From the earlier FilmySphere, kept as published on 2013-09-17. It has not been updated.
Review of Lucia
Rating 4.5/5
ಮೊದಲಿನಿಂದ ನಂಗೊಂದು ಕುತೂಹಲ ಇತ್ತು , ಯಾಕೆ ಪವನ್ ಈ ಚಿತ್ರಕ್ಕೆ ಲೂಸಿಯಾ ಎಂದು ಹೆಸರಿಟ್ಟರು ಎಂದು . ಬಹಳ ಮಂದಿ ನನ್ನ ಗೆಳೆಯರು ನನ್ನನ್ನು ಕೇಳಿದ್ದರು ಕೂಡ . ಆದ್ರೆ ಚಿತ್ರ ನೋಡಿದ ಮೇಲೆ ಈ ಚಿತ್ರಕ್ಕೆ ಈ ಹೆಸರೇ ಸೂಕ್ತವಾಗಿದೆ ಎನಿಸುತ್ತದೆ .ತತ್ವಜ್ಞಾನಿ Aristotle ಹೇಳಿದ್ದು – “often when one is asleep, there is something in consciousness which declares that what then presents itself is but a dream” .ಮೇಲಿನ ಪದಗಳು ಲೂಸಿಯಾ ಗೆ ಬಹಳ ಹತ್ತಿರವೆನಿಸುತ್ತವೆ . ನಿಮ್ಮ ಸಣ್ಣ ಬದುಕು ಇನ್ನೊಬ್ಬರ ದೊಡ್ಡ ಕನಸು . ಹಾಗೆಯೇ ಇನ್ನೊಬ್ಬರ ದೊಡ್ಡ ಬದುಕು ನಿಮ್ಮ ಸಣ್ಣ ಕನಸು ಆಗಿರಬಹದು. ಚಿತ್ರ ಮುಗಿಯುವುದರೊಳಗೆ ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ ಎಂಬ ಗೊಂದಲಕ್ಕೆ ಬೀಳುತ್ತೀರಿ. ಅಸ್ಟರ ಮಟ್ಟಿಗೆ ಪವನ್ ನಿಮ್ಮನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಚಿತ್ರಮಂದಿರದಲ್ಲಿ ಇರುವಸ್ಟ್ಟು ಕಾಲ ಲೂಸಿಯ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಭ್ರಮೆ ಮತ್ತು ನಿಜದ ನಡುವಿನ ನಡಿಗೆಯ ಕಥಾ ಹಂದರ ನಿಮ್ಮನ್ನು ಯೋಚನೆಗೆ ತಳ್ಳುತ್ತದೆ.ನಾನು ಪವನ್ನನ್ನು ಮನಸಾರೆ ಯ ದಿನಗಳಿಂದ ನೋಡುತ್ತಿದ್ದೇನೆ . ಈ ಮನುಷ್ಯ ನ ಯೋಚನಾ ಲಹರಿಯೇ ವಿಚಿತ್ರವಾಗಿದೆ . ಈತ ತನ್ನ ವಿಚಿತ್ರ ಯೋಚನೆ ಮತ್ತು ಹುಚ್ಚು ಪ್ರಯತ್ನ ಗಳಿಂದಲೇ ಇಸ್ಟವಾಗುತ್ತಾನೆ. ಅವನ ಹುಚ್ಚು ಪ್ರಯತ್ನಗಳೆಲ್ಲವೂ ಇಲ್ಲಿಯವರೆಗೆ ಫಲನೀಡಿವೆ ಎಂಬುದೊಂದು ಸಂತಸದ ವಿಚಾರ.ಲೂಸಿಯಾ ಒಂದು ಜನರೇ ನಿರ್ಮಾಪಕ, ವಿತರಕರಾಗಿರುವ ಚಿತ್ರ ಎಂಬ ಎರಡಕ್ಷರದ ಹೆಮ್ಮೆಯನ್ನು ಬದಿಗಿಟ್ಟು ಕೇವಲ ಒಂದು ಚಿತ್ರವಾಗಿ ನೋಡಿದಾಗ ಸಹ ಚಿತ್ರ ಗೆಲ್ಲಲು ಸಾಕಸ್ಟು ಕಾರಣಗಳಿವೆ. ಚಿತ್ರಕತೆಯೇ ಇದರ ಜೀವಾಳ. ಮೊದಲಿಗೆ ಪವನ್ ಗೆಲ್ಲುವುದು ಇಲ್ಲೆ . ಅದರೊಂದಿಗೆ ತೀರಾ ಅಪರೂಪದ ನಿರೂಪಣೆಯಿದೆ . ಚಿತ್ರದ ಸಂಕಲನ ಅದ್ಬುತ . ಹಾಗಂತ ಈ ತರಹದ ನಿರೂಪಣೆ ಈ ಮೊದಲು ಕನ್ನಡಲ್ಲಿ ಬಂದಿಲ್ಲ ಅಂತಲ್ಲ . ಉಪೇಂದ್ರ ‘A’ ನಲ್ಲಿ ಇಂತ ಪ್ರಯತ್ನ ಮಾಡಿದ್ದಾರೆ. ನೀವು ರೋಮಾಂಚಕ ಅನುಭವ ನೀಡುವ ಕಥೆ ಇಸ್ಟಪಡುವವರಾದರೆ , ಆಂಗ್ಲ ಬಾಷಾ ಚಿತ inception, Fight Club ತರಹದ ಚಿತ್ರ ವೀಕ್ಷಕರಾದರೆ ಲೂಸಿಯಾ ಖಂಡಿತವಾಗಿಯೂ ನಿಮಗೆ ಇಸ್ಟವಾಗುತ್ತದೆ.ನಿರ್ದೇಶಕ ಗುರುಪ್ರಸಾದ್ ತಮ್ಮ ಚಿತ್ರ ಎದ್ದೇಳು ಮಂಜುನಾಥ ದಲ್ಲಿ ಒಂದು ನಾಣಿ ಎಂಬ ಪಾತ್ರದಿಂದ ಈ ರೀತಿ ಹೇಳುತ್ತಾರೆ . “ಕೆಟ್ಟ ಚಿತ್ರವೆಂಬುದಿರುವುದಿಲ್ಲ ಆದರೆ ಚಿತ್ರಕತೆಗಳಿರುತ್ತವೆ” . ಹಾಗೆಯೇ ಒಂದು ಒಳ್ಳೆಯ ಚಿತ್ರಕತೆಯಿದ್ದರೆ ಚಿತ್ರ ಗೆಲ್ಲುತ್ತದೆ. ಒಂದು ಸಣ್ಣ ಕಥೆಯ ಎಳೆಯಾದರೂ ಒಂದು ವಿಬಿನ್ನ ಅನಿಸುವ ಚಿತ್ರಕತೆಯಿಂದ ಲೂಸಿಯಾ ಇಸ್ಟವಾಗುತ್ತದೆ.ನೀವು ಚಿತ್ರವನ್ನು ನೋಡಿದಾಗ ಈ ಚಿತ್ರ ಕೇವಲ 51 ಲಕ್ಷ ದಲ್ಲಿ ಮಾಡಿದ ಚಿತ್ರವೆಂದು ನಂಬಲು ಸಾದ್ಯವೇ ಇಲ್ಲ . ಯಾಕೆಂದರೆ ಚಿತ್ರದ ದ್ರಶ್ಯಗಳಲ್ಲಿನ ಶ್ರೀಮಂತಿಕೆ ನಿಮ್ಮ ನಂಬಿಕೆಯನ್ನು ಸುಳ್ಳಾಗಿಸುತ್ತದೆ. ಇದ್ದಕ್ಕಾಗಿ ಚಿತ್ರದ ಛಾಯಾಗ್ರಾಹಕ ಸಿದ್ದಾರ್ಥ್ ನುನಿ ಪ್ರಶಂಶೆಗೆ ಅರ್ಹರಾಗುತ್ತಾರೆ . ಇಡೀ ಚಿತ್ರವನ್ನು ಚಿತ್ರೀಕರಿಸಿದ್ದು 2 ರಿದ 3 ಲಕ್ಷಕ್ಕೆ ದೊರೆಯವ Canon 5D ಕ್ಯಾಮರದಿಂದ ಎಂದರೆ ನೀವು ನಂಬಲೇ ಬೇಕು . ಅವರು ಚಿತ್ರ ಸಂಸ್ಕರಣೆಗೆ ಬಳಸಿದ Technicolor ಮತ್ತು Magic Lantern ಎಂಬ ತಂತ್ರಾಂಶ ನಂಬಲಸಾಧ್ಯವಾದ ಪರಿಣಾಮ ಬೀರಿದೆ . LIFE OF PI ಚಿತ್ರತಂಡದೊಂದಿಗೆ ಮಾಡಿದ ಕೆಲಸ ಇವನ ಕಾರ್ಯಶೈಲಿಯಲ್ಲಿ ಅದ್ಭುತಗಳನ್ನ ಸ್ರಸ್ಟಿಸಿದೆ.ಸಂಗೀತದ ಬಗ್ಗೆ ಮಾತಾಡಬೇಕಾಗಿಲ್ಲ . ಹಾಡುಗಳೆಲ್ಲವೂ ಮಸ್ತ್ ಶಿವ . ಪೂರ್ಣ ಚಂದ್ರ ಚಿತ್ರ ಬಿಡುಗಡೆಗೆ ಮುನ್ನ ಈಗಾಗಲೇ ಇನ್ನೆರಡು ಚಿತ್ರ ಒಪ್ಪಿಕೊಂಡಿದ್ದಾರೆ . Satish Neen Aweome !( Sathish Neenasam) .ಸತೀಶ್ ನಾಟಕ ರಂಗದಿಂದ ಬಂದ ಪ್ರತಿಭೆ . ನಟನೆಯ ಬಗ್ಗೆ ಎರಡು ಮಾತಿಲ್ಲ . ಶ್ರುತಿ ( Sruthi Hariharan ) ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ . ಕನ್ನಡಕೊಬ್ಬಳು ಇನ್ನೊಬ್ಬ ಕನ್ನಡ ಮಾತನಾಡೊ ನಟಿ ಸಿಕ್ಕಿದ್ದಾಳೆ ಎಂಬುದು ಸಂತಸದ ವಿಷಯ. ಅಚ್ಯುತ್ ಎಂಬ ದೈತ್ಯ ಪ್ರತಿಭೆಗೆ ಚಿತ್ರದ ಪಾತ್ರ ಕಡಿಮೆಯೆನಿಸುತ್ತದೆ. ಉಳಿದೆಲ್ಲರು ಪಾತ್ರದ ಪರಿಧಿಯೊಳಗಿರಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ .ಹಾಗೆಂದು ಚಿತ್ರದಲ್ಲಿ ನ್ಯೂನ್ಯತೆಗಳಿಲ್ಲವೆಂದಲ್ಲ. ಪೊಲೀಸರ ತನಿಖೆಯ ಪಥವನ್ನು ಸರಿಯಾಗಿ ತೋರಿಸದೆ ತನಿಖೆಯನ್ನು ಕೊನೆಗೊಳಿಸುವುದು ಬಾಲಿಶ ಎನಿಸುತ್ತದೆ.ಕಥೆಯನ್ನು ಪ್ರೇಕ್ಷಕನಿಗೆ ಅರ್ಥ ಮಾಡಿಸಿಕೊಡುವ ನಿಟ್ಟಿನಲ್ಲಿ ದ್ವಿತೀಯಾರ್ಧದ ಮೊದಲ ಭಾಗ ಕೊಂಚ ತನ್ನ ವೇಗವನ್ನು ಕಳೆದುಕೊಳ್ಳುತ್ತದೆ. ಸಣ್ಣ ಪುಟ್ಟ ತಾಂತ್ರಿಕ ತಪ್ಪುಗಳಿದ್ದರೂ ಚಿತ್ರದ ಬಜೆಟ್ ತೀರಾ ಕಡಿಮೆಯಾದ್ದರಿಂದ ಅದೆಲ್ಲವನ್ನೂ ಮರೆತು ಬಿಡೋಣ .ಲೂಸಿಯವನ್ನು ಒಮ್ಮೆ ತಪ್ಪದೆ ನೋಡಿ . ಒಮ್ಮೆ ನೋಡಿದವರು ಸರಿಯಾಗಿ ಅರ್ಥೈಸಲು ಇನ್ನೊಮ್ಮೆ ನೋಡಿ . ಒಟ್ಟಿನಲ್ಲಿ ನೋಡಿ .ಲೂಸಿಯ ಒಂದು ನೂತನ ಪ್ರಯತ್ನ , ಇದು ಹೊಸ ಬದಲಾವಣೆಗೆ ಮುನ್ನುಡಿಯಾಗಲಿ.