From the earlier FilmySphere, kept as published on 2014-09-28. It has not been updated.
Home Stay Audio Released
ಹೋಮ್ ಸ್ಟೇ ಚಿತ್ರದ ಆಡಿಯೋ ಬಿಡುಗಡೆ
Kannada
ಹೋಮ್ ಸ್ಟೇ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವು ಗಾಂಧಿನಗರದ ಬೆಲ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಚಿತ್ರದ ನಾಯಕಿ ಬಾಲಿವುಡ್ ಬೆಡಗಿ ಸಯ್ಯಾಲಿ ಭಗತ್ ಸೇರಿದಂತೆ ನಟಿ ಮಾನಸಿ, ಬಹುಭಾಷಾ ನಟ ಅಶೋಕ್, ಸಾಹಿತಿ ನಾಗೇಂದ್ರ ಪ್ರಸಾದ್ ನಿರ್ಮಾಪಕರಾದ ಮಿರಾಕಲ್ ಮೂವೀಸ್ ನ ಸಿದ್ಧು, ನಿರ್ದೇಶಕ ಸಂತೋಷ್ ಕೊಡೆಂಕಿರಿ ಮೊದಲಾದವರು ಉಪಸ್ಥಿತರಿದ್ದರು. ಪರಮಶಿವ ಚಿತ್ರದ ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕ ಜೋಡಿಗಳಾದ ಮಹೇಶ್ ಬಾಬು ಮತ್ತು ಅಣಜಿ ನಾಗರಾಜ್ ಅತಿಥಿಗಳಾಗಿ ಆಗಮಿಸಿ ಚಿತ್ರದ ಹಾಡುಗಳ ಸೀಡಿಯನ್ನು ಬಿಡುಗಡೆಗೊಳಿಸಿ ಶುಭ ಕೋರಿದರು. ಚಿತ್ರವನ್ನು ಕನ್ನಡ, ಹಿಂದಿ ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದ್ದು ಮೂರು ಭಾಷೆಗಳಲ್ಲಿಯೂ ನಟರಾದ ರವಿಕಾಳೆ, ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಈ ಸಂದರ್ಭದಲ್ಲಿ ನಿರ್ದೇಶಕರು ನೀಡಿದರು.