Archive.
News and reviews from the earlier FilmySphere, 2013 to 2019. They are kept as they were published and are not updated. For current stories, see the journal.
- Review of Abhinetri
ಅಭಿನೇತ್ರಿ ಸಿನೆಮಾ ವಿಮರ್ಶೆ ಕತೆ ಕಲ್ಪನಾಳದ್ದೇ ಖಾತ್ರಿ! ಕೊನೆಗೂ ನಟಿ ಕಲ್ಪನಾರ ಜೀವನ ಚರಿತ್ರೆಯನ್ನು ತೊಂಬತ್ತರಷ್ಟು ಹೋಲುವಂತೆ ಸ್ವತಃ ತಯಾರಿಸಿದ ಚಿತ್ರದೊಂದಿಗೆ ಪೂಜಾ ತೆರೆಗೆ ಬಂದಿದ್ದಾರೆ. ಚಿತ್ರದಲ್ಲಿ ಪೂಜಾ ಹೆಸರು ನಂದಾ. ಆಕೆ ಮಂಗಳೂರು ಮೂಲದ ಹುಡುಗಿ. ಹುಬ್ಬಳ್ಳಿಯಿಂದ ನಾಟಕ ನಟಿಯಾಗಿ ರಂಗ ಪ್ರವೇಶ. ಅದರ ಮಾಲಕನ ಮೂಲಕ ಚೆನ್ನೈಗೆ ಹೋಗಿ ಕನ್ನಡದ ಸಿನೆಮಾ ನಟಿಯಾಗಿ ಆಯ್ಕೆ. ಸ್ಟಾರ್ ನಟಿಯಾಗಿ ಬೆಳೆದ ಬಳಿಕ ಆರಂಭದಲ್ಲಿ ತನ್ನನ್ನು ಅವಮಾನಿಸಿದವರಿಗೆ ಪ್ರತೀಕಾರ ಮಾಡುವುದರಲ್ಲೇ ತಲ್ಲೀನೆ; ಮುಂಗೋಪಿ. ಅದರಿಂದಾಗಿಯೇ ಇರುವ ಅವಕಾಶ ಕಳೆದುಕೊಂಡು ಮರಳಿ ನಾಟಕ ರಂಗಕ್ಕೆ. ಅಲ್ಲಿ ಅದರ ಮಾಲಕನೊಂದಿಗೆ ಪ್ರೇಮ. ಕೊನೆಯಲ್ಲಿ ನಿಗೂಢ ರೀತಿಯಲ್ಲೊಂದು ಆತ್ಮಹತ್ಯೆ. ಇವೆಲ್ಲವೂ ಕಲ್ಪನಾ ಬದುಕಿನಲ್ಲಿ ನಡೆದಿದೆಯೆಂದು ಹೇಳಲಾಗಿರುವ ಘಟನೆಗಳು. ಅಂದಿನ ಕಾಲದ ಕ್ಯಾಮರ, ಕಾಸ್ಟ್ಯೂಮ್ಸು ಮತ್ತು ಒಂದೆರಡು ವಾಹನಗಳನ್ನು ತೋರಿಸಿದ್ದು ಬಿಟ್ಟರೆ ಹಳೆಯ ಶೈಲಿಯಲ್ಲಿನ ನೃತ್ಯ ಚಿತ್ರೀಕರಣ ಸೇರಿದಂತೆ ಹಲವಾರು ಆಕರ್ಷಕ ಅಂಶಗಳನ್ನು ತೋರಿಸುವ ಸಾಧ್ಯತೆಯಿದ್ದರೂ ನಿರ್ದೇಶಕರು ಬಳಸಿಲ್ಲವೆನ್ನಬಹುದು. ಕಲ್ಪನಾ ಎಂಬ ಹೆಸರನ್ನು ಹೇಳದಿದ್ದರೂ ಆಕೆಯದೇ ಕತೆಯೆಂಬ ಭಯದಿಂದಲೋ ಏನೋ ಆಕೆಯ ಬಗೆಗಿನ ಅಸ್ಪಷ್ಟ ಮಾಹಿತಿಗಳನ್ನು ಹಾಗೆಯೇ ಉಳಿಸಲಾಗಿದೆ. ಆಕೆಯದೆಂದು ಗುರುತಿಸಬಹುದಾದ ಒಂದು ಸಾಧನೆಯನ್ನೋ, ಸ್ವಭಾವವನ್ನೋ ಹೈಲೈಟ್ ಮಾಡದೆ ಬರೇ ಘಟನೆಗಳ ಗೊಂಚಲನ್ನಾಗಿಸಲಾಗಿದೆ. ಕಲ್ಪನಾ ಬಗ್ಗೆ ತಿಳಿದಿರದ ಅನ್ಯ ಪ್ರೇಕ್ಷಕರು ಚಿತ್ರವನ್ನು ಕಂಡಾಗ ಈ ಕತೆಯನ್ನು ಯಾಕೆ ಆಯ್ದುಕೊಂಡರೆಂದೇ ಅರ್ಥವಾಗದು! ನಾಯಕಿಯಾಗಿ ದಪ್ಪ ಮೈಯ ಪೂಜಾ ಬಳ್ಳಿ ಮೈಯ ಕಲ್ಪನಾರ ಕಲ್ಪನೆಯನ್ನೇ ಮೂಡಿಸುವುದಿಲ್ಲ. ಹೇಗೋ ಘಟನೆಗಳ ಮೂಲಕ ಇದು ಆಕೆಯದೇ ಪಾತ್ರವೆಂದು ಅಂದುಕೊಳ್ಳುತ್ತಿದ್ದ ಹಾಗೇ ಪೂಜಾರ ಕಂಠದಿಂದ ಹೊಮ್ಮುವ ವಿಭಿನ್ನ ಸ್ಲ್ಯಾಂಗ್ ನ ಸಂಭಾಷಣೆ ನಮ್ಮನ್ನು ಮತ್ತೆ ಪೂಜಾ ಬಳಿಗೇ ಎಳೆದು ತರುತ್ತದೆ. ಆದರೂ 'ನಾ ಬಂದೇ..'ಎಂದು ಹೇಳುವಲ್ಲಿನ ಪೂಜಾರ ಕನ್ನಡದ ಪ್ರಯತ್ನವನ್ನು ಖಂಡಿತಾ ಶ್ಲಾಘಿಸಬಹುದು. ಚಿತ್ರದ ಮಧ್ಯಂತರದ ವೇಳೆಗೆ ಪಡೆಯಪ್ಪದ ನೀಲಾಂಬರಿಯೇ ಮೈಮೇಲೆ ಬಂದಂತಾಡುವ ಪೂಜಾರ ಅಭಿನೇತ್ರಿ ಪ್ರೇಕ್ಷಕನಿಗೆ ನಿರಾಶೆ ಮೂಡಿಸಿದರೂ ಬಳಿಕ ಬರುವ ರವಿಶಂಕರ್ ಪಾತ್ರದಿಂದಾಗಿ ಚಿತ್ರಕ್ಕೆ ಒಂದಷ್ಟು ಜೀವಕಳೆ ತುಂಬುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಉಳಿದಂತೆ ಅತುಲ್ ಕುಲಕರ್ಣಿ ಪಾತ್ರವೂ ಡಮ್ಮಿ. ಮಕರಂದ್ ದೇಶಪಾಂಡೆಯನ್ನು ಹೊರತು ಪಡಿಸಿ ರಮ್ಯಾ ಬಾರ್ನ, ಸಂಜನಾ ಗಾಂಧಿ, ಶ್ರೀನಗರ ಕಿಟ್ಟಿ ಹೀಗೆ ಯಾರಿಗೂ ನೆನಪಲ್ಲಿ ಉಳಿಯುವ ದೃಶ್ಯಗಳಿಲ್ಲ. ಮನೋ ಮೂರ್ತಿ ಸಂಗೀತದಲ್ಲಿ ಒಂದೆರಡು ಹಾಡುಗಳು ಮೆಲುಕು ಹಾಕುವಂತಿವೆ. ವಿಭಿನ್ನ ಚಿತ್ರವೊಂದನ್ನು ನೋಡಬಯಸುವವರು, ಕಲ್ಪನಾ ಪ್ರೇಮಿಗಳು ಖಂಡಿತಾ ಒಮ್ಮೆ ನೋಡಬೇಕಾದ ಚಿತ್ರವಿದು.
2015-01-31 · FilmySphere critic
- Review of Siddhartha
ಸಿದ್ದಾರ್ಥ ಚಿತ್ರ ವಿಮರ್ಶೆ ಲವಲವಿಕೆಯ ಯೂತ್ ಲವ್ ಸ್ಟೋರಿ ಹಾಗೆ ಸಿದ್ಧಾರ್ಥ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ದಿಗ್ಗಜ ಡಾ.ರಾಜಕುಮಾರ್ ರ ಮೂರನೇ ತಲೆಮಾರಿನ ಪ್ರಥಮ ನಾಯಕ ಕೂಡ ತೆರೆಗೆ ಬಂದಿದ್ದಾರೆ. ಅದೊಂದು ಕಾರಣವೇ ಚಿತ್ರಕ್ಕೆ ಬಾನೆತ್ತರದ ನಿರೀಕ್ಷೆಯನ್ನುಂಟುಮಾಡಿತ್ತು. ಚಿತ್ರದಲ್ಲಿ ನಾಯಕ ಕಾಲೇಜ್ ವಿದ್ಯಾರ್ಥಿ. ತಂದೆಯನ್ನಷ್ಟೇ ಹೊಂದಿರುವ ಮಧ್ಯಮ ವರ್ಗದ ಹುಡುಗ. ನಾಯಕಿ ಚಿತ್ರಕಲಾ ಶಾಲೆಯ ವಿದ್ಯಾರ್ಥಿನಿ. ಅಲ್ಲಿಗೆ ರೂಪದರ್ಶಿಯಾಗಿ ಹೋಗಿ ನಾಯಕಿಯ ರೂಪಕ್ಕೆ ಮಾರುಹೋಗುತ್ತಾನೆ. ಆಕೆಯನ್ನು ಒಪ್ಪಿಸಿದಷ್ಟೇ ಉಪಾಯದಲ್ಲಿ ಆಕೆಯ ಶ್ರೀಮಂತ ತಂದೆಯನ್ನೂ ಒಪ್ಪಿಸುತ್ತಾನೆ. ಹಾಗಾದರೆ ಇವರ ಲವ್ ಸ್ಟೋರಿಗೆ ವಿಲ್ಲನ್ಸ್ ಯಾರು? ಅದು ಅವರೇ ತಮ್ಮ ಪ್ರೀತಿಯ ನಡುವೆ ಹಾಕಿಕೊಳ್ಳುವ ಅಂತರ! ನಾಯಕ ಆಕೆಯಿಂದ 20ದಿನ ದೂರಾಗಿದ್ದು ಗೆಳೆಯರೊಂದಿಗೆ ಕಳೆಯಲೆತ್ನಿಸುತ್ತಾನೆ. ಆದರೆ ಆ ದಿನಗಳಲ್ಲಿ ಆತ ಇತರ ಹುಡಗಿಯರೊಂದಿಗೆ ಬೆಳೆಸಿದ ಗೆಳೆತನ ಕಂಡು ನಾಯಕಿ ರೋಸಿ ಹೋಗುತ್ತಾಳೆ. ಆತನಿಂದ ಒಂದು ವರ್ಷ ಗ್ಯಾಪ್ ತೆಗೆದುಕೊಂಡು ವಿದೇಶಕ್ಕೆ ಹೋಗುತ್ತಾಳೆ. ಅಲ್ಲಿಂದ ಮರಳುವಾಗ ಆಕೆಯೊಂದಿಗೆ ಒಬ್ಬ ಹುಡುಗನಿರುತ್ತಾನೆ. ನಾಯಕನನ್ನು ಅವಾಯ್ಡ್ ಮಾಡಿ ಆತನನ್ನೇ ಮದುವೆಯಾಗಹೊರಡುತ್ತಾಳೆ. ಆದರೆ ಮದುವೆ ಯಾರೊಂದಿಗೆ ಆಗುತ್ತದೆ ಎಂಬುದು ಕ್ಲೈಮ್ಯಾಕ್ಸ್. ನಾಯಕನಾಗಿ ವಿನಯರಾಜ್ ಗಮನ ಸೆಳೆಯವುದಿಲ್ಲ. ಲವಲವಿಕೆಯ ದೃಶ್ಯಗಳು ಸಂಭಾಷಣೆಯಿಂದ ಮಾತ್ರವೇ ಆಕರ್ಷಕವೆನಿಸುತ್ತದೆ! ಆದರೆ ಆತನ ಮಾತಿನ ಶೈಲಿಯಲ್ಲಿ ಪುನೀತ್ ರೀತಿ ಮತ್ತು ಕಂಠದಲ್ಲಿ ಬೇಸ್ ಎದ್ದು ಕೇಳಿಸುವುದು ಗ್ರೇಸ್. ನಾಯಕಿ ಅಪೂರ್ವ ಅರೋರಾ ಮೆಚ್ಚುವಂಥ ನಟನೆ ನೀಡಿದ್ದಾರೆ. ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್, ನಾಯಕಿಯ ತಂದೆಯಾಗಿ ಅಶೀಷ್ ವಿದ್ಯಾರ್ಥಿಯ ಪಾತ್ರಗಳು ಪ್ರೇಕ್ಷಕರಲ್ಲಿ ನಗು ತರಿಸುವಲ್ಲಿ ಯಶಸ್ವಿಯಾಗುತ್ತದೆ. ಅಶೀಷ್ ವಿದ್ಯಾರ್ಥಿಯ ಪಾತ್ರ ಬರುವವರೆಗೆ ಚಿತ್ರ ಆಸಕ್ತಿಯನ್ನೇ ಮೂಡಿಸದು. ನಿಖಿ ಗಲ್ರಾನಿಯ ಗೆಸ್ಟ್ ಅಪಿಯರೆನ್ಸು ಚೆನ್ನಾಗಿದೆ. ಸಾಧು ಕೋಕಿಲ ಎಂದಿನಂತೆ ನಗು ತರಿಸುತ್ತಾರೆ. ಕೊನೆಯಲ್ಲಿನ ಟ್ವಿಸ್ಟ್ ನಲ್ಲಿ ಲಾಜಿಕ್ ಗಿಂತ ಮ್ಯಾಜಿಕ್ ಗೆ ಮಹತ್ವ ಹೆಚ್ಚು. ಛಾಯಾಗ್ರಹಣ, ಸಂಕಲನ ಕೂಡ ಅಮೋಘವೆನಿಸುವುದಿಲ್ಲ. ಆದರೆ ಲವಲವಿಕೆ ತುಂಬಿದ ಯೂತ್ ಲವ್ ಸ್ಟೋರಿಯೆಂಬ ನಿಟ್ಟಿನಲ್ಲಿ ಎಲ್ಲರಿಗೂ ಇಷ್ಟವಾಗುತ್ತದೆ.
2015-01-26 · FilmySphere critic
- Review of Jackson
ಜಾಕ್ಸನ್ ಚಿತ್ರ ವಿಮರ್ಶೆ ಜನವರಿ ಮೊದಲ ವಾರದಲ್ಲಿ ಬರುವುದಾಗಿ ಹೇಳಿ ಜರ್ಕ್ ಹೊಡೆದ ಜಾಕ್ಸನ್ ಎರಡನೇ ವಾರಕ್ಕೆ ತೆರೆಗೆ ಬಂದಿದ್ದಾನೆ. ಚಿತ್ರಕತೆಯಲ್ಲಿಯೂ ಆರಂಭದಲ್ಲಿ ಸ್ವಲ್ಪ ಜರ್ಕ್ ಹೊಡೆಯುತ್ತಾನೆ. ಉಳಿದಂತೆ ಸದಾ ಎಣ್ಣೆ ಹೊಡೆಯುತ್ತಾನೆ. ಅಡ್ಡ ಬಂದವರನ್ನು ಹೊಡೆಯುತ್ತಾನೆ. ಚಿತ್ರದಲ್ಲಿ ಜಾಕ್ಸನ್ ಎಂಬುದು ನಾಯಕನಿಗಿರುವ ಅಡ್ಡ ಹೆಸರು. ಆತ ಪಕ್ಕದ್ಮನೆ ಕುಮುದಾಳನ್ನು ಪ್ರೀತಿಸುತ್ತಿರುತ್ತಾನೆ. ಅವಳು ಗ್ರೀನ್ ಸಿಗ್ನಲ್ ಕೊಡುವ ಮುಂಚೆ ಅವಳ ತಂದೆ ರೆಡ್ ಸಿಗ್ನಲ್ ಹಾಕುತ್ತಾನೆ. ಅದೇ ನೋವಲ್ಲಿ ಕುಡಿಯಲೆಂದು ಬಾರು ಬಾರುಗಳಿಗೆ ಅಲೆಯುತ್ತಾನೆ. ಆದರೆ ಕುಡಿಯುವ ಮೊದಲು ಆತನಿಂದ ರಕ್ತದಾನ ಪಡೆಯಲು ಸಾವಿನ ಹಂತದಲ್ಲಿರುವ ಎರಡು ಜೀವಗಳು ಕಾಯುತ್ತಿರುತ್ತವೆ. ಅದು ಯಾರು? ನಾಯಕನಿಗೆ ಕೊನೆಗೂ ಆತನ ಪ್ರೇಯಸಿ ಸಿಗುತ್ತಾಳ ಎಂಬುದನ್ನು ನೋಡಬೇಕಾದರೆ ನೀವು ಚಿತ್ರಮಂದಿರಕ್ಕೆ ಹೋಗಬೇಕು. ಹೇಳುವಂಥ ಕತೆಯಿಲ್ಲವಾದರೂ ಟೈಮ್ ಪಾಸಿಗೊಂದಷ್ಟು ತಮಾಷೆ ಜೊತೆಗೆ ಅಂಡರ್ ಕರೆಂಟ್ ನಲ್ಲಿಯೇ ಕುಡಿತದ ವಿರುದ್ಧ ಒಂದು ಬಲವಾದ ಸಂದೇಶವಿರುವುದನ್ನು ಅರ್ಥಮಾಡಿಕೊಳ್ಳಬಹುದು. ನಾಯಕನಾಗಿ ವಿಜಯ್ ಎಂದಿನಂತೆ ತಮ್ಮ ಪಾಸಿಟಿವ್ ಅಂಶಗಳಾದ ಸ್ಲಂ ಭಾಷೆ, ಟಪ್ಪಾಂಗುಚ್ಚಿ ಡಾನ್ಸು, ಮತ್ತು ರಂಗಾಯಣ ರಘು ಕಾಂಬಿನೇಶನ್ ಮತ್ತು ಒಂದೆಡರು ಹೊಡೆದಾಟಗಳ ಮೂಲಕ ಅಭಿಮಾನಿಗಳಿಗೆ ತೃಪ್ತಿ ನೀಡುತ್ತಾರೆ. ನಾಯಕಿ ವೃಂದಾ ಕೂಡ ಗಮನ ಸೆಳೆಯುತ್ತಾರೆ. ಚಿತ್ರದ ಮತ್ತೊಂದು ಪ್ರಮುಖ ಜೋಡಿಯಾಗಿ ನಟಿಸಿರುವ ಐಶ್ವರ್ಯಾ ಮತ್ತು ಆಕೆಯ ಜೋಡಿ ಯುವಕ ನೆನಪಿನಲ್ಲಿ ಉಳಿಯುವುದು ಕಷ್ಟ. ಅದೇ ವೇಳೆ ಅರಸ್ ಮತ್ತು ಅವರಿಗೆ ಜೋಡಿಯಾಗಿ ನಟಿಸಿರುವ ಪ್ರಶಾಂತ್ ಸೇರಿದಂತೆ ಒಂದಷ್ಟು ಹೊಸ ಕಲಾವಿದರು ಪ್ರೇಕ್ಷಕರಲ್ಲಿ ನಗು ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ.
2015-01-15 · FilmySphere critic
- Review of Paipoti
ಪೈಪೋಟಿ ಚಿತ್ರ ವಿಮರ್ಶೆ ಪ್ರೀತಿ ಜೊತೆಗೆ ಬೈಟು ಟೀ..! ಇಬ್ಬರು ನಾಯಕರು ಸೇರಿ ಒಬ್ಬಳೇ ಹುಡುಗಿಯನ್ನು ಪ್ರೀತಿಸಿದರೆ ಕತೆಯೇನಾಗುತ್ತದೆ? ಒಂದೋ ಒಬ್ಬ ನಾಯಕ ಸಾಯಬೇಕು ಅಥವಾ ಇನ್ನೊಬ್ಬ ತ್ಯಾಗಿಯಾಗಬೇಕು ಎಂಬುದನ್ನು ನಾವು ಹಲವಾರು ಸಿನೆಮಾಗಳಲ್ಲಿ ನೋಡಿದ್ದೇವೆ. ಆದರೆ ಪೂರ್ತಿಯಾಗಿ ಇವೆಲ್ಲಕ್ಕಿಂತ ವಿಭಿನ್ನ ಅನುಭವ ನೀಡುವ ಚಿತ್ರವೇ ಪೈಪೋಟಿ. ರಮೇಶ ಮತ್ತು ಸುರೇಶ ಇಬ್ಬರು ಆತ್ಮೀಯ ಸ್ನೇಹಿತರು. ಎಲ್ಲ ವಿಚಾರಗಳಲ್ಲಿಯೂ ಅವರು ಪರಸ್ಪರ ಹೋಲುತ್ತಾರೆ. ಕೊನೆಗೆ ಇಬ್ಬರೂ ಸೇರಿ ಪ್ರೇಮಿಸುವ ಹುಡುಗಿಯೂ ಒಬ್ಬಳೇ ಆಗಿರುತ್ತಾಳೆ. ಅದು ಗೊತ್ತಾದ ತಕ್ಷಣ ಪರಸ್ಪರ ಬಿಟ್ಟು ಕೊಟ್ಟು ತ್ಯಾಗಿಯಾಗಲು ಯತ್ನಿಸುತ್ತಾರೆ. ಆದರೆ ಇಂಟರ್ ವೆಲ್ ಹೊತ್ತಿಗೆ ಅದೇ ವಿಚಾರದಲ್ಲಿ ಅವರಿಬ್ಬರಲ್ಲೇ ವೈಮನಸ್ಯ ಮೂಡಿ ಪರಸ್ಪರ ಜಿದ್ದಿಗೆ ಬಿದ್ದು ಪ್ರೀತಿಸಲು ಶುರು ಮಾಡುತ್ತಾರೆ. ಆದರೆ ಇಬ್ಬರಲ್ಲಿಯೂ ಸ್ನೇಹವನ್ನಷ್ಟೇ ಕಂಡಿರುವ ಹುಡುಗಿ ತಂದೆ ಬಯಸುವ ಹುಡುಗನ ಕೈ ಹಿಡಿಯಲು ಸಿದ್ಧವಾಗುತ್ತಾಳೆ. ತಂದೆ ನೋಡಿದ ಶ್ರೀಮಂತ ಹುಡುಗನೊಂದಿಗೆ ಮದುವೆ ನಿಶ್ಚಯಗೊಳಿಸಲಾಗುತ್ತದೆ. ಇನ್ನೇನು ಮದವೆ ನಡೆಯುತ್ತದೆ ಎನ್ನುವಷ್ಟರಲ್ಲಿ ಅಲ್ಲೊಂದು ಘಟನೆ ನಡೆಯುತ್ತದೆ. ಅದು ಏನು? ಇಬ್ಬರಲ್ಲಿ ಯಾರ ಪ್ರೀತಿ ಸಕ್ಸಸ್ ಆಗುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾದರೆ ನೀವು ಪೈಪೋಟಿ ಚಿತ್ರವನ್ನು ನೋಡಬೇಕು. ಚಿತ್ರದಲ್ಲಿ ಇಬ್ಬರು ನಾಯಕರಾದ ಗುರುರಾಜ್ ಮತ್ತು ನಿರಂಜನ್ ಶೆಟ್ಟಿಗೆ ಸಮಾನ ಅವಕಾಶಗಳನ್ನು ನೀಡಲಾಗಿದೆ. ಆದರೆ ಗುರು ತಮ್ಮ ನಟನೆಯಿಂದ ಹೆಚ್ಚು ಆಕರ್ಷಕವಾಗುತ್ತಾರೆ. ಅದೇ ಸಂದರ್ಭದಲ್ಲಿ ನಿರಂಜನ್ ಗೆ ಉತ್ತಮ ಅವಕಾಶಗಳಿದ್ದರೂ ತಮ್ಮ ಮಾತನಾಡುವ ಶೈಲಿ ಮತ್ತು ಓವರ್ ಆ್ಯಕ್ಟಿಂಗ್ ರೀತಿಯಿಂದಾಗಿ ಗುರುವಿನ ಮುಂದೆ ಶಿಷ್ಯನಾಗಿ ಉಳಿಯುತ್ತಾರೆ. ನಾಯಕಿ ಪೂಜಾಗೆ ಆರಂಭದ ದೃಶ್ಯಗಳಲ್ಲೆಲ್ಲಾ ಇವರಿಬ್ಬರನ್ನು 'ಮೆಂಟ್ಲುಗಳು' ಎಂದು ಕರೆಯುವುದಷ್ಟೇ ಕೆಲಸವೆನ್ನಬಹುದು. ಬಳಿಕವೂ ಈಕೆ ತನ್ನ ನಟನೆಯಿಂದ ಗಮನ ಸೆಳೆಯುವ ಸಂದರ್ಭಗಳಿಲ್ಲ. ಚುರುಕಾದ ಸಂಭಾಷಣೆಗಳಿದ್ದರೂ ಅದರಲ್ಲಿ ಅಲ್ಲಲ್ಲಿ ಪರಭಾಷೆಯ ಗಂಧವೇ ತುಂಬಿರುವುದು ಗೋಚರಿಸುತ್ತದೆ. ತ್ರಿಭುವನ್ ಮಾಸ್ಟರೇ ಖುದ್ದು ಪರದೆಯ ಮೇಲೆ ಕಾಣಿಸಿಕೊಂಡರೂ ಕೂಡ ಒಂದೊಳ್ಳೆಯ ಕೊರಿಯಾಗ್ರಫಿಯ ಕೊರತೆ ಇರುವುದನ್ನು ಕಾಣಬಹುದು. ಆದರೆ ಆರಂಭದಲ್ಲೇ ಬರುವ 'ಅವಳಿಗವಳೇ..' ಹಾಡನ್ನು ಬರೇ ಬಾಯಿಯಷ್ಟೇ ಬಳಸಿ ಸೃಷ್ಠಿಸಿರುವುದು ಮತ್ತು ಹಾಡಿನಲ್ಲಿ ಆ ಗಾಯಕರನ್ನು ಬುದ್ಧಿಪೂರ್ವಕವಾಗಿ ತೋರಿಸಿರುವುದು ಮಾತ್ರವೇ ವಿಶೇಷ. ಛಾಯಾಗ್ರಹಣ, ಎಡಿಟಿಂಗ್ ಜೊತೆಗೆ ಅಚ್ಯುತ ಕುಮಾರ್ ನಂಥ ನೈಜ ನಟನೆಯ ಕಲಾವಿದರು ಚಿತ್ರಕ್ಕೆ ಟಾನಿಕ್ ನೀಡಿದ್ದಾರೆ. ಜೊತೆಗೆ ಅಶ್ಲೀಲತೆ, ದ್ವಂದ್ವಾರ್ಥಗಳಿಗೆ ಸಾಕಷ್ಟು ಬ್ರೇಕ್ ಕೊಟ್ಟು ಒಂದು ಯೂತ್ ಫುಲ್ ಹಾಸ್ಯ ಚಿತ್ರವನ್ನು ನೀಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
2015-01-11 · FilmySphere critic
- Review of Shivam
ಶಿವಂ ಚಿತ್ರ ವಿಮರ್ಶೆ ಕಂಡವರಿಗೆ ಕಷ್ಟಾನುಭವಂ! ಶೀರ್ಷಿಕೆಯ ಕಾರಣದಿಂದಲೇ ಬಹಳಷ್ಟು ಸುದ್ಧಿ ಮಾಡಿದ್ದ ಶ್ರೀನಿವಾಸ ರಾಜು ನಿರ್ದೇಶನದ ಉಪೇಂದ್ರರ ಶಿವಂ ಕಡೆಗೂ ತೆರೆಗೆ ಬಂದಿದೆ. ಚಿತ್ರತಂಡ ನೀಡಿದ ಬಿಲ್ಡಪ್ ಗಳನ್ನು ಕೇಳಿ ಬಹಳ ನಿರೀಕ್ಷೆಯೊಂದಿಗೆ ಈ ಅಡ್ಡನಾಮ ಚಿಹ್ನೆಯೊಂದಿಗಿನ ಚಿತ್ರವನ್ನು ನೋಡಲು ಹೋದರೆ ಉದ್ದನಾಮ ಬೀಳುವುದು ಗ್ಯಾರಂಟಿ. ಯಾಕೆಂದರೆ ಒಂದಷ್ಟು ಖರ್ಚು ಮಾಡಿರುವುದನ್ನು ಬಿಟ್ಟರೆ ಒಟ್ಟು ಚಿತ್ರದಲ್ಲಿ ಯಾವುದೇ ಆಕರ್ಷಕ ಅಂಶಗಳಿಲ್ಲ. ಚಿತ್ರದಲ್ಲಿ ನಾಯಕ ಉಪೇಂದ್ರ ಆರಂಭದಲ್ಲಿ ಅಲೆಕ್ಸ್ ಎಂಬ ಡಾನ್ ಆಗಿ ಕಾಣಿಸುತ್ತಾರೆ. ಮತ್ತೊಬ್ಬ ಮುಸ್ಲಿಂ ಡಾನ್ ನನ್ನು ಮಟ್ಟ ಹಾಕಲು ಯತ್ನಿಸುತ್ತಾರೆ. ಹಳ್ಳಿಯ ಆತನ ಮನೆಯಲ್ಲಿ ಆತನ ತಂದೆ ವಂಶಪಾರಂಪರ್ಯವಾಗಿ ದೊರಕಿರುವ ಊರ ದೇಗುಲದ ಅರ್ಚಕ ಸ್ಥಾನದಲ್ಲಿರುತ್ತಾರೆ. ಅವರ ನಿಧನಾನಂತರ ಆ ಸ್ಥಾನವನ್ನು ವಹಿಸಲು ಹಿರಿಮಗ ನಿರಾಕರಿಸುತ್ತಾನೆ. ದೇಗುಲದ ಆಡಳಿತ ಭ್ರಷ್ಟರ ಕೈಗೆ ಹೋಗದಂತೆ ತಪ್ಪಿಸಲು ತಕ್ಷಣ ವಿದೇಶದಿಂದ ಮರಳುವ ಕಿರಿಯ ಮಗ ಅಲೆಕ್ಸ್ ಅರ್ಚಕ ಬಸವಣ್ಣನಾಗುತ್ತಾನೆ. ಕೊನೆಯಲ್ಲಿ ಆತ ಮುಂಬೈನಲ್ಲಿ ಡಾನ್ ಆಗಿರಲಿಲ್ಲ; ಮುಸ್ಲಿಂ ಡಾನನ್ನು ಮುಗಿಸಲು ಹೊರಟಿದ್ದ ರಾ ಏಜೆಂಟ್ ಆಗಿದ್ದನೆಂಬುದನ್ನು ತೋರಿಸಲಾಗುತ್ತದೆ. ಇದರ ನಡುವೆ ಆತನನ್ನು ಪ್ರೀತಿಸುವ ಮಾವನ ಮಗಳು ಸಲೋನಿ, ಆತನಿಗೆ ಸಹಾಯಕ ಅಧಿಕಾರಿಣಿಯಾಗಿ ಬರುವ ರಾಗಿಣಿ ಪಾತ್ರಗಳು ಬಂದು ಹೋಗುತ್ತವೆ. ಆದರೆ ಯಾರ ಪಾತ್ರಗಳಿಗೂ ಕೂಡ ವಿಶೇಷವೆನಿಸುವಂಥ ನಟನೆಗೆ ಅವಕಾಶವಿಲ್ಲ. ಹಾಡುಗಳ ಸಾಮಾನ್ಯ. ಫೈಟುಗಳು ಅಸಾಮಾನ್ಯ. ಹಾಗಾಗಿಯೇ ನಾಯಕ ಆಕಾಶದಲ್ಲೇ ಹಾರಾಡಿ ಹೊಡೆಯುತ್ತಾನೆ. ಅರ್ಚಕ ಮತ್ತು ಪೊಲೀಸ್ ಪಾತ್ರಗಳನ್ನು ಈ ಹಿಂದೆ ತಮಿಳು ಚಿತ್ರವೊಂದರಲ್ಲಿ ಅರ್ಜುನ್ ಸರ್ಜಾ ನಿರ್ವಹಿಸಿದ್ದರು. ಅದೇ ರೀತಿ ಒಟ್ಟು ಚಿತ್ರ ತಮಿಳು ಅಥವಾ ಪಕ್ಕಾ ತೆಲುಗು ನೇಟಿವಿಟಿಗೆ ಹೊಂದಿಕೊಳ್ಳುವಂತೆ ಮಾಡಿದ್ದಾರೆ. ತಲೆಯನ್ನು ಗ್ರಾಫಿಕ್ಸ್ ಮೂಲಕ ಬೋಳು ಮಾಡಿರುವುದೂ ಸೇರಿದಂತೆ, ಗಾಂಧಿನಗರದಲ್ಲಿ ಬಿಡುಗಡೆಯಾದ ಚಿತ್ರದ ಒಟ್ಟು ಪ್ರಿಂಟ್ ಡಲ್ ಅನಿಸುತ್ತದೆ. ಖುದ್ದು ಉಪೇಂದ್ರರೇ ಹೊಗಳಿ ಮಾತನಾಡಿದ್ದ ಸಂಭಾಷಣೆಕಾರರು ಒಂದೆರಡು ಜಾಗದಲ್ಲಿ ಬಿಟ್ಟರೆ ಇಡೀ ಚಿತ್ರದಲ್ಲಿ ನಿರಾಶೆ ಮೂಡಿಸುತ್ತಾರೆ. ಇಷ್ಟಕ್ಕೂ ಚಿತ್ರದ ಮೂಲಕ ನಿರ್ದೇಶಕರು ನೀಡ ಹೊರಟ ಸಂದೇಶವಾದರೂ ಏನು ಗೊತ್ತೇ? ತಲೆತಲಾಂತರದಿಂದ ಹಿಂದೂಗಳ ವಿರುದ್ಧ ಅನ್ಯಾವೆಸಗುತ್ತಿರುವ ಮುಸ್ಲಿಮರ ವಿರುದ್ಧ ಒಂದು ಕ್ರಾಂತಿಯುತ ಹೋರಾಟ! ಒಟ್ಟಿನಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳು, ನಾಟಕೀಯ, ಪೇಲವ ಸನ್ನಿವೇಶಗಳಿಂದ ಕೂಡಿರುವ ಚಿತ್ರ ರಿಯಲ್ ಸ್ಟಾರ್ ಅಭಿಮಾನಿಗಳಿಗೆ ಕೂಡ ನಿರಾಶೆ ಮೂಡಿಸುವಂತಿದೆ ಎಂಬುದು ದುರದೃಷ್ಟಕರವಾದರೂ ವಾಸ್ತವ.
2015-01-02 · FilmySphere critic
- Review of Mr. and Mrs. Ramachari
ಮಿಸ್ಟರ್ ಆ್ಯಂಡ್ ಮಿಸ್ಸೆಸ್ ರಾಮಾಚಾರಿ ಗ್ಯಾರಂಟಿ ಇದು ಮತ್ತೊಂದು ಸೆಂಚುರಿ! ಗೂಗ್ಲಿಯ ಬಳಿಕ ಫುಲ್ ಎಂಟರ್ ಟೈನರ್ ಲವ್ ಸ್ಟೋರಿಯೊಂದಿಗೆ ಬಂದಿದ್ದಾರೆ ಯಶ್. ಚಿತ್ರದಲ್ಲಿ ನಾಯಕನ ಹೆಸರು ರಾಮಾಚಾರಿ. ಶಾಲಾ ದಿನಗಳಿಂದಲೇ ನಾಗರಹಾವು ಸಿನೆಮಾ ನೋಡಿ ವಿಷ್ಣುವರ್ಧನ್ ಗೆ ಫ್ಯಾನಾಗಿರುತ್ತಾನೆ. ಆತ ಹೆಸರಿಗೆ ಕಾಲೇಜು ಸ್ಟೂಡೆಂಟು. ಆದರೆ ಕಾಲೇಜಿಗೆ ಬಂದರೂ ತರಗತಿಗೆ ಆಬ್ಸೆಂಟು. ಅಪರೂಪಕ್ಕೆ ತರಗತಿಗೆ ಬಂದಿದ್ದಾಗ ಅಲ್ಲಿ ಸೀನಿಯರ್ ಗಳಿಂದ ರ್ಯಾಗಿಂಗ್ ಗೆ ಒಳಗಾಗುತ್ತಿದ್ದ ನಾಯಕಿಯನ್ನು ಕಂಡು ಕಾಪಾಡುತ್ತಾನೆ. ಈ ಸಹಾಯದಿಂದ ಸ್ನೇಹವಾಗಿ ಸ್ನೇಹ ಪ್ರೇಮವಾಗುತ್ತದೆ. ರಾಮಾಚಾರಿಯ ಮನೆಯಲ್ಲಿ ತಂದೆತಾಯಿಗೆ ಆತನಿಗಿಂತ ವಿದ್ಯಾಭ್ಯಾಸದಲ್ಲಿ ಮುಂದಿರುವ ಆತನ ತಮ್ಮನೆಂದರೆ ಅಕ್ಕರೆ. ಹಾಗಾಗಿಯೇ ರಾಮಾಚಾರಿಗೆ ಮೊದಲೇ ಆತನಿಗೆ ತನ್ನ ಆಪ್ತ ಸ್ನೇಹಿತನ ಮಗಳೊಂದಿಗೆ ಮದುವೆ ಮಾಡಲು ನೋಡುತ್ತಾರೆ. ಆದರೆ ಆತ ಮದುವೆಗೊಪ್ಪದೆ ಮನೆ ಬಿಟ್ಟು ಓಡಿ ಹೋಗುತ್ತಾನೆ. ಅದರ ಬಳಿಕ ಮನೆಯ ಜವಾಬ್ದಾರಿ ವಹಿಸುವ ರಾಮಾಚಾರಿಯ ಬೆಲೆ ತಂದೆತಾಯಿಗೆ ಮನವರಿಕೆಯಾಗುತ್ತದೆ. ಆದರೆ ಇದೇ ವೇಳೆ ನಾಯಕಿಗೆ ಮಾತ್ರ ಆತ ಮನೆಯತ್ತ ತೋರುವ ಆಸಕ್ತಿ ತನ್ನ ಮೇಲಿನ ನಿರಾಸಕ್ತಿಯಂತೆ ಅನಿಸುತ್ತದೆ. ಜೊತೆಗೆ ಆಕೆಯ ತಾಯಿಯೂ ಸದಾ ರಾಮಾಚಾರಿಯನ್ನು ವಿರೋಧಿಸುತ್ತಿರುವುದರಿಂದಾಗಿ ಆತ ವಂಚಕನೆಂದೇ ನಂಬುತ್ತಾಳೆ. ಇದೇ ವೇಳೆ ರಾಮಾಚಾರಿಯ ತಂದೆ ತಮ್ಮನಿಗೆಂದು ಮಾತನಾಡಿದ್ದ ಹುಡುಗಿಯನ್ನು ರಾಮಾಚಾರಿಗೆ ತರುವುದಾಗಿ ಮತ್ತೆ ಸ್ನೇಹಿತನಿಗೆ ಮಾತು ನೀಡುತ್ತಾರೆ! ಇದನ್ನೇ ರಾಮಾಚಾರಿ ತನಗೆಸಗಿದ ಮೋಸವೆಂದು ನಂಬುವ ನಾಯಕಿ ತಾನು ಕೂಡ ಬೇರೊಂದು ಮದುವೆಗೆ ಸಮ್ಮತಿ ಸೂಚಿಸುತ್ತಾಳೆ. ಇಷ್ಟೆಲ್ಲ ಅಡೆತಡೆಗಳ ನಡುವೆಯೂ ಸಿನಿಮೀಯ ರೀತಿಯಲ್ಲೇ ಪ್ರೇಮಿಗಳು ಒಂದಾಗುತ್ತಾರೆ. ಆದರೆ ಅದಕ್ಕೂ ಮೊದಲಿನ ರಸ ನಿಮಿಷಗಳನ್ನು ಸವಿಯಬೇಕಾದರೆ ಖಂಡಿತಾ ನೀವು ಚಿತ್ರವನ್ನು ನೋಡಲೇಬೇಕು. ಚಿತ್ರದಲ್ಲಿ ಯಶ್ ರನ್ನು ವಿಷ್ಣುವರ್ಧನ್ ರ ಅಭಿಮಾನಿಯಾಗಿ ಇಂಟ್ರಡ್ಯೂಸ್ ಮಾಡಬೇಕಾದರೆ ಅವರಲ್ಲಿ ನಾಗರಹಾವು ರಾಮಾಚಾರಿಯ ಕಳೆ ಕಾಣುತ್ತದೆ. ಕೈಯ್ಯಲ್ಲಿನ ಬಳೆ ಮತ್ತು ಎದೆ ಮೇಲಿನ ವಿಷ್ಣು ಚಿತ್ರದ ಹಚ್ಚೆಯಷ್ಟೇ ಅಲ್ಲ, ಹೇರ್ ಸ್ಟೈಲ್ ಕೂಡ ಅದಕ್ಕೆ ಜೊತೆಯಾಗುವುದು ವಿಶೇಷ. ನಾಯಕಿಯಾಗಿ ರಾಧಿಕಾ ಪಂಡಿತ್ ಎಂದಿನಂತೆ ತಮ್ಮ ಪಾತ್ರಕ್ಕೆ ಒತ್ತು ನೀಡಿರುವ ಕತೆಯನ್ನೇ ಆಯ್ದುಕೊಂಡಿದ್ದಾರೆ. ಅಲ್ಲಿಗೆ ಮಿಸ್ಟರ್ ಆ್ಯಂಡ್ ಮಿಸ್ಸೆಸ್ ರಾಮಾಚಾರಿ ಎಂಬ ಹೆಸರು ಚಿತ್ರಕ್ಕೆ ಅನ್ವರ್ಥವಾಗುತ್ತದೆ.ನಾಯಕನ ತಂದೆಯಾಗಿ ಅಚ್ಯುತ ಕುಮಾರ್, ಸ್ನೇಹಿತನಾಗಿ ಶ್ರೀನಾಥ್ ಪಾತ್ರವಷ್ಟೇ ಅಲ್ಲ ಅತಿಥಿ ಪಾತ್ರವಾಗಿ ಪ್ರವೇಶಿಸುವ ಧ್ಯಾನ್ ರನ್ನು ಕೂಡ ನೆನಪಲ್ಲಿ ಉಳಿಸಿಕೊಳ್ಳುವಂಥ ಸನ್ನಿವೇಶಗಳನ್ನು ಸೃಷ್ಠಿಸಲಾಗಿದೆ. ರಾಮಾಚಾರಿ ಪ್ರೀತಿಸುತ್ತಿರುವುದು ತನ್ನ ತಂಗಿಯನ್ನೆಂದು ತಿಳಿಯದೇ ಆತನಿಗೆ ಪ್ರೋತ್ಸಾಹಿಸುವ ಮಿತ್ರ ಮತ್ತು ಯಶ್ ನಿಂದ ವೆರೈಟಿ ವೆರೈಟಿಯಾಗಿ ಹೊಡೆತ ತಿನ್ನಲೆಂದೇ ಕೆಣಕಲು ಬರುವ ಖಳನಟ ಲೋಕಿ, ಮ್ಯಾರೇಜ್ ಅರೇಂಜರಾಗಿ ಸಾಧುಕೋಕಿಲಾರ ಪಾತ್ರಗಳು ಪ್ರೇಕ್ಷಕರ ಮನಸೆಳೆಯುತ್ತವೆ. ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಚುರುಕಾದ ಸಂಭಾಷಣೆ. ನಾಯಕ ನಾಯಕಿಯ ನಡುವಿನ ಮಾತುಗಳಲ್ಲಿ ಯಶ್ ಮತ್ತು ರಾಧಿಕಾರ ನಿಜ ಜೀವನದ ಗಾಸಿಪ್ ಗೆ ಸಂಬಂಧ ಕಲ್ಪಿಸುವ ಸಂಭಾಷಣೆಗಳಿವೆ. ಅನಗತ್ಯವಾಗಿ ನುಸುಳಿ ಬರುವ ಗೋವಾದಲ್ಲಿನ ಹಾಡೊಂದನ್ನು ಹೊರತು ಪಡಿಸಿ ಉಳಿದೆಲ್ಲ ಗೀತೆಗಳು ಆಕರ್ಷಕ. ಪೋಲಿ ನಾಯಕನಿಗೊಬ್ಬ ಬುದ್ಧಿವಂತ ತಮ್ಮ, ಸಣ್ಣ ಸಂದೇಹಗಳಿಗೆ ದೂರವಾಗುವ ನಾಯಕ ನಾಯಕಿ ಈ ಅಂಶಗಳನ್ನು ಎಷ್ಟೋ ಚಿತ್ರಗಳಲ್ಲಿ ಕಂಡಿದ್ದೇವೆ. ಆದರೆ ಇದೆಲ್ಲವನ್ನೂ ವಿಭಿನ್ನವಾಗಿ ಆಕರ್ಷಕ ನಿರೂಪಣೆಯೊಂದಿಗೆ ತೋರಿಸುವ ಮೂಲಕ ನಿರ್ದೇಶಕರು ಗಮನ ಸೆಳೆದಿದ್ದಾರೆ.
2014-12-25 · FilmySphere critic
- Review of Jyothi Alias Kothiraj
ಜೋತಿರಾಜ್ ಅಲಿಯಾಸ್ ಕೋತಿರಾಜ್ ಕೋತಿರಾಜ್ ಸಫಲ; ಜೋಗಿರಾಜ್ ವಿಫಲ! 'ನಾನು ಕಪ್ಪಗಿದ್ದೀನಿ; ನನ್ನ ಮುಖದಲ್ಲಿ ಬೆಳ್ಳಗಿರೋದು ಹಲ್ಲು ಬಿಟ್ರೆ ಬೇರೇನೂ ಇಲ್ಲ!' ಇದು ಚಿತ್ರದಲ್ಲಿ ತನ್ನನ್ನು ಪ್ರೀತಿಸುವ ಹುಡುಗಿಯಲ್ಲಿ ಜೋತಿರಾಜ್ ಹೇಳುವ ಮಾತು. ಇದು ವಾಸ್ತವವೇ ಆದರೂ ಇಲ್ಲಿ ಇಬ್ಬಿಬ್ಬರು ನಾಯಕಿಯರು ಆತನನ್ನು ಪ್ರೀತಿಸುತ್ತಾರೆ. ಅದೇಕೆ ಹಾಗೆ ಎಂಬುದನ್ನು ಚಿತ್ರದಲ್ಲಿ ಹೇಳಲೆತ್ನಿಸಲಾಗಿದೆ. ಜೋತಿರಾಜ್ ಕಪ್ಪಗಿರೋದು ನಿಜವೇ. ಆದರೆ ಆತನ ಮನಸ್ಸಲ್ಲಿ ಕಪ್ಪಿಲ್ಲ. ಚಿತ್ರದಲ್ಲಿ ಆತ ಮನೆಯಿಂದ ಓಡಿ ಹೋಗಿ ವೇಶ್ಯೆಯೊಬ್ಬಳ ಕಾರಿಗೆ ಸಿಕ್ಕಿ ಆಕೆಯ ಪೋಷಣೆಯಲ್ಲಿ ಬೆಳೆಯುವ ಹುಡುಗ. ಆದರೆ ಬೆಳೆದ ಮೇಲೆ ಆಕೆಯಿಂದ ಬೇರಾಗುತ್ತಾನೆ. ಕಮಲಿ ಎಂಬ ಹುಡುಗಿಗೆ ಅಪಾಯದಿಂದ ರಕ್ಷಣೆಯಾಗುತ್ತಾನೆ. ಆಕೆ ಆತನನ್ನು ತನ್ನ ಹಳ್ಳಿಯ ಮನೆಗೆ ಕರೆದುಕೊಂಡು ಬರುತ್ತಾಳೆ. ಅಲ್ಲಿ ಆತ ಮನೆಮಗನಂತೆ ಬೆಳೆಯಲೆಂದು ಆಕೆಯ ತಂದೆ ಹೇಳಿದಾಗ ಒಪ್ಪುತ್ತಾನೆ. ಆದರೆ ಆತನನ್ನು ತನ್ನ ಮಗಳು ಪ್ರೀತಿಸುತ್ತಾಳೆಂದು ಅರಿತಾಗ ಎಲ್ಲಾದರೂ ಹೋಗಿ ಸಾಯೆಂದು ಹೇಳಿ ಜೋತಿರಾಜನನ್ನು ಮನೆಯಿಂದ ಹೊರದಬ್ಬುತ್ತಾನೆ. ಸಾಯಲೆಂದು ದುರ್ಗದ ಕೋಟೆ ಹತ್ತಿ ಧುಮುಕಲೆತ್ನಿಸುವ ಆತನನ್ನು ಅಲ್ಲಿಂದ ಕರೆತಂದು ಬರಿಗೈಯ ಉತ್ತಮ ಚಾರಣಿಗನಾಗಿ ಪ್ರಚಾರಕ್ಕೆ ತರುತ್ತಾಳೆ ಮತ್ತೊಬ್ಬ ಹುಡುಗಿ. ಟೀವಿ ಆ್ಯಂಕರಾದ ಆಕೆ ತನ್ನನ್ನು ಪ್ರೀತಿಸುತ್ತಿದ್ದಾಳೆಂದು ಅರಿವಾದಾಗ ಆಕೆಯನ್ನೂ ಬಿಟ್ಟು ದೂರ ಸಾಗುತ್ತಾನೆ ಜೋತಿರಾಜ್. ಆದರೆ ಇತ್ತ ಕಡೆ ಕಮಲಿ ಆತನನ್ನೇ ಬಯಸಿ ಹುಡುಕಾಡುತ್ತಾಳೆ. ಆಕೆಗೆ ತಂದೆ ನೋಡಿದ್ದ ವರ ಖಳನಂತೆ ಕಾಡುತ್ತಾನೆ. ಜೋಗದ ಗುಂಡಿಯಿಂದ ಪ್ರೇಮಿಗಳ ಹೆಣ ತೆಗೆಯಲೆಂದು ಜೋತಿರಾಜ್ ಗೆ ಅನಾಮಧೇಯ ಕರೆ ಮಾಡಿ ಕೊಲೆ ಮಾಡಲೆಂದು ಕರೆಸುತ್ತಾನೆ. ತಮ್ಮ ಪುತ್ರ ಎಂದೋ ತೀರಿಕೊಂಡಿದ್ದಾನೆಂದುಕೊಂಡಿದ್ದ ಜೋತಿರಾಜ್ ನ ತಂದೆ ತಾಯಿ ಟೀವಿಯಲ್ಲಿ ಆತನನ್ನು ಕಂಡು ಹುಡುಕಾಟ ಶುರುಮಾಡುತ್ತಾರೆ. ಅವರಿಗೆ ಟೀವಿ ವರದಿಗಾರ್ತಿ ಸಾಥ್ ನೀಡುತ್ತಾಳೆ. ಕ್ಲೈಮ್ಯಾಕ್ಸ್ ನಲ್ಲಿ ಜೋತಿರಾಜ್ ಇಬ್ಬರು ನಾಯಕಿಯರನ್ನೂ ಸೇರುವುದಿಲ್ಲ. ಹಾಗಾದರೆ ಜೋಗದಲ್ಲಿ ಯಾರ್ಯಾರ ಸಾವಾಗುತ್ತದೆ? ತಂದೆ ತಾಯಿಗೆ ಕೊನೆಗಾದರೂ ಜೋತಿರಾಜ್ ಸಿಗುತ್ತಾನ ಎಂಬುದನ್ನು ತಿಳಿಯಬೇಕಾದರೆ ನೀವು ಚಿತ್ರಮಂದಿರಕ್ಕೆ ಹೋಗಲೇಬೇಕು. ಚಿತ್ರದ ಹೈಲೈಟ್ ಆಗಿರುವಂಥ ಜೋತಿರಾಜ್ ನ ಹಗ್ಗವಿಲ್ಲದೆ ಕೋಟೆ, ಕಟ್ಟಡಗಳನ್ನೇರುವ ನೈಜ ಸಾಹಸ ಆರಂಭದಿಂದಲೇ ಶುರುವಾಗಿ ಕ್ಲೈಮ್ಯಾಕ್ಸ್ ನಲ್ಲಿ ಕಳೆಗಟ್ಟುತ್ತದೆ. ಆತನ ಸಾಹಸಕ್ಕೆ ಎರಡು ಮಾತಿಲ್ಲವಾದರೂ ಇಂಟ್ರಡಕ್ಷನಲ್ಲೇ ಆತನನ್ನು ಮಾನಸಿಕವಾಗಿ ನೊಂದಂತೆ ತೋರಿಸಲಾಗುತ್ತದೆ. ಮುಖದಲ್ಲಿ ತುಂಟು ಅಲಕ್ಷ್ಯದ ನಗುವೊಂದನ್ನು ಬಿಟ್ಟರೆ ಬೇರೇನನ್ನೂ ವ್ಯಕ್ತಪಡಿಸಲಾಗದ ಜೋತಿರಾಜ್ ಗೆ ಅಂಥ ಸನ್ನಿವೇಶವನ್ನು ನೀಡಿರುವುದು ನಿಜಕ್ಕೂ ನಿರ್ದೇಶಕರೇ ಮಾಡಿರುವ ಸಾಹಸವೆನ್ನಬಹುದು. ನಾಯಕನ ಸ್ಪಷ್ಟವಿಲ್ಲದ ಕನ್ನಡವೂ ಕೂಡ ಆತನ ಸಂಭಾಷಣೆಯನ್ನು ಪರಿಣಾಮಕಾರಿಯಾಗಿಸುವಲ್ಲಿ ವಿಫಲವಾಗಿದೆ. ಕ್ಲೈಮ್ಯಾಕ್ಸ್ ನಲ್ಲಿಯೂ ಜೋಗಿ ಚಿತ್ರವನ್ನು ನೆನಪಿಸುವಂಥ ತಾಯಿ (ಮತ್ತು ತಂದೆಯ) ಮಗನ ಸೆಂಟಿಮೆಂಟ್ ದೃಶ್ಯವನ್ನು ಕತೆಗಾಗಿ ತುರುಕಿರುವುದು ಗೋಚರವಾಗುತ್ತದೆ. ಚಿತ್ರದ ಕೊನೆಯಲ್ಲಿ ಮತ್ತೆ ಶಂಕರ್ ಪ್ರಕಾಶ್ ರ ಹಿನ್ನೆಲೆ ದನಿಯಲ್ಲಿ ಜೋತಿರಾಜ್ ಬಗ್ಗೆ ಹೇಳಲಾಗುವ ಮಾತುಗಳು ಎಲ್ಲೋ ಒಂದು ಡಾಕ್ಯುಮೆಂಟರಿ ಪೂರ್ತಿಯಾದ ಅನುಭವ ನೀಡುತ್ತದೆ. ಆದರೆ ಕಮಲಿಯಾಗಿ ಐಶಾನಿ ಶೆಟ್ಟಿ ಪ್ರಥಮ ಚಿತ್ರದಲ್ಲಿಯೇ ಭರವಸೆ ಮೂಡಿಸುವ ನಟನೆ ನೀಡಿದ್ದಾರೆ. ಜೋಗದ ಹಾಡಿನಲ್ಲಿ ಜಲಪಾತದ ಸೌಂದರ್ಯದೊಂದಿಗೆ ನಾಯಕಿಯ ಗ್ಲಾಮರನ್ನೂ ಛಾಯಾಗ್ರಾಹಕರು ಯಥೇಚ್ಛವಾಗಿ ತುಂಬಿಕೊಂಡು ದೊಡ್ಡರಂಗೇಗೌಡರ ಸಾಹಿತ್ಯ ಮತ್ತು ಮೆಲೋಡಿ ಸಂಗೀತಕ್ಕೆ ರಂಗು ಹೆಚ್ಚಿಸಿದ್ದಾರೆ. ವರದಿಗಾರ್ತಿ ಪಾತ್ರದಲ್ಲಿನ ದೀಪಿಕಾ ದಾಸ್ ಜೊತೆಗಿನ ಹಾಡೊಂದರಲ್ಲಿ ಸಕತ್ತಾಗಿ ಕುಣಿದಿರುವ ಜೋತಿರಾಜ್ ರ ಸಿಗ್ನೇಚರ್ ಸ್ಟೆಪ್ ಕೂಡ ಅಕರ್ಷಕವೆನಿಸುತ್ತದೆ. ಕಮಲಿಯ ತಂದೆಯಾಗಿ ರಮೇಶ್ ಭಟ್, ಜೋತಿರಾಜ್ ನ ತಂದೆತಾಯಿರಾಗಿ ಸಂಕೇತ್ ಕಾಶಿ ಮತ್ತು ಲಕ್ಷ್ಮೀ ಚಂದ್ರಶೇಖರ್ ಹಳ್ಳಿಗರ ಪಾತ್ರಗಳಲ್ಲಿ ರಂಗಭೂಮಿ ಹಿನ್ನೆಲೆಯ ಶಕ್ತಿಯನ್ನು ಮತ್ತೆ ನೆನಪಿಸಿದ್ದಾರೆ. ಕೊನೆಯಲ್ಲಿ ಹೇಳಿರುವಂತೆ ಇಲ್ಲಿ ಜೋತಿರಾಜ್ ನ ಸಾಹಸಗಳು ಪೂರ್ಣ ಅನಾವರಣವಾಗಿಲ್ಲ. ಆದರೆ ಇಲ್ಲಿ ಆತ ನಡೆಸಿರುವ ಸಾಹಸಗಳನ್ನು ಕಂಡವರು ಕೊಟ್ಟ ದುಡ್ಡಿಗೆ ಮೋಸವಿಲ್ಲವೆಂದು ಹೇಳುವುದು ಖಚಿತ.
2014-12-25 · FilmySphere critic
- Review of Chirayu
ಚಿರಾಯು ಪ್ರಶಾಂತ; ಪ್ರೇಕ್ಷಕ ದಿಗ್ಭ್ರಾಂತ! ನಿರ್ದೇಶಕ ಪ್ರಶಾಂತ್ ಉಪೇಂದ್ರರ ಎ ಸಿನೆಮಾವನ್ನು ಅದೆಷ್ಟು ಬಾರಿ ನೋಡಿದ್ದಾರೋ ಗೊತ್ತಿಲ್ಲ; ಅದರ ಗುಂಗಿನಲ್ಲಿದ್ದುಕೊಂಡೇ ಚಿರಾಯು ಚಿತ್ರವನ್ನು ಮಾಡಿದಂತಿದೆ. ಚಿತ್ರದ ಆರಂಭದಲ್ಲಿ ಬರುವ ದೃಶ್ಯವು ಸಿನೆಮಾ ಶೂಟಿಂಗ್ ಲೊಕೇಶನ್ ನದ್ದಾಗಿರುತ್ತದೆ. ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಇಲ್ಲಿ ತಮ್ಮದೇ ಪಾತ್ರ ತಾವಾಗಿ ನಟಿಸಿದ್ದಾರೆ. ಅವರಿಗೆ ಹೊಸದೊಂದು ಸ್ಕ್ರಿಪ್ಟ್ ಕಳಿಸುವ ವ್ಯಕ್ತಿ ಅದರ ಕತೆಯನ್ನು ಅರ್ಧದಲ್ಲೇ ನಿಲ್ಲಿಸಿರುತ್ತಾನೆ. ಆ ಕತೆಯಲ್ಲಿ ಆತನ ಪ್ರೇಯಸಿಯೇ ಆತನಿಗೆ ಶೂಟ್ ಮಾಡಿರುತ್ತಾಳೆ ಮಾತ್ರವಲ್ಲ ಅದೇ ವೇಳೆ ಆಕೆಯನ್ನು ಯಾರೋ ಆಗಂತುಕರು ಶೂಟ್ ಮಾಡುತ್ತಾರೆ. ಪ್ರೇಯಸಿ ಆತನನ್ನು ಶೂಟ್ ಮಾಡಿದ್ದೇಕೆ ಮತ್ತು ಆಕೆಯನ್ನು ಶೂಟ್ ಮಾಡಿದ ಆಗಂತುಕರ್ಯಾರು ಎಂಬುದನ್ನು ಅರಿಯುವ ಕುತೂಹಲದಿಂದ ಕತೆ ಕಳಿಸಿದಾತನನ್ನು ಅವರು ಹುಡುಕಿಕೊಂಡು ಹೋಗುತ್ತಾರೆ. ಆತ ಇದೆಲ್ಲ ತನ್ನದೇ ಕತೆ ಎಂದು ಹೇಳಿ ಪ್ರೇಯಸಿಗೆ ತನ್ನ ಮೇಲಿದ್ದ ಹಗೆಗೆ ಒಂದು ಫ್ಲ್ಯಾಶ್ ಬ್ಯಾಕ್ ಕಾರಣವನ್ನೂ ಕೊಡುತ್ತಾನೆ. ಜೊತೆಗೆ ಕ್ಲೈಮ್ಯಾಕ್ಸ್ ಏನಾಗುತ್ತದೆ ಎಂಬ ಸಂದೇಹಕ್ಕೆ 'ಅದು ಇನ್ನಷ್ಟೇ ನಡೆಯಬೇಕಿದೆ' ಎನ್ನುತ್ತಾನೆ. ನಿರ್ದೇಶಕರು ಮತ್ತು ತಂಡ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಕ್ಲೈಮ್ಯಾಕ್ಸ್ ಏನಾಗುತ್ತದೆಂದು ನೋಡುತ್ತಾರೆ. ಆಸಕ್ತಿಯಿದ್ದವರು ಅದನ್ನು ಚಿತ್ರಮಂದಿರದಲ್ಲಿ ನೋಡಬಹುದು. ಚಿತ್ರದೊಳಗೆ ಬರುವ 'ಸಿನೆಮಾದ ಶೂಟಿಂಗ್, ನಿರ್ದೇಶಕ, ನಾಯಕನ ಪ್ರೀತಿಗಾಗಿ ಸಾಯುವುದಾಗಿ ಹೇಳುವ ನಾಯಕಿ ನಾಯಕನನ್ನೇ ಕೊಲ್ಲಲೆತ್ನಿಸುವುದು, ಕೊನೆಗೂ ಆಕೆ ಹಾಗೆ ಮಾಡಲು ಬ್ಲ್ಯಾಕ್ ಮೇಲ್ ಗೆ ಒಳಗಾಗಿದ್ದೇ ಕಾರಣ ಎನ್ನುವುದು, ರಿವರ್ಸ್ ಸ್ಕ್ರೀ ಪ್ಲೇ ಹೆಣೆದಿರುವುದು, ನಾಯಕ ದಮ್ಮುಕಟ್ಟಿ ನಾಯಕಿಗೆ ವೇಗದ ಸಂಭಾಷಣೆಗಳಿಂದ ಬುದ್ಧಿ ಹೇಳೋದು, ಆಗ ಆತನ ಸುತ್ತಾ ಟ್ರಾಲಿ ಶಾಟ್ ಹಾಕಿರೋದು ಮೊದಲಾದವೆಲ್ಲಾ ಎ ಚಿತ್ರವನ್ನೇ ನೆನಪಿಸುತ್ತದೆ. ಆದರೆ ಒಟ್ಟು ಗುಣಮಟ್ಟ ಮಾತ್ರದಲ್ಲಿ ಮಾತ್ರ ಅದರ ಸನಿಹಕ್ಕೂ ಸುಳಿಯುವ ಅರ್ಹತೆ ಹೊಂದಿಲ್ಲದ ಚಿತ್ರವಿದು. ಯಾಕೆಂದರೆ ಸೀರಿಯಸ್ಸಾಗಿ ಹೇಳುವ ನಾಯಕನ ಬಿಲ್ಡಪ್ ಸಂಭಾಷಣೆಗಳೇ ಹಾಸ್ಯಾತ್ಮಕವೆನಿಸುತ್ತದೆ. ಮೂಗಲ್ಲೇ ಗೊಣಗುವಂತೆ ಕೇಳಿಸುವುದರಿಂದ ಕೆಲವೊಂದು ಕಡೆ ಅರ್ಥವಾಗದೇ ಹೋಗುವುದುಂಟು. ನಾಯಕನ ಕತೆ ಓದುವ ನಿರ್ದೇಶಕ ಅದನ್ನು ತಾನು ಕಂಡಿರದ ಆತನ ಮುಖ ಚಹರೆಯೊಂದಿಗೆ ಕಲ್ಪಿಸುವುದು ಹೇಗೆ? ವಿಳಾಸ ಸಿಕ್ಕೊಡನೆ ಆತನನ್ನು ಭೇಟಿಯಾಗಿ ನಿನ್ನ ಲೈಫ್ ಕತೆ ಏನಾಯಿತೆಂದು ಕೇಳುವುದು ಹೇಗೆ? ಓಂ ಪ್ರಕಾಶ್ ರಾವ್ ನಿಜಕ್ಕೂ ನಾಯಕನಿಗೋಸ್ಕರ ರಿವಾಲ್ವರ್ ಎತ್ತಿಕೊಳ್ಳಬಲ್ಲರಾ ? ಎಂಬ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರವಿಲ್ಲ. ಖಳನಾಯಕರಾಗಿ ಅವಿನಾಶ್, ಮುನಿ ಸೇರಿದಂತೆ ನಾಯಕನ ತಂದೆತಾಯಿಯಾಗಿ ರಾಮಕೃಷ್ಣ, ಪವಿತ್ರಾ ಲೋಕೇಶ್ ಮೊದಲಾದವರ ತಾರಾಗಣ ಚಿತ್ರದಲ್ಲಿದೆ. ನಾಯಕನ ಮಿತ್ರರ ನಟನೆ ಗಮನಾರ್ಹ. ನಾಯಕಿ ಶುಭಾ ಪೂಂಜಾ ಗ್ಲಾಮರ್, ಒಂದೆರಡು ಹಾಟ್, ಐಟಮ್ಮು, ಮೆಲಡಿ ಹಾಡುಗಳು ಮತ್ತು ಈ ಕತೆಯಷ್ಟೇ ನಿಮಗೆ ಸಾಕು ಎನ್ನುವುದಾದರೆ ಖಂಡಿತಾ ಚಿತ್ರವನ್ನು ನೋಡಬಹುದು.
2014-12-20 · FilmySphere critic
- Review of Interstellar · 5/5
Another masterpiece from Christopher Nolan. It is a Sci-Fi epic like no other. You are in for a visual treat and some amazing background score by Hans Zimmer. The director takes you on a journey with an intricate plot that showcases an astronaut father's love for his daughter and family, emotional at times. Matthew McConaughey, Jessica Chastain, Anne Hathaway each at their best along with the rest of the cast have done great justice to their roles. One must really appreciate the amount of research Nolan does before making a movie. Concepts like Wormholes, Space-Time dilation, Effects of gravity, Quantum Mechanics, Tesseract , ET exploration, multi-dimensional Universe keeps the viewer constantly at thoughts. Nothing beats the climax. If you are a Nolanite, go watch it. If not, please go watch it...
2014-12-17
- Review of Naanu Hemanth Avalu Sevanthi
ನಾನು ಹೇಮಂತ್ ಅವಳು ಸೇವಂತಿ ಕಂಡವನ ಸ್ಥಿತಿ; ದೇವರೇ ಗತಿ! ಸದಭಿರುಚಿಯ ಚಿತ್ರ ತಮ್ಮದೆಂಬ ಬಗ್ಗೆ ಬಹಳಷ್ಟು ಭರವಸೆಗಳನ್ನು ನೀಡಿದ್ದ ನಿರ್ದೇಶಕ ಸುಧಾಕರ ಬನ್ನಂಜೆ ನೀಡಿರುವ ಒಂದು ಮಸಾಲ ರಂಜನೆಯ ತೀರಾ ಸಾಧಾರಣ ಚಿತ್ರವೇ ನಾನು ಹೇಮಂತ್ ಅವಳು ಸೇವಂತಿ. ಚಿತ್ರದಲ್ಲಿ ಕತೆಯೆಂದು ಹೇಳಲು ಯಾವುದೇ ಗಟ್ಟಿ ವಸ್ತುವಿಲ್ಲ. ಒನ್ ಲೈನಾಗಿ ಹೇಳುವುದಾದರೆ ಆದರ್ಶ ಪ್ರೇಮದ ಕನಸುಕಂಡ ಯುವಕನೋರ್ವ ತನ್ನ ಕಚೇರಿಗೆ ಹೊಸದಾಗಿ ಬರುವ ಮೇಲಧಿಕಾರಿಣಿಯನ್ನು ಪ್ರೀತಿಸುತ್ತಾನೆ. ಆದರೆ ಚಿತ್ರದ ಕೊನೆಯ ತನಕವೂ ಏಕಮುಖವಾಗಿ ಪ್ರೀತಿಸುವ ಆತ ಕೊನೆಯಲ್ಲಿ ಅದನ್ನು ಆಕೆಗೆ ತಿಳಿಸಲು ಮುಂದಾಗುತ್ತಾನೆ. ಇನ್ನೇನು ಹೇಳಬೇಕೆಂದುಕೊಂಡಾಗ ಆಕೆಬೇರೊಬ್ಬನನ್ನು ಪ್ರೀತಿಸುತ್ತಿದ್ದಳೆಂಬ ಸಾಕ್ಷ್ಯ ಸಿಗುತ್ತದೆ. ಆದರೆ ಅದು ನಿಜವೇ ಎಂಬ ಪ್ರಶ್ನೆಗೆ ಎಲ್ಲರಿಗೂ ಮೊದಲೇ ಹೊಳೆಯಬಲ್ಲ ಸಾಮಾನ್ಯ ಉತ್ತರವೇ ಕ್ಲೈಮ್ಯಾಕ್ಸ್ ನಲ್ಲಿದೆ. ಹೊಸ ಕಲಾವಿದರ ತಂಡ ಚಿತ್ರದ ಆಕರ್ಷಣೆಯೇನೋ ಹೌದು. ಆದರೆ ಕ್ಯಾಮರಾ ಸ್ಟ್ಯಾಂಡ್ ಹಾಕಿ ಒಂದೇ ಫ್ರೇಮ್ ನಲ್ಲಿ ಚಿತ್ರೀಕರಣ ನಡೆಸಿದಂತೆ ಕಾಣಿಸುವ ದೃಶ್ಯದಲ್ಲಿ ನಾಲ್ಕೈದು ಯುವಕರ ಸ್ಟ್ಯಾಂಡರ್ಡ್ ಇಲ್ಲದ ಸ್ಟ್ಯಾಂಡಿಂಗ್ ಕಾಮಿಡಿ ಯಾವುದೋ ಕಳಪೆ ಹಾಸ್ಯ ಧಾರಾವಾಹಿಯನ್ನು ನೆನಪಿಸುತ್ತದೆ. ಅವರಲ್ಲಿ ನಾಯಕ ರಜನೀಶ್ ಕೂಡ ಸೇರಿರುವುದು ವಿಪರ್ಯಾಸ. ಆತನ ನಗು ಮತ್ತು ಸೌಂದರ್ಯ ಇತರರಿಗಿಂತ ಉತ್ತಮನೆಂದು ತೋರಿಸಿಕೊಟ್ಟರೂ ಆತನಿಂದ ಗೊಂಬೆ ಮಾದರಿಯಲ್ಲಿ ಕಣ್ಣರಳಿಸಿಕೊಂಡು ಸಂಭಾಷಣೆ ಹೇಳಿಸಿರುವ ರೀತಿ ನಿರ್ದೇಶಕರಿಗೇ ಪ್ರೀತಿ. ಚಿತ್ರವಿಡೀ ನಾಯಕಿಯನ್ನು ತನ್ನ ಬಳಿಯಲ್ಲಿದ್ದುಕೊಂಡಂತೆ ಅಂದುಕೊಂಡು ಡ್ರೀಮ್ ಸಾಂಗ್ ಮುಗಿದ ಬಳಿಕ ಭುಜವೆಗರಿಸಿ ಬೆಚ್ಚಿ ಬೀಳುವ ಆತನನ್ನು ಕಂಡು ಪ್ರೇಕ್ಷಕ ಸುಸ್ತಾಗುತ್ತಾನೆ. ಮತ್ತೋರ್ವ ನಾಯಕ ವಿಜೇಶ್ ಫೈಟ್ ಸೀನ್ ಒಂದರಲ್ಲಿ ತಮ್ಮ ದೇಹಧಾರ್ಡ್ಯೆತೆ ಪ್ರದರ್ಶಿಸಿದ್ದಾರೆ. ಹೊಸಬರ ತಂಡದಲ್ಲಿ ನಾಯಕಿ ಲೇಖಾಚಂದ್ರ ತಮ್ಮ ನಟನೆ ಮತ್ತು ಗ್ಲಾಮರ್ ನಿಂದ ಭರವಸೆ ಮೂಡಿಸುವುದು ಸುಳ್ಳಲ್ಲ. ಅದೇ ರೀತಿ ಮಲ್ನಾಡ್ ಮಂಜು ನಗಿಸುವ ಪ್ರಯತ್ನ ಮಾಡಿದ್ದಾರೆ. ಉಳಿದಂತೆ ನಾಯಕನ ಮಿತ್ರರಾಗಲೀ, ಕಚೇರಿಯಲ್ಲಿರುವವರಾಗಲೀ ಪ್ರೇಮಕಾಮದಾಟದಲ್ಲೇ ಚಿತ್ರವನ್ನು ತುಂಬಿದ್ದಾರೆ. ಕಾಶೀನಾಥರ ಎಂಬತ್ತರ ದಶಕದ ಚಿತ್ರಗಳ ಬಗ್ಗೆ ತಾವು ಬರೆದ ಸಂಭಾಷಣೆಯಲ್ಲಿ ಉಲ್ಲೇಖಿಸಿರುವ ನಿರ್ದೇಶಕರು ತಮ್ಮ 25 ವರ್ಷಗಳ ಸಿನೆಮಾ ಅನುಭವದಲ್ಲಿ ಇನ್ನೂ ಅಷ್ಟೇ ಹಿಂದೆ ಉಳಿದಿರುವುದನ್ನು ಇಲ್ಲಿ ಸಾಬೀತು ಪಡಿಸಿದ್ದಾರೆ! ಕಿರುತೆರೆ ಸ್ಟಾರ್ ವಿಜಯ ಸೂರ್ಯನ ಗೆಸ್ಟ್ ಅಪಿಯರೆನ್ಸ್ ಗೀತೆಯನ್ನು ಬಿಟ್ಟರೆ ನಿಜಕ್ಕೂ ಮನೆಮಂದಿ ಕುಳಿತು ಸಂಭ್ರಮಿಸುವಂಥ ದೃಶ್ಯಗಳು ಚಿತ್ರದಲ್ಲಿಲ್ಲವೆನ್ನಬಹುದು. ಸಾಧು ಕೋಕಿಲಾರ ವೇಣುಗೋಪಾಲ ಕೃಷ್ಣ ಸ್ವಾಮಿಯಂತೂ ವಯಸ್ಕರ ಚಿತ್ರಗಳಲ್ಲಿನ ಮಾದರಿಯ ಪಾತ್ರದಂತೆ ವರ್ತಿಸುವುದು ದುರಂತ. ಒಟ್ಟಿನಲ್ಲಿ ಚಿತ್ರದ ಆಯ್ಕೆ ಪ್ರೇಕ್ಷಕರಿಗೆ ಬಿಟ್ಟಿದ್ದು.
2014-12-13 · FilmySphere critic
- Review of Jai Bajrangabali
ಜೈ ಭಜರಂಗ ಬಲಿ ಸಾಹಸವೊಂದೇ ಆಕರ್ಷಣೆ ತಿಳಿ! ಅಜೇಯ ರಾವ್ ನಾಯಕನಾಗಿದ್ದುಕೊಂಡು ತಡವಾಗಿ ತೆರೆಕಾಣುತ್ತಿರುವ ಚಿತ್ರ ಜೈ ಭಜರಂಗ ಬಲಿ. ಚಿತ್ರದ ಕಾನ್ಸೆಪ್ಟ್ ಮತ್ತು ನಿರೂಪಣೆಯ ಶೈಲಿ ಕೂಡ ಒಂದೆರಡು ದಶಕದ ಹಿಂದಿನ ರೀತಿಯಲ್ಲೇ ಇರುವುದು ಮಾತ್ರ ವಿಪರ್ಯಾಸ. ಹೇಗಾದರೂ ಮಾಡಿ ದುಡ್ಡು ಮಾಡಬೇಕೆನ್ನುವ ಯುವಕರ ತಂಡದಲ್ಲಿ ಚಿತ್ರದ ನಾಯಕ (ಅಜೇಯ)ನೂ ಒಬ್ಬ. ಪೊಲೀಸ್ ಚೆಕ್ಕಿಂಗ್ ನಡೆಸುವ ಏರಿಯಾಗಳಲ್ಲಿ ಹೆಲ್ಮೆಟ್ ಬಾಡಿಗೆ ನೀಡುವ ಆತನ ಕುತಂತ್ರಿ ಯೋಜನೆಯಲ್ಲಿ ನಾಯಕಿ (ಸಿಂಧೂ ಲೋಕನಾಥ್) ಪರಿಚಯವಾಗುತ್ತಾಳೆ. ಹೆಲ್ಮೆಟ್ ನ ಬಾಡಿಗೆಯಾದ 10ರೂಪಾಯಿಗಳನ್ನು ನೀಡಲು ದುಡ್ಡಿಲ್ಲದ ಕಾರಣ ತನ್ನ ಕೈನಲ್ಲಿದ್ದ ಉಂಗುರವನ್ನೇ ಆತನಿಗೆ ನೀಡುತ್ತಾಳೆ. ಆದರೆ ಅದನ್ನು ವಾಪಾಸು ಪಡೆಯುವ ಪ್ರಯತ್ನಗಳಲ್ಲಿ ಆಕೆ ನಾಯಕನಿಗೆ ಹತ್ತಿರವಾಗುತ್ತಾಳೆ. ಇನ್ನೇನು ಪರಸ್ಪರ ಪ್ರೀತಿಯನ್ನು ಹೇಳಬೇಕು ಎನ್ನುಷ್ಟರಲ್ಲಿ ನಾಯಕನ ರೌಡಿಸಂ ವ್ಯಕ್ತಿತ್ವದ ಬಗ್ಗೆ ಆಕೆಗೆ ಅರಿವಾಗಿ ಆಕೆ ದೂರಾಗುತ್ತಾಳೆ. ನಾಟಿ ವೈದ್ಯ(ಅನಂತನಾಗ್)ನ ಮಗಳಾದ ಆಕೆ ಆತನಿಂದ ದೂರವಿದ್ದುಕೊಂಡು ವಿದೇಶದಲ್ಲಿ ಡಾಕ್ಟರಾಗಿರುವ ತಾಯಿ(ಶ್ರುತಿ ನಾಯ್ಡು) ಜೊತೆಗೆ ಇರುತ್ತಾಳೆ. ರಜಾದಲ್ಲಿ ತಂದೆಯ ಮನೆಗೆಂದು ಬಂದಿದ್ದ ಆಕೆಗೆ ಅಜೇಯನ ಘಟನೆಯಿಂದ ನೊಂದು ಮತ್ತೆ ತಾಯಿಯ ಬಳಿಗೆ ಹೊರಟು ನಿಲ್ಲುತ್ತಾಳೆ. ಆದರೆ ಇದೇ ವೇಳೆ ನಾಯಕಿ ಮತ್ತು ನಾಯಕ ಪೊಲೀಸರ ಬಂಧನಕ್ಕೊಳಗಾಗುತ್ತಾರೆ. ಅಲ್ಲಿಗೆ ಇಂಟರ್ ವೆಲ್. ಮಧ್ಯಂತರದ ಬಳಿಕ ಅವರ ಬಂಧನಕ್ಕೆ ಕಾರಣವೇನೆಂಬುದು ಗೊತ್ತಾಗುತ್ತದೆ. ಅವರಿಬ್ಬರೂ ಸೇರಿ ಆಂಜನೇಯನ (ಭಜರಂಗಿ) ಚಿನ್ನದ ವಿಗ್ರಹವೊಂದನ್ನು ಅಪಹರಿಸಿರುವ ಆರೋಪ ಮತ್ತು ಅದರಿಂದ ಎದುರಿಸಬೇಕಾದ ಸಮಸ್ಯೆಗಳನ್ನು ಉಳಿದ ಭಾಗ ಹೇಳುತ್ತದೆ. ನಿರೀಕ್ಷೆಯಂತೆ ಕ್ಲೈಮ್ಯಾಕ್ಸ್ ನಲ್ಲಿ ಅವರು ಈ ಸಮಸ್ಯೆಯಿಂದ ಹೇಗೆ ಹೊರಗೆ ಬರುತ್ತಾರೆ; ನಿಜವಾದ ಕಳ್ಳರು ಯಾರು ಎಂಬುದನ್ನು ತೋರಿಸಲಾಗುತ್ತದೆ. ಚಿತ್ರದಲ್ಲಿ ಒಳ್ಳೆಯ ಮನೆಯಲ್ಲಿ ಹುಟ್ಟಿರುವ ನಾಯಕ ಪೋಲಿಯಾಗಲು ಕಾರಣವೇನೆಂಬುದನ್ನು ಹೇಳಿಲ್ಲ. ಆತನ ತಂದೆಯಾಗಿ ಮಂಗಳೂರು ಸುರೇಶ್ ಒಂದೆರಡು ಕಡೆ ಕಾಣಿಸಿಕೊಂಡಿದ್ದಾರೆ. ನಾಟಿವೈದ್ಯನಾಗಿ ಅನಂತನಾಗ್ ಲುಕ್ ಗಷ್ಟೇ ಸೀಮಿತ. ವಿನಾಯಕರಾಮ್ ಕಲಗಾರು ಬರೆದ ಸಂಭಾಷಣೆಗಳು ಸಾಧಾರಣವಾಗಿವೆ. ಚಿತ್ರದಲ್ಲಿಯೂ ಅವರು ಸೀರಿಯಲ್ ಸಂಭಾಷಣಾಕಾರರನ್ನು ಬೆಂಬಲಿಸಲು ಹೊರಟಂತಿದೆ. ಚಿತ್ರದ ಹಾಡುಗಳು ಹೈಲೈಟಾಗಿದ್ದರೂ ಹರಿಕೃಷ್ಣ ತಮ್ಮ ಜಾಕಿ ಶೈಲಿಯ ಟ್ಯೂನ್ ನಲ್ಲೇ ಎದ್ದುಬಿದ್ದು ಹೊರಳಾಡಿರುವುದನ್ನು ಆಲಿಸಬಹುದು. ಐಟಂ ಹಾಡೊಂದರಲ್ಲಿ ನಾಗಶೇಖರ್ ಕೂಡ ಅನಗತ್ಯವಾಗಿ ಬಂದು ಹೋಗುತ್ತಾರೆ. ಶೋಭರಾಜ್ ರ ಲವಲವಿಕೆ, ರವಿಶಂಕರ್ ರ ಹೂಂಕರಿಕೆ ಕೂಡ ಚಿತ್ರಕ್ಕೆ ಯಾವುದೇ ರೀತಿ ಸಹಾಯ ಮಾಡಿಲ್ಲ. ಹೊಡೆದಾಟದ ದೃಶ್ಯಗಳನ್ನು ಮಾತ್ರ ಚಿತ್ರದ ಹೈಲೈಟ್ ಎನ್ನಬಹುದು. ಅದರಲ್ಲಿ ನಟ ಆದಿಲೋಕೇಶ್ ಮಾತ್ರವಲ್ಲ; ನಾಯಕ ಅಜೇಯ ರಾವ್ ಮತ್ತು ನಾಯಕಿ ಸಿಂಧೂ ಲೋಕನಾಥ್ ಒಳ್ಳೆಯ ಸ್ಕೋರ್ ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ಚಾಲಿಪೋಲಿಲು ತುಳು ಚಿತ್ರದ ಕತೆಯನ್ನು ಹೋಲುವ ಈ ಸಿನೆಮಾ ಇದರ ಸಾಹಸ ಸನ್ನಿವೇಶಕ್ಕಾಗಿ ಮಾತ್ರ ಆಕರ್ಷಣೆಯನ್ನು ಉಳಿಸಿಕೊಂಡಿದೆ ಎನ್ನಬಹುದು.
2014-12-13 · FilmySphere critic
- Review of Ambareesha · 3/5
Ambareesha-The REBEL Review : fail ಆಗ್ತೀನಿ ಅಂತ ತಿಳ್ಕೊಂಡು Exam attend ಮಾಡಿ ಜಸ್ಟ್ ಪಾಸ್ ಆದ್ರೆ ಎಷ್ಟ್ ಆನಂದ ಆಗುತ್ತೋ, ಅಷ್ಟ ಆನಂದ ಆಯ್ತು. (Negative review ಬಂದ್ಮೇಲೆ ತುಂಬಾ ಬೇಜಾರಲ್ಲಿ ಸಿನಿಮಾ ನೋಡೋಕೆ ಹೋದೆ ಆಗ ಮನಸ್ಸಿಗೆ ಇಷ್ಟ ಆಗೋ ಕೆಲ ದೃಶ್ಯ ಮನಸಿಗ್ಗೆ ಖುಷಿ ಕೊಡ್ತು ) Story : ಶ್ರೀ ಕ್ಷೇತ್ರ ಮಂತ್ರಾಲಯದ ಬಳಿ ಇರೋ ಹಳ್ಳಿಯಲ್ಲಿ ಮೂಕ ಜೀವಿಗಳ ಧನಿಯಾಗಿ ಗೋಶಾಲೆ ತೆರೆದಿರುತ್ತಾನೆ ನಾಯಕ. ಆ ಊರಿನ ಮುಖಂಡ ರೈತರ ಬಳಿ ಸಾವಿರ ಎಕ್ಕರೆ ಭೂ ಕಬಳಿಕೆ ಮಾಡಲು ಮುಂದಾದಾಗ ಅಂಬರೀಶ ಮುಖಂಡನ ವಿರುದ್ಧ ತಿರುಗಿ ಬೀಳುತ್ತಾನೆ. ನಂತರ ಸಾಲದ ಹೊರೆ ತೀರಿಸಲು ಕೆಂಪೇಗೌಡರು ಕಟ್ಟಿರೋ ಬೆಂಗಳೂರಿಗೆ ಸಾಮಾನ್ಯ ಕೂಲಿ ಕಾರ್ಮಿಕನಾಗಿ ಬರುತ್ತಾರೆ. ಅವರು ಈ ಬೆಂಗಳೂರಿಗೆ ಬರೋ ಕಾರಣವೇ ಇಲ್ಲಿ ಅವರು ಮಾಡೋ operation ಕೆಂಪೇಗೌಡ'ಗೆ ನೆಪವಾಗುತ್ತೆ. ಅಂಬಿ ಕೂಲಿಯಾಗಿ ದುಡಿಯೋ construction ಕಂಪನಿ ಮಾಲಿಕನ ಮಗಳು ಸ್ಮಿತ (ಪ್ರಿಯಮಣಿ) ತುಂಬಾನೆ ಬೋಲ್ಡ್ ಕ್ಯಾರೆಕ್ಟರ್ ಈಕೆಯದ್ದು, but ಅದೇ ಅವಳನ್ನ ಸಮಸ್ಯೆಗೆ ಈಡು ಮಾಡುತ್ತೆ. ಇನ್ನು ಮೂಕ ಜೀವಿಗಳನ್ನು ಪ್ರೀತಿಸೋ ಅಂಬಿ ಯನ್ನು ಕಣ್ಣ ರೆಪ್ಪೆ ಯಲ್ಲೇ ಇಟ್ಟು ಪ್ರೀತಿಸೋ ಬೆಡಗಿ ಕರ್ಣ(ರಚಿತ ರಾಮ್), ನಿಜಕ್ಕೂ soft ಕ್ಯಾರೆಕ್ಟರ್ ಈಕೆಯದ್ದು. ಇನ್ನು ಒಂದೇ ಹಾಡಿನಲ್ಲಿ ಕೆಂಪೇಗೌಡರ ಪಾತ್ರದಲ್ಲಿ ಬರೋ ರೆಬೆಲ್ ಸ್ಟಾರ್ ಅಂಬರೀಶ್ ನೋಡೋಕ್ಕೆ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದೆ ಅವರ ಖದರು. ಬೆಂಗಳೂರಿನ ಲ್ಯಾಂಡ್ ಮಾಫಿಯಾ ತಡೆಯೋಕೆ ನಡೆಸೋ ಹೋರಾಟವೇ "ಆಪರೇಷನ್ ಕೆಂಪೇಗೌಡ". ಈ ಸಣ್ಣ ಎಳೆಯೇ "ಅಂಬರೀಶ" ಚಿತ್ರದ್ದು. Performance : ಅಂಬರೀಶ 'ನಾಗಿ ಚಾಲೆಂಜಿಂಗ್ ಸ್ಟಾರ್ ಸೂಪರ್, ಕೆಂಪೇಗೌಡ ರಾಗಿ ಡಾ ।। ಅಂಬರೀಷ್ ಕ್ಲಾಸ್. ಇನ್ನು ನಾಯಕಿಯರಿಗೆ ಅವರವರ ಪಾತ್ರದಲ್ಲಿ ಫುಲ್ ಮಾರ್ಕ್ಸ್. ಇನ್ನು ಮಿಕ್ಕಿರೋ ಎಲ್ಲಾ ಕ್ಯಾರೆಕ್ಟರ್ ಗಳು ಒಳ್ಳೆ ಅಭಿನಯ. ಅದರಲ್ಲೂ ಶರತ್ ಲೋಹಿತಾಶ್ವ ಅವರ ಅಭಿನಯ ಸೂಪರ್ . ಇನ್ನು ಮೇನ್ villain 'RDX ' ನಿಜವಾಗಲು waste. Music : ಸೂಪರ್ BGM ಫ್ರಮ್ ಹರಿಕೃಷ್ಣ. ಡೈರೆಕ್ಷನ್: ನಿಜಕ್ಕೂ ಒಳ್ಳೆ ಕಥೆ ಎಳೆ'ಗೆ ಅರ್ಧ ತಲೆ ಉಪಯೋಗಿಸಿರೋ ಡೈರೆಕ್ಟರ್, first half 'ಗೆ ಉಳಿದರ್ಧ ತಲೆ ನು ಬಳಸಿ, ಸೆಕೆಂಡ್ half ಹಾಳುಮಾಡಾಕಿದ್ದಾರೆ. ಪ್ಲಸ್ : ದರ್ಶನ್, ಅಂಬರೀಶ್, ಶರತ್ ಲೋಹಿತಾಶ್ವ, ಪ್ರಿಯ ಮಣಿ, ರಚಿತ ರಾಮ್, ಹಾಡುಗಳು ಹಾಗು ಡೈಲಾಗ್ಸ್. (4/5) ಮೈನಸ್ : ಡೈರೆಕ್ಷನ್, ಎಡಿಟರ್ ನ ಜಿಪುಣತನ, ಹಾಗು ಸ್ಕ್ರೀನ್ ಪ್ಲೇ, Comedy actors wasted (2/5) Overall Rating : (3/5) (Felt bad after seeing the movie. Really i waited for this from past 6 months as a Challenging star Darshan- Fans.)
2014-11-21
- Review of Kaththi · 5/5
best story oriented movie for vijay this year..once again murugadaas proved this best direction..-:)
2014-11-18
- Review of Haider · 4.5/5
Haider is not a love story, not a crime story, not a con story, not an action story ... its a chutzpa story..
2014-10-13
- Review of Bahaddur
Very good entertainer.. Dhruva Sarja rocks....
2014-10-06
- Review of Maanikya · 4/5
Awesome movie.. Crazy star and kitchen rocks...
2014-09-30
- Review of Ugramm · 4/5
Best of Sri Murali after Chandrachakori. ...
2014-09-30
- Review of Power · 4/5
Ravi Tea at his best..... movie is awesome comedy journey.
2014-09-30
- Review of Aagadu · 1/5
Didn't expect this from prince.. being a big fan of Mahesh baby I was disappointed..
2014-09-30
- Review of Drishya · 5/5
Different kind of role performed by Ravichandran, one of the best thriller movie in recent times in Kannada Film Industry. Must watch.
2014-07-08
- Review of Gajakesari · 3/5
All those who say Kannada movies are losing their quality here is the answer, “Gajakesari” is a kind of film that evokes hope on Sandalwood, what a movie!, out and out entertainer along with mind blowing script and awesome performance. “Gajakesari” is the complete movie that has an equal mixtures of each and every content that a successful movie must have, Krishna who tasted success as a cinematographer in the super hit flick ‘Mungaru Male’ had done a good job as a captain of ‘Gajakesari’, he had now emerged as one of the most potential director in Kannada film industry, ‘Gajakesari’ stands with a complete unique genre that one hadn't tried in Kannada movies, film has a good composition and neat presentation of the two consequent age stories, the most highlighting part of this movie is its graphics those are so fine and perfectly handle they never reveal the graphic work onscreen, cinematography is just incredible, songs are okay because the lyrics and the music doesn't seems to sync properly but it do has catchy tone that surely makes you tap your feet, dialogues are very superb & has very typical Kannada touch, everything are fine apart from some over exaggerated dialogues on praising some particular legendary Kannada actor, somewhere in the middle of the movie some scene might had required scissor cut due to its dragging time. Speaking about performances, it’s an incredible acting by lead actor Yash, no doubt he is endowed with required acting skills, Amulya is good and has tried to provide justice to her role, this is where director Krishna had made a mistake in casting he would had roped some other actress who actually would had perfectly paired with Yash, but no problem it never seems to be a huge fault, the power of this movie is its script, very perfect story-line that hold the curiosity till the end, the scene where the Bahubali character fights against the advent of an opposite force individually, seems to be directly inspired by real life incident of the Maratha martyr ‘Baji Prabhu Deshpande’, who fought against enemy’s upraise till his last breath, ‘Gajakesari’ is a new hope and light of Kannada cinema, it’s a perfect milestone for further good movies, it had proved that Kannada film makers could come out of the remake ideas and can come up with some innovative script, overall ‘Gajakesari’ is a fine movie.
2014-06-17 · FilmySphere critic
- Review of Oggarane · 4/5
Make you sunday special by watching Oggarane movie with your family... don't miss it guys..
2014-06-08
- Review of Oggarane · 4/5
Watched a good movie after a long time, as a director he has done a good job in getting job done by everyone.
2014-06-08
- Review of Maanikya · 4/5
Its brilliant movie, good to see ravichandran and sudeep together
2014-05-26
- Review of The Amazing Spider-Man 2 · 3.5/5
'Amazing Spider man 2' actually has an amazing contents, this Spidy comes not just with lots of actions he also makes you to cry, fall in love, and makes you smile for his humor, Spidy is cool, and we could specially notice that this sequence had paid much important for contents like relation, love etc, but it even never disappoints all those action lovers, you will get to see an actual amazing action sequences between Electro, Spidy and Harry the villain, it has very catchy story that holds your sense of thrill till the credit line flows onscreen, Andrew and Emma share good chemistry onscreen, they are lovely couples, Jamie Foxx is awesome as a villain, the screen play is so fantastic that you get to see many scenes that enhances your emotional intensity, it puzzles your emotions, Spidy seems cool, soon he turns lover boy and stand as a daredevil fighter against bad boys, but it could be bit more better with much more action and banging moves, at last you find some story left to have its sequence continuity, anyhow for all those Spiderman Lover this is a good flick to watch, it's much more superb with 3D experience.
2014-05-15 · FilmySphere critic
- Review of Ugramm · 4/5
Outstanding screenplay,Cinematography and background score.Got crazy about it.!!other Songs seems to be unnecessary for such a solid story line other than Ugram theme song!
2014-05-09
- Review of Pacific Rim · 4/5
The aliens lies beneath the Pacific Ocean which come up with the help of portal called as ‘breach’, strange monsters ‘Kaiju’ that destroys the human habitats poses threat for mankind, with the single intention to destroy that monster every nation unite together forgetting their enmity and develop a giant humanoid that is manually controlled by two operators through connecting each other by neural bridge, for years long they fight against that strange giant monsters Kaiju and they gradually emerge as a superstars, but the actual challenge arises when they plan to put a complete full stop to that problem, they send some huge Humanoid controlled by some expert operators to the Pacific bed from where those monster enter, with intention to destroy it with huge nuclear blast, well, this is the story line seen in 2013’s ”Pacific Rim”, now to speak about the plot its unique but the humanoid concept remembers you the giant Transformers, and the controlling those humanoid could be seen in Avatar movie and the climax where Becket and Mako get saved with their escape pod remembers you the climax of 2003 ‘The Core’, overall its fantastic with great graphics and action sequences which is truly a visual treat for the viewers , and about the performance, Charlie, Rinko and Idris had done a fine job, if you are a sci-fi lover then you will surely like it.
2014-05-09 · FilmySphere critic
- Review of Lakshmi · 0.5/5
Kannada audience usually come to theater with an intention of thinking at least this time we gonna get to watch some good movie from Sandalwood but movies like 'Lakshmi' makes it false, big budget movie doesn't means that you shoot in foreign locations or shot a heavy budget songs , the richness must be in the script, and to speak about the movie plot its disastrous, Shivaraj Kumar proved that his time is up and better to take retirement and rest in house and let youngsters enter the field, you are big waste, just with few numbers of hit movies like Jogi, Anna Thangi, Om and Bajarangi and all, you can not be considered as a superstar, the story of this movies doesn't suites you at all, Kannada Film Industry actually has good technical crew and strong artists but it fails in grouping good crew, building strong script and in portraying the story on screen effectively, any how if Kannada industry continues with such stupid movies then it surely must think about its survival... :-) All the best :-)
2014-05-08 · FilmySphere critic
- Review of Elysium · 3.5/5
Earth gets over populated, polluted and a becomes a hub of diseases; wealthy people get together and move to the newly formed living space far away from the earth by the name ‘Elysium’, this place is filled with various futuristic advanced technology, like healing machine that can heal very dreadful health problems like leukemia and even makes physically impaired to walk fit, totally mechanized police forces, shuttles that move in supersonic speed and various other stuffs, more than this it highlights the massive gap between poorer and richer and their war for survival, both are ready to kill each other to protect their existence, neatly portrayed story and fine performance by Matt Damon, to make this plot effective they had used the strong sentimental way of presenting the story, this shows that it’s not just the action flick instead it carries some serious contents, but the drawback of this movie is its in-completion of many scenes, especially during the end of antagonists roles and even during some sentimental scenes, overall it’s a nice concept good to watch for some futuristic thriller.
2014-05-08 · FilmySphere critic
- Review of Captain Phillips · 4.5/5
If you want to see anything like quality acting then you better watch Tom Hank’s movies, one among his best movie is ‘Captain Phillips’, Hanks is just incredible in his performance, and to speak about the plot it’s a true incident of Cpt. Richard Phillips that bought on the screen but it has been portrayed fantastically, thumbs up for the director and Screen writer Paul and Billy Ray for their fine work, Tom Hanks is just superb he had acted as if he had actually been caught by those Somalian Pirates , and even Abdi who played a Somalian Pirate was good in his performance, the story and portrayal was heart touching, you might have seen lots of such movie but you like it a lot because of its real and practical way of presenting , it put my mind to think, ‘how will you react when you are stuck in such situation’, it’s worth to watch. :-)
2014-05-04 · FilmySphere critic