿಸ್ತಾರೆ.. ಆದ್ರೆ ರಾಜಮೌಳಿ ಅವರ ಹಿಂದಿನ ಎಲ್ಲಾ ಸಿನೆಮಾಗಳನ್ನು ನೋಡಿದ ನಮಗೆ 'ಬಾಹುಬಲಿ' ಚಿತ್ರದಲ್ಲಿ ಕಥೆ ತೆರೆದುಕೊಳ್ಳುವ ರೀತಿಯಲ್ಲಿ, ಚಿತ್ರಕಥೆಯ ಮಗ್ಗುಲು ಬದಲಾಯಿಸುವ ವೇಗದಲ್ಲಿ ಸ್ವಲ್ಪ ಹಿಡಿತ ಕಳಕೊಂಡ್ರೇನೋ ಅನ್ಸತ್ತೆ.. ಮಾಮೂಲಾಗಿ ತೆಲುಗಿನಲ್ಲಿ ಬರುವ factionalism ಕಥೆಯ ಕಕಾಲಘಟ್ಟವನ್ನ ಒಂದು ನಾನೂರು ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋದಂಗಿದೆ... ಮೊದಲಾರ್ಧದಲ್ಲಿ ಕೆಲ ದೃಶ್ಯಗಳು ಪಟ್ಟು ಹಿಡಿದು ಸೀಟಲ್ಲಿ ಕೂರಿಸಿದ್ರೂ ಮಿಕ್ಕ ಬಹಳಷ್ಟು ದೃಶ್ಯಗಳು ನೀರಸ, ಜಾಳು, ಲ್ಯಾಗ್ ಅನ್ನಿಸಿಬಿಡ್ತವೆ.. ಸಿನೆಮಾದ ದ್ವಿತೀಯಾರ್ಧ ಒಂದು ಹಂತಕ್ಕೆ ಹಿಡಿದಿಟ್ಟುಕೊಳ್ಳತ್ತೆ... ನೋಡೋವಾಗ ಕೊಟ್ಟ ಕಾಸಿಗೆ ಮೋಸವಾಯ್ತೋ ಇಲ್ವೋ ಅಂತ ಜಿಜ್ಞಾಸೆ ಮೂಡಿಸಿದ್ರೂ, ಅಂತ್ಯವಾಗ ಅಂತ್ಯಕ್ಕೆ ಓಕೆ ಓಕೆ ಅಂತನ್ಸತ್ತೆ.. ಮೇಲೆ ಹೇಳಿದಂಗೆ ಹಾಲಿವುಡ್ ನ ದೊಡ್ಡ ದೊಡ್ಡ ಸಿನೆಮಾಗಳ ಲೆವಲ್ಲಿಗೆ ಈ ಸಿನೆಮಾನ ಮಾಡಿದ್ರೂ ಸಹ ಆ ಸಿನೆಮಾಗಳಲ್ಲಿ ಒಂದೊಂದು ಭಾಗವೂ ಒಂದೊಂದು ಆದಿ, ಮಧ್ಯ ಮತ್ತು ಅಂತ್ಯಗಳನ್ನೊಳಗೊಂಡಿರುತ್ತಿತ್ತು, ಅಲ್ಲಿ ಕಥೆ ಮುಗಿಯದಿದ್ದರೂ ನೋಡಿದಷ್ಟಕ್ಕೆ ಏನೋ ಒಂದು complete ಆದಂತಹ ತೃಪ್ತಿಯಾಗುತ್ತಿತ್ತು., ಆದರೆ ಬಾಹುಬಲಿ ಸಿನೆಮಾ ಮುಗಿಯುವ ಹೊತ್ತಿಗೆ ತೃಪ್ತವಾಗಲಾರದು ಪ್ರೇಕ್ಷಕನ ಮನಸ್ಸು.. ಒಟ್ಟಾರೆ ಬಾಹುಬಲಿ ಸಿನೆಮಾ theoretically ಕರೆಕ್ಟ್ ಅನ್ಸಿದ್ರೂ ಪ್ರಾಕ್ಟಿಕಲಿ ಕಥೆಯೇ ಶುರುವಾಗದ setup ಅಥವ ಪೀಠಿಕೆ ಎಂಬ ಅತೃಪ್ತ ಭಾವ ತುಂಬ್ಕೊಳತ್ತೆ... ಈ ಅತೃಪ್ತಿಯೇ ಬಾಹುಬಲಿಯ ಮುಂದುವರೆದ ಭಾಗಕ್ಕೆ ಕಾಯುವಂತೆ ಮಾಡಲೂಬಹುದು..! ಸಿನೆಮಾದ ಮೇಜರ್ ಹೈಲೈಟ್ಸ್ ತಾಂತ್ರಿಕ ವಿಭಾಗದಲ್ಲಿ ಮೊದಲಿಗೆ ವಿ.ಎಫ್.ಎಕ್ಸ್., ನಂತರದಲ್ಲಿ ಗಮನಕ್ಕೆ ಬರೋದು ಕೀರವಾಣಿ ಹಿನ್ನೆಲೆ ಸಂಗೀತ, ಪೀಟರ್ ಹೈನ್ಸ್ ಸ್ಟಂಟ್ ಕೊರಿಯೋಗ್ರಫಿ, ಸೆಂದಿಲ್ ಕುಮಾರ್ ಛಾಯಾಗ್ರಹಣ, ಮೇಕಪ್ಪು ಮತ್ತು ಕಾಸ್ಟ್ಯೂಮ್., ಈ ಸಿನೆಮಾದಲ್ಲಿ Lead characters ಗಿಂತ ಪೋಷಕ ಪಾತ್ರದಾರಿಗಳ ನಟನೆ ಮತ್ತು ಅವರ ಪಾತ್ರ ಪೋಷಣೆಗಳು ಹೆಚ್ಚು ಗಮನ ಸೆಳೆಯತ್ತೆ.. ಅವರೆಲ್ಲರೊಳಗೆ ರಮ್ಯಾಕೃಷ್ಣ ಮೈನ್ ಹೈಲೈಟ್ ಆಫ್ ದ ಮೂವಿ, ನಾಝರ್ ಮತ್ತಿ ಸತ್ಯರಾಜ ಇನ್ನೆರಡು ಪ್ರಮುಖ ಆಕರ್ಷಣೆಗಳು., ಈ ಮೂವರ ನಟನೆ ಮತ್ತು ಬಾಡಿ ಲಾಂಗ್ವೇಜ್ ಸೂಪರ್ರು.. ಬಾಹುಬಲಿ ಮತ್ತು ಶಿವುಡು ಎಂಬೆರಡು ಪಾತ್ರಗಳ ಪಾತ್ರದಾರಿ ಪ್ರಭಾಸ್ ನಟನೆಯಲ್ಲಿ ಹೊಸತೇನಿಲ್ಲ, ಅವರು ನಿಭಾಯಿಸಿರುವ ಎರಡೂ ಪಾತ್ರಗಳ ಪೋಷಣೆ ಅಷ್ಟಾಗಿ ರುಚಿಸುವುದಿಲ್ಲ., ರಾಣಾ ದಗ್ಗುಬಾಟಿ ಖಳನಾಗಿ ಸೂಪರ್ರು, ತಮನ್ನಾ ವೀರಮಹಿಳೆಯಾಗಿ ಕಾಣಿಸುವಾಗ ಆಕೆಯ ನಟನೆ ಬಾಡಿ ಲಾಂಗ್ಬೇಜ್ ಬಹಳ ಕೃತಕ ಅನ್ಸತ್ತೆ, ಆದ್ರೆ ರೊಮ್ಯಾಂಟಿಕ್ ಗ್ಲಾಮರ್ ಗೆಟಪ್ಪಲ್ಲಿ ತುಂಬಾ ಸ್ಪೆಷಲ್ಲಾಗಿ ಕಾಣಿಸ್ತಾಳೆ, ಸುದೀಪರ ಪಾತ್ರ ಹಂಗ್ ಬಂದ್ ಹಿಂಗ್ ಹೋಗತ್ತೆ, ನೆನಪಲ್ಲಿ ಉಳಿಯೋದ್ ಕಷ್ಟ, ಮುಂದಿನ ಭಾಗದಲ್ಲಿ ಆ ಪಾತ್ರ ಉತ್ತಮವಾಗಿ ಮೂಡಿಬರಬಹುದು., ಅನುಷ್ಕಾ ಶೆಟ್ಟಿ ಪಾತ್ರದ ಲುಕ್ ಮೇಕಪ್ಪು ಮಾತ್ರ ಈ ಸಿನೆಮಾದಲ್ಲಿ ನೋಡೋಕೆ ಸಾಧ್ಯ, ಆಕೆಯ ಒಟ್ಟು ಪಾತ್ರ-ನಟನೆ ಮುಂಬರುವ ಬಾಹುಬಲಿಯಲ್ಲಿ ನೋಡಲು ಸಿಗಬಹುದು... Finally ಬಾಹುಬಲಿಯಲ್ಲಿ ಕನ್ನಡದ ಮಯೂರ ಚಿತ್ರದ ಕೆಲ ದೃಶ್ಯಗಳ ಹೋಲಿಕೆಗಳಿರುವುದು ಕಾಕತಾಳೀಯ ಹೊರತು ಮಯೂರ ಚಿತ್ರಕ್ಕೆ ಹೋಲಿಸಿ ನೋಡುವುದು ಬೇಕಾಗಿಲ್ಲ, ಮಯೂರ ಸಿನೆಮಾ ಬಾಹುಬಲಿಗಿಂತ ಸಾವಿರ ಪಟ್ಟು ಅತ್ಯುತ್ತಮ ಚಿತ್ರ.. ಬಾಹುಬಲಿಯನ್ನ ಎರಡು ಸಿನೆಮಾಗಳನ್ನಾಗಿ ಮಾಡಿ ಅಷ್ಟುದ್ದ ಎಳೆಯುವ ಬದಲು, ಮೂರು-ಮೂರುವರೆ ಗಂಟೆಗಳ ಕಾಲದ ಒಂದೇ ಸಿನೆಮಾ ಮಾಡಿದ್ದರೆ ಚೆಂದಿತ್ತು.. ಅನಾವಶ್ಯಕ ಎಳೆದಾಟವಿಲ್ಲದ ಬಿಗಿಯಾದ ಚಿತ್ರಕಥೆ ಆಗ್ತಾ ಇತ್ತೇನೋ ಒಂದೇ ಸಿನೆಮಾ ಮಾಡಿದ್ರೆ., ಈಗಲೂ ಏನಿಲ್ಲ, ಒಮ್ಮೆ ನೋಡಿ., ಬಾಹುಬಲಿ ಎರಡನೆ ಭಾಗ ನೋಡಬೇಕು ಅಂದ್ರೆ ಈ ಚಿತ್ರದ ಮೂಲಕ ಪಾತ್ರಗಳ ಪರಿಚಯ ಮಾಡಿಕೊಳ್ಳಿ, ಆದ್ರೆ ನೋಡಲೇಬೇಕಂತೇನೂ ಇಲ್ಲ., ಏನಿಷ್ಟವಾಗದೇ ಹೋದರೂ ಕೊನೆಗೆ VISUAL TREAT ಇಷ್ಟವಾಗತ್ತೆ- I JUST LOVED IT...
2015-07-10 · FilmySphere critic
- Review of RangiTaranga
ರಂಗಿತರಂಗ ಚಿತ್ರ ವಿಮರ್ಶೆ ರಂಗಿತರಂಗ: ಭೂತದ ಕಾಡಿನಲ್ಲಿ ಸಸ್ಪೆನ್ಸ್ ರಂಗವಲ್ಲಿ ಗುಡ್ಡೆದ ಭೂತ ಎಂಬ ಕರಾವಳಿಯ ಮಂದಿ ಕಿರುತೆರೆಗೆ ನೀಡಿದ ಜನಪ್ರಿಯ ಧಾರಾವಾಹಿ ನೆನಪಿದ್ದವರು ಕಮರೊಟ್ಟು ಗ್ರಾಮವನ್ನು ಮರೆತಿರಲಾರರು. ಅಲ್ಲಿನ ಭೂತ ಚೇಷ್ಟೆಯನ್ನು ಮತ್ತು ಅದರ ಹಿಂದಿನ ಸತ್ಯವನ್ನು ಮತ್ತೊಮ್ಮೆ ಅನಾವರಣ ಮಾಡುವ ಚಿತ್ರವಾಗಿ ರಂಗಿತರಂಗ ಮೂಡಿ ಬಂದಿದೆ. ಭೂತದ ಹರಕೆಯನ್ನು ತೀರಿಸಲು ಬೆಂಗಳೂರಿನಿಂದ ಕಮರೊಟ್ಟು ಗ್ರಾಮಕ್ಕೆ ಬಂದು ಸೇರುವ ನಾಯಕ ಮತ್ತು ನಾಯಕಿ. ರಾತ್ರಿ ರಸ್ತೆಯಲ್ಲಿ ಧುತ್ತನೆ ಕಂಡು ಮಾಯವಾಗುವ ಭೂತದ ವೇಷ; ಅದೇನೋ ನಿಗೂಢತೆ ತುಂಬಿದಂತಿರುವ ಅವರ ಮನೆ, ಹೀಗೆ ಚಿತ್ರವು ಸಸ್ಪೆನ್ಸ್ ಗಳನ್ನು ಸೃಷ್ಠಿಸುತ್ತಾ ಹೋಗುತ್ತದೆ. ಆದರೆ ನಾಯಕನ ಪತ್ನಿ ಮಾಯವಾದಾಗಿನಿಂದ ಕತೆ ಇನ್ನಷ್ಟು ಗಂಭೀರತೆ ಪಡೆಯುತ್ತದೆ. ನಿನಗೊಬ್ಬಳು ಪತ್ನಿಯೇ ಇರಲಿಲ್ಲ, ಅದೊಂದು ಇಲ್ಯೂಶನ್ ಆಗಿತ್ತೆಂದು ಪೊಲೀಸ್ ಹೇಳುವಾಗ ಆಕೆಯ ಡೈರಿಯಿಂದ ತನ್ನ ಫ್ಲ್ಯಾಶ್ ಬ್ಯಾಕ್ ಸ್ಟೋರಿ ತಿಳಿದುಕೊಳ್ಳುತ್ತಾನೆ ನಾಯಕ. ಅದರ ಪ್ರಕಾರ 6 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಆಕೆಯಿದ್ದ ಕಾರಿಗೆ ತಾನಿದ್ದ ಬೈಕು ತಾಗಿ ಅಪಘಾತವಾಗಿತ್ತು. ಅದರಲ್ಲಿ ತೀರಿಹೋದ ಇನ್ನೂ ಎರಡು ಜೀವಗಳು ನಾನು ಮತ್ತು ನನ್ನ ಪತ್ನಿಯದೆಂದು ಲೋಕ ನಂಬಿರುವುದು ತಿಳಿಯುತ್ತದೆ. ಅಲ್ಲಿಗೆ ಮಧ್ಯಂತರ. ಮಧ್ಯಂತರದ ಬಳಿಕವೂ ಪತ್ನಿಯ ಹುಡುಕಾಟ ಸೃಷ್ಠಿಸುವ ನಾಟಕೀಯ ಸನ್ನಿವೇಶಗಳು ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಅನಷ್ಕು ಹೆಸರಲ್ಲಿ ಕತೆ ಬರೆಯುತ್ತಿದ್ದಾತನನ್ನು ಹುಡುಕಿಕೊಂಡು ಬರುವ ಪತ್ರಕರ್ತೆಗೆ ಆ ಕತೆಗಾರ ನಾಯಕನೇ ಎಂದು ತಿಳಿಯುವ ಸನ್ನಿವೇಶವೂ ಇಲ್ಲಿದೆ. ಅದರ ಬಳಿಕ ಅವರಿಬ್ಬರೂ ಸೇರಿ ಪತ್ನಿಯ ಹುಡುಕಾಟ ನಡೆಸುತ್ತಾರೆ. ಅವಳನ್ನು ಯಾರು ಯಾಕೆ ಅಪಹರಿಸಿರುತ್ತಾರೆ ಎಂಬುದು ಮತ್ತೊಂದು ಕತೆಯನ್ನು ಹೇಳುತ್ತಾ ಹೋಗುತ್ತದೆ. ಆತನಿಂದ ನಾಯಕ ಪತ್ನಿಯನ್ನು ಹೇಗೆ ರಕ್ಷಿಸುತ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಬಹುದು. ಚಿತ್ರವನ್ನು ಆರಂಭದಿಂದ ನೋಡುತ್ತಿದ್ದಂತೆ ಇದೊಂದು ಹೊಸಬರ ಪ್ರಯತ್ನದಂತೆ ಅನಿಸುವುದೇ ಇಲ್ಲ. ನೋಡುಗನಲ್ಲಿ ಇದೊಂದು ಮಣಿರತ್ನಂ ಚಿತ್ರವೇನೋ ಎಂಬ ಸಂದೇಹ ಮೂಡಿದರೆ ಅಚ್ಚರಿಯಿಲ್ಲ. ಅದರಲ್ಲಿ ವಿಲಿಯಂ ಡೇವಿಡ್ ಛಾಯಾಗ್ರಹಣದ ಪಾತ್ರ ಹೇಗೆ ಪ್ರಮುಖವೋ ಜೊತೆಗೆ ನವನಾಯಕನಾದರೂ ನೋಟದಲ್ಲಿ, ನಟನೆಯಲ್ಲಿ ಯಾರಿಗೂ ಕಡಿಮೆಯಿರದಂತೆ ನಟಿಸಿರುವ ನಾಯಕ ನಿರೂಪ್ ಮತ್ತು ಕಲಾವಿದರಿಂದ ನೈಜ ನಟನೆ ಹೊರತೆಗೆದ ನಿರ್ದೇಶಕ ಅನೂಪ್ ಭಂಡಾರಿಯ ಕಾರ್ಯವೈಖರಿ ಹೀಗೆ ಎಲ್ಲವೂ ಶ್ರೇಷ್ಠವೆನಿಸುತ್ತದೆ. ನಾಯಕ, ಪತ್ರಕರ್ತೆ, ಸಾಯಿಕುಮಾರ್ ಮೊದಲಾದವರ ಪಾತ್ರಗಳ ಫ್ಲ್ಯಾಶ್ ಬ್ಯಾಕ್ ಗಳು ಒಂದು ಹಂತದಲ್ಲಿ ಎರಡೆರಡು ಕತೆಗಳನ್ನು ಹೇಳುವುದು ಮತ್ತು ಒಗ್ಗಿಕೊಳ್ಳದ ಹಾಸ್ಯ ಒಂದಷ್ಟು ಹಾಸ್ಯ ದೃಶ್ಯಗಳು ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುತ್ತವೆ. ಆದರೆ ಸಾಯಿಕುಮಾರ್ ಪಾತ್ರವನ್ನು ತೋರಿರುವ ರೀತಿ ಚಿತ್ರವನ್ನು ಅಂತ್ಯದ ತನಕ ಕಾಯ್ದುಕೊಂಡು ವೀಕ್ಷಿಸುವಂತೆ ಮಾಡುತ್ತದೆ. ಹಾಡು, ಪರಿಸರ, ಸಂಗೀತ ಮೊದಲಾದವುಗಳಲ್ಲಿನ ಹೊಸತನದೊಂದಿಗೆ ಕಲಾವಿದರೂ ಕೂಡ ಒಂದು ತಾಜಾ ಚಿತ್ರವನ್ನು ಕನ್ನಡಿಗರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸಿನೆಮಾಸಕ್ತರು ಖಂಡಿತಾ ಒಮ್ಮೆ ನೋಡಬೇಕಾದ ಚಿತ್ರ.
2015-07-04 · FilmySphere critic
- Review of Maja Talkies · 4.5/5
FIRST AND BEST PROGRAM I NEVER MISS THIS PROGRAM,,,!
2015-06-23
- Review of Sasirekha Parinayam · 5/5
my life story is also like sashirekha parinayam
2015-06-22
- Review of Sasirekha Parinayam · 5/5
I like u so much sasi and abhi.I'm vryyyyyyy.....big fan of u.meghana ur awsome in pavitra bandana,purushothamma serials even.
2015-05-17
- Review of maneeshe
Very nice story,screenplay,acting...with good message. Kudos to all !
2015-05-13
- Review of Daksha
ದಕ್ಷ: ಇದು ದಾಖಲೆಯ ಪಕ್ಷ! ಚಿತ್ರ ವಿಮರ್ಶೆ ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ಸಿಗುವ ಮೊದಲೇ ದಾಖಲೆಯ ಚಿತ್ರವೆಂಬ ಹೆಸರಿನಲ್ಲಿ ತೆರೆಗೆ ಬಂದಿದೆ ಎಸ್. ನಾರಾಯಣ್ ರ ದಕ್ಷ. ಪ್ರಯತ್ನವನ್ನು ಖಂಡಿತಾ ಮೆಚ್ಚೋಣ; ಆದರೆ ಚಿತ್ರ ನೋಡಿದವರ ತಲೆಯಲ್ಲಿ ದಾಖಲೆಯಾಗುವ ದೃಶ್ಯಗಳೇನೂ ಉಳಿಯುವುದಿಲ್ಲ ಎಂಬುದು ವಾಸ್ತವ. ಕೆಲವೇ ಗಂಟೆಗಳೊಳಗೆ ನಡೆಯುವ ಕತೆ ಎಂಬ ವಿಚಾರ ಬಂದಾಗ ಕನ್ನಡದಲ್ಲಿ ಬಹಳ ಹಿಂದೆಯೇ ದಾಖಲೆ ಮಾಡಿದ್ದ 'ನಿಷ್ಕರ್ಷ' ಚಿತ್ರ ನೆನಪಾಗದಿರದು. ಅದರಂತೆ ಇಲ್ಲಿಯೂ ಉಗ್ರಗಾಮಿಗಳ ನಡುವಿನ ಕಮಾಂಡೋ ಹೋರಾಟವಿರುವುದರಿಂದಾಗಿ ಆಯ್ದುಕೊಂಡ ವಿಷಯದಲ್ಲಿ ಹೊಸತನವಿಲ್ಲ. ಇನ್ನು ಕತೆಯ ವಿಚಾರಕ್ಕೆ ಬಂದರೆ ಅಂತರಾಷ್ಟ್ರೀಯ ಉಗ್ರಗಾಮಿಯೊಬ್ಬ ತಮ್ಮ ಪರವಾದ ತೀರ್ಪಿಗಾಗಿ ಜಡ್ಜ್ ನನ್ನು ಬೆದರಿಸಲು ಆತನ ಮನೆಯೊಳಗೆ ಪ್ರವೇಶಿಸುತ್ತಾನೆಂದರೆ ಅದಕ್ಕೂ ಆ ಮನೆಯ ನಕ್ಷೆಯನ್ನು ಕೂಡ ಅರಿತಿರುವುದಿಲ್ಲ ಎಂಬುದು ನಂಬುವಂತಿಲ್ಲ. ಅದೇನೇ ಪೆದ್ದುತನಗಳಿದ್ದರೂ ಜಡ್ಜಾಗಿ ಸುಚೇಂದ್ರ ಪ್ರಸಾದ್ ಮತ್ತು ಕಮಾಂಡೋವಾಗಿ ವಿಜಯ್ ನಟನೆ ಚಿತ್ರಕ್ಕೆ ಗಂಭೀರತೆ ತುಂಬಿದೆ. ಆದರೆ ಭಯಾನಕವಾಗಿರಬೇಕಿದ್ದ ಉಗ್ರನ ಪಾತ್ರಧಾರಿ ಶೋಭರಾಜ್ ನಿಂದ ಹಿಡಿದು ವೈದ್ಯ ರಂಗಾಯಣ ರಘು, ಕಳ್ಳ ಬುಲೆಟ್ ಪ್ರಕಾಶ್ ಎಲ್ಲರಿಂದಲೂ ಟಾಯ್ಲೆಟ್ ಕಾಮಿಡಿ ಮಾಡಿಸಿ ದಾಖಲೆಯ ಚಿತ್ರದಲ್ಲೂ ತಮ್ಮತನ ಮೆರೆದಿದ್ದಾರೆ ಎಸ್.ನಾರಾಯಣ್. ಛಾಯಾಗ್ರಾಹಕ ರೇಣುಕುಮಾರ್ ಮತ್ತು ಕೊರಿಯಾಗ್ರಫರ್, ಜೊತೆಗೆ ಹಿನ್ನೆಲೆ ಸಂಗೀತದಲ್ಲಿ ಎಸ್.ನಾರಾಯಣ್ ಪ್ರತಿಭೆಯನ್ನು ಅಲ್ಲಗಳೆಯುವಂತಿಲ್ಲ. ನಾಯಕಿ ನೇಹಾ ಪಾಟೀಲ್ ಮತ್ತು ಉದಯ್ ಗೂ ಒಳ್ಳೆಯ ಪಾತ್ರ ದೊರಕಿರುವುದು ಸುಳ್ಳಲ್ಲ.
2015-04-25 · FilmySphere critic
- Review of Vaastu Prakaara
ವಾಸ್ತು ಪ್ರಕಾರ ಕಾಣೋ ಮೊದಲು ಕಾತರ; ಕಂಡಾಗ ಬೇಸರ ಮನೆಯ ವಾಸ್ತುವಿಗಿಂತ ಮನದ ವಾಸ್ತು ಮುಖ್ಯ ಎಂಬುದನ್ನು ವಿಡಂಬನೆಯ ಮೂಲಕ ತಿಳಿಸುವುದಾಗಿ ಹೇಳಿದ್ದ ಯೋಗರಾಜ ಭಟ್ಟರ ವಾಸ್ತು ಪ್ರಕಾರ ತೆರೆಕಂಡಿದೆ. ಚಿತ್ರದಲ್ಲಿ ಪ್ರಸಿದ್ಧ ವಾಸ್ತು ಶಾಸ್ತ್ರಜ್ಞನ ಮಗನೋರ್ವ ಆತನ ವಾಸ್ತುವಿಗೆ ವಿರೋಧ ತೋರಿಸುತ್ತಾನೆ. ತಂದೆಯೊಂದಿಗೆ ಭಿನ್ನಾಭಿಪ್ರಾಯ ಮಾಡಿಕೊಂಡು ಕಾಲ್ಪನಿಕ ದೇಶವೊಂದನ್ನು ಸೇರುತ್ತಾನೆ. ಆದರೆ ಅನಿವಾರ್ಯವಾಗಿ ಅಲ್ಲಿರುವ ತನ್ನ ಮಾವನೊಂದಿಗೆ ಸೇರಿ ವಾಸ್ತು ಪ್ರಕಾರ ಮನೆ ರಿಪೇರಿಗೆ ಶುರು ಮಾಡುತ್ತಾನೆ. ಕಾರಣ ಆ ಮನೆಯಲ್ಲಿ ತಾನು ಪ್ರೀತಿಸುವ ಹುಡುಗಿಯಿರುತ್ತಾಳೆ. ಮಾತ್ರವಲ್ಲ, ಡೈವೋರ್ಸ್ ಗೆ ಮುಂದಾಗಿರುವ ಆ ಹುಡುಗಿಯ ತಂದೆ ತಾಯಿಯನ್ನು ಒಂದಾಗಿಸುವುದು ಮತ್ತು ಅವರ ಮನೆ ರಿಪೇರಿ ಮೂಲಕ ಆ ಶ್ರೀಮಂತರಿಂದ ಒಂದಷ್ಟು ಹಣವನ್ನು ತಮ್ಮದಾಗಿಸುವ ಯೋಜನೆ ಅವರದಾಗಿರುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಎಲ್ಲವೂ ನಿರೀಕ್ಷಿತ ಅಂಶಗಳೊಂದಿಗೆ ಕೊನೆಯಾಗುತ್ತದೆ. ಇದರ ನಡುವೆ ಡೈವೋರ್ಸ್ ಗೆ ಯತ್ನಿಸುವ ವಕೀಲೆಯೊಂದಿಗೆ ಮಾವನಿಗೂ ಒಂದು ಲವ್ ಸ್ಟೋರಿಯಿದ್ದು ಅದಕ್ಕೂ ಒಂದು ಸುಖಾಂತ್ಯವಿದೆ. ವಾಸ್ತು ಶಾಸ್ತ್ರಜ್ಞನ ಮಗನಾಗಿ ರಕ್ಷಿತ್ ಶೆಟ್ಟಿ ಮತ್ತು ಆತನ ಮಾವನಾಗಿ ಜಗ್ಗೇಶ್ ನಟಿಸಿದ್ದಾರೆ. ಜಗ್ಗೇಶ್ ಮತ್ತು ರಕ್ಷಿತ್ ಶೆಟ್ಟಿ ತಮ್ಮ ಮಾತಿನ ಶೈಲಿಯಿಂದಲೇ ಪ್ರೇಕ್ಷಕರ ಮನದಲ್ಲಿ ಸ್ಥಾನಗಳಿಸಿಕೊಂಡವರು. ಆದರೆ ಅವರಿಗೆ ತಮ್ಮ ಡೈಲಾಗ್ ಡೆಲಿವರಿ ಶೈಲಿಯನ್ನಷ್ಟೇ ಆರೋಪಿಸಿ, ಸಂಭಾಷಣೆಗೆ ಸರಿಯಾದ ವಾಸ್ತು ನೀಡುವಲ್ಲಿ ಸೋತಿದ್ದಾರೆ! ನಾಯಕಿ ಐಶಾನಿ ಶೆಟ್ಟಿಯೂ ಅಷ್ಟೇ, ಮುಖ, ಕಂಠದಲ್ಲಿ ಇನ್ನೂ ಮೆಚ್ಯೂರಿಟಿ ಕಾಣಿಸದ ಹುಡುಗಿಯಿಂದ ಆಕೆಯೇ ಹುಡುಗನ ಮೇಲೆ ಬಿದ್ದು ಲವ್ ಮಾಡುತ್ತಾಳೆ ಎಂಬಂಥ ದೃಶ್ಯಗಳನ್ನು ಅರಗಿಸುವುದು ಕಷ್ಟ. ಅದರಲ್ಲೂ ಹಡುಗಿಗಿಂತ ತಾನು ತುಂಬಾ ಎತ್ತರ ಎಂದು ಫೀಲಾಗುವ ನಾಯಕನಿಗೆ ಆತನ ಎತ್ತರಕ್ಕೆ ತಕ್ಕಂಥ ಮ್ಯಾನ್ಲೀ ಪರ್ಫಾರ್ಮೆನ್ಸ್ ಗೆ ಅಥವಾ ಒಂದೊಳ್ಳೇ ಫೈಟ್ ಗೂ ಅವಕಾಶ ಕೊಡದೆ ನಿರಾಶೆ ಮೂಡಿಸುತ್ತಾರೆ. ಸುಧಾರಾಣಿಯೇನೋ ಕೋಪಿಷ್ಠೆ ಹೆಂಡತಿಯಾಗಿ ನಟಿಸಿದ್ದಾರೆ. ಆದರೆ ಅನಂತನಾಗ್ ರಂಥ ನಟನಿಗೆ ಆಕೆಯ ಗಂಡನಾಗಿ ಕೊನೆಯ ತನಕ ವ್ಯಕ್ತಿತ್ವವೇ ಇರದಂಥ ಪಾತ್ರವನ್ನು ನೀಡಿದ್ದಾರೆ. ಹಿರಿಯ ವಾಸ್ತು ಶಾಸ್ತ್ರಜ್ಞನಾಗಿ ಟಿಎನ್ ಸೀತಾರಾಮ್ ಪಾತ್ರ ವಾಸ್ತು ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೆ ಬಿಲ್ಡಪ್ಪಲ್ಲಿ ಬಂದು ಸಪ್ಪೆಯಾಗಿ ಮೂಲೆ ಸೇರುತ್ತದೆ. ಇದೆಲ್ಲವನ್ನೂ ಗಮನಿಸಿದಾಗ ಮಿಸ್ ಕಾಸ್ಟಿಂಗ್ ಅಥವಾ ಕತೆಗಿಂತ ಸ್ಟಾರ್ ನಾಯಕರನ್ನು ತೆರೆಯ ಮೇಲೆ ಓಡಾಡಿಸುವುದೇ ಭಟ್ಟರ ಚಿತ್ರದ ವಾಸ್ತುವೇನೋ ಎಂಬ ಸಂದೇಹ ಮೂಡುವುದು ಸಹಜ. ಚಿತ್ರ ಮುಗಿದಾಗ ಹರಿಕೃಷ್ಣ ಸಂಗೀತದ ಒಂದೆರಡು ಹಾಡುಗಳು, ಕೆಟ್ಟ ಕನ್ನಡದಲ್ಲಿ ಸಿಡುಕುವ ಪಾರುಲ್ ರ ಗ್ಲಾಮರ್ ಜೊತೆಗೆ ಸಂತೋಷ್ ಪಾತಾಜೆಯ ಛಾಯಾಗ್ರಹಣವಷ್ಟೇ ನೆನಪಲ್ಲಿ ಉಳಿಯುತ್ತದೆ. ಸಂದೇಶದಕ್ಕಿಂತ ಅದನ್ನು ಯಾರು ಹೇಳಿದ್ದಾರೆ ಎನ್ನುವುದೇ ಮುಖ್ಯವಾಗುವ ಈ ಕಾಲಘಟ್ಟದಲ್ಲಿ ಮನಸ್ಸು ತಾಕದ ಈ ಚಿತ್ರ ನೀಡುವ ಸಂದೇಶವೂ ಅಷ್ಟೇ ಮಸುಕಾಗಿ ಬಿಡುತ್ತದೆ.
2015-04-03 · FilmySphere critic
- Review of Master Mind
ಮಾಸ್ಟರ್ ಮೈಂಡ್ ಚಿತ್ರ ವಿಮರ್ಶೆ ಮನಗೆಲ್ಲದ ಮಾಸ್ತರಿಕೆ ಒಂದಷ್ಟು ಸಮಯದ ಬಳಿಕ ನಿರ್ಮಾಣ, ನಿರ್ದೇಶನ, ನಟನೆಯೊಂದಿಗೆ ತೆರೆಗೆ ಬಂದಿರುವ ಕುಮಾರ್ ಗೋವಿಂದ್ ನೀಡಿರುವ ಚಿತ್ರ ಮಾಸ್ಟರ್ ಮೈಂಡ್. ಚಿತ್ರದಲ್ಲಿ ರಾಜವರ್ಧನ್ ಎಂಬ ನವ ನಟನನ್ನು ನಾಯಕನನ್ನಾಗಿ ಪರಿಚಯಿಸಿದ್ದಾರೆ. ಮಲೇಷ್ಯಾದಲ್ಲಿ ಆರಂಭವಾಗುವ ಚಿತ್ರದಲ್ಲಿ ನಾಯಕ ತನ್ನ ಪತ್ನಿಯೊಂದಿಗೆ ಸಂತಸದಲ್ಲಿರುತ್ತಾನೆ. ಆದರೆ ಅದನ್ನು ಕ್ಷಣಿಕವಾಗಿಸುವಂತೆ ಆತನ ಪತ್ನಿಯನ್ನು ಕಣ್ಮುಂದೆಯೇ ಅಪಹರಿಸಲಾಗುತ್ತದೆ. ಬಳಿಕ ಆತನನ್ನು ಕರೆದೊಯ್ದು ಕೋಣೆಯೊಂದರಲ್ಲಿ ಮೂರು ವರ್ಷಗಳ ಕಾಲ ಕೂಡಿ ಹಾಕಲಾಗುತ್ತದೆ. ಬಳಿಕ ಕಟ್ಟಡವೊಂದರ ಮೇಲೆ ಪೆಟ್ಟಿಗೆಯೊಂದರಲ್ಲಿ ಹಾಕಿ ಬಿಡುಗಡೆಗೊಳಿಸಲಾಗುತ್ತದೆ! ಇದರ ನಡುವೆ ತನ್ನ ಪತ್ನಿಯನ್ನು ಕೂಡ ಅವರೇ ಕೊಂದಿದ್ದಾರೆಂಬ ಸುದ್ದಿಯೂ ಆತನಿಗೆ ತಿಳಿದಯುತ್ತದೆ. ಅದುವರೆಗೆ ಒಂಟಿಯಾಗಿ ತಾನು ಅನುಭವಿಸಿದ ಶಿಕ್ಷೆಗೆ ಪ್ರತೀಕಾರ ನಡೆಸಲು ನಾಯಕ ಮುಂದಾಗುತ್ತಾನೆ. ಈ ಪ್ರಯತ್ನದಲ್ಲಿ ಆತನಿಗೆ ಕ್ಯಾಬ್ ಡ್ರೈವರ್ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಅವಳ ಜೊತೆ ಸೇರಿ ಆತನನ್ನು ಹುಡುಕಲು ಆರಂಭಿಸುತ್ತಾನೆ. ಈ ಪ್ರಯತ್ನ ಮುಂದುವರಿದಂತೆ ಇದನ್ನೆಲ್ಲ ಮಾಡಿಸಿದವರು ಯಾರು ಎಂಬುದು ತಿಳಿಯುತ್ತದೆ. ಆತನ ಕಡೆಯ ನ್ಯಾಯವೇನೆಂಬುದು ಗೋಚರಿಸುತ್ತದೆ. ನಾಯಕ ಆತನ ತಂಗಿಗೆ ಪ್ರೇಮದ ಹೆಸರಿನಲ್ಲಿ ವಂಚನೆ ನಡೆಸಿರುತ್ತಾನೆ. ಅದರ ಬಗೆಗೊಂದು ಫ್ಲ್ಯಾಶ್ ಬ್ಯಾಕ್ ಸ್ಟೋರಿಯಾಗುತ್ತದೆ. ಕೊನೆಯಲ್ಲಿ ಆತನ ಪ್ರತೀಕಾರ ಹೇಗಿರುತ್ತದೆ ಮತ್ತು ಅದಕ್ಕೆ ನಾಯಕನ ಪ್ರತಿಕ್ರಿಯೆ ಏನಿರುತ್ತದೆ ಎಂಬಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ. ಚಿತ್ರದ ಎಳೆ ಕುತೂಹಲಭರಿತವಾಗಿದೆ. ಆದರೆ ಚಿತ್ರಕತೆ, ನಿರ್ದೇಶನ, ಸಂಗೀತ ಮತ್ತು ಛಾಯಾಗ್ರಹಣ ಪೇಲವವಾಗಿದೆ. ವಿದೇಶೀ ಚಿತ್ರಗಳಿಂದ ಪ್ರೇರಿತವಾದಂತಿದೆಯಾದರೂ ಈ ಚಿತ್ರಕ್ಕಾಗಿ ವಿದೇಶವೇ ಬೇಕಿತ್ತೇ? ಎಂದೂ ಅನಿಸದಿರದು. ಡಿಟೆಕ್ಟಿವ್ ಚಿತ್ರಕ್ಕೆ ಜೀವಾಳವಾಗಿರಬೇಕಾದ ಹಿನ್ನೆಲೆ ಸಂಗೀತವೇ ಕೆಟ್ಟದಾಗಿರುವುದು ಮತ್ತೊಂದು ದುರಂತ. ನಾಯಕನಾಗಿ ರಾಜವರ್ಧನ್ ನಟನೆ, ಮೈಕಟ್ಟು ಗಮನಾರ್ಹ. ನಾಯಕಿಯರೂ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯವೊದಗಿಸಲು ಪ್ರಯತ್ನಿಸಿದ್ದಾರೆ. ಒಟ್ಟಿನಲ್ಲಿ ಮಾಸ್ಟರ್ ಮೈಂಡ್ ಕತೆಯಲ್ಲಿ ಮಾತ್ರ ಉಳಿದುಕೊಂಡಿದೆ ಎಂಬುದು ಸತ್ಯ.
2015-03-14 · FilmySphere critic
- Review of Mythri
ಮೈತ್ರಿ ತುಂಬಾ ಚೆನ್ನಾಗೈತ್ರಿ..! ಪುನೀತ್ ರಾಜ್, ಮೋಹನ್ ಲಾಲ್ ರಂಥ ಸ್ಟಾರ್ ನಾಯಕನಟರಿದ್ದರೂ ಹೊಸ ಬಾಲಕನೊಬ್ಬನ ನಟನೆಗೆ, ಆತನ ಸಂಭಾಷಣೆಗೆ ಮೊದಲ ದಿನದ ಮಾಸ್ ಪ್ರೇಕ್ಷಕರು ಸಿಳ್ಳೆ ಹೊಡೆದು ಸ್ವಾಗತಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇಂಥದೊಂದು ಮ್ಯಾಜಿಕ್ಕನ್ನು ಮಾಡಿದ ಕೀರ್ತಿ ಗಿರಿರಾಜ್ ಗೆ ಸಲ್ಲುತ್ತದೆ. ಚಿತ್ರದಲ್ಲಿ ನಟ ಪುನೀತ್ ರಾಜಕುಮಾರ್ ವಾಹಿನಿಯೊಂದಕ್ಕೆ ನಡೆಸಿಕೊಡುವ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಸ್ಲಂನಿಂದ ಜೈಲು ಸೇರಿದ ಬಾಲಾಪರಾಧಿಯೊಬ್ಬ ಭಾಗವಹಿಸುತ್ತಾನೆ. ಅಂದಮಾತ್ರಕ್ಕೆ ಆ ಹುಡುಗ ಕೋಟಿ ಗೆದ್ದು ಸ್ಲಂ ಡಾಗ್ ಮಿಲಿಯನೇರ್ ಆಗುತ್ತಾನೆ ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು. ಸಿದ್ಧರಾಮನೆಂಬ ಆ ಹುಡುಗನ ಹಿನ್ನೆಲೆ ಏನಾಗಿರುತ್ತದೆ ಎಂಬ ಬಗ್ಗೆ ಆರಂಭದಲ್ಲಿ ತೋರಿಸುವ ಒಂದಷ್ಟು ದೃಶ್ಯಗಳು ಮತ್ತು ಅದನ್ನೂ ಮೀರಿದ ಫ್ಲ್ಯಾಶ್ ಬ್ಯಾಕ್ ಚಿತ್ರದ ಹೈಲೈಟ್. ಸಿದ್ಧರಾಮನ ಪಾತ್ರದಲ್ಲಿ ನಟಿಸಿರುವ ಆದಿತ್ಯ ಮತ್ತು ಜೈಲೊಳಗಿನ ಆದಿತ್ಯನ ಸ್ನೇಹಿತನಾಗಿ ಗಮನ ಸೆಳೆಯುವ ಭರವಸೆಯ ಕಲಾವಿದ ಜಗದೀಶ್ ನಟನೆ ಚಿತ್ರದ ಪ್ರಮುಖ ಆಕರ್ಷಣೆ. ಪೊಲೀಸ್ ಅಧಿಕಾರಿಯಾಗಿ ಅತುಲ್ ಕುಲಕರ್ಣಿ ಮತ್ತು ಅವರಿಗೆ ನೀಡಿರುವ ಕಂಠ ಚೆನ್ನಾಗಿದೆ. ಮೋಹನ್ ಲಾಲ್ ರ ಪಾತ್ರ ಮಧ್ಯಂತರದ ಬಳಿಕ ಬಂದು ಸೇರಿಕೊಂಡರೂ ಕತೆಯೊಳಗೆ ಆರಂಭದಿಂದಲೇ ಅವರಿಗಿರುವ ಸಂಬಂಧವನ್ನು ಸಿನೆಮಾ ಬಿಡಿಸಿಡುತ್ತಾ ಹೋದಂತೇ ಪ್ರತಿಯೊಬ್ಬ ಪ್ರೇಕ್ಷಕನೂ ಚಿತ್ರದೊಳಗೆ ತಲ್ಲೀನನಾಗುತ್ತಾನೆ. ಇದೆಲ್ಲದರ ಜೊತೆಗೆ ಇಳಯರಾಜಾರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸೇರಿಕೊಂಡಾಗ ಮೈತ್ರಿ ಮಧುತವಾಗುತ್ತದೆ.
2015-02-21 · FilmySphere critic
- Review of DK
ಡಿ.ಕೆ ಚಿತ್ರ ವಿಮರ್ಶೆ ರಾಜಕೀಯದಲ್ಲೆಲ್ಲಾ ಇದು ವಾಡಿಕೆ! ಶೋ ಮ್ಯಾನ್ ಎಂಬ ಬಿರುದಿನೊಂದಿಗೆ ನಾಯಕನಾಗಿ ಮತ್ತೆ ಬಂದಿದ್ದಾರೆ ಪ್ರೇಮ್. ಚಿತ್ರದಲ್ಲಿ ಅವರದು ಪೋಲಿ ಯುವಕನಾಗಿ ಕಾಣಿಸುವ ಪಾತ್ರ. ಆದರೆ ರಾಜಕಾರಣಿಯೊಬ್ಬನ ಬಜಾರಿ ಮಗಳಲ್ಲಿ ಛಾಲೆಂಜ್ ಹಾಕಿದ್ದಕ್ಕಾಗಿ ಹೇಗೆ ಕಿಂಗ್ ಮೇಕರಾಗಿ ಬದಲಾಗುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅದ್ಧೂರಿ ಇಂಟ್ರಡಕ್ಷನ್ ಸಾಂಗ್ ಮೂಲಕ ಎಂಟ್ರಿಯಾಗುವ ಪ್ರೇಮ್ ತಮ್ಮ ಹಳ್ಳಿ ಸೊಗಡಿನ ಸಂಭಾಷಣಾ ಶೈಲಿಯಲ್ಲಿ ಎಂದಿನಂತೆ ಗಮನ ಸೆಳೆಯುತ್ತಾರೆ. ಫೈಟ್ ಸೀನ್ ಗಳು ಚೆನ್ನಾಗಿವೆ. ಆದರೆ ಕತೆಯ ವಿಚಾರಕ್ಕೆ ಬಂದರೆ ನಿರೂಪಣೆಯಲ್ಲಿಯೂ ಹೊಸತನವಿಲ್ಲ ಎನ್ನಬೇಕಾಗುತ್ತದೆ. ಚುನಾವಣೆ ವಿಚಾರದಲ್ಲಿ ವಿರೋಧ ಕಟ್ಟಿಕೊಂಡ ಎರಡು ಮನೆಯ ಬದ್ಧವೈರಿ ಹುಡುಗ ಮತ್ತು ಹುಡುಗಿ ಪ್ರೀತಿಸಿ, ಸಂಬಂಧ ಬೆಳೆಸಿ ಮದುವೆಯಾಗುವ ಮಧ್ಯಂತರದ ವರೆಗಿನ ಕತೆ ಹಿಂದಿ ಚಿತ್ರ ಇಶಕ್ ಝಾದೆಯನ್ನು ಹೋಲುತ್ತದೆ. ಮಧ್ಯಂತರದ ಬಳಿಕ ಕತೆಯಲ್ಲಿ ನಂಬಲರ್ಹ ಟ್ವಸ್ಟ್ ಗಳಿಲ್ಲ. ಆದರೆ ರಾಜಕೀಯದಲ್ಲಿ ಮಾನವನ್ನು ಬದಿಗಟ್ಟು ವರ್ತಿಸಿದರೆ ಒಳಗಿದ್ದವರೆಲ್ಲ ಸುಖಿನೋಭವಂತು ಎಂಬ ಸಂದೇಶವಿದೆ! ಎಲ್ಲಕ್ಕಿಂತ ಮುಖ್ಯವಾಗಿ ನಾಯಕಿ ಚೈತ್ರಾ ಪ್ರಥಮ ಚಿತ್ರದಲ್ಲಿಯೇ ಭರವಸೆಯ ನಟನೆ ನೀಡಿದ್ದಾರೆ. ಆಕೆಯ ಪಾತ್ರಕ್ಕೆ ಪ್ರಾಮುಖ್ಯತೆಯೂ ಇರುವುದರಿಂದ ಚೆನ್ನಾಗಿಯೇ ಮೂಡಿ ಬಂದಿದೆ. ಹಾಡುಗಳ ಕೊರಿಯಾಗ್ರಫಿ ಚೆನ್ನಾಗಿದೆ. ಅದರಲ್ಲೂ ಹಳ್ಳಿಯ ಸಾಮಾನ್ಯ ಜಾಗಗಳನ್ನೇ ಬಳಸಿಕೊಂಡು ಚಿತ್ರೀಕರಿಸಲಾಗಿರುವ ಡ್ಯೂಯೆಟ್ ಸಾಂಗ್ ಮನಮೋಹಕ. ಅಘೋರಿ ಸ್ವಾಮಿಯಂತೆ ಪ್ರತ್ಯಕ್ಷವಾಗುವ ಶೋಭರಾಜ್ ರ ಪಾತ್ರ ಪಾಪ್ಯುಲರ್ರಾಗಲು ಬಳಸುವ ಚೀಪ್ ಗಿಮಿಕ್ ಗಳು ಮತ್ತು ಅವರ ನಟನೆಯ ರೀತಿ ಹಾಸ್ಯ ಸೃಷ್ಠಿಸುವಲ್ಲಿ ಯಶಸ್ವಿಯಾಗುತ್ತದೆ. ಆದರೆ ನಾಯಕಿಯ ಮೂರು ಮಂದಿ ಅಣ್ಣಂದಿರ ಕ್ಯಾರಿಕೇಚರ್ ಪಾತ್ರಗಳು ಕಿರಿಕಿರಿಯುಂಟುಮಾಡುತ್ತವೆ. ಚಿತ್ರದಲ್ಲಿ ಚುನಾವಣೆಯ ಬಗ್ಗೆ, ರಾಜಕಾರಣಿಗಳ ಬಗ್ಗೆ ಹೇಳಲಾಗಿದೆಯೇ ಹೊರತು ಕತೆಯ ಬಗ್ಗೆ ಹೆಚ್ಚು ಗಮನಹರಿಸಿದಂತಿಲ್ಲ. ರಾಜಕಾರಣಿಗಳ ರೀತಿನೀತಿಗಳ ಬಗ್ಗೆ ಅವಹೇಳನ ಮಾಡುವುದೇ ಪ್ರೇಮ್ ತಂಡದ ಗುರಿಯಾಗಿದ್ದರೆ ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ ಈ ತೆರನಾದ ಸಾಕಷ್ಟು ಚಿತ್ರಗಳು ಹಲವಾರು ಭಾಷೆಗಳಲ್ಲಿ ಬಂದುಹೋಗಿರುವುದರಿಂದ "ಡಿ.ಕೆ"ಯಲ್ಲಿ ಪ್ರೇಕ್ಷಕರಿಗೆ ಹೊಸದಾಗಿ ಕಾಣದಿದ್ದರೆ ಅಚ್ಚರಿಯೇನಿಲ್ಲ.
2015-02-14 · FilmySphere critic
- Review of Yennai Arindhaal · 3/5
mix of kaakha kaakha,surya son of krishnan,Vettaiyaadu Vilaiyaadu..one time watchable
2015-02-10
- Review of Raja Rajendra
ರಾಜರಾಜೇಂದ್ರ ಚಿತ್ರ ವಿಮರ್ಶೆ ಯಶಸ್ವಿ ನಾಯಕನಾಗಿ ಬೆಳೆದು ನಿಂತಿರುವ ಶರಣ್ ನ ರಾಜರಾಜೇಂದ್ರ ಚಿತ್ರ ಬಹಳ ನಿರೀಕ್ಷೆಯೊಂದಿಗೆ ತೆರೆಕಂಡಿದೆ. ಚಿತ್ರದಲ್ಲಿ ನಟ ರಾಮಕೃಷ್ಣ ರಾಜವಂಶದ ಮುದಿ ಜೀವ. ಆತನ ಪರಂಪರಾಗತ ಆಸ್ತಿಯನ್ನು ಹೊಡೆಯಲು ಆತನ ಮೂವರು ಹೆಣ್ಣುಮಕ್ಕಳ ಗಂಡಂದಿರು ಉಪಾಯ ಹೂಡುತ್ತಾರೆ. ಅದಕ್ಕೆ ಅರಮನೆ ಜ್ಯೋತಿಷಿ ಸಾಥ್ ನೀಡುತ್ತಾರೆ. ತನ್ನ ಕಾಣೆಯಾಗಿದ್ದ ಪುತ್ರನಿಗೊಬ್ಬ ಪುತ್ರನಿದ್ದನೆಂಬ ರಾಜನ ನಂಬಿಕೆಯನ್ನು ಇವರೆಲ್ಲ ಬಳಸಿಕೊಳ್ಳುತ್ತಾರೆ. ಹಾಗೆ ರಾಜನನ್ನು ಕೊಲೆಗೈಯಲು ನೇಮಿಸಲ್ಪಟ್ಟ ಬಾಡಿಗೆ ಕೊಲೆಗಾರನನ್ನೇ ಮೊಮ್ಮಗನೆಂದು ಪರಿಚಯಿಸುತ್ತಾರೆ. ಆದರೆ ಕೊಲೆಗಾರ ಬಾಟಲ್ ಮಣಿಯ ಹೆಸರಲ್ಲಿ ಬರುವ ಶರಣ್ ನಿಜಕ್ಕೂ ಬಾಟಲ್ ಮಣಿಯಾಗಿರುವುದಿಲ್ಲ. ವಾಸ್ತವದಲ್ಲಿ ಬಾಟಲಿ ಮೂಲಕ ಚುಚ್ಚಿ ಕೊಲ್ಲುವ ಬಾಟಲ್ ಮಣಿ ರವಿಶಂಕರ್ ಜೈಲಲ್ಲಿರುತ್ತಾನೆ. ಅದೇ ಸಮಯ ಬಳಸಿಕೊಂಡು ಭಯದಿಂದ ರಾತ್ರಿ ಹೊತ್ತು ಬಾಟಲಿಯಲ್ಲೇ ಉಚ್ಛೆ ಹೊಯ್ಯುವ ಶರಣ್ ಕೊಲೆಗಾರನಾಗಿ ಅರಮನೆ ಪ್ರವೇಶಿಸುತ್ತಾನೆ. ತಾಯಿಯ ಆಪರೇಶನ್ ದುಡ್ಡಿಗಾಗಿ ಮಾವ ತಬಲಾ ನಾಣಿಯೊಂದಿಗೆ ಸೇರಿ ಶರಣ್ ನಡೆಸುವ ಈ ನಾಟಕ ಎಷ್ಟರ ಮಟ್ಟಿಗೆ ಗೆಲುವು ಸಾಧಿಸುತ್ತದೆ? ಆ ಬಳಿಕ ಅರಮನೆಯೊಳಗೆ ನಡೆಯುವ ಬದಲಾವಣೆಗಳೇನು? ಆತನೇ ನಿಜವಾದ ಮೊಮ್ಮಗನಾಗಿ ಬದಲಾಗುವುದು ಹೇಗೆ? ಮೊದಲಾದ ಪ್ರಶ್ನೆಗಳಿಗೆ ತೆರೆಯ ಮೇಲೆ ಉತ್ತರ ನೋಡಬಹುದು. ಇಪ್ಪತ್ತೈದು ವರ್ಷಗಳ ಹಿಂದೆ ಮಲಯಾಳಂನಲ್ಲಿ ತೆರೆಕಂಡ ಮೋಹನ್ ಲಾಲ್ ನಟನೆಯಲ್ಲಿ ತೆರೆಕಂಡಿದ್ದ 'ಹಿಸ್ ಹೈನೆಸ್ ಅಬ್ಧುಲ್ಲ' ಚಿತ್ರದ ಮುಖ್ಯ ಕಥಾಹಂದರವನ್ನು ಕದ್ದು ಚಿತ್ರ ಮಾಡಿದ್ದಾರೆ ನಿರ್ದೇಶಕ ಕುಮಾರ್. ಅಲ್ಲಿ ಅದೊಂದು ಕ್ಲಾಸಿಕ್ ಹಿಟ್ ಆಗಿದ್ದರೆ, ಇಲ್ಲಿ ಅದನ್ನೊಂದು ಕಾಮಿಕ್ ಹಿಟ್ ಮಾಡುವ ಪ್ರಯತ್ನ ನಡೆಸಲಾಗಿದೆ. ಆದರೆ ಚಿತ್ರದಲ್ಲಿ ಬರುವ ರಾಜಮನೆತನದ ವಿಷಯಗಳು ಮಲಯಾಳಂನಷ್ಟು ಕನ್ನಡಕ್ಕೆ ಸೂಕ್ತವೆನಿಸುವುದಿಲ್ಲ. ಆದರೆ ಅದರೊಳಗೆ ದೆವ್ವದ ಕತೆಯನ್ನು ಬೆರೆಸಿ ಹಾಸ್ಯದ ಸೃಷ್ಠಿಗೆ ಕಾರಣವೆನಿಸಿದೆ. ಚಿತ್ರದ ಕೊನೆಯ ಒಂದು ಘಂಟೆಯನ್ನು ಬರೇ ಹಾಸ್ಯಕ್ಕೆಂದೇ ಮೀಸಲಿಡಲಾಗಿದೆ. ಆದರೆ ಆ ಸಮಯದಲ್ಲಿ ಚಿತ್ರದ ಕತೆಯಲ್ಲಿ ಯಾವುದೇ ಟ್ವಿಸ್ಟ್ ಗಳು ಉಂಟಾಗುವುದಿಲ್ಲವಾದುದರಿಂದ ನೋಡುಗ ಬರೇ ಕಾರ್ಟೂನ್ ನೋಡುವಂತೆ ಕುಳಿತಿರುತ್ತಾನೆ. ಸದಾ ಕತೆಯಲ್ಲಿ ಫೈರ್ ಇರ್ಬೇಕು ಎನ್ನುವ ನಿರ್ದೇಶಕರು ಇನ್ನಾದರೂ ಸ್ವಂತದ್ದೊಂದು ಒಳ್ಳೆಯ ಕತೆ ಬರೆದು, ಉತ್ತಮ ಸಂಭಾಷಣೆಯೊಂದಿಗೆ ಬಂದು ಫೈರ್ ಸೃಷ್ಠಿಸುವ ಅನಿವಾರ್ಯತೆಯುಂಟಾಗಿದೆ.
2015-02-07 · FilmySphere critic