Skip to content
FilmySphere

From the earlier FilmySphere, kept as published on 2014-09-29. It has not been updated.

Sudeep to combine with Millana Prakash

ಕಿಚ್ಚ ಸುದೀಪ್ ಮತ್ತು ಮಿಲನ ಪ್ರಕಾಶ್ ಸಮ್ಮಿಲನ

Kannada

ಕಿಚ್ಚ ಸುದೀಪ್ ನಾಯಕನಾಗಿ ಹೊಸ ಕನ್ನಡ ಚಿತ್ರವೊಂದು ತಯಾರಾಗುತ್ತಿದೆ. ಹೋಟೆಲ್ ಉದ್ಯಮದಲ್ಲಿ ಹೆಸರು ಮಾಡುತ್ತಿರುವ ವಾಣಿ ಶ್ರೀ ಮತ್ತು ರಘುನಾಥ್ ದಂಪತಿ ತಮ್ಮ ಹೆಸರಿನ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಈಗಾಗಲೇ "ಆ್ಯಕ್ಸಿಡೆಂಟ್" ಹೆಸರಿನ ಸದಭಿರುಚಿಯ ಚಿತ್ರವನ್ನು ನಿರ್ದೇಶಿಸಿದ ರಘುನಾಥ್ ಈ ಬಾರಿ ತಮ್ಮದೇ ಬ್ಯಾನರ್ ಲಾಂಚ್ ಮಾಡುತ್ತಿದ್ದು, ಅದಕ್ಕೆ ಎಸ್ ಆರ್ ವಿ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದಾರೆ. ಅಂದರೆ ಶ್ರೀ ರಘು ವಾಣಿ ಎಂಬ ಅರ್ಥ ಹೊಂದಿರುವುದಾಗಿ ಅವರು ತಿಳಿಸಿದರು. ಚಿತ್ರದ ಬಗ್ಗೆ ಹೆಚ್ಚಿನ ವಿವರಣೆಗಳು ಅಲ್ಲಿರಲಿಲ್ಲ. ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರಕಾಶ್ ಜಯರಾಮ್ ಮಾತನಾಡಿ ಹೊಸ ಬ್ಯಾನರ್ ಗೆ ಮತ್ತು ದಂಪತಿಗೆ ಶುಭ ಹಾರೈಸಿದರು. ಶಂಕರ್ ಪ್ರಕಾಶ್ ಮತ್ತು ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಪ್ರಕಾಶ್ ಸುದೀಪ್ ಚಿತ್ರವನ್ನು ತಾವೇ ನಿರ್ಮಿಸಿ ನಿರ್ದೇಶಿಸಲು ಬಯಸಿದ್ದರಂತೆ. ಆದರೆ ಸುದೀಪ್ ಈ ಹೊಸ ಬ್ಯಾನರ್ ನ ಪರಿಚಯ ಮಾಡಿಸಿಕೊಡುವ ಮೂಲಕ ಮುಂದಿನ ವರ್ಷಕ್ಕೆ ದೊಡ್ಡ ಮಟ್ಟದ ಚಿತ್ರದ ನಿರೀಕ್ಷೆ ಮೂಡಿಸಿದ್ದಾರೆ. ಬಳಿಕ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆರ್ಕೆಸ್ಟ್ರಾದಲ್ಲಿ ಗಾಯಕರಾದ ರಾಜೇಶ್ ಕೃಷ್ಣನ್, ಹೇಮಂತ್ ಮೊದಲಾದವರಿಂದ ಹಾಡುಗಳ ಸಂಭ್ರಮವಿತ್ತು. ಪ್ರಿಯಾ ಸುದೀಪ್ ನೇತೃತ್ವದ ಸ್ಟೇಜ್ 360ಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುದೀಪ್ ತಂದೆ ಸರೋವರ್ ಸಂಜೀವ್, ಮಗಳು ಸಾನ್ವಿ ಮೊದಲಾದವರು ಪಾಲ್ಗೊಂಡಿದ್ದರು.