Archive.
News and reviews from the earlier FilmySphere, 2013 to 2019. They are kept as they were published and are not updated. For current stories, see the journal.
- Title for Movie Basavana
ಉಪ್ಪಿಯ ಮೂರು ನಾಮ!
ಉಪೇಂದ್ರ ನಿರ್ದೇಶನದ ಚಿತ್ರಗಳ ಸೊಗಸು ನಟನೆಯ ಚಿತ್ರಗಳಲ್ಲೂ ಇದೆಯೆಂದು ಥಿಯೇಟರ್ ಗೆ ಹೋದವರು ಹಾಕಿಸಿಕೊಂಡ ಮೂರುನಾಮದ ಕತೆ ಇದಲ್ಲ. ಬಸವಣ್ಣ ಎಂಬ ಹೆಸರಿಟ್ಟುಕೊಂಡು ಅದರ ವಿರುದ್ಧ ಪ್ರಕರಣ ದಾಖಲಾದ ಮೇಲೆ ನಿರ್ದೇಶಕ ಶ್ರೀನಿವಾಸ ರಾಜು ಬದಲಾಯಿಸಿಕೊಂಡ ಸಿಂಬಲ್ ಅದು. ಶಿವನ ಹಣೆಯ ಮೇಲಿನ ಮೂರು ಪಟ್ಟಿಯ ವಿಭೂತಿ ನಡುವೆ ಇರುವ ಕಣ್ಣಿನ ಚಿತ್ರವಾದರೂ ತಾನು ಚಿತ್ರವನ್ನು ಬಸವಣ್ಣ ಎಂದೇ ಕರೆಯುವುದಾಗಿ ಶ್ರೀನಿವಾಸ್ ಪಟ್ಟು ಹಿಡಿದರು. ಇದೆಲ್ಲ ನಡೆದಿದ್ದು ಇತ್ತೀಚೆಗೆ ನಡೆದ ಚಿತ್ರದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ. ಮೊದಲು ಮಾತನಾಡಿದ ತನ್ವಿ ಫಿಲಮ್ಸ್ ಬ್ಯಾನರ್ ನ ನಿರ್ಮಾಪಕ ಸಿ.ಆರ್ ಮನೋಹರ್ "ಉಪ್ಪಿ ಮತ್ತು ನಿರ್ದೇಶಕರಿಂದಾಗಿ ಚಿತ್ರ ಚೆನ್ನಾಗಿದೆ. ಗ್ಲಾಮರಸ್ ರಾಗಿಣಿ ಮತ್ತು ಕ್ಯೂಟ್ ಸಲೋನಿ ಚಿತ್ರಕ್ಕೆ ಕಳೆ ನೀಡಿದ್ದಾರೆ ಎಂದರು. ಬಳಿಕ ಮಾತನಾಡಿದ ರಾಗಿಣಿ ಇದು ಕನ್ನಡದ ಅತಿ ದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದಾಗಲಿದೆ ಎಂದರು. ತನ್ನದು ಎರಡು ವಿಭಿನ್ನ ಗೆಟಪ್ ನಲ್ಲಿರುವ ಮಾಫಿಯಾ ಸಂಬಂಧಿತ ಪಾತ್ರ. ನಾಯಕ ಮತ್ತು ನನ್ನ ಪಾತ್ರಗಳು ಕ್ಲೈಮ್ಯಾಕ್ಸ್ ನಲ್ಲಿ ಸರ್ ಪ್ರೈಸ್ ನೀಡಲಿದೆ ಎಂದರು. ಉಪ್ಪಿ ಫೆಂಟಾಸ್ಟಿಕ್ ಹ್ಯೂಮನ್. ಚಿತ್ರದಲ್ಲಿ ಕಲಾವಿದನಷ್ಟೇ ಆಗಿದ್ದರೂ ಪ್ರತಿ ದೃಶ್ಯಕ್ಕೂ ಮುನ್ನ ನಮಗೆ ಎನ್ ಕರೇಜ್ ನೀಡುತ್ತಿದ್ದುದನ್ನು ಮರೆಯಲಾಗದು. ಪ್ರಥಮ ಬಾರಿಗೆಂಬಂತೆ ನಾಯಕನೊಂದಿಗೆ ಸೇರಿ ನಾನು ಹೊಡೆದಾಟದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ರಾಗಿಣಿ. ಸಲೋನಿ ತಮಗೆ ಇದು ಉಪೇಂದ್ರರ ಜೊತೆ ಮೂರನೇ ಸಿನೆಮಾ. ಸಂಪ್ರದಾಯಸ್ಥೆ ಹುಡುಗಿಯ ಪಾತ್ರವಿದೆ ಎಂದರು. ರಿಯಲ್ ಸ್ಟಾರ್ ಉಪೇಂದ್ರ ಕೂಡ ತಮ್ಮ ಮಾತುಗಳಲ್ಲಿ ಸಲೋನಿಯ ಬಗ್ಗೆಯೇ ಪ್ರಸ್ತಾಪಿಸಿ 'ಪರ್ಫಾರ್ಮೆನ್ಸ್ ಓರಿಯೆಂಟೆಡ್ ನಟಿ ಸಲೋನಿ. ಅದಕ್ಕಾಗಿಯೇ ಆಕೆಯನ್ನು ಮತ್ತೆ ಮತ್ತೆ ಮುಂಬೈನಿಂದ ಕರೆಸಲಾಗುತ್ತಿದೆ ಎಂದರು. ವೆಚ್ಚವನ್ನು ಗಮನಿಸುತ್ತಿದ್ದರೆ ನನಗೆ ತೆಲುಗು ಚಿತ್ರದಲ್ಲಿ ನಟಿಸಿದ ಅನುಭವವಾಗುತ್ತಿತ್ತು. ಚಿತ್ರದ ಪ್ರಥಮ ಆಕರ್ಷಣೆಯಾಗಿರುವುದೇ ಗುರುರಾಜ್ ದೇಸಾಯಿ ಬರೆದ ಸಂಭಾಷಣೆಗಳು ಎಂದು ಹೊಸ ಸಂಭಾಷಣೆಕಾರರನ್ನು ಕೊಂಡಾಡಿದರು. ಅದೇ ಮಾತನ್ನು ಸಮರ್ಥಿಸಿದ ನಟ ದೊಡ್ಡಣ್ಣ, ನನ್ನ 600 ಚಿತ್ರಗಳ ಅನುಭವದಲ್ಲಿ ಹೇಳುತ್ತೇನೆ, ಇದು ತುಂಬಾನೇ ಖುಷಿ ಕೊಡುವ ಚಿತ್ರವಾಗಿ ಮೂಡಿ ಬಂದಿದೆ ಎಂದರು. ನಿರ್ಮಾಪಕರ ಸಹೋದರ ಗೋಪಿ ನವನಟನಾದರೂ ಅದ್ಭುತ ಅಭಿನಯ ನೀಡಿದ್ದಾರೆ ಎಂದರು. ಪ್ರಾಚೀನ ದೇವಾಲಯಗಳಲ್ಲಿ ಚಿತ್ರೀಕರಿಸಿರುವುದು, ವೇದದ ವಾದಗಳಿಗೆ ಗುರುರಾಜ್ ಸಂಭಾಷಣೆ ನೀಡಿರುವುದು ಚಿತ್ರಕ್ಕೆ ವಿಭಿನ್ನ ಆಕರ್ಷಣೆ ಒದಗಿಸಿದೆ ಎಂದರು. ನಿರ್ದೇಶಕ ಶ್ರೀನಿವಾಸ ರಾಜು ಈ ಚಿತ್ರ ಇಷ್ಟೊಂದು ಚೆನ್ನಾಗಿ ಮೂಡಿ ಬರಲು ನಿರ್ಮಾಪಕರು ಮತ್ತು ಉಪ್ಪಿಯೇ ಕಾರಣರಾಗುತ್ತಾರೆ. ಬೆಳಿಗ್ಗೆ 4ಗಂಟೆಗೆ ಎದ್ದು ಎಂಟರ ತನಕ ತಮ್ಮ ವಿಭಿನ್ನ ಗೆಟಪ್ ಗಾಗಿ ಮೇಕಪ್ ನಲ್ಲಿ ನಿರತರಾಗಿರುತ್ತಿದ್ದ ಉಪೇಂದ್ರರ ಡೆಡಿಕೇಶನನ್ನು ವಿವರಿಸಲು ಮಾತುಗಳಿಲ್ಲ ಎಂದರು.
2014-09-30 · Kannada
- Chinni Chinni Aase Inaguration
ಚಿನ್ನ ಚಿನ್ನ ಆಸೆಗೆ ಮುಹೂರ್ತ
ಡಿ.ರಾಜೇಂದ್ರ ಬಾಬು ಮತ್ತು ಕ್ರೇಜಿಸ್ಟಾರ್ ವಿ.ರವಿಚಂದ್ರನ್ ರ ಬಳಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ರುದ್ರಮುನಿ ಪ್ರಥಮ ಬಾರಿ ಸ್ವತಂತ್ರ ನಿರ್ದೇಶನಕ್ಕೆ ಧುಮುಕಿರುವ ಚಿತ್ರವೇ 'ಚಿನ್ನ ಚಿನ್ನ ಆಸೆ'. ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಜರಗಿತು. ನಿರ್ದೇಶಕ ರುದ್ರಮುನಿಯ ಪ್ರಕಾರ ಇದೊಂದು ಲವ್ ಸ್ಟೋರಿ ಬೇಸ್ಡ್ ಸಿನೆಮಾ. ನಾಯಕ ಮದರಂಗಿ ಕೃಷ್ಣ. ಹಿಲ್ ಸ್ಟೇಷನ್ ಒಂದರೆಡೆಗೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಂಭವಿಸುವ ಕತೆಯಿದು. ಚಿತ್ರದಲ್ಲಿ ಮೂವರು ನಾಯಕಿಯರು. ಅವರಲ್ಲಿ ಯಾರಿಗೆ ಕೃಷ್ಣ ಒಲಿಯುತ್ತಾನೆ ಎಂಬುದು ಕ್ಲೈಮ್ಯಾಕ್ಸ್. ಮೂವರು ನಾಯಕಿಯರಾಗಿ ನಟಿಸುತ್ತಿರುವ ಮೀನಾಕ್ಷಿ ದೀಕ್ಷಿತ್, ಸಂದೀಪ್ ವಿರಿಕು ಮತ್ತು ನರ್ಹೋನ್ಹಾ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಖುಷಿ ವ್ಯಕ್ತಪಡಿಸಿದರು. ಕೃಷ್ಣ ತಮ್ಮದು ಲವ್ವರ್ ಬಾಯ್ ಪಾತ್ರ ಎಂದರು. ಭಜರಂಗಿ ಲೋಕಿ ಚಿತ್ರದಲ್ಲಿ ಮುಖ್ಯ ಖಳನಾಗಿ ನಟಿಸುವುದರೊಂದಿಗೆ ಮದರಂಗಿ ವರ್ಸಸ್ ಭಜರಂಗಿ ಹೊಡೆದಾಟಗಳನ್ನು ನಿರೀಕ್ಷಿಸಬಹುದಾಗಿದೆ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸುಚೇಂದ್ರ ಪ್ರಸಾದ್ ತಮಗೊಂದು ಪಾತ್ರವಿದೆ ಎಂದು ಗೊತ್ತು ಯಾವ ರೀತಿಯಲ್ಲಿರುತ್ತದೆ ಎಂಬ ಬಗ್ಗೆ ಮಾಹಿತಿಗಳಿಲ್ಲ ಎಂದರು. ಕೇಶವಾದಿತ್ಯ ಮೊದಲಬಾರಿ ತಾವು ಪ್ರೇಮ ಚಿತ್ರವೊಂದಕ್ಕೆ ಸಂಭಾಷಣೆ ಬರೆಯುತ್ತಿರುವುದಾಗಿ ತಿಳಿಸಿದರು. ಅರ್ಜುನ್ ಜನ್ಯಾ ಸಂಗೀತದಲ್ಲಿ 5 ಹಾಡುಗಳಿದ್ದು ಜಯಂತ್ ಕಾಯ್ಕಿಣಿ ಮತ್ತು ನಾಗೇಂದ್ರ ಪ್ರಸಾದ್ ಸಾಹಿತ್ಯ ನೀಡಲಿದ್ದಾರೆ. ಸಿನೆಮಾದ ಚಿತ್ರೀಕರಣವನ್ನು ಮೂರು ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಂಗಲೂರು ಸೇರಿದಂತೆ ದೂಧ್ ಸಾಗರ್ ಮತ್ತು ಕುಮುಟಾದಲ್ಲಿಯೂ ಚಿತ್ರೀಕರಣ ನಡೆಯಲಿರುವುದಾಗಿ ತಿಳಿಸಿದ್ದಾರೆ.
2014-09-30 · Kannada
- Ring Road Shobha Audio Review
ರಿಂಗ್ ರೋಡ್ ಶುಭಾಳ ಹಾಡಿನ ರಿಂಗಣ
ಚಿತ್ರದ ಎಲ್ಲ ವಿಭಾಗದಲ್ಲಿಯೂ ಮಹಿಳೆಯರೇ ಕಾರ್ಯನಿರ್ವಹಿಸುತ್ತಿರುವರೆಂಬ ವಿಶಿಷ್ಟತೆಯ ಚಿತ್ರ ರಿಂಗ್ ರೋಡ್ ಶುಭ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಆ ನಿಟ್ಟಿನಲ್ಲಿ ವೀಕ್ಷಕರಿಂದ ಯಾವುದೇ ಉದಾರತೆಯನ್ನು ಬಯಸದಂಥ ಚಿತ್ರವಿದು. ಯಾಕೆಂದರೆ ಇದುವರೆಗೆ ಪ್ರಕಟಗೊಂಡಿರುವ ಪ್ರೊಮೊಗಳಲ್ಲಾಗಲೀ ಅಥವಾ ಪತ್ರಿಕಾಗೋಷ್ಠಿಯಲ್ಲಿನ ತಂಡದ ಕಾರ್ಯವೈಖರಿಯಲ್ಲಾಗಲೀ ಎಲ್ಲಿಯೂ ಪ್ರಥಮ ಚಿತ್ರದಲ್ಲಿ ಸಹಜವೆನಿಸಬಹುದಾದಂಥ ಕುಂದುಗಳನ್ನು ಕೂಡ ತೋರಿಸಿದ ಉದಾಹರಣೆಯಿಲ್ಲ. ಅದೇ ರೀತಿಯಲ್ಲಿ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮವೂ ಜರಗಿತು. ವಾಣಿಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಐದು ಹಾಡುಗಳನ್ನೊಳಗೊಂಡ ಧ್ವನಿಸಾಂದ್ರಿಕೆಯನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಬಿಡುಗಡೆಗೊಳಿಸಿದರು.ಚಿತ್ರಕ್ಕಾಗಿ ಒಂದು ರೂಪಾಯಿ ಸಂಭಾವನೆ ಪಡೆದು ವಿಭಿನ್ನ ಪಾತ್ರವೊಂದರಲ್ಲಿ ನಟಿಸುತ್ತಿರುವ ವಿಜಯ್ ಮಾತನಾಡುತ್ತ 'ಚಿತ್ರದ ನಿರ್ದೇಶಕಿ ಹುಲಿಯಾದರೆ, ಛಾಯಾಗ್ರಾಹಕಿ ಲಯನೆಸ್. ಅಷ್ಟು ಪವರ್ ಫುಲ್ ಆಗಿದ್ದ ಅವರನ್ನು ನಾನು ಚಿತ್ರೀಕರಣದ ವೇಳೆ ಹಾಗೆಯೇ ಕರೆಯುತ್ತಿದ್ದೆ. ಇದೊಂದು ಮಾದರಿ ಚಿತ್ರವಾಗಿದ್ದು ಎಲ್ಲ ಭಾಷೆಗಳನ್ನು ತಲುಪುವಂತಾಗಲಿ' ಎಂದರು. ನಿಖಿತಾ ಟುಕ್ರಾಲ್ ಮಾತನಾಡುತ್ತಾ 'ಚಿತ್ರಕತೆ ಅದ್ಬುತವಾಗಿದೆ. ಈ ಚಿತ್ರದಲ್ಲೊಂದು ಭಾಗವಾಗಲು ಸಾಧ್ಯವಾಗಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತದೆ. ಪ್ರಿಯಾ ಬೆಳ್ಳಿಯಪ್ಪ ನನ್ನ ಬಾಯ್ ಫ್ರೆಂಡ್ ಎಂದು ಹೇಳಿ ಒಂದು ಆಕೆಗೊಂದು ಮುತ್ತು ಕೊಟ್ಟರು. ಅತಿಥಿಯಾಗಿ ಆಗಮಿಸಿ ಮಾತನಾಡಿದ ಸಂಜನಾ 'ನಾನೊಬ್ಬಳು ಫೆಮಿನಿಸ್ಟ್. ಹೆಣ್ಣು ಮಕ್ಕಳೇ ಸದಾ ಮುಂದಿರಬೇಕೆಂದು ಬಯಸುವವಳು ನಾನು. ಹಾಗಾಗಿ ಈ ಚಿತ್ರಕ್ಕೆ ನನ್ನ ನೂರರಷ್ಟು ಬೆಂಬಲವಿದೆ ಎಂದರು. ಪಟ್ರೆ ಅಜಿತ್ ಮಾತನಾಡಿ ಚಿತ್ರದಲ್ಲಿ ಪಕ್ಕಾ ಸಸ್ಪೆನ್ಸ್ ಸನ್ನಿವೇಶಗಳಿವೆ. ನಾನು ಕೂಡ ಥಿಯೇಟರ್ ಗೆ ಹೋಗಿ ಚಿತ್ರ ನೋಡಲು ಕಾಯುತ್ತಿದ್ದೇನೆ ಎಂದರು. ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ಕಾಣಿಸಿರುವ ಲವ್ಲಿಸ್ಟಾರ್ ಪ್ರೇಮ್ ಮಾತನಾಡಿ 'ನಿರ್ದೇಶಕಿ ಪ್ರಿಯಾ ಸೇರಿದಂತೆ ಚಿತ್ರ ತಂಡದ ರಂಜಿನಿ, ರೇಖಾಮ್ಮ, ನಿಖಿ, ಸಂಜನಾ ಎಲ್ಲರೂ ನನ್ನ ಸ್ನೇಹಿತೆಯರು. ಪ್ರಿಯಾರಲ್ಲಂತೂ ಅವರು ಯಾವ ಚಿತ್ರ ಮಾಡಿದರೂ ಅದರಲ್ಲೊಂದು ಪಾತ್ರವನ್ನು ನನಗೆ ನೀಡಬೇಕೆಂದು ಅಗ್ರಿಮೆಂಟ್ ಮಾಡಿಕೊಂಡಿದ್ದಾಗಿ ಹೇಳಿದರು. ವಿಶೇಷವೇನೆಂದರೆ ಚಿತ್ರದಲ್ಲಿ ಪ್ರೇಮ್ ನಟಿಸಿರುವ ಗೀತೆಗೆ ಕಿಚ್ಚ ಸುದೀಪ್ ಕಂಠನೀಡಿದ್ಧಾರೆ! ಉಳಿದಂತೆ ಖುದ್ದು ವಾಣಿ ಹರಿಕೃಷ್ಣ, ಸಂತೋಷ್ ವೆಂಕಿ, ಲಕ್ಷ್ಮೀ ವಿಜಯ್, ಹರಿಕೃಷ್ಣ ಮತ್ತು ಸಂಗೀತ ಕಟ್ಟಿ ದನಿಯಲ್ಲಿ ಹಾಡುಗಳಿವೆ. ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಸೇರಿದಂತೆ ಇಡೀ ಮಹಿಳಾ ಚಿತ್ರತಂಡ ವೇದಿಕೆಯಲ್ಲಿತ್ತು. ನಟ ಸುನೀಲ್ ಪುರಾಣಿಕ್, ನಟಿ ಹಂಸ ಮೊದಲಾದವರು ಸಭೆಯಲ್ಲಿದ್ದರು.
2014-09-30 · Kannada
- Muddhu Manase Audio will be released by BOSS
ಮುದ್ದು ಮನಸೇ ಸೀಡಿ ಬಿಡುಗಡೆಗೊಳಿಸಲಿರುವ ಬಾಸ್!
ನಮ್ಮ ಸೀಡಿ ಬಿಡುಗಡೆಗೊಳಿಸಲು 'ಬಾಸ್' ಬರುತ್ತಾರೆ ಎಂದು 'ಮುದ್ದು ಮನಸೇ' ಚಿತ್ರತಂಡ ಹೇಳಿದಾಗ ಇವರು ಬಹುಶಃ ಬಿಗ್ ಬಾಸ್ ನಿರ್ವಹಿಸುತ್ತಿರುವ ಸುದೀಪೇ ಇರಬಹುದು ಎಂದುಕೊಳ್ಳಲಾಗಿತ್ತು. ಚಿತ್ರತಂಡ ತಯಾರಿಸಿರುವ ಜಾಹಿರಾತು ತುಣುಕಿನಲ್ಲಿ ಸ್ವತಃ ಸುದೀಪ್ ಕೂಡ 'ಬಾಸ್ ಬರುತ್ತಾರೆ' ಎಂದಾಗ ಆ ಕ್ಷಣ ಹುಬ್ಬೇರುವಂತಾಗಿದ್ದು ಸತ್ಯ. ಉಳಿದಂತೆ ಬಾಸ್ ಚಿತ್ರದಲ್ಲಿ ನಟಿಸಿದ ದರ್ಶನ್ ಇರಬಹುದೇ ಎಂಬ ಸಂದೇಹವೂ ಮೂಡದಿರಲಿಲ್ಲ. ಜೊತೆಗೆ ತೆರೆಯ ಮೇಲೆ ಕಾಣಿಸಿಕೊಂಡ ದರ್ಶನ್ ಉಳಿದ ಕಲಾವಿದರಂತೆ ಬಾಸ್ ಬರುವ ಬಗ್ಗೆ ಯಾವುದೇ ಮಾತುಗಳನ್ನಾಡದಿರುವುದು ಕೂಡ ಅದಕ್ಕೆ ಮುಖ್ಯ ಕಾರಣವಾಗಿತ್ತು. ಆದರೆ ಯಾವಾಗ ಶಿವರಾಜಕುಮಾರ್ ಮತ್ತು ಅಂಬರೀಶ್ ಕೂಡ 'ನಾವು ಅವರನ್ನು ಬಾಸ್ ಅಂತಲೇ ಕರೆಯುತ್ತೀವಿ, ಬಾಸ್ ಬರ್ತಿದ್ದಾರೆ' ಎಂದು ಹೇಳಿದರೋ ಆಗಲೇ ಬರುತ್ತಿರುವವರು ಖಂಡಿತಾ ತೀರಾ ಸಣ್ಣ ವಯಸ್ಸಿನವರಂತೂ ಖಂಡಿತಾ ಅಲ್ಲವೆಂಬುದು ಖಚಿತವಾಗಿತ್ತು. ಹಾಗಾದರೆ ಅದು ಯಾರು? ರಜನಿಕಾಂತ್ ರವರಾ? ಅವರು ಆಗುವ ಸಾಧ್ಯತೆಯೇ ಹೆಚ್ಚು. ಚಿತ್ರದ ನಾಯಕ ಅರುಣ್ ಮಾತನಾಡಬೇಕಾದರೆ ತಾವು ಚಿತ್ರದ ಕುರಿತು ಕಲಾವಿದರ ಮಾತುಗಳನ್ನು ಸಂಗ್ರಹಿಸಲು ಹೋದಾಗ ಎಲ್ಲರೂ ತುಂಬಾ ಸಹಕರಿಸಿ ಮಾತನಾಡಿದರು. ಅದರಲ್ಲೂ ಲಿಂಗ ಚಿತ್ರೀಕರಣದಲ್ಲಿದ್ದ ರಜನಿಕಾಂತ್ ಕ್ಯಾರವಾನೊಳಗೆ ನನ್ನನ್ನೊಬ್ಬನನ್ನೇ ಕರೆಸಿಕೊಂಡು ಚಿತ್ರದ ದೃಶ್ಯಗಳನ್ನು ನೋಡಿದರು. ನಾನು ಅವರ ಕಾಲ ಹತ್ತಿರ ಕುಳಿತು ತೋರಿಸುತ್ತಿದ್ದರೆ ಅವರು ಅವರ ಪಕ್ಕದಲ್ಲೇ ಕುಳ್ಳಿರಿಸಿಕೊಂಡು ನೋಡಿ ಪ್ರೋತ್ಸಾಹಿಸಿದರು; ಅದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದರು. ಅದೇ ಜಾಡಿನಲ್ಲಿ ಮುಂದುವರಿದ ಪತ್ರಕರ್ತರು ಹಾಗಾದರೆ ಅವರೇನಾ ಸೀಡಿ ಬಿಡುಗಡೆಗೊಳಿಸೋದು ಎಂದು ಪ್ರಶ್ನಿಸಿದಾಗ ಅವರು 'ದಯವಿಟ್ಟು ಯಾರು ಎಂಬುದನ್ನು ಮೊದಲೇ ರಿವೀಲ್ ಮಾಡೋದು ಬೇಡ' ಎಂದು ಹೇಳಿದ್ದಾರೆಂದು ತಿಳಿಸಿದರು. ಹಾಗೆ ನೋಡಿದರೆ ಬರುವಿಕೆಯನ್ನು ಗುಟ್ಟಾಗಿರಿಸಲು ಬಯಸುವ ಏಕೈಕ ಸ್ಟಾರ್ ರಜನಿಕಾಂತ್ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಮಾತ್ರವಲ್ಲ ಬಾಸ್ ಬರುವುದರಿಂದಾಗಿ ಸೀಡಿ ಬಿಡುಗಡೆಗೆ ನಾವು ದೊಡ್ಡದೊಂದು ಗ್ರೌಂಡನ್ನೇ ಆಯ್ದುಕೊಳ್ಳಬೇಕಾಗಿದ್ದು, ಅದರ ಪರವಾನಗಿ ದೊರೆಯುವ ತನಕ ಸೀಡಿ ಬಿಡುಗಡೆಯ ದಿನಾಂಕ ಮತ್ತು ಸ್ಥಳವನ್ನು ಪ್ರಕಟಿಸುವುದು ಕಷ್ಟ ಎಂದಿದ್ದಾರೆ. ಒಟ್ಟಿನಲ್ಲಿ ಅಲ್ಲಿಯವರೆಗೆ ರಜನಿ ಅಭಿಮಾನಿಗಳ ಎದೆಯಲ್ಲಿ ತೌಡು ಕುಟ್ಟಿದ ಶಬ್ಧಕ್ಕೆ ಕೊರತೆಯಿರುವುದಿಲ್ಲ. ಮುದ್ದು ಮನಸೇ ಚಿತ್ರದ ಮೂಲಕ ನಿರ್ದೇಶಕ ಅನಂತ್ ಶೈನ್ ಒಂದು ಒಳ್ಳೆಯ ಕಮರ್ಷಿಯಲ್ ಚಿತ್ರ ನೀಡಲು ಸಿದ್ಧವಾಗಿದ್ದಾರೆ. ಪ್ರಥಮದಲ್ಲಿ ಇವರು ನಿರ್ದೇಶಿಸಿದ್ದ ಕಿರುಚಿತ್ರವೊಂದು ಹತ್ತು ಹಲವು ಪ್ರಶಸ್ತಿಗಳನ್ನು ಬಾಚುವ ಮೂಲಕ ಅನಂತ್ ಪ್ರತಿಭಾವಂತನೆಂಬುದನ್ನು ಚಿತ್ರ ಸಾಬೀತುಗೊಳಿಸಿತ್ತು. ಇದೀಗ ಆ್ಯಕ್ಷನ್ ಬೇಸ್ಡ್ ಲವ್ ಸ್ಟೋರಿಯೊಂದಿಗೆ ಬಂದಿರುವ ನಿರ್ದೇಶಕರು ಹಳ್ಳಿ ಮತ್ತು ನಗರದ ಬ್ಯಾಕ್ ಡ್ರಾಪ್ ನಲ್ಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಎರಡೂ ಎರಡು ವಿಭಿನ್ನ ಗೆಟಪ್ ನಲ್ಲಿ ನಾಯಕ ಅರುಣ್ ಕಾಣಿಸಲಿದ್ದಾರೆ. ಹಳ್ಳಿಯ ನಾಯಕಿಯಾಗಿ ನಿತ್ಯಾರಾಮ್ ಮತ್ತು ನಗರದ ನಾಯಕಿಯಾಗಿ ಐಶ್ವರ್ಯಾ ನಾಗ್ ನಟಿಸಿದ್ದಾರೆ. ವಿನೀತ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸ್ನೇಹಿತ ಜೀವನ್ ಜೊತೆ ಸೇರಿಕೊಂಡು ಎಮ್ ಎಮ್ ಎಸ್ ಮೂವೀಸ್ ಸಂಸ್ಥೆ ಕಟ್ಟಿರುವ ಚಿತ್ರದ ನಿರ್ಮಾಪಕರಾದ ಸಂತೋಷ್ ಮತ್ತು ರಮೇಶ್ ಸೇರಿದಂತೆ ತಂಡದ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿರಿದ್ದು ಶುಭಕೋರಿದರು
2014-09-30 · Kannada
- Sudeep to combine with Millana Prakash
ಕಿಚ್ಚ ಸುದೀಪ್ ಮತ್ತು ಮಿಲನ ಪ್ರಕಾಶ್ ಸಮ್ಮಿಲನ
ಕಿಚ್ಚ ಸುದೀಪ್ ನಾಯಕನಾಗಿ ಹೊಸ ಕನ್ನಡ ಚಿತ್ರವೊಂದು ತಯಾರಾಗುತ್ತಿದೆ. ಹೋಟೆಲ್ ಉದ್ಯಮದಲ್ಲಿ ಹೆಸರು ಮಾಡುತ್ತಿರುವ ವಾಣಿ ಶ್ರೀ ಮತ್ತು ರಘುನಾಥ್ ದಂಪತಿ ತಮ್ಮ ಹೆಸರಿನ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಈಗಾಗಲೇ "ಆ್ಯಕ್ಸಿಡೆಂಟ್" ಹೆಸರಿನ ಸದಭಿರುಚಿಯ ಚಿತ್ರವನ್ನು ನಿರ್ದೇಶಿಸಿದ ರಘುನಾಥ್ ಈ ಬಾರಿ ತಮ್ಮದೇ ಬ್ಯಾನರ್ ಲಾಂಚ್ ಮಾಡುತ್ತಿದ್ದು, ಅದಕ್ಕೆ ಎಸ್ ಆರ್ ವಿ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದಾರೆ. ಅಂದರೆ ಶ್ರೀ ರಘು ವಾಣಿ ಎಂಬ ಅರ್ಥ ಹೊಂದಿರುವುದಾಗಿ ಅವರು ತಿಳಿಸಿದರು. ಚಿತ್ರದ ಬಗ್ಗೆ ಹೆಚ್ಚಿನ ವಿವರಣೆಗಳು ಅಲ್ಲಿರಲಿಲ್ಲ. ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರಕಾಶ್ ಜಯರಾಮ್ ಮಾತನಾಡಿ ಹೊಸ ಬ್ಯಾನರ್ ಗೆ ಮತ್ತು ದಂಪತಿಗೆ ಶುಭ ಹಾರೈಸಿದರು. ಶಂಕರ್ ಪ್ರಕಾಶ್ ಮತ್ತು ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಪ್ರಕಾಶ್ ಸುದೀಪ್ ಚಿತ್ರವನ್ನು ತಾವೇ ನಿರ್ಮಿಸಿ ನಿರ್ದೇಶಿಸಲು ಬಯಸಿದ್ದರಂತೆ. ಆದರೆ ಸುದೀಪ್ ಈ ಹೊಸ ಬ್ಯಾನರ್ ನ ಪರಿಚಯ ಮಾಡಿಸಿಕೊಡುವ ಮೂಲಕ ಮುಂದಿನ ವರ್ಷಕ್ಕೆ ದೊಡ್ಡ ಮಟ್ಟದ ಚಿತ್ರದ ನಿರೀಕ್ಷೆ ಮೂಡಿಸಿದ್ದಾರೆ. ಬಳಿಕ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆರ್ಕೆಸ್ಟ್ರಾದಲ್ಲಿ ಗಾಯಕರಾದ ರಾಜೇಶ್ ಕೃಷ್ಣನ್, ಹೇಮಂತ್ ಮೊದಲಾದವರಿಂದ ಹಾಡುಗಳ ಸಂಭ್ರಮವಿತ್ತು. ಪ್ರಿಯಾ ಸುದೀಪ್ ನೇತೃತ್ವದ ಸ್ಟೇಜ್ 360ಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುದೀಪ್ ತಂದೆ ಸರೋವರ್ ಸಂಜೀವ್, ಮಗಳು ಸಾನ್ವಿ ಮೊದಲಾದವರು ಪಾಲ್ಗೊಂಡಿದ್ದರು.
2014-09-29 · Kannada
- Belli Audio Released
ಬೆಳ್ಳಿ ಆಡಿಯೋ ಬಿಡುಗಡೆ
ಶಿವರಾಜ್ ಕುಮಾರ್ ಚಿತ್ರದಲ್ಲಿ ಮಚ್ಚೊಂದನ್ನು ಹಿಡಿದರೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಅಂಥ ಸಂದರ್ಭದಲ್ಲಿ ಐದು ಅಗಲುಗಳ ಗೊಂಚಲು ಮಚ್ಚನ್ನು ಕೈಲಿರಿಸಿಕೊಂಡ ಶಿವಣ್ಣನನ್ನು ಬೆಳ್ಳಿ ಚಿತ್ರದ ಪೋಸ್ಟರ್ ನಲ್ಲಿ ಕಂಡ ಅಭಿಮಾನಿಗಳ ಪರಿಸ್ಥಿತಿ ಹೇಗಿರಬೇಡ? ಅದಕ್ಕೆ ಕನ್ನಡಿಯಂತಿತ್ತು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಳ್ಳಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ. ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ ನಾಲ್ಕು ಮಂದಿ ಆತ್ಮೀಯ ಹುಡುಗರಿರುತ್ತಾರೆ. ಆ ಪಾತ್ರಗಳನ್ನು ನಿರ್ವಹಿಸಿದ ಯುವ ನಾಯಕರು ವೇದಿಕೆಗೆ ಬಂದು ತಮ್ಮ ಪಾತ್ರಗಳ ಪರಿಚಯ ಮಾಡಿಕೊಂಡರು. ಪೂಜಾರಿ ಹೆಸರಿನಲ್ಲಿ ವೆಂಕಟೇಶ್ ಪ್ರಸಾದ್, ಮುಸ್ಲಿಂ ಯುವಕನಾಗಿ ಶಿಷ್ಯ ದೀಪಕ್, ಕೋತಿ ಸೀನನಾಗಿ ಒರಟ ಪ್ರಶಾಂತ್ ಮತ್ತು ಕಠಾರಿ ಬಾಬುವಾಗಿ ವಿನೋದ್ ಪ್ರಭಾಕರ್ ಮಾತನಾಡಿದರು. ಅದರಲ್ಲೂ ವಿನೋದ್ ಪ್ರಭಾಕರ್ 'ಹುಲಿ ಬಂಡೀಪುರದಲ್ಲಿದ್ರೇನು..ಬನ್ನೇರುಘಟ್ಟದಲ್ಲಿದ್ರೇನು ಹುಲಿ ಹುಲೀನೆ' ಎಂಬ ಡೈಲಾಗ್ ಹೇಳಿದಾಗ ಸಭೆಯಲ್ಲಿ ಸಿಳ್ಳೆಗಳ ಸುರಿಮಳೆಯಾಯಿತು. ಚಿತ್ರದಲ್ಲಿ ಖಳನಾಯಕನಾಗಿ ನಟಿಸುತ್ತಿರುವ ಆದಿ ಲೋಕೇಶ್ ಮಾತನಾಡಿ ಜೋಗಿಯ ಬಿಡ್ಡನನ್ನು ಮೀರಿಸುವಲ್ಲಿ ಚಿತ್ರದಲ್ಲಿ ತಾನು ನಟಿಸಿರುವ ತಬ್ಲಿ ಮಂಜ ಎಂಬ ಪಾತ್ರ ಯಶಸ್ವಿಯಾಗಬಹುದೆಂಬ ನಿರೀಕ್ಷೆ ವ್ಯಕ್ತಪಡಿಸಿದರು. ನಾಯಕಿ ಕೃತಿ ಕರಬಂಧ ಚಿತ್ರದಲ್ಲಿ ತಾವು ನಿರ್ವಹಿಸುತ್ತಿರುವ ಪಾತ್ರದ ಹೆಸರು ಸ್ನೇಹ ಎಂದರು. ಚಿತ್ರದ ಹಾಡುಗಳಿಗೆ ಸಂಗೀತ ನೀಡಿರುವ ಶ್ರೀಧರ್ ಸಂಭ್ರಮ್ ಶಿವಣ್ಣನ ಚಿತ್ರಕ್ಕೆ ಸಂಗೀತ ನೀಡಲು ಸಾಧ್ಯವಾದ ಸಂಭ್ರಮ ಹಂಚಿಕೊಂಡರು. ಸಾಹಿತ್ಯ ರಚಿಸಿರುವ ಕವಿರಾಜ್ ಹಾಡಿಗೆ ಯಶಸ್ವಿ ಪಲ್ಲವಿಯನ್ನು ಸ್ವತಃ ಶ್ರೀಧರ್ ಬರೆದುಕೊಟ್ಟಿದ್ದಾರೆಂದರು. ಮತ್ತೋರ್ವ ಗೀತೆ ರಚನೆಕಾರ ನಾಗೇಂದ್ರ ಪ್ರಸಾದ್ ತಾವು ಶಿವಣ್ಣನ ಚಿತ್ರಕ್ಕೆ ರಚಿಸಿರುವ ಭಕ್ತಿ ಪ್ರಧಾನ ಹಾಡುಗಳಾದ ಎಲ್ಲಾ ನೀನೇ ತಾಯಿ ಮತ್ತು ಜೈ ಜೈ ಜೈ ಜೈ ಭಜರಂಗೀ ಹಾಡುಗಳು ದೇವಾಲಯಗಳಲ್ಲಿ ಕೇಳಿ ಬರುತ್ತಿದ್ದು ಅದೇ ಸಾಲಿಗೆ ಸೇರುವ ಹಾಡೊಂದನ್ನು ಇಲ್ಲಿಯೂ ನೀಡಿದ್ದಾಗಿ ಹೇಳಿದರು. ಕೊನೆಯಲ್ಲಿ ವೇದಿಕೆ ಏರಿ ಮಾತನಾಡಿದ ಶಿವರಾಜಕುಮಾರ್ ಚಿತ್ರ ತುಂಬಾ ವೇಗದ ಕತೆಯನ್ನು ಹೊಂದಿದೆ. ಚಿತ್ರದಲ್ಲಿ ಎಲ್ಲಿಯೂ ಬೆಳ್ಳಿ ತನ್ನ ಬಗ್ಗೆ ತಾನು ಹೇಳಿಕೊಳ್ಳುವುದಿಲ್ಲ, ಇನ್ನೊಬ್ಬರು ಹೇಳುತ್ತಾರೆ ಎಂದರು. ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ, ವಿತರಕರಾದ ನಾಗಪ್ರಸಾದ್, ಕೆಪಿ ಶ್ರೀಕಾಂತ್, ಗೀತಾ ಶಿವರಾಜಕುಮಾರ್,ಶಿವಣ್ಣನ ತಾಯಿಯಾಗಿ ನಟಿಸಿರುವ ಪದ್ಮಾ ವಾಸಂತಿ ಮೊದಲಾದವರು ಅತಿಥಿಗಳಾಗಿದ್ದ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಆಡಿಯೋ ಸೀಡಿ ಬಿಡುಗಡೆಗೊಳಿಸಿದರು. ತಾನು ಇಲ್ಲಿಗೆ ರಾಜಕಾರಣಿಯಾಗಿ ಬಂದಿಲ್ಲ; ಓರ್ವ ಶಿವರಾಜಕುಮಾರ್ ಅಭಿಮಾನಿಯಾಗಿ ಬಂದಿದ್ದೇನೆ ಎಂದರು. ನಿರ್ದೇಶಕ ಮುಸ್ಸಂಜೆ ಮಹೇಶ್ ಮಾತನಾಡಿ "ಡಿಕೆ ಶಿವಕುಮಾರ್ ರನ್ನು ಮೊದಲು ಆಹ್ವಾನಿಸಿದಾಗ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿರಲಿಲ್ಲ. ಆದರೆ ಶಿವಣ್ಣ ನಾಯಕನೆಂದಾಗ ತಕ್ಷಣ ಒಪ್ಪಿಕೊಂಡರು" ಎಂದರು. ಚಿತ್ರದ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡದಿದ್ದರೂ ಅಲ್ಲಿ ಪ್ರದರ್ಶಿಸಲಾದ ಟ್ರೇಲರ್ ಮತ್ತು ಹಾಡುಗಳು ಬೆಳ್ಳಿಯ ಬಗ್ಗೆ ಆಕರ್ಷಣೆ ಮತ್ತು ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿತ್ತು.
2014-09-29 · Kannada
- Patharagitthi Audio Released
ಪಾತರಗಿತ್ತಿ ಆಡಿಯೋ ಸೀಡಿ ಬಿಡುಗಡೆ
ಶ್ರೀಕಿ ನಾಯಕನಾಗಿ ನಟಿಸುತ್ತಿರುವ ಪಾತರಗಿತ್ತಿ ಚಿತ್ರದ ಆಡಿಯೋ ಸೀಡಿ ಬಿಡುಗಡೆಯಾಗಿದೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದ ಮೂರು ಹಾಡುಗಳ ಪ್ರದರ್ಶನವೂ ನಡೆಯಿತು. ಚಿತ್ರದ ನಿರ್ದೇಶಕ ಈಶ್ವರ್ ಆರಂಭದಲ್ಲೇ ಸೂಚಿಸಿದ ಹಾಗೆ ಹಾಡುಗಳಿಗೆ ಸಂಗೀತ ನೀಡಿದ ವೆಂಕಟ್ ಸ್ವಾಮಿ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದು, ಅವರು ಅರಂಭವನ್ನಷ್ಟೇ ನೀಡಿದ್ದ ಟ್ಯೂನ್ ಗಳಿಗೆ ಪೂರಕ ಸಂಯೋಜನೆಯನ್ನು ಸಮೀರ್ ಕುಲಕರ್ಣಿ ಮಾಡಿ ಮುಗಿಸಿದ್ದಾರೆ. ಹಾಗಾಗಿ ಇಬ್ಬರ ಹೆಸರನ್ನೂ ಸಂಗೀತ ನಿರ್ದೇಶಕರ ಸ್ಥಾನದಲ್ಲಿ ಪ್ರಕಟಿಸಲಾಗಿದೆ. ಅದೇ ರೀತಿ ಚಿತ್ರದ 6 ಹಾಡುಗಳ ಪಲ್ಲವಿಯನ್ನು ಸ್ವತಃ ಬರೆದು ಹಾಡು ಆರಂಭಿಸಿದ್ದ ವೆಂಕಟ್ ಸ್ವಾಮಿಯ ಸಾಹಿತ್ಯಕ್ಕೆ ಬಳಿಕದ ಸಾಲು ಮತ್ತು ಎರಡು ಹಾಡುಗಳನ್ನು ಬರೆದು ಜೊತೆಯಾಗಿರುವುದು ನಿರ್ದೇಶಕ ಈಶ್ವರ್. ಈ ಹಾಡುಗಳು ಆಡಿಯೋ ಮಾತ್ರ ಕೇಳುವಾಗ ಒಂದು ಅರ್ಥ ನೀಡಿದರೆ, ಪರದೆಯ ಮೇಲೆ ಇನ್ನಷ್ಟು ಅರ್ಥವ್ಯಾಪ್ತಿ ಹಿಗ್ಗುವಂತೆ ತೋರುತ್ತದೆ ಎಂದು ನಿರ್ದೇಶಕ ಈಶ್ವರ್ ಹೇಳಿದರು. ಶಕೀಲ ಕುಣಿದಿರುವ ಹಾಡು ಇದ್ದರೂ ಅದು ತೀರಾ ತಳಮಟ್ಟದ ಐಟಂ ಸಾಂಗ್ ಆಗಿರುವುದಿಲ್ಲ ಎಂದು ಅವರು ತಿಳಿಸಿದರು. ಬಳಿಕ ಮಾತನಾಡಿದ ನಾಯಕ ಶ್ರೀಕಿ ತಾನು ಇದುವರೆಗೆ ಹಾಕಿರದಂಥ ಹೆಜ್ಜೆಗಳನ್ನು ಹಾಕಲು ನೃತ್ಯ ನಿರ್ದೇಶಕರಾದ ಮದನ್, ಹರಿಣಿಯವರಿಂದಲೇ ಸಾಧ್ಯವಾಗಿದೆ ಎಂದರು. ನಾಯಕಿ ಪ್ರಜ್ಜು ಪೂವಯ್ಯ ಚಿತ್ರದ ಹಾಡೊಂದರಲ್ಲಿ ನಿರ್ದೇಶಕರು ಕೂಡ ಕಾಣಿಸಿದ್ದಾರೆ ಎಂಬ ಸತ್ಯವನ್ನು ಹೊರಗಿಟ್ಟರು. ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಮತ್ತು ಆನೇಕಲ್ ಬಾಲರಾಜ್ ಅತಿಥಿಗಳಾಗಿ ಬಂದು ಸೀಡಿ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭಕೋರಿದರು. ತಂಡದ ಸಮೀರ್ ಕುಲಕರ್ಣಿ, ಮಂಜುನಾಥ್, ರಾಕೇಶ್ ಮೊದಲಾದವರೊಂದಿಗೆ ನಟಿಯರಾದ ನೇಹಾ ಪಾಟೀಲ್, ಮಾನಸಿ ಉಪಸ್ಥಿತರಿದ್ದರು. ಹಾಡುಗಳನ್ನು ಕಂಡಾಗ ಕೊರಿಯಾಗ್ರಫಿ ಮತ್ತು ಛಾಯಾಗ್ರಹಣ ವಿಪರೀತ ಗಮನ ಸೆಳೆದಿದ್ದು ನಿಜ.
2014-09-28 · Kannada
- Home Stay Audio Released
ಹೋಮ್ ಸ್ಟೇ ಚಿತ್ರದ ಆಡಿಯೋ ಬಿಡುಗಡೆ
ಹೋಮ್ ಸ್ಟೇ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವು ಗಾಂಧಿನಗರದ ಬೆಲ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಚಿತ್ರದ ನಾಯಕಿ ಬಾಲಿವುಡ್ ಬೆಡಗಿ ಸಯ್ಯಾಲಿ ಭಗತ್ ಸೇರಿದಂತೆ ನಟಿ ಮಾನಸಿ, ಬಹುಭಾಷಾ ನಟ ಅಶೋಕ್, ಸಾಹಿತಿ ನಾಗೇಂದ್ರ ಪ್ರಸಾದ್ ನಿರ್ಮಾಪಕರಾದ ಮಿರಾಕಲ್ ಮೂವೀಸ್ ನ ಸಿದ್ಧು, ನಿರ್ದೇಶಕ ಸಂತೋಷ್ ಕೊಡೆಂಕಿರಿ ಮೊದಲಾದವರು ಉಪಸ್ಥಿತರಿದ್ದರು. ಪರಮಶಿವ ಚಿತ್ರದ ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕ ಜೋಡಿಗಳಾದ ಮಹೇಶ್ ಬಾಬು ಮತ್ತು ಅಣಜಿ ನಾಗರಾಜ್ ಅತಿಥಿಗಳಾಗಿ ಆಗಮಿಸಿ ಚಿತ್ರದ ಹಾಡುಗಳ ಸೀಡಿಯನ್ನು ಬಿಡುಗಡೆಗೊಳಿಸಿ ಶುಭ ಕೋರಿದರು. ಚಿತ್ರವನ್ನು ಕನ್ನಡ, ಹಿಂದಿ ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದ್ದು ಮೂರು ಭಾಷೆಗಳಲ್ಲಿಯೂ ನಟರಾದ ರವಿಕಾಳೆ, ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಈ ಸಂದರ್ಭದಲ್ಲಿ ನಿರ್ದೇಶಕರು ನೀಡಿದರು.
2014-09-28 · Kannada
- Mahesh Babu Endorses Tata Sky Next
Super Star Prince Mahesh Babu is basking under the hype and news Aagadu has been making off late and here he comes again! Earlier seen in Thums Up ads, Mahesh Babu appears now in a Tata Sky Ad. Mahesh will be seen retaking a certain action on a movie set, which ultimately symbolizes the custom packages Tata Sky set top box offers. Watch your favourite star in this powerful ad!
2014-09-24 · Telugu
- MaryKom Super Hit
Mary Kom is an inspiring woman and Priyanka chopra is a talented actress. And yet, by having Chopra portray one of India's sporting icons, the Hindi film industry has perpetuated the old problem it has had with representation
2014-09-24 · Hindi
- Bahaddur to Release In Narthaki
Dhruv Sarja And Radhika Pandit Combo Movie Bahaddur, Which Has Been Recently Creating The Buzz In The Kannada Film Industry, Is Ready To Release. The Main Theater Chosen For The Release Is Nartaki Theater.
2014-09-24 · Kannada
- power star Success Meet
ಪವರ್ ಸ್ಟಾರ್ ಗೆ ದಾಖಲೆಯ ಸ್ವಾಗತ
ಪುನೀತ್ ರಾಜಕುಮಾರ್ ನಾಯಕನಾಗಿ ನಟಿಸಿದ ಪವರ್ ಸ್ಟಾರ್ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅದರ ಖುಷಿಯಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ ಅಪ್ಪು ಜೊತೆಗೆ ತಂಡದ ಬಹುತೇಕರು ಹಾಜರಿದ್ದು ಸಂಭ್ರಮ ಹಂಚಿಕೊಂಡರು. ಚಿತ್ರವನ್ನು ಕರ್ನಾಟಕದಾದ್ಯಂತ ಹಿಂದೆಂದೂ ಬಿಡುಗಡೆಯಾಗದಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಿರುವ ವಿತರಕ ನಾಗಪ್ರಸಾದ್ ಮಾತನಾಡಿ 'ಚಿತ್ರ ಒಂದೇ ವಾರದಲ್ಲಿ ಒಟ್ಟು ಬಜೆಟ್ ನ 70% ದಷ್ಟು ಹಣವನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಿಪೀಟ್ ಆಡಿಯನ್ಸ್ ಸೇರಿ ಒಟ್ಟು 20ಲಕ್ಷ ಪ್ರೇಕ್ಷಕರು ಪ್ರಥಮ ವಾರದಲ್ಲೇ ಚಿತ್ರ ನೋಡಿದ್ದಾರೆ ಎಂಬುದು ಸದ್ಯದ ಮಟ್ಟಿಗೆ ದಾಖಲೆಯ ವಿಚಾರ. ಸದ್ಯದಲ್ಲೇ ಚಿತ್ರ ನಿವ್ವಳ ಲಾಭ ತರುವ ನಿರೀಕ್ಷೆಯಿದೆ' ಎಂದರು. 'ಕೆಲವು ವರ್ಷಗಳ ಹಿಂದೆ ನಾನು ಪುನೀತ್ ಸಿನೆಮಾ ನಿರ್ಮಾಣ ಮಾಡುವ ಯೋಜನೆಯೊಂದಿಗೆ ಉದ್ಯಮಕ್ಕೆ ಬಂದಿದ್ದೆ. ಈಗ ಅವರದೇ ಚಿತ್ರವನ್ನು ವಿತರಣೆ ಮಾಡುವುದರೊಂದಿಗೆ ಆಸೆ ಒಂದು ಹಂತಕ್ಕೆ ನೆರವೇರಿದಂತಾಗಿದೆ ಎಂದರು. ಸಾಮಾನ್ಯ ವಾಡಿಕೆಗೆ ವಿರುದ್ಧವಾಗಿ ನಿರೂಪಕಿ ಪ್ರಥಮದಲ್ಲೇ ಮೈಕನ್ನು ಪುನೀತ್ ಕೈಗೆ ನೀಡಿದಾಗ ಅವರು ಅಚ್ಚರಿಗೊಂಡರೂ ಕೂಡ ಸಾವಾರಿಸಿ ಪವರ್ ಫುಲ್ ಮಾತುಗಳನ್ನಾಡಿದರು. ಮೂಲ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದ ಸೀನು ವೈಟ್ಲರವರ ಅದ್ಬುತವಾದ ಚಿತ್ರಕತೆಯೇ ಇಂದು ಚಿತ್ರ ಯಶಸ್ವಿಯಾಗಲು ಮುಖ್ಯ ಕಾರಣ ಎಂದರು. ಉಳಿದಂತೆ ನಿರ್ದೇಶಕ ಮಾದೇಶ್,ನಿರ್ಮಾಪಕರು, ಸಂಗೀತ ನಿರ್ದೇಶಕರು ಸೇರಿದಂತೆ ತಂಡದ ಪ್ರತಿಯೊಬ್ಬರ ಹೆಸರು ಹೇಳಿ ಅವರೆಲ್ಲರೂ ಚೆನ್ನಾಗಿ ನಟಿಸಿರುವುದರಿಂದ ಚಿತ್ರ ಚೆನ್ನಾಗಿ ಮೂಡಿದೆ ಎಂದರು. ಚಿತ್ರದಲ್ಲಿ ಪುನೀತ್ ನ ಮೇಲಧಿಕಾರಿಯ ಪಾತ್ರದಲ್ಲಿ ನಟಿಸಿದ್ದ ಶಶಿಕುಮಾರ್ ಮಾತನಾಡುತ್ತಾ 'ನಾನು, ನಿರ್ದೇಶಕ ಮಾದೇಶ್ ಕೆವಿ ರಾಜುರ ಶಿಷ್ಯ ವರ್ಗದಲ್ಲಿ ಸೇರುತ್ತೇವೆ. ಚಿತ್ರದಲ್ಲಿ ಪುನೀತ್ ಜೊತೆಗೆ ನಟಿಸುವುದರೊಂದಿಗೆ ಡಾ.ರಾಜಕುಮಾರ್ ರ ಮೂವರು ಮಕ್ಕಳೊಂದಿಗೂ ನಟಿಸಿದಂತಾಗಿದೆ' ಎಂದರು. ಸಾಹಸ ನಿರ್ದೇಶಕ ರವಿ ವರ್ಮ 'ಅಪ್ಪು ಸರ್ ಮತ್ತು ನಿರ್ದೇಶಕ ಮಾದೇಶ್ ಜೊತೆಗೆ ಇದು ನನ್ನ ಮೂರನೇ ಕಾಂಬಿನೇಶನ್ ಚಿತ್ರ' ಎಂದರು. ಚಿತ್ರದಲ್ಲಿ ಹಾಸ್ಯನಟನಾಗಿ ಕಾಣಿಸಿರುವ ರಂಗಾಯಣ ರಘು, ಚಿತ್ರಕ್ಕೆ ಜನಪ್ರಿಯ ಸಾಹಿತ್ಯ ನೀಡಿರುವ ಕವಿರಾಜ್, ಹಾಡುಗಳ ಸೀಡಿಗಳನ್ನು ದಾಖಲೆಯ ಮಟ್ಟದಲ್ಲಿ ಮಾರಾಟ ಮಾಡಿರುವ ಲಹರಿ ಸಂಸ್ಥೆಯ ವೇಲು, ಮನೋಹರ ನಾಯ್ಡು, ಚಿತ್ರದ ನಿರ್ಮಾಪಕರಲ್ಲೋರ್ವರಾದ ಪ್ರವೀಣ್ ಮೊದಲಾದವರು ವೇದಿಕೆಯಲ್ಲಿದ್ದು ಮಾತನಾಡಿ ಸಂಭ್ರಮ ಹಂಚಿಕೊಂಡರು. ಖ್ಯಾತ ನಿರ್ಮಾಪಕರಾದ ಎನ್ ಎಂ ಸುರೇಶ್, ಉಮೇಶ್ ಬಣಕಾರ್, ನಟ ಜೈಜಗದೀಶ್, ಶರತ್ ಲೋಹಿತಾಶ್ವ, ಮೊದಲಾದ ಗಣ್ಯರು ಸಮಾರಂಭದ ಭಾಗವಾಗಿದ್ದರು.
2014-09-09
- Sunny Performs an Item for DK - Sunny Leone's Interview
DK's director Vijay Hampali was at last proud for inviting Sunny Leone and justified his action by saying that "Instead of calling a random Bollywood actress to perform an item number, we have roped in an international star for our song". When asked about her background in gaining 'International Stardom', the producer Rakshitha Prem answered saying, "Everybody deserves a chance to change. Her previous movies might be obscene, but definitely not illegal in the countries they were produced. In our song, we have ensured there is no place for obscenity." These questions transpired on the sets of DK while shooting for the song 'Sheshamma, Sheshamma'. After the shoot, Sunny answered the journalists with a pleasant smile on her face. "After doing Bollywood movies, many suggested that I try South Indian cinema. When I heard the song, I realized the tune was catchy and had a potential to be a hit. I have had the lyrics translated and am dancing to it all day in my caravan", Sunny explained. Shobharaj plays the role of a comedy villain and he is seen in the scene where he brings Sunny to Prem's Adda in the film. Prem is hoping to release the audio on 29th of August and a probable release of the film on his birthday, that is 22nd of October. With her new gained popularity, Sunny is busy for 5 years, which is making it impossible for her to extend her call sheet. A small conversation with Sunny went on as follows: Q: What do you say about your past image? A: I'm not concerned about my past anymore. It is left to individual perception. Q: How is the experience entering Kannada film industry? A: This is my first South Indian film. It's very different here and I'm enjoying a lot. Q: You seem to have lost more weight than before? A: Yes. I only realized that after watching myself on the big screen. This made me to lose weight later. Q: What do you dream for the future? A: I have left my future to be decided by God. I never expected to be a movie star, which happened by itself. I wish to continue in films in the future. Q: Do you have anything as a dream role? A: Yes! I'd love to do a superhero movie, kind of a super woman character! Q: Do you regret your earlier profession? A: Definitely not. Had it not been for that, I wouldn't be here sitting and answering your questions.
2014-08-05 · Kannada
- Pora Audio Released
Janardhan, who had earlier directed movies such as Boyfriend and Anjadiru, has changed his name to 'Amogh'. With the change in name, he is also marking his debut as hero in his directorial 'Pora'. After being shot for the past 2 years, Pora is finally under completion, the witness to which was borne by its audio release. Politicians Dr Shailendra Bellale and Devaraj Shidlaghatta have produced Pora. Ministers Shobha Karandlaje and Bharathi Shetty were there at the venue to convene the audio ceremony. The audio of Pora was released through Lahari Audio. Lahari Velu spoke on the occasion saying that the Censor Board should be consisted of members who are more sensitive towards the film industry and requested Shobha Karandlaje to look into the issue. Shobha Karandlaje asked for a written statement of their request and promised to consult the concerned authorities regarding this, after releasing the CDs. Girish Karnad will be playing the role of a Home Minister in Pora, while producer Dr Shailendra will be playing the role of his son. Actor-director Amogh said that he intended to pass a socially relevant message through the film and sought the support of all. He also thanked for the popularity the song shot in Bidar has already gained. Music director Indrasena, who had earlier composed for Amogh's Boyfriend, will be composing music for Pora, as well as writing the lyrics. Palani Senapathi will be working on the sound design. Soujanya also spoke about her dance for an item number. The stage consisted of guests from the film and political fraternity.
2014-08-05 · Kannada
- Jayatheertha to do a Movie with Sharan
Jayatheertha, who had directed critically acclaimed movies such as Olave Mandara and Tony previously, is aiming at his next film which will star Sharan in the lead role. Slated to be a 100% comedy entertainer, the film is titled 'Bullet Basya', the work for which should begin from November. Bullet Basya was actually a character played by late actor Sudheer in Shankar Nag's C. B. I. Shankar. However, Jayatheertha ruled out any relation between the protagonist of Bullet Basya with Sudheer's character. It is named as such because the protagonist here always rides on a Bullet, with most of his (mis)adventures happening during such rides. Overall, Jayatheertha is hopeful of giving a commercial entertainer after his two experimental and artsy films that did not garner much commercial success, but were high on rave reviews. Source: Prajavani
2014-08-05 · Kannada
- FilmySphere to Promote Vaastu Prakara, Raate, and Love In Mandya at Jain's University
FilmySphere Entertainment Private Limited, after promoting successful movies such as Ugramm, Ulidavaru Kandante, Rose, Oggarane, and many other Kannada movies will be officially getting out in the offline space. On August 6th, FilmySphere will be overseeing the event launch of the Kannada movie Love In Mandya, that stars Sathish Neenasam and Sindhu Loknath as the lead pair. Directed by Arasu Anthare, Love In Mandya's trailers and songs are already a super hit on web media. The event will host a number of cultural and entertaining events, titled 'PULSE', to be held for 3 days at Jain's University in Jayanagar 9th Block, Bangalore. On 7th August, the team from Vaastu Prakara, directed by Yograj Bhat, and acted by Jaggesh, Rakshith Shetty, Parul Yadav, and Jain alumni, Aishani Shetty will be there. Additionally, A. P. Arjun's directorial Raate is also for release, which stars Dhananjaya and Sruthi Hariharan in the lead. Raate and Vaastu Prakara teams are expected to convene the ceremony along with promoting their movies in a grand way amidst a crowd of 10,000 people. Visit here to Join us Tomorrow: https://www.facebook.com/events/1450939378510246/?context=create&source=49
2014-08-05 · Kannada
- Kruthika Jayakumar to be Boxer's Lover
Writer-Director Preetham Gubbi, after Dil Rangeela, is busy working out for Boxer that stars Dhananjaya as a boxer. With all other departments and roles finalized, Preetham was only yet to finalize a heroine for his film. On a recent press meet, he announced the leading lady for his film, as Kruthika Jayakumar. Kruthika, a Bangalore based actress, was last seen in the Telugu remake of Drishyam as 'Victory' Venkatesh's daughter. Kruthika, who is also a good Bharatanatyam dancer, was appreciated for her acting skills in Drishyam which has begun to pour out opportunities in front of her. Kruthika, who will be making her Sandalwood debut with Boxer, is hopeful of creating the same impression here too.
2014-08-05 · Kannada
- Music Directors Do Guest Appearences in Melody
Melody is an upcoming Kannada film directed by Nanjunda. It stars actor-singer Rajesh Krishnan in the lead. The music director of the film is L. N. Shastri. According to the music director, one song in Melody has a host of music directors making guest appearences. Those who will be seen in this song related to social media are Gurukiran, Arjun Janya, Anoop Seelin, V. Nagendra Prasad, Harikrishna, and others. It is not common for music directors to make guest appearences, though it could be rare at times, like Arjun Janya making a cameo in his musical Bhajarangi. Team Melody are planning to release the audio on August 9, which will also have them all present at the venue. Source: Udayavani
2014-08-05 · Kannada
- Shravya to Act in Father Om Prakash Rao's Directorial
Actress Shravya, enjoying the success with her recent flick Rose opposite Ajay Rao, is in the news again since it is reported that she will be acting in a movie directed by her father Om Prakash Rao. Shravya, daughter of actor-director Om Prakash Rao and actress Rekha Das, will be seen opposite Nagashekhar, who will be playing the lead in the movie 'Katte', directed by Om Prakash Rao. Shravya has expressed her happiness to be working with her father, which had been her long standing dream. In an interview with FilmySphere, Shravya had revealed her hardwork and struggle to independently make a mark in the film industry without the influence of her parents, who already have well established careers. Shravya, now that she is well known after the release of rose, is ready to work with her father now. Image and Report Courtesy: Udayavani
2014-08-04 · Kannada
- Record Sales for Ee Dil...Helide Nee Bekantha Audio
Avinash and Shruthi starrer Ee Dil...Helide Nee Bekantha have achieved a record sales in audio CDs, with over 25000 CDs sold in only a span of two months since the audio release. The audio was released in Hotel Citadel of Bangalore which had guests like Srinagara Kitty and Kali Swamy attending the function. Kali Swamy has also performed a guest role by appearing in a song of EDHNB. The lead actor Avinash is the grandson of Kannada's legendary comedian Narasimharaju and lead actress Shruthi is a well known dubbing artist. Srinivasa has directed EDHNB while K. T. M. Sathish has produced it. Sathish Aryan of Akramana and Pade Pade fame has lent music for the film. Owing to the tremendous audio success, the team have celebrated a Silver Disc function in the presence of Dr Ambarish. The director lauded the team's efforts with each individual conrtributing for the sales of the audio.
2014-08-04 · Kannada
- Shivayogi Puttayyajja's Release Stalled
Vijaya Raghavendra starrer Shivayogi Puttayyajja, in which he portrays the saint Puttaraja Gavayi, has been petitioned in Gadag High Court to stop its release by lawyer turned producer Maruthi Jediyavar. According to Maruthi, he had purchased the rights for making the film 'Gaanayogi Pandit Puttaraja Gavayi', but before he started his film, the team led by director Hamsa Vijeth had already completed the film. Questioning the action of the crew of the film, Mr Jediyavar has filed a petition to withhold the release of Shivayogi Puttayyajja. Adding to that, Maruthi was also hoping of roping in director Nagabharana to direct the film for him. Meanwhile, the producer of Shivayogi Puttayyajja, Shyam, has reacted by saying that he would answer all related questions in the court. Image and News Source: Udayavani
2014-08-04 · Kannada
- Yarige Idly, A New Comedy by Yashwant Sardeshapande
Actor director Yashwant Sardeshapande had previously directed a Kannada comedy 'Idya Maadyaara Nagalikka' in the North Karnataka dialect. With his previous success, he is making another movie this time, but with a suggestively controversial title, that reads 'Yarige Idly'. As the director says, it is about a boy who sells 'Idly's for a living. Idly is a popular South Indian dish mainly consumed as breakfast or evening snack. Despite the potential for a derogatory understanding of the title, Yashwant wants to go ahead with the title unless it garners too much negative response. Like his earlier films, Yaarige Idly could be made in the North Karnataka dialect too. Newbies Vishwajit and Megha Shenai are playing lead along with Doddanna, Avinash, Girija Lokesh, Suchendra Prasad, Ramesh Pandit, Rangayana Raghu and others. Image and News Source: Udayavani
2014-08-04 · Kannada
- Haack to be Edited by Ugramm Editor Srikanth
Srikanth, who edited Sri Murali's blockbuster Ugramm, was commended for his crisp editing work, which also involved the efforts of colleague Yathish and director Prashanth Neel. Recently, Duniya Rashmi was in news for her new makeover and a new movie in the making, which is named 'Haack'. Slated to be science fiction thriller according to the makers of Haack, latest news is that Haack will be edited by Ugramm editor Srikanth. Haack is the creation of Dot Talkies which is directed by National Award Winner Rishi Kesh. A team of 150 youngsters and software engineers are involved in the making of Haack Kannada movie.
2014-08-04 · Kannada
- Remya Nambeesan to Act in Style King
Malayali beauty Remya Nambeesan, who has acted in popular South Indian movies before, is now making her debut in Kannada with Ganesh's Style King. Remya was initially supposed to make her debut opposite Ajay Rao years before, but due to other factors, she was ruled out from the film. Remya, who is not only a good actor, but also a good singer, will be paired opposite Golden Star and might also sing for Style King, we'd never know! Style King will be Remya's 50th film, directed by P. C. Shekhar. After Romeo, Style King will be the second project together for Ganesh and P. C. Shekhar. Source: Udayavani
2014-08-04 · Kannada
- Kriti Not Part of Sanju Weds Geetha 2
Kriti Kharbanda, the Delhi based beauty who was in the news rounds as being chosen to play the lead in Nagashekhar's Sanju Weds Geetha 2, opposite himself, has denied that she will be acting in it by mentioning on her facebook wall. Kriti had written "Sanju weds geeta-2 is a beautiful script. Sure to touch many hearts. Unfortunately,I can't be a part of the project.Wishing nagashekar sir.. And the rest of the team, the very best! I know this movie is gonna change many lives I had never signed the movie to drop it. I had only heard the script and I really liked it. But unfortunately things didn't work out. Nothing more. Nothing less. If and when I sign a movie I'll announce it myself. Don't go by what people say. I always speak for myself." (sic) This will put Nagashekhar at the end of the question as to who would take the final call to play the leading lady.
2014-08-01 · Kannada
- Lip Stick Kannada Movie Launched
Director Umesh S, who was earlier a lecturer, always had a passion to make a film, which is approaching fruition with his debut directorial Lip Stick. Umesh has completed Diploma in Filmmaking and has already worked in some Kannada and Hindi movies before venturing out into direction. According to Umesh, Lip Stick, as the name itself suggests, is a women centric film and has a set of lead actresses carrying the story forward. The incidents take place in Bangalore. When asked who is the 'hero' and 'villain' in the movie, the director quotes 'Bangalore itself is the hero and villain in the movie'. The film is produced by Ultimate Pictures banner with Govindaraj handling cinematography and Charan composing music. Source: Udayavani
2014-08-01 · Kannada
- Kolara, a Biopic on Thangam, Release First Look
About 15 years ago, Kolar district found relief from a notorious rowdy sheeter Thangam who ruled the streets of Kolar Gold Fields (KGF). His atrocities and rivalries reached a peak, which was when he was encountered by the police. When things have been forgotten long, memories still haunt sending shivers among those who have borne his brunt. Director Mahesh, who had earlier directed 'Slum', is coming back with 'Kolara', a biopic on Thangam with Yogesh playing the lead. Thangam's brothers will be played by 'Sanchari' Raj, 'Bhagyaraj' Mahesh, who is also Yogesh's elder brother, 'Loki' Vishwa, and '10th Class' Pruthvi. Kalyani will act as Yogesh's mother while Bhajarangi Lokesh and Tilak will be the villains. Shobharaj will also be seen as the town councillor along with Sampath Raj, who will act as the inspector. August 8th will mark the start of shooting in and around KGF. Image and Report Source: Udayavani
2014-07-30 · Kannada
- Sudeep Lends Voice for Aryan Kannada Movie
Kiccha Sudeep and Shivarajkumar were believed to be in a tiff, but the recent news has put an end to all such rumours and has proven that the two actors are on friendly terms. Witness to this event, Sudeep has lent his voice to Shivanna's upcoming sports drama Aryan, which also has Sandalwood Queen Ramya playing the lead role. Despite the actors patching up, their fans are still involved in blind fighting in the race for who is supreme. Sudeep, who has also narrated for Krantiveera Sangolli Rayanna and Shravani Subramanya before, will be heard narrating for about 4-5 minutes in the start of Aryan. Only the fans need to calm down and hope for more surprises from their favourite heroes.
2014-07-29 · Kannada
- Dr Rajkumar's Classics to be Revived Digitally
When Bollywood's Mughal-E-Azam was re-released a decade ago in Color and DTS sound, Kannada industry answered back with colouring Dr Rajkumar's classic, Satya Harishchandra. After that, more movies came under the color grading monitor such as Dr Raj's Nanobba Kalla, Kashinath's Anubhava, and recently, Dr Vishnuvardhan's Khaidi. As we have known, Kasturi Nivasa is also getting freshly painted in colour. Also, Dr Rajkumar's Operation Diamond Racket is also getting coloured, which holds fame for being one of the very few Bond style movies produced in Kannada. Distributor Muniraju expresses his wish in digitizing all movies of Dr Rajkumar as these are a symbol of the history and legacy of Kannada cinema. He also reiterated that digitization of classics helps in their storage for future generations, which, otherwise, would be damaging to the original film over a period of time.
2014-07-29 · Kannada
- Dhananjaya Now, in and as, Allama
Actor Dhananjaya, who is now waiting for the release of Raate, and currently shooting Boxer and Vijayaaditya, has also signed up for another historical biopic on 12th century Karnataka's mystic saint and a Vachana poet, Allama Prabhu. Off late, historical epics are increasing in Kannada cinema, with Sangolli Rayanna breaking box office records. However, Allama is more of a biopic that shows the lifetime of Allama Prabhu, as enacted by Dhananjaya, and will be directed by T. S. Nagabharana. Nagabharana had earlier directed movies such as Santa Shishunala Sharifa, Mysore Mallige, and Nagamandala. Flutist Bapu Padmanabh will be directing music for the first time with Allama. Industrialist Hari Khoday will be producing Allama on the lines of producing Nagabharana's earlier three movies. Image and News Source: Udayavani
2014-07-29 · Kannada