From the earlier FilmySphere, kept as published on 2015-10-05. It has not been updated.
Review of Airavata
Rating 2.5/5
ನಾ ಕಂಡ ಐರಾವತ, ಚಿತ್ರ ವಿಮರ್ಶೆ 2.5 / 5
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಪ್ರಕಾಶ್ ರಾಜ್ ನಡುವಿನ ಜುಗಲ್‍ಬಂದಿ ಈ ಬಹುನಿರೀಕ್ಷಿತ "ಐರಾವತ". ಓರ್ವ ಪೋಲಿಸ್ ಇನ್ಸ್ಪೆಕ್ಟರ್ 'ನ ಆಶಯ, ಕನಸ್ಸು, ಅವನ ಕನಸ್ಸಿಗೆ ತಣ್ಣಿರೆರೆಚುವ ಖಳನಾಯಕ. ಈ ಮಧ್ಯೆ ನಾಯಕನು ನಕಲಿ ಪೋಲಿಸ್ ಎಂದು ತಿಳಿದು ಬರುತ್ತೆ, ನಂತರ ಒಂದು ಫ್ಲಾಶ್ ಬ್ಯಾಕ್. ಇದು ನಾಯಕ ಪೋಲಿಸ್ ವೇಷ ಧರಿಸಲು ಕಾರಣ ಎನ್ನುವುದಕ್ಕೆ ಹಿಡಿದಿರುವ ಕನ್ನಡಿ. ನಂತರ ಮತ್ತೆ ಪೋಲಿಸ್ exam ನಲ್ಲಿ ತೇರ್ಗಡೆಯಾಗಿ ನಿಜವಾಗಿಯೂ ಪೋಲಿಸ್ ಹುದ್ದೆ ಸೇರಿ ಖಳನಾಯಕನ ಬಗ್ಗಿ ಬಡಿಯುವ ನಟ, ಇಷ್ಟೇ ಐರಾವಾತ.
Performance: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಪ್ರಕಾಶ್ ರಾಜ್ ನಡುವಿನ ಜುಗಲ್‍ಬಂದಿ ಇಷ್ಟೇ ಸಾಕು ಸಿನಿಮಾ ನೋಡಲು, ಬಹಳ ಅದ್ಭುತವಾಗಿ ಈ ಇಬ್ಬರ ನಟನೆ ಮೂಡಿಬಂದಿಂದೆ. ಇನ್ನು ನಾಯಕಿ ಆಟಕ್ಕೆ ಉಂಟ್ಟು ಲೆಕ್ಕಕ್ಕೆ ಇಲ್ಲ. ಚಿಕ್ಕಣ್ಣ ಕೊಟ್ಟಿರುವ 10 ನಿಮಿಷದಲ್ಲಿ ಎಲ್ಲರನ್ನು ಮನೊರಂಜಿಸಿ ಮರೆಯಾಗುತ್ತಾರೆ. ಸಾದು ಮಹಾರಾಜ್ ಪಾತ್ರ ಓಕೆ. ಉಳಿದಂತೆ ಯಾರು ನೆನಪಿಗೆ ಉಳಿಯುವಂತೆ ನಟಿಸಿಲ್ಲ well ಪಾತ್ರ ದೊರೆತಿಲ್ಲ ಅಂದ್ರೆ ತಪ್ಪಾಗಲಾರದು. ಏಕೆಂದರೆ ಚಿತ್ರವಿಡಿ ಇದು ಪ್ರಕಾಶ್ - ದರ್ಶನ್ ಮಯ.
Technically: ನಿರ್ದೇಶನದ ಕೊರತೆ ಎದ್ದು ಕಾಣುತ್ತೆ, ಸಂಕಲನ ಇನ್ನು ಚೆನ್ನಾಗಿ ಇರಬಹುದಿತ್ತು. ಮ್ಯೂಸಿಕ್ ಸೂಪರ್ ಹರಿ ಕೃಷ್ಣ ಪಾಸ್.
Conclusion: ಕಪ್ಪು ಆನೆಗೆ ಬಿಳಿ ಸುಣ್ಣ ಬಳಿದು "ಐರಾವತ" ಎಂದು ಕರೆದಂತಿದೆ. Watch it for ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಪ್ರಕಾಶ್ ರಾಜ್ ನಡುವಿನ ಜುಗಲ್‍ಬಂದಿ.