Skip to content
FilmySphere

From the earlier FilmySphere, kept as published on 2015-07-10. It has not been updated.

Review of Baahubali

FilmySphere critic

ಬಾಹುಬಲಿ : ನಿರೀಕ್ಷೆಯ ಮಟ್ಟ ತಲುಪದ ಒಂದು ಒಳ್ಳೆಯ ಪ್ರಯತ್ನ., ಮುಂದೆ ಬರಲಿರುವ ಬಾಹುಬಲಿ ಭಾಗ ಎರಡರ ಪೀಠಿಕೆ ಈ beginning ಬಾಹುಬಲಿ ಎಂದರೆ ತಪ್ಪಾಗಲಾರದು.. ಮೇಕಿಂಗಲ್ಲಿ ನೂರಾರು ಕೋಟಿ ಬಡ್ಜೆಟ್ ಸುರಿದು ಸಾವಿರಾರು ಕೋಟಿಗಳ "The Hobbit, Lord of the Rings, Hercules, 300 ಇತ್ಯಾದಿ.," ಸಿನೆಮಾಗಳ ಹತ್ತಿರತ್ತಿರ ರೀಚ್ ಆಗಿದ್ದಾರೆ ರಾಜಮೌಳಿ.. ವಾವ್ ಅಂತನ್ನಿಸೋ ಒಂದು ಕಾಲ್ಪನಿಕ ಸಾಮ್ರಾಜ್ಯಕ್ಕೆ, ಒಂದು ಅದ್ಭುತ ನಗರಿಗೆ ಕರ್ಕೊಂಡ್ ಹೋಗ್ತಾರೆ.. ಅರ್ಧಗಂಟೆಗೂ ಹೆಚ್ಚು ಕಾಲ ಯುದ್ಧಾನುಭವವನ್ನ ಕಣ್ಣಿಗೆ ಕಟ್ಟಿಕೊಡ್ತಾರೆ.. ಮಹಾಭಾರತದ ದಾಯಾದಿ ಮತ್ಸರವನ್ನ ನೆನಪಿಸ್ತಾರೆ.. ಆದ್ರೆ ರಾಜಮೌಳಿ ಅವರ ಹಿಂದಿನ ಎಲ್ಲಾ ಸಿನೆಮಾಗಳನ್ನು ನೋಡಿದ ನಮಗೆ 'ಬಾಹುಬಲಿ' ಚಿತ್ರದಲ್ಲಿ ಕಥೆ ತೆರೆದುಕೊಳ್ಳುವ ರೀತಿಯಲ್ಲಿ, ಚಿತ್ರಕಥೆಯ ಮಗ್ಗುಲು ಬದಲಾಯಿಸುವ ವೇಗದಲ್ಲಿ ಸ್ವಲ್ಪ ಹಿಡಿತ ಕಳಕೊಂಡ್ರೇನೋ ಅನ್ಸತ್ತೆ.. ಮಾಮೂಲಾಗಿ ತೆಲುಗಿನಲ್ಲಿ ಬರುವ factionalism ಕಥೆಯ ಕಕಾಲಘಟ್ಟವನ್ನ ಒಂದು ನಾನೂರು ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋದಂಗಿದೆ...

ಮೊದಲಾರ್ಧದಲ್ಲಿ ಕೆಲ ದೃಶ್ಯಗಳು ಪಟ್ಟು ಹಿಡಿದು ಸೀಟಲ್ಲಿ ಕೂರಿಸಿದ್ರೂ ಮಿಕ್ಕ ಬಹಳಷ್ಟು ದೃಶ್ಯಗಳು ನೀರಸ, ಜಾಳು, ಲ್ಯಾಗ್ ಅನ್ನಿಸಿಬಿಡ್ತವೆ.. ಸಿನೆಮಾದ ದ್ವಿತೀಯಾರ್ಧ ಒಂದು ಹಂತಕ್ಕೆ ಹಿಡಿದಿಟ್ಟುಕೊಳ್ಳತ್ತೆ... ನೋಡೋವಾಗ ಕೊಟ್ಟ ಕಾಸಿಗೆ ಮೋಸವಾಯ್ತೋ ಇಲ್ವೋ ಅಂತ ಜಿಜ್ಞಾಸೆ ಮೂಡಿಸಿದ್ರೂ, ಅಂತ್ಯವಾಗ ಅಂತ್ಯಕ್ಕೆ ಓಕೆ ಓಕೆ ಅಂತನ್ಸತ್ತೆ.. ಮೇಲೆ ಹೇಳಿದಂಗೆ ಹಾಲಿವುಡ್ ನ ದೊಡ್ಡ ದೊಡ್ಡ ಸಿನೆಮಾಗಳ ಲೆವಲ್ಲಿಗೆ ಈ ಸಿನೆಮಾನ ಮಾಡಿದ್ರೂ ಸಹ ಆ ಸಿನೆಮಾಗಳಲ್ಲಿ ಒಂದೊಂದು ಭಾಗವೂ ಒಂದೊಂದು ಆದಿ, ಮಧ್ಯ ಮತ್ತು ಅಂತ್ಯಗಳನ್ನೊಳಗೊಂಡಿರುತ್ತಿತ್ತು, ಅಲ್ಲಿ ಕಥೆ ಮುಗಿಯದಿದ್ದರೂ ನೋಡಿದಷ್ಟಕ್ಕೆ ಏನೋ ಒಂದು complete ಆದಂತಹ ತೃಪ್ತಿಯಾಗುತ್ತಿತ್ತು., ಆದರೆ ಬಾಹುಬಲಿ ಸಿನೆಮಾ ಮುಗಿಯುವ ಹೊತ್ತಿಗೆ ತೃಪ್ತವಾಗಲಾರದು ಪ್ರೇಕ್ಷಕನ ಮನಸ್ಸು.. ಒಟ್ಟಾರೆ ಬಾಹುಬಲಿ ಸಿನೆಮಾ theoretically ಕರೆಕ್ಟ್ ಅನ್ಸಿದ್ರೂ ಪ್ರಾಕ್ಟಿಕಲಿ ಕಥೆಯೇ ಶುರುವಾಗದ setup ಅಥವ ಪೀಠಿಕೆ ಎಂಬ ಅತೃಪ್ತ ಭಾವ ತುಂಬ್ಕೊಳತ್ತೆ... ಈ ಅತೃಪ್ತಿಯೇ ಬಾಹುಬಲಿಯ ಮುಂದುವರೆದ ಭಾಗಕ್ಕೆ ಕಾಯುವಂತೆ ಮಾಡಲೂಬಹುದು..! ಸಿನೆಮಾದ ಮೇಜರ್ ಹೈಲೈಟ್ಸ್ ತಾಂತ್ರಿಕ ವಿಭಾಗದಲ್ಲಿ ಮೊದಲಿಗೆ ವಿ.ಎಫ್.ಎಕ್ಸ್., ನಂತರದಲ್ಲಿ ಗಮನಕ್ಕೆ ಬರೋದು ಕೀರವಾಣಿ ಹಿನ್ನೆಲೆ ಸಂಗೀತ, ಪೀಟರ್ ಹೈನ್ಸ್ ಸ್ಟಂಟ್ ಕೊರಿಯೋಗ್ರಫಿ, ಸೆಂದಿಲ್ ಕುಮಾರ್ ಛಾಯಾಗ್ರಹಣ, ಮೇಕಪ್ಪು ಮತ್ತು ಕಾಸ್ಟ್ಯೂಮ್., ಈ ಸಿನೆಮಾದಲ್ಲಿ Lead characters ಗಿಂತ ಪೋಷಕ ಪಾತ್ರದಾರಿಗಳ ನಟನೆ ಮತ್ತು ಅವರ ಪಾತ್ರ ಪೋಷಣೆಗಳು ಹೆಚ್ಚು ಗಮನ ಸೆಳೆಯತ್ತೆ.. ಅವರೆಲ್ಲರೊಳಗೆ ರಮ್ಯಾಕೃಷ್ಣ ಮೈನ್ ಹೈಲೈಟ್ ಆಫ್ ದ ಮೂವಿ, ನಾಝರ್ ಮತ್ತಿ ಸತ್ಯರಾಜ ಇನ್ನೆರಡು ಪ್ರಮುಖ ಆಕರ್ಷಣೆಗಳು., ಈ ಮೂವರ ನಟನೆ ಮತ್ತು ಬಾಡಿ ಲಾಂಗ್ವೇಜ್ ಸೂಪರ್ರು.. ಬಾಹುಬಲಿ ಮತ್ತು ಶಿವುಡು ಎಂಬೆರಡು ಪಾತ್ರಗಳ ಪಾತ್ರದಾರಿ ಪ್ರಭಾಸ್ ನಟನೆಯಲ್ಲಿ ಹೊಸತೇನಿಲ್ಲ, ಅವರು ನಿಭಾಯಿಸಿರುವ ಎರಡೂ ಪಾತ್ರಗಳ ಪೋಷಣೆ ಅಷ್ಟಾಗಿ ರುಚಿಸುವುದಿಲ್ಲ., ರಾಣಾ ದಗ್ಗುಬಾಟಿ ಖಳನಾಗಿ ಸೂಪರ್ರು, ತಮನ್ನಾ ವೀರಮಹಿಳೆಯಾಗಿ ಕಾಣಿಸುವಾಗ ಆಕೆಯ ನಟನೆ ಬಾಡಿ ಲಾಂಗ್ಬೇಜ್ ಬಹಳ ಕೃತಕ ಅನ್ಸತ್ತೆ, ಆದ್ರೆ ರೊಮ್ಯಾಂಟಿಕ್ ಗ್ಲಾಮರ್ ಗೆಟಪ್ಪಲ್ಲಿ ತುಂಬಾ ಸ್ಪೆಷಲ್ಲಾಗಿ ಕಾಣಿಸ್ತಾಳೆ, ಸುದೀಪರ ಪಾತ್ರ ಹಂಗ್ ಬಂದ್ ಹಿಂಗ್ ಹೋಗತ್ತೆ, ನೆನಪಲ್ಲಿ ಉಳಿಯೋದ್ ಕಷ್ಟ, ಮುಂದಿನ ಭಾಗದಲ್ಲಿ ಆ ಪಾತ್ರ ಉತ್ತಮವಾಗಿ ಮೂಡಿಬರಬಹುದು., ಅನುಷ್ಕಾ ಶೆಟ್ಟಿ ಪಾತ್ರದ ಲುಕ್ ಮೇಕಪ್ಪು ಮಾತ್ರ ಈ ಸಿನೆಮಾದಲ್ಲಿ ನೋಡೋಕೆ ಸಾಧ್ಯ, ಆಕೆಯ ಒಟ್ಟು ಪಾತ್ರ-ನಟನೆ ಮುಂಬರುವ ಬಾಹುಬಲಿಯಲ್ಲಿ ನೋಡಲು ಸಿಗಬಹುದು...

Finally ಬಾಹುಬಲಿಯಲ್ಲಿ ಕನ್ನಡದ ಮಯೂರ ಚಿತ್ರದ ಕೆಲ ದೃಶ್ಯಗಳ ಹೋಲಿಕೆಗಳಿರುವುದು ಕಾಕತಾಳೀಯ ಹೊರತು ಮಯೂರ ಚಿತ್ರಕ್ಕೆ ಹೋಲಿಸಿ ನೋಡುವುದು ಬೇಕಾಗಿಲ್ಲ, ಮಯೂರ ಸಿನೆಮಾ ಬಾಹುಬಲಿಗಿಂತ ಸಾವಿರ ಪಟ್ಟು ಅತ್ಯುತ್ತಮ ಚಿತ್ರ.. ಬಾಹುಬಲಿಯನ್ನ ಎರಡು ಸಿನೆಮಾಗಳನ್ನಾಗಿ ಮಾಡಿ ಅಷ್ಟುದ್ದ ಎಳೆಯುವ ಬದಲು, ಮೂರು-ಮೂರುವರೆ ಗಂಟೆಗಳ ಕಾಲದ ಒಂದೇ ಸಿನೆಮಾ ಮಾಡಿದ್ದರೆ ಚೆಂದಿತ್ತು.. ಅನಾವಶ್ಯಕ ಎಳೆದಾಟವಿಲ್ಲದ ಬಿಗಿಯಾದ ಚಿತ್ರಕಥೆ ಆಗ್ತಾ ಇತ್ತೇನೋ ಒಂದೇ ಸಿನೆಮಾ ಮಾಡಿದ್ರೆ., ಈಗಲೂ ಏನಿಲ್ಲ, ಒಮ್ಮೆ ನೋಡಿ., ಬಾಹುಬಲಿ ಎರಡನೆ ಭಾಗ ನೋಡಬೇಕು ಅಂದ್ರೆ ಈ ಚಿತ್ರದ ಮೂಲಕ ಪಾತ್ರಗಳ ಪರಿಚಯ ಮಾಡಿಕೊಳ್ಳಿ, ಆದ್ರೆ ನೋಡಲೇಬೇಕಂತೇನೂ ಇಲ್ಲ., ಏನಿಷ್ಟವಾಗದೇ ಹೋದರೂ ಕೊನೆಗೆ VISUAL TREAT ಇಷ್ಟವಾಗತ್ತೆ- I JUST LOVED IT...