Skip to content
FilmySphere

From the earlier FilmySphere, kept as published on 2015-08-17. It has not been updated.

Review of Uppi 2

Rating 3/5

No Excuse Me Please ! ಉಪ್ಪಿ - 2 ನೋಡಿದ್ ಮೇಲೆ ಸಿನಿಮಾ ಕುರಿತು ಯೋಚನೆ ಮಾಡಿದ್ರೆ ಅರ್ಗಿಸ್ಕೊಳೋದು ಕಷ್ಟ, ಯೋಚನೆ ಮಾಡ್ದೇ ಹೋದ್ರೆ ಸಿನಿಮಾ ಆಗ್ಬೋದು (ಸ್ವಲ್ಪ) ಇಷ್ಟ (3 / 5)

ಶುಭಂ ಎನ್ನುತಾ promotional ಸಾಂಗ್ ನಿಂದ ಶುರು ಆಗೋ ಸಿನಿಮಾ, ನಿಜಕ್ಕೂ ಅಭಿಮಾನಿಗಳನ್ನ ಹುಚ್ಚೆಬ್ಬಿಸುತ್ತೆ. ಯಾರೋ ನೀನು, ನೀನ್ ಯಾರೋ ಅಂತ ಶುರು ಆಗೋ ಒಂದ್ ಹುಡುಕಾಟ, ನಾಯಕನ ಹುಡುಕೋ ಕೆಲ ಗುಂಪುಗಳು, ನಾಯಕಿ ಹಾಗೆ ಪೊಲೀಸರು. ಹೀಗ್ ಹುಡುಕುವಾಗ ಸಿಗೋ ನೀನು ಮತ್ತೆ ನಾನು. ನಂತರ ನಾನೋ - ನೀನೋ ಅನ್ನೋ ಕಚ್ಚಾಟ. ಇದರ ಮಧ್ಯ ಬರೋ ಅವನು.

ಹೀಗೆ ಹೇಳ್ತಾ ಹೋದ್ರೆ ಪ್ರೇಕ್ಷಕನಿಗೆ ಮಧ್ಯಂತರದ ವೇಳೆಗೆ ಏನಾಗ್ತಿದೆ ಅನ್ನೋ ತೊಳಲಾಟ ಎದ್ದು ಕಾಣುತ್ತೆ. ಉಪೇಂದ್ರದಲ್ಲಿ 'ನಾನು' ಎಂಬುದರ ಜೊತೆಗೆ money ,honey, ಜಂಗಲ್ ಜವಾನಿ(prostitute) ಬಗ್ಗೆ ಹೇಳಿದ್ದ ಉಪೇಂದ್ರ ಇಲ್ಲಿ 'ನೀನು' ಎಂಬುದರ ಜೊತೆಗೆ ಹೀಗೆ ಬಾಳಿದರೆ happiness, wealth, health ನಿನ್ನದಾಗುತ್ತೆ ಅನ್ನೋದರ ಬಗ್ಗೆಯೂ ಹೇಳಿದ್ದಾರೆ. ಹೀಗೆ ಗುಂಪುಗಳು ನೀನು ಅನ್ನೋನ ಹುಡುಕ್ತಿರ್ತಾರೆ ಅಲ್ಲಿಗೆ ಕೆಲವು sorry ಹಲವು twist ಗಳು ಅಂತ್ಯಕ್ಕೆ ಏನೋ ಹೇಳಿ conclusion ಕೊಡ್ತಾರೆ ಅಂದ್ರೆ ಬ್ಲಾಂಕ್ screen for a minute ಅಲ್ಲಿಂದ ಟೈಟಲ್ ಕಾರ್ಡ್ ಶುರು ಚಿತ್ರದ ಪಾತ್ರ ಪರಿಚಯ ಆರಂಭ. Show End ಆಯಿತು, ಪ್ರೇಕ್ಷಕರೆಲ್ಲಾ ತಲೆಗೆ ಹುಳ ಬಿಟ್ಟಲ್ಲಾ ಗುರು ಅಂತ ಚಿರೋಕ್ಕೆ ಆರಂಭಿಸಿದರು.

ಪಾತ್ರ ಪರಿಚಯಕ್ಕೆ ಬಂದ್ರೆ, Rocking Real Star Upendra rocks ನಿರ್ದೇಶನದಲ್ಲೂ ಹೌದು ಹಾಗೆ ನಟನೆಯಲ್ಲೂ ಹೌದು. ಇನ್ನು ನಾಯಕಿ ‪#‎ಕ್ರಿಸ್ಟಿನಾ‬ ‪#‎ಅಕ್ಹೀವ‬ ಪ್ರೇಕ್ಷಕ ನೆಚ್ಚುವಂತೆ ಚಿಕ್ಕ ಬಟ್ಟೆಯುಟ್ಟು ಪಾತ್ರಕ್ಕೆ ತಕ್ಕಂತೆ ಚೊಕ್ಕವಾಗಿ ನಟಿಸಿದ್ದಾರೆ. ಹಾಗೆ ಎರಡನೇ ನಾಯಕಿಯಾಗಿ Parul Yadav ಅವರ ಸಮಯ ವ್ಯರ್ಥ ಮಾಡದೆ ಅವರ ಅಭಿನಯ ಚಾತುರ್ಯವನ್ನು ಬಿಡಿಸಿ ಬಿಡಿಸಿ ತೋರಿಸಿದ್ದಾರೆ. ಶ್!!! ಚಿತ್ರದ shade ಮುಂದುವರಿಸಿದ್ದಾರೆ ಬ್ಯಾಂಕ್ ಜನಾರ್ಧನ್ ಹಾಗು ಬೀರಾದಾರ್. ತುಮಕೂರು ಮಂಜು ಅವರು ಉಪೇಂದ್ರ ಚಿತ್ರದ shade ಅಂದ್ರೆ ಅಲ್ಲಿ 'ನಾನು' ಇಲ್ಲಿ 'ನೀನು' ನ ಹುಡುಕೋ ಜವಾಬ್ದಾರಿ ನಿರ್ವಹಿಸಿದ್ದಾರೆ. ಟೆನಿಸ್ ಕೃಷ್ಣ ಉಪೇಂದ್ರನ ಜೊತೆ ಉಪೇಂದ್ರನ ಐಡಿಯಾ ನ ಕಾರ್ಯ ರೂಪಕ್ಕೆ ತರಲು supporting role ಮಾಡಿದ್ದಾರೆ. ಶೋಭರಾಜ್ ಡಾನ್ ಆಗಿ ಮಿಂಚಿದ್ದಾರೆ ಆದ್ರೆ ಪಾತ್ರ incomplete, Shayaji Shinde ಪೋಲಿಸ್ ಆಗಿ ಪರ್ಫೆಕ್ಟ್ but utilized very less. ಬೇರೆಲ್ಲ ಪಾತ್ರಗಳು ಅವರವರ ಪಾತ್ರಕ್ಕೆ ತಕಂತ್ತೆ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಉಪೇಂದ್ರ ನಿರ್ದೇಶಿಸಿರುವ ಬಹುನಿರೀಕ್ಷಿತ Uppi 2 as usual ಗಿಮಿಕ್ ಗಳೊಂದಿನ ಅದರ ನಿರೂಪಣೆ ಮತ್ತು ಸಂಭಾಷಣೆಗಳು ಸದಾ ಗಮನ ಸೆಳೆಯುತ್ತವೆ. ಕೆಲವೊಂದು ಕಡೆ ಕತೆ ನೋಡ್ತಿದ್ದ್ರೆ artificial ಆಗ್ತಿದೆ ಅನಿಸ್ತು ಸ್ಕ್ರೀನ್ ಪ್ಲೇ . ಕೊನೆ ವರೆಗೂ ಚಿತ್ರ ಸಾರುವಂತೆ ಯೋಚನೆ ಮಾಡ್ಬೇಡಿ past ಬಗ್ಗೆ ಯಾಗಲಿ future ಬಗ್ಗೆ ಯಾಗಲಿ, live your present. ಮತ್ತೊಮೆ ಹೇಳ್ತೀನಿ No Excuse Me Please ! ಉಪ್ಪಿ - 2 ನೋಡಿದ್ ಮೇಲೆ ಸಿನಿಮಾ ಕುರಿತು ಯೋಚನೆ ಮಾಡಿದ್ರೆ ಅರ್ಗಿಸ್ಕೊಳೋದು ಕಷ್ಟ, ಯೋಚನೆ ಮಾಡ್ದೇ ಹೋದ್ರೆ ಸಿನಿಮಾ ಆಗ್ಬೋದು (ಸ್ವಲ್ಪ) ಇಷ್ಟ