Skip to content
FilmySphere

From the earlier FilmySphere, kept as published on 2015-08-17. It has not been updated.

Review of RangiTaranga

Rating 4/5

ಎಲ್ಲಾ ರಸಗಳನ್ನು ಉಣಬಡಿಸುವ ‪#‎ರಂಗಿತರಂಗ‬... ಸ್ವಲ್ಪ ಹಾಸ್ಯ ರಸದತ್ತ ಗಮನ ಹರಿಸಿದ್ರೆ ಸಿನಿಮಾ ಇನ್ನು ಚಂದ ಇರ್ತಿತ್ತು. . ಕರೆಯೋಲೆ ಎಂದೇ ಶುರುವಾಗೋ ಸಿನಿಮಾ ನಿಜಕ್ಕೂ ನಮ್ಮನು ಒಂದು ಸುಂದರ ನಿಗೂಢ ಜಗತ್ತಿಗೆ ಕರೆದುಕೊಂಡು ಹೋಗಿ ಒಬ್ಬ ಪ್ರೇಕ್ಷಕನಿಗೆ ರಸದೌತಣ ನೀಡುವಂತ ಸಿನಿಮಾ ರಂಗಿತರಂಗ. ಕಮರೊಟ್ಟು ಅನ್ನೋ ಗ್ರಾಮದಲ್ಲಿ ನಡೆಯುವಂತ ಅನಿರೀಕ್ಷಿತ ಘಟನೆಗಳ ಸುತ್ತ ಸಾಗೊ ಕಥೆ ರಂಗಿತರಂಗ. ರಾತ್ರಿ ರಸ್ತೆಯಲ್ಲಿ ಧುತ್ತನೆ ಕಂಡು ಮಾಯವಾಗುವ ಭೂತದ ವೇಷ; ಅದೇನೋ ನಿಗೂಢತೆ ತುಂಬಿದಂತಿರುವ ಅವರ ಮನೆ, ಹೀಗೆ ಚಿತ್ರವು ಸಸ್ಪೆನ್ಸ್ ಗಳನ್ನು ಸೃಷ್ಠಿಸುತ್ತಾ ಹೋಗುತ್ತದೆ. ಗರ್ಭಿಣಿ ಮಹಿಳೆಯರ ನಿಗೂಡ ಸಾವು, ಇದು ಮಾಡುತ್ತಿರೋದು ಗುಡ್ಡದ ಭೂತ ಅನ್ನೋ ಆ ಊರು ಜನರ ನಂಬಿಕೆ. ನಂತರ ನಾಯಕಿಯ ಅಪಹರಣ, ಅವಳನ್ನು ಹುಡುಕುತ್ತಾ ಹೊರಡೊ ನಾಯಕ. ಅಲ್ಲಿ ಮತ್ತಷ್ಟು ಪಾತ್ರಗಳಿಗೆ ಸ್ಪಷ್ಟತೆ ಕಲ್ಪಿಸೋ ನಿರ್ದೇಶಕನ ಜಾಣ್ಮೆ. ಈ ಕಥೆ ನಾ ಬರ್ದು ನೀವು ಓದೋದಕಿಂತ ಸಿನಿಮಾ ನೋಡಿದ್ರೆ ಮಜಾ. . ಇನ್ನು ಪಾತ್ರಗಳ ವಿಚಾರಕ್ಕೆ ಬಂದ್ರೆ, ‪#‎Nirup‬ ಪ್ರಥಮ ಚಿತ್ರದಲ್ಲಿ ಒಳ್ಳೆ ಅಭಿನಯ ನೀಡಿದ್ದಾರೆ, ಇನ್ನು ಚೆನ್ನಾಗಿ ಮಾಡ ಬಹುದಿತ್ತು ಆದರು ಫಸ್ಟ್ ಮೂವಿ so, ಲೆಟ್ಸ್ appreciate. ಇನ್ನು ಇಬ್ಬರು ನಾಯಕಿಯರು ನೋಡಲು ಮುದ್ದು. ಡೈಲಾಗ್ ಕಿಂಗ್ ಸಾಯಿ ಕುಮಾರ್ ಚಿತ್ರದ ಕೇಂದ್ರ ಬಿಂದು. ಶಂಕರ್ ಅಶ್ವಥ್ ಒಳ್ಳೆ ಅಭಿನಯ ಆದ್ರೆ ಅವರ ಪಾತ್ರ incomplete. ಉಳಿದಂತೆ ಎಲ್ಲರು ಅವರವರ ಪಾತ್ರದಲ್ಲಿ superb. . Anup Bhandari ಪ್ರಥಮ ಚಿತ್ರದಲ್ಲೇ ಭರವಸೆ ಮೂಡಿಸುತ್ತಾರೆ. Technically movie superb.