From the earlier FilmySphere, kept as published on 2014-11-21. It has not been updated.
Review of Ambareesha
Rating 3/5
Ambareesha-The REBEL Review : fail ಆಗ್ತೀನಿ ಅಂತ ತಿಳ್ಕೊಂಡು Exam attend ಮಾಡಿ ಜಸ್ಟ್ ಪಾಸ್ ಆದ್ರೆ ಎಷ್ಟ್ ಆನಂದ ಆಗುತ್ತೋ, ಅಷ್ಟ ಆನಂದ ಆಯ್ತು. (Negative review ಬಂದ್ಮೇಲೆ ತುಂಬಾ ಬೇಜಾರಲ್ಲಿ ಸಿನಿಮಾ ನೋಡೋಕೆ ಹೋದೆ ಆಗ ಮನಸ್ಸಿಗೆ ಇಷ್ಟ ಆಗೋ ಕೆಲ ದೃಶ್ಯ ಮನಸಿಗ್ಗೆ ಖುಷಿ ಕೊಡ್ತು ) Story : ಶ್ರೀ ಕ್ಷೇತ್ರ ಮಂತ್ರಾಲಯದ ಬಳಿ ಇರೋ ಹಳ್ಳಿಯಲ್ಲಿ ಮೂಕ ಜೀವಿಗಳ ಧನಿಯಾಗಿ ಗೋಶಾಲೆ ತೆರೆದಿರುತ್ತಾನೆ ನಾಯಕ. ಆ ಊರಿನ ಮುಖಂಡ ರೈತರ ಬಳಿ ಸಾವಿರ ಎಕ್ಕರೆ ಭೂ ಕಬಳಿಕೆ ಮಾಡಲು ಮುಂದಾದಾಗ ಅಂಬರೀಶ ಮುಖಂಡನ ವಿರುದ್ಧ ತಿರುಗಿ ಬೀಳುತ್ತಾನೆ. ನಂತರ ಸಾಲದ ಹೊರೆ ತೀರಿಸಲು ಕೆಂಪೇಗೌಡರು ಕಟ್ಟಿರೋ ಬೆಂಗಳೂರಿಗೆ ಸಾಮಾನ್ಯ ಕೂಲಿ ಕಾರ್ಮಿಕನಾಗಿ ಬರುತ್ತಾರೆ. ಅವರು ಈ ಬೆಂಗಳೂರಿಗೆ ಬರೋ ಕಾರಣವೇ ಇಲ್ಲಿ ಅವರು ಮಾಡೋ operation ಕೆಂಪೇಗೌಡ'ಗೆ ನೆಪವಾಗುತ್ತೆ. ಅಂಬಿ ಕೂಲಿಯಾಗಿ ದುಡಿಯೋ construction ಕಂಪನಿ ಮಾಲಿಕನ ಮಗಳು ಸ್ಮಿತ (ಪ್ರಿಯಮಣಿ) ತುಂಬಾನೆ ಬೋಲ್ಡ್ ಕ್ಯಾರೆಕ್ಟರ್ ಈಕೆಯದ್ದು, but ಅದೇ ಅವಳನ್ನ ಸಮಸ್ಯೆಗೆ ಈಡು ಮಾಡುತ್ತೆ. ಇನ್ನು ಮೂಕ ಜೀವಿಗಳನ್ನು ಪ್ರೀತಿಸೋ ಅಂಬಿ ಯನ್ನು ಕಣ್ಣ ರೆಪ್ಪೆ ಯಲ್ಲೇ ಇಟ್ಟು ಪ್ರೀತಿಸೋ ಬೆಡಗಿ ಕರ್ಣ(ರಚಿತ ರಾಮ್), ನಿಜಕ್ಕೂ soft ಕ್ಯಾರೆಕ್ಟರ್ ಈಕೆಯದ್ದು. ಇನ್ನು ಒಂದೇ ಹಾಡಿನಲ್ಲಿ ಕೆಂಪೇಗೌಡರ ಪಾತ್ರದಲ್ಲಿ ಬರೋ ರೆಬೆಲ್ ಸ್ಟಾರ್ ಅಂಬರೀಶ್ ನೋಡೋಕ್ಕೆ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದೆ ಅವರ ಖದರು. ಬೆಂಗಳೂರಿನ ಲ್ಯಾಂಡ್ ಮಾಫಿಯಾ ತಡೆಯೋಕೆ ನಡೆಸೋ ಹೋರಾಟವೇ "ಆಪರೇಷನ್ ಕೆಂಪೇಗೌಡ". ಈ ಸಣ್ಣ ಎಳೆಯೇ "ಅಂಬರೀಶ" ಚಿತ್ರದ್ದು.
Performance : ಅಂಬರೀಶ 'ನಾಗಿ ಚಾಲೆಂಜಿಂಗ್ ಸ್ಟಾರ್ ಸೂಪರ್, ಕೆಂಪೇಗೌಡ ರಾಗಿ ಡಾ ।। ಅಂಬರೀಷ್ ಕ್ಲಾಸ್. ಇನ್ನು ನಾಯಕಿಯರಿಗೆ ಅವರವರ ಪಾತ್ರದಲ್ಲಿ ಫುಲ್ ಮಾರ್ಕ್ಸ್. ಇನ್ನು ಮಿಕ್ಕಿರೋ ಎಲ್ಲಾ ಕ್ಯಾರೆಕ್ಟರ್ ಗಳು ಒಳ್ಳೆ ಅಭಿನಯ. ಅದರಲ್ಲೂ ಶರತ್ ಲೋಹಿತಾಶ್ವ ಅವರ ಅಭಿನಯ ಸೂಪರ್ . ಇನ್ನು ಮೇನ್ villain 'RDX ' ನಿಜವಾಗಲು waste.
Music : ಸೂಪರ್ BGM ಫ್ರಮ್ ಹರಿಕೃಷ್ಣ.
ಡೈರೆಕ್ಷನ್: ನಿಜಕ್ಕೂ ಒಳ್ಳೆ ಕಥೆ ಎಳೆ'ಗೆ ಅರ್ಧ ತಲೆ ಉಪಯೋಗಿಸಿರೋ ಡೈರೆಕ್ಟರ್, first half 'ಗೆ ಉಳಿದರ್ಧ ತಲೆ ನು ಬಳಸಿ, ಸೆಕೆಂಡ್ half ಹಾಳುಮಾಡಾಕಿದ್ದಾರೆ.
ಪ್ಲಸ್ : ದರ್ಶನ್, ಅಂಬರೀಶ್, ಶರತ್ ಲೋಹಿತಾಶ್ವ, ಪ್ರಿಯ ಮಣಿ, ರಚಿತ ರಾಮ್, ಹಾಡುಗಳು ಹಾಗು ಡೈಲಾಗ್ಸ್. (4/5) ಮೈನಸ್ : ಡೈರೆಕ್ಷನ್, ಎಡಿಟರ್ ನ ಜಿಪುಣತನ, ಹಾಗು ಸ್ಕ್ರೀನ್ ಪ್ಲೇ, Comedy actors wasted (2/5)
Overall Rating : (3/5) (Felt bad after seeing the movie. Really i waited for this from past 6 months as a Challenging star Darshan- Fans.)