Skip to content
FilmySphere

From the earlier FilmySphere, kept as published on 2014-09-28. It has not been updated.

Patharagitthi Audio Released

ಪಾತರಗಿತ್ತಿ ಆಡಿಯೋ ಸೀಡಿ ಬಿಡುಗಡೆ

Kannada

ಶ್ರೀಕಿ ನಾಯಕನಾಗಿ ನಟಿಸುತ್ತಿರುವ ಪಾತರಗಿತ್ತಿ ಚಿತ್ರದ ಆಡಿಯೋ ಸೀಡಿ ಬಿಡುಗಡೆಯಾಗಿದೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದ ಮೂರು ಹಾಡುಗಳ ಪ್ರದರ್ಶನವೂ ನಡೆಯಿತು.

ಚಿತ್ರದ ನಿರ್ದೇಶಕ ಈಶ್ವರ್ ಆರಂಭದಲ್ಲೇ ಸೂಚಿಸಿದ ಹಾಗೆ ಹಾಡುಗಳಿಗೆ ಸಂಗೀತ ನೀಡಿದ ವೆಂಕಟ್ ಸ್ವಾಮಿ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದು, ಅವರು ಅರಂಭವನ್ನಷ್ಟೇ ನೀಡಿದ್ದ ಟ್ಯೂನ್ ಗಳಿಗೆ ಪೂರಕ ಸಂಯೋಜನೆಯನ್ನು ಸಮೀರ್ ಕುಲಕರ್ಣಿ ಮಾಡಿ ಮುಗಿಸಿದ್ದಾರೆ. ಹಾಗಾಗಿ ಇಬ್ಬರ ಹೆಸರನ್ನೂ ಸಂಗೀತ ನಿರ್ದೇಶಕರ ಸ್ಥಾನದಲ್ಲಿ ಪ್ರಕಟಿಸಲಾಗಿದೆ. ಅದೇ ರೀತಿ ಚಿತ್ರದ 6 ಹಾಡುಗಳ ಪಲ್ಲವಿಯನ್ನು ಸ್ವತಃ ಬರೆದು ಹಾಡು ಆರಂಭಿಸಿದ್ದ ವೆಂಕಟ್ ಸ್ವಾಮಿಯ ಸಾಹಿತ್ಯಕ್ಕೆ ಬಳಿಕದ ಸಾಲು ಮತ್ತು ಎರಡು ಹಾಡುಗಳನ್ನು ಬರೆದು ಜೊತೆಯಾಗಿರುವುದು ನಿರ್ದೇಶಕ ಈಶ್ವರ್. ಈ ಹಾಡುಗಳು ಆಡಿಯೋ ಮಾತ್ರ ಕೇಳುವಾಗ ಒಂದು ಅರ್ಥ ನೀಡಿದರೆ, ಪರದೆಯ ಮೇಲೆ ಇನ್ನಷ್ಟು ಅರ್ಥವ್ಯಾಪ್ತಿ ಹಿಗ್ಗುವಂತೆ ತೋರುತ್ತದೆ ಎಂದು ನಿರ್ದೇಶಕ ಈಶ್ವರ್ ಹೇಳಿದರು. ಶಕೀಲ ಕುಣಿದಿರುವ ಹಾಡು ಇದ್ದರೂ ಅದು ತೀರಾ ತಳಮಟ್ಟದ ಐಟಂ ಸಾಂಗ್ ಆಗಿರುವುದಿಲ್ಲ ಎಂದು ಅವರು ತಿಳಿಸಿದರು. ಬಳಿಕ ಮಾತನಾಡಿದ ನಾಯಕ ಶ್ರೀಕಿ ತಾನು ಇದುವರೆಗೆ ಹಾಕಿರದಂಥ ಹೆಜ್ಜೆಗಳನ್ನು ಹಾಕಲು ನೃತ್ಯ ನಿರ್ದೇಶಕರಾದ ಮದನ್, ಹರಿಣಿಯವರಿಂದಲೇ ಸಾಧ್ಯವಾಗಿದೆ ಎಂದರು. ನಾಯಕಿ ಪ್ರಜ್ಜು ಪೂವಯ್ಯ ಚಿತ್ರದ ಹಾಡೊಂದರಲ್ಲಿ ನಿರ್ದೇಶಕರು ಕೂಡ ಕಾಣಿಸಿದ್ದಾರೆ ಎಂಬ ಸತ್ಯವನ್ನು ಹೊರಗಿಟ್ಟರು. ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಮತ್ತು ಆನೇಕಲ್ ಬಾಲರಾಜ್ ಅತಿಥಿಗಳಾಗಿ ಬಂದು ಸೀಡಿ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭಕೋರಿದರು. ತಂಡದ ಸಮೀರ್ ಕುಲಕರ್ಣಿ, ಮಂಜುನಾಥ್, ರಾಕೇಶ್ ಮೊದಲಾದವರೊಂದಿಗೆ ನಟಿಯರಾದ ನೇಹಾ ಪಾಟೀಲ್, ಮಾನಸಿ ಉಪಸ್ಥಿತರಿದ್ದರು. ಹಾಡುಗಳನ್ನು ಕಂಡಾಗ ಕೊರಿಯಾಗ್ರಫಿ ಮತ್ತು ಛಾಯಾಗ್ರಹಣ ವಿಪರೀತ ಗಮನ ಸೆಳೆದಿದ್ದು ನಿಜ.