From the earlier FilmySphere, kept as published on 2015-12-24. It has not been updated.
Review of First Rank Raju
FilmySphere critic · Rating 4/5
ತುಂಬಾ ದಿನದಿಂದ ಅದೇ ಹಳೆ ಕಥೆಗಳನ್ನೂ ನೋಡಿ ಕಂಗಾಲಾಗಿದ್ದ ಮನಸಿಗೆ ಮುದ ನೀಡಿದ "First Rank ರಾಜು" - 4 / 5.
Storyline : ಅತೀ ಸೂಕ್ಷ್ಮ ವಿಚಾರಗಳನ್ನು ಹಾಸ್ಯಾಸ್ಪದ ರೀತಿಯಲ್ಲಿ ಹೇಳಿ ಪ್ರೇಕ್ಷಕನ ಮನ ಒಲೈಸುವುದರಲ್ಲಿ ಗೆದ್ದಿದೆ ಚಿತ್ರ ತಂಡ. ಸದಾ ಜೀವನದುದ್ದಕು ಬರಿ ಗೆಲುವಿನ ಮೆಟ್ಟಿಲೇರುವ ಗೆಲುವಿನ ರುವಾರಿಗೆ ಸೋಲಿನ ರುಚಿ ಉಂಡೊಡನೆ ಸಾವಿಗೆ ಶರಣಾಗೋ ಮೂರ್ಖರಾಗದ್ದಿರಿ, ಮನುಜನ ಬಾಳೆಮ್ಬುದು ಸುಖ - ದುಃಖಗಳ, ಏಳು-ಬೀಳುಗಳ ಸೋಪಾನ. ತಂದೆ ತಾಯಿ ತಾವು ಹೆತ್ತ ಕಂದಮ್ಮನ ಮನದ ಆಸೆ ಅರಿತು ಅವನ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಹೊರತ್ತು ಜಗತ್ತಿನಲ್ಲಿ ಲಂಗಿಲ್ಲದೆ ಲಗಾಮಿಲ್ಲದ್ದೆ ಬಂಧ ಮರೆತು ಪ್ರೀತಿ ತೊರೆದು ಹಣದ ವ್ಯಾಮೋಹದಿಂದ ಓಡುತಿರೋ ಕುದುರೆ ನೀನಾಗೆಂದು ದೂಡಬಾರದು. ಇಂದಿನ education systemನಲ್ಲಿ ಇರೋ ಎಲ್ಲಾ ಕುಂದುಕೊರತೆ ಅಪ್ಪಾ ದೇವ್ರೇ ನಾ ಯಾಕೆ ಇಷ್ಟೊಂದು serious ಆಗಿ ಮಾತಾಡ್ತಿದೀನಿ. Well ಡಾರ್ಲಿಂಗ್ 's ಈ ಕಥೆ ಎಳೆನೆ ನಮ್ಮ ನಿರ್ದೇಶಕರು ಆರಿಸಕೊಂದಿರೋದು ಆದ್ರೆ ತುಂಬಾನೇ ಹಾಸ್ಯಮಯವಾಗಿ ಹೇಳ್ತಾರೆ. Well movie ನೋಡ್ತಿರೋದು First Rank ರಾಜು ಜಾತಿಗೆ ಸೇರ್ದೊರಾದ್ರೆ ನಿದ್ದೆ ಮಾಡ್ತಾರೆ ಯಾಕಂದ್ರೆ ಅವರು ನೋಡ್ತಿರೋ ಕೇಳ್ತಿರೋ ಡೈಲಾಗ್ syllabus ನಲ್ಲಿ ಇರೋಲ್ಲ.
Acting : ದೂದ್ ಪೇಡ ದಿಗಂತ್ ಥರ ಕಾಣೋ ಗುರುನಂದನ್ ಪ್ರಥಮ ಪ್ರಯತ್ನದಲ್ಲೇ ಫಸ್ಟ್ Rank. ನಾಯಕಿಯರು ತುಂಬಾನೇ ಡಬ್ಬಾ ಥರ ಇದ್ದಾರೆ. ಸೆಕೆಂಡ್ heroine ಬೆಸ್ಟ್ compared to ಫಸ್ಟ್ heroine. ಇನ್ನು ಸ್ವಲ್ಪ ಖಾರವಾಗಿ ಮಾತಾಡೊದಾದ್ರೆ ಫಸ್ಟ್ heroine ಫ್ರೆಂಡ್ ಸೂಪರ್ ಇದ್ದಾರೆ. ಆಕ್ಟಿಂಗ್ ಓಕೆ ಓಕೆ ಯಾಕಂದ್ರೆ ಅವರ ಪಾತ್ರಕ್ಕೆ ಅಷ್ಟ importance ಇಲ್ಲ. ತಂದೆ- ತಾಯಿ ಪಾತ್ರದಲ್ಲಿ Achyuth Kumar and Sudha Belawadi Super. ಸುಮ್ನೆ ಹಾಗೆ ಬಂದ್ರು ಸೂಪರ್ message ಕೊಡು Ananth Nag Sir ನಟನೆ ಸೂಪರ್ but could have Utilized ಬೆಟರ್ ಅನಿಸ್ತು. ಸಾದು ಮಹಾರಾಜ್ ನಿಜಕ್ಕೂ ಅದ್ಭುತ ಅಭಿನಯ ನ್ಯೂ characterization ಅನ್ನಿಸ್ತು. ಇನ್ನು ಪ್ರಾಂಶುಪಾಲರ ಪಾತ್ರ ಮಾಡಿರೋ ಮನದೀಪ್ ರೈ ಅದ್ಭುತ ಅಭಿನಯ. ಇನ್ನು ಅವರ ಗೆಳೆಯರ ಬಳಗ ಅಮಿತ್ ಅಂಡ್ ಫ್ರೆಂಡ್ಸ್ ಒಳ್ಳೆ ಅಭಿನಯ.
Technically : ಚಿತ್ರದ ಸಾರಥಿ ನಿಜಕ್ಕೂ ಚೊಚ್ಚಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಸಂಕಲನಾ ಕಾರರು ಚೂರು ಕತ್ರಿ ಹಾಕ್ಬೋದಿತ್ತು. Climax ಇನ್ನು ಚೆನ್ನಾಗಿ ಇರ್ಬೋದಿತ್ತು. ಸಾಂಗ್ಸ್ ಎಲ್ಲಾ ಕಥೆ ಜೊತೆ ಸಾಗುತ್ತೆ ಹಾಗೆ ಅದ್ಭುತವಾಗಿದೆ. Technically ಸ್ವಲ್ಪ dull ಅನ್ನಿಸ್ತು.
Conclusion : ನಿಮ್ಮ ಜೀವನದ ಜಾಂಜಾಟಗಳನೆಲ್ಲ ಮರೆತು ಹೊಟ್ಟೆ ಹುಣಾಗುವಷ್ಟು ನಗುವ category ಗೆ ಸೇರ್ತಾನೆ ನಮ್ಮ "First Rank ರಾಜು". Must Watch :)