Skip to content
FilmySphere

From the earlier FilmySphere, kept as published on 2014-09-30. It has not been updated.

Chinni Chinni Aase Inaguration

ಚಿನ್ನ ಚಿನ್ನ ಆಸೆಗೆ ಮುಹೂರ್ತ

Kannada

ಡಿ.ರಾಜೇಂದ್ರ ಬಾಬು ಮತ್ತು ಕ್ರೇಜಿಸ್ಟಾರ್ ವಿ.ರವಿಚಂದ್ರನ್ ರ ಬಳಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ರುದ್ರಮುನಿ ಪ್ರಥಮ ಬಾರಿ ಸ್ವತಂತ್ರ ನಿರ್ದೇಶನಕ್ಕೆ ಧುಮುಕಿರುವ ಚಿತ್ರವೇ 'ಚಿನ್ನ ಚಿನ್ನ ಆಸೆ'. ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಜರಗಿತು.

ನಿರ್ದೇಶಕ ರುದ್ರಮುನಿಯ ಪ್ರಕಾರ ಇದೊಂದು ಲವ್ ಸ್ಟೋರಿ ಬೇಸ್ಡ್ ಸಿನೆಮಾ. ನಾಯಕ ಮದರಂಗಿ ಕೃಷ್ಣ. ಹಿಲ್ ಸ್ಟೇಷನ್ ಒಂದರೆಡೆಗೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಂಭವಿಸುವ ಕತೆಯಿದು. ಚಿತ್ರದಲ್ಲಿ ಮೂವರು ನಾಯಕಿಯರು. ಅವರಲ್ಲಿ ಯಾರಿಗೆ ಕೃಷ್ಣ ಒಲಿಯುತ್ತಾನೆ ಎಂಬುದು ಕ್ಲೈಮ್ಯಾಕ್ಸ್. ಮೂವರು ನಾಯಕಿಯರಾಗಿ ನಟಿಸುತ್ತಿರುವ ಮೀನಾಕ್ಷಿ ದೀಕ್ಷಿತ್, ಸಂದೀಪ್ ವಿರಿಕು ಮತ್ತು ನರ್ಹೋನ್ಹಾ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಖುಷಿ ವ್ಯಕ್ತಪಡಿಸಿದರು. ಕೃಷ್ಣ ತಮ್ಮದು ಲವ್ವರ್ ಬಾಯ್ ಪಾತ್ರ ಎಂದರು. ಭಜರಂಗಿ ಲೋಕಿ ಚಿತ್ರದಲ್ಲಿ ಮುಖ್ಯ ಖಳನಾಗಿ ನಟಿಸುವುದರೊಂದಿಗೆ ಮದರಂಗಿ ವರ್ಸಸ್ ಭಜರಂಗಿ ಹೊಡೆದಾಟಗಳನ್ನು ನಿರೀಕ್ಷಿಸಬಹುದಾಗಿದೆ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸುಚೇಂದ್ರ ಪ್ರಸಾದ್ ತಮಗೊಂದು ಪಾತ್ರವಿದೆ ಎಂದು ಗೊತ್ತು ಯಾವ ರೀತಿಯಲ್ಲಿರುತ್ತದೆ ಎಂಬ ಬಗ್ಗೆ ಮಾಹಿತಿಗಳಿಲ್ಲ ಎಂದರು. ಕೇಶವಾದಿತ್ಯ ಮೊದಲಬಾರಿ ತಾವು ಪ್ರೇಮ ಚಿತ್ರವೊಂದಕ್ಕೆ ಸಂಭಾಷಣೆ ಬರೆಯುತ್ತಿರುವುದಾಗಿ ತಿಳಿಸಿದರು. ಅರ್ಜುನ್ ಜನ್ಯಾ ಸಂಗೀತದಲ್ಲಿ 5 ಹಾಡುಗಳಿದ್ದು ಜಯಂತ್ ಕಾಯ್ಕಿಣಿ ಮತ್ತು ನಾಗೇಂದ್ರ ಪ್ರಸಾದ್ ಸಾಹಿತ್ಯ ನೀಡಲಿದ್ದಾರೆ. ಸಿನೆಮಾದ ಚಿತ್ರೀಕರಣವನ್ನು ಮೂರು ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಂಗಲೂರು ಸೇರಿದಂತೆ ದೂಧ್ ಸಾಗರ್ ಮತ್ತು ಕುಮುಟಾದಲ್ಲಿಯೂ ಚಿತ್ರೀಕರಣ ನಡೆಯಲಿರುವುದಾಗಿ ತಿಳಿಸಿದ್ದಾರೆ.