From the earlier FilmySphere, kept as published on 2015-10-11. It has not been updated.
Review of Dove
FilmySphere critic · Rating 3.5/5
ಡವ್ ಚಿತ್ರ ವಿಮರ್ಶೆ ರಿಂಗ್ ರೋಡ್ ರಂಗಿನೊಂದಿಗೆ 'ಡವ್'
ಬೆಂಗಳೂರಿನಲ್ಲಿ ನಡೆದ ನೈಜ ಕೊಲೆಯೊಂದನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಸಂತು ಮಾಡಿರುವ ಚಿತ್ರವೇ ಡವ್.
ಚಿತ್ರದ ಮೂಲಕ ಪ್ರಥಮ ಬಾರಿಗೆ ನಾಯಕನಾಗಿರುವ ಅನೂಪ್ ಗೆ ಕಾಲೇಜು ಹುಡುಗನ ಪಾತ್ರ. ಈತನ ಪ್ರೇಯಸಿ ವಕೀಲರೊಬ್ಬರ ಮಗಳು. ಇಬ್ಬರ ಮನೆಯಲ್ಲಿಯೂ ಮದುವೆಗೆ ವಿರೋಧವಿಲ್ಲ ಎಂದ ಮೇಲೆ ಆ ಕತೆಯಲ್ಲಿ ವಿಶೇಷವೂ ಇಲ್ಲ ಬಿಡಿ. ಆದರೆ ನಾಯಕ ಕೊಲೆಯ ಪ್ರಕರಣವೊಂದರಲ್ಲಿ ಸಿಕ್ಕಿಕೊಳ್ಳುತ್ತಾನೆ. ಬಳಿಕ ಆತನೇ ನಿಜವಾದ ಕೊಲೆಗಾರರ ಗುರುತು ಪತ್ತೆ ಮಾಡಿ ಅವರಿಗೆ ಶಿಕ್ಷೆ ಕೊಡುವಲ್ಲಿಗೆ ಚಿತ್ರ ಮುಗಿಯುತ್ತದೆ. ಅಲ್ಲಿಗೆ ಅದೊಂದು ಸಾಧಾರಣ ಕತೆ. ಆದರೆ ನಾಯಕನ ಪಾತ್ರವನ್ನೂ ದಾಟಿ ಚಿತ್ರ ಕತೆಯ ವ್ಯಾಪ್ತಿ ದೊಡ್ಡದಾಗಿ ಸಾಗುತ್ತದೆ. ನಾಯಕನನ್ನು ಅಪರಾಧಿಯನ್ನಾಗಿಸಿದ ಆ ಕೊಲೆ ಹೇಗೆ ನಡೆದಿರುತ್ತದೆ ಎಂಬುದೇ ಚಿತ್ರದ ಪ್ರಮುಖ ಭಾಗ. ಶ್ರೀಮಂತ ಹುಡುಗಿಯೊಬ್ಬಳಿಗೆ ಸಿಸಿಬಿ ಅಧಿಕಾರಿಯ ಪುತ್ರನೊಂದಿಗೆ ವಿವಾಹ ನಿಶ್ಚಿತಾರ್ಥವಾಗುತ್ತದೆ. ಆದರೆ ಅದಕ್ಕೂ ಮೊದಲು ಆಕೆ ತನ್ನ ಪ್ರಿಯಕರನಾಗಿದ್ದಾತನನ್ನೇ ಸೇರಲು ಬಯಸುತ್ತಾಳೆ. ಅದಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಹಾಕುವ ಯೋಜನೆಯೇ ಈ ಕೊಲೆಯಾಗಿರುತ್ತದೆ.
ಮೊದಲೇ ಹೇಳಿದಂತೆ ಚಿತ್ರದ ನಾಯಕ ಮತ್ತು ನಾಯಕಿ ಈ ಘಟನೆಯೊಳಗೆ ನೇರ ಸಂಬಂಧಪಟ್ಟವರಲ್ಲ. ಹಾಗಾಗಿಯೇ ಅವರಿಬ್ಬರ ನಟನೆಗೆ ಅವಕಾಶ ಕಡಿಮೆ. ಇರುವುದರಲ್ಲಿ ನಾಯಕಿಯೇ ಹೆಚ್ಚು ನೈಜ ನಟನೆ ನೀಡಿದ್ದಾರೆ. ನಾಯಕನಲ್ಲಿ ಫೈಟ್ ಸೀನ್ ಗಳಲ್ಲಿ ಕಾಣಿಸುವ ಲವಲವಿಕೆ ಉಳಿದ ದೃಶ್ಯಗಳಲ್ಲಿ ಉಳಿದಿಲ್ಲ. ಶ್ರೀಮಂತ ಹುಡುಗಿಯಾಗಿ ಮದಾಲಸಾ ಗ್ಲಾಮರ್ ಗೆ ಮೀಸಲಾಗಿದ್ದಾರೆ. ಅವರ ಜೋಡಿಯಾಗಿ ಕುಮಾರ್ ಪಾತ್ರದಲ್ಲಿ ರಾಕೇಶ್ ಅಡಿಗ ಪಕ್ಕಾ ಕ್ರಿಮಿನಲ್ ಲವ್ವರಾಗಿ ಕಾಣಿಸಿದ್ದಾರೆ. ಮದಾಲಸಾಗೆ ಕ್ರೈಮ್ ಮಾಡುವ ಉದ್ದೇಶವಿರಲಿಲ್ಲವೆಂಬುದನ್ನು ತೋರಿಸಿರುವುದು ನಿರ್ದೇಶಕರು ಪಾತ್ರಕ್ಕೆ ನೀಡಿರುವ ನೀತಿ. ಅರ್ಜುನ್ ಜನ್ಯಾ ಹಾಡು ಮತ್ತು ಹಿನ್ನೆಲೆ ಸಂಗೀತ ಆಕರ್ಷಕ. ನಾಯಕ ತಂದೆಯನ್ನು ಪದೇ ಪದೇ 'ಮಗಾ.. ಮಗಾ' ಎಂದು ಕರೆಯುವುದನ್ನು ಅರಗಿಸಿಕೊಳ್ಳುವುದು ಕಷ್ಟ. ತಾಯಿಯಾಗಿ ವೀಣಾ ಸುಂದರ್ ಮೊದಲ ದೃಶ್ಯದಿಂದಲೇ ಇಷ್ಟ. ಐಟಂ ಹಾಡೊಂದರ ಮೂಲಕ ಅನಗತ್ಯವಾಗಿ ಬಂದು ಹೋಗುತ್ತಾರೆ ಜಗ್ಗೇಶ್. ಜೈಗದೀಶ್, ಪವಿತ್ರಾ ಲೋಕೇಶ್, ಅವಿನಾಶ್ ಪಾತ್ರಗಳು ಆಟಕ್ಕೆ ಮಾತ್ರ. ಶರತ್ ಲೋಹಿತಾಶ್ವ ಮತ್ತು ಕರಿಸುಬ್ಬು ಪಾತ್ರಗಳು ಲೆಕ್ಕದಲ್ಲೂ ಲುಕ್ಕಿನಲ್ಲೂ ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ ಚಿತ್ರ ನೋಡಿದವರಿಗೆ ನಿರ್ದೇಶಕರು ಖಂಡಿತಾ ನಿರಾಶೆ ಮೂಡಿಸುವು